Tag: End

  • ಐಟಿ ರೇಡ್ ಅಂತ್ಯ- ದಾಳಿ ನಡೆಸಿ ‘ತಪ್ಪಾಯ್ತು’ ಎಂದು ಅಧಿಕಾರಿಗಳಿಂದ ಕ್ಷಮೆ!

    ಐಟಿ ರೇಡ್ ಅಂತ್ಯ- ದಾಳಿ ನಡೆಸಿ ‘ತಪ್ಪಾಯ್ತು’ ಎಂದು ಅಧಿಕಾರಿಗಳಿಂದ ಕ್ಷಮೆ!

    ಬೆಂಗಳೂರು: ಚುನಾವಣಾ ಹೊತ್ತಲ್ಲಿಯೇ ಮೊದಲ ಹಂತದ ಮತದಾನ ನಡೆಯುವ ಸುಮಾರು 6 ಜಿಲ್ಲೆಗಳಲ್ಲಿ ನಡೆದ ಐಟಿ ರೇಡ್ ಅಂತ್ಯವಾಗಿದೆ.

    ಹಾಸನ, ಮಂಡ್ಯ, ಶಿವಮೊಗ್ಗ, ಮೈಸೂರು, ಕನಕಪುರ, ಚಿಕ್ಕಮಗಳೂರಿನಲ್ಲಿ ತಲಾಶ್ ನಡೆದಿತ್ತು. ದಾಳಿ ನಡೆಸಿ ಹೋಗುವಾಗ ಅಧಿಕಾರಿಗಳು ‘ತಪ್ಪಾಯ್ತು’ ಎಂದು ಗುತ್ತಿಗೆದಾರರೊಬ್ಬರ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

    ಗುರುವಾರ ರಾತ್ರಿಯೇ ತಲಾಶ್ ಮುಗಿಸಿ ಐಟಿ ಅಧಿಕಾರಿಗಳು ಹೊರಟಿದ್ದಾರೆ. ಐಟಿ ತಂಡ ದಾಳಿ ನಡೆಸಿದ ಕಡೆಗಳಲ್ಲಿ ಬ್ಯಾಗ್‍ಗಳಲ್ಲಿ ದಾಖಲೆ ಹೊತ್ತುಕೊಂಡು ಹೋಗಿದ್ದಾರೆ. ಸಚಿವ ರೇವಣ್ಣ ಆಪ್ತ ಗುತ್ತಿಗೆದಾರ ಶಿವಮೂರ್ತಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅವರ ಮನೆಯಲ್ಲಿ 50,000 ನಗದು ಇತ್ತು. ಆಗ ಅಧಿಕಾರಿಗಳು ಆ ಹಣವನ್ನು ವಾಪಸ್ ಕೊಟ್ಟು ಹೋಗಿದ್ದಾರೆ. ದಾಳಿ ನಡೆಸಿ ಹೋಗುವಾಗ ಅಧಿಕಾರಿಗಳು ‘ತಪ್ಪಾಯ್ತು’ ಎಂದು ಗುತ್ತಿಗೆದಾರನ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಗುತ್ತಿಗೆದಾರ ಶಿವಮೂರ್ತಿ ಆರೋಪ ಮಾಡಿದ್ದಾರೆ.

    ದಾಳಿ ವೇಳೆ ಎಷ್ಟು ದುಡ್ಡು ಸಿಕ್ಕಿದೆ. ಎಷ್ಟು ಬಂಗಾರ ಸಿಕ್ಕಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ಇಂದು ಅಧಿಕೃತವಾಗಿ ಹೇಳಿಕೆ ನೀಡುವ ಸಾಧ್ಯತೆಯಿದೆ. ಮೂಲಕಗಳ ಪ್ರಕಾರ ಐಟಿ ಬೇಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಸಿಕ್ಕಿಲ್ಲವೆಂದು ಹೇಳಲಾಗುತ್ತಿದೆ.

  • ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

    ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

    ಸಿಡ್ನಿ: ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ಆಸ್ಟ್ರೇಲಿಯಾದ ಮ್ಯಾಗೆಲ್ಲಾನ್ ಫೈನಾನ್ಷಿಯಲ್ ಗ್ರೂಪ್ ಸಂಸ್ಥೆ ತನ್ನ ಪ್ರಯೋಜಕತ್ವವನ್ನು ಹಿಂಪಡೆದಿದೆ. ಇದು ಆಸೀಸ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವನ್ನು ಉಂಟು ಮಾಡಿದೆ.

    ಮ್ಯಾಗೆಲ್ಲಾನ್ ಸಂಸ್ಥೆ ತನ್ನ ಪ್ರಯೋಜಕತ್ವನ್ನು ಹಿಂಪಡೆದ ಕಾರಣ ಆಸೀಸ್ ಮಂಡಳಿ ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಮಾಧ್ಯಮಗಳ ವರದಿ ಪ್ರಕಾರ ಮ್ಯಾಗೆಲ್ಲಾನ್ ಸಂಸ್ಥೆಯೊಂದಿಗೆ ಸುಮಾರು 17-20 ದಶಲಕ್ಷ ಆಸ್ಟ್ರೇಲಿಯಾನ್ ಡಾಲರ್(ಅಂದಾಜು 90 ಕೋಟಿ ರೂ.) ಮೊತ್ತದ ಒಪ್ಪಂದವಾಗಿತ್ತು. ಇದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರೀ ಮೊತ್ತದ ಪ್ರಯೋಜಕತ್ವವನ್ನು ಕಳೆದುಕೊಂಡಿದೆ. ಆದರೆ ಕೆಲ ಸಂಸ್ಥೆಗಳು ತಮ್ಮ ಪ್ರಯೋಜಕತ್ವವನ್ನು ಮುಂದುವರೆಸಿವೆ.

    ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿರುವ ಮ್ಯಾಗೆಲ್ಲಾನ್ ಸಂಸ್ಥೆ, ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದ್ದ ಮೂರು ವರ್ಷಗಳ ಪ್ರಯೋಜಕತ್ವ ಒಪ್ಪಂದವನ್ನು ಅಂತ್ಯಗೊಳಿಸಲಾಗಿದೆ. ಈ ಹಿಂದೆ ಸಮಗ್ರತೆ, ನಾಯಕತ್ವ, ಸಮರ್ಪಣೆ ಸಂಸ್ಕೃತಿಯ ಮೌಲ್ಯಗಳ ಆಧಾರದ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ತನ್ನ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದೆ.

    ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ನಲ್ಲಿ ಆಸೀಸ್ ಆಟಗಾರರು ಉದ್ದೇಶ ಪೂರಕವಾಗಿ ನಿಯಮಗಳನ್ನು ಮುರಿದಿರುವ ಕಾರಣ ಇದು ಒಂದು ಪಿತೂರಿಯಾಗಿದ್ದು, ಆಟದ ಸಮಗ್ರತೆಯ ಮನೋಭವಕ್ಕೆ ಧಕ್ಕೆಯಾಗಿದೆ ಎಂದು ಮ್ಯಾಗೆಲ್ಲಾನ್ ಸಿಇಒ ಹ್ಯಾಮಿಶ್ ಡೌಗ್ಲಾಸ್ ಹೇಳಿದ್ದಾರೆ.

    ಆಸೀಸ್ ಕ್ರಿಕೆಟ್ ಮಂಡಳಿ ಬುಧವಾರ ಚೆಂಡು ವಿರೂಪಗೊಳಿದ ಪ್ರಮುಖ ಆಟಗಾರರಾದ ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷದ ಕಾಲ ನಿಷೇಧ ವಿಧಿಸಿ ಕಠಿಣ ಸಂದೇಶ ರವಾಸಿತ್ತು. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಬಿಸಿಸಿಐ ಕೂಡ ಐಪಿಎಲ್ ನಲ್ಲಿ ಒಂದು ವರ್ಷ ಭಾಗವಹಿಸಿಲು ನಿಷೇಧ ವಿಧಿಸಿದೆ. ಇನ್ನು ಚೆಂಡು ವಿರೂಪಗೊಳಿಸಿದ್ದ ಬ್ಯಾನ್ ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಒಳಗಾಗಿದ್ದಾರೆ. ಸದ್ಯ ಮೂವರು ಆಟಗಾರರು ವಿಚಾರಣೆಗೊಳಪಟ್ಟ ಬಳಿಕ ಆಸ್ಟ್ರೇಲಿಯಾಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಆಸೀಸ್ ಆಟಗಾರ ವಾರ್ನರ್ ಹಾಗೂ ಬ್ಯಾನ್ ಕ್ರಾಫ್ಟ್ ರೊಂದಿಗೆ ಉಡುಪು ತಯಾರಿಕ ಸಂಸ್ಥೆ ಎಎಸ್‍ಐಸಿಎಸ್ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ತಿಳಿಸಿದೆ. ಮತ್ತೊಂದೆಡೆ ಎಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆ ವಾರ್ನರ್ ರೊಂದಿನ ಒಪ್ಪಂದವನ್ನು ಅಂತ್ಯಗೊಳಿಸಿದೆ.