Tag: engagemnet

  • ಅಧಿಕೃತವಾಗಿ ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಭಿಷೇಕ್ ಅಂಬರೀಶ್

    ಅಧಿಕೃತವಾಗಿ ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಭಿಷೇಕ್ ಅಂಬರೀಶ್

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುವ ವಿಚಾರ ಎಂದರೆ ಅಭಿಷೇಕ್ ಅಂಬರೀಶ್ (Abhishek Ambreesh) ಮತ್ತು ಅವಿವಾ (Aviva) ಜೋಡಿಯ ಸುದ್ದಿ. ಇತ್ತೀಚೆಗೆ ಸುಳಿವು ಕೊಡದೇ ಸೈಲೆಂಟ್ ಆಗಿ ಅಭಿಷೇಕ್ ಮತ್ತು ಅವಿವಾ ಎಂಗೇಜ್ ಆಗಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇದೀಗ ಭಾವಿ ಪತ್ನಿಯ ಫೋಟೋವನ್ನ ನಟ ಅಭಿಷೇಕ್ ಶೇರ್‌ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಅಭಿಷೇಕ್ ಮತ್ತು ಅವಿವಾ ಅದ್ದೂರಿಯಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಈ ಸಂಭ್ರಮಕ್ಕೆ ಇಡೀ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ರಂಗ ಸಾಕ್ಷಿಯಾಗಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾವಿ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನ ಅಭಿಷೇಕ್ ಹಂಚಿಕೊಂಡಿದ್ದಾರೆ. ಚೆಂದದ ಜೋಡಿಯ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

     

    View this post on Instagram

     

    A post shared by Abishek Ambareesh (@abishekambareesh)

    ಅಂಬಿ ಪುತ್ರ ಅಭಿಷೇಕ್ 2019ಕ್ಕೆ ಅಮರ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರವಸೆಯ ನಟನಾಗಿ ಎಂಟ್ರಿ ಕೊಟ್ರು. ಈ ಚಿತ್ರದ ಮುಂಚೆಯೇ ಅವಿವಾ ಮತ್ತು ಅಭಿಷೇಕ್ ಗೆಳೆತನವಿತ್ತು. ಆ ಗೆಳೆತನ ಪ್ರೀತಿಗೆ ತಿರುಗಿ, ಇಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

    5 ವರ್ಷಗಳ ಪ್ರೀತಿಗೆ ಇಂದು ಉಂಗುರ ತೊಡಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನ ಎರಡು ಕುಟುಂಬಕ್ಕೂ ತಿಳಿಸಿ, ಒಪ್ಪಿಗೆ ಮೇರೆಗೆ ಇಂದು ಈ ಜೋಡಿ ಎಂಗೇಜ್ ಆಗಿದ್ದಾರೆ. ಸದ್ಯ ಈ ಜೋಡಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಭಾವಿ ಪತ್ನಿ ಅವಿವಾಗೆ ದುಬಾರಿ ಬೆಲೆಯ ಉಂಗುರ ತೊಡಿಸಿದ ಅಭಿಷೇಕ್‌

    ಭಾವಿ ಪತ್ನಿ ಅವಿವಾಗೆ ದುಬಾರಿ ಬೆಲೆಯ ಉಂಗುರ ತೊಡಿಸಿದ ಅಭಿಷೇಕ್‌

    ಸುಮಲತಾ ಅಂಬರೀಶ್ (Sumalatha Ambreesh) ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿನ್ನೆಯಷ್ಟೇ ಅಂಬಿ ಪುತ್ರ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ (Prasad Biddappa) ಪುತ್ರಿ ಅವಿವಾ(Aviva) ಜೊತೆ ಅಭಿಷೇಕ್ ಎಂಗೇಜ್ ಆಗಿದ್ದಾರೆ. ಸದ್ಯ ಭಾವಿ ಪತ್ನಿಗೆ ತೊಡಿಸಿರುವ ಉಂಗುರದ ಬೆಲೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅಭಿಷೇಕ್ (Abhishek) ಮತ್ತು ಅವಿವಾ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದೆ. ಈ ಸಂಭ್ರಮಕ್ಕೆ ಯಶ್ ದಂಪತಿ, ಪ್ರಜ್ವಲ್ ದೇವರಾಜ್, ಗುರುಕಿರಣ್, ರಾಕ್‌ಲೈನ್ ವೆಂಕಟೇಶ್, ಸ್ವಪ್ನ ಕೃಷ್ಣ ದಂಪತಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಆಪ್ತರ ಸಮ್ಮುಖದಲ್ಲಿ ಎಂಗೇಜ್ ಆಗಿರುವ ಅಭಿಷೇಕ್, ಭಾವಿ ಪತ್ನಿ ಅವಿವಾಗೆ ದುಬಾರಿ ವಜ್ರದ ರಿಂಗ್ ತೊಡಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ರಾಮ್ ಚರಣ್ ದಂಪತಿ

    ಅಭಿಷೇಕ್, ಅವಿವಾಗೆ ವಜ್ರದ ಉಂಗುರ ತೊಡಿಸಿದ್ದಾರೆ. ಈ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಮಾಡಿಸಿದ್ದಾರೆ. ಈ ವಜ್ರದ ಉಂಗುರದ ಬೆಲೆ 37 ಲಕ್ಷ (37 Lakh) ರೂಪಾಯಿ ಮೌಲ್ಯದಾಗಿದೆ ಎಂದು ಹೇಳಲಾಗುತ್ತಿದೆ.

    ಇನ್ನೂ ಈ ಜೋಡಿ ಮುಂದಿನ ವರ್ಷ ಹಸೆಮಣೆ ಏರಲಿದೆ. ಸದ್ಯ ಹೊಸ ಬಾಳಿಗೆ ಕಾಲಿಡುತ್ತಿರುವ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ಯಾರಾ ಒಲಿಂಪಿಕ್ ಪದಕ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

    ಪ್ಯಾರಾ ಒಲಿಂಪಿಕ್ ಪದಕ ವಿಜೇತ ಗಿರೀಶ್ ಗೆ ನಿಶ್ಚಿತಾರ್ಥ

    ಹಾಸನ: ಪ್ಯಾರಾ ಒಲಿಂಪಿಕ್ ಅಥ್ಲೀಟ್ ಎಚ್ ಎನ್ ಗಿರೀಶ್ ಅವರಿಗೆ ಇಂದು ನಿಶ್ಚಿತಾರ್ಥ ಸಂಭ್ರಮ.

    ಹೌದು. ಹಾಸನದ ತನ್ವಿ ತ್ರಿಶಾ ಕಲ್ಯಾಣ ಮಂಟಪದಲ್ಲಿ ಗಿರೀಶ್ ಇಂದು ಮೈಸೂರಿನ ಸಹನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಗಿರೀಶ್ ಅವರು 2012ರಲ್ಲಿ ಲಂಡನ್ ನಲ್ಲಿ ನಡೆದ ಎತ್ತರ ಜಿಗಿತದಲ್ಲಿ 1.74 ಮೀ ಎತ್ತರಕ್ಕೆ ಜಿಗಿದು ರಜತ ಪದಕ ಗೆದ್ದಿದ್ದರು. ಭಾರತದಲ್ಲೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಪದಕ ಪಡೆದ ಗಿರೀಶ್ ಹೊಸನಗರ ನಾಗರಾಜೇ ಗೌಡ ಅವರಿಗೆ ಅಭಿನಂದನೆಗಳು ಅಂತ ಅಂದು ಗುಜುರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು.

    ಗಿರೀಶ್ ಅವರಿಗೆ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. 2014ರಲ್ಲಿ ಅರ್ಜುನ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.

  • ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ: ಡೈಮಂಡ್ ರಿಂಗ್ ತೊಡಿಸಿ ಮದುವೆಗೆ ಮುನ್ನುಡಿ ಬರೆದ ಕಿರಿಕ್ ಜೋಡಿ

    ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ: ಡೈಮಂಡ್ ರಿಂಗ್ ತೊಡಿಸಿ ಮದುವೆಗೆ ಮುನ್ನುಡಿ ಬರೆದ ಕಿರಿಕ್ ಜೋಡಿ

    ಮಡಿಕೇರಿ: ಸ್ಯಾಂಡಲ್‍ವುಡ್‍ನ ಕಿರಿಕ್ ಪ್ರೇಮಿಗಳು ಮದುವೆ ಬಂಧವನ್ನು ನಿಶ್ಚಯಿಸಿಕೊಂಡಿದ್ದಾರೆ. ಮಂಜಿನ ನಗರಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಿಸಿಕೊಂಡು ವಿವಾಹ ಬಂಧನಕ್ಕೆ ಮುನ್ನಡಿ ಬರೆದಿದ್ದಾರೆ.

    ಹೌದು. ಕಿರಿಕ್ ಪಾರ್ಟಿಯ ಕರ್ಣ-ಸಾನ್ವಿ ಈಗ ರಿಯಲ್ ಲೈಫ್‍ನಲ್ಲಿ ಜೋಡಿಯಾಗಿದ್ದಾರೆ. ಸೋಮವಾರದಂದು ಕೊಡಗಿನ ವಿರಾಜಪೇಟೆಯ ಸೆರೆನೆಟಿ ಹಾಲ್‍ನಲ್ಲಿ ವಜ್ರದ ಉಂಗುರ ಬದಲಿಸಿಕೊಳ್ಳೋ ಮೂಲಕ ಮದುವೆಗೆ ಮುನ್ನುಡಿ ಬರೆದಿದ್ದಾರೆ.

     

    ಒಂದೇ ಕಾರಿನಲ್ಲಿ ಬಂದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣರನ್ನು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಲಾಯ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ ಕೆನೆ ಬಣ್ಣದ ಟುಕ್ಸೆಡೋ ಮತ್ತು ಪೀಚ್ ಕಲರ್‍ನ ಟೈ ಧರಿಸಿ ಕಂಗೊಳಿಸಿದ್ರೆ, ರಶ್ಮಿಕಾ ಪೀಚ್ ಕಲರ್ ಗೌನ್‍ನಲ್ಲಿ ಮಿಂಚಿದ್ರು. ಅಲ್ದೆ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ  ಸ್ಪೆಷಲ್ ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿದ್ರು.

    ಈ ಅಪೂರ್ವ ಕ್ಷಣಕ್ಕೆ ವಿಜಯ್ ರಾಘವೇಂದ್ರ, ಯಜ್ಞಾ ಶೆಟ್ಟಿ, ರಿಷಬ್ ಶೆಟ್ಟಿ, ಶೀತಲ್ ಶೆಟ್ಟಿ ಸೇರಿದಂತೆ ಚಿತ್ರಂಗದ ಹಲವು ತಾರೆಯರು ಸಾಕ್ಷಿಯಾದ್ರು. ಇದಕ್ಕೂ ಮುನ್ನ ನವಜೋಡಿ ವಿರಾಜಪೇಟೆಯ ಮುಖ್ಯ ಬೀದಿಯಲ್ಲಿರುವ ಗಣಪತಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದ್ರು. ಮುಂದಿನ ವರ್ಷ ಮದುವೆಯಾಗೋ ಸೂಚನೆ ನೀಡಿದ್ರು.

    ನಿಶ್ಚಿತಾರ್ಥದಲ್ಲಿ ಭರ್ಜರಿ ಭೋಜನ ಸವಿದ ಬಂಧು-ಬಳಗ ನವಜೋಡಿಯನ್ನು ಹರಸಿ ಆಶೀರ್ವದಿಸಿದ್ರು.