Tag: elumalai

  • ‘ಸರ್ದಾರ್ 2’ ಸೆಟ್‌ನಲ್ಲಿ ಅವಘಡ- 20 ಅಡಿ ಮೇಲಿಂದ ಬಿದ್ದು ಸ್ಟಂಟ್ ಮ್ಯಾನ್ ಸಾವು

    ‘ಸರ್ದಾರ್ 2’ ಸೆಟ್‌ನಲ್ಲಿ ಅವಘಡ- 20 ಅಡಿ ಮೇಲಿಂದ ಬಿದ್ದು ಸ್ಟಂಟ್ ಮ್ಯಾನ್ ಸಾವು

    ಮಿಳು ನಟ ಕಾರ್ತಿ (Karthi) ನಟನೆಯ ‘ಸರ್ದಾರ್ 2’ (Sardar 2) ಸಿನಿಮಾ ಸೆಟ್‌ನಲ್ಲಿ ಅವಘಡ ನಡೆದಿದ್ದು, ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್ ಮ್ಯಾನ್ (Stuntman)  ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

    ಜು.15ರಂದು ಚೆನ್ನೈ ಸಾಲಿಗ್ರಾಮಂದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ‘ಸರ್ದಾರ್ 2’ ಶೂಟಿಂಗ್ ಆರಂಭಿಸಲಾಗಿತ್ತು. ಕಾರ್ತಿ ನಟನೆಯ ಈ ಸಿನಿಮಾ ಸಾಹಸ ದೃಶ್ಯ ಶೂಟಿಂಗ್ ಮಾಡುವ ವೇಳೆ, 20 ಅಡಿ ಎತ್ತರದಿಂದ ಕುಸಿದು ಬಿದ್ದು, 54 ವರ್ಷದ ಎಜುಮಲೈ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಸ್ಥಳದಲ್ಲಿದ್ದ ಕಲಾವಿದರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಎಜುಮಲೈ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಚಿತ್ರತಂಡ ಇದೀಗ ಸಂತಾಪ ಸೂಚಿಸಿದೆ.

  • ಬಿಬಿಎಂಪಿಯ ಸಗಾಯಪುರಂ ವಾರ್ಡ್ ಕಾರ್ಪೊರೇಟರ್ ಏಳುಮಲೈ ವಿಧಿವಶ

    ಬಿಬಿಎಂಪಿಯ ಸಗಾಯಪುರಂ ವಾರ್ಡ್ ಕಾರ್ಪೊರೇಟರ್ ಏಳುಮಲೈ ವಿಧಿವಶ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಗಾಯಪುರಂ ವಾರ್ಡಿನ ಪಕ್ಷೇತರ ಸದಸ್ಯ ಏಳುಮಲೈ ಅವರು ತೀವ್ರ ಅನಾರೋಗ್ಯದಿಂದ ವಿಕ್ರಂ ಆಸ್ಪತ್ರೆಯಲ್ಲಿ ಗುರುವಾರ ನಸುಕಿನ ಜಾವ 1.30ರ ವೇಳೆಗೆ ವಿಧಿವಶರಾಗಿದ್ದಾರೆ.

    ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೋಮಾವಸ್ಥೆ ತಲುಪಿದ್ದರು. ಮೂಗಿನಲ್ಲಿ ಗುಳ್ಳೆ ಆಗಿದೆಯೆಂದು ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ತಪ್ಪು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ವೇಳೆ ನೀಡಿದ ಅನಸ್ತೇಷಿಯಾದಿಂದ ಸಮಸ್ಯೆಯಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

    ಇದೇ ವೇಳೆ ಹೃದಾಯಾಘಾತವಾಯಿತು ಒಂದು ವಾರದ ಹಿಂದೆ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳುಮಲೈ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಬಿಬಿಎಂಪಿ ಸಮಾಜಿಕ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಏಳುಮಲೈ ಸಮಾಜಿಕ ಕಳಕಳಿ ಹೊಂದಿದ್ದ ಕಾರ್ಪೊರೇಟರ್ ಆಗಿ ಜನಮನ್ನಣೆ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv