Tag: Employees

  • ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ

    ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಟ್ವಿಟ್ಟರ್ ಖರೀದಿ ಬಳಿಕ ಇದೀಗ ತನ್ನ 1 ಸಾವಿರ ಉದ್ಯೋಗಿಳನ್ನು ವಜಾಗೊಳಿಸಲು ನಿರ್ಧರಿಸಿದ್ದಾರೆ.

    ಟ್ವಿಟ್ಟರ್‌ನ ಮಾಲೀಕನಾಗುತ್ತಿದ್ದಂತೆ ಮಸ್ಕ್ ಕಂಪನಿಯ ಹಲವು ಸಿಬ್ಬಂದಿಯನ್ನು ವಜಾಗೊಳಿಸುವ ಸಾಧ್ಯತೆ ಇದೆ. ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗೆ ಸುಮಾರು 6 ತಿಂಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ. ಬಳಿಕದ 3 ವರ್ಷಗಳಲ್ಲಿ ಮಸ್ಕ್ ಹೊಸ ನೇಮಕಾತಿಗಳನ್ನು ಮಾಡುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    ಪ್ರಸ್ತುತ ಕಂಪನಿಯಲ್ಲಿ 7,500 ಸಿಬ್ಬಂದಿ ಇದ್ದು, ಹೊಸ ನೇಮಕಾತಿ ಮೂಲಕ ಇದರ ಸಂಖ್ಯೆಯನ್ನು 11,000ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಹೊಸ ನೇಮಕಾತಿಯಲ್ಲಿ ಹೆಚ್ಚಾಗಿ ಎಂಜಿನಿಯರ್‌ಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ

    ಎಲೋನ್ ಮಸ್ಕ್ ಟೆಸ್ಲಾ ಕಂಪನಿಯ ಸಿಇಒ ಆಗಿದ್ದು, ದಿ ಬೋರಿಂಗ್ ಕಂಪನಿ ಹಾಗೂ ಸ್ಪೇಸ್‌ಎಕ್ಸ್ ಕಂಪನಿಗಳ ಮುಖ್ಯಸ್ಥರೂ ಆಗಿದ್ದಾರೆ. ಇದೀದ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದು, ತಾತ್ಕಾಲಿಕವಾಗಿ ತಾವೇ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • Better.com ಬಳಿಕ ಇನ್ನೊಂದು ಕಂಪನಿ- ಝೂಮ್ ಕಾಲ್‌ನಲ್ಲಿ 800 ಉದ್ಯೋಗಿಗಳ ವಜಾ

    Better.com ಬಳಿಕ ಇನ್ನೊಂದು ಕಂಪನಿ- ಝೂಮ್ ಕಾಲ್‌ನಲ್ಲಿ 800 ಉದ್ಯೋಗಿಗಳ ವಜಾ

    ಲಂಡನ್: ಈ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯ ಮುಖ್ಯಸ್ಥ ವಿಶಾಲ್ ಗಾರ್ಗ್ ತನ್ನ 900 ಉದ್ಯೋಗಿಗಳನ್ನು ಝೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ವಜಾಗೊಳಿಸಿ ಭಾರೀ ಸುದ್ದಿಯಾಗಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ಬ್ರಿಟಿಷ್ ಮೂಲದ ಕಂಪನಿಯಲ್ಲಿ ನಡೆದಿದೆ.

    ಬ್ರಿಟನ್ ಮೂಲದ ಶಿಪ್ಪಿಂಗ್ ಕಂಪನಿಯೊಂದು ತನ್ನ ಸುಮಾರು 800 ಉದ್ಯೋಗಿಗಳನ್ನು ಆನ್‌ಲೈನ್ ಝೂಮ್ ಕಾಲ್‌ನಲ್ಲಿ ವಜಾಗೊಳಿಸಿದ ಘಟನೆ ನಡೆದಿದೆ. ಬೆಟರ್ ಡಾಟ್ ಕಾಂ ಬಳಿಕ ಝೂಮ್ ಕಾಲ್ ಮುಖಾಂತರ ಉದ್ಯೋಗಿಗಳನ್ನು ವಜಾಗೊಳಿಸಿದ 2 ನೇ ಕಂಪನಿ ಎಂದೇ ಸುದ್ದಿಯಾಗುತ್ತಿದೆ. ಇದೀಗ ಝೂಮ್ ವೀಡಿಯೋ ಕಾಲ್ ಅಪ್ಲಿಕೇಶನ್ ಅನ್ನು ಕಂಪನಿಯಿದ ಉದ್ಯೋಗಿಗಳನ್ನು ವಜಾಗೊಳಿಸಲೆಂದೇ ಬಳಕೆ ಮಾಡಲಾಗುತ್ತಿದೆ ಎಂದು ಹಾಸ್ಯಾಸ್ಪದವಾಗಿ ಹೇಳಲಾಗುತ್ತಿದೆ. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

    ಬ್ರಿಟನ್ ಮೂಲದ ಪಿ ಆಂಡ್ ಒ ಹೆಸರಿನ ಶಿಪ್ಪಿಂಗ್ ಕಂಪನಿ ಮಾರ್ಚ್ 17 ರಂದು ತನ್ನ 800 ಉದ್ಯೋಗಿಗಳನ್ನು ಝೂಮ್ ಕರೆ ಮೂಲಕ ವಜಾ ಗೊಳಿಸಿದೆ. ಕಂಪನಿಯ ಅಧಿಕಾರಿಯೊಬ್ಬರು ಕೇವಲ 3 ನಿಮಿಷಗಳಲ್ಲಿ ಝೂಮ್ ಕರೆಯಲ್ಲಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿ ವಜಾಗೊಳಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಖಾಲಿ ಸ್ಟ್ರಾಲರ್ಸ್ ಸಾಲಾಗಿಟ್ಟು ಯುದ್ಧದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಿದ ಉಕ್ರೇನ್

    ಪಿ ಆಂಡ್ ಒ ಕಂಪನಿ ಕಳೆದ 2 ವರ್ಷಗಳಿಂದ ನಷ್ಟ ಅನುಭವಿಸುತ್ತಿರುವುದರಿಂದ ತನ್ನ ಉದ್ಯೋಗಿಗಳನ್ನು ವಜಾ ಗೊಳಿಸುತ್ತಿರುದಾಗಿ ತಿಳಿಸಿದೆ. ಕೆಲವು ತಿಂಗಳ ಹಿಂದೆ ಬೆಟರ್ ಡಾಟ್ ಕಾಂ ಕಂಪನಿಯೂ ತನ್ನ 900 ಉದ್ಯೋಗಿಗಳನ್ನು ಝೂಮ್ ಕರೆಯ ಮೂಲಕ ವಜಾ ಗೊಳಿಸಿತ್ತು. ಬಳಿಕವೂ ನಷ್ಟದಲ್ಲಿದ್ದ ಕಂಪನಿ ಇ-ಮೇಲೆ ಮುಖಾಂತರ 4 ಸಾವಿರ ಉದ್ಯೋಗಿಳನ್ನು ವಜಾ ಗೊಳಿಸಿದೆ. ಹೀಗೆ ಕಂಪನಿ ಶೇ.50 ರಷ್ಟು ಉದ್ಯೋಗಿಗನ್ನು ವಜಾ ಗೊಳಿಸಿದೆ.

  • ಮತ್ತೆ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರಾ ವಿಶಾಲ್ ಗಾರ್ಗ್?

    ವಾಷಿಂಗ್ಟನ್: ಬೆಟರ್ ಡಾಟ್ ಕಾಂ (Better.com)ನ ಭಾರತ-ಅಮೆರಿಕಾ ಮುಖ್ಯಸ್ಥ ಮತ್ತೆ ತನ್ನ 4,000 ಉದ್ಯೋಗಿಗಳನ್ನು ವಜಾಗೊಳಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಬೆಟರ್ ಡಾಟ್ ಕಾಂ ಕಂಪನಿ ಭಾರತ ಹಾಗೂ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ 8 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇದೀಗ 4,000 ಉದ್ಯೋಗಿಗಳನ್ನು ಕಂಪನಿ ವಜಾಗೊಳಿಸಿದ್ದಲ್ಲಿ ಸುಮಾರು ಶೇ.50 ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿದಂತಾಗುತ್ತದೆ. ಇದನ್ನೂ ಓದಿ: ಪುಟಿನ್‍ನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರಲ್ಲ: ಉಕ್ರೇನ್ ಅಧ್ಯಕ್ಷರ ಪತ್ನಿ

    3 ತಿಂಗಳ ಹಿಂದೆ ವಿಶಾಲ್ ಗಾರ್ಗ್ ಕಂಪನಿಯ ಜೂಮ್ ವೀಡಿಯೋ ಕಾಲ್ ಮೀಟಿಂಗ್‌ನಲ್ಲಿ ತನ್ನ 900 ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಮೂಲಕ ಭಾರೀ ಸುದ್ದಿಯಾಗಿದ್ದ ಗಾರ್ಗ್ ಮತ್ತೆ ತನ್ನ ಕಂಪನಿಯ 4,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

    2021ರ ಡಿಸೆಂಬರ್‌ನಲ್ಲಿ ಕಂಪನಿಯ ಶೇ.9 ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದರಿಂದ ಜಾಗತಿಕವಾಗಿ ಟ್ರೋಲ್ ಆಗಿದ್ದರು. ಇದರಿಂದ ಮುಜುಗರಕ್ಕೊಳಗಾಗ ಗಾರ್ಗ್ ಬಳಿಕ ಕ್ಷಮೆಯನ್ನೂ ಕೇಳಿದ್ದರು.

  • ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ – ಫೇಸ್‌ಬುಕ್ ಆದೇಶ

    ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯ – ಫೇಸ್‌ಬುಕ್ ಆದೇಶ

    ವಾಷಿಂಗ್ಟನ್: ಮೆಟಾ ಮಾಲಿಕತ್ವದ ಫೇಸ್‌ಬುಕ್ ಓಮಿಕ್ರಾನ್ ಭೀತಿಯಿಂದಾಗಿ ತನ್ನ ಉದ್ಯೋಗಿಗಳನ್ನು ಕಂಪನಿಗೆ ಕರೆಸಿಕೊಳ್ಳುವ ಯೋಜನೆಯನ್ನು ವಿಳಂಬ ಮಾಡಿದೆ. ಮಾತ್ರವಲ್ಲದೇ ಕಂಪನಿಗೆ ಮರಳುವ ಉದ್ಯೋಗಿಗಳಿಗೆ ಬೂಸ್ಟರ್ ಡೋಸ್ ಕಡ್ಡಾಯಗೊಳಿಸದೆ.

    ಈ ಹಿಂದೆ ಫೇಸ್‌ಬುಕ್ ಜನವರಿ 31ರ ಒಳಗಾಗಿ ತನ್ನ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್ ಕೊನೆಗೊಳಿಸಿ ಕಂಪನಿಗೆ ಕರೆಸಿಕೊಳ್ಳುವ ಯೋಜನೆ ಮಾಡಿತ್ತು. ಆದರೆ ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳ ಏರಿಕೆಯಿಂದಾಗಿ ಈ ದಿನಾಂಕವನ್ನು ಮಾರ್ಚ್ 28ಕ್ಕೆ ಮುಂದೂಡಿದೆ.

    ನಮ್ಮ ಕಂಪನಿಯ ಹಲವು ಉದ್ಯೋಗಿಗಳು ಕಂಪನಿಗೆ ಮರಳಲು ಸಿದ್ಧರಾಗಿಲ್ಲದಿರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ಅವರಿಗೆ ನಾವು ಕೆಲವು ಆಯ್ಕೆಗಳನ್ನು ನೀಡಲು ಮುಂದಾಗಿದ್ದೇವೆ. ಉದ್ಯೋಗಿಗಳು ತಾವು ಎಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂಬುದರ ನಿರ್ಧಾರವನ್ನು ಕಂಪನಿಗೆ ತಿಳಿಸಬೇಕು ಎಂದು ಫೇಸ್‌ಬುಕ್ ಉಪಾಧ್ಯಕ್ಷ ಜಾನೆಲ್ ಗೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಿವೋ ಐಪಿಎಲ್ ಅಂತ್ಯ ಇನ್ಮುಂದೆ ಟಾಟಾ ಐಪಿಎಲ್

    ಉದ್ಯೋಗಿಗಳು ತಮಗೆ ಅನುಕೂಲವಾಗುವಂತೆ ಮನೆಯಿಂದ ಅಥವಾ ಕಂಪನಿಯಲ್ಲಿಯೇ ಕೆಲಸ ಮಾಡುವ ಆಯ್ಕೆಯನ್ನು ಫೇಸ್‌ಬುಕ್ ನೀಡಿದೆ. ತಮ್ಮ ನಿರ್ಧಾರವನ್ನು ಕಂಪನಿಗೆ ತಿಳಿಸಲು ಮಾರ್ಚ್ 14ರವರೆಗೆ ಸಮಯಾವಕಾಶವನ್ನು ನೀಡಿದೆ. ಉದ್ಯೋಗಿಗಳು ಕಂಪನಿಯನ್ನು ಪ್ರವೇಶಿಸುವುದಾದರೆ ಅವರು ಬೂಸ್ಟರ್ ಡೋಸ್ ಪಡೆದಿರುವ ಪುರಾವೆಯನ್ನು ತೋರಿಸಬೇಕಾಗುತ್ತದೆ.

    ಆರೋಗ್ಯಕ್ಕೆ ಸಂಬಂಧಪಟ್ಟ ಅಥವಾ ಧಾರ್ಮಿಕ ಕಾರಣಕ್ಕೆ ಲಸಿಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದವರು ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶ ಫೇಸ್‌ಬುಕ್ ನೀಡಿದೆ. ಆದರೆ ನಿಗದಿತ ಸಮಯದ ಒಳಗಾಗಿ ತಮ್ಮ ನಿರ್ಧಾರವನ್ನು ತಿಳಿಸದೇ ಹೋದಲ್ಲಿ ಕಂಪನಿ ಅವರನ್ನು ವಜಾಗೊಳಿಸುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಏಷ್ಯಾ ಸ್ಟಾರ್ ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ ಸ್ಟಾರ್ ಡಿಸೈನರ್ ಫಾರೆವರ್ ನವೀನ್ ಕುಮಾರ್

  • ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    ಎರಡು ವರ್ಷಗಳಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ 57 ನೌಕರರ ವಿರುದ್ಧ ಶಿಸ್ತುಕ್ರಮ

    – ಪಿಡಿಓ ಕಾರ್ಯದರ್ಶಿ ಸೇರಿ 34 ಮಂದಿ ಸಸ್ಪೆಂಡ್

    ಯಾದಗಿರಿ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಎರಡು ವರ್ಷಗಳಿಂದ 57 ಜನ ನೌಕರರ ವಿರುದ್ಧ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಿಲ್ಪಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಶಿಲ್ಪಾ ಶರ್ಮಾ ಅವರು ಪ್ರಕಟಣೆ ಹೊರಡಿಸಿದ್ದು, 57 ಸಿಬ್ಬಂದಿ ಪೈಕಿ, 34 ಮಂದಿಯನ್ನು ಅಮಾನತು ಮಾಡಲಾಗಿದೆ. ನಾಲ್ವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಶಿಕ್ಷಕರು ಅನಕ್ಷರಸ್ಥ ಬಾಳಲ್ಲಿ ಅಕ್ಷರ ಬೆಳಕು ಮೂಡಿಸಿರಿ: ಅಶೋಕ್ ಸಿಂದಗಿ

    ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು 16, ಗ್ರಾಮ ಪಂಚಾಯತ್ ಕಾರ್ಯದರ್ಶಿ-4(ಗ್ರೇಡ್-1), ಗ್ರಾಮ ಪಂಚಾಯತ್ ಕಾರ್ಯದರ್ಶಿ-6(ಗ್ರೇಡ್-2), ದ್ವಿತೀಯ ದರ್ಜೆ ಲೆಕ್ಕ ಸಹಾಯಕರ-1, ಕ್ಲಾರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್-1, ಕರವಸೂಲಿಗಾರ-1 ಒಳಗೊಂಡು ಒಟ್ಟು 29 ಮಂದಿಯನ್ನು ಕಳೆದ ಎರಡು ವರ್ಷಗಳಲ್ಲಿ ಅಮಾನತ್ತುಗೊಳಿಸಲಾಗಿದೆ.

    GOVT EMPLOYEES

    ದ್ವಿತೀಯ ದರ್ಜೆ ಸಹಾಯಕ-1, ಕಿರಿಯ ಇಂಜಿನಿಯರ್-3, ಪ್ರಥಮ ದರ್ಜೆ ಸಹಾಯಕ-1 ಒಟ್ಟು-05 ಸೇರಿ ಒಟ್ಟು 34 ಮಂದಿ ಅಮಾನತ್ತುಗೊಳಿಸಲಾಗಿದೆ.

    ದಂಡನೆ ವಿಧಿಸಿದ ಸಿಬ್ಬಂದಿಗಳ ಪ್ರಕರಣ: ಕಿರಿಯ ಇಂಜಿನಿಯರ್-3, ಕಾರ್ಯನಿರ್ವಾಹಕ ಅಧಿಕಾರಿಗಳು-2, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು-6 ಒಟ್ಟು-11 ಸಿಬ್ಬಂದಿಗೆ ದಂಡನೆ ವಿಧಿಸಲಾಗಿದೆ ಎಂದು ಶರ್ಮಾ ಅವರ ಪ್ರಕಟನೆಯ ಮೂಲಕ ತಿಳಿದುಬಂದಿದೆ. ಇದನ್ನೂ ಓದಿ:  ರೇಪ್ ಎಂಜಾಯ್ ಹೇಳಿಕೆಗೆ ಎಲ್ಲೆಡೆ ಆಕ್ರೋಶ – ರಮೇಶ್ ಪ್ರತಿಕೃತಿಗೆ ಪೊರಕೆ ಸೇವೆ

  • ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ

    ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ

    ಮುಂಬೈ: ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಗೆದ್ದ ಟಾಟಾ ಸನ್ಸ್ ಗೆ ಕೇಂದ್ರ ಸರ್ಕಾರ ಒಂದು ಷರತ್ತು ವಿಧಿಸಿದೆ. ಟಾಟಾ ಕಂಪನಿ ಕನಿಷ್ಠ ಒಂದು ವರ್ಷದವರೆಗೆ ಈಗಿರುವ ಏರ್ ಇಂಡಿಯಾದ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಸ್ಪಷ್ಟಪಡಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ವಿಮಾನಯಾನ ಸಚಿವಾಲಯ ಕಾರ್ಯದರ್ಶಿ ರಾಜೀವ್ ಬನ್ಸಲ್, ಏರ್ ಇಂಡಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲ್ಲಾ ನೌಕರರ ಹಿತಾಸಕ್ತಿಗಳನ್ನು ಪರಿಗಣಿಸಿ, ಬಿಡ್ಡಿಂಗ್ ನಲ್ಲಿ ಗೆದ್ದಿರುವ ಟಾಟಾ ಗ್ರೂಪ್ ನೌಕರರನ್ನು ಒಂದು ವರ್ಷ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ತೆಗೆದು ಹಾಕುವಂತಿಲ್ಲ. ಜೊತೆಗೆ ಒಂದು ವರ್ಷ ನಂತರ ಸಂಸ್ಥೆ ಸೇವೆಯಿಂದ ತೆಗೆದುಹಾಕುವ ನೌಕರರಿಗೆ ವಿಆರ್‍ಎಸ್ ಸೌಲಭ್ಯವನ್ನು ನೀಡಬೇಕೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ಈ ಹಿಂದೆ ಏರ್ ಇಂಡಿಯಾದಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ಖಾಯಂ ಮತ್ತು 4 ಸಾವಿರಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡು ಒಟ್ಟು 12 ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ಉದ್ಯೋಗಿಗಳು ಸಂಸ್ಥೆಯಿಂದ ನಿವೃತ್ತರಾಗಲಿದ್ದಾರೆ. ನೌಕರರ ನಿವೃತ್ತಿಯ ನಿಯಮಗಳ ಪ್ರಕಾರ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಸುಮಾರು 55 ಸಾವಿರ ನಿವೃತ್ತ ಸಿಬ್ಬಂದಿ ಏರ್ ಇಂಡಿಯಾದಿಂದ ಕೆಲ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

    ಕೆಲದಿನಗಳ ಹಿಂದೆ ಟಾಟಾ ಕಂಪನಿ ಏರ್ ಇಂಡಿಯಾ ಬಿಡ್ ಗೆದ್ದ ಬಳಿಕ ಏರ್ ಇಂಡಿಯಾ ನೌಕರರ ಒಕ್ಕೂಟ, ನೌಕರರ ನಿವೃತ್ತಿ ಮತ್ತು ಸರ್ಕಾರದಿಂದ ಸಿಗುವ ಇತರ ಸೌಲಭ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು ಇದೀಗ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತಾ, ಟಾಟಾ ಸಮೂಹ  ಒಟ್ಟು 18 ಸಾವಿರ ಕೋಟಿ ರೂ. ಬಿಡ್‌ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್‌ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

     

  • ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್

    ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್

    ಕ್ಯಾಲಿಫೋರ್ನಿಯಾ: ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಉದ್ಯೋಗಿಗಳ ವಿರುದ್ಧವೇ ಗರಂ ಆಗಿದ್ದಾರೆ.

    ಕಂಪನಿಯ ಆಂತರಿಕ ವಿಚಾರವನ್ನು ಸೋರಿಕೆ ಮಾಡಿದ್ದಕ್ಕೆ ಟಿಮ್ ಕುಕ್ ಉದ್ಯೋಗಿಗಳಿಗೆ ಇಮೇಲ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಸಂಸ್ಥೆಯ ನಿಯಮವನ್ನು ಪಾಲಿಸುವವರು ಇಲ್ಲಿ ಇರಬಹುದು. ಇಷ್ಟ ಇಲ್ಲದವರು ಸಂಸ್ಥೆಯನ್ನು ತೊರೆಯಬಹುದು ಎಂದು ಖಾರವಾಗಿ ಬರೆದಿದ್ದಾರೆ.

    ಕಳೆದ ಶುಕ್ರವಾರ ಆಪಲ್ ಕಂಪನಿಯ ಆಂತರಿಕ ಸಭೆ ನಡೆದಿತ್ತು. ಈ ವೇಳೆ ಲಸಿಕೆ ಪಡೆದುಕೊಳ್ಳದ ಆಪಲ್ ಉದ್ಯೋಗಿಗಳು ಪ್ರತಿನಿತ್ಯ ಕೋವಿಡ್ 19 ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಹೇಳುತ್ತಿರುವ ಆಡಿಯೋ ಬಹಿರಂಗವಾಗಿತ್ತು. ಈ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಟಿಮ್ ಕುಕ್ ಇಮೇಲ್ ಮಾಡಿ ಸಿಟ್ಟನ್ನು ಹೊರಹಾಕಿದ್ದಾರೆ.

    ಸಭೆಯ ವರದಿ ಸೋರಿಕೆಯಾಗಿದ್ದು ನನಗೆ ಬೇಸರ ತಂದಿದೆ. ಬಿಡುಗಡೆ ಮಾಡುವ ಮೊದಲೇ ಉತ್ಪನ್ನಗಳ ವಿವರಗಳು ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿದೆ. ಸೋರಿಕೆ ಮಾಡುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಾವು ಸಹಿಸುವುದಿಲ್ಲ ಎನ್ನುವುದು ನಿಮಗೆ ತಿಳಿದಿರಬಹುದು ಎಂದಿದ್ದಾರೆ.  ಇದನ್ನೂ ಓದಿ: ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ 

    ಈ ತಿಂಗಳ ಆರಂಭದಲ್ಲಿ ಕಂಪನಿಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕೆ ಎಂಜಿನಿಯರಿಂಗ್ ವಿಭಾಗದ ಪ್ರೋಗ್ರಾಂ ಮ್ಯಾನೇಜರ್ ಆಶ್ಲೇ ಜಿವಿಕ್ ಅವರನ್ನು ವಜಾ ಮಾಡಿತ್ತು. ಆಶ್ಲೇ ಜಿವಿಕ್ ಕಂಪನಿಯಲ್ಲಿ ತಾರತಮ್ಯ ಮತ್ತು ಕಿರುಕುಳದ ಆರೋಪಗಳನ್ನು ಟ್ವೀಟ್ ಮಾಡಿದ್ದರು. ಕಳೆದ ತಿಂಗಳು, ಆಪಲ್ ಉದ್ಯೋಗಿಗಳ ಗುಂಪೊಂದು ಕಂಪನಿಯಿಂದ ತಮಗೆ ಆಗುತ್ತಿರುವ ನೋವನ್ನು ತೋಡಿಕೊಳ್ಳಲು AppleToo ಹೆಸರಿನಲ್ಲಿ ವೆಬ್‍ಸೈಟ್ ತೆರೆದಿತ್ತು.

    ಕಂಪನಿಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದವರ ವಿರುದ್ಧ ಈಗ ಆಪಲ್ ಜಾಗತಿಕ ಭದ್ರತಾ ತಂಡ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.

  • ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ

    ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ

    ಬೆಂಗಳೂರು: ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಗಸ್ಟ್ 10ರಂದು ದೇಶಾದ್ಯಂತ ವಿದ್ಯುತ್ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

    ವಿದ್ಯುತ್ ಖಾಸಗೀಕರಣ ವಿರೋಧಿಸಿ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿದ್ಯುತ್ ಕಂಪನಿಗಳನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವ ಕ್ರಮ ವಿರೋಧಿಸಿ ದೇಶಾದ್ಯಂತ ಈ ಪ್ರತಿಭಟನೆ ನಡೆಯಲಿದೆ ಎಂದು ನೌಕರರ ಸಂಘಟನೆಗಳು ತಿಳಿಸಿವೆ.

    ವಿದ್ಯುತ್ ಕಂಪನಿಗಳಿಂದ ಆಗಿರುವ ಲಕ್ಷಾಂತರ ಕೋಟಿ ನಷ್ಟವನ್ನು ಸರಿದೂಗಿಸುವ ನೆಪದಲ್ಲಿ ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ. ಖಾಸಗೀಕರಣದಿಂದ ರೈತರು, ಬಡವರಿಗೆ ತೀವ್ರ ಸಂಕಷ್ಟ ಎದುರಾಗಲಿದೆ. ವಿದ್ಯುತ್ ಕಾಯ್ದೆ ತಿದ್ದುಪಡಿಯಿಂದ ಬಡವರಿಗೆ ಹಾಗೂ ರೈತರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ ಯೋಜನೆಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ ಎಂದು ಸಂಘಟನೆಗಳು ಹೇಳಿವೆ.

    ಕೇಂದ್ರ ಸರ್ಕಾರ ಈಗಾಗಲೇ ಹಲವು ವಲಯಗಳನ್ನು ಖಾಸಗೀಕರಣ ಮಾಡಿದೆ. ಅದೇ ರೀತಿ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದನ್ನು ವಿರೋಧಿಸಿ ಆ.10ರಂದು ನಡೆಸಲಾಗುತ್ತಿರುವ ಮುಷ್ಕರಕ್ಕೆ ಹಲವು ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಇದನ್ನೂ ಓದಿ:ಭಾರತ ಸೇನೆಯ ಹೆಲಿಕಾಪ್ಟರ್ ಪತನ- ಓರ್ವ ಯೋಧ ಹುತಾತ್ಮ

  • ಮೇ 17ರಿಂದ ಸ್ಪೈಸ್ ಜೆಟ್ ನೌಕರರಿಗೆ ಲಸಿಕೆ

    ಮೇ 17ರಿಂದ ಸ್ಪೈಸ್ ಜೆಟ್ ನೌಕರರಿಗೆ ಲಸಿಕೆ

    ನವದೆಹಲಿ: ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತದೆ ಎಂದು ಬಜೆಟ್ ಕೆರಿಯರ್ ಸ್ಪೈಸ್ ಜೆಟ್ ಘೋಷಿಸಿದೆ.

    ಕಂಪನಿಯ ಪ್ರಾಯೋಜಿತ, ವ್ಯಾಕ್ಸಿನೇಷನ್ ಡ್ರೈವ್‍ನನ್ನು ದೆಹಲಿ ಮತ್ತು ಗುರುಗ್ರಾಮ್‍ನಿಂದ ಪ್ರಾರಂಭಿಸಲಾಗುತ್ತದೆ. ಸ್ಪೈಸ್ ಜೆಟ್‍ನ ಎಲ್ಲಾ ಉದ್ಯೋಗಿಗಳಿಗೂ ಲಸಿಕೆ ನೀಡಲಾಗುತ್ತದೆ ಮತ್ತು ನೌಕರರ ಕುಟುಂಬಸ್ಥರಿಗೂ ಲಸಿಕೆ ಹಾಕಲು ಸ್ಪೈಸ್‍ಜೆಟ್ ಪ್ರಯತ್ನಗಳನ್ನು ಮಾಡಲಿದೆ. ಮೊದಲಿಗೆ ಲಸಿಕೆಯನ್ನು ವಿಮಾನದಲ್ಲಿ ಕಾರ್ಯನಿರ್ವಹಿಸುವ ಫ್ರಂಟ್ ಲೈನ್ ಉದ್ಯೋಗಿಗಳಿಗೆ ನೀಡಲಾಗುತ್ತದೆ ನಂತರ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಗೆ ನೀಡಲಾಗುತ್ತದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.

    ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್‍ನ ಮೂರನೇ ಹಂತದಲ್ಲಿ 18-45 ವಯೋಮಾನದವರಿಗೆ ಲಸಿಕೆಯನ್ನು ಮೇ 1 ರಿಂದ ನೀಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಜನ ಲಸಿಕೆಯನ್ನು ಪಡೆದುಕೊಳ್ಳಲು ಸರ್ಕಾರ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ.

  • ಸಾರಿಗೆ ನೌಕರರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ- 30ಕ್ಕೂ ಹೆಚ್ಚು ಮಂದಿ ಬಂಧನ

    ಸಾರಿಗೆ ನೌಕರರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ- 30ಕ್ಕೂ ಹೆಚ್ಚು ಮಂದಿ ಬಂಧನ

    ಕೋಲಾರ: ಪ್ರತಿಭಟನಾ ನಿರತ ಸಾರಿಗೆ ನೌಕರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಪ್ರತಿಭಟನಾ ನಿರತ ಸಾರಿಗೆ ನೌಕರರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಅಲ್ಲದೆ ಲಾಠಿ ಚಾರ್ಜ್ ಖಂಡಿಸಿ ನೌಕರರು ಠಾಣೆಗೆ ಮುತ್ತಿಗೆ ಹಾಕಿದರು.

    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು, ಕೋಲಾರ ಹೊರವಲಯದ ಸಂಗೊಂಡಹಳ್ಳಿ ಬಳಿ ಜೈಲ್ ಬರೋ ಚಳುವಳಿ ನಡೆಸಿದರು. ಈ ವೇಳೆ ಗ್ರಾಮಾಂತರ ಠಾಣೆ ಪೊಲೀಸರು ಸಾರಿಗೆ ನೌಕರರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಹೀಗಾಗಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೈಲ್ ಬರೋ ಚಳಿವಳಿ ನಡೆಸುತ್ತಿದ್ದ ಸಾರಿಗೆ ನೌಕರರನ್ನು ಪೊಲೀಸರು ವಿನಾಕಾರಣ ಬಂಧಿಸಿದ್ದಾರೆಂದು ಆರೋಪಿಸಿ, ನೌಕರರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.

    ಪೊಲೀಸರ ಕ್ರಮ ಖಂಡಿಸಿ ಧಿಕ್ಕಾರ ಕೂಗಿ ಮುತ್ತಿಗೆ ಹಾಕಿದ್ದ ಹಿನ್ನಲೆ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸಾರಿಗೆ ನೌಕರರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಹೀಗಾಗಿ ಪೊಲೀಸರ ಕ್ರಮಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು.