Tag: eliminate

  • Breaking: ‘ಬಿಗ್ ಬಾಸ್’ ಮನೆಯಿಂದ ಸ್ನೇಕ್ ಶ್ಯಾಮ್ ಹೊರಗೆ?

    Breaking: ‘ಬಿಗ್ ಬಾಸ್’ ಮನೆಯಿಂದ ಸ್ನೇಕ್ ಶ್ಯಾಮ್ ಹೊರಗೆ?

    ಮೈಸೂರಿನ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಈ ಸೀಸನ್ ನ ಮೊದಲ ಎಲಿಮಿನೇಟ್ (Eliminate) ಶ್ಯಾಮ್ ಆಗಿದ್ದಾರೆ ಎನ್ನುವುದು ಸಿಗುತ್ತಿರುವ ಮಾಹಿತಿ. ಆದರೆ, ಶ್ಯಾಮ್ (Snake Shyam) ಮನೆಯಲ್ಲಿ ಇದ್ದರಾ? ಅಥವಾ ನಿಜವಾಗಿಯೂ ಎಲಿಮೇನ್ ಆಗಿ ಹೊರ ಬಂದಿದ್ದಾರಾ ಎನ್ನುವುದು ಇಂದು ಸಂಜೆಯೇ ಕಿಚ್ಚನ ಪಂಚಾಯತಿಯಲ್ಲಿ ತೀರ್ಮಾನವಾಗಲಿದೆ.

    ಒಂದು ವಾರದ ಎಪಿಸೋಡ್ ಗಳನ್ನು ನೋಡಿದಾಗ ಸ್ನೇಕ್ ಶ್ಯಾಮ್ ಅಷ್ಟಾಗಿ ಉತ್ಸಾಹದಿಂದ ಇರಲಿಲ್ಲ. ವಯಸ್ಸಿನ ಕಾರಣದಿಂದಾಗಿ ಟಾಸ್ಕ್ ಮಾಡುವುದು ಕೂಡ ಅವರಿಗೆ ಕಷ್ಟದ ಕೆಲಸವೇ. ಮನೆಯಲ್ಲಿರುವವರನ್ನು ಹೋಲಿಸಿದರೆ ಶ್ಯಾಮ್ ಲವಲವಿಕೆಯಿಂದ ಇರುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವರನ್ನು ಮನೆಯಿಂದ ಆಚೆ ಹಾಕಿರಬಹುದಾ? ಗೊತ್ತಿಲ್ಲ. ಯಾಕೆಂದರೆ, ಅವರು ಮನೆಯಿಂದ ಹೊರ ಬಂದಿರುವುದು ನಿಕ್ಕಿ ಆಗಿಲ್ಲ.

    ಕಿಚ್ಚನ ಪಂಚಾಯತಿಯಲ್ಲೂ ಗರಂ

    ಬಿಗ್ ಬಾಸ್ ಕನ್ನಡ 10 (Bigg Boss Kannada)ರ ಕಿಚ್ಚನ ಮೊದಲ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ವಾಹಿನಿಯು ಪ್ರೋಮೋವನ್ನು ರಿಲೀಸ್ ಮಾಡಿದ್ದು, ಕಿಚ್ಚ ಆಡಿದ ಮಾತುಗಳು ಸಖತ್ ಕುತೂಹಲ ಮೂಡಿಸಿವೆ. ‘ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡರೆ, ದೇವರೇ ಕ್ಷಮಿಸಿ ಒಂದು ವರ ಕೊಡ್ತಾನೆ’ ಎಂದು ಹೇಳಲಾದ ಮಾತು ವೈರಲ್ ಆಗಿದೆ. ಆ ಮಾತುಗಳನ್ನು ಅವರು ಯಾರಿಗೆ ಹೇಳಿದ್ದಾರೆ ಎನ್ನುವುದು ಪ್ರೊಮೋದಲ್ಲಿ ಬಳಸಲಾದ ದೃಶ್ಯಗಳೇ ಹೇಳುತ್ತವೆ.

    ಇಂದು ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯತಿ. ವೀಕೆಂಡ್ ನಲ್ಲಿ ಸುದೀಪ್ (Sudeep) ಜೊತೆ ಮಾತನಾಡೋಕೆ ಬಿಗ್ ಬಾಸ್ ಸ್ಪರ್ಧಿಗಳು ತುದಿಗಾಲಲ್ಲಿ ಕಾಯುತ್ತಾರೆ. ವೀಕೆಂಡ್ ಪಂಚಾಯತಿಯಲ್ಲಿ (Kichchaana Panchayati) ಭಾಗಿಯಾಗಲೆಂದೇ ಹೊಸ ಹೊಸ ವಿನ್ಯಾಸದ ಕಾಸ್ಟ್ಯೂಮ್ ಅನ್ನೂ ರೆಡಿ ಮಾಡಿಕೊಂಡಿರುತ್ತಾರೆ. ಹಾಗಂತ ಕಿಚ್ಚನ ಪಂಚಾಯತಿ, ಯಾವ ವೇಳೆಯಲ್ಲೇ ಹೇಗೆ ಟರ್ನ್ ಆಗತ್ತೋ ಗೊತ್ತಿಲ್ಲ. ನಗುತ್ತಲೇ ಅಳಿಸುತ್ತಾರೆ, ಅಳಿಸುತ್ತಲೇ ನಗಿಸುತ್ತಾರೆ, ಕೋಪ ಬಂದರೆ ಮುಖಾಮೋತಿ ನೋಡದೇ ಉಗಿದು ಬಿಡುತ್ತಾರೆ ಸುದೀಪ್. ಹಾಗಾಗಿ ಕಿಚ್ಚನ ಪಂಚಾಯತಿಗಾಗಿ ಕಿರುತೆರೆ ಪ್ರೇಕ್ಷಕ ಕೂಡ ಕಾದಿರುತ್ತಾನೆ.

    ಬಿಗ್ ಬಾಸ್ ಸೀಸನ್ 10ರ ಮೊದಲ ಕಿಚ್ಚನ ಪಂಚಾಯತಿ ಅಂದರೆ, ‘ವಾರದ ಕಥೆ ಕಿಚ್ಚನ ಜೊತೆ’ ಇಂದು ಆರಂಭವಾಗಿದೆ. ಈಗಾಗಲೇ ಶೂಟಿಂಗ್ ಕೂಡ ನಡೆದಿದ್ದು, ಮನೆಯಲ್ಲಿದ್ದವರ ಮೇಲೆ ಕಿಚ್ಚ ಗರಂ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಬಿಗ್ ಬಾಸ್ ಮನೆಯೊಳಗೆ ಕಂಟೆಸ್ಟೆಂಟ್ ಬಂದು ಕೇವಲ ಒಂದು ವಾರವಾಗಿದೆಯಷ್ಟೆ. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇದು ಅತ್ಯಂತ ಕಡಿಮೆ ಸಮಯ. ಆದರೂ, ಡ್ರೋನ್ ಪ್ರತಾಪ್ ಮೇಲೆ ಮನೆಮುಂದಿಯಲ್ಲ ಮುರಿದು ಬಿದ್ದಿದ್ದಾರೆ. ಡ್ರೋನ್‍ ಪ್ರತಾಪ್ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅವಮಾನಿಸುವಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಇವೆಲ್ಲ ಕಿಚ್ಚನ ಕೋಪಕ್ಕೆ ಕಾರಣವಾಗಿವೆ.

     

    ಡ್ರೋನ್ ‍ಪ್ರತಾಪ್ ತಮ್ಮ ನಿಜ ಜೀವನದಲ್ಲಿ ಏನೇ ಇರಲಿ. ಆದರೆ, ಮನೆಗೆ ಬಂದಾಗ ಇತರರಂತೆ ಅವರೂ ಕೂಡ ಸ್ಪರ್ಧಿ. ಸಮಾಜದಲ್ಲಿ ಅವರಿಗೂ ಅವರದ್ದೇ ಆದ ಸ್ಥಾನವಿದೆ. ಅವರ ಖಾಸಗಿ ಬದುಕನ್ನು ಸಾಕಷ್ಟು ರೀತಿಯಲ್ಲಿ ಕೆದಕಿ ಬಿಗ್ ಬಾಸ್ ಮನೆಯಲ್ಲಿ ಅಪಮಾನ ಮಾಡಲಾಗುತ್ತಿದೆ. ಯಾರೆಲ್ಲ ಡ್ರೋನ್ ಪ್ರತಾಪ್‍ ರನ್ನು ಅವಮಾನಿಸಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರಂತೆ ಸುದೀಪ್. ಅಲ್ಲದೇ, ಡ್ರೋನ್ ಅವರಿಗೂ ಕಿಚ್ಚ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಓಟಿಟಿ 2: ಶುರುವಾದ 12 ಗಂಟೆ ಒಳಗೆ ಪುನೀತ್ ಕುಮಾರ್ ಔಟ್

    ಬಿಗ್ ಬಾಸ್ ಓಟಿಟಿ 2: ಶುರುವಾದ 12 ಗಂಟೆ ಒಳಗೆ ಪುನೀತ್ ಕುಮಾರ್ ಔಟ್

    ಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ (Hindi) ಬಿಗ್ ಬಾಸ್ ಓಟಿಟಿ ಸೀಸನ್ 2 (Bigg Boss OTT 2) ಶುರುವಾಗಿ ಕೇವಲ 12 ಗಂಟೆ ಒಳಗೆ ಒಬ್ಬರು ಸ್ಪರ್ಧಿಯನ್ನು ಮನೆಯಿಂದ ಹೊರ ಹಾಕಿದ್ದಾರೆ ಬಿಗ್ ಬಾಸ್. ಈ ಸೀಸನ್ ನ ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದ ಪುನೀತ್ ಕುಮಾರ್, ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದಾರೆ. ಪುನೀತ್ ನಡವಳಿಕೆ ಇಷ್ಟವಾಗದೇ ಇರುವ ಕಾರಣದಿಂದಾಗಿ ಅವರನ್ನು ಎಲಿಮಿನೇಟ್ (Eliminate) ಮಾಡಲಾಗಿದೆ.

    ಪುನೀತ್ ಸೂಪರ್ ಸ್ಟಾರ್ ಎಂದು ತನ್ನನ್ನೇ ತಾನು ಕರೆದುಕೊಳ್ಳುತ್ತಿದ್ದ ಪುನೀತ್ (Puneet Kumar), ನಿರಾಸೆಯಿಂದಲೇ ಮನೆಯಿಂದ ಆಚೆ ಬಂದಿದ್ದಾರೆ. ಬೈಕ್ ರೇಸರ್ ಆಗಿ ಗುರುತಿಸಿಕೊಂಡಿರುವ ಇವರು, ಮೊದಲ ದಿನವೇ ಇತರ ಸ್ಪರ್ಧಿಗಳ ಜೊತೆ ಹೊಂದಾಣಿಕೆಯಾಗಲು ಕಷ್ಟ ಪಡುತ್ತಿದ್ದರು. ಒಂದು ರೀತಿಯಲ್ಲಿ ಇತರರಿಗೆ ಕಿರಿಕಿರಿ ಆಗುವಂತೆ ನಡೆದುಕೊಳ್ಳುತ್ತಿದ್ದರು. ಇದನ್ನೂ ಓದಿ:ನಟ ಸಂಚಾರಿ ವಿಜಯ್‌ ಅವರ 2ನೇ ವರ್ಷದ ಪುಣ್ಯಸ್ಮರಣೆ

    ಈ ಸೀಸನ್ ನಲ್ಲಿ ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈವರೆಗೂ ಮಿಯಾ ಮನೆ ಒಳಗೆ ಪ್ರವೇಶ ಮಾಡಿಲ್ಲ. ಅಚ್ಚರಿ ಎನ್ನುವಂತೆ ಎಂಟ್ರಿ ಕೊಡಲಿದ್ದಾರಾ ಕಾದು ನೋಡಬೇಕು. ಮಿಯಾ ಪ್ರವೇಶಿಸಿದರೆ ಮನೆಯ ವಾತಾವರಣ ಹೇಗೆಲ್ಲ ಇರಲಿದೆ ಎನ್ನುವ ಕುರಿತು ಕುತೂಹಲ ಮೂಡಿದೆ. ಈ ಹಿಂದೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಕೂಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

     

    ಮೊದಲ ಸೀಸನ್ ಬಿಗ್ ಬಾಸ್ ಒಟಿಟಿಯನ್ನ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್‌ನ ಸಲ್ಮಾನ್ ಖಾನ್ (Salman Khan) ನಿರೂಪಣೆ  ಮಾಡುತ್ತಿದ್ದಾರೆ. ಜೊತೆಗೆ ಸಲ್ಮಾನ್ ಈ ಸೀಸನ್ ಹೇಗಿರಲಿದೆ ಎನ್ನುವ ಕುರಿತು ಮಾತನಾಡಿದ್ದಾರೆ. ವಿಚಿತ್ರ ಮನಸ್ಥಿತಿಯ ಸ್ಪರ್ಧಿಗಳು ಈಗಾಗಲೇ ಮನೆಗೆ ಪ್ರವೇಶ ಮಾಡಿದ್ದಾರೆ.

  • ‘ಬಿಗ್ ಬಾಸ್’ ಮನೆಯಿಂದ ಮಯೂರಿ ಔಟ್: ನೋವಿನಿಂದಲೇ ಹೊರ ನಡೆದ ನಟಿ

    ‘ಬಿಗ್ ಬಾಸ್’ ಮನೆಯಿಂದ ಮಯೂರಿ ಔಟ್: ನೋವಿನಿಂದಲೇ ಹೊರ ನಡೆದ ನಟಿ

    ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಕಿರುತೆರೆಗೆ ಪರಿಚಿತರಾದ ಮಯೂರಿ (Mayuri) ಇದಾದ ಬಳಿಕ ಸಾಕಷ್ಟು ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡಿದ್ದರು. ದೊಡ್ಮನೆಯಲ್ಲಿ ಸೈ ಎನಿಸಿಕೊಂಡಿದ್ದ ಹುಬ್ಬಳ್ಳಿ ಹುಡುಗಿ ಮಯೂರಿ ಬಿಗ್ ಬಾಸ್ ಮನೆಯಿಂದ ಇದೀಗ ಎಲಿಮಿನೇಟ್ ಆಗಿದ್ದಾರೆ.

    ಸೀರಿಯಲ್ , ಸಿನಿಮಾ, ರಿಯಾಲಿಟಿ ಶೋ ಜಡ್ಜ್ ಆಗಿ, ಮಯೂರಿ ಗುರುತಿಸಿಕೊಂಡಿದ್ದರು. ಬಳಿಕ ಬಿಗ್ ಬಾಸ್ (Bigg Boss Season 9) ಮನೆಗೆ ನಟಿ ಕಾಲಿಟ್ಟಿದ್ದರು. ಈಗ ದೊಡ್ಮನೆಯ ಆಟ ಮಯೂರಿಗೆ ಅಂತ್ಯವಾಗಿದೆ. ಸುದೀಪ್ ಇಲ್ಲದೇ ಎಲಿಮಿನೇಷನ್ ನಡೆದಿರೋದು ಮನೆಮಂದಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಬಿಗ್ ಬಾಸ್ ಶೋನ ರೂವಾರಿ ಸುದೀಪ್ (Sudeep) ಅವರು ಪತ್ನಿ ಪ್ರಿಯಾ ಜತೆ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. (ಅ. 23) ಭಾರತ ಹಾಗೂ ಪಾಕಿಸ್ತಾನದ ನಡುವಣ ಮ್ಯಾಚ್ ಅನ್ನ  ಈ ದಂಪತಿ ವೀಕ್ಷಿಸಿದ್ದಾರೆ. ಇದರ ಜೊತೆಗೆ ಸುದೀಪ್ ಅನುಪಸ್ಥಿತಿಯಲ್ಲಿ ವಾರಾಂತ್ಯದ ಎಲಿಮಿನೇಷನ್ (Eliminate) ಕೂಡ ನಡೆದಿದೆ.

    ಇನ್ನೂ ವೀಕೆಂಡ್ ನಲ್ಲಿ ನೇಹಾ ಮತ್ತು ಮಯೂರಿ ನಡುವೆ ಜಟಾಪಟಿ ಇತ್ತು. ಆ ಪೈಕಿ ಮಯೂರಿ ಔಟ್ ಆದರು. ಸದಾ ಮಗುವಿನ ಚಿಂತೆಯಲ್ಲಿ ಇರುತ್ತಿದ್ದ‌‌ ಈ‌ ನಟಿ. ಮನೆಯಿಂದ ಹೊರಹೋಗಬೇಕು ಎಂಬುದು ಮಯೂರಿ ಆಸೆ ಆಗಿತ್ತು. ಇದುವೇ ಅವರಿಗೆ ಮುಳುವಾಗಿದೆ. ಬಿಗ್ ಬಾಸ್ ಮನೆಯ ಆಟಕ್ಕೆ ಬ್ರೇಕ್ ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ಬಿಗ್ ಬಾಸ್ ಮನೆಯಲ್ಲಿ ಟಫ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ನಂದಿನಿ ಈ‌ ವಾರ ಬಿಗ್ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ದೊಡ್ಮನೆಯಲ್ಲಿ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗಿರುವ ಸ್ಪರ್ಧಿ ನಂದಿನಿ ಎಲಿಮಿನೇಟ್ ಆಗಿದ್ದಾರೆ.

    ಹಿಂದಿ ರಿಯಾಲಿಟಿ ಶೋ ‘ರೋಡೀಸ್’ ಶೋ ವಿನ್ನರ್ ನಂದಿನಿ ಇದೀಗ ಬಿಗ್ ಮನೆಯಿಂದ ಹೊರ ಬಂದಿದ್ದಾರೆ. ಟಾಸ್ಕ್, ಮನರಂಜನೆ, ಹೀಗೆ ಪ್ರತಿಯೊಂದು ವಿಚಾರದಲ್ಲೂ ನಂದಿನಿ ಆಕ್ಟೀವ್ ಆಗಿದ್ದರು. ಇದನ್ನೂ ಓದಿ: ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರವಾಗಿ ಕುಗ್ಗಿದ್ದರು. ದಿನದಿಂದ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಜಟಾಪಟಿ ಕೂಡ ಜೋರಾಗಿತ್ತು.‌ ಇದೀಗ ಪ್ರತಿ ವಾರದ ಎಲಿಮಿನೇಷನ್ ಪದ್ಧತಿಯಂತೆ ಈ ವಾರ, ನಂದಿನಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    Live Tv
    [brid partner=56869869 player=32851 video=960834 autoplay=true]

  • Breaking: ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಸ್ಫೂರ್ತಿ ಗೌಡ ಎಲಿಮಿನೇಟ್

    Breaking: ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಸ್ಫೂರ್ತಿ ಗೌಡ ಎಲಿಮಿನೇಟ್

    ಕಿರುತೆರೆಯ ‘ಸೀತಾವಲ್ಲಭ’ ಧಾರಾವಾಹಿ ನಟಿ ಮಲೆನಾಡಿನ ಸುಂದರಿ ಸ್ಫೂರ್ತಿ ಗೌಡ ಬಿಗ್ ಬಾಸ್ ಓಟಿಟಿ 16 ಸ್ಪರ್ಧಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಈಗ ಎರಡನೇ ವಾರಕ್ಕೆ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಕಿಚ್ಚನ ಪಂಚಾಯಿತಿಯಲ್ಲಿ ಸಾನ್ಯಾ-ರೂಪೇಶ್ ಮಿಡ್ ನೈಟ್ ವಿಚಾರ ಬಿಸಿ ಬಿಸಿ ಚರ್ಚೆ

    ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಸ್ಪೂರ್ತಿ ಗೌಡ ಕಾಣಿಸಿಕೊಂಡಿದ್ದರು. ಒಂದಲ್ಲಾ ಒಂದು ವಿಚಾರವಾಗಿ ಸ್ಫೂರ್ತಿ ಸದ್ದು ಮಾಡ್ತಿದ್ದರು. ಬಿಗ್ ಬಾಸ್ ಮನೆಯ ಮೊದಲನೇ ವಾರದಿಂದ ಕಿರಣ್ ಯೋಗೇಶ್ವರ್ ಓಟ್ ಆಗಿದ್ದರು. ಈಗ ಎರಡನೇ ವಾರ ಸ್ಫೂರ್ತಿ ಗೌಡ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯ ಕದ ಸ್ಫೂರ್ತಿ ಪಾಲಿಗೆ ಇಲ್ಲದಂತೆ ಆಗಿದೆ.

    ಕಿಚ್ಚನ ವಾರದ ಪಂಚಾಯಿತಿಯಲ್ಲಿ ಸ್ಫೂರ್ತಿ ಗೌಡ ಮನೆಯಿಂದ ಹೊರ ನಡೆದಿದ್ದಾರೆ. ಮುಂದಿನ ದಿನಗಳಲ್ಲಿ ನಟಿ ಸ್ಫೂರ್ತಿ ಗೌಡ ಚಿತ್ರರಂಗದಲ್ಲಿ ಹೇಗೆ ಕಮಾಲ್ ಮಾಡುತ್ತಾರೆ ‌ಎಂಬುದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ಕೈ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ ಸ್ಪರ್ಧಿಗಳು: ದೊಡ್ಮನೆ ವಾಸ್ತು ಬಗ್ಗೆ ನೆಟ್ಟಿಗರು ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ಈ ವಾರ ಅಕ್ಷತಾ ಕುಕ್ಕಿ ಅಥವಾ ಸ್ಪೂರ್ತಿ ಗೌಡ ಔಟ್?

    ಬಿಗ್ ಬಾಸ್ ಮನೆಯಿಂದ ಈ ವಾರ ಅಕ್ಷತಾ ಕುಕ್ಕಿ ಅಥವಾ ಸ್ಪೂರ್ತಿ ಗೌಡ ಔಟ್?

    ಬಿಗ್ ಬಾಸ್ ಮನೆಯಲ್ಲಿ ಯಾರು ಇರುತ್ತಾರೋ, ಯಾರು ಹೊರ ಬರುತ್ತಾರೋ ಸ್ವತಃ ಈ ಶೋ ನಡೆಸುವ ಸುದೀಪ್ ಅವರಿಗೂ ಗೊತ್ತಿರುವುದಿಲ್ಲ. ಬಿಗ್ ಬಾಸ್ ಆಟ ಬಲ್ಲವರಾರು ಎನ್ನುವ ಹೊಸ ಗಾದೆಯೇ ಇದೆ. ಆದರೆ, ಈ ವಾರ ದೊಡ್ಮನೆಯಿಂದ ಅಕ್ಷತಾ ಕುಕ್ಕಿ ಅಥವಾ ಸ್ಪೂರ್ತಿ ಗೌಡ ಹೊರ ಹೋಗುವ ಸಾಧ್ಯತೆಗಳೇ ಹೆಚ್ಚಿವೆ. ವಾರ ಪೂರ್ತಿ ಈ ಸ್ಪರ್ಧಿಗಳು ಮನೆಯಲ್ಲಿರಲು ಏನೆಲ್ಲ ಮಾಡಬೇಕಿತ್ತು, ಅದನ್ನು ಬಿಟ್ಟು ಬೇರೆಲ್ಲ ಮಾಡಿದ್ದಾರೆ. ಹಾಗಾಗಿ ಈ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ.

    ಅಕ್ಷತಾ ಕುಕ್ಕಿ ಹೇಳಿಕೊಳ್ಳುವಂತ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ಆಡುತ್ತಿಲ್ಲ. ಇರುವ ಸಹ ಸ್ಪರ್ಧಿಗಳೊಂದಿಗೆ ಅವರ ಒಡನಾಟವೂ ಅಷ್ಟಕಷ್ಟೇ. ಮನರಂಜನೆ ನೀಡುವಂತಹ ಚಟುವಟಿಕೆಗಳನ್ನೂ ಅವರಿಂದ ನಿರೀಕ್ಷಿಸುವಂತಿಲ್ಲ. ಹಾಗಾಗಿ ಅಕ್ಷತಾ ಕುಕ್ಕಿ ಮೇಲೆ ಎಲಿಮಿನೇಟ್ ತೂಗುಕತ್ತಿ ತೂಗುತ್ತಿದೆ. ಅಲ್ಲದೇ, ಸತತವಾಗಿ ಎರಡು ವಾರಗಳಿಂದ ನಾಮಿನೇಟ್ ಕೂಡ ಆಗಿದ್ದಾರೆ. ಈ ಕಾರಣದಿಂದಾಗಿ ಅಕ್ಷತಾ ಈ ವಾರ ಮನೆಯಿಂದ ಆಚೆ ಬರಬಹುದು. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಕಳೆದ ವಾರದಲ್ಲಿ ಸ್ಪೂರ್ತಿ ಗೌಡ, ರಾಕೇಶ್ ಮತ್ತು ಸಾನ್ಯ ಐಯ್ಯರ್ ನಡುವಿನ ತ್ರಿಕೋನ ಲವ್ ಸ್ಟೋರಿ ನೋಡುಗರಿಗೆ ಮನರಂಜನೆ ನೀಡಿತ್ತು. ಆದರೆ ಈ ವಾರ ಸಪ್ಪೆ ಅನಿಸಿದ್ದಾರೆ ಸ್ಪೂರ್ತಿ ಗೌಡ. ಸರಿಯಾದ ರೀತಿಯಲ್ಲಿ ಆಟವಾಡಲು ತಮಗೆ ಅವಕಾಶ ಸಿಗುತ್ತಿಲ್ಲ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರೂ, ಸಿಕ್ಕಿರುವ ಅವಕಾಶವನ್ನು ಅವರು ಸದುಪಯೋಗ ಪಡೆಸಿಕೊಳ್ಳುತ್ತಿಲ್ಲ. ಮತ್ತು ಚೆಂದಾಗಿ ನಡೆಯುವ ಆಟವನ್ನೂ ಹಾಳುಗೆಡವುತ್ತಾರೆ ಅನ್ನುವ ಆರೋಪ ಅವರ ಮೇಲಿದೆ. ಹೀಗಾಗಿ ಸ್ಪೂರ್ತಿ ಗೌಡ ಕೂಡ ಮನೆಯಿಂದ ಆಚೆ ಬರಬಹುದು ಎಂದು ಅಂದಾಜಿಸಲಾಗಿದೆ.

    ಈ ವಾರ ನಾಮಿನೇಟ್ ಆದವರು ಲಿಸ್ಟ್ ನಲ್ಲಿ ಜಯಶ್ರೀ ಆರಾಧ್ಯ, ಸೋಮಣ್ಣ, ಸಾನ್ಯ ಐಯ್ಯರ್, ರಾಕೇಶ್ ಅಡಿಗ, ನಂದು ಇದ್ದರೂ, ಇವರು ನಾನಾ ಕಾರಣಗಳಿಂದಾಗಿ ಮನೆಯಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಸ್ಪೂರ್ತಿ ಗೌಡ ಮತ್ತು ಅಕ್ಷತಾ ಕುಕ್ಕಿಗೆ ಹೋಲಿಸಿದರೆ, ಇವರು ಜನರನ್ನು ರಂಜಿಸುವಲ್ಲಿ ಮೇಲಿದ್ದಾರೆ. ಹೀಗಾಗಿಯೇ ಈ ವಾರದ ಕಿಚ್ಚನ ಪಂಚಾಯತಿ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಎಲಿಮಿನೇಟ್ ಮುನ್ನ ಕಿಚ್ಚನಿಂದ ಕಿಶನ್‍ಗೆ ಕ್ಲಾಸ್

    ಎಲಿಮಿನೇಟ್ ಮುನ್ನ ಕಿಚ್ಚನಿಂದ ಕಿಶನ್‍ಗೆ ಕ್ಲಾಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಆದರೆ ಕಿಶನ್ ಎಲಿಮಿನೇಟ್ ಆಗುವ ಮುನ್ನ ಸುದೀಪ್ ಕ್ಲಾಸ್ ತೆಗೆದುಕೊಂಡರು.

    ಕಿಶನ್ ಬಿಗ್‍ಬಾಸ್ ಮನೆಗೆ ಬಂದಾಗಿನಿಂದ ತಮಾಷೆ ಮಾಡಿಕೊಂಡು, ಹುಡುಗಿಯರಿಗೆ ಮುತ್ತು ಕೊಟ್ಟುಕೊಂಡು ಚೆನ್ನಾಗಿ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೇ ಈ ವಾರ ಉತ್ತಮವಾಗಿ ಆಟವಾಡಿ ಗೋಲ್ಡ್ ಮೆಡಲ್ ಕೂಡ ಪಡೆದುಕೊಂಡಿದ್ದರು. ಆದರೆ ಅನಿರೀಕ್ಷಿತವಾಗಿ ಈ ವಾರ ಕಿಶನ್ ಮನೆಯಿಂದ ಹೊರ ಬಂದಿದ್ದಾರೆ. ಎಲಿಮಿನೇಟ್ ಆಗುವ ಮುನ್ನ ಕಿಶನ್‍ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.

    ಈ ವಾರ ಕಿಶನ್ ಆಟವಾಡುವಾಗ ಜೋರಾಗಿ ಭೂಮಿಯನ್ನು ತಳ್ಳಿದ್ದರು. ಇದರಿಂದ ಭೂಮಿ ಕಾಲಿಗೆ ಪೆಟ್ಟಾಯಿತು. ಆದರೆ ಕೂದಲೆಳೆ ಅಂತರದಲ್ಲಿ ಭೂಮಿ ದೊಡ್ಡ ಅಪಾಯದಿಂದ ಪಾರಾಗಿದ್ದರು. ಈ ಬಗ್ಗೆ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ಗೆಲ್ಲುವುದಕ್ಕೆ ಏನ್ ಬೇಕೋ ಅದನ್ನು ಮಾಡಿ. ಆಟವಾಡೋದಕ್ಕೆ ಅಂತಾ ಅಷ್ಟು ದೊಡ್ಡ ಬೌಂಡರಿ ಕೊಟ್ಟಿದ್ದರು. ಆದರೆ ನೀವು ತಳ್ಳಿದ್ದು ತಪ್ಪು. ಈ ರೀತಿ ಆಟವಾಡಿದರೆ ನಾವು ಬೇರೆ ಯಾವ ರೀತಿಯ ಗೇಮ್ ಕೊಡಬೇಕು ಎಂದು ಯೋಚನೆ ಮಾಡಬೇಕಾಗುತ್ತದೆ.

    ಟಾಸ್ಕ್ ಆಡುವಾಗ ಅಗ್ರೆಷನ್ ಬೇಕೆಬೇಕು. ಆದರೆ ನಿಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಹಂತಕ್ಕೆ ಬೇಡ ಎಂದು ಕಿಶನ್‍ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆಗ ಕಿಶನ್ ಕ್ಷಮೆ ಕೇಳಿದ್ದಾರೆ. ಅದಕ್ಕೆ ತಪ್ಪು ಮಾಡಿದರೆ ಮಾತ್ರ ಕಲಿಯಬಹುದು. ಆದರೆ ಮಾಡಿದ ತಪ್ಪನ್ನೇ ರಿಪೀಟ್ ಮಾಡಬೇಡಿ, ಹೊಸ ತಪ್ಪು ಮಾಡಿ. ಆದರೆ ನೀವು ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದೀರಾ ಎಂದು ಸುದೀಪ್ ಕಿಶನ್‍ಗೆ ಕ್ಲಾಸ್ ತೆಗೆದುಕೊಂಡರು.

  • ಡಬಲ್ ಎಲಿಮಿನೇಟ್ -ಗಳಗಳನೇ ಅತ್ತ ಪ್ರಿಯಾಂಕಾ, ಭೂಮಿ

    ಡಬಲ್ ಎಲಿಮಿನೇಟ್ -ಗಳಗಳನೇ ಅತ್ತ ಪ್ರಿಯಾಂಕಾ, ಭೂಮಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ 90 ದಿನಗಳನ್ನು ಮುಗಿಸಿದೆ. ಈ ಕಾರ್ಯಕ್ರಮ ಮುಗಿಯಲು ಇನ್ನೂ ಕೆಲವು ದಿನಗಳು ಇರುವಾಗಲೇ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಡಬಲ್ ಎಲಿಮಿನೇಟ್ ಆಗಿದ್ದಾರೆ.

    ಹೌದು.ಭಾನುವಾರ ನಟ ಸುದೀಪ್ ಅವರು ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿ ಇಬ್ಬರನ್ನು ಎಲಿಮಿನೇಟ್ ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ಮುಂದಿನ ವಾರ ಡಬಲ್ ಎಲಿಮಿನೇಷನ್ ಇದೆ. ಹೀಗಾಗಿ ಈ ವಾರ ಎಲಿಮಿನೇಟ್ ಇರಲಿಲ್ಲ. ಈ ವಿಚಾರ ಮನೆಯ ಸದಸ್ಯರಿಗೆ ಗೊತ್ತಿರಲಿಲ್ಲ. ಹೀಗಾಗಿ ಮನೆಯವರ ಮನಸ್ಥಿತಿ ತಿಳಿದುಕೊಳ್ಳಲು ನಾಮಿನೇಟ್ ಪ್ರಕ್ರಿಯೆ ಮಾಡಲಾಗಿತ್ತು.

    ಅದರ ಅನುಸಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಈ ನಾಲ್ವರಲ್ಲಿ ಭಾನುವಾರ ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿಯನ್ನು ಸುದೀಪ್ ಎಲಿಮಿನೇಟ್ ಮಾಡಿದ್ದಾರೆ.

    ಇವರಲ್ಲಿ ದೀಪಿಕಾ ದಾಸ್ ಅವರನ್ನು ಸೇಫ್ ಎಂದು ಸುದೀಪ್ ಹೇಳಿದರು. ಉಳಿದ ಮೂವರಲ್ಲಿ ಇಂದು ಇಬ್ಬರು ಎಲಿಮಿನೇಟ್ ಆಗುತ್ತಾರೆ. ಭೂಮಿ ಶೆಟ್ಟಿ ಈ ವಾರ ಮೊದಲು ಎಲಿಮಿನೇಟ್ ಆಗುತ್ತಿರುವವರು ಎಂದು ಹೇಳಿದರು. ಇಂದು ಯಾರೇ ಎಲಿಮಿನೇಟ್ ಆದರೂ ವೇದಿಕೆಯ ಮೇಲೆ ಬರಲ್ಲ ಎಂದು ಇಷ್ಟು ದಿನ ಬಿಗ್‍ಬಾಸ್ ಮನೆಯಲ್ಲಿ ಕಳೆದ ಭೂಮಿ ಶೆಟ್ಟಿಯ ಜರ್ನಿಯ ವಿಡಿಯೋವನ್ನು ಪ್ಲೇ ಮಾಡಿದರು.

    ವಿಡಿಯೋ ನೋಡಿದ ಭೂಮಿ, ಮನೆಯಿಂದ ಹೊರ ಹೋಗಲು ತುಂಬಾ ನೋವಾಗುತ್ತಿದೆ. ಬಿಗ್‍ಬಾಸ್ ವಾಯ್ಸ್, ಮನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅದ್ಭುತವಾದ ಅನುಭವ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಾರೆ. ಖುಷಿಯಿಂದ ಹೋಗುತ್ತೇನೆ ಎಂದು ಗಳಗಳನೇ ಅತ್ತಿದ್ದಾರೆ.

    ಮನೆಯಿಂದ ಹೊರ ಹೋಗುತ್ತಿರುವ ಎರಡನೇ ಸ್ಪರ್ಧಿ ಪ್ರಿಯಾಂಕಾ ಎಂದು ಸುದೀಪ್ ಹೇಳಿದರು. ಬಳಿಕ ಪ್ರಿಯಾಂಕಾ ಅವರ ಬಿಗ್‍ಬಾಸ್ ಜರ್ನಿಯ ವಿಡಿಯೋ ಪ್ಲೇ ಮಾಡಿದರು.

    ವಿಡಿಯೋ ನೋಡಿ ಮಾತನಾಡಿದ ಪ್ರಿಯಾಂಕಾ, ನಿಮ್ಮ ಜೊತೆ ಮಾತನಾಡೋಕೆ ಆಗುತ್ತಿಲ್ಲ ಎಂದು ತುಂಬಾ ನೋವಾಗುತ್ತಿದೆ. ನಾನು ಅತ್ತಾಗ ಮನೆಯ ಎಲ್ಲರೂ ಸಮಾಧಾನ ಮಾಡಿದ್ದಾರೆ. ಹೀಗಾಗಿ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಮನೆಯವರ ಬಳಿ ಕ್ಷಮೆ ಕೇಳಿದರು. ನಂತರ ನನಗೆ ತಿಳಿದ ಹಾಗೆ ಆಟವಾಡಿದ್ದೇನೆ ತಪ್ಪಾಗಿದ್ದರೆ ಸಾರಿ ಸರ್ ಎಂದು ಸುದೀಪ್ ಬಳಿಯೂ ಕ್ಷಮೆ ಕೇಳಿ ಕಣ್ಣೀರು ಹಾಕಿದ್ದಾರೆ.

    ಕೊನೆಯ ಕ್ಷಣದಲ್ಲಿ ಸುದೀಪ್ ಇಬ್ಬರಿಗೂ ಸರ್ಪ್ರೈಸ್ ಕೊಟ್ಟಿದ್ದಾರೆ. ನೀವಿಬ್ಬರು ಮನೆಯಿಂದ ಹೊರಗೆ ಬರದೆ ಮನೆಯಲ್ಲಿಯೇ ಇರಿ. ಮುಂದಿನ ಶನಿವಾರ ಮತ್ತೆ ಸಿಗೋಣ ಎಂದು ಹೇಳಿ ಸುದೀಪ್ ಹೋಗಿದ್ದಾರೆ. ಇದನ್ನು ಕೇಳಿದ ತಕ್ಷಣ ಪ್ರಿಯಾಂಕಾ ಮತ್ತು ಭೂಮಿ ಒಂದು ಕ್ಷಣ ಅಚ್ಚರಿ ಪಟ್ಟಿದ್ದಾರೆ. ನಂತರ ಮನೆಯ ಎಲ್ಲಾ ಸ್ಪರ್ಧಿಗಳು ಅವರಿಬ್ಬರನ್ನು ಅಪ್ಪಿಕೊಂಡು ಸಂತಸಪಟ್ಟಿದ್ದಾರೆ.

  • ಶೈನ್-ವಾಸುಕಿ ಸ್ನೇಹವೇ ಚಂದನಾಗೆ ಮುಳುವಾಯ್ತಾ

    ಶೈನ್-ವಾಸುಕಿ ಸ್ನೇಹವೇ ಚಂದನಾಗೆ ಮುಳುವಾಯ್ತಾ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ 12ನೇ ವಾರ ಬಿಗ್ ಮನೆಯಿಂದ ಚಂದನಾ ಅವರು ಎಲಿಮಿನೇಟ್ ಆಗಿದ್ದಾರೆ. ಇದನ್ನೂ ಓದಿ: ಸಾವಿನ ಸುದ್ದಿ ತಿಳಿಸಿದ ಬಿಗ್‍ಬಾಸ್- ಬಿಕ್ಕಿ, ಬಿಕ್ಕಿ ಅತ್ತ ವಾಸುಕಿ

    84 ದಿನಗಳ ಕಾಲ ಬಿಗ್ ಮನೆಯಲ್ಲಿದ್ದು ಅಭಿಮಾನಿಗಳನ್ನು ರಂಜಿಸಿದ್ದ ಚಂದನಾ ಈಗ ಬಿಗ್ ಮನೆಯ ಆಟ ಮುಗಿಸಿ ಮನೆಯಿಂದ ಹೊರಬಂದಿದ್ದಾರೆ. ಬಿಗ್‍ಬಾಸ್ ಪ್ರಾರಂಭವಾದ ಮೊದಲ ದಿನದಿಂದನೂ ಚಂದನಾ ಸ್ಟ್ರಾಂಗ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಜೊತೆ ಚಂದನಾ ಉತ್ತಮ ಸ್ನೇಹ ಹೊಂದಿದ್ದರು. ಇದೀಗ ಆ ಸ್ನೇಹವೇ ಚಂದನಾ ಅವರಿಗೆ ಮುಳುವಾಯ್ತು ಅನ್ನಿಸುತ್ತದೆ.  ಇದನ್ನೂ ಓದಿ: ಶೈನ್‍ಗೆ ವಾರ್ನಿಂಗ್ ಕೊಟ್ಟ ಸುದೀಪ್

    ಬಿಗ್‍ಬಾಸ್ ಶುರುವಾದಗಿನಿಂದ ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಹೆಸರನ್ನೇ ತೆಗೆದುಕೊಳ್ಳುತ್ತಿದ್ದರು. ಇದು ಮನೆಯ ಇತರೆ ಸದಸ್ಯರಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಸ್ಪರ್ಧಿಗಳು ಚಂದನಾ ಪ್ರತಿಯೊಂದಕ್ಕೂ ಶೈನ್ ಮತ್ತು ವಾಸುಕಿ ಮೇಲೆ ಅವಲಂಬಿತರಾಗಿದ್ದಾರೆ ಎಂದು ನಾಮಿನೇಟ್ ಮಾಡಿದ್ದರು. ಅಲ್ಲದೇ ಚಂದನಾ ಅವರು ವಾಸುಕಿ ಹಾಗೂ ಶೈನ್ ಶೆಟ್ಟಿಯನ್ನು ನಾಮಿನೇಟ್ ಮಾಡಲೂ ಹಿಂಜರಿಯುತ್ತಿದ್ದರು.

    ವಾಸುಕಿ ಮತ್ತು ಶೈನ್ ಮಾತ್ರ ಯಾವುದೇ ಮುಲಾಜಿಲ್ಲದೆ ಚಂದನಾರನ್ನು ನಾಮಿನೇಟ್ ಮಾಡುತ್ತಿದ್ದರು. ಆದರೆ ಇದ್ಯಾವುದೂ ಚಂದನಾರ ಗಮನಕ್ಕೆ ಬರಲೇ ಇಲ್ಲ. ಅತಿಯಾಗಿ ಅವರಿಬ್ಬರನ್ನೂ ನೆಚ್ಚಿಕೊಂಡಿದ್ದೇ ಅವರ ಪಾಲಿಗೆ ಮುಳುವಾಯ್ತು ಅನ್ನಿಸುತ್ತದೆ. ಇತ್ತ ಮನೆಯಲ್ಲಿ ಚಂದನಾ ಅವರಿಗಾಗಿ ಆಡಲಿಲ್ಲ, ಬೇರೆಯವರನ್ನು ಉಳಿಸಲು ಆಡಿದರು ಎಂದು ಚಂದನಾ ಅಕ್ಕ ಸಹ ಹೇಳಿದ್ದಾರೆ.

  • ಬಿಗ್ ಮನೆಯಿಂದ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್..!

    ಬಿಗ್ ಮನೆಯಿಂದ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್..!

    ಬೆಂಗಳೂರು: ಬಿಗ್‍ಬಾಸ್ ಸೀಸನ್ 6 ರಲ್ಲಿ ಒಬ್ಬೊಬ್ಬರಂತೆ ಪ್ರತಿವಾರ ಬಿಗ್ ಮನೆಯಿಂದ ಎಲಿಮಿನೆಟ್ ಮೂಲಕ ಹೊರ ಹೋಗುತ್ತಿದ್ದಾರೆ. ಆದರೆ ಈ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮೆನೆಟ್ ಆಗಿದ್ದಾರೆ.

    ಸ್ಪರ್ಧಿ ಮುರಳಿ ಮತ್ತು ಜೀವಿತಾ ಇಬ್ಬರು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೆಟ್ ಮೂಲಕ ಹೊರ ಬಂದಿದ್ದಾರೆ. ಒಟ್ಟು ಬಿಗ್ ಮನೆಯಲ್ಲಿ 10 ಮಂದಿ ಸ್ಪರ್ಧಿಗಳು ಇದ್ದರು. ಈ ವಾರದಲ್ಲಿ ಸ್ಪರ್ಧಿ ನವೀನ್, ಶಶಿ, ಕವಿತಾ, ಆ್ಯಂಡಿ, ರಾಕೇಶ್, ರಶ್ಮಿ, ಅಕ್ಷತಾ ಮತ್ತು ಧನ್‍ರಾಜ್ ಸೇವ್ ಆಗಿದ್ದಾರೆ. ಕೊನೆಯಲ್ಲಿ ಉಳಿದಿದ್ದ ಜೀವಿತಾ ಮತ್ತು ಮುರಳಿ ಅವರು ಎಮಿಲಿನೆಟ್ ಆಗಿದ್ದು, ಬಿಗ್ ಮನೆಯಿಂದ ಹೊರ ಬಂದಿದ್ದಾರೆ.

    ಸ್ಪರ್ಧಿ ಮುರಳಿ ಅವರು ಬಿಗ್ ಬಾಸ್ ಆರಂಭದ ದಿನದಿಂದಲೂ ತುಂಬಾ ಚೆನ್ನಾಗಿ ಆಟವಾಡಿಕೊಂಡು ಬರುತ್ತಿದ್ದರು. ಆದರೆ ಜೀವಿತಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಕೆಲವು ವಾರಗಳಿಂದಷ್ಟೇ ಬಿಗ್ ಮನೆಯಲ್ಲಿ ಇದ್ದರು. ಆದರೆ ಇಬ್ಬರು ಒಟ್ಟಿಗೆ ಒಂದೇ ವಾರ ಎಲಿಮಿನೆಟ್ ಆಗಿದ್ದಾರೆ.

    ಈ ವಾರ ಇಬ್ಬರು ಎಲಿಮಿನೆಟ್ ಆಗುತ್ತಾರೆ ಎಂಬುದು ಬಿಗ್ ಬಾಸ್ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಆದರೆ ಮುರಳಿ ಅವರು ಎಲಿಮೆನೆಟ್ ಆಗಿದ್ದಕ್ಕೆ ಮನೆಯಲ್ಲಿ ಉಳಿದ ಸ್ಪರ್ಧಿಗಳು ಅವರನ್ನು ಕಳುಹಿಸುವಾಗ ಕಣ್ಣೀರು ಹಾಕಿದ್ದಾರೆ. ಬಿಗ್‍ಬಾಸ್ ರಿಲಿಯಾಟಿ ಶೋನಲ್ಲಿ ವಾರದ ಕೊನೆಯಲ್ಲಿ ಅಂದರೆ ಶನಿವಾರ ಪ್ರೇಕ್ಷಕರು ಕೊಟ್ಟಿದ್ದ ವೋಟಿನ ಆಧಾರದ ಮೇರೆಗೆ ಸ್ಪರ್ಧಿಗಳನ್ನು ಎಲಿಮಿನೆಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv