Tag: Emmanuel Macron

  • ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ

    ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ

    ಪ್ಯಾರಿಸ್: ಯುರೋಪ್ (Europe) ರಾಷ್ಟ್ರಗಳು ಅಮೆರಿಕದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಹಾಗೂ ತೈವಾನ್ (Taiwan) ಬಗ್ಗೆ ಚೀನಾ (China) ಮತ್ತು ಯುಎಸ್ ನಡುವಿನ ಘರ್ಷಣೆಗೆ ತಲೆ ಹಾಕಬಾರದು ಎಂದು ಫ್ರೆಂಚ್ (French) ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಹೇಳಿದ್ದಾರೆ.

    ಚೀನಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡು ಹಿಂದಿರುಗುವ ವೇಳೆ ವಿಮಾನದಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ (Xi Jinping) ಅವರ ಜೊತೆ ಆರು ಗಂಟೆಗಳ ಕಾಲ ಇದ್ದರು. ಪ್ರವಾಸ ಮುಗಿಸಿ ಹಿಂದಿರುಗುವಾಗ ಇಬ್ಬರು ಫ್ರೆಂಚ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮ್ಯಾಕ್ರನ್ ಯುರೋಪ್‍ಗೆ ಸ್ವಾಯತ್ತತೆಯನ್ನು ಒತ್ತಿಹೇಳಿದರು. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

    ಯುರೋಪ್ ಎದುರಿಸುತ್ತಿರುವ ದೊಡ್ಡ ಅಪಾಯವೆಂದರೆ ಅದು ತಮ್ಮದಲ್ಲದ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಳ್ಳುವುದು. ಅದು ಸ್ವಾಯತ್ತತೆಯನ್ನು (Autonomy) ನಿರ್ಮಾಣವನ್ನು ತಡೆಯುತ್ತದೆ. ಕ್ಸಿ ಜಿನ್‍ಪಿಂಗ್ ಮತ್ತು ಚೀನಿ ಕಮ್ಯುನಿಸ್ಟ್ ಪಕ್ಷವು ಸ್ವಾಯತ್ತತೆಯ ಪರಿಕಲ್ಪನೆಯನ್ನು ಉತ್ಸಾಹದಿಂದ ಅನುಮೋದಿಸಿದ್ದಾರೆ. ಚೀನಿ ಅಧಿಕಾರಿಗಳು ಯುರೋಪಿಯನ್ ದೇಶಗಳೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಇದನ್ನು ನಿರಂತರವಾಗಿ ಉಲ್ಲೇಖಿಸುತ್ತಾರೆ ಎಂದರು.

    ಚೀನಾ ಇತ್ತೀಚಿನ ವರ್ಷಗಳಲ್ಲಿ ತೈವಾನ್ ಭೂ ಪ್ರದೇಶಕ್ಕೆ ಆಕ್ರಮಣ ಮಾಡುವುದಾಗಿ ಪದೇ ಪದೇ ಬೆದರಿಕೆ ಹಾಕಿದೆ ಮತ್ತು ಅದು ಚೀನಾದ ಭಾಗವಾಗಿದೆ ಎಂದು ಹೇಳಿಕೊಂಡಿದೆ. ಚೀನಾ ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ತೈವಾನ್‍ನ ಸುತ್ತಲೂ ದೊಡ್ಡ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಆದರೆ ಅಮೇರಿಕ ತೈವಾನ್ ರಕ್ಷಿಸುವ ಭರವಸೆ ನೀಡಿದೆ. ಇದನ್ನೂ ಓದಿ: ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುತ್ತೇನೆ: ಅಸ್ಸಾಂ ಸಿಎಂ

  • ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

    ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

    ಲುಸೈಲ್‌: ಅರ್ಜೆಂಟೀನಾ(Argentina) ವಿರುದ್ಧದ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲು ಹೊಡೆದು ಕೊನೆಯವರೆಗೆ ಹೋರಾಡಿದ್ದ 23 ವರ್ಷದ ಕಿಲಿಯನಾ ಎಂಬಾಪೆಗೆ(Kylian Mbappe) ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಸಮಾಧಾನ ಮಾಡಿದ್ದಾರೆ.

    ಪಂದ್ಯ ಸೋತ ಬಳಿಕ ಎಂಬಾಪೆ ಮೈದಾನದಲ್ಲೇ ಕುಳಿತು ಅಳುತ್ತಿದ್ದರು. ಈ ವೇಳೆ ಎಂಬಾಪೆ ಬಳಿ ತೆರಳಿದ ಮ್ಯಾಕ್ರನ್‌(Emmanuel Macron) ಸಮಾಧಾನ ಹೇಳಿದ್ದಾರೆ. ಅರ್ಜೆಂಟೀನಾದ ಗೋಲ್‌ಕೀಪ‌ರ್‌ ಎಮಿಲಿಯಾನೋ ಮಾರ್ಟಿನೆಜ್ ಕೂಡ ಇದ್ದರು. ಪಂದ್ಯ ಮುಗಿದ ಬಳಿಕ ತಂಡದ ಡ್ರೆಸ್ಸಿಂಗ್‌ ರೂಮಿಗೆ ತೆರಳಿದ ಮ್ಯಾಕ್ರನ್‌ ನೋವಿನಲ್ಲಿದ್ದ ಆಟಗಾರರಿಗೆ ಸಮಾಧಾನ ಹೇಳಿ ನಿಮ್ಮ ಆಟದ ಬಗ್ಗೆ ನಮಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಮ್ಯಾಜಿಕ್‌- ಮೂರನೇ ಬಾರಿ ಅರ್ಜೆಂಟೀನಾ ಚಾಂಪಿಯನ್‌

    ಎಂಬಾಪೆ 80, 82, 118 ನಿಮಿಷದಲ್ಲಿ ಗೋಲ್‌ ಹೊಡೆದಿದ್ದರು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಒಂದು ಗೋಲ್‌ ಬಾರಿಸಿದ್ದರು. ಈ ಟೂರ್ನಿಯಲ್ಲಿ 8 ಗೋಲು ಹೊಡೆದ ಎಂಬಾಪೆ ಗೋಲ್ಡನ್‌ ಬೂಟ್‌ ಪ್ರಶಸ್ತಿ ಜಯಿಸಿದರು.

    ವಿಶ್ವಕಪ್‌ ಫೈನಲ್‌ಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಾಪೆ ಪಾತ್ರರಾಗಿದ್ದಾರೆ. ಈ ಮೊದಲು 1966ರಲ್ಲಿ ಇಂಗ್ಲೆಂಡಿನ ಜಿಯೋಫ್ ಹರ್ಸ್ಟ್ ಜರ್ಮನಿ ವಿರುದ್ಧ ಹ್ಯಾಟ್ರಿಕ್‌ ಗೋಲ್‌ ಬಾರಿಸಿದ್ದರು. 2018ರಲ್ಲಿ ಫೈನಲ್‌ ಕ್ರೋಷಿಯಾ ವಿರುದ್ಧವೂ ಎಂಬಾಪೆ 1 ಗೋಲು ಹೊಡೆದಿದ್ದರು.

    120 ನಿಮಿಷಗಳ ಆಟದಲ್ಲಿ ಎರಡು ತಂಡಗಳು ತಲಾ 3 ಗೋಲ್‌ ಹೊಡೆದ ಕಾರಣ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಗಿತ್ತು. ಪೆನಾಲ್ಟಿಯಲ್ಲಿ 4-2 ಗೋಲುಗಳಿಂದ ಫ್ರಾನ್ಸ್‌ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ವಿಶ್ವಕಪ್‌ಗೆ ಮುತ್ತಿಕ್ಕಿತು. ವಿಶೇಷ ಏನೆಂದರೆ ಅರ್ಜೆಂಟೀನಾ ಮೊದಲ ಪಂದ್ಯಲ್ಲೇ ಸೌದಿ ಅರೇಬಿಯಾ ವಿರುದ್ಧ ಸೋತಿತ್ತು. ಆದರೆ ನಂತರದ ಪಂದ್ಯಗಳಲ್ಲಿ ಅತ್ಯುತ್ತಮ ಆಟದ ಮೂಲಕ ಫೈನಲ್‌ ಪ್ರವೇಶಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • 18-25 ವರ್ಷದ ಒಳಗಿನ ಫ್ರಾನ್ಸ್‌ ಯುವಜನತೆಗೆ ಉಚಿತ ಕಾಂಡೋಮ್‌

    18-25 ವರ್ಷದ ಒಳಗಿನ ಫ್ರಾನ್ಸ್‌ ಯುವಜನತೆಗೆ ಉಚಿತ ಕಾಂಡೋಮ್‌

    ಪ್ಯಾರಿಸ್: ಮುಂದಿನ ವರ್ಷದಿಂದ ಯುವಜನರಿಗೆ ಕಾಂಡೋಮ್‌ಗಳನ್ನು(Condoms) ಉಚಿತವಾಗಿ ನೀಡಲಾಗುವುದುಎಂದು ಫ್ರಾನ್ಸ್‌(France) ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ತಿಳಿಸಿದ್ದಾರೆ.

    ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಾಲಯಗಳಲ್ಲಿ ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್‌ ಮಾಡಿದ್ರೆ ಅಪರಾಧ – ಇಂಡೋನೇಷ್ಯಾ ಕಾನೂನಿಗೆ ಭಾರೀ ವಿರೋಧ

    ಲೈಂಗಿಕವಾಗಿ ಹರಡುವ ರೋಗಗಳ (STD) ಹರಡುವಿಕೆಯನ್ನು ಕಡಿಮೆ ಮಾಡಲು ಮುಂದಿನ ವರ್ಷದಿಂದ ಯುವಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.

    ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ ಎಸ್‌ಟಿಡಿ ಹರಡುವ ಪ್ರಮಾಣ ಶೇ.30 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಸ್ನೇಹಿತ ಮೋದಿಯನ್ನು ನಂಬುತ್ತೇನೆ: ಫ್ರೆಂಚ್ ಅಧ್ಯಕ್ಷ

    ನನ್ನ ಸ್ನೇಹಿತ ಮೋದಿಯನ್ನು ನಂಬುತ್ತೇನೆ: ಫ್ರೆಂಚ್ ಅಧ್ಯಕ್ಷ

    ಪ್ಯಾರಿಸ್: ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಸ್ನೇಹಿತ ನರೇಂದ್ರ ಮೋದಿ (Narendra Modi) ನಮ್ಮನ್ನು ಒಟ್ಟಾಗಿ ಸೇರಿಸುತ್ತಾರೆ ಎಂದು ನಂಬುತ್ತೇನೆ ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ತಿಳಿಸಿದರು.

    ಭಾರತವು (India) ಜಿ 20 (G-20) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಫ್ರೆಂಚ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಒಂದು ಭೂಮಿ. ಒಂದು ಕುಟುಂಬ. ಒಂದು ಭವಿಷ್ಯ. ಭಾರತವು ಜಿ-20ಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಶಾಂತಿ ಮತ್ತು ಹೆಚ್ಚು ಸುಸ್ಥಿರ ಜಗತ್ತನ್ನು ನಿರ್ಮಿಸುವ ಸಲುವಾಗಿ ನನ್ನ ಸ್ನೇಹಿತ ನರೇಂದ್ರ ಮೋದಿ ಅವರು ನಮ್ಮನ್ನು ಒಟ್ಟಿಗೆ ಸೇರಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಹೇಳಿಕೆಯಿಂದ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಹೇಳ್ತಿದ್ದೆ – CT ರವಿ

    ಇತ್ತೀಚೆಗಷ್ಟೇ ಇಂಡೋನೇಷ್ಯಾದ (Indonesia) ಬಾಲಿಯಲ್ಲಿ (Bali) ನಡೆದ ಜಿ-20 ಶೃಂಗಸಭೆ ಮುಗಿದಿದ್ದು, ಕೊನೆಯ ದಿನದಂದು ಇಂಡೋನೇಷ್ಯಾದಿಂದ ಭಾರತ ಜಿ-20 ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಸ್ವೀಕರಿಸಿತ್ತು. ದೆಹಲಿಯ ಪ್ರಗತಿ ಮೈದಾನದಲ್ಲಿ 2023ರ ಜಿ20 ಶೃಂಗಸಭೆ ಸೆ.9 ಮತ್ತು 10 ರಂದು ನಡೆಯಲಿದೆ. 2008ರಲ್ಲಿ ಜಿ20 ಶೃಂಗಸಭೆ ಆರಂಭಗೊಂಡಿದ್ದು ಮೊದಲ ಬಾರಿಗೆ ಭಾರತಕ್ಕೆ ಅಧ್ಯಕ್ಷ ಸ್ಥಾನ ಹಸ್ತಾಂತರವಾಗಿದೆ. ಶೃಂಗಸಭೆಯನ್ನು ಆಯೋಜಿಸುವ 18ನೇ ನಗರ ದೆಹಲಿಯಾಗಲಿದೆ. ಮೊದಲ ಮತ್ತು ಮೂರನೇ ಶೃಂಗಸಭೆ ಅಮೆರಿಕದಲ್ಲಿ ನಡೆದಿತ್ತು. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮೀಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ

    Live Tv
    [brid partner=56869869 player=32851 video=960834 autoplay=true]

  • ಬಹುಮತ ಕಳೆದುಕೊಂಡ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

    ಬಹುಮತ ಕಳೆದುಕೊಂಡ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

    ಪ್ಯಾರಿಸ್: ಫ್ರೆಂಚ್‍ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಶಾಸಕಾಂಗ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿದ್ದಾರೆ.

    ಶಾಸಕಾಂಗ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲದ ಕಾರಣ ಫ್ರೆಂಚ್‍ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಧ್ಯಕ್ಷರಾಗಿ ಮುಂದುವರಿಯಬೇಕಾದರೆ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

    577 ಸೀಟುಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತಕ್ಕೆ 289 ಸ್ಥಾನಗಳ ಅಗತ್ಯವಿದೆ. ಮ್ಯಾಕ್ರನ್ ಪಕ್ಷ ಹಾಗೂ ಅದರ ಮಿತ್ರಪಕ್ಷಗಳು 245 ಸ್ಥಾನಗಳನ್ನು ಗೆಲುವು ಸಾಧಿಸಿದೆ. ಫ್ರೆಂಚ್ ಸಮಾಜವಾದಿಗಳು, ಕಮ್ಯುನಿಸ್ಟ್‍ಗಳು ಮತ್ತು ಗ್ರೀನ್ಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿರುವ ತೀವ್ರ ಎಡಪಂಥೀಯ ನಾಯಕ ಜೀನ್-ಲುಕ್ ಮೆಲೆನ್‍ಚೋನ್ ನೇತೃತ್ವದ ಒಕ್ಕೂಟವು 131 ಸ್ಥಾನಗಳನ್ನು ಗಳಿಸಿದೆ. ಇದನ್ನೂ ಓದಿ: ಯಾವ ದೇಶದಲ್ಲಿ ಸೈನಿಕ ಸೇವೆ ಕಡ್ಡಾಯ? – ಟೂರ್ ಆಫ್ ಡ್ಯೂಟಿ ಎಲ್ಲಿದೆ?

    ಈ ಬಗ್ಗೆ ಫ್ರೆಂಚ್ ಅಧ್ಯಕ್ಷ ಮಾತನಾಡಿ, ದೇಶವನ್ನು ಮುನ್ನಡೆಸಲು ಬಯಸುವ ಎಲ್ಲರೊಂದಿಗೆ ಕೆಲಸ ಮಾಡಲು ಸರ್ಕಾರ ಸಿದ್ಧವಾಗಿದೆ. ಇತರೆ ಪಕ್ಷಗಳ ಸಹಕಾರ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಜೊತೆ ಮಾತ್ರ ಹೆಚ್ಚು ಮಾತನಾಡಿದ ಮೋದಿ

    Live Tv

  • ಫ್ರಾನ್ಸ್ ಅಧ್ಯಕ್ಷರನ್ನು ಅಭಿನಂದಿಸಿದ ಮೋದಿ

    ಫ್ರಾನ್ಸ್ ಅಧ್ಯಕ್ಷರನ್ನು ಅಭಿನಂದಿಸಿದ ಮೋದಿ

    ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮರುಚುನಾಯಿತರಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದಿಸಿದರು.

    ಮ್ಯಾಕ್ರನ್ ಎರಡನೇ ಅವಧಿಗೆ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢಗೊಳಿಸಲು ಮ್ಯಾಕ್ರನ್‍ನೊಂದಿಗೆ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

    ಟ್ವೀಟ್‍ನಲ್ಲಿ ಏನಿದೆ?: ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನನ್ನ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಅಭಿನಂದನೆಗಳು. ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ 4ನೇ ಅಲೆ: ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ

    ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಬಲಪಂಥೀಯ ಪ್ರತಿಸ್ಪರ್ಧಿ ಮರೀನ್ ಲೆ ಪೆನ್ ಅವರನ್ನು ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು. 97 ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದ್ದು, ಮ್ಯಾಕ್ರನ್ ಅವರು 57.4 ಶೇಕಡಾ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಂಕಿಅಂಶಗಳು ತಿಳಿಸಿದೆ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್

    ವಿಜಯ ಸಾಧಿಸಿದ ನಂತರ ಮಾತನಾಡಿದ ಎಮ್ಯಾನುಯೆಲ್ ಮ್ಯಾಕ್ರನ್, ಈ ದೇಶದ ಅನೇಕರು ನನಗೆ ಮತ ಹಾಕಿದ್ದಾರೆ. ಆದರೆ ಅವರು ನನ್ನ ಆಲೋಚನೆಗಳನ್ನು ಬೆಂಬಲಿಸುವ ಕಾರಣದಿಂದಲ್ಲ, ಆದರೆ ಬಲಪಂಥೀಯರನ್ನು ದೂರವಿಡಲು. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಮುಂಬರುವ ವರ್ಷಗಳಲ್ಲಿ ನಾನು ಅವರಿಗೆ ಋಣಿಯಾಗಿದ್ದೇನೆ. ಫ್ರಾನ್ಸ್‌ನಲ್ಲಿ ಯಾರೂ ದಾರಿತಪ್ಪಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.