Tag: Energy

  • ಇಂಧನಕ್ಕೆ ಪ್ರಮುಖ ಆದ್ಯತೆ – ನ್ಯಾಟೋ ಮುಖ್ಯಸ್ಥನ ನಿರ್ಬಂಧಗಳ ಬೆದರಿಕೆಗೆ ಭಾರತ ತಿರುಗೇಟು

    ಇಂಧನಕ್ಕೆ ಪ್ರಮುಖ ಆದ್ಯತೆ – ನ್ಯಾಟೋ ಮುಖ್ಯಸ್ಥನ ನಿರ್ಬಂಧಗಳ ಬೆದರಿಕೆಗೆ ಭಾರತ ತಿರುಗೇಟು

    ನವದೆಹಲಿ: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸಿದ್ರೆ ಶೇ.100 ರಷ್ಟು ದ್ವಿತೀಯ ಸುಂಕ ವಿಧಿಸುವ ಸಾಧ್ಯತೆಯಿದೆ ಎಂಬ ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರ ಬೆದರಿಕೆಯನ್ನು ಭಾರತ ತಳ್ಳಿಹಾಕಿದೆ. ಜೊತೆಗೆ ದೇಶದ ಇಂಧನ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವ ಕಡೆಗೆ ಆದ್ಯತೆ ನೀಡಿರುವುದಾಗಿಯೂ ತಿಳಿಸಿದೆ.

    ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂ ನಂತಹ ಇಂಧನ ಉತ್ಪನ್ನಗಳನ್ನ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ 100% ದ್ವಿತೀಯ ಸುಂಕ ವಿಧಿಸುವುದಾಗಿ ರುಟ್ಟೆ ಬೆದರಿಕೆಹಾಕಿದ್ದರು.

    ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಪ್ರತಿಕ್ರಿಯಿಸಿದ್ದಾರೆ. ತೈಲ ಪೂರೈಕೆಯ ಅಗತ್ಯತೆಗಳನ್ನು ಭದ್ರಪಡಿಸಿಕೊಳ್ಳುವುದು ರಾಷ್ಟ್ರ ರಾಜಧಾನಿಗೆ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರಲ್ಲದೇ ದ್ವಿಮುಖ ಮಾನದಂಡ ಅಳವಡಿಸಿಕೊಳ್ಳದಂತೆಯೂ ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆಗಳಲ್ಲಿ ಏನು ಲಭ್ಯವಾಗುತ್ತಿದೆ, ಜಾಗತಿಕ ಪರಿಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ವಿಷಯದ ಕುರಿತು ಅನೇಕ ವರದಿಗಳನ್ನು ನಾವು ನೋಡಿದ್ದೇವೆ. ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿಯೂ ಗಮನಿಸಿದ್ದೇವೆ. ನಮ್ಮ ಜನಕ್ಕೆ ಬೇಕಾದ ಇಂಧನದ ಅಗತ್ಯತೆಗಳನ್ನ ಭದ್ರಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ. ಜಾಗತಿಕ ಪರಿಸ್ಥಿತಿಗಳು ನಮ್ಮನ್ನ ಗೈಡ್‌ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

    ರುಟ್ಟೆ ಹೇಳಿದ್ದೇನು?
    50 ದಿನಗಳಲ್ಲಿ ಶಾಂತಿ ಒಪ್ಪಂದದ ಹೊರತು ರಷ್ಯಾದಿಂದ ರಫ್ತು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100ರಷ್ಟು ದ್ವಿತೀಯ ಸುಂಕದ ಬೆದರಿಕೆಯನ್ನು ಟ್ರಂಪ್ ಹಾಕಿದ್ದರು. 2022 ರಲ್ಲಿ ಉಕ್ರೇನ್‌ ವಿರುದ್ಧ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾದ ಪ್ರಮುಖ ವ್ಯಾಪಾರ ಪಾಲುದಾರನಾದ ಭಾರತ, ಬ್ರೆಜಿಲ್ ಮತ್ತು ಚೀನಾಗಳಿಗೆ ರುಟ್ಟೆ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿ, ಚೀನಾ, ಭಾರತ ಮತ್ತು ಬ್ರೆಜಿಲ್ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಇದರಿಂದ ನಿಮಗೆ ತೀವ್ರ ತೊಂದರೆಯಾಗಬಹುದು. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಮಾಡಿ, ಉಕ್ರೇನ್ ವಿರುದ್ಧದ ಶಾಂತಿ ಮಾತುಕತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹೇಳಿ, ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಲಿದೆ ಎಂದು ಹೇಳಿದ್ದರು.

  • ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ (Economic Crisis) ಪಾಕಿಸ್ತಾನ ಈಗಾಗಲೇ ಶ್ರೀಲಂಕಾ (SriLanka) ಪರಿಸ್ಥಿತಿಯನ್ನು ಎದುರಿಸುತ್ತಿದೆ.

    ದಿನದಿಂದ ದಿನಕ್ಕೆ ಪಾಕಿಸ್ತಾನದ (Pakistan) ಸ್ಥಿತಿ ದಾರುಣವಾಗ್ತಿದೆ. ಈಗಾಗಲೇ ಚಿಕನ್ (Chicken), ಗೋಧಿ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಇದೀಗ ಮತ್ತಷ್ಟು ಅಗತ್ಯ ವಸ್ತುಗಳ ಕೊರತೆ ಭೀತಿಯೂ ಎದುರಾಗಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಆಮದು ನಿಂತುಹೋಗಿರುವ ಕಾರಣ ಅಡುಗೆ ಎಣ್ಣೆ (Cooking Oil), ತುಪ್ಪದ ಬೆಲೆಗಳು ಹೆಚ್ಚಾಗಿವೆ. ಕಸ್ಟಮ್ಸ್ ಗೋದಾಮಿನಲ್ಲಿ ಮೂರೂವರೆ ಲಕ್ಷ ಟನ್ ಅಡುಗೆ ಎಣ್ಣೆ ಸ್ಟಾಕ್ ಇದ್ದರೂ, ಅದನ್ನು ಮಾರುಕಟ್ಟೆಗೆ ತರಲು ಬ್ಯಾಂಕ್‌ಗಳು ಲೆಟರ್ ಆಫ್ ಕ್ರೆಡಿಟ್ಸ್, ರಿಟೈನಿಂಗ್ ಪತ್ರಗಳನ್ನು ಕ್ಲಿಯರ್ ಮಾಡ್ತಿಲ್ಲ. ಹೀಗಾಗಿ ಆಮದು ಉತ್ಪನ್ನಗಳ ಮೇಲೆ ಸರ್‌ಚಾರ್ಜ್ (ತೆರಿಗೆ ರೂಪದ ಸುಂಕ) ಮತ್ತು ಇತರೆ ವೆಚ್ಚಗಳು ಹೆಚ್ಚುತ್ತಿವೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಮತ್ತೊಂದೆಡೆ ಡಾಲರ್ (US Dollar) ಎದುರು ಪಾಕ್ ರೂಪಾಯಿ ಅಪಮೌಲ್ಯ ಮುಂದುವರಿದಿದೆ. ಸದ್ಯ ವಿನಿಮಯ ಮೌಲ್ಯ ಒಂದು ಡಾಲರ್‌ಗೆ ಪಾಕಿಸ್ತಾನದ 228 ರೂಪಾಯಿ ಇದೆ. ಖರ್ಚು ಸರಿದೂಗಿಸಲು ಅಮೆರಿಕದಲ್ಲಿರುವ ಹಳೆಯ ರಾಯಭಾರ ಕಚೇರಿಯನ್ನೇ ಪಾಕ್ ಸರ್ಕಾರ ಮಾರಾಟ ಮಾಡಿದೆ. ಚೀನಾ (China) ಮೇಲೆ ಅಧಿಕ ಅವಲಂಬನೆ ಮತ್ತು ದುರಾಡಳಿತವೇ ಪಾಕಿಸ್ತಾನದ ಇಂದಿನ ಸ್ಥಿತಿಗೆ ಕಾರಣ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.

    ಇತ್ತೀಚೆಗಷ್ಟೇ ಪಾಕಿಸ್ತಾನ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಲವು ಕ್ರಮ ಕೈಗೊಂಡಿತು. ಪಾಕಿಸ್ತಾನದ ಸರ್ಕಾರ ಇಂಧನ ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿತು. ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರ ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಸರ್ಕಾರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BJP ಸರ್ಕಾರದಿಂದ ಎಲೆಕ್ಷನ್ ಗಿಫ್ಟ್ – ಹೊಸ ವರ್ಷದಿಂದ ವಿದ್ಯುತ್ ದರ ಇಳಿಕೆ?

    BJP ಸರ್ಕಾರದಿಂದ ಎಲೆಕ್ಷನ್ ಗಿಫ್ಟ್ – ಹೊಸ ವರ್ಷದಿಂದ ವಿದ್ಯುತ್ ದರ ಇಳಿಕೆ?

    ಬೆಂಗಳೂರು: ಹೊಸ ವರ್ಷ ಆರಂಭಕ್ಕೂ ಮುನ್ನವೇ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡುವ ಪ್ರಸ್ತಾಪವನ್ನು ಇಂಧನ ಇಲಾಖೆ (Department of Electricity) ಸಿದ್ಧಪಡಿಸಿದೆ.

    ಗೃಹ ಬಳಕೆಯೂ ಸೇರಿದಂತೆ ಎಲ್ಲ ಬಗೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಇಂಧನ ದರ ಕಡಿತಕ್ಕೆ ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ಪ್ರತಿ ಯುನಿಟ್‌ಗೆ 70 ಪೈಸೆಯಿಂದ 2ರೂ. ವರೆಗೂ ಶುಲ್ಕ ಇಳಿಕೆಯಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಪ್ರತಿವರ್ಷ ನಡೆಸುವ ವಾರ್ಷಿಕ ದರ ಪರಿಷ್ಕರಣೆಯಲ್ಲಿ ವಿದ್ಯುತ್ ಶುಲ್ಕ (Electricity Price) ಹೆಚ್ಚಳದಿಂದ ಗ್ರಾಹಕರ ಮೇಲೆ ಹೊರೆ ಹೇರಲಾಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗಲು ಇಂಧನ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸರಬರಾಜು ಕಂಪನಿಗಳಿಂದ ಕೆಇಆರ್‌ಸಿಗೆ (KERC) ಸಲ್ಲಿಸುವ ಪ್ರಸ್ತಾವನೆಯಲ್ಲಿ ಬಳಕೆದಾರರ ಶುಲ್ಕವನ್ನು ಕಡಿಮೆ ಮಾಡಿ ದರಪಟ್ಟಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ

    ಈ ಪ್ರಸ್ತಾಪ ಕೇವಲ ಗೃಹ ಬಳಕೆ ಗ್ರಾಹಕರಿಗೆ ಮಾತ್ರವಲ್ಲ, ಎಚ್‌ಟಿ, ಕೈಗಾರಿಕೆ, ವಾಣಿಜ್ಯ ಮತ್ತು ಎಲ್‌ಟಿ ಗ್ರಾಹಕರಿಗೂ ಅನ್ವಯವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ವಿಧಿಸಿದ್ದ ಕ್ರಾಸ್ ಸಬ್ಸಿಡಿ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರಿಂದ ಅವರು ಗ್ರಿಡ್ ತೊರೆಯುತ್ತಿದ್ದರು. ಹೀಗಾಗಿ ಎಚ್‌ಟಿ ಗ್ರಾಹಕರನ್ನು ಉಳಿಸಿಕೊಳ್ಳುವುದಕ್ಕಾಗಿ ಕ್ರಾಸ್ ಸಬ್ಸಿಡಿ ಸಡಿಲಿಸಲು ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ ಪ್ರಸ್ತಾಪ ಸಲ್ಲಿಸಿ, ಪ್ರತ್ಯೇಕ ಶುಲ್ಕ ಪದ್ಧತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

    ಗ್ರಾಮೀಣ ಗ್ರಾಹಕರಿಗೆ ರಿಯಾಯಿತಿ?
    ಇಂಧನ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗ್ರಾಮೀಣ ವಿದ್ಯುತ್ ಬಳಕೆದಾರರಿಗೆ ತುಸು ರಿಯಾಯಿತಿ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಹಕರಿಗೆ ಬಳಕೆದಾರರ ಶುಲ್ಕದಲ್ಲಿ 25 ಪೈಸೆಯಷ್ಟು ರಿಯಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 50 ಯುನಿಟ್ ವರೆಗೆ ಲೈಫ್ ಲೈನ್ ಬಳಕೆಯ ಎಲ್‌ಟಿ 2 (A1) ಹಾಗೂ ಎಲ್ಟಿ 2(A2) ಗ್ರಾಹಕರಿಗೆ ಈಗ ಪ್ರತಿ ಯುನಿಟ್‌ಗೆ ವಿಧಿಸುತ್ತಿದ್ದ 4.15 ರೂ. ಹಾಗೂ 4.05 ರೂ. ಶುಲ್ಕವನ್ನು 3.6 ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಭತ್ತಕ್ಕೆ ಉತ್ತಮ ಬೆಲೆ ಬಂದಿದ್ದರೂ ರಾಯಚೂರು ರೈತರಿಗೆ ನಿರಾಸೆ

    50 ರಿಂದ 200 ಯುನಿಟ್ ವರೆಗಿನ ಬಳಕೆಗೆ ಈ ವರೆಗೆ ವಿಧಿಸುತ್ತಿದ್ದ ಎರಡು ಸ್ಲ್ಯಾಬ್‌ಗಳನ್ನು ಒಂದಕ್ಕೆ ಇಳಿಸಲು ನಿರ್ಧರಿಸಲಾಗಿದ್ದು ಸರಾಸರಿ 5.4 ರೂ. ಪ್ರತಿ ಯುನಿಟ್ ಸರಾಸರಿ ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದರಿಂದ ಪ್ರತಿ ಯುನಿಟ್‌ಗೆ ಸರಾಸರಿ 2 ರೂ.ವರೆಗೂ ಇಳಿಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. 200 ಯುನಿಟ್ ಹಾಗೂ ನಂತರದ ಬಳಕೆದಾರರಿಗೆ ಈಗಿರುವ 8.20 ಹಾಗೂ 7.70 ರೂ. ದರವನ್ನು ಏಕೀಕೃತಗೊಳಿಸಿ 7 ರೂ.ಗೆ ಇಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

    ಸಮಯಾಧಾರಿತ ಶುಲ್ಕ:
    ಇದರ ಜತೆಗೆ ಎಚ್‌ಟಿ ಗ್ರಾಹಕರಿಗೆ ಸಮಯಾಧಾರಿತ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ದಿನದಲ್ಲಿ 11 ಗಂಟೆ ವಿದ್ಯುತ್ ಬಳಕೆದಾರರ ಶುಲ್ಕದಲ್ಲಿ ಕಡಿತ ಮಾಡಿ ಹೆಚ್ಚಿನ ರಿಯಾಯಿತಿ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಯುನಿಟ್‌ಗೆ ಈ ಮೊದಲು ವಿಧಿಸುತ್ತಿದ್ದ 6.60 ರೂ. ಬಳಕೆದಾರರ ಶುಲ್ಕ ಹೊಸ ಪ್ರಸ್ತಾಪದಿಂದ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದ್ದು 75 ಪೈಸೆವರೆಗೆ ರಿಯಾಯಿತಿ ಸಿಗಬಹುದು ಎನ್ನಲಾಗಿದೆ.

    ಈ ಬಾರಿ ವಿದ್ಯುತ್ ಶುಲ್ಕ ಪರಿಷ್ಕರಣೆ ಸಂದರ್ಭದಲ್ಲಿ ಜನಪರ ನಿಲುವು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಾಕಷ್ಟು ಪೂರ್ವ ತಯಾರಿ ನಡೆಸಲಾಗುತ್ತಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹೇರಿ ಗ್ರಾಹಕ ಸ್ನೇಹಿಯಾಗುವ ಮೂಲಕ ರಾಜ್ಯ ಸರ್ಕಾರ ಇನ್ನಷ್ಟು ಜನಪರವಾಗಲಿದೆ. ಬಳಕೆದಾರರ ಶುಲ್ಕ ಇಳಿಕೆಗೆ ಚಿಂತನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್‌ ಪ್ರಧಾನಿ

    ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ: ಸ್ಪೇನ್‌ ಪ್ರಧಾನಿ

    ಮ್ಯಾಡ್ರೀಡ್‌: ವಿದ್ಯುತ್‌ ಉಳಿತಾಯಕ್ಕೆ ಟೈ ಕಟ್ಟುವುದನ್ನು ನಿಲ್ಲಿಸಿ ಎಂದು ಸ್ಪೇನ್‌ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಮನವಿ ಮಾಡಿದ್ದಾರೆ.

    ನಾನು ಈಗಾಗಲೇ ಟೈ ಕಟ್ಟುವುದನ್ನು ನಿಲ್ಲಿಸಿದ್ದೇನೆ. ನಮ್ಮ ಮಂತ್ರಿಗಳು ಮತ್ತು ಕಚೇರಿಯಲ್ಲಿರುವ ಸಿಬ್ಬಂದಿ ಈ ನಡೆಯನ್ನು ಅನುಸರಿಸಬೇಕು. ಈ ಮೂಲಕ ವಿದ್ಯುತ್‌ ಶಕ್ತಿಯನ್ನು ಉಳಿತಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.

    ನೀಲಿ ಬಣ್ಣದ ಸೂಟ್‌ ಮತ್ತು ಬಿಳಿ ಬಣ್ಣದ ಶರ್ಟ್‌ ಧರಿಸಿ ಮಾತಾನಾಡಿದ ಅವರು, ಈ ನಿರ್ಧಾರದ ಮೂಲಕ ಎಲ್ಲರೂ ವಿದ್ಯುತ್‌ ಉಳಿತಾಯಕ್ಕೆ ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಶೂಟ್ ವೇಳೆ ದಾಳಿ: 8 ಮಹಿಳಾ ರೂಪದರ್ಶಿಗಳ ಮೇಲೆ ಅತ್ಯಾಚಾರ

    ಆಗಸ್ಟ್ 1 ರಿಂದ ಸ್ಪೇನ್‌ ಸರ್ಕಾರವು ಇಂಧನ ದಕ್ಷತೆ ಮತ್ತು ಉಳಿತಾಯ ಕಾರ್ಯಕ್ರಮವನ್ನು ಆರಂಭಿಸಲಿದೆ. ಇತರ ಯುರೋಪ್‌ ರಾಷ್ಟ್ರಗಳು ಇಂಧನ ಉಳಿತಾಯಕ್ಕೆ ಯೋಜನೆ ಹಾಕಿಕೊಂಡಿವೆ.

    ಯುರೋಪ್‌ ರಾಷ್ಟ್ರಗಳಲ್ಲಿ ಬಿಸಿಗಾಳಿ ಜಾಸ್ತಿಯಾಗಿದೆ. 27 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಏರ್‌ ಕಂಡಿಷನ್‌ ಬಳಕೆ ಹೆಚ್ಚಾಗುತ್ತಿದೆ.

    ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ಸ್ಪೇನ್‌ನಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿದ್ಯುತ್ ಬೆಲೆಗಳು ಏರಿಕೆಯಾಗಿತ್ತು. ಆದರೆ ಮೆಡಿಟರೇನಿಯನ್ ರಾಷ್ಟ್ರ ಮತ್ತು ಪೋರ್ಚುಗಲ್‌ನಿಂದ ನ್ಯಾಚುರಲ್‌ ಗ್ಯಾಸ್‌ ಆಮದು ಮಾಡುತ್ತಿರುವ ಕಾರಣ ವಿದ್ಯುತ್‌ ಬೆಲೆ ಇಳಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ದೇಹವನ್ನು ಹೈಡ್ರೇಟ್ ಮಾಡುವ ‘ತುಳಸಿ ಕಷಾಯ’ ಮಾಡಿ ಕುಡಿಯಿರಿ

    ದೇಹವನ್ನು ಹೈಡ್ರೇಟ್ ಮಾಡುವ ‘ತುಳಸಿ ಕಷಾಯ’ ಮಾಡಿ ಕುಡಿಯಿರಿ

    ತ್ತೀಚೆಗೆ ದಿಢೀರ್ ಎಂದು ಬದಲಾಗುತ್ತಿರುವ ವಾತಾವರಣದಿಂದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕೆ ನೀವು ಆರೋಗ್ಯ ಕೆಟ್ಟ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕಾಗಿ ಇಂದು ನಿಮಗೆ ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡುವ ಸೂಪರ್ ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ. ಬೆಳಗ್ಗೆಯೇ ‘ತುಳಸಿ ಕಷಾಯ’ವನ್ನು ಮಾಡಿ ಕುಡಿದ್ರೆ ಇಡೀ ದಿನ ಎನರ್ಜಿಯಿಂದ ಇರಬಹುದು.

    ಬೇಕಾಗಿರುವ ಪದಾರ್ಥಗಳು:
    * ನೀರು – 2 ಕಪ್
    * ತುಳಸಿ – 5 ರಿಂದ 4 ಎಲೆ
    * ಕರಿಮೆಣಸಿನ ಪುಡಿ – 1/2 ಟೀಸ್ಪೂನ್
    * ಒಣ ಶುಂಠಿ ಪುಡಿ – 1/2 ಟೀಸ್ಪೂನ್
    * ಸಕ್ಕರೆ – 1 ಟೀಸ್ಪೂನ್

    ಮಾಡುವ ವಿಧಾನ:
    * ಮೊದಲು ಎಲ್ಲ ಪದಾರ್ಥಗಳನ್ನು ಸರಿಯಾಗಿ ತೆಗೆದುಕೊಳ್ಳಿ.
    * ಒಂದು ಪ್ಯಾನ್‍ಗೆ ನೀರು ಸೇರಿಸಿ, ತುಳಸಿ ಎಲೆಗಳನ್ನು ಹರಿದು ಹಾಕಿ ಕುದಿಸಿ.
    * ನೀರಿನ ಬಣ್ಣ ಬದಲಾದ ನಂತರ, ಕರಿಮೆಣಸಿನ ಪುಡಿ, ಶುಂಠಿ, ಸಕ್ಕರೆ ಸೇರಿಸಿ ಕೆಲವು ನಿಮಿಷ ಕುದಿಸಿ ಮತ್ತು ಗ್ಯಾಸ್ ಆಫ್ ಮಾಡಿ.
    * ತುಳಸಿ ಕಷಾಯವನ್ನು ಬಿಸಿಯಾಗಿರುವಾಗಲೇ ಸೇವಿಸಿ.

    – ಇದನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಕೆಮ್ಮು ಮತ್ತು ಶೀತದಿಂದ ಕಡಿಮೆಯಾಗುತ್ತೆ.

    Live Tv

  • ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ

    ನವದೆಹಲಿ: ಎರಡು ದೇಶಗಳ ನಡುವಿನ ಸಂಬಂಧ ಉತ್ತಮವಾಗುತ್ತಿದ್ದಂತೆ ಅಮೆರಿಕದ ಸಂಗ್ರಹಾಗಾರಗಳಲ್ಲಿ ಕಚ್ಚಾ ತೈಲವನ್ನು ದಾಸ್ತಾನು ಮಾಡಲು ಭಾರತ ಮುಂದಾಗಿದೆ.

    ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್‌ ಮಾತನಾಡಿ, ಎರಡು ದೇಶಗಳು ತೈಲ ದಾಸ್ತಾನು ಮಾಡುವ ಸಂಬಂಧ ಸಹಿ ಹಾಕಿ ಎಂದು ತಿಳಿಸಿದರು. ಶುಕ್ರವಾರ ಧರ್ಮೇಂದ್ರ ಪ್ರಧಾನ್‌ ಮತ್ತು ಅಮೆರಿಕದ ಇಂಧನ ಸಚಿವ ಡಾನ್‌ ಬ್ರೌಲೆಟ್‌ ವಿಡಿಯೋ ಕಾನ್ಫೆರೆನ್ಸ್‌ ನಡೆಸಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಅಮೆರಿಕದಲ್ಲಿ ಯಾಕೆ?
    ಕೋವಿಡ್‌ 19ನಿಂದಾಗಿ ಈಗ ಬೇಡಿಕೆ ಕಡಿಮೆ ಇರುವ ಕಾರಣ ತೈಲ ದರ ಕಡಿಮೆಯಿದೆ. ಹೀಗಾಗಿ ಈಗ ತೈಲವನ್ನು ಖರೀದಿಸಿ ಅಮೆರಿಕದಲ್ಲಿ ಸಂಗ್ರಹಿಸಿದರೆ ಮುಂದೆ ಲಾಭವಾಗುತ್ತದೆ. ದರ ಏರಿಕೆಯಾದಾಗ ಸಂಗ್ರಹಿಸಿರುವ ತೈಲವನ್ನು ಬಳಸುವ ಮೂಲಕ ನಿಯಂತ್ರಣಕ್ಕೆ ತರಬಹುದು ಎಂಬ ಲೆಕ್ಕಾಚಾರವನ್ನು ಭಾರತ ಹಾಕಿಕೊಂಡಿದೆ.

    ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 714 ದಶಲಕ್ಷ ಬ್ಯಾರೆಲ್‌ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಭಾರತ 5.33 ದಶಲಕ್ಷ ಟನ್‌( 38 ದಶಲಕ್ಷ ಬ್ಯಾರೆಲ್‌) ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಬಳಸಬಹುದು.  ಇದನ್ನೂ ಓದಿ: ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು

    ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.

    ಭಾರತ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್‌) ರಾಷ್ಟ್ರಗಳಿಂದ ಅಲ್ಲದೇ ಅಮೆರಿಕದಿಂದಲೂ ತೈಲವನ್ನು ಆಮದು ಮಾಡುತ್ತದೆ. ಭಾರತದ 6ನೇ ದೊಡ್ಡ ತೈಲ ಆಮದು ಮಾಡುವ ರಾಷ್ಟ್ರ ಅಮೆರಿಕವಾಗಿದ್ದು, 2017ರಿಂದ ತೈಲ ಖರೀದಿಸಲು ಆರಂಭಿಸಿದೆ. 2017 ಮತ್ತು 2019ರ ನಡುವೆ ಆಮದು 10 ಪಟ್ಟು ಹೆಚ್ಚಾಗಿದೆ. ಪ್ರತಿ ದಿನ 2,50,000 ಬ್ಯಾರೆಲ್‌ ಕಚ್ಚಾ ತೈಲವನ್ನು ಅಮೆರಿಕ ಭಾರತಕ್ಕೆ ರಫ್ತು ಮಾಡುತ್ತಿದೆ. ಈ ಮೂಲಕ ಅಮೆರಿಕದದಿಂದ ಅತಿ ಹೆಚ್ಚು ತೈಲ ಆಮದು ಮಾಡುತ್ತಿರುವ ದೇಶಗಳ ಪೈಕಿ ಮೊದಲ ಸ್ಥಾನ ಭಾರತಕ್ಕೆ ಸಿಕ್ಕಿದೆ.

    ಭಾರತ ಅಮೆರಿಕ ನಡುವಿನ ಇಂಧನ ಸಹಭಾಗಿತ್ವ ಸಭೆ ಈ ವರ್ಷದ ಏಪ್ರಿಲ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ 19 ನಿಂದಾಗಿ ಮುಂದೂಡಿಕೆಯಾಗಿದ್ದ ಸಭೆ ಈಗ ನಡೆದಿದೆ.

    ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್‍ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.

    ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.

    ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.

  • ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ.

    ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಸಮಿತ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ.

    ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು 5 ವರ್ಷ ಹಿಂದಿನ ಚೈನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ. ವಿಜ್ಞಾನಿಗಳು ಸಮಿತ್ ಅನ್ನು ತಮ್ಮ ಜಿನೋಮ್ ಗಳ ಅಧ್ಯಯನದಲ್ಲಿ ಬಳಸಿದ್ದಾರೆ. ಹಿಂದಿನ ಸೂಪರ್ ಕಂಪ್ಯೂಟರ್ ಗಳಿಗಿಂತ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಧ್ಯವಾದ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದ್ದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕೆ ಸಹಾಯವಾಗಲಿದೆ.

    4,608 ಸರ್ವರ್ ಗಳನ್ನು ಹೊಂದಿರುವ ಸಮಿತ್ 2 ಟೆನ್ನಿಸ್ ಕೋರ್ಟ್‍ಗಳ ಜಾಗವನ್ನು ತೆಗೆದುಕೊಳ್ಳಲಿದೆ. 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದ್ದೂ 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್ ಗಳನ್ನು ಹೊಂದಿದೆ. ಇಡೀ ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ.

    ಅಮೆರಿಕಾ, ಚೈನಾ ದೇಶಗಳಲ್ಲದೆ ಯುರೋಪ್, ಜಪಾನ್ ಹಾಗೂ ಇತರ ದೇಶಗಳ ನಡುವೆ ವೇಗದ ಸೂಪರ್ ಕಂಪ್ಯೂಟರ್ ತಯಾರು ಮಾಡಲು ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯ, ಪರಿಸರ ಕ್ಷೇತ್ರಗಳಲ್ಲದೆ ವಿಮಾನ ವಿನ್ಯಾಸ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಸೂಪರ್ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.

    ಕಂಪ್ಯೂಟರ್ ಸಾಮಥ್ರ್ಯ ಮತ್ತು ಫ್ಲಾಪ್ಸ್
    ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ನ ಸಾಮರ್ಥ್ಯ. ಕಂಪ್ಯೂಟರ್ ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ.