Tag: Energy Minister

  • ಗುರು ಅಜ್ಜಯ್ಯ ಸಲಹೆಯಂತೆ ರಾಜಕೀಯ ಏಳಿಗೆಗಾಗಿ ಲೈಫ್ ಸ್ಟೈಲ್ ಬದಲಿಸಿಕೊಂಡ ಡಿಕೆಶಿ!

    ಗುರು ಅಜ್ಜಯ್ಯ ಸಲಹೆಯಂತೆ ರಾಜಕೀಯ ಏಳಿಗೆಗಾಗಿ ಲೈಫ್ ಸ್ಟೈಲ್ ಬದಲಿಸಿಕೊಂಡ ಡಿಕೆಶಿ!

    ಬೆಂಗಳೂರು: ಜಾತಕದಲ್ಲಿ ಕಾಣಿಸಿಕೊಂಡ ದೋಷ ಪರಿಹರಿಸಲು ತಮ್ಮ ಗುರು ಅಜ್ಜಯ್ಯ ನೀಡಿರುವ ಸಲಹೆ ಮೇರೆಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಮಾಂಸಾಹಾರ ತ್ಯಜಿಸಿದ್ದಾರೆ.

    ಹೌದು, ಕಳೆದ ಆರು ತಿಂಗಳಿನಿಂದ ಡಿಕೆ ಶಿವಕುಮಾರ್ ಅವರು ಮಾಂಸಾಹಾರ ತ್ಯಜಿಸಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ಈ ಹಿಂದೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಸಹ ಮಾಂಸಾಹಾರ ಸೇವನೆ ತೊರೆದಿದ್ದರು.

    1982 ರಿಂದ ದೇವೇಗೌಡ ಅವರು ಮಾಂಸಾಹಾರದಿಂದ ದೂರವಿದ್ದಾರೆ. ಈ ನಿರ್ಧಾರ ತೆಗೆದುಕೊಂಡ ಬಳಿಕ ಎಚ್‍ಡಿಡಿ ರಾಜಕೀಯದಲ್ಲಿ ಉನ್ನತ ಮಟ್ಟದ ಬದಲಾವಣೆ ಉಂಟಾಗಿ ಪ್ರಧಾನಿ ಹುದ್ದೆಗೆ ಏರಿದ್ದಾರೆ ಎನ್ನಲಾಗಿದೆ. 86 ವರ್ಷದ ಎಚ್‍ಡಿಡಿ ಸತತ 36 ವರ್ಷಗಳಿಂದ ಮಾಂಸಾಹಾರ ಸೇವನೆ ಮಾಡಿಲ್ಲ.

    ಡಿಕೆ ಶಿವಕುಮಾರ್ ಅವರು ಹೆಚ್ಚಾಗಿ ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯ ಅವರ ಮಾರ್ಗದರ್ಶನ ಪಡೆಯುತ್ತಾರೆ. ಐಟಿ ದಾಳಿಯ ವೇಳೆಯೂ ಅವರ ಸಲಹೆ ಪಡೆದಿದ್ದರು. ಅಲ್ಲದೇ ಅನಂತರದಲ್ಲಿ ಡಿಕೆಶಿ ಅವರ ಎದುರಾಳಿಗಳು ಎಷ್ಟೇ ರಾಜಕೀಯ ವಾಗ್ದಾಳಿ ನಡೆಸಿ ಪಂಥಾಹ್ವಾನ ನೀಡಿದ್ದರೂ ಅವರು ಮೌನವಹಿಸಿದ್ದರು. ಅಜ್ಜಯ್ಯ ಅವರ ಸಲಹೆ ಮೇರೆಗೆ ಡಿಕೆಶಿ ಮೌನಕ್ಕೆ ಶರಣಾಗಿದ್ದರು ಎಂದು ಹೇಳಲಾಗುತ್ತಿದೆ.

    ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಡಿಕೆಶಿ ಅವರು ಮೊಟ್ಟ ಮೊದಲು ಕಾಡು ಸಿದ್ದೇಶ್ವರ ಮಠದ ಅಜ್ಜಯ್ಯ ಅವರನ್ನು ಭೇಟಿ ಮಾಡಿ ಅಶೀರ್ವಾದ ಪಡೆದಿದ್ದರು. ಇದಾದ ಬಳಿಕ ಡಿಕೆಶಿ ಕುಟುಂಬ ಸದಸ್ಯರು ಕನಕಪುರದ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು.

  • ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

    ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

    ಬೆಂಗಳೂರು: ರಾಜ್ಯದ ಪವರ್ ಫುಲ್ ಮಿನಿಸ್ಟರ್ ಅಂತಾನೇ ಕರೆಸಿಕೊಳ್ಳುವ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಏನಾಯಿತು? ಮತ್ತು ಯಾವ ಆಧಾರದ ಮೇಲೆ ಪ್ರಕರಣ ದಾಖಲು ಮಾಡಲಾಗ್ತಾಯಿದೆ ಎಂಬುದರ ಬಗ್ಗೆ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಮಾಹಿತಿಗಳು ಲಭ್ಯವಾಗಿವೆ.

    ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ವೇಳೆ ವಶಪಡಿಸಿಕೊಂಡ ಬಹುತೇಕ ಆಸ್ತಿ ಪತ್ರಗಳಿಗೆ ಸರಿಯಾದ ದಾಖಲೆಗಳಿಲ್ಲ. ಸಚಿವರು ದಾಖಲೆಯಿಲ್ಲದೇ ಹಲವು ಕಡೆ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋಟ್ಯಂತರ ರುಪಾಯಿಗಳನ್ನು ಕೇವಲ ಚೀಟಿಗಳಲ್ಲಿ ಬರೆದುಕೊಳ್ಳಲಾಗಿತ್ತು ಮತ್ತು ಈ ಎಲ್ಲ ವ್ಯವಹಾರಗಳಿಗೆ ಯಾವುದೇ ರೀತಿಯಲ್ಲಿ ಸಚಿವರು ತೆರಿಗೆಯನ್ನು ಪಾವತಿ ಮಾಡಿಲ್ಲ. ದಾಳಿ ಸಮಯದಲ್ಲಿ ಸಚಿವರು ಕೆಲ ದಾಖಲೆಗಳನ್ನು ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ.

    ಐಟಿ ದಾಳಿ ವೇಳೆ 5 ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಟ್ಯಾಕ್ಸ್ ಕಟ್ಟದೆ ಇರುವುದು ಬೆಳಕಿಗೆ ಬಂದಿದೆ. ಇನ್ನೂ ಹಲವು ಕಂಪೆನಿಗಳ ಜೊತೆ ಡಿ.ಕೆ.ಶಿವಕುಮಾರ್ ಒಪ್ಪಂದ ಮಾಡಿಕೊಂಡಿದ್ದು, ಅರ್ಧ ಹಣವನ್ನು ಚೆಕ್ ಮೂಲಕ ಮತ್ತು ಇನ್ನರ್ಧ ಹಣವನ್ನು ಕ್ಯಾಶ್ ಮೂಲಕ ಪಡೆದಿದ್ದಾರೆ. ಕ್ಯಾಶ್ ನಲ್ಲಿ ಪಡೆದ ಹಣಕ್ಕೆ ಸಚಿವರು ತೆರಿಗೆ ಪಾವತಿ ಮಾಡಿಲ್ಲ. ಈ ರೀತಿಯ ವ್ಯವಹಾರದಲ್ಲಿ ಒಂದು ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು 7 ಕೋಟಿ ರೂಪಾಯಿಗೂ ಹೆಚ್ಚಿನ ಹಣಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಡಿ.ಕೆ ಶಿವಕುಮಾರ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಪ್ರಸ್ತುತ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾರೆ. ಜವಬ್ದಾರಿಯುತ ಸಚಿವರಾಗಿ ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮಾಡಿದ್ದಾರೆ. ಕಾನೂನಿನ ಬಗ್ಗೆ ಅರಿವಿದ್ರೂ ಮೋಸ ಮಾಡಿದ್ದು, ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಐಟಿ ಇಲಾಖೆ ಕೋರ್ಟ್ ಗೆ ಮನವಿ ಮಾಡಿದೆ.

  • ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಲು ಕಾರಣ ಯಾರು?

    ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಲು ಕಾರಣ ಯಾರು?

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊನೆ ಕ್ಷಣದಲ್ಲಿ ಡಿಕೆ ಶಿವಕುಮಾರ್ ಕೈತಪ್ಪಲು ಕಾರಣ ಯಾರು ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

    ಒಂದು ಹಂತದಲ್ಲಿ ಅಧ್ಯಕ್ಷ ಸ್ಥಾನ ಕೈ ತಪ್ಪಲು ದೇವೇಗೌಡರು ಪರೋಕ್ಷ ಕಾರಣರಾದ್ರೆ, ಮತ್ತೊಂದು ಕಡೆ ಮಾಜಿ ಸಂಸದೆ ರಮ್ಯಾ ಪ್ರಯೋಗಿಸಿದ ದಾಳದಿಂದಾಗಿ ಡಿಕೆಶಿಗೆ ಹಿನ್ನಡೆಯಾಗಿದೆಯಂತೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಗೆ ಸಿಕ್ಕಿರೋ ಮಾಹಿತಿ ಪ್ರಕಾರ ಸೋಮವಾರ ರಾಹುಲ್ ಗಾಂಧಿ ಭೇಟಿಯಾದ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ, ಡಿಕೆ ಶಿವಕುಮಾರ್ ವಿರುದ್ಧ ಕಿವಿ ಊದಿದ್ದಾರಂತೆ. ರಾಮನಗರದಲ್ಲಿ ಡಿಕೆಶಿ ಸಹೋದರರು ಪ್ರಾಬಲ್ಯ ಸಾಧಿಸಿದ್ದು, ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅವ್ರನ್ನ ಹಿಡಿಯೋದು ಕಷ್ಟ ಅಂತಾ ಎಚ್ಚರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಅಲ್ಲದೇ ಒಕ್ಕಲಿಗ ಸಮುದಾಯದಲ್ಲಿ ಡಿಕೆಶಿ ಸಹೋದರರ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಇಲ್ಲದಿರುವುದರಿಂದ ಈಗ ಆಯ್ಕೆ ಮಾಡಿದ್ರೆ ಪಕ್ಷಕ್ಕೆ ತೀವ್ರ ಹಿನ್ನಡೆ ಆಗಲಿದೆ ಎಂದು ರಾಹುಲ್ ಗಾಂಧಿಗೆ ಮನದಟ್ಟು ಮಾಡಿದ್ದಾರಂತೆ. ಇದರ ಬದಲಿಗೆ ಪರಮೇಶ್ವರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದರೆ ಪಕ್ಷ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದೀಗ ರಮ್ಯಾ ರಾಜಕೀಯದಿಂದ ಡಿಕೆಶಿ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.