Tag: Email Threat

  • ಅಯೋಧ್ಯೆ | ರಾಮಮಂದಿರ ಟ್ರಸ್ಟ್‌ಗೆ ತಮಿಳುನಾಡು ವ್ಯಕ್ತಿಯಿಂದ ಬೆದರಿಕೆ ಇಮೇಲ್

    ಅಯೋಧ್ಯೆ | ರಾಮಮಂದಿರ ಟ್ರಸ್ಟ್‌ಗೆ ತಮಿಳುನಾಡು ವ್ಯಕ್ತಿಯಿಂದ ಬೆದರಿಕೆ ಇಮೇಲ್

    ನವದೆಹಲಿ: ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆಯೊಂದು ಬಂದಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಇನ್ನೋವಾ ಡಿಕ್ಕಿಯಾಗಿ 10 ಅಡಿ ದೂರ ಹಾರಿ ಬಿದ್ದ ಮಹಿಳೆ – ಮಕ್ಕಳಿಗೆ ಚಾಕ್ಲೇಟ್ ತರಲು ಹೋಗಿ ಅಪಘಾತಕ್ಕೆ ಬಲಿ

    ಮಾಧ್ಯಮದವರೊಂದಿಗೆ ಅಯೋಧ್ಯೆಯ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ವಿಚಾರವಾಗಿ ಮಾತನಾಡಿ, ರಾಮಮಂದಿರ ಟ್ರಸ್ಟ್‌ಗೆ ಭಾನುವಾರ ಮಧ್ಯರಾತ್ರಿ ಅನುಮಾನಾಸ್ಪದ ಇಮೇಲ್ ಬಂದಿದೆ. ತಮಿಳುನಾಡಿನ ವ್ಯಕ್ತಿಯೊಬ್ಬ ಇಂಗ್ಲಿಷ್‌ನಲ್ಲಿ ಇಮೇಲ್ ಕಳುಹಿಸಿದ್ದಾನೆ. ಈ ಕುರಿತು ಸದ್ಯ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಇದರ ಹೊರತಾಗಿ ಇನ್ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಇನ್ನೂ ಈ ಕುರಿತು ರಾಮಮಂದಿರ ಟ್ರಸ್ಟ್ ಹಾಗೂ ಭದ್ರತಾ ಸಂಸ್ಥೆಗಳು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದಕ್ಕೂ ಮುನ್ನ ರಾಮಮಂದಿರ ಟ್ರಸ್ಟ್‌ಗೆ ಹಲವು ಬಾರಿ ಬೆದರಿಕೆ ಮೇಲ್‌ಗಳು ಬಂದಿದ್ದವು.ಇದನ್ನೂ ಓದಿ: ಬೆಂಗ್ಳೂರಲ್ಲಿ 5 ಕೋಟಿ ಮೌಲ್ಯದ ಮಾದಕ ವಸ್ತು ವಶ – ಇಬ್ಬರು ಅರೆಸ್ಟ್

  • ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್‌ ಬ್ಲಾಸ್ಟ್‌ – ಬೆದರಿಕೆ

    ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್‌ ಬ್ಲಾಸ್ಟ್‌ – ಬೆದರಿಕೆ

    ಮುಂಬೈ: ಬಿಟ್‌ಕಾಯಿನ್‌ (ಕ್ರಿಪ್ಟೋಕರೆನ್ಸಿ) (Bitcoin) ರೂಪದಲ್ಲಿ 10 ಲಕ್ಷ ಡಾಲರ್‌ (8.33 ಕೋಟಿ ರೂ.) ಪಾವತಿಸದಿದ್ದರೇ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್‌ 2 ಅನ್ನು ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಇಮೇಲ್ ಬೆದರಿಕೆ ನೀಡಲಾಗಿದೆ.

    ಇ-ಮೇಲ್‌ ಬೆದರಿಕೆ ಕಳುಹಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಮುಂಬೈ ಪೊಲೀಸರು (Mumbai Police) ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ಗೆ (MIAL) ID–quaidacasrol@gmail.com-ನಿಂದ ಬೆದರಿಕೆ ಇಮೇಲ್ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಹೇಳಿಕೆ- ಕೇಂದ್ರ ಚುನಾವಣಾ ಆಯೋಗದಿಂದ ರಾಹುಲ್ ಗಾಂಧಿಗೆ ನೋಟಿಸ್

    ನಿಮ್ಮ ವಿಮಾನ ನಿಲ್ದಾಣಕ್ಕೆ ಇದು ಕೊನೆಯ ಎಚ್ಚರಿಕೆಯಾಗಿದೆ. 10 ಲಕ್ಷ ಡಾಲರ್‌ (Million Dollars) ಅನ್ನು ಬಿಟ್‌ಕಾಯಿನ್‌ ರೂಪದಲ್ಲಿ ಪಾವತಿಸದೇ ಇದ್ದರೇ 48 ಗಂಟೆಗಳ ಒಳಗೆ ವಿಮಾನ ನಿಲ್ದಾಣದ ಟರ್ಮಿನಲ್ 2 (Mumbai Airport Terminal 2 )ಅನ್ನು ಬಾಂಬ್‌ ಹಾಕಿ ಉಡಾಯಿಸುತ್ತೇವೆ. 24 ಗಂಟೆಗಳ ನಂತರ ಮತ್ತೊಂದು ಎಚ್ಚರಿಕೆ ನೀಡಲಾಗುವುದು ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ

    ಬೆದರಿಕೆಯ ಇಮೇಲ್‌ ಬರುತ್ತಿದ್ದಂತೆ ಮುಂಬೈ ಪೊಲೀಸರು (Mumbai Police) ಫುಲ್‌ ಅಲರ್ಟ್‌ ಆಗಿದ್ದಾರೆ. ಇಮೇಲ್‌ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸೂಕ್ಷ್ಮವಾಗಿ ತನಿಖೆಯನ್ನು ಮುಂದುವರಿಸಿದ್ದಾರೆ.

    \

    ಈ ಹಿಂದೆ ಸೆಪ್ಟೆಂಬರ್‌ 5 ರಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಕಾಮತಿಪುರದಲ್ಲಿ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ನೌಕಾಪಡೆ 8 ಮಾಜಿ ಸಿಬ್ಬಂದಿಯ ಮರಣದಂಡನೆಗೆ ವಿರೋಧ – ಭಾರತದ ಮನವಿ ಸ್ವೀಕರಿಸಿದ ಕತಾರ್

  • ಪುತ್ರಿಯನ್ನು ಕಿಡ್ನಾಪ್ ಮಾಡ್ತೀವಿ – ಕೇಜ್ರಿವಾಲ್‍ಗೆ ಬೆದರಿಕೆ

    ಪುತ್ರಿಯನ್ನು ಕಿಡ್ನಾಪ್ ಮಾಡ್ತೀವಿ – ಕೇಜ್ರಿವಾಲ್‍ಗೆ ಬೆದರಿಕೆ

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಣ ಮಾಡುವುದಾಗಿ ದುಷ್ಕರ್ಮಿಗಳು ಇಮೇಲ್ ಮಾಡಿದ್ದಾರೆ.

    ಅಪಹರಣ ಬೆದರಿಕೆ ಬಂದ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್ ಅವರ 23 ವರ್ಷದ ಪುತ್ರಿ ಹರ್ಷಿತಾಗೆ ಭದ್ರತೆ ಒದಗಿಸಲಾಗಿದೆ. ದುಷ್ಕರ್ಮಿಗಳು ದೆಹಲಿ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬುಧವಾರ (ಜನವರಿ 9)ರಂದು ಇಮೇಲ್ ಕಳುಹಿಸಿ, ನಿಮ್ಮ ಪುತ್ರಿಯನ್ನು ನಾವು ಅಪಹರಿಸುತ್ತೇವೆ. ನಿಮಗೆ ರಕ್ಷಿಸಿಕೊಳ್ಳಲು ಸಾಧ್ಯವೇ ಎಂದು ಸವಾಲು ಹಾಕಿದ್ದಾರೆ.

    ಇಮೇಲ್ ಕಳುಹಿಸಿದ್ದು ಯಾರು? ಎಲ್ಲಿಂದ ಕಳುಹಿಸಿದ್ದಾರೆ? ಅವರ ಬೇಡಿಕೆ ಏನು ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ದೆಹಲಿ ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ.

    ಸಿಎಂ ಅರವಿಂದ್ ಕೇಜ್ರಿವಾಲ್, ಸುನಿತಾ ದಂಪತಿಗೆ ಪುತ್ರಿ ಹರ್ಷಿತಾ ಹಾಗೂ ಪುತ್ರ ಪುಲ್ಕಿಟ್ ಇದ್ದಾರೆ. ಹರ್ಷಿತಾ 2014ರಲ್ಲಿ ಐಐಟಿಯ ಅರ್ಹತಾ ಪರೀಕ್ಷೆಯಲ್ಲಿ ಉರ್ತೀಣಗೊಂಡಿದ್ದು ಎಂಜಿನಿಯರಿಂಗ್ ವ್ಯಾಸಂಗ ಓದುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv