Tag: Emoji

  • ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು

    ವಾಷಿಂಗ್ಟನ್: ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆ ಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಲು ವಾಟ್ಸಪ್ ಅನುಮತಿ ನೀಡಿದೆ.

    ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹಾಗೂ ಧನ್ಯವಾದದ ಎಮೋಜಿಗಳನ್ನಷ್ಟೇ ರಿಯಾಕ್ಷನ್ ಆಗಿ ಕಳುಹಿಸಲು ಅವಕಾಶ ನೀಡಿತ್ತು. ಇದೀಗ ರಿಯಾಕ್ಷನ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಬಹುದಾಗಿದ್ದು, ಈ ಬಗ್ಗೆ ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ರೋಲ್‌ಔಟ್ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

    ಬೀಟಾ ಪರೀಕ್ಷಕರ ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಹಲವಾರು ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಬಳಕೆದಾರರು ವಾಟ್ಸಪ್ ಅನ್ನು ಇನ್ನೊಂದು ಹ್ಯಾಂಡ್‌ಸೆಟ್‌ನಿಂದ ಲಾಗ್‌ಇನ್ ಮಾಡಲು ಆಂಡ್ರಾಯ್ಡ್‌ಗಳಿಗಾಗಿ ಚ್ಯಾಟ್ ಸಿಂಕ್ ಫೀಚರ್, ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ಸಾಮರ್ಥ್ಯದಂತಹ ಫೀಚರ್‌ಗಳು ಟೆಸ್ಟಿಂಗ್‌ನಲ್ಲಿ ಒಳಗೊಂಡಿವೆ. ಇದನ್ನೂ ಓದಿ: ಹಿಂದೂ ಬಾಲಕಿಯ ಹೃದಯ ಮುಸ್ಲಿಂ ಯುವಕನಿಗೆ ಕಸಿ

    ಜೂನ್‌ನಲ್ಲಿ ವಾಟ್ಸಪ್ ಬಳಕೆದಾರರಿಗೆ ಗೌಪ್ಯತೆಯನ್ನು ನಿಯಂತ್ರಿಸುವ ಫೀಚರ್‌ಗಳನ್ನು ಹೊರತರಲು ಪ್ರಾರಂಭಿಸಿತು. ಅದರಲ್ಲಿ ಕೊನೆಯದಾಗಿ ಆನ್‌ಲೈನ್‌ನಲ್ಲಿದ್ದ ಸಮಯವನ್ನು ಮರೆಮಾಡುವುದು ಹಾಗೂ ಪ್ರೊಫೈಲ್ ಫೋಟೋವನ್ನು ಆಯ್ಕೆ ಮಾಡಿದವರಿಗಷ್ಟೇ ತೋರುವಂತೆ ಮಾಡುವಂತಹ ಅವಕಾಶವನ್ನು ನೀಡಿದೆ.

    ಜುಕರ್‌ಬರ್ಗ್ ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಿಂದ ಐಫೋನ್‌ಗೆ ತಮ್ಮ ವಾಟ್ಸಪ್ ಡೇಟಾವನ್ನು ಸುಲಭವಾಗಿ ವರ್ಗಾಯಿಸುವ ಸಾಮರ್ಥ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇದು ಇನ್ನೂ ಪರೀಕ್ಷೆಯಲ್ಲಿದೆ. ಇದನ್ನೂ ಓದಿ: ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    Live Tv
    [brid partner=56869869 player=32851 video=960834 autoplay=true]

  • ಕೆಜಿಎಫ್ 2 ಸಿನಿಮಾ ನಂತರ ಇದೀಗ ಚಾರ್ಲಿ 777 ಸಿನಿಮಾದ ಇಮೋಜಿ

    ಕೆಜಿಎಫ್ 2 ಸಿನಿಮಾ ನಂತರ ಇದೀಗ ಚಾರ್ಲಿ 777 ಸಿನಿಮಾದ ಇಮೋಜಿ

    ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗ ಮೊದಲ ಬಾರಿಗೆ ಇಮೋಜಿ ಬಳಸಿಕೊಂಡಿತು. ಕೆಜಿಎಫ್ 2 ಸಿನಿಮಾದ ರಾಕಿಭಾಯ್ ಇಮೋಜಿಯಾಗಿ ಅಭಿಮಾನಿಗಳನ್ನು ರಂಜಿಸಿದ. ಅದು ಇಮೋಜಿಯಾದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ರಾಕಿಭಾಯ್ ಇಮೋಜಿ ಫೇಮಸ್ ಕೂಡ ಆಯಿತು. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಇದೀಗ ರಕ್ಷಿತ್ ಶೆಟ್ಟಿ ನಟನೆಯ ‘ಚಾರ್ಲಿ 777’ ಸಿನಿಮಾದ ಇಮೋಜಿ ಕೂಡ ರೆಡಿಯಾಗಿದೆ. ಈ ಸಿನಿಮಾದ ಹೈಲೆಟ್ ಆಗಿರುವ ನಾಯಿಯ ಚಿತ್ರವನ್ನು ಇಮೋಜಿ ರೂಪದಲ್ಲಿ ಹೊರತರಲಾಗಿದೆ. ಅದು ಕೂಡ ಎರಡು ದಿನಗಳಿಂದ ಟ್ರೆಂಡಿಂಗ್ ನಲ್ಲಿದೆ. ಚಾರ್ಲಿ ಸಿನಿಮಾದ ವಿಶೇಷ ಪಾತ್ರವೇ ನಾಯಿಯದ್ದು. ಹಾಗಾಗಿ ಅದನ್ನೇ ಇಮೋಜಿಯನ್ನಾಗಿ ಮಾಡಲಾಗಿದೆಯಂತೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಇಮೋಜಿ ಇದೊಂದು ವಿಶಿಷ್ಟಪದ. ‘ಇ’ ಅಂದರೆ, ಅಕ್ಷರ. ‘ಮೋಜಿ’ ಅಂದರೆ ಚಿತ್ರ. ಅಕ್ಷರಗಳು ಚಿತ್ರರೂಪದಲ್ಲಿ ಕಾಣುವ ಒಂದು ಬಗೆಗೆ ಇಮೋಜಿ ಎಂದು ಕರೆಯುತ್ತಾರೆ. ಕೆಜಿಎಫ್ ನಲ್ಲಿ ರಾಕಿಭಾಯ್ ಪದವನ್ನು ಅವರ ಚಿತ್ರವಾಗಿಸಿದ್ದರೆ, ಚಾರ್ಲಿ 777 ಸಿನಿಮಾಗಾಗಿ ನಾಯಿಯನ್ನು ಬಳಸಿಕೊಂಡಿದ್ದಾರೆ. ಈಗ ನಾಯಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಅಶ್ಲೀಲ ಎಮೋಜಿ: ವಾಟ್ಸಪ್ ಗೆ ಭಾರತೀಯ ವಕೀಲನಿಂದ ನೋಟಿಸ್

    ಅಶ್ಲೀಲ ಎಮೋಜಿ: ವಾಟ್ಸಪ್ ಗೆ ಭಾರತೀಯ ವಕೀಲನಿಂದ ನೋಟಿಸ್

    ನವದೆಹಲಿ: ಮಧ್ಯದ ಬೆರಳಿನ ಅಶ್ಲೀಲ ಎಮೋಜಿಯನ್ನು 15 ದಿನಗಳ ಒಳಗೆ ತೆಗೆದು ಹಾಕುವಂತೆ ದೆಹಲಿಯ ವಕೀಲರೊಬ್ಬರು ಮಂಗಳವಾರ ವಾಟ್ಸಪ್ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

    ಮತ್ತೊಬ್ಬರಿಗೆ ಮಧ್ಯದ ಬೆರಳನ್ನು ತೋರಿಸುವುದು ಕಾನೂನುಬಾಹಿರ ಮಾತ್ರವಲ್ಲ, ಇದು ಅಶ್ಲೀಲ ಹಾಗೂ ಕೆಟ್ಟ ಸಂಜ್ಞೆ. ಭಾರತದಲ್ಲಿ ಇದು ಅಪರಾಧ ಎಂದು ದೆಹಲಿಯ ಸಿಟಿ ಕೋರ್ಟ್ ನಲ್ಲಿ ವಕೀಲರಾಗಿ ಅಭ್ಯಾಸ ಮಾಡ್ತಿರೋ ಗುರುಮೀತ್ ಸಿಂಗ್ ಹೇಳಿದ್ದಾರೆ.

    ಐಪಿಸಿ ಸೆಕ್ಷನ್ 354 ಮತ್ತು 509ರ ಪ್ರಕಾರ, ಅಶ್ಲೀಲ, ಕೆಟ್ಟದಾದ ಹಾಗೂ ರೇಗಿಸುವಂತಹ ಸಂಜ್ಞೆಗಳನ್ನ ಮಹಿಳೆಯರಿಗೆ ತೋರಿಸುವುದು ಅಪರಾಧ. ಆದ್ದರಿಂದ ಅಶ್ಲೀಲ ಸಂಜ್ಞೆಯನ್ನು ಯಾರೇ ಬಳಸಿದರೂ ಅದು ಕಾನೂನುಬಾಹಿರ. ಅಲ್ಲದೆ 1994ರ ಕ್ರಿಮಿನಲ್ ಜಸ್ಟಿಸ್ ಆ್ಯಕ್ಟ್ ನ ಸೆಕ್ಷನ್ 6ರ ಪ್ರಕಾರ ಮಧ್ಯದ ಬೆರಳು ತೋರಿಸುವುದನ್ನು ಐರ್ಲೆಂಡಿನಲ್ಲಿ ಅಪರಾಧ ಎಂದು ಪರಿಗಣಿಸಲಾಗಿದೆ ಅಂತ ಸಿಂಗ್ ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ.

    ವಾಟ್ಸಪ್ ಆ್ಯಪ್ ನಲ್ಲಿ ಮಧ್ಯದ ಬೆರಳಿನ ಎಮೋಜಿಯನ್ನು ಬಳಕೆದಾರರಿಗೆ ನೀಡುವ ಮೂಲಕ ನೀವು(ವಾಟ್ಸಪ್) ನೇರವಾಗಿ ಅಶ್ಲೀಲ ಸಂಜ್ಞೆಯ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

    ನೋಟಿಸ್ ನೀಡಲಾದ 15 ದಿನಗಳಲ್ಲಿ ವಾಟ್ಸಪ್ ಬಳಕೆದಾರರಿಗೆ ಲಭ್ಯವಿರುವ ಎಲ್ಲ ಮಾದರಿಯ ಮಧ್ಯದ ಬೆರಳಿನ ಎಮೋಜಿ, ಗ್ರಾಫಿಕ್ಸ್ ಮತ್ತು ಚಿತ್ರಗಳನ್ನು ತೆಗೆಯುವಂತೆ ಸೂಚಿಸಲಾಗಿದೆ. ಒಂದು ವೇಳೆ ಎಮೋಜಿಯನ್ನು ತೆಗೆಯುವಲ್ಲಿ ವಿಫಲವಾದಲ್ಲಿ ಕಂಪೆನಿ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    ಯಾವುದೇ ಭಾವನೆ ಅಥವಾ ಚಿಂತನೆಯನ್ನು ವ್ಯಕ್ತಪಡಿಸಲು ಬಳಸುವ ಡಿಜಿಟಲ್ ಚಿತ್ರ ಅಥವಾ ಚಿಹ್ನೆಯನ್ನ ಎಮೋಜಿ ಅಂತಾರೆ.