Tag: eman

  • ಕಷ್ಟಪಟ್ಟು ಈಜಿಪ್ಟಿನಿಂದ ಕರೆತಂದು ಚಿಕಿತ್ಸೆ ನೀಡಿದ್ದ ಮುಂಬೈ ವೈದ್ಯರ ವಿರುದ್ಧವೇ ಈಗ ಎಮಾನ್ ಸಹೋದರಿ ಕಿಡಿ

    ಕಷ್ಟಪಟ್ಟು ಈಜಿಪ್ಟಿನಿಂದ ಕರೆತಂದು ಚಿಕಿತ್ಸೆ ನೀಡಿದ್ದ ಮುಂಬೈ ವೈದ್ಯರ ವಿರುದ್ಧವೇ ಈಗ ಎಮಾನ್ ಸಹೋದರಿ ಕಿಡಿ

    ಮುಂಬೈ: ವಿಶ್ವದ ದಢೂತಿ ಮಹಿಳೆ ಈಜಿಪ್ಟ್ ನ ಎಮಾನ್ ಅಹ್ಮದ್ ಸಹೋದರಿ ಷೈಮಾ ಸೆಲೀಮ್ ಮುಂಬೈನ ವೈದ್ಯ ಲಕ್ದವಾಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಭಾರತಕ್ಕೆ ಬಂದು ಎಮಾನ್ ಅಹ್ಮದ್ ತೂಕ ಇಳಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳುತ್ತಿರೋದು ಸುಳ್ಳು ಅಂತಾ ಸಹೋದರಿ ಆರೋಪಿಸಿದ್ದಾರೆ. ಬರೋಬ್ಬರಿ 500 ಕೆಜಿ ತೂಕವಿದ್ದ ಎಮಾನ್ ದೇಹದ ತೂಕ ಇಳಿಸುತ್ತೇವೆ ಅಂತಾ ವೈದ್ಯರು ಭರವಸೆ ನೀಡಿ ಭಾರತಕ್ಕೆ ಕರೆತಂದಿದ್ದರು. ಆದ್ರೆ ಇಲ್ಲಿ ಆಕೆಯ ದೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಅಂತಾ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಬಂದ 3 ವಾರದಲ್ಲಿ 120 ಕೆಜಿ ತೂಕ ಇಳಿಸಿಕೊಂಡ ವಿಶ್ವದ ದಢೂತಿ ಮಹಿಳೆ

    ಷೈಮಾ ಸೆಲೀಮ್ ಏಪ್ರಿಲ್ 14ರಂದು ವೀಡಿಯೋ ಮಾಡುವ ಮೂಲಕ ಈ ಆರೋಪವನ್ನು ಮಾಡಿದ್ದಾರೆ. ಮುಂಬೈನ ಸೈಫೀ ಆಸ್ಪತ್ರೆಯ ವೈದ್ಯ ಡಾ. ಮುಫಜಲ್ ಲಕ್ದವಾಲಾ, ಸರ್ಜರಿ ಬಳಿಕ ಎಮಾನ್ ತೂಕ ಇಳಿಸಿಕೊಂಡಿದ್ದಾಳೆ ಅಂತಾ ಹೇಳುತ್ತಿದ್ದಾರೆ. ಆದ್ರೆ ಇದು ಸುಳ್ಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾದ ಬಳಿಕ ಆಕೆ ಇಲ್ಲಿವರೆಗೆ ಎಮಾನ್ ಮಾತನಾಡಿಲ್ಲ, ನಡೆದಾಡಿಲ್ಲ. ಹೀಗಾಗಿ ಭಾರತಕ್ಕೆ ಬಂದ ಬಳಿಕ ಆಕೆಯ ಆರೋಗ್ಯ ಹದಗೆಟ್ಟಿದೆಯೇ ಹೊರತು, ಚಲನವಲನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಅಂತಾ ಷೈಮಾ ವೀಡಿಯೋದಲ್ಲಿ ದೂರಿದ್ದಾರೆ. ಅಲ್ಲದೇ ಆಕೆಗೆ ಆಸ್ಪತ್ರೆಯಲ್ಲಿ ಯಾವೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂಬುವುದನ್ನು ವೀಡಿಯೋದಲ್ಲಿ ತೋರಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಸಿಎಟಿ ಸ್ಕ್ಯಾನ್ ಮೆಶಿನ್ ಕೂಡ ಇಲ್ಲ ಅಂತಾ ಹೇಳಿದ್ದಾರೆ.

    ಇದನ್ನೂ ಓದಿ: ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

    ಆದ್ರೆ ಇಮಾನ್ ಸಹೋದರಿ ಆರೋಪವನ್ನು ವೈದ್ಯ ಲಕ್ದವಾಲಾ ತಳ್ಳಿ ಹಾಕಿದ್ದಾರೆ. ಇಮಾನ್ ಚಿಕಿತ್ಸೆಗೂ ಮುನ್ನ 500 ಕೆಜಿ ತೂಕವಿದ್ಲು. ಚಿಕಿತ್ಸೆ ಬಳಿಕ ಆಕೆ ತೂಕ 172 ಕೆಜಿಗೆ ಇಳಿದಿದೆ. ಆದ್ರೆ ಮುಂದಿನ ಚಿಕಿತ್ಸಾ ವೆಚ್ಚವನ್ನು ಉಳಿಸಿಕೊಳ್ಳಲು ಇಮಾನ್ ಕುಟುಂಬಸ್ಥರು ಸುಳ್ಳು ಆರೋಪ ಮಾಡ್ತಿದ್ದಾರೆಂದು ಲಕ್ದವಾಲಾ ಪ್ರತಿಕ್ರಿಯೆ ನೀಡಿದ್ದಾರೆ.

    https://www.youtube.com/watch?v=MSz2yMt3zz4

  • ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

    ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

    ಮುಂಬೈ: ಬರೋಬ್ಬರಿ 500 ಕೆಜಿ ತೂಕ ಹೊಂದಿದ್ದ, ಜಗತ್ತಿನ ದಢೂತಿ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ಮೂಲದ ಎಮಾನ್ ಅಹ್ಮದ್(36) ಭಾರತಕ್ಕೆ ಬಂದು ಎರಡೇ ತಿಂಗಳಲ್ಲಿ ಸುಮಾರು 242 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

    ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಪ್ರಸಿದ್ಧ ಬಾರಿಯಾಟ್ರಿಕ್ ಸರ್ಜನ್ ಡಾ. ಮುಫಾಜಲ್ ಲಕ್ಡಾವಾಲಾ, ಎಮಾನ್ ಅವರಿಗೆ ಮಾರ್ಚ್ 7 ರಂದು ಶಸ್ತ್ರಚಿಕಿತ್ಸೆ ಮಾಡಿದ್ರು. ಎಮಾನ್‍ರ ಥೈರಾಡ್ ಮಟ್ಟ ಸಾಮಾನ್ಯವಗಿದ್ದು ಇನ್ಮುಂದೆ ಆಕೆ ಕುಳಿತುಕೊಳ್ಳಬಲ್ಲರು ಎಂದು ಹೇಳಿದ್ರು. ಆದ್ರೆ ಎಮಾನ್ ತನ್ನ 11ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅನಂತರ ಅವರ ಕಾಲುಗಳು ಬೆಳವಣಿಗೆ ಸ್ಥಗಿತವಾಗಿತ್ತು. ಎಮಾನ್ ದಢೂತಿ ದೇಹ ಹೊಂದಿದ್ದ ಕಾರಣ 25 ವರ್ಷಗಳವರೆಗೆ ಹಾಸಿಗೆ ಹಿಡಿದಿದ್ದಾಗ ಸಮಸ್ಯೆ ಮತ್ತಷ್ಟು ಉಲ್ಬಣವಾಗಿತ್ತು. ಹೀಗಾಗಿ ಎಮಾನ್ ಇನ್ನೆಂದೂ ನಡೆದಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಎಮಾನ್ ಅವರಿಗೆ ಸ್ಥೂಲಕಾಯದ ಚಿಕಿತ್ಸೆ ಮುಗಿದಿದ್ದು, ನರಕ್ಕೆ ಸಂಬಂಧಿಸಿದಂತೆ ಮುಂದಿನ ಚಿಕಿತ್ಸೆ ಶಿಘ್ರದಲ್ಲೇ ಶುರು ಮಾಡಲಾಗುತ್ತದೆ. ಎಮಾನ್ ಅವರ ಈಗಿನ ತೂಕದಲ್ಲಿ ಇನ್ನೂ 50 ಕೆಜಿ ಇಳಿಸಲು ವೈದ್ಯರು ಯೋಚಿಸಿದ್ದಾರೆ. ಆಗ ಎಮಾನ್ ತೂಕ ಸುಮಾರು 200 ಕೆಜಿ ಆಗಲಿದ್ದು ಸಿಟಿ ಸ್ಕ್ಯಾನ್‍ಗೆ ಆಕೆ ಒಳಗಾಗಬಹುದು. ಇದರಿಂದಾಗಿ ಈ ಹಿಂದೆ ಆಕೆ ತುತ್ತಾಗಿದ್ದ ಪಾರ್ಶ್ವವಾಯುವಿನ ಪರಿಣಮದ ಬಗ್ಗೆ ಪರೀಕ್ಷಿಸಲು ವೈದ್ಯರಿಗೆ ಸಹಾಯವಾಗಲಿದೆ.

    ಎಮಾನ್ ಅವರನ್ನ 4 ತಿಂಗಳ ಬಳಿಕ ಈಜಿಪ್ಟ್ ನ ಅಲೆಕ್ಸಾಂಡ್ರಿಯಾಗೆ ವಾಪಸ್ ಕಳಿಸಬೇಕಿತ್ತು. ಆದ್ರೆ ನರಸಂಬಂಧಿತ ಚಿಕಿತ್ಸೆ ಬಾಕಿ ಇರೋದ್ರಿಂದ ಆಕೆ ಇನ್ನೂ ಕೆಲ ಕಾಲ ಭಾರತದಲ್ಲೇ ಇರಬೇಕಿದೆ.

    ಎಮಾನ್ ಇಷ್ಟೊಂದು ದಢೂತಿಯಾಗಿಯಲು ಆಕೆಗಿದ್ದ ಅನುವಂಶಿಕ ಸಮಸ್ಯೆ ಕಾರಣ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿತ್ತು. ಹೋಮೋಝೈಗಸ್ ಮಿಸೆನ್ಸ್ ವೇರಿಯಂಟ್ ಎಂಬ ಜೀನ್ ಆಕೆಯ ಸ್ಥೂಲಕಾಯಕ್ಕೆ ಕಾರಣವಾಗಿತ್ತು. ನಮಗೆ ತಿಳಿದಂತೆ ಈ ರೀತಿಯ ಅನುವಂಶಿಕ ಕಾಯಿಲೆ ಇರೋದು ಎಮಾನ್‍ರಲ್ಲಿ ಮಾತ್ರ ಎಂದು ವೈದ್ಯರು ಹೇಳಿದ್ದರು.