Tag: Employees

  • ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ

    ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ

    ಭುವನೇಶ್ವರ: ಒಡಿಶಾದ ಝಾರ್ಸುಗುಡದಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಹಾಗೂ ಖಾಸಗಿ ಕಂಪನಿಯೊಂದರ ನೌಕರರನ್ನು ಹೊತ್ತೊಯ್ಯುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

    ಸಂಬಲ್‍ಪುರ-ಜಾರ್ಸುಗುಡ ಬಿಜು ಎಕ್ಸ್‌ಪ್ರೆಸ್‍ವೇನಲ್ಲಿ ಈ ಘಟನೆ ನಡೆದಿದ್ದು, ಕಾರ್ಮಿಕರು ಪ್ಲಾಂಟ್ ಸೈಟ್‍ನಿಂದ ಝಾರ್ಸುಗುಡ ಪಟ್ಟಣಕ್ಕೆ ಬಸ್‍ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಝಾರ್ಸುಗುಡ ಬೈಪಾಸ್ ರಸ್ತೆಯ ಪವರ್ ಹೌಸ್ ಚಾಕ್ ಬಳಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

    ಘಟನೆಯಲ್ಲಿ ಹಲವಾರು ನೌಕರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಕಾರ್ಮಿಕರನ್ನು ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸಾರ್) ಗೆ ಸ್ಥಳಾಂತರಿಸಲಾಗಿದೆ ಎಂದು ಝಾರ್ಸುಗುಡಾ ಉಪ ಪೊಲೀಸ್ ವರಿಷ್ಠಾಧಿಕಾರಿ ಎನ್.ಮಹಾಪಾತ್ರ ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಅಮೃತ ಮಹೋತ್ಸವ ಸಂಭ್ರಮ – ಸಿಎಂ ಬೊಮ್ಮಾಯಿ ಭಾಗಿ

    Live Tv
    [brid partner=56869869 player=32851 video=960834 autoplay=true]

  • ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್

    ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್

    ನವದೆಹಲಿ: ಎಎಪಿ(AAP) ನೇತೃತ್ವ ಪಂಜಾಬ್ ಸರ್ಕಾರ ರಾಜ್ಯದ 8,736 ಶಿಕ್ಷಕರನ್ನು ಖಾಯಂಗೊಳಿಸಿರುವುದಕ್ಕೆ ದೆಹಲಿ(Delhi) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಎಲ್ಲಾ ರಾಜ್ಯ ಸರ್ಕಾರಗಳೂ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿಯಲ್ಲಿ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಲು ದೆಹಲಿ ಸರ್ಕಾರ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದೆ. ಆದರೆ ಕೇಂದ್ರ ಅದನ್ನು ಅಂಗೀಕರಿಸಿಲ್ಲ. ಆದರೆ ಎಎಪಿ ಅಧಿಕಾರಕ್ಕೆ ಬರುವ ಎಲ್ಲಾ ರಾಜ್ಯಗಳಲ್ಲೂ ಗುತ್ತಿಗೆ ಸರ್ಕಾರಿ ನೌಕರರನ್ನು ಖಾಯಂಗೊಳಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಇರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಬಿಡಲ್ಲ, ಇದು ನಮ್ಮ ಶಪಥ – ಬಿಎಸ್‌ವೈ

    ಅತಿಥಿ ಮತ್ತು ತಾತ್ಕಾಲಿಕ ಶಿಕ್ಷಕರ ಶ್ರಮದಿಂದ ದೆಹಲಿಯಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ನಮ್ಮ ಸಾಮಾನ್ಯ ಆಸ್ಪತ್ರೆಯ ಸಿಬ್ಬಂದಿ ದೆಹಲಿಯ ಆಸ್ಪತ್ರೆಗಳು ಮತ್ತು ಸ್ಥಳೀಯ ಚಿಕಿತ್ಸಾಲಯಗಳಲ್ಲಿ ಅದ್ಭುತವಾದ ಕೆಲಸಗಳನ್ನೇ ಮಾಡಿದ್ದಾರೆ. ದೆಹಲಿಯ ಈ ತಾತ್ಕಾಲಿಕ ಶಿಕ್ಷಕರು ಮತ್ತು ವೈದ್ಯರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಮಾಡಲು ನಮಗೆ ಸಹಾಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್ ಇದ್ದರೆ, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

    ಒಪ್ಪಂದದ ಉದ್ಯೋಗ ವ್ಯವಸ್ಥೆ ಅತ್ಯಂತ ಶೋಚನೀಯ. ನಮ್ಮಲ್ಲಿ ಆರ್ಥಿಕತೆ ಬೆಳೆಯುತ್ತಿದ್ದರೂ ಸರ್ಕಾರಿ ಉದ್ಯೋಗಗಳನ್ನು ರಾಜ್ಯ ಹಾಗೂ ಕೇಂದ್ರಗಳು ಏಕೆ ಕಡಿತಗೊಳಿಸುತ್ತಿವೆ? ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುವಂತೆ ನಾನು ಒತ್ತಾಯಿಸುತ್ತೇನೆ. ಆಮ್ ಆದ್ಮಿ ಪಕ್ಷದ ಕಡೆಯಿಂದ, ನಮ್ಮ ಸರ್ಕಾರ ರಚನೆಯಾದಲ್ಲೆಲ್ಲಾ ನಾವು ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಏರ್ ಇಂಡಿಯಾದ 4,500 ಉದ್ಯೋಗಿಗಳು ಸ್ವಯಂ ನಿವೃತ್ತಿ – ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್

    ಏರ್ ಇಂಡಿಯಾದ 4,500 ಉದ್ಯೋಗಿಗಳು ಸ್ವಯಂ ನಿವೃತ್ತಿ – ಹೊಸ ವ್ಯವಸ್ಥೆಯೆಡೆಗೆ ಟಾಟಾ ಗ್ರೂಪ್

    ಮುಂಬೈ: ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಮರಳಿ ಸ್ವಾಧೀನಪಡಿಸುತ್ತಿದ್ದಂತೆಯೇ ತನ್ನ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್)ಯನ್ನು ಪರಿಚಯಿಸಿದೆ. ಹೊಸ ಪ್ರತಿಭೆಗಳನ್ನು ಕಂಪನಿಗೆ ಆಹ್ವಾನಿಸುವ ಸಲುವಾಗಿ ಟಾಟಾ ಗ್ರೂಪ್ ಈ ಯೋಜನೆಯನ್ನು ಮಾಡಿದ್ದು, ಇದರ ಅಡಿಯಲ್ಲಿ 4,500 ಉದ್ಯೋಗಿಗಳು ನಿವೃತ್ತಿಯನ್ನು ಆಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಕಂಪನಿ ಮೊದಲ ಬಾರಿಗೆ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಕೆಲವು ಖಾಯಂ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ಹೊರತಂದಿದೆ. ವಿಆರ್‌ಎಸ್ ಮಾರ್ಗಸೂಚಿ ಪ್ರಕಾರ 55 ವರ್ಷ ಮೇಲ್ಪಟ್ಟ ಅಥವಾ 20 ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಮಾತ್ರವೇ ಈ ಯೋಜನೆ ಅನ್ವಯವಾಗುತ್ತದೆ. ಇದನ್ನೂ ಓದಿ: 5ಜಿ ನೆಟ್‌ ಭಾರತದಲ್ಲಿ ಬೆಲೆ ಎಷ್ಟಿರಬಹುದು?

    ಟಾಟಾ ಗ್ರೂಪ್ ಏರ್‌ಲೈನ್‌ನ ಕಾರ್ಯಾಚರಣೆಗೆ, ಸಂಸ್ಥೆಯ ಪರಿಷ್ಕರಣೆಗೆ, ಉತ್ಪಾದಕತೆಯನ್ನು ಸುಧಾರಿಸಲು ಹಾಗೂ ಹಳೆಯ ವ್ಯವಸ್ಥೆಗಳನ್ನು ತೆಗೆದು ಡಿಜಿಟಲೀಕರಣವಾಗಿ ಅಪ್‌ಡೇಟ್ ಮಾಡಲು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಲ್‌ಗೇಟ್ಸ್ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ

    ಏರ್ ಇಂಡಿಯಾದಲ್ಲಿ 8,000 ಖಾಯಂ ಸಿಬ್ಬಂದಿ ಸೇರಿದಂತೆ ಒಟ್ಟು 12,000 ಉದ್ಯೋಗಿಗಳಿದ್ದಾರೆ. ಕಂಪನಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ದೇಶದ ಪ್ರಮುಖ ನಗರಗಳಲ್ಲಿ ನೇಮಕಾತಿ ಪ್ರಕಿಯೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸುವುದಾಗಿ ಘೋಷಿಸಿದಾಗಿನಿಂದ ಟ್ವಿಟ್ಟರ್ ಉದ್ಯೋಗಿಗಳ ಭವಿಷ್ಯ ಅಪಾಯದಲ್ಲಿದೆ. ಇದೀಗ ಕಂಪನಿ ತನ್ನ ಉದ್ಯೋಗಿಗಳನ್ನು ತೆಗೆದುಹಾಕಲು ಪ್ರಾರಂಭಿಸಿದ್ದು, 100 ಉದ್ಯೋಗಿಗಳನ್ನು ವಜಾಗೊಳಿಸಿರುವುದನ್ನು ಟ್ವಿಟ್ಟರ್ ಖಚಿತಪಡಿಸಿದೆ.

    ಟ್ವಿಟ್ಟರ್ ಆರೋಗ್ಯಕರವಾಗಿರಬೇಕು ಎಂದು ಹೇಳಿಕೆ ನೀಡಿದ ಮಸ್ಕ್, ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸುಳಿವು ನೀಡಿದ್ದರು. ಕಂಪನಿಯ ಸ್ವಾಧೀನವನ್ನು ಕೊನೆಗೊಳಿಸಲು ಟ್ವಿಟ್ಟರ್ ಈ ಹಿಂದೆಯೂ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮಾನವ ಸಂಪನ್ಮೂಲ ವಿಭಾಗದ 100 ಉದ್ಯೋಗಿಗಳು ಕಂಪನಿಯಿಂದ ವಜಾಗೊಂಡಿದ್ದಾರೆ. ಇದನ್ನೂ ಓದಿ: ಉದ್ಯೋಗಿಯಿಂದ ಅವಳಿ ಮಕ್ಕಳು – 51ರ ಮಸ್ಕ್‌ ಈಗ 9 ಮಕ್ಕಳ ತಂದೆ

    ಕಂಪನಿಯಲ್ಲಿ ಅನಗತ್ಯ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಮಸ್ಕ್ ಹಲವು ಬಾರಿ ಸ್ವಾಧೀನದ ಒಪ್ಪಂದದಿಂದ ಹಿಂದೆ ಸರಿದಿದ್ದರು. ಜೂನ್‌ನಲ್ಲಿ ಮಸ್ಕ್ ಟ್ವಿಟ್ಟರ್ ಉದ್ಯೋಗಿಗಳೊಂದಿಗೆ ಮಾಡಿದ ಮೊದಲ ಸಭೆಯಲ್ಲಿ ಕಂಪನಿ ಆರ್ಥಿಕವಾಗಿ ಆರೋಗ್ಯಕರವಾಗಿರಬೇಕು, ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

    Live Tv
    [brid partner=56869869 player=32851 video=960834 autoplay=true]

  • ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ, ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ತನ್ನ ನಡವಳಿಕೆಯನ್ನು ಟೀಕಿಸಿದ ಉದ್ಯೋಗಿಗಳನ್ನು ಕಂಪನಿಯಿಂದ ಕಿತ್ತೊಗೆದಿದ್ದಾರೆ ಎಂದು ವರದಿಯಾಗಿದೆ.

    ಮಸ್ಕ್ ಅವರ ನಡವಳಿಕೆ ಮುಜುಗರಕ್ಕೀಡು ಮಾಡುತ್ತಿದೆ ಎಂದು ಉದ್ಯೋಗಿಗಳು ಟೀಕಿಸಿದ್ದು, ಈ ಹಿನ್ನೆಲೆ ಟೀಕಿಸಿರುವ ಸ್ಪೇಸ್‌ಎಕ್ಸ್‌ನ ಉದ್ಯೋಗಿಗಳನ್ನೇ ವಜಾ ಮಾಡಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ. – ಒಂದೇ ವರ್ಷದಲ್ಲಿ ಶೇ. 50ರಷ್ಟು ಏರಿಕೆ

    ಇತ್ತೀಚೆಗೆ ಸ್ಪೇಸ್‌ಎಕ್ಸ್‌ನ ಕೆಲ ಉದ್ಯೋಗಿಗಳು ಮಸ್ಕ್ ಅವರ ನಡವಳಿಕೆ ಆಗಾಗ ಗೊಂದಲ ಹಾಗೂ ಮುಜುಗರಕ್ಕೀಡು ಮಾಡುತ್ತದೆ ಎಂದು ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ಎಲೋನ್ ಮಸ್ಕ್ ಕಳುಹಿಸುವ ಪ್ರತಿಯೊಂದು ಟ್ವೀಟ್ ಕೂಡಾ ಸಾರ್ವಜನಿಕ ಹೇಳಿಕೆಯಾಗಿದೆ. ಇದು ನಮ್ಮ ಕೆಲಸ, ಧ್ಯೇಯ ಅಥವಾ ಮೌಲ್ಯಗಳನ್ನು ಬಿಂಬಿಸುವುದಿಲ್ಲ ಎಂಬುದನ್ನು ನಮ್ಮ ತಂಡಕ್ಕೆ ಸ್ಪಷ್ಟಪಡಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಟ್ಟು 634 ಕೇಸ್, 2 ಸಾವು – ಸಕ್ರಿಯ ಪ್ರಕರಣಗಳ ಸಂಖ್ಯೆ 4,500ಕ್ಕೆ ಏರಿಕೆ

    ದಿ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ ಸ್ಪೇಸ್ ಎಕ್ಸ್ ಅಧ್ಯಕ್ಷ ಗ್ವಿನ್ನೆ ಶಾಟ್‌ವೆಲ್ ಈ ಪತ್ರವನ್ನು ರಚಿಸಿರುವ ಹಲವು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಈ ಬಗ್ಗೆ ಸ್ಪೇಸ್‌ಎಕ್ಸ್ ಅಧಿಕೃತ ವಿವರವನ್ನು ನೀಡಿಲ್ಲ. ಯಾರೆಲ್ಲಾ ಹಾಗೂ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬುದನ್ನೂ ಬಹಿರಂಗ ಪಡಿಸಿಲ್ಲ.

    Live Tv

  • ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ರಷ್ಯಾದಲ್ಲಿ ಉದ್ಯೋಗಿಗಳ ವಜಾ, ಕೆಲಸವನ್ನು ಸ್ಥಗಿತಗೊಳಿಸಿದ ಐಬಿಎಂ

    ವಾಷಿಂಗ್ಟನ್: ಟೆಕ್ನಾಲಜಿ ಕಂಪನಿ ಐಬಿಎಂ ರಷ್ಯಾದಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಪ್ರಾರಂಭಿಸಿ ತಿಂಗಳುಗಳೇ ಕಳೆದಿವೆ. ಇದೀಗ ಹೆಚ್ಚುವರಿ ಹಂತವಾಗಿ ಕಂಪನಿ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ.

    ಐಬಿಎಂ ಸಿಇಒ ಅರವಿಂದ್ ಕೃಷ್ಣ ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ರಷ್ಯಾದಲ್ಲಿ ಕಂಪನಿಯ ಕಾರ್ಯಾಚರಣೆಯನ್ನು ಕೊನೆಗೊಳಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ ರಷ್ಯಾದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜೂಮ್ ಕಾಲ್‌ನಲ್ಲೇ 900 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಸಿಇಒ ವಿರುದ್ಧವೇ ಕೇಸ್

    ಐಬಿಎಂ ಈ ವರ್ಷ ಮಾರ್ಚ್‌ನಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಆದರೂ ಅಲ್ಲಿನ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಮುಂದುವರಿಸಿದೆ. ಇದೀಗ ನಾವು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದೇವೆ. ಈ ಮೂಲಕ ನಾವು ಇತರ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು, ರಷ್ಯಾದ ಉದ್ಯೋಗಿಗಳಿಗೆ ವೇತನ ನೀಡುವುದನ್ನು ಸ್ಥಗಿತಗೊಳಿಸಬಹುದು ಎಂದು ಅರವಿಂದ್ ಕೃಷ್ಣ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

    ಉಕ್ರೇನ್ ರಷ್ಯಾದ ಯುದ್ಧದ ಪರಿಣಾಮ ಹೆಚ್ಚುತ್ತಿರುವ ಅಭದ್ರತೆಯ ಕಾರಣ ನಮ್ಮ ವ್ಯವಹಾರಗಳನ್ನು ಕ್ರಮಬದ್ಧವಾಗಿ ಕೈಬಿಡುವ ನಿರ್ಧಾರ ಮಾಡಿದ್ದೇವೆ. ರಷ್ಯಾದಲ್ಲಿರುವ ನಮ್ಮ ಸಹೋದ್ಯೋಗಿಗಳು ಹಲವು ತಿಂಗಳುಗಳಿಂದ ಒತ್ತಡ ಹಾಗೂ ಅನಿಶ್ಚಿತತೆಯನ್ನು ಸಹಿಸಿಕೊಂಡಿದ್ದಾರೆ. ಕಂಪನಿಯಿಂದ ವಜಾಗೊಳಿಸುವಲ್ಲಿ ಅವರ ಯಾವುದೇ ತಪ್ಪುಗಳಿಲ್ಲ ಎಂದು ಸಿಇಒ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ರಷ್ಯಾದಲ್ಲಿರುವ ನಮ್ಮ ಉದ್ಯೋಗಿಗಳಿಗೆ ಈ ವಿಷಯ ಆಘಾತಕಾರಿಯಾಗಿರುವುದು ನಮಗೆ ತಿಳಿದಿದೆ. ಆದರೆ ಅವರಿಗೆ ಬೆಂಬಲ ನೀಡುವುದನ್ನು ನಾವು ಮುಂದುವರೆಸುತ್ತೇವೆ ಹಾಗೂ ಅವರ ಮುಂದಿನ ವೃತ್ತಿಯ ಬಗ್ಗೆ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

  • ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

    ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

    ವಾಷಿಂಗ್ಟನ್: ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್ ತನ್ನ ಕಂಪನಿಯ ಶೇ.10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಬೇಕು ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ವಿಶ್ವದ ಶ್ರೀಮಂತ ತನ್ನ ಕಂಪನಿಯ ಆಂತರಿಕ ಮೇಲ್ ಒಂದರಲ್ಲಿ ತಾವು ಪ್ರಸ್ತುತ ಕೆಟ್ಟ ಮನಸ್ಥಿತಿಯಲ್ಲಿರುವುದಾಗಿ ಹೇಳಿ, ತಮ್ಮ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಿಂದ ಶೇ.10 ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಬೇಕಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: 14 ವರ್ಷ ಕಾರ್ಯನಿರ್ವಹಿಸಿ ಶೆರಿಲ್ ಸ್ಯಾಂಡ್‌ಬರ್ಗ್ ಮೆಟಾ ಸಿಒಒ ಹುದ್ದೆಗೆ ರಾಜೀನಾಮೆ

    ಮಸ್ಕ್ ಗುರುವಾರ ಟೆಸ್ಲಾ ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಕಂಪನಿಗೆ ವಿಶ್ವದ ಎಲ್ಲಾ ಕಡೆಗಳಿಂದಲೂ ಹೊಸ ನೇಮಕಾತಿಗೆ ವಿರಾಮ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ವಾರದ ಆರಂಭದಲ್ಲಿ ಎಲೋನ್ ಮಸ್ಕ್ ಟೆಸ್ಲಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಬಿಟ್ಟು, ಕಂಪನಿಗೆ ಮರಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದರು. ಉದ್ಯೋಗಿಗಳು ಕಂಪನಿಗೆ ಮರಳಲು ಬಯಸದೇ ಹೋದರೆ, ಶಾಶ್ವತವಾಗಿ ಸಂಸ್ಥೆಯನ್ನೇ ತೊರೆಯಬಹುದು ಎಂದಿದ್ದರು. ಇದನ್ನೂ ಓದಿ: ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ಟೆಸ್ಲಾ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿಯೇ ಇರಬೇಕು. ಇನ್ನು ಮುಂದೆ ಮನೆಯಿಂದ ಕೆಲಸ ಮಾಡುವುದು ಸ್ವೀಕಾರ್ಹವಲ್ಲ. ಒಂದು ವೇಳೆ ಉದ್ಯೋಗಿಗಳು ಕಂಪನಿಗೆ ಹಾಜರಾಗದೇ ಹೋದರೆ, ಕೆಲಸವನ್ನೇ ತೊರೆದಿರುವುದಾಗಿ ಪರಿಗಣಿಸಲಾಗುವುದು ಎಂದು ಇ-ಮೇಲ್‌ನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದರು.

  • ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ಕಚೇರಿಯಿಂದ್ಲೇ ಕೆಲಸ ಮಾಡಿ, ಇಲ್ಲವೇ ಬಿಟ್ಟುಬಿಡಿ- ಟೆಸ್ಲಾ ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್

    ವಾಷಿಂಗ್ಟನ್: ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಇದೀಗ ಟೆಸ್ಲಾ ಸಿಇಒ ವಾರ್ನಿಂಗ್ ನೀಡಿದ್ದಾರೆ. ಕೆಲಸ ಮಾಡಲು ಬಯಸುವವರು ಆಫೀಸ್‌ಗೆ ಬನ್ನಿ ಇಲ್ಲವೆಂದರೆ ಸಂಸ್ಥೆಯನ್ನೇ ಬಿಟ್ಟುಬಿಡಿ ಎಂದು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ತನ್ನ ಉದ್ಯೋಗಿಗಳಿಗೆ ಖಾರವಾಗಿ ಆದೇಶ ನೀಡಿದ್ದಾರೆ.

    ಕೊರೊನಾ ಕಾರಣಕ್ಕೆ ಕಳೆದ ೨ ವರ್ಷಗಳಿಂದ ಹೆಚ್ಚಿನ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನು ಮಾಡಿಕೊಟ್ಟಿತು. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಹಲವಾರು ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ಆದರೆ ಕೆಲವು ಕಂಪನಿಗಳ ಉದ್ಯೋಗಿಗಳು ಆರಾಮದಾಯಕವಾಗಿದ್ದ ವರ್ಕ್ ಫ್ರಂ ಹೋಮ್ ಬದಲು ಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅದೆಷ್ಟೋ ಉದ್ಯೋಗಿಗಳು ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ನಿಯಮ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ಇದ್ಯಾವ ಮಾತಿಗೂ ಬಗ್ಗದ ಮಸ್ಕ್, ಇದೀಗ ತನ್ನ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮನೆಯಿಂದಲೇ ಕೆಲಸ ಮಾಡುವುದು ಇನ್ನು ಮುಂದೆ ಸ್ವೀಕಾರ್ಹವಲ್ಲ. ಪ್ರತಿಯೊಬ್ಬ ಉದ್ಯೋಗಿಗಳೂ ವಾರಕ್ಕೆ ಕನಿಷ್ಠ ೪೦ ಗಂಟೆ ಕಚೇರಿಯಲ್ಲಿರಬೇಕು. ಮನೆಯಲ್ಲಿಯೇ ಕೆಲಸ ಮಾಡಲು ಬಯಸುವ ಉದ್ಯೋಗಿಗಳು ಬೇಕೆಂದರೆ ಸಂಸ್ಥೆಯನ್ನೇ ತೊರೆಯಬಹುದು. ಇಲ್ಲವೇ ಮನೆಯಲ್ಲಿ ಕೆಲಸ ಮಾಡುವಂತೆ ನಟಿಸಬೇಕು ಅಷ್ಟೇ ಎಂದು ಹೇಳಿದ್ದಾರೆ.

  • ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ

    ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳಿಂದ 8 ಸಾವಿರ ಭಾರತೀಯ ಉದ್ಯೋಗಿಗಳು ವಜಾ

    ನವದೆಹಲಿ: ಸ್ಟಾರ್ಟ್ಅಪ್ ಕಂಪನಿಗಳು ನೀಡುವ ಲಾಭದಾಯಕ ಕೊಡುಗೆಗಳಿಂದ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಅದನ್ನು ಬೇಡ ಎನ್ನಲು ಸಾಧ್ಯವಿಲ್ಲ. ಆದರೆ ಇದೀಗ ಸ್ಟಾರ್ಟ್ಅಪ್‌ಗಳು ಭಾರತೀಯ ಉದ್ಯೋಗಿಗಳಿಗೆ 10 ಬಾರಿ ಯೋಚನೆ ಮಾಡಬೇಕಾದ ಜಾಗವಾಗಿದೆ.

    ಭಾರತದ ಪ್ರಸಿದ್ಧ ಸ್ಟಾರ್ಟ್ಅಪ್‌ಗಳಾದ ಅನಕಾಡೆಮಿ, ಕಾರ್ಸ್ 24, ವೇದಾಂತು, ಮೀಶೋ, ಟ್ರೆಲ್, ಫೆರ್ಲೆಂಕೋ ಸೇರಿದಂತೆ ಹಲವು ಕಂಪನಿಗಳಿಂದ 5,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸವನ್ನು ತೊರೆದಿದ್ದಾರೆ. ಇಷ್ಟು ಮಾತ್ರವಲ್ಲದೇ ಕಂಪನಿಗಳೇ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಆಘಾತಕಾರಿಯಾಗಿದೆ. ಇದನ್ನೂ ಓದಿ: ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

    ಸಾಮೂಹಿಕ ವಜಾಗಳ ಹಿಂದಿನ ಮುಖ್ಯ ಕಾರಣ ಏನು ಎಂಬುದನ್ನು ಕಂಪನಿಗಳು ಸ್ಪಷ್ಟಪಡಿಸಿಲ್ಲ. ಆದರೆ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಎಲ್ಲಾ ಕಂಪನಿಗಳಲ್ಲಿ ಸಾಮಾನ್ಯವಾಗಿರುವ ಒಂದು ಕಾರಣವೆಂದರೆ, ಹೂಡಿಕೆಯ ಕೊರತೆ. ಇದರೊಂದಿಗೆ ಹೆಚ್ಚಿನ ಸ್ಟಾರ್ಟ್ಅಪ್ ಕಂಪನಿಗಳು ಶಿಕ್ಷಣಕ್ಕೆ ಸಂಬಂಧಪಟ್ಟವುಗಳಾಗಿದ್ದು, ಲಾಕ್‌ಡೌನ್ ಮುಗಿದು ಶಾಲೆಗಳು ತೆರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿಯಲಾರಂಭಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

    ನಿಖರವಾದ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ ಓಲಾ 2022ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 2,100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅನಕಾಡೆಮಿ 926, ವೇದಾಂತು 600, ಕಾರ್ಸ್ 24 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹೊಸದಾಗಿ ಸ್ಥಾಪಿಸಲಾದ ಮೀಶೋ ತನ್ನ ಆದಾಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಾರಂಭವಾದ ಕೆಲವು ವರ್ಷಗಳಲ್ಲಿ ಕೇವಲ 150 ಉದ್ಯೋಗಿಗಳನ್ನು ಮಾತ್ರ ಕೈಬಿಟ್ಟಿದೆ.

  • ಕೆಲಸ ಇಷ್ಟವಿಲ್ಲವೆಂದರೆ ಕಂಪನಿ ತೊರೆಯಬಹುದು – ಉದ್ಯೋಗಿಗಳಿಗೆ ನೆಟ್‌ಫ್ಲಿಕ್ಸ್ ಸೂಚನೆ

    ಕೆಲಸ ಇಷ್ಟವಿಲ್ಲವೆಂದರೆ ಕಂಪನಿ ತೊರೆಯಬಹುದು – ಉದ್ಯೋಗಿಗಳಿಗೆ ನೆಟ್‌ಫ್ಲಿಕ್ಸ್ ಸೂಚನೆ

    ವಾಷಿಂಗ್ಟನ್: ನೆಟ್‌ಫ್ಲಿಕ್ಸ್ ತನ್ನ ಉದ್ಯೋಗಿಗಳಿಗೆ ನೀಡಿರುವ ಹೊಸ ಮಾರ್ಗಸೂಚಿಯಲ್ಲಿ ಹೊಸ ಬದಲಾವಣೆಗಳನ್ನು ತಂದಿದೆ. ಉದ್ಯೋಗಿಗಳು ತಾವು ಒಪ್ಪದ ವಿಷಯಗಳ ಮೇಲೆ ಕೆಲಸ ಮಾಡಲು ಸಿದ್ಧರಾಗಲು ನೆಟ್‌ಫ್ಲಿಕ್ಸ್ ಕೇಳಿದ್ದು, ಆ ವಿಷಯಗಳನ್ನು ಉದ್ಯೋಗಿಗಳು ಒಪ್ಪದೇ ಹೋದಲ್ಲಿ ಕಂಪನಿಯನ್ನು ತೊರೆಯಬಹುದು ಎಂದಿದೆ.

    ನೆಟ್‌ಫ್ಲಿಕ್ಸ್ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಉದ್ಯೋಗಿಗಳಿಗೆ ನೀಡಲಾದ ಮಾರ್ಗಸೂಚಿಗಳನ್ನು ಬದಲಿಸಿದೆ. ತನ್ನ ಮಾರ್ಗಸೂಚಿಯಲ್ಲಿ ಉದ್ಯೋಗಿಗಳನ್ನು ತಾವು ಒಪ್ಪದ ಕೆಲಸಗಳನ್ನು ಮಾಡಲು ಸಿದ್ಧರಾಗುವಂತೆ ಹೇಳಿದ್ದು, ಇದನ್ನು ಬೆಂಬಲಿಸದ ಉದ್ಯೋಗಿಗಳು ಕಂಪನಿ ತ್ಯಜಿಸಬಹುದು ಎಂದು ಖಡಕ್ಕಾಗಿ ತಿಳಿಸಿದೆ. ಇದನ್ನೂ ಓದಿ: ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೊಘಲರೇ ಕಾರಣ: ಮುಫ್ತಿ

    ನೆಟ್‌ಫ್ಲಿಕ್ಸ್ ಕಳೆದ 18 ತಿಂಗಳುಗಳಲ್ಲಿ ತನ್ನ ಉದ್ಯೋಗಿಗಳೊಂದಿಗೆ ಆಂತರಿಕ ಸಾಂಸೃತಿಕ ಸಮಸ್ಯೆಗಳ ಕುರಿತು ಚರ್ಚಿಸಿದೆ. ಈ ಬಗ್ಗೆ ಕಂಪನಿ ತನ್ನ ಉದ್ಯೋಗಿಗಳಿಗೆ ಇಲ್ಲಿ ಕೆಲಸ ಮಾಡುವ ಬಗ್ಗೆ ಹೊಸ ಹಾಗೂ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚಿಸಿದೆ.

    ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ತನ್ನ ಆದಾಯವನ್ನು ಹೆಚ್ಚಿಸುವ ಒತ್ತಡದ ನಡುವೆ ಹೊಸ ಫೀಚರ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ತನ್ನ ಬಳಕೆದಾರರನ್ನು ಹೆಚ್ಚಿಸುವ ಹಿನ್ನೆಲೆ ಅಗ್ಗದ ಹಾಗೂ ಜಾಹಿರಾತುಗಳನ್ನು ತೋರಿಸುವ ಹೊಸ ಆಯ್ಕೆಗಳನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ

    ಒಟ್ಟಾರೆಯಾಗಿ ಬಳಕೆದಾರರ ಅನುಭವವನ್ನು ಸುಧಾರಿಸಲು ನೆಟ್‌ಫ್ಲಿಕ್ಸ್ ಹೊಸ ಹೊಸ ಫೀಚರ್‌ಗಳನ್ನೂ ತರಲು ಮುಂದಾಗುತ್ತಿದೆ. ಹೊಸದಾಗಿ ಲೈವ್ ಸ್ಟ್ರೀಮ್ ಅನ್ನು ಹೊರ ತರುವ ಬಗ್ಗೆ ನೆಟ್‌ಫ್ಲಿಕ್ಸ್ ತಿಳಿಸಿದ್ದು, ಇದರಲ್ಲಿ ಲೈವ್ ಹಾಸ್ಯ ಕಾರ್ಯಕ್ರಮಗಳು ಹಾಗೂ ಸ್ಕ್ರಿಪ್ಟ್ ಮಾಡಲಾಗದ ಶೋಗಳು ಲಭ್ಯವಾಗಲಿದೆ. ಈ ಫೀಚರ್ ಸದ್ಯ ಪರೀಕ್ಷೆಯ ಹಂತದಲ್ಲಿದೆ ಎಂದು ತಿಳಿಸಿದೆ.