ತುಮಕೂರು: ಸೆಕ್ಷನ್ 144 ಉಲ್ಲಂಘಿಸಿದ ತುಮಕೂರಿನ ಎಂಪ್ರೆಸ್ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬುಧವಾರ ಹಾಗೂ ಗುರುವಾರ ಎಂಪ್ರೆಸ್ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರು ಹಿಜಬ್ ವಿಚಾರವಾಗಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಅಲಿಗಢ ಕಾಲೇಜಿನಲ್ಲಿ ಹಿಜಬ್ ಬ್ಯಾನ್
ತುಮಕೂರು: ನಗರದ ಎಂಪ್ರೆಸ್ ಕಾಲೇಜಿಗೆ ಬುರ್ಖಾ ಧರಿಸಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿನಿಯರು ಆಗಮಿಸಿದ್ದರು.
ರಾಜ್ಯದಲ್ಲಿ ಹಿಜಬ್ ಪ್ರತಿಭಟನೆ ಮುಂದುವರೆದಿದ್ದು, ಹೈಕೋರ್ಟ್ ತನ್ನ ಮುಂದಿನ ಆದೇಶದವರೆಗೂ ಶಾಲಾ-ಕಾಲೇಜಿನಲ್ಲಿ ಹಿಜಬ್ ಧರಿಸದಂತೆ ಸೂಚಿಸಿದೆ. ಆದರೂ ಹಲವಾರು ವಿದ್ಯಾರ್ಥಿನಿಯರು ಪಟ್ಟು ಬಿಡದೇ ಹಿಜಬ್ ಧರಿಸಿ ಶಾಲಾ, ಕಾಲೇಜಿಗೆ ಹಾಜರಾಗುತ್ತಿದ್ದಾರೆ. ಇಂದು ತುಮಕೂರು ನಗರದ ಎಂಪ್ರೆಸ್ ಕಾಲೇಜಿಗೆ ಬುರ್ಖಾ ಧರಿಸಿ ಅನೇಕ ವಿದ್ಯಾರ್ಥಿನಿಯರು ಬಂದಿದ್ದರು. ಇದನ್ನೂ ಓದಿ: ತಾಜ್ ಮಹಲ್ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು
ಇನ್ನೂ ಕಾಲೇಜಿನಲ್ಲಿ ಬುರ್ಖಾ ತೆಗೆದಿಡಲು ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದ್ದು, ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ತೆಗೆದ ತರಗತಿಗೆ ಹಾಜರಾಗಿದ್ದರು. ಆದರೆ ಇನ್ನೂ ಕೆಲವರು ವಿದ್ಯಾರ್ಥಿನಿಯರು ನಿಗದಿತಪಡಿಸಿದ ಕೊಠಡಿಯಲ್ಲಿ ಬುರ್ಖಾ, ಹಿಜಾಬ್ ತೆಗೆಯದೇ ಪಟ್ಟು ಹಿಡಿದಿದ್ದರು. ಈ ವೇಳೆ ಕಾಲೇಜಿನ ಸಿಬ್ಬಂದಿ, ಪ್ರಾಂಶುಪಾಲರು ಬುರ್ಖಾ ತೆಗೆಯುವಂತೆ ಮನವಿ ಮಾಡಿದರು. ಹೀಗಿದ್ದರೂ ಹಿಜಾಬ್ ತೆಗೆಯಲು ವಿದ್ಯಾರ್ಥಿಗಳ ಹಿಂದೇಟು ಹಾಕಿದರು.