Tag: emergency film

  • ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಟ್ರೈಲರ್ ರಿಲೀಸ್

    ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಚಿತ್ರದ ಟ್ರೈಲರ್ ರಿಲೀಸ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ನಟನೆಯ ‘ಎಮರ್ಜೆನ್ಸಿ’ ಚಿತ್ರದ (Emergency) ಟ್ರೈಲರ್ ರಿಲೀಸ್ ಮಾಡಲಾಗಿದೆ. ಮಾಜಿ ಪಿಎಂ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಜೀವ ತುಂಬಿದ್ದಾರೆ. ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ:ಮತ್ತೆ ಮನೆ ರಣರಂಗ- ಚೈತ್ರಾ ಸುಳ್ಳಿ ಎಂದು ಗುಡುಗಿದ ರಜತ್

    ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳನ್ನು ಕೇಂದ್ರವಾಗಿಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಮಾಡಲಾಗಿದೆ. ಈ ಚಿತ್ರದ 2ನೇ ಟ್ರೈಲರ್ ಇದಾಗಿದ್ದು, ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ಪರಕಾಯ ಪ್ರವೇಶ ಮಾಡಿದ್ದಾರೆ. ಖಡಕ್ ಆಗಿ ನಟಿ ಡೈಲಾಗ್ ಹೊಡೆದಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    1975ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ಐತಿಹಾಸಿಕ ಸನ್ನಿವೇಶದ ಚಿತ್ರಣ ಹೊಂದಿರುವ ಸಿನಿಮಾ ಇದಾಗಿದೆ. ರಾಜಕೀಯ ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಇಂದಿರಾ ಗಾಂಧಿ ಅವರು ಎದುರಿಸಿದ ರೀತಿಯನ್ನು ಟ್ರೈಲರ್ ಮೂಲಕ ಝಲಕ್ ತೋರಿಸಲಾಗಿದೆ.‌

    ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ರಾಷ್ಟ್ರ ವ್ಯಾಪಿ ನಡೆದ ಪ್ರತಿಭಟನೆಗಳು, ಕರ್ಫ್ಯೂ, ರಾಜಕೀಯ ವಿರೋಧ ಹೀಗೆ ಹಲವು ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ಹೈಲೆಟ್ ಮಾಡಲಾಗಿದೆ. ಕಂಗನಾ ‘ಇಂದಿರಾ ಗಾಂಧಿ’ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ ಎಂದಿದ್ದಾರೆ ಕಂಗನಾ.

     

    View this post on Instagram

     

    A post shared by Kangana Ranaut (@kanganaranaut)

    ಕಂಗನಾ ಜೊತೆ ಶ್ರೇಯಸ್ ತಲ್ಪಡೆ, ಅನುಪಮ್ ಖೇರ್, ಮಹಿಮಾ ಚೌದರಿ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮುಂತಾದವರು ನಟಿಸಿದ್ದಾರೆ. ಜನವರಿ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಪ್ಲ್ಯಾನ್ ಪ್ರಕಾರ ಆಗಿದ್ದರೆ  ಈ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಆಗೋದು ತಡವಾಗಿತ್ತು. ಈಗ ಕಂಗನಾ ಸಿನಿಮಾ ಅಬ್ಬರಿಸಲು ದಿನಗಣನೆ ಶುರುವಾಗಿದೆ.‌ ನಟನೆಯ ಜೊತೆ ನಿರ್ದೇಶಕಿ, ನಿರ್ಮಾಪಕಿಯಾಗಿ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಟಿಗೆ ಗೆಲುವು ಸಿಗುತ್ತಾ? ಕಾಯಬೇಕಿದೆ.

  • ‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

    ‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಎಮರ್ಜೆನ್ಸಿ’ (Emergency) ಚಿತ್ರ ಥಿಯೇಟರ್‌ಗೆ ಲಗ್ಗೆಯಿಡಲು ಸಿದ್ಧವಾಗಿದೆ. ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ:ದರ್ಶನ್‌ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ನ.22ಕ್ಕೆ ರೀ ರಿಲೀಸ್‌

    ಈ ಹಿಂದೆ ಟ್ರೈಲರ್ ಮೂಲಕ ರಿಲೀಸ್ ಡೇಟ್‌ನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸೆಪ್ಟೆಂಬರ್ 6ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾಕ್ಕೆ ಸೆನ್ಸಾರ್ ಸಿಗದೆ ರಿಲೀಸ್‌ಗೆ ವಿಳಂಬವಾಗಿತ್ತು. 2025ರ ಜನವರಿ 17ರಂದು ‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಆಗಲಿದೆ ಎಂದು ಕಂಗನಾ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಇನ್ನೂ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನುಪಮ್ ಖೇರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕಂಗನಾ ನಟನೆಯ ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

  • ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಸದ್ಯ ‘ಎಮರ್ಜೆನ್ಸಿ’ (Emergency Film) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದ ವೇಳೆ, ಎಲ್ಲರಿಗೂ ಸಂಗಾತಿ ಇರಬೇಕು. ನಾನು ಕೂಡ ಮದುವೆಯಾಗುತ್ತೇನೆ (Wedding) ಎಂದು ನಟಿ ಮಾತನಾಡಿದ್ದಾರೆ.

    ಸಂದರ್ಶನದಲ್ಲಿ ಮದುವೆ ಕುರಿತು ಎದುರಾದ ಪ್ರಶ್ನೆಗೆ ಎಲ್ಲರಿಗೂ ಸಂಗಾತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಸಂಗಾತಿ ಇಲ್ಲದೆ ಬದುಕೋದು ಕಷ್ಟ ಎಂದಿದ್ದಾರೆ ಕಂಗನಾ. ಆದರೆ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲು. ನಾನು ಕೂಡ ಮದುವೆಗೆ ಸಿದ್ಧವಾಗಿದ್ದೇನೆ. ಆದರೆ ಆರ್ಗೆನಿಕ್ ಆಗಿ ಲವ್ ಆಗಲಿ ಎಂದು ಭವಿಷ್ಯದ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಪುತ್ರನ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ಈ ವೇಳೆ, ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಪ್ರಯೋಜನಗಳನ್ನು ವಿವರಿಸಿದ್ದಾರೆ. ನೀವು ವಯಸ್ಸಾದಂತೆ, ಪರಸ್ಪರ ಹೊಂದಿಕೊಳ್ಳಲು ನಿಮಗೆ ಹೆಚ್ಚು ಕಷ್ಟವಾಗುತ್ತದೆ ಎಂದಿದ್ದಾರೆ. ನೀವು ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಹೊಂದಿಕೊಳ್ಳೋದು ಅದು ತುಂಬಾ ಸುಲಭ. ಹಳ್ಳಿಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ ನಿಮ್ಮ ಉತ್ಸಾಹವು ತುಂಬಾ ತೀವ್ರವಾಗಿರುತ್ತದೆ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, ಕಂಗನಾ ನಟಿಸಿ, ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಇದೇ ಸೆ.6ರಂದು ರಿಲೀಸ್ ಆಗ್ತಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಜನರ ಮನಗೆದ್ದಿದೆ.‌ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್

    ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸಿದ ಕಂಗನಾ ರಣಾವತ್

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಈಗ ಬಿಜೆಪಿ ಸಂಸದೆಯಾಗಿದ್ದಾರೆ. ಮಂಡಿ ಕ್ಷೇತ್ರದಲ್ಲಿ ಗೆದ್ದು ರಾಜಕೀಯ ಕ್ಷೇತ್ರದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಇದೀಗ ಇಂದಿರಾ ಗಾಂಧಿ (Indira Gandhi) ಕುರಿತ ಸಿನಿಮಾ ‘ಎಮರ್ಜೆನ್ಸಿ’ (Emergency Film) ಬರೋದು ಯಾವಾಗ? ಎಂದು ಕಾಯುತ್ತಿದ್ದವರಿಗೆ ಸಿಹಿಸುದ್ದಿ ಸಿಕ್ಕಿದೆ.

    ಕಳೆದ ಕೆಲವು ತಿಂಗಳುಗಳಿಂದ ಚುನಾವಣೆ ಕೆಲಸ ಎಂದು ಕಂಗನಾ ಬ್ಯುಸಿಯಾಗಿದ್ದರು. ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿತ್ತು. ಈಗ ಸೆಪ್ಟೆಂಬರ್ 6ರಂದು ‘ಎಮರ್ಜೆನ್ಸಿ’ ಸಿನಿಮಾ ರಿಲೀಸ್ ಮಾಡೋದಾಗಿ ಕಂಗನಾ ಘೋಷಿಸಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಭಾರತದ ಪ್ರಜಾಪ್ರಭುತ್ವದ ಕರಾಳ ಅಧ್ಯಾಯಕ್ಕೆ 50 ವರ್ಷವಾದ ಹಿನ್ನೆಲೆಯಲ್ಲಿ ‘ಎಮರ್ಜೆನ್ಸಿ’ ಚಿತ್ರದ ರಿಲೀಸ್ ಡೇಟ್ ಘೋಷಿಸುತ್ತಿದ್ದೇನೆ. ಸ್ವಾತಂತ್ರ್ಯ ಭಾರತದ ಅತ್ಯಂತ ವಿವಾದಾತ್ಮಕ ನಿರ್ಣಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದ ದೀಪಿಕಾ ದಂಪತಿ

    ಅಂದಹಾಗೆ, ಇಂದಿರಾ ಗಾಂಧಿ ಪಾತ್ರಕ್ಕೆ ಕಂಗನಾ ಜೀವ ತುಂಬಿದ್ದು, ಈ ಚಿತ್ರಕ್ಕೆ ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡ್ತಿದ್ದಾರೆ. ಈ ಸಿನಿಮಾದ ನಂತರ ಕಂಗನಾ ಬಾಲಿವುಡ್‌ಗೆ ಗುಡ್‌ ಬೈ ಹೇಳ್ತಾರಾ? ಕಾದುನೋಡಬೇಕಿದೆ.

  • ವಿದೇಶಿ ಮಿಸ್ಟರಿ ಮ್ಯಾನ್ ಜೊತೆ ಪ್ರೀತಿಯಲ್ಲಿ ಬಿದ್ರಾ ಕಂಗನಾ?

    ವಿದೇಶಿ ಮಿಸ್ಟರಿ ಮ್ಯಾನ್ ಜೊತೆ ಪ್ರೀತಿಯಲ್ಲಿ ಬಿದ್ರಾ ಕಂಗನಾ?

    ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಅವರು ಇದೀಗ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ವಿದೇಶಿ ಹುಡುಗನ ಜೊತೆ ಮುಂಬೈನಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚಿನ ವರ್ಷಗಳಲ್ಲಿ ಕಂಗನಾ ಹೆಚ್ಚೆಚ್ಚು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರ ಕೆರಿಯರ್‌ಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗುತ್ತಿಲ್ಲ. ಇದರ ನಡುವೆ ನಟಿ ಡೇಟಿಂಗ್ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಕಂಗನಾ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

    ವಿದೇಶಿ ಮಿಸ್ಟರಿ ಮ್ಯಾನ್ ಜೊತೆ ಕೈ ಹಿಡಿದು ಮುಂಬೈನ ಸಲೂನ್ ಬಳಿ ಕಂಗನಾ ಕಾಣಿಸಿಕೊಂಡಿದ್ದಾರೆ. ಈ ವೇಳೆ, ಪಾಪರಾಜಿಗಳು ಫೋಟೋ ಕ್ಲಿಕ್ಕಿಸುವಾಗ ನಗುತ್ತಲೇ ಇಬ್ಬರೂ ಪೋಸ್ ನೀಡಿದ್ದಾರೆ. ಇಬ್ಬರ ಒಡನಾಟ ನೋಡಿ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನು ಕಂಗನಾ ಸ್ಪಷ್ಟನೆ ನೀಡಬೇಕಿದೆ.‌ ಇದನ್ನೂ ಓದಿ:ಆಮೀರ್ ಖಾನ್ ಮಗಳ ಆರತಕ್ಷತೆಯಲ್ಲಿ ಬಾಲಿವುಡ್ ಕಲಾವಿದರ ಸಮಾಗಮ

    ಇನ್ನೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ಚರಿತ್ರೆ ಆಧರಿಸಿ ‘ಎಮರ್ಜೆನ್ಸಿ’ (Emergency Film) ಸಿನಿಮಾ ಈ ವರ್ಷ ರಿಲೀಸ್ ಆಗಲಿದೆ. ಸಾಲು ಸಾಲು ಸೋಲನ್ನೇ ನೋಡಿರೋ ಕಂಗನಾಗೆ ಈ ಚಿತ್ರ ಸಕ್ಸಸ್ ನೀಡುತ್ತಾ? ಕಾದುನೋಡಬೇಕಿದೆ.

  • ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂದ ಕಂಗನಾ ಡೈಲಾಗ್‌ಗೆ ಫ್ಯಾನ್ಸ್ ದಿಲ್ ಖುಷ್

    ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂದ ಕಂಗನಾ ಡೈಲಾಗ್‌ಗೆ ಫ್ಯಾನ್ಸ್ ದಿಲ್ ಖುಷ್

    ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ (Kangana Ranaut) ಅವರು ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಇದರ ನಡುವೆ ಕಂಗನಾ ನಡೆಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಬರುತ್ತಿದೆ. ಕಂಗನಾ ನಟನೆ, ನಿರ್ಮಾಣದ ಎಮರ್ಜೆನ್ಸಿ (Emergency Film) ಚಿತ್ರದ ಟೀಸರ್ ರಿವೀಲ್ ಆಗಿದೆ. ಕಂಗನಾ ಹೊಡೆದ ಡೈಲಾಗ್‌ಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    ಕಂಗನಾ ಕೆರಿಯರ್‌ಗೆ ಸಿನಿಮಾ ಸಕ್ಸಸ್‌ನ ಅವಶ್ಯಕತೆಯಿದೆ. ‘ದಾಕಡ್’ ಚಿತ್ರದ ಸೋಲಿನ ನಂತರ ಇದೀಗ ಇಂದಿರಾ ಗಾಂಧಿ ಗೆಟಪ್‌ನಲ್ಲಿ ಕಾಂಟ್ರವರ್ಸಿ ಕ್ವೀನ್ ಕಂಗನಾ ಎಂಟ್ರಿ ಕೊಟ್ಟಿದ್ದಾರೆ. ಇಂದು ಬಿಡುಗಡೆ ಆಗಿರುವ ಟೀಸರ್‌ನಲ್ಲಿ ‘ಎಮರ್ಜೆನ್ಸಿ’ಯ ಕರಾಳ ಮುಖದ ಸಣ್ಣ ಝಲಕ್ ಅನ್ನು ತೋರಿಸಲಾಗಿದೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

    ಜನರು ಪೊಲೀಸರತ್ತ ಕಲ್ಲು ತೂರುವುದು, ಪೊಲೀಸರು ಜನರ ಮೇಲೆ ಗುಂಡು ಹಾರಿಸುವುದು, ರಾಷ್ಟ್ರೀಯ ನಾಯಕರನ್ನು ಜೈಲಿಗೆ ತಳ್ಳಿದ್ದು, ಮಾಧ್ಯಮ ಸ್ವಾತಂತ್ರ‍್ಯದ ಮೇಲೆ ನಿಯಂತ್ರಣ ಹೇರಿದ್ದರ ದೃಶ್ಯಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಜೊತೆಗೆ ಪತ್ರಿಕೆಗಳಲ್ಲಿ ಎಮರ್ಜೆನ್ಸಿಯನ್ನು ಟೀಕಿಸಿದ್ದ ಚಿತ್ರಗಳನ್ನು ಟೀಸರ್‌ನಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸಿರುವ ನಟ ಅನುಪಮ್ ಖೇರ್ ಅವರ ದೃಶ್ಯದ ಸಣ್ಣ ತುಣುಕುಗಳೂ ಸಹ ಟೀಸರ್‌ನಲ್ಲಿವೆ. ಎಲ್ಲದಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಕೊನೆಯಲ್ಲಿ ಕಂಗನಾರ ಇಂದಿರಾ ಲುಕ್. ಟೀಸರ್‌ನಲ್ಲಿ ಇಂದಿರಾರದ್ದೇ ಧ್ವನಿ ಏನೋ ಎಂದು ಕಾಡುವಂತಿದೆ ಕಂಗನಾ ಹೇಳಿರುವ ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಡೈಲಾಗ್.

    ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿ ಕಂಗನಾ ಇಂದಿರಾ ಗಾಂಧಿ (Indira Gandhi)  ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಯ ಸಣ್ಣ ತುಣುಕನ್ನು ಈ ಹಿಂದೆಯೇ ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಟೀಸರ್ ಮೂಲಕ ಕಂಗನಾ ಮತ್ತೊಮ್ಮೆ ಹವಾ ಕ್ರಿಯೇಟ್ ಮಾಡಿದ್ದಾರೆ. ಇದೇ ನವೆಂಬರ್ 24ಕ್ಕೆ ‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಆಗಲಿದೆ.

  • ಚಂದ್ರಮುಖಿ – 2 ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಕಂಗನಾ ರಣಾವತ್

    ಚಂದ್ರಮುಖಿ – 2 ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಕಂಗನಾ ರಣಾವತ್

    ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸುದ್ದಿಯಲ್ಲಿರುತ್ತಾರೆ. ನಟಿಯ ಈ ನಡೆಯಿಂದ ಆಫರ್ಸ್ ಕೂಡ ಕಮ್ಮಿಯಾಗಿದೆ. ಸದ್ಯ `ಚಂದ್ರಮುಖಿ 2’ನಲ್ಲಿ (Chandramukhi 2) ಕಂಗನಾ ನಟಿಸುತ್ತಿದ್ದಾರೆ.

    ಸಿನಿಮಾಗಿಂತ ಕಾಂಟ್ರವರ್ಸಿ ಮೂಲಕ ಸದ್ದು ಮಾಡುವ ನಟಿ ಕಂಗನಾ ರಣಾವತ್ ಸದ್ಯ `ಎಮರ್ಜೆನ್ಸಿ’ (Emergency) ಚಿತ್ರದಲ್ಲಿ ಇಂದಿರಾ ಗಾಂಧಿ (Indira Gandi) ಪಾತ್ರ ಮಾಡಿದ ನಂತರ `ಚಂದ್ರಮುಖಿ 2′ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗಾಗಿ ನಟಿಯ ತಯಾರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದಾರೆ.

    ನಟಿ ಕಂಗನಾ ಈಗ `ಚಂದ್ರಮುಖಿ 2′ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನ ನರ್ತಕಿ ಚಂದ್ರಮುಖಿ ಪಾತ್ರದಲ್ಲಿ ನಟಿಸಲಿದ್ದಾರೆ. ಕಂಗನಾ ಅವರು ಚಂದ್ರಮುಖಿ -2 ರ ಕ್ಲೈಮ್ಯಾಕ್ಸ್ ಸಾಂಗ್ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಈ ವಿಚಾರನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ.‌ ಇದನ್ನೂ ಓದಿ: ಶುರುವಾಯ್ತು ‘ದಳಪತಿ 67’ ಚಿತ್ರ: ಲೋಕೇಶ್ ಕನಗರಾಜ್ ನಿರ್ದೇಶನ

    ನಾನು ಕಲಾ ಮಾಸ್ಟರ್‌ಜಿ ಅವರೊಂದಿಗೆ `ಚಂದ್ರಮುಖಿ 2′ ಸಿನಿಮಾದ ಕ್ಲೈಮ್ಯಾಕ್ಸ್ ಹಾಡನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ್ದೇನೆ. ಈ ಹಾಡನ್ನು ಗೋಲ್ಡನ್ ಗ್ಲೋಬ್ ವಿಜೇತ ಶ್ರೀ ಎಂಎಂ ಕೀರವಾಣಿ ಅವರು ಸಂಯೋಜಿಸಿದ್ದಾರೆ. ಶ್ರೀ ಪಿ.ವಾಸು ಈ ಸಿನಿಮಾ ನಿರ್ದೇಶಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ನಟಿ ಕಂಗನಾ ಕೈಯಲ್ಲಿ ಈಗ ಹೇಳಿಕೊಳ್ಳುವಂತಹ ಸಿನಿಮಾಗಳೇನು ಇಲ್ಲಾ. ಎಮರ್ಜೆನ್ಸಿ, ಚಂದ್ರಮುಖಿ ೨ ಬಿಟ್ಟರೆ ಹೇಳಿಕೊಳ್ಳುವಂತಹ ಅವಕಾಶಗಳೇನು ಅವರಿಗೆ ಅರಸಿ ಬರುತ್ತಿಲ್ಲ. `ದಾಕಡ್’ ಚಿತ್ರದ ಸೋಲಿನ ನಂತರ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 20 ತಿಂಗಳ ನಂತರ ಟ್ವಿಟ್ಟರ್‌ಗೆ ಮರಳಿದ ಬಾಲಿವುಡ್ ನಟಿ ಕಂಗನಾ ರಣಾವತ್

    20 ತಿಂಗಳ ನಂತರ ಟ್ವಿಟ್ಟರ್‌ಗೆ ಮರಳಿದ ಬಾಲಿವುಡ್ ನಟಿ ಕಂಗನಾ ರಣಾವತ್

    ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranut) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಕಂಗನಾ ಮತ್ತೆ ಟ್ವಿಟ್ಟರ್‌ಗೆ (Twitter) ಮರಳಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಈ ಹಿಂದೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕೆ ಟ್ವಿಟ್ಟರ್ ಸಂಸ್ಥೆ 20 ತಿಂಗಳ ಹಿಂದೆ ಕಂಗನಾ ಖಾತೆಯನ್ನ ಸಸ್ಪೆಡ್ ಮಾಡಿತ್ತು. ಇದೀಗ ಅವರ ಟ್ವಿಟ್ಟರ್ ಖಾತೆ ಆಕ್ಟೀವ್ ಆಗಿದೆ. ಮತ್ತೆ ಟ್ವಿಟ್ಟರ್‌ಗೆ ಮರಳಿ ಬಂದಿರುವ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಸಿನಿಮಾ `ಎಮರ್ಜೆನ್ಸಿ’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Oscars 2023: `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಸಾಂಗ್ ನಾಮಿನೇಟ್

    ಸೋಷಿಯಲ್ ಮೀಡಿಯಾದಲ್ಲಿ ಕಂಗನಾ ರಣಾವತ್ ಅವರು ಸಕ್ರಿಯರಾಗಿರುತ್ತಾರೆ. ಟ್ವಿಟ್ಟರ್‌ನಲ್ಲಿ ಅವರು ಹತ್ತು ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈಗ ತಾವು ಟ್ವಿಟ್ಟರ್‌ಗೆ ಮರಳಿರುವ ಸುದ್ದಿಯನ್ನು ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ.

    ಈವರೆಗೆ ಕಂಗನಾ ರಣಾವತ್ ಅವರನ್ನು ಟ್ವಿಟ್ಟರ್‌ನಲ್ಲಿ ಬರೋಬ್ಬರಿ 2.9 ಮಿಲಿಯನ್  ಜನರು ಫಾಲೋ ಮಾಡುತ್ತಿದ್ದಾರೆ. ಈಗ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದಿರಾ ಗಾಂಧಿ ಬಯೋಪಿಕ್‌ನಲ್ಲಿ ಕಂಗನಾ ರಣಾವತ್: ಫಸ್ಟ್ ಲುಕ್ ಔಟ್

    ಇಂದಿರಾ ಗಾಂಧಿ ಬಯೋಪಿಕ್‌ನಲ್ಲಿ ಕಂಗನಾ ರಣಾವತ್: ಫಸ್ಟ್ ಲುಕ್ ಔಟ್

    ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ ಮತ್ತೆ ಬಯೋಪಿಕ್ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇಂದಿರಾ ಗಾಂಧಿಯಾಗಿ ನಟಿ ಕಂಗನಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Kangana Ranaut (@kanganaranaut)

    ನಟಿ ಕಂಗನಾ ಅದ್ಯಾಕೋ ಬಯೋಪಿಕ್ ಸಿನಿಮಾದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಕಳೆದ ಬಾರಿ ತಮಿಳುನಾಡಿನ ತಲೈವಿ ಜಯಲಲಿತಾ ಬಯೋಪಿಕ್ ಮೂಲಕ ಸದ್ದು ಮಾಡಿದ್ದ ನಟಿ, ಈಗ ಇಂದಿರಾ ಗಾಂಧಿ ಪಾತ್ರದ ಮೂಲಕ ಬಿಟೌನ್‌ನಲ್ಲಿ ಸೌಂಡ್ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ಬಯೋಪಿಕ್‌ನಲ್ಲಿ ಇಂದಿರಾ ಗಾಂಧಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಥೇಟ್ ಇಂದಿರಾ ಗಾಂಧಿಯಂತೆಯೇ ಕಂಗನಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

     

    View this post on Instagram

     

    A post shared by Kangana Ranaut (@kanganaranaut)

    ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿನ ಕಥೆ ಏದುರಿಸಿದ ಸವಾಲುಗಳನ್ನ ತೆರೆಯ ಮೇಲೆ ತೋರಿಸಲು ಸಜ್ಜಾಗಿದ್ದಾರೆ. `ಎಮರ್ಜೆನ್ಸಿ’ ಚಿತ್ರದ ಟೈಟಲ್ ಮೂಲಕ ಕಂಗನಾ ಫಸ್ಟ್ ಲುಕ್ ರಿವೀಲ್ ಮಾಡಿದ್ದು, ಸೇಮ್ ಟು ಸೇಮ್ ಇಂದಿರಾ ಗಾಂಧಿಯಂತೆ ಮಿಂಚಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಈ ಚಿತ್ರವನ್ನ ನಟಿ ಕಂಗನಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ರೇಣು ಪಿಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ ಶುರುವಾಗಲಿದೆ.

    ಸದ್ಯ ಜಯಲಲಿತಾ ಬಯೋಪಿಕ್ ನಂತರ ಇಂದಿರಾ ಗಾಂಧಿಯ ರೂಪದಲ್ಲಿ ಬಂದಿರುವ ಕಂಗನಾ ಲುಕ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಕಂಗನಾ ಈ ಚಿತ್ರದ ಫಸ್ಟ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]