ತಮ್ಮ ಹುಟ್ಟುಹಬ್ಬದ ದಿನವೇ ತಮಿಳು ನಟ ವಿಶಾಲ್ (Vishal) ಅಭಿಮಾನಿಗಳಿಗೆ ಸರ್‌ಪ್ರೈಸ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಸಾಯಿ ಧನ್ಸಿಕಾ (Dhanshika) ಜೊತೆ ಚೆನ್ನೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡು ಫೋಟೋಸ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ವಿಶಾಲ್ ಹೆಸರು ಹಿಂದೆ ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡಿದ್ದರೂ ಮದುವೆವರೆಗೆ ಬಂದಿರಲಿಲ್ಲ. ಇದೀಗ ತಮ್ಮ 48ನೇ ವಯಸ್ಸಿನಲ್ಲಿ ಧನ್ಸಿಕಾ ಜೊತೆ ವಿವಾಹಕ್ಕೆ ಸಜ್ಜಾಗಿದ್ದಾರೆ. ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅಸಲಿಗೆ ಆಗಸ್ಟ್ 29ಕ್ಕೆ ವಿವಾಹವನ್ನೇ ಘೋಷಿಸಿದ್ದರು ವಿಶಾಲ್. ಹಿಂದೆ ಯೋಗಿಡಾ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ವಿಶಾಲ್ ಧನ್ಸಿಕಾ ಜೊತೆಗಿನ ಪ್ರೀತಿ ಖಚಿತಪಡಿಸಿ ಬಳಿಕ ಮದುವೆ ದಿನಾಂಕ ಘೋಷಿಸಿದ್ದರು. ಆದರೆ ಈ ದಿನ ಸಿನಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಮದುವೆ ದಿನವನ್ನು ಜೋಡಿ ಪ್ರಕಟಿಸಿಲ್ಲ. ಇದನ್ನೂಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?
ವಿಶಾಲ್ ಇದುವರೆಗೂ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಧನ್ಸಿಕಾ 15 ವರ್ಷಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಲಾವಿದರ ಸಂಘ ನಾಡಿಗೇರ್ ಸಂಘದ ಜನರಲ್ ಕಾರ್ಯದರ್ಶಿಯಾಗಿರುವ ವಿಶಾಲ್ ಸಂಘದ ಕಟ್ಟಡ ಸಂಪೂರ್ಣವಾದ ಬಳಿಕ ಮದುವೆಯಾಗುವುದಾಗಿ ಘೋಷಿಸಿದ್ದರು.
ಮೃತರನ್ನು ಹಾರ್ದಿಕ್ ಹಾಗೂ ವಿಭೂತಿ ಎಂದು ಗುರುತಿಸಲಾಗಿದೆ. ವಿಭೂತಿ ಲಂಡನ್‌ನಲ್ಲಿ ಫಿಸಿಯೋಥೆರಪಿ ಮಾಸ್ಟರ್ಸ್ ಮಾಡುತ್ತಿದ್ದರು. ಹಾರ್ದಿಕ್ ಲಂಡನ್‌ನಲ್ಲಿ ಅಮೆಜಾನ್ ಉದ್ಯೋಗಿಯಾಗಿದ್ದರು. ಅಲ್ಲಿಯೇ ಭೇಟಿಯಾಗಿ, ಇಬ್ಬರ ನಡುವೆ ಲವ್ ಶುರುವಾಗಿತ್ತು. 10 ದಿನ ರಜೆ ಹಾಕಿ ಎಂಗೇಜ್‌ಮೆಂಟ್ ಮಾಡಿಕೊಳ್ಳಲು ಊರಿಗೆ ಬಂದಿದ್ದರು. ಎಂಗೇಜ್‌ಮೆಂಟ್ ಮುಗಿಸಿ ಮದುವೆಯ ಕನಸು ಕಂಡಿದ್ದ ಜೋಡಿ ಲಂಡನ್‌ಗೆ ವಾಪಸ್ ಆಗುವಾಗ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಸಾವಿನ ಸಂಖ್ಯೆ 265ಕ್ಕೆ ಏರಿಕೆ
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಅವರಿಂದು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಿನ್ನ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳು, ಮದುವೆ ಎಂಬ ಪವಿತ್ರ ಬಂಧನದಲ್ಲಿ ಒಂದಾಗುತ್ತಿರುವುದು ವಿಶೇಷ.
ಲಕ್ನೋದಲ್ಲಿ (Lucknow) ನಡೆದ ಅದ್ಧೂರಿ ಸಮಾರಂಭದಲ್ಲಿ ರಿಂಕು ಸಿಂಗ್, ಮಚ್ಲಿಶಹರ್ ಕ್ಷೇತ್ರ ಪ್ರತಿನಿಧಿಸುವ ಕಿರಿಯ ಸಂಸದರಲ್ಲಿ ಒಬ್ಬರಾದ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲೂ ಫೋಟೋಗಳು ಹರಿದಾಡುತ್ತಿವೆ. ಅದ್ಧೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮಾತ್ರವಲ್ಲದೇ ಖ್ಯಾತ ಕ್ರಿಕೆಟ್ ತಾರೆಯರು, ಕೆಕೆಆರ್ ಫ್ರಾಂಚೈಸಿಯ ಸಹ ಆಟಗಾರರು ಹಾಗೂ ಹಿರಿಯ ರಾಜಕೀಯ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್ ಕೊಹ್ಲಿಗೆ ಕನ್ನಡದ ಬಾವುಟ ನೀಡಿದ ಡಿಕೆಶಿ – ಧ್ವಜ ಹಾರಿಸಿ ಸಂಭ್ರಮಿಸಿದ ವಿರಾಟ್
ಇತ್ತೀಚೆಗಷ್ಟೇ ಪ್ರಿಯಾ ಅವರ ತಂದೆ ಇಬ್ಬರ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದರು. ಸಮಾಜವಾದಿ ಪಕ್ಷದ ಹಾಲಿ ಶಾಸಕರೂ ಆಗಿರುವ ತುಫಾನಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಇಬ್ಬರೂ ತಮ್ಮ ಮದುವೆಗಾಗಿ ಅನುಮತಿ ಕೋರಿದ್ದಾರೆ ಎಂದು ತಿಳಿಸಿದ್ದರು. ಆ ಬಳಿಕ ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲೂ ಚರ್ಚೆಗಳು ನಡೆದಿತ್ತು. ಇದೀಗ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಪ್ರಿಯಾ ಸರೋಜ್ ಯಾರು?
ಉತ್ತರ ಪ್ರದೇಶದ ವಾರಣಾಸಿಯ ಕಾರ್ಖಿಯಾನ್ ಗ್ರಾಮದ ಪ್ರಿಯಾ ಸರೋಜ್, 2024ರಲ್ಲಿ ಮಚ್ಲಿಶಹರ್‌ನ ಸಂಸದೆಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಬಿಜೆಪಿಯ ಅನುಭವಿ ಬಿಪಿ ಸರೋಜ್ ಅವರನ್ನು 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದ ಪ್ರಿಯಾ, ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ
ಪ್ರಿಯಾ ರಾಜಕೀಯ ಕುಟುಂಬದ ಹಿನ್ನಲೆ ಹೊಂದಿದ್ದರೂ, ತಮ್ಮ ಕಾನೂನು ವೃತ್ತಿ ಮುಂದುವರಿಸಿದ್ದರು. ನವದೆಹಲಿಯ ವಾಯುಪಡೆಯ ಸುವರ್ಣ ಮಹೋತ್ಸವ ಸಂಸ್ಥೆಯಲ್ಲಿ ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಪ್ರಿಯಾ ಸರೋಜ್, ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕಾನೂನು ಪದವಿಯ ನಂತರ, ಸರೋಜ್ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ಆರಂಭದಲ್ಲಿ ರಾಜಕೀಯವು ಅವರ ವೃತ್ತಿಜೀವನದ ಯೋಜನೆಗಳ ಭಾಗವಾಗಿರಲಿಲ್ಲ. ಪ್ರಿಯಾ ಅವರ ತಂದೆ ತುಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಕೆರಕತ್‌ನಿಂದ ಶಾಸಕರಾಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಿಯಾ ಸರೋಜ್ ರಾಜಕೀಯ ಪ್ರವೇಶದ ಮೂಲಕ ತಮ್ಮ ತಂದೆಯ ರಾಜಕೀಯ ಪರಂಪರೆಯನ್ನ ಮುಂದುವರಿಸಿದ್ದಾರೆ.
ರಿಂಕು ಬಗ್ಗೆ ಹೇಳೋದಾದ್ರೆ…
ಪ್ರಿಯಾ ಸರೋಜ್ ಅವರ ಭಾವಿ ಪತಿಯಾಗಲಿರುವ ರಿಂಕು ಸಿಂಗ್, ಉತ್ತರ ಪ್ರದೇಶದ ಅಲಿಗಢದವರು. ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ನ ಪ್ರಮುಖ ಆಟಗಾರನಾಗಿ ಹಾಗೂ ಟೀಂ ಇಂಡಿಯಾದ ಟಿ20 ತಂಡದಲ್ಲೂ ರಿಂಕು ಸಿಂಗ್ ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ. 2023ರಲ್ಲಿ ಐಪಿಎಲ್ ಪಂದ್ಯದ ಕೊನೆಯ ಓವರ್‌ನಲ್ಲಿ, ಸತತ 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರಿಂಕು ಸಿಂಗ್ ಜನಪ್ರಿಯತೆ ಪಡೆದುಕೊಂಡಿದ್ದರು. ಇದನ್ನೂ ಓದಿ: IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್ ಪಟ್ಟ ಗೆದ್ದವರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ…
ಇನ್ನೂ ಟೀ ಇಂಡಿಯಾ ಪರ 30 ಟಿ20ಐ ಪಂದ್ಯಗಳು ಮತ್ತು 22 ಇನ್ನಿಂಗ್ಸ್‌ಗಳಲ್ಲಿ ರಿಂಕು 507 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ. ಅವರು ಇನ್ನೂ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಬಾರಿಸಿಲ್ಲ. 27 ವರ್ಷದ ಅವರು 2023 ರಲ್ಲಿ ಐರ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದರು. ರಿಂಕು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್-ಎ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಇನ್ನಿಂಗ್ಸ್‌ಗಳಲ್ಲಿ 1,899 ರನ್ ಗಳಿಸಿದ್ದಾರೆ.
‘ಹಿಟ್ಲರ್ ಕಲ್ಯಾಣ’ (Hitler Kalyana) ಸೀರಿಯಲ್ ಖ್ಯಾತಿಯ ಶೌರ್ಯ ಶಶಾಂಕ್ (Shaurya Shashank) ಅವರು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಿಶಾ ಜಾದವ್ ಎಂಬುವವರೊಂದಿಗೆ ನಟ ಎಂಗೇಜ್ ಆಗಿದ್ದಾರೆ. ಇದನ್ನೂ ಓದಿ:ಗಾಯಕ ಸೋನು ನಿಗಮ್ ಮೇಲೆ ಎಫ್‌ಐಆರ್
ಬೆಂಗಳೂರಿನಲ್ಲಿ ಸಾಂಪ್ರದಾಯಿಕವಾಗಿ ನಟನ ನಿಶ್ಚಿತಾರ್ಥ (Engagement) ಕಾರ್ಯಕ್ರಮ ಜರುಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ದಿಶಾ ಜಾದವ್ ಮತ್ತು ಶೌರ್ಯ ಶಶಾಂಕ್ ಉಂಗುರ ಬದಲಿಸಿಕೊಂಡಿದ್ದಾರೆ. ಇದೀಗ ಈ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಅಂದಹಾಗೆ, ಪ್ರಸ್ತುತ ‘ಭಾಗ್ಯಲಕ್ಷ್ಮಿ’ ಸೀರಿಯಲ್‌ನಲ್ಲಿ ಶೌರ್ಯ ನಟಿಸುತ್ತಿದ್ದಾರೆ. ಈ ಹಿಂದೆ ‘ಹಿಟ್ಲರ್ ಕಲ್ಯಾಣ’ ಸೀರಿಯಲ್‌ನಲ್ಲಿ ನೆಗೆಟಿವ್ ಪೊಲೀಸ್ ದೇವ್ ಪಾತ್ರದಲ್ಲಿ ನಟಿಸಿದ್ದರು.
ಬಾಲಿವುಡ್‌ನ ಖ್ಯಾತ ಗಾಯಕಿ ಪ್ರಕೃತಿ ಕಾಕರ್ (Prakriti Kakar) ಅವರು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಉದ್ಯಮಿ ವಿನಯ್ ಆನಂದ್ ಜೊತೆ ಗಾಯಕಿ ಎಂಗೇಜ್ ಆಗಿದ್ದಾರೆ. ಲಂಡನ್‌ನಲ್ಲಿ ಗಾಯಕಿಗೆ ವಿನಯ್ ಆನಂದ್ (Vinay Anand) ಪ್ರಪೋಸ್ ಮಾಡಿರುವ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ದಾಳಿಗೆ ಮುನೀರ್, ಪಾಕ್ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್ ನಟಿ ಕೆಂಡಾಮಂಡಲ
ಉದ್ಯಮಿ ಜೊತೆ ಗಾಯಕಿ ಪ್ರಕೃತಿ ಎಂಗೇಜ್ ಆಗಿದ್ದಾರೆ. ಪ್ರಕೃತಿ ಮುಂದೆ ಮಂಡಿಯೂರಿ ವಿನಯ್ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ. ಗಾಯಕಿ ಖುಷಿಯಿಂದ ಒಪ್ಪಿಗೆ ನೀಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಧರ್ಮ, ರಾಗಿಣಿ ನಟನೆಯ ‘ಸಿಂಧೂರಿ’ ಚಿತ್ರಕ್ಕೆ ಅದ್ಧೂರಿ ಚಾಲನೆ
ಎಲ್ಲಾ ಪ್ರೇಮಕಥೆಗಳು ಸುಂದರವಾಗಿವೆ. ಆದರೆ ನಮ್ಮದು ನನ್ನ ನೆಚ್ಚಿನ ಲವ್ ಸ್ಟೋರಿ ಎಂದು ಗಾಯಕಿ ರೊಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. ಸದ್ಯ ಈ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಸ್ತ್ರೀ, ಗಣಪತ್, ನಶಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಕೃತಿ ಹಾಡಿದ್ದಾರೆ. ಪ್ರಕೃತಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ.
‘ಸೀತಾ ವಲ್ಲಭ’ ಸೀರಿಯಲ್ ನಟಿ ಸುಪ್ರೀತಾ ಸತ್ಯನಾರಾಯಣ್ (Supritha Sathyanarayan) ಇತ್ತೀಚೆಗೆ ಚಂದನ್ ಶೆಟ್ಟಿ (Chandan Shetty) ಜೊತೆ ಎಂಗೇಜ್ ಆಗಿರೋದಾಗಿ ಅಧಿಕೃತವಾಗಿ ತಿಳಿಸಿದ್ದರು. ಇದೀಗ ಅವರ ಎಂಗೇಜ್‌ಮೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇದೇ ಮಾರ್ಚ್ 12ರಂದು ಚಂದನ್ ಶೆಟ್ಟಿ ಜೊತೆ ನಟಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮರೂನ್ ಬ್ಲೌಸ್‌ಗೆ ಇರುವ ಹಸಿರು ಬಣ್ಣದ ಸೀರೆಯುಟ್ಟು ಸುಪ್ರೀತಾ ಸತ್ಯನಾರಾಯಣ್ ಮಿಂಚಿದ್ದಾರೆ. ಮರೂನ್ ಕಲರ್ ಶೆರ್ವಾನಿಯಲ್ಲಿ ವರ ಚಂದನ್ ಶೆಟ್ಟಿ ಧರಿಸಿದ್ದಾರೆ. ಇದನ್ನೂ ಓದಿ: ಉಡುಪಿ| ಹೊಸ ಮಾರಿಗುಡಿಗೆ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಭೇಟಿ
ಹೊಸ ಚಾಪ್ಟರ್ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ಇತ್ತೀಚೆಗೆ ಭಾವಿ ಪತಿಯೊಂದಿನ ಫೋಟೋ ಹಾಕಿ ಬರೆದುಕೊಂಡಿದ್ದರು ಸುಪ್ರೀತಾ.
ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯೂ ಕಂದ. ನನ್ನ ಹೃದಯ ನಿನ್ನದು. ನನ್ನ ಎದೆಯಾಳೋ ಧಣಿ ನೀನೇ, ನಿನ್ನ ಸಹಚಾರಿಣಿ ನಾನೇ ಎಂದು ನಟಿ ಪೋಸ್ಟ್ ಮಾಡಿದ್ದರು.
ಡಿಜಿಟಲ್ ಕ್ರಿಯೇಟರ್, ಸಾಫ ಉದ್ಯೋಗಿ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಲು ನಟಿ ಸಜ್ಜಾಗಿದ್ದಾರೆ. ಕೊಡಗು ಮೂಲದ ಚಂದನ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
‘ಡಿಯರ್ ಸತ್ಯ’ (Dear Sathya) ಸಿನಿಮಾ ಖ್ಯಾತಿಯ ಅರ್ಚನಾ ಕೊಟ್ಟಿಗೆ ಅವರು ಸ್ಟಾರ್ ಕ್ರಿಕೆಟರ್ ಶರತ್ ಬಿ.ಆರ್ (Sharath B.R) ಜೊತೆಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಅರ್ಚನಾ ಅವರು ಡಿಯರ್ ಸತ್ಯ, ಎಲ್ರ ಕಾಲೆಳೆಯುತ್ತೆ ಕಾಲ, ಶಬರಿ, ಒಂದು ಅಲಂಕಾರ ವಿದ್ಯಾರ್ಥಿ, ಹೊಂದಿಸಿ ಬರೆಯಿರಿ ಸೇರಿದಂತೆ 8ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಶರತ್ ಅವರು ಕರ್ನಾಟಕ ಕ್ರಿಕೆಟರ್ ಆಟಗಾರ. ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ನಡೆದ ಉದಯೋನ್ಮುಕ ತಂಡಗಳ ಏಷ್ಯಾ ಕಪ್‌ನಲ್ಲಿ ಅವರು ಭಾರತ ತಂಡದ ನಾಯಕನಾಗಿದ್ದರು. ಕಳೆದ ವರ್ಷದ ಐಪಿಎಲ್‌ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿದ್ದರು.
ದೃಷ್ಟಿಬೊಟ್ಟು, ನಾಗಿಣಿ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿರುವ ಗೌತಮಿ ಜಯರಾಮ್ (Gowthami Jayaram) ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ಜರುಗಿದೆ. ಎಂಗೇಜ್‌ಮೆಂಟ್‌ನ ಸಂಭ್ರಮದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ದೃಷ್ಟಿಬೊಟ್ಟು’ ಸೀರಿಯಲ್‌ನ ಇಂಪನಾ ಪಾತ್ರಧಾರಿ ಗೌತಮಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಉದಯ್ ಶಂಕರ್ ರಾಜ್ (Uday Shankar Raj) ಜೊತೆ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ‘ದೃಷ್ಟಿಬೊಟ್ಟು’ ಟೀಮ್ ಕೂಡ ಸಾಕ್ಷಿಯಾಗಿದೆ.
ಇನ್ನೂ ‘ದೃಷ್ಟಿಬೊಟ್ಟು’ ಸೀರಿಯಲ್‌ನಲ್ಲಿ ಹೀರೋ ದತ್ತನ ಜೊತೆ ಇಂಪನಾ ಮದುವೆ ನಡೆಯಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ರಿಯಲ್ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಿರುವ ನಟಿಗೆ ಫ್ಯಾನ್ಸ್ ಶುಭಕೋರಿದ್ದಾರೆ.
‘ಶನಿ’, ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ರಂಜಿತ್ ಕುಮಾರ್ (Ranjith Kumar) ಅವರು ಬಹುಕಾಲದ ಗೆಳತಿ ಮಾನಸಾ ಗೌಡ (Manasa Gowda) ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿಗಳು ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್ ಕ್ವೀನ್ ಇಸ್ ಬ್ಯಾಕ್- ರಮ್ಯಾಗೆ ಯೋಗರಾಜ್ ಭಟ್ ಡೈರೆಕ್ಷನ್
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾನಸಾ ಜೊತೆ ರಂಜಿತ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿದೆ. ಎಂಗೇಜ್‌ಮೆಂಟ್‌ನಲ್ಲಿ ವೈಟ್ ಬಣ್ಣದ ಕಾಸ್ಟ್ಯೂಮ್‌ನಲ್ಲಿ ರಂಜಿತ್ ಕಾಣಿಸಿಕೊಂಡಿದ್ರೆ, ಮಾನಸಾ ಕ್ರೀಮ್ ಕಲರ್ ಉಡುಗೆಯಲ್ಲಿ ಮಿಂಚಿದ್ದಾರೆ.
ದಳಪತಿ ವಿಜಯ್ ನಟನೆಯ ‘ಗೋಟ್’ (Goat Film) ಸಿನಿಮಾದಲ್ಲಿ ನಟಿಸಿದ್ದ ಪಾರ್ವತಿ ನಾಯರ್ (Parvati Nair) ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಪಾರ್ವತಿ ನಾಯರ್ ಅವರು ಚೆನ್ನೈ ಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್‌ನ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ‘ಕಾಟೇರ’ ಡೈರೆಕ್ಟರ್ ತರುಣ್ ಸಿನಿಮಾದಲ್ಲಿ ಪ್ರಿಯಾಂಕಾ
ಸದಾ ಒಂದಲ್ಲಾ ಒಂದು ಬೋಲ್ಡ್ ಫೋಟೋಶೂಟ್ ಹಾಗೂ ಸಿನಿಮಾಗಳಿಂದ ಸುದ್ದಿಯಾಗ್ತಿದ್ದ ನಟಿ ಈಗ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸದ್ಯ ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ತಾವು ಎಂಗೇಜ್ (Engagement) ಆಗಿರೋದಾಗಿ ಪಾರ್ವತಿ ಅಧಿಕೃತವಾಗಿ ತಿಳಿಸಿದ್ದಾರೆ.
ಚೆನ್ನೈ ಮೂಲದ ಉದ್ಯಮಿ ಆಶ್ರಿತ್ ಅಶೋಕ್ ಜೊತೆ ಪಾರ್ವತಿ ಮದುವೆಗೆ ಸಜ್ಜಾಗಿದ್ದು, ಸದ್ಯದಲ್ಲೇ ಇಬ್ಬರೂ ಹೊಸ ಬದುಕಿಗೆ ಕಾಲಿಡಲಿದ್ದಾರೆ. ಮದುವೆ ಡೇಟ್ ಬಗ್ಗೆ ಸದ್ಯದಲ್ಲೇ ರಿವೀಲ್ ಮಾಡಲಿದ್ದಾರೆ. ಇದೀಗ ನಟಿಗೆ ಸೌತ್ ಕಲಾವಿದರು ಮತ್ತು ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಅಂದಹಾಗೆ, ಪಾರ್ವತಿ ನಾಯರ್ ಅವರು ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಕನ್ನಡದ ಸ್ಟೋರಿ ಕಥೆ, ಕಿಶೋರ್ ನಟನೆಯ ‘ವಾಸ್ಕೋಡಿಗಾಮ’ ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ.