Tag: employer

  • ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

    ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ

    ಬೆಂಗಳೂರು: ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಯಡಿ 18ರಿಂದ 35 ವರ್ಷದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ದಿನಾಂಕ 27-03-2022 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ, ಕುಂಬಳಗೋಡಿನ, ರಾಮೋಹಳ್ಳಿ ಕ್ರಾಸ್ ಬಳಿಯಿರುವ ರಾಜರಾಜೇಶ್ವರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.

    ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ,ಬೆಂಗಳೂರು ದಕ್ಷಿಣ ತಾಲೂಕು ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಕನಿಷ್ಠ ಎಸ್ಎಸ್‌ಎಸ್‌ಸಿ  ವಿದ್ಯಾಭ್ಯಾಸ ಹೊಂದಿರಬೇಕು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ಪಿಯುಸಿ, ಐಟಿಐ, ಡಿಪ್ಲೋಮ, ಬಿಕಾಂ, ಬಿಬಿಎ, ಬಿಎ, ಬಿಸಿಎ, ಬಿಇ, ಎಂಕಾಂ, ಎಂಬಿಎ, ಎಂಎ, ಎಂಸಿಎ ಪದವಿಗಳನ್ನು ಹೊಂದಿದ ಉದ್ಯೋಗಕಾಂಕ್ಷಿಗಳಿಗೆ ಒಂಭತ್ತು ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳಾದ ಮುತ್ತೂಟ್ ಗ್ರೂಪ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್,ಯುರೇಕಾ ಫೋರ್ಬ್ಸ್, ಟೀಮ್ ಲೀಸ್, ಯುಟಿಎಲ್ ಟೆಕ್ನಾಲಜಿ ಲಿಮಿಟೆಡ್, ಜಸ್ಟ್ ಡಯಲ್, ಇಂಪ್ಯಾಕ್ಟ್, ರಿಲೆಯನ್ಸ್‌ಗಳಲ್ಲಿ ಉದ್ಯೋಗ ಸೃಷ್ಟಸಿಕೊಳ್ಳುವ ಅವಕಾಶ ಇದಾಗಿದೆ .

    ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ನಂಬರ್‌: 9964907444/7975014738ನ್ನು ಹಾಗೂ ನೋಂದಣಿಗಾಗಿ https://forms.gle/FcuM18DKZ7Gsngqm6 ಗೂಗಲ್ ಲಿಂಕ್‌ನ್ನು ಸಂಪರ್ಕಿಸಬಹುದಾಗಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಗಪ್ಪರವರು ತಿಳಿಸಿದ್ದಾರೆ.

  • ತಾಯಿಯ ವೇತನ ಕೇಳಲು ಬಂದಿದ್ದ ಮಗನಿಗೆ ಬೆಂಕಿ ಇಟ್ಟು ಕೊಂದ್ರು!

    ತಾಯಿಯ ವೇತನ ಕೇಳಲು ಬಂದಿದ್ದ ಮಗನಿಗೆ ಬೆಂಕಿ ಇಟ್ಟು ಕೊಂದ್ರು!

    ರಾಂಚಿ: ತಾಯಿಯ ವೇತನ ಕೇಳಲು ಬಂದಿದ್ದ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಮಾನವೀಯ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.

    ಪನ್ನೂಲಾಲ್ ಸಾವೋ (38) ಕೊಲೆಯಾದ ವ್ಯಕ್ತಿ. ರವೀಂದ್ರ ಕುಮಾರ್ ಮೆಹ್ತಾ ಕೊಲೆ ಮಾಡಿದ ಆರೋಪಿ. ಡುಮರಾನ್ ಗ್ರಾಮದಲ್ಲಿ ಗುರುವಾರ ಘಟನೆ ನಡೆದಿದೆ.

    ಆರೋಪಿ ರವೀಂದ್ರ ಕುಮಾರ್ ಮೆಹ್ತಾ ಒಡೆತನದ ಸಿಜುವಾ-ಹದಾರಿ ಕಲ್ಲಿನ ಕ್ರಷರ್ ಘಟಕದಲ್ಲಿ ಪನ್ನೂಲಾಲ್ ತಾಯಿ ಕೆಲಸ ಮಾಡುತ್ತಿದ್ದಳು. ಆದರೆ ಕೆಲ ದಿನಗಳಿಂದ ಕೂಲಿ ನೀಡಿರಲಿಲ್ಲ. ಹೀಗಾಗಿ ಪನ್ನೂಲಾಲ್ ಕೂಲಿಯ ಹಣವನ್ನು ಕೊಡುವಂತೆ ಕೇಳಲು ಹೋಗಿದ್ದ.

    ರವೀಂದ್ರ ಹಾಗೂ ಪನ್ನೂಲಾಲ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪಗೊಂಡ ರವೀಂದ್ರ, ಪನ್ನೂಲಾಲ್ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಆತನನ್ನು ಸಮೀಪದ ಬೇಲಿಯಲ್ಲಿ ಎಸೆದಿದ್ದಾರೆ ಎಂದು ಹಜಾರಿಬಾಗ್‍ನ ಗ್ರಾಮೀಣ ಪೊಲೀಸ್ ಉಪ ಅಧೀಕ್ಷಕ ವಿವೇಕಾನಂದ್ ತಿಳಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡು ನರಳುತ್ತಿದ್ದ ಪನ್ನೂಲಾಲ್ ನೋಡಿದ ಕೆಲ ಸ್ಥಳೀಯರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪನ್ನೂಲಾಲ್ ಮೃತಪಟ್ಟಿದ್ದಾನೆ.

    ಮೃತನ ಸಂಬಂಧಿಕರು ನೀಡಿದ ದೂರಿನಲ್ಲಿ ರವೀಂದ್ರ ಸೇರಿದಂತೆ ಮೂವರು ಪನ್ನೂಲಾಲ್‍ನನ್ನು ಕಟ್ಟಿ ಹಾಕಿ ಬಳಿಕ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಮಾಲೀಕನ ಹೆಂಡ್ತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಟ್ ಮಾಡಿದ್ರು!

    ಪಾಟ್ನಾ: ಕೆಲಸದ ಮಾಲೀಕನ ಹೆಂಡತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಥಳಿಸಿ ಆತನ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಇಲ್ಲಿನ ಪಿಪ್ರಾ ಚೌಕ್‍ನ ಉಪಹಾರಗೃಹವೊಂದರಲ್ಲಿ ಕಳೆದ ರಾತ್ರಿ ವ್ಯಕ್ತಿಯ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರೋ 30 ವರ್ಷದ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿದ್ರಿಂದ ಈಗ ಆತ ತನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಡಿಎಸ್‍ಪಿ ಬಿಕೆ ಸಿಂಗ್ ಹೇಳಿದ್ದಾರೆ.

    ಸಂತ್ರಸ್ತ ವ್ಯಕ್ತಿ ಮೂಲತಃ ಸಮಷ್ಟಿಪುರದವನು ಎಂದು ವರದಿಯಾಗಿದೆ. ನಾನು ತೇಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರೌನಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಮಾಲೀಕನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

    ಸಾಂದರ್ಭಿಕ ಚಿತ್ರ

    ಫೆಬ್ರವರಿ 6ರಂದು ಚಾಲಕ ತನ್ನ ಪ್ರಿಯತಮೆಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಬಳಿಕ ಮಹಿಳೆಯ ಗಂಡ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು ಎಂದು ಡಿಎಸ್‍ಪಿ ಹೇಳಿದ್ದಾರೆ.

    ನಂತರ ಫೆಬ್ರವರಿ 16ರಂದು ಮಹಿಳೆ ತೇಗ್ರಾಗೆ ವಾಪಸ್ ಬಂದು ಸ್ಥಳೀಯ ಕೋರ್ಟ್‍ನಲ್ಲಿ ಆಕೆಯ ಹೇಳಿಕೆ ದಾಖಲಿಸಲಾಗಿತ್ತು. ಹೆಂಡತಿಯನ್ನ ಮನೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಮಹಿಳೆಯ ಗಂಡನಿಗೆ ಹೇಳಿತ್ತು. ಮಹಿಳೆ ಇದ್ದಕ್ಕಿದ್ದಂತೆ ವಾಪಸ್ ಬಂದಿದ್ದೇಕೆ ಹಾಗೂ ಆಕೆ ಕೋರ್ಟ್‍ನಲ್ಲಿ ನೀಡಿದ ಹೇಳಿಕೆ ಏನು ಎಂಬುದು ಸ್ಪಷ್ಟವಾಗಿಲ್ಲ.

    ಕಳೆದ ಸಂಜೆ ಮಹಿಳೆಯ ಸಂಬಂಧಿ ಚಾಲಕನಿಗೆ ಕರೆ ಮಾಡಿದ್ದು, ಮಹಿಳೆ ನಿನ್ನೊಂದಿಗೆ ಜೀವನ ನಡೆಸಲು ಬಯಸಿದ್ದಾಳೆ. ತೇಗ್ರಾ ಪೊಲೀಸ್ ಠಾಣೆಗೆ ಬಂದು ಆಕೆಯನ್ನ ಕರೆದುಕೊಂಡು ಹೋಗು ಅಂತ ಹೇಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಠಾಣೆಗೆ ಸುಮಾರು 1 ಕಿ.ಮೀ ದೂರದಲ್ಲೇ 20 ಜನರ ತಂಡ ಚಲಕನನ್ನು ತಡೆದಿದ್ದು, ಉಪಹಾರಗೃಹಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನ ಕಣ್ಣುಗಳಿಗೆ ಸಿರಿಂಜ್‍ನಿಂದ ಆ್ಯಸಿಡ್ ಇಂಜೆಕ್ಟ್ ಮಾಡಿದ್ದಾರೆ ಎಂದು ಡಿಎಸ್‍ಪಿ ತಿಳಿಸಿದ್ದಾರೆ.

    ಬಳಿಕ ಚಾಲಕನನ್ನು ಭಗವಾನ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನಮಾನ್ ಚೌಕ್ ಬಳಿ ಎಸೆದು ಹೋಗಿದ್ದಾರೆ. ದಾರಿಹೋಕರೊಬ್ಬರು ಚಾಲಕನನ್ನ ಬೇಗುಸಾರೈನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.

  • ಸೆಕ್ಸ್ ಬೇಕೆಂದು ಹಠ ಹಿಡಿದ ಮಾಲಕಿಯನ್ನು ಕೊಲೆ ಮಾಡ್ದೆ!

    ಸೆಕ್ಸ್ ಬೇಕೆಂದು ಹಠ ಹಿಡಿದ ಮಾಲಕಿಯನ್ನು ಕೊಲೆ ಮಾಡ್ದೆ!

    ನವದೆಹಲಿ: 16 ವರ್ಷದ ಅಪ್ತಾಪ್ತನೊಬ್ಬ ತನ್ನ ಮಾಲಕಿಯನ್ನೇ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗುವ ಮೂಲಕ ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.

    ಅನಿತಾ ಕೊಲೆಯಾದ ಮನೆ ಮಾಲಕಿ. ಈ ಘಟನೆ ಬುಧವಾರ ರಾತ್ರಿ ಲಜ್ಪತ್ ನಗರದಲ್ಲಿ ನಡೆದಿದೆ. ಅನಿತಾ ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಸಂದರ್ಭದಲ್ಲಿ ಆರೋಪಿ ಅಪ್ರಾಪ್ತ ಬಂದು ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಠಾಣೆಗೆ ಬಂದು ವಿಚಾರ ತಿಳಿಸಿ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಳುತ್ತಲೇ ಪೊಲೀಸ್ ಠಾಣೆಗೆ ಬಂದ ಅಪ್ರಾಪ್ತ, ತನ್ನ ಮನೆ ಮಾಲಕಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಕೊಲೆ ಮಾಡಿದ ಬಳಿಕ ತನ್ನ ಕೃತ್ಯದ ಬಗ್ಗೆ ಮರುಕ ಮುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಆತ ನೇರವಾಗಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ಬರುವಾಗ ಆತನ ಬಟ್ಟೆ ಹಾಗೂ ಕೈನಲ್ಲಿ ರಕ್ತದ ಕಲೆಯಿತ್ತು ಅಂತ ಸಾಹಿಬಬಾದ್ ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ಹೇಳಿದ್ದಾರೆ.

    ಅಪ್ರಾಪ್ತನ ಹೇಳಿಕೆಯಂತೆ ಆತನ ಜೊತೆಗೆ ಪೊಲೀಸರು ಕೊಲೆಯಾದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಅನಿತಾ ಬೆಡ್ ರೂಮ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಒಂದು ಬದಿಯಲ್ಲಿ ಆಕೆಯ ಎರಡೂವರೆ ವರ್ಷದ ಹೆಣ್ಣು ಮಗು ನಿದ್ರಿಸುತ್ತಿರುವುದು ಬಿಟ್ಟರೆ ಬೇರೆ ಯಾರೂ ಕೂಡ ಮನೆಯಲ್ಲಿರಲಿಲ್ಲ.

    ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಿಚಾರಣೆ ನಡೆಸಿದಾಗ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಹೇಳಿದ್ದಳು. ಆದ್ರೆ ಇದನ್ನು ನಾನು ವಿರೋಧಿಸಿದ್ದೆ. ಆದ್ರೆ ಆಕೆ ನನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸಬೇಕು. ನನ್ನ ಜೊತೆ ಮಲಗದಿದ್ದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ನಿನ್ನ ವಿರುದ್ಧ ಕೇಸ್ ದಾಖಲಿಸುತ್ತೇನೆ ಅಂತ ಹೇಳಿದ್ದಳು. ಹೀಗಾಗಿ ಬುಧವಾರ ರಾತ್ರಿ ಆಕೆ ಒಬ್ಬಳೇ ಮನೆಯಲ್ಲಿದ್ದ ವೇಳೆ ಕೋಣೆಗೆ ಎಳೆದುಕೊಂಡು ಹೋಗಿ ಅಡುಗೆ ಮನೆಯಿಂದ ಚಾಕು ತಂದು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಆಕೆಯ ಪತಿ ಒಂಪಾಲ್ ಮನೆಯಲ್ಲಿರಲಿಲ್ಲ ಎಂಬುವುದಾಗಿ ವರದಿಯಾಗಿದೆ.

    ಒಂಪಾಲ್ ಕುಟುಂಬಕ್ಕೆ ಆರೋಪಿ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದನು. 15 ತಿಂಗಳು ಕೆಲಸವಿಲ್ಲದೇ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಸಂದರ್ಭದಲ್ಲಿ ಈ ಕುಟುಂಬ ಆತನನ್ನು ಕರೆದುಕೊಂಡು ಬಂದು ಕೆಲಸ ಕೊಡಿಸಿದ್ದರು.