ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ವಿದ್ಯುತ್ ಇಲಾಖೆಯ (Electricity Department) ಜಾಗವನ್ನು ಒತ್ತುವರಿ (Encroachments) ಮಾಡಿ ಕಟ್ಟಲಾದ ಕಟ್ಟಡಗಳ ವಿರುದ್ಧ ಪೊಲೀಸರು ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದಾರೆ.
ಕೆಲವು ನಿವಾಸಿಗಳು ಇಲಾಖೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ ವಿದ್ಯುತ್ ಕಂಬಗಳನ್ನೂ ಸೇರಿಸಿ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ್ ತ್ರಿಪಾಠಿ (ಎಸ್‌ಡಿಒ) ಹೇಳಿದ್ದಾರೆ.
ಕೆಲವರು ಸಂಪರ್ಕ ಮತ್ತು ಸರಿಯಾದ ಮೀಟರ್ ಇಲ್ಲದೆ ವಿದ್ಯುತ್ ಕಳ್ಳತನದಲ್ಲಿ ತೊಡಗಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಹಳೆಯ ಮೀಟರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಅಂತಹ ಮೀಟರ್‌ಗಳು ಸಹ ಇಲ್ಲಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಸುಮಾರು 2-3 ಮನೆಗಳಲ್ಲಿ ವಿದ್ಯುತ್ ಕದಿಯುತ್ತಿರುವುದು ಕಂಡುಬಂದಿದೆ. ತನಿಖೆಯ ನಂತರ ಒಟ್ಟು ಮನೆಗಳ ಸಂಖ್ಯೆ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಸಂಭಾಲ್ ಘಟನೆಯು ಬಿಜೆಪಿಯ ದ್ವೇಷದ ರಾಜಕೀಯದ ದುಷ್ಪರಿಣಾಮವಾಗಿದೆ ಮತ್ತು ಇದು ಶಾಂತಿಯುತ ಸಮಾಜಕ್ಕೆ ಮಾರಕವಾಗಿದೆ ಎಂದು ಕಿಡಿಕಾರಿದೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಕಾವು ಹೆಚ್ಚಾಗ್ತಾ ಇದೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ದಿನಾಂಕ ಕೂಡ ನಿಗದಿ ಆಗಲಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ (BBMP) ಬೆಂಗಳೂರಿನಲ್ಲಿ (Bengaluru) ಆಪರೇಷನ್ ಬುಲ್ಡೋಜರ್ (Operation Bulldozer) ಸುಳಿವನ್ನು ನೀಡಿದ್ದು ಮತ್ತೆ ರಾಜಕಾಲುವೆ ಒತ್ತುವರಿ ತೆರವು (Encroachments) ಕಾರ್ಯಾಚರಣೆ ಮಾಡಲು ಮುಂದಾಗಿದೆ.
ಚುನಾವಣಾ ಸಂದರ್ಭದಲ್ಲಿ ಜನವಿರೋಧಿ ಅಥವಾ ಸರ್ಕಾರಕ್ಕೆ ಮುಜುಗರ ಆಗ್ತಾಕ್ಕಂತ ಕೆಲಸಗಳನ್ನು ಮಾಡಲು ಮುಂದಾಗಲ್ಲ. ಏನೇ ನಿಯಮಬಾಹಿರ ಆಗಿದ್ರು ಕ್ರಮಕ್ಕೆ ಮುಂದಾಗಲ್ಲ. ಆದರೆ ಈ ನಡುವೆ ಒತ್ತುವರಿ ತೆರವಿಗೆ ಸರ್ಕಾರ ಅನುಮತಿ ನೀಡುವುದು ಅನುಮಾನವಾಗಿದೆ. ಆದರೂ ಫೆ.10ರ ಒಳಗಡೆ ಒತ್ತುವರಿದಾರರಿಗೆ ನೋಟಿಸ್ ನೀಡಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ಜೊತೆಗೆ ಮಾರ್ಚ್ ತಿಂಗಳ ಒಳಗಡೆ ತೆರವು ಕಾರ್ಯಾಚರಣೆ ಮುಗಿಸುವ ಗುರಿಯನ್ನು ಕೂಡ ನೀಡಲಾಗಿದೆಯಂತೆ. ಇದನ್ನೂ ಓದಿ: ಬಸವ ಕಲ್ಯಾಣದಿಂದ ಸಿದ್ದರಾಮಯ್ಯ, ಕುರಡುಮಲೆಯಿಂದ ಡಿಕೆಶಿ ಬಸ್ ಯಾತ್ರೆ- ಫೆ. 3ರಿಂದ ಆರಂಭ
ಬೆಂಗಳೂರು ನಗರದಾದ್ಯಂತ 485 ಕಡೆ ತೆರವು ಕಾರ್ಯಾಚರಣೆ ಮಾಡಬೇಕಿದೆ. 257 ಕಡೆ ಸರ್ವೆ ಕಾರ್ಯ ಮಾಡಿ ಕೆಲ ಭೂಮಾಲೀಕರಿಗೆ ನೋಟಿಸ್ ಕೂಡ ನೀಡಲಾಗಿದೆ. ಹೊಸದಾಗಿ 161 ಕಡೆ ಒತ್ತುವರಿ ಆಗಿರೋದನ್ನು ಬಿಬಿಎಂಪಿ ಮತ್ತೆ ಮಾಡಿದೆ. ಅದರಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ 32 ಕಡೆ ಒತ್ತುವರಿ, ದಾಸರಹಳ್ಳಿ 125 ಕಡೆ ಒತ್ತುವರಿ, ಪಶ್ಚಿಮ ವಲಯ 06, ಪೂರ್ವ ವಲಯ 90 ಕಡೆ ಒತ್ತುವರಿ ತೆರವು ಸರ್ವೆ ನಡೆಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಳೂರಿಗೆ ಬಂದಿಳಿದ ತಲೈವಾ ರಜನಿಕಾಂತ್ : ಕರಾವಳಿಯಲ್ಲಿ ‘ಜೈಲರ್’ ಶೂಟಿಂಗ್
ಒಟ್ಟಾರೆ ಚುನಾವಣೆ ಸಮಯದಲ್ಲಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಯ ಸುಳಿವು ನೀಡಿದ್ದು, ಸರ್ಕಾರ ಏನು ಮಾಡುತ್ತೆ ಎಂಬುದೇ ಕುತೂಹಲವಾಗಿದೆ. ಸರ್ಕಾರ ತೆರವು ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಮಡಿಕೇರಿ: ಪ್ರಕೃತಿಯ ತವರು ಪ್ರವಾಸಿಗರ ಹಾಟ್‌ಸ್ಪಾಟ್ ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲೇ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಇದೀಗ ಜಿಲ್ಲಾಡಳಿತ ಸರ್ವೇ ಕಾರ್ಯದಿಂದ ಬಯಲಾಗಿದೆ.
ಕೊಡಗು ಜಿಲ್ಲೆಯ 3 ತಾಲೂಕುಗಳಲ್ಲಿ ಜಿಲ್ಲಾ ಸರ್ವೇ ಇಲಾಖೆ ನಡೆಸಿದ ಭೂಮಾಪನಾ ಸಂದರ್ಭ 547 ಕೆರೆಗಳ ಪೈಕಿ 509 ಕೆರೆಗಳ ಸರ್ವೇ ಮುಕ್ತಾಯಗೊಂಡಿದೆ. ಈ ಪೈಕಿ 103 ಕೆರೆಗಳನ್ನು ಒತ್ತುವರಿ ಮಾಡಲಾಗಿರುವುದು ಪತ್ತೆಯಾಗಿದೆ. ಈಗಾಗಲೇ 72 ಕೆರೆಗಳನ್ನು ಜಿಲ್ಲೆಯ ಕಂದಾಯ ಅಧಿಕಾರಿಗಳು ತೆರವುಗೊಳಿಸಿರುವುದು ಖಾತರಿಯಾಗಿದೆ.
ಜಿಲ್ಲಾ ಮಾಪನಾ ಇಲಾಖೆಯ ಉಪನಿರ್ದೇಶಕ (ಡಿಡಿಎಲ್‌ಆರ್) ಪಿ ಶ್ರೀನಿವಾಸ್ ಪ್ರಕಾರ ಇನ್ನೂ 28 ಕೆರೆಗಳ ಸರ್ವೇ ಕಾರ್ಯ ನಡೆಸಬೇಕಾಗಿದೆ. ಇದರಲ್ಲಿ ಸೋಮವಾರಪೇಟೆಯ 10 ಹಾಗೂ ವೀರಾಜಪೇಟೆಯ 28 ಕೆರೆಗಳು ಸೇರಿವೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ಕೆಲವೆಡೆ ಕೆರೆಗಳೇ ಮಾಯವಾಗಿರುವುದು ಕಂಡು ಬಂದಿದೆ.
ಕೊಡಗು ಜಿಲ್ಲೆಯಲ್ಲಿ ಕೆರೆಗಳ ತೆರವು ಕಾರ್ಯಾ ಚರಣೆಯನ್ನು ಜಿಲ್ಲಾಧಿಕಾರಿ ಡಾ. ಸತೀಶ್ ಬಿಸಿ ಖಚಿತಪಡಿಸಿದ್ದಾರೆ. ಮಡಿಕೇರಿ ತಹಶೀಲ್ದಾರ್ ಮಹೇಶ್, ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಹಾಗೂ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಉಸ್ತುವಾರಿಯಲ್ಲಿ ತೆರವು ಕಾರ್ಯಾಚರಣೆ ನಡೆಯತ್ತಿರುವುದಾಗಿ ಜಿಲ್ಲಾಧಿಕಾರಿ ಸತೀಶ್ ತಿಳಿಸಿದ್ದಾರೆ. ಇನ್ನೂ ಕೊಡಗಿನಲ್ಲಿ ನಡೆದ ಕೆರೆಗಳ ಭೂಮಾಪನಾ ಕಾರ್ಯದ ಕುರಿತು ನೀಡಿದ ವಿವರಗಳನ್ನು ಪರಿಶೀಲಿಸಿದ್ದಾರೆ.
ಜಿಲ್ಲೆಯಲ್ಲಿ 547 ಕೆರೆಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ 74, ಸೋಮವಾರಪೇಟೆ ತಾಲೂಕಿನಲ್ಲಿ 208 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 265 ಕೆರೆಗಳಿವೆ. ಇವುಗಳೆಲ್ಲಾ ಚಿಕ್ಕ ಕೆರೆಗಳಾಗಿವೆ. ಒಟ್ಟು ವಿಸ್ತೀರ್ಣ 426.61 ಎಕರೆ. ಇನ್ನುಳಿದಂತೆ ನೀರಾವರಿ ಇಲಾಖೆಯ ಅಧೀನದಲ್ಲಿ ಬೃಹತ್ ಕೆರೆಗಳಿದ್ದು, ಅವುಗಳ ಭೂಮಾಪನಾ ಕಾರ್ಯ ಕೈಗೊಂಡಿಲ್ಲ. ಇದನ್ನೂ ಓದಿ: ಮೇಕೆದಾಟು ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು: ಸಲೀಂ ಅಹ್ಮದ್
ಪ್ರಸ್ತುತ ಜಿಲ್ಲೆಯ ಗ್ರಾಮಾಂತರ ವಿಭಾಗ ಹಾಗೂ ಪಟ್ಟಣ ವಿಭಾಗಗಳಲ್ಲಿ ಸರ್ವೇ ಕಾರ್ಯ ನಡೆಸಲಾಗಿದೆ. ಪಟ್ಟಣ ಪ್ರದೇಶಗಳಲ್ಲಿ 11 ಕೆರೆಗಳಿವೆ. ಮಡಿಕೇರಿ ನಗರದಲ್ಲಿ 4, ವೀರಾಜಪೇಟೆಯಲ್ಲಿ 4, ಕುಶಾಲನಗರದಲ್ಲಿ 2 ಹಾಗೂ ಸೋಮವಾರಪೇಟೆಯಲ್ಲಿ 1 ಕೆರೆಗಳಿವೆ. ಇದೀಗ 509 ಕೆರೆಗಳ ಭೂಮಾಪನಾ ಕಾರ್ಯ ಮುಕ್ತಾಯಗೊಂಡಿದೆ. ಆ ಪೈಕಿ ಮಡಿಕೇರಿ ತಾಲೂಕಿನಲ್ಲಿ 15, ಸೋಮವಾರಪೇಟೆ ತಾಲೂಕಿನಲ್ಲಿ 70 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 18 ಕೆರೆಗಳ ಜಾಗಗಳನ್ನು ಅತಿಕ್ರಮಣ ಮಾಡಿರುವುದು ಸ್ಪಷ್ಟಗೊಂಡಿದೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ನೂರಾರು ಜನರು ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡ ವ್ಯವಸಾಯ ಮಾಡಿಕೊಂಡು ಬದುಕು ನಡೆಸುತ್ತಿದ್ದ ಜನರಿಗೆ ಇದೀಗ ಒತ್ತುವರಿ ಜಾಗ ತೆರವುಗೊಳ್ಳುವ ಅತಂಕ ಎದುರಾಗಿದೆ.