ನಾನಾ ಕಾರಣಗಳಿಂದಾಗಿ ಹಿಂದಿ ಬಿಗ್ ಬಾಸ್ (Bigg Boss Hindi) ಸಾಕಷ್ಟು ಕುತೂಹಲ ಮೂಡಿಸಿತ್ತು. ಅಷ್ಟೇ ಅಲ್ಲದೇ ಸಾಕಷ್ಟು ಚರ್ಚೆಗಳನ್ನೂ ಅದು ಹುಟ್ಟು ಹಾಕಿತ್ತು. ಅದರಲ್ಲೂ ನಟ ವಿಕ್ಕಿ ಜೈನ್ (Vicky Jain), ತನ್ನ ಪತ್ನಿ ಹಾಗೂ ನಟಿ ಅಂಕಿತಾ ಲೋಖಂಡೆ ಜೊತೆ ಬಿಗ್ ಬಾಸ್ ಮನೆಗೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದರು. ಈಗ ಬಿಗ್ ಬಾಸ್ ವಿಕ್ಕಿಗೆ ಬಿಗ್ ಶಾಕ್ ನೀಡಿದ್ದಾರೆ.
ಹೌದು, ಹಿಂದಿ ಬಾಲಿವುಡ್ ಕೂಡ ಫಿನಾಲೆ ಹಂತ ತಲುಪಿದೆ. ನೂರು ದಿನಗಳು ಕಳೆದಿವೆ. ಅಂಕಿತಾ ಮತ್ತು ವಿಕ್ಕಿ ಇಬ್ಬರೂ ಫಿನಾಲೆ ವೇದಿಕೆಯ ಮೇಲೆ ಇರಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಕೋರಿಕೆ ಆಗಿತ್ತು. ಆದರೆ, ಬಿಗ್ ಬಾಸ್ ಆ ಕೋರಿಯನ್ನು ಈಡೇರಿಸಿಲ್ಲ. ಮಿಡ್ ವೀಕ್ ಎಲಿಮಿನೇಷನ್ (Eliminate) ನಡೆಸಿ ವಿಕ್ಕಿಯನ್ನು ಹೊರಗೆ ಕಳುಹಿಸಲಾಗಿದೆ. ಪತಿ ಬಿಗ್ ಬಾಸ್ ಮನೆಯನ್ನು ಬಿಟ್ಟು ಹೋಗುವುದನ್ನು ನೋಡಿ ಅಂಕಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮದುವೆ ಬಗ್ಗೆ ವಿಷಾದ
ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ ವಿಚಿತ್ರ ಮನಸ್ಥಿತಿಯ ಕಾರಣದಿಂದಾಗಿ ಹೆಚ್ಚು ಸುದ್ದಿ ಆದವರು. ಈ ಹಿಂದೆ ತನ್ನ ಪತಿ ಬಿಗ್ ಬಾಸ್ ಸ್ಪರ್ಧಿ ಮನ್ನಾರಾ ಚೋಪ್ರಾ ಜೊತೆ ಕ್ಲೋಸ್ ಆಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪತಿ ವಿಕ್ಕಿ ಮೇಲೆ ಕೋಪಗೊಂಡಿದ್ದರು. ಆತನನ್ನು ಮದುವೆ ಆಗಿದ್ದಕ್ಕೆ ಕಣ್ಣೀರು ಇಟ್ಟಿದ್ದರು. ಜೊತೆಗೆ ವಿಷಾದವನ್ನೂ ವ್ಯಕ್ತ ಪಡಿಸಿದ್ದರು. ಆಕೆ ನಿನ್ನ ಜೀವನದಲ್ಲಿ ಬಂದಳು. ನೀನು ಇಷ್ಟ ಪಡ್ತಿದ್ದೀಯಾ ಎಂದು ಮಾತನಾಡಿ ಪತಿಗೆ ಶಾಕ್ ನೀಡಿದ್ದರು.
ಬಿಗ್ ಬಾಸ್ (Bigg Boss) ಮನೆಯಲ್ಲಿ ವಿಕ್ಕಿ ಮತ್ತು ಅಂಕಿತಾ ನಡೆಯನ್ನೇ ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಒಂದೇ ಬ್ಲ್ಯಾಂಕೆಟ್ ಹೊದ್ದುಕೊಂಡು ಈ ಜೋಡಿ ಮಲಗಿತ್ತು. ಅದು ರಾತ್ರಿ ವೇಳೆ ಸುಮ್ಮನೆ ಮಲಗಿಲ್ಲ, ಬ್ಲ್ಯಾಂಕೆಟ್ ಒಳಗೆ ಚಲಿಸಿದ್ದರು. ಬ್ಲ್ಯಾಂಕೆಟ್ ಅಸ್ತವ್ಯಸ್ತಗೊಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.
ಇದೇ ಜೋಡಿ ಕೆಲವು ದಿನಗಳ ಹಿಂದೆ ಇದೇ ಬಿಗ್ ಬಾಸ್ ಮನೆಯಲ್ಲಿ ಡಿವೋರ್ಸ್ (Divorce) ಕುರಿತಂತೆ ಮಾತನಾಡಿದ್ದರು. ಈ ನಡೆಯೂ ಅಚ್ಚರಿಗೆ ಕಾರಣವಾಗಿತ್ತು. ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದರು. ಈಗ ಎಲಿಮಿನೇಷನ್ ಕಾರಣದಿಂದಾಗಿ ಗಂಡ ಹೆಂಡತಿ ದೂರವಾಗಿದ್ದಾರೆ. ಪತಿ ಮನೆಗೆ ಹೋಗಿದ್ದರೆ, ಅಂಕಿತಾ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಬಿಗ್ಬಾಸ್ (Bigg Boss Kannada) ಕನ್ನಡ ಹತ್ತನೇ ಸೀಸನ್ ಫೈನಲ್ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಇದೆ. ಈ ಹಂತದಲ್ಲಿ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನಾಮಿನೇಷನ್ ಚಟುವಟಿಕೆ ನಡೆದಿದೆ. ಅದರ ಝಲಕ್ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. ಎಲ್ಲ ಸ್ಪರ್ಧಿಗಳ ಎದೆಯ ಮೇಲೆ ಹೃದಯಾಕಾರದ ಬೋರ್ಡ್ ಅನ್ನು ನೇತುಹಾಕಲಾಗಿದೆ. ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಿದ್ದ ಬೋರ್ಡ್‌ಗೆ ಚೂರಿ ಹಾಕಬೇಕು.
ಈ ಚಟುವಟಿಕೆಯಲ್ಲಿ ಕಾರ್ತಿಕ್ ಅವರು ವರ್ತೂರು ಸಂತೋಷ್ ಮತ್ತು ತನಿಷಾ ಅವರ ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ಪ್ರೇಕ್ಷಕರಲ್ಲಿ ನಿಜಕ್ಕೂ ಇದು ಸಖತ್ ಬೇಸರ ತರಿಸಿದೆ. ವರ್ತೂರು (Varthur) ಮತ್ತು ತನಿಷಾ (Tanisha) ಅವರನ್ನು ಲವ್ ಬರ್ಡ್ಸ್ ಎಂದು ಕರೆಯಲಾಗಿತ್ತು. ಅದೆಷ್ಟೋ ಬಾರಿ ತಮ್ಮ ತೊಡೆಯ ಮೇಲೆ ತನಿಷಾರನ್ನು ಮಲಗಿಸಿಕೊಂಡು ಪ್ರೀತಿ ತೋರಿದ್ದಾರೆ ವರ್ತೂರು. ತನಿಷಾ ಕೂಡ ವರ್ತೂರು ಮೇಲೆ ಅಷ್ಟೇ ಇಷ್ಟ ಪಟ್ಟಿದ್ದಾರೆ. ಆದರೆ, ನಾಮಿನೇಷನ್ ಟಾಸ್ಕ್ ನಲ್ಲಿ ಮಾತ್ರ ಇಬ್ಬರೂ ದುಷ್ಮನ್ ರೀತಿಯಲ್ಲಿ ಕಂಡಿದ್ದಾರೆ.
ಮತ್ತೊಂದು ಕಡೆ ತನಿಷಾ ಅವರು ತಮ್ಮ ಸರದಿ ಬಂದಾಗ, ವರ್ತೂರು ಸಂತೋಷ್ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ವರ್ತೂರು ಮೇಲಿನ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಕಾಣಿಸಿಕೊಂಡಿದೆ. ಅವರಿಬ್ಬರೂ ಪರಸ್ಪರ ಚೂರಿ ಹಾಕಿಕೊಂಡಿದ್ದಾರೆ. ಈ ಮೂಲಕ ನಾವಿಬ್ಬರೂ ಬದ್ಧ ವೈರಿಗಳು ಎನ್ನುವುದನ್ನು ಮತ್ತೆ ಸಾರಿದ್ದಾರೆ.
ಒಟ್ಟಾರೆ ಈ ವಾರ ನಾಮಿನೇಟ್ ಆಗುವ ಸ್ಪರ್ಧಿಗಳು ಯಾರು ಯಾರು? ಅವರಲ್ಲಿ ಯಾರು ಸೇವ್ ಆಗಲಿದ್ದಾರೆ? ಯಾರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೂ ಕಾಯಲೇಬೇಕು. ಆದರೆ, ಟಾಸ್ಕ್ ನಲ್ಲಿ ಮಾತ್ರ ಬೆಂಕಿ, ಬಿರುಗಾಳಿ ಎರಡೂ ಕಾಣಿಸಿಕೊಂಡಿವೆ. ಬೆಳ್ಳಂ ಬೆಳಗ್ಗೆ ಬಿಗ್ ಬಾಸ್ ಮನೆ ಬಿಸಿಯಾಗಿದೆ. ಇದರಲ್ಲಿ ಯಾರೆಲ್ಲ ಬೆಂದು ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.
ಬಿಗ್ ಬಾಸ್ (Bigg Boss Kannada) ಮನೆ ಮತ್ತೊಂದು ವಾರಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಎಂದಿನಂತೆ ನಾಮಿನೇಟ್ ಪ್ರಕ್ರಿಯೆ ಕೂಡ ಆಗಿ ಹೋಗಿದೆ. ಅಚ್ಚರಿಯ ಸಂಗತಿ ಅಂದರೆ, ಈ ವಾರ ನಾಮಿನೇಟ್ ಆದವರಲ್ಲಿ ಅಷ್ಟೂ ಜನರು ಹುಡುಗರೇ ಇದ್ದಾರೆ. ಸಂಗೀತಾ, ನಮ್ರತಾ, ತನಿಷಾ ಈ ವಾರ ಸೇಫ್ ಆಗಿದ್ದಾರೆ. ಸಹಜವಾಗಿಯೇ ವರ್ತೂರು ಸಂತೋಷ್, ಮೈಕಲ್ (Michael), ಕಾರ್ತಿಕ್, ಡ್ರೋನ್ ಪ್ರತಾಪ್ (Drone Pratap) ಮತ್ತು ತುಕಾಲಿ ಸಂತು (Tukali Santu) ನಾಮಿನೇಟ್ ಆಗಿದ್ದಾರೆ. ಸೇಫ್ ಆದವರಲ್ಲಿ ವಿನಯ್ ಪ್ರಮುಖರು.
ಪ್ರತಿ ಸಲವೂ ನಡೆಯುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ಐವರ ಹೆಸರು ಇದ್ದೇ ಇರುತ್ತದೆ. ಅದರಲ್ಲೂ ಕೊನೆ ಗಳಿಗೆಯಲ್ಲಿ ಹೇಗೋ ಮೈಕಲ್ ಉಳಿದುಕೊಂಡು ಬಿಡುತ್ತಾರೆ. ಆದರೆ, ಈ ವಾರ ಮೈಕಲ್ ಉಳಿದುಕೊಳ್ಳೋದು ಕಷ್ಟವೆಂದೇ ಹೇಳಲಾಗುತ್ತಿದೆ. ವರ್ತೂರು ಸಂತೋಷ್ ಈ ಬಾರಿ ಭರ್ಜರಿ ಮನರಂಜನೆ ನೀಡಿದ್ದಾರೆ. ಹಾಗಾಗಿ ಸೇಫ್ ಆಗಬಹುದು. ಡ್ರೋನ್ ಪ್ರತಾಪ್ ಮೇಲೆ ಸಾಕಷ್ಟು ಅನುಕಂಪ ಮೂಡಿದೆ. ಅವರಿಗೆ ಹೆಚ್ಚು ವೋಟು ಬರುವ ಮೂಲಕ ಸೇಫ್ ಆಗಬಹುದು. ಕಾರ್ತಿಕ್ ಸ್ಟ್ರಾಂಗ್ ಕಂಟೆಸ್ಟೆಂಟ್ ಅವರಿಗೆ ಯಾವುದೇ ತೊಂದರೆ ಆಗದು. ಉಳಿದುಕೊಳ್ಳೋದು ತುಕಾಲಿ ಸಂತು. ಮೈಕಲ್ ಗೆ ಹೋಲಿಸಿದರೆ ತುಕಾಲಿ ಬೆಟರ್. ಹಾಗಾಗಿ ಅವರು ಉಳಿದುಕೊಳ್ಳಬಹುದು.
ಸದ್ಯ ಎಲಿಮಿನೇಷನ್ (Eliminate) ತೂಗು ಕತ್ತಿ ತೂಗ್ತಾ ಇರೋದು ಮೈಕಲ್ ಮೇಲೆ. ಈ ವಾರ ಮೈಕಲ್ ಉಳಿದುಕೊಂಡರು ನಿಜಕ್ಕೂ ಅಚ್ಚರಿ. ಈಗಾಗಲೇ ಎರಡು ಬಾರಿ ಅವರು ಎಲಿಮಿನೇಷನ್ ಕತ್ತಿಯಿಂದ ಬಚಾವ್ ಆಗಿದ್ದಾರೆ. ಈ ಬಾರಿ ಮರುಜೀವ ಸಿಗೋದು ಬಹುತೇಕ ಅನುಮಾನ ಎನ್ನುವ ಮಾತು ಹರಿದಾಡುತ್ತಿದೆ. ಹಾಗಂತ ಮೈಕಲ್ ಕಳಪೆ ಏನೂ ಅಲ್ಲ. ಅದ್ಭುತ ಆಟಗಳನ್ನೇ ಆಡುತ್ತಾ ಬಂದಿದ್ದಾರೆ. ಆದರೆ, ಮನೆಯಲ್ಲಿ ಉಳಿದುಕೊಳ್ಳಲು ಬೇಕಾದ ತಂತ್ರಗಳನ್ನು ಅವರು ಅರಿತುಕೊಂಡಿಲ್ಲ.
ಎಂದಿನಂತೆ ಈ ವಾರ ಒಬ್ಬರು ಮನೆಯಿಂದ ಆಚೆ ಬರುತ್ತಾರೆ. ಮತ್ತೊಬ್ಬರು ಬಿಗ್ ಬಾಸ್ ಮನೆಯಲ್ಲಿ ಮೈನಸ್ ಆಗ್ತಾರೆ. ಸಹಜವಾಗಿಯೇ ಕಂಟೆಸ್ಟೆಂಟ್ ಗಳ ಎದೆಯಲ್ಲಿ ನಡುಕ ಶುರುವಾಗತ್ತೆ. ಮತ್ತಷ್ಟು ಧೈರ್ಯ ತಂದುಕೊಂಡು ಆಡಲೇಬೇಕಾದ ಅನಿವಾರ್ಯತೆ ಇರತ್ತೆ. ಮತ್ತೆ ಜಗಳ, ಮತ್ತೊಂದು ವೀಕೆಂಡ್. ಮುಂದಿನ ವಾರ ಯಾರು ಎಲಿಮಿನೇಟ್ ಆಗ್ತಾರೆ ಅಂತ ನೋಡೋಣ.
ಬಿಗ್ ಬಾಸ್ (Bigg Boss Kannada) ಮನೆಯ 64 ದಿನಗಳ ಸುಧೀರ್ಘ ಪ್ರಯಾಣ ಮುಗಿಸಿಕೊಂಡು ಸ್ನೇಹಿತ್ (Snehith)ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸೀಸನ್‌ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ಸ್ನೇಹಿತ್, ಈ ಸೀನನ್ ಕೊನೆಯ ಕ್ಯಾಪ್ಟನ್ ಕೂಡ ಆಗುವ ಸಾಧ್ಯತೆಯನ್ನು ತೆರೆದಿಟ್ಟೇ ಹೋಗಿದ್ದಾರೆ. ಯಾಕೆಂದರೆ ಅವರೇ ಮನೆಯ ಕ್ಯಾಪ್ಟನ್ ರೂಮ್‌ಗೆ ಬೀಗ ಹಾಕಿದ್ದಾರೆ. ಮನೆಯಿಂದ ಹೊರಗೆ ಬಂದಿದ್ದೇ ಸ್ನೇಹಿತ್, JioCinema ಆಪ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಗೇಮ್‌ನಲ್ಲಿನ ಛಲ, ನಮ್ರತಾ ಜೊತೆಗಿನ ಸ್ಮರಣೀಯ ಕ್ಷಣಗಳು, ವಿನಯ್ ಜೊತೆಗಿನ ಸ್ನೇಹ, ಕ್ಯಾಪ್ಟನ್ ಆದಾಗ ಮಾಡಿದ ತಪ್ಪುಗಳು ಎಲ್ಲದರ ಬಗ್ಗೆಯೂ ಸ್ನೇಹಿತ್ ಮನಬಿಚ್ಚಿ ಮಾತಾಡಿದ್ದಾರೆ.
64 ದಿನ ಬಿಗ್‌ಬಾಸ್ ಮನೆಯಲ್ಲಿದ್ದು ಹೊರಗೆ (Eliminate) ಬಂದಿದ್ದೀನಿ. ಒಂದು ಮೊಮೆಂಟ್‌ನಲ್ಲಿಯೂ ನನಗೆ ಪಶ್ಚಾತ್ತಾಪ ಮಾಡ್ತಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಒಂದು ವಾರ ಗೆದ್ದಿರಬಹುದು, ಒಂದು ವಾರ ಸೋತಿರಬಹುದು. ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಈವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು. ನನ್ನ ಇನ್‌ಸ್ಟಿಂಕ್ಟ್ ತುಂಬ ಸ್ಟ್ರಾಂಗ್ ಇದೆ. ಆ ಇನ್‌ಸ್ಟಿಂಕ್ಟ್ ಈವತ್ತು ಎಲ್ಲೋ ಹೊಡಿತಿತ್ತು, ಈವತ್ತೇ ನನ್ನ ಲಾಸ್ಟ್ ಡೇ ಅಂತ. ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಿಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಒಂದಿಷ್ಟು ಜನ ತೊಂದರೆಯನ್ನೂ ಅನುಭವಿಸಿದ್ದಾರೆ. ಆ ಗಿಲ್ಟ್ಕ ನನಗೆ ಕೊನೆಯತನಕ ಕಾಡುತ್ತದೆ. ಅದೊಂದನ್ನು ಬಿಟ್ಟರೆ, ನನ್ನ ಪ್ರಕಾರ ನನ್ನ ಫ್ರೆಂಡ್ಸ್ ಜೊತೆ ಹೇಗಿರ್ತೀನೋ ಹಾಗೇ ಇರ್ತಾ ಇದ್ದೆ. ಅವ್ರಿಗೋಸ್ಕರ ಜೀವಕೊಡಲೂ ಸಿದ್ಧವಾಗ್ತಿದ್ದೆ. ಯಾರು ಆಗಲ್ವೋ ಅವ್ರು ಆಗಲ್ಲ ಅಷ್ಟೆ. ತೀರಾ, ಗೇಮ್‌ಗೋಸ್ಕರ ರಾಜಿ ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರನ್ನು ಅವಾಯ್ಡ್ ಮಾಡ್ತಿದ್ದೆ.
ಕಳೆದ ವಾರ ಬೆಸ್ಟ್ ವಾರ
ನಾನು ಕಳೆದ ವಾರ ಎಲಿಮಿನೇಷನ್‌ನಲ್ಲಿದ್ದ ಕೊನೆಯ ಇಬ್ಬರು ಸ್ಫರ್ಧಿಗಳಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಪ್ರಕಾರ ಆ ವಾರ ನನ್ನ ಬೆಸ್ಟ್ ವಾರ. ಎಷ್ಟು ಟಾಸ್ಕ್ ಗೆದ್ದಿದೀನಿ ಅಂದ್ರೆ, ಮನೆಯಲ್ಲಿ ಸುಮಾರು ಜನ ಇಷ್ಟು ವಾರಗಳಲ್ಲಿಯೂ ಅಷ್ಟೊಂದು ಟಾಸ್ಕ್ ಗೆದ್ದಿಲ್ಲ. ಆದರೆ ಯಾಕೆ ಬಾಟಮ್ ಟು ನಲ್ಲಿದ್ದೆ ಎಂದು ಗೊತ್ತಾಗಿರಲಿಲ್ಲ. ಗೊತ್ತಿಲ್ಲ ನನಗೆ, ನನ್ನ ಭಾಷೆಯೋ ಏನೋ ಒಂದು ಜನರ ಜೊತೆಗೆ ಕನೆಕ್ಟ್ ಆಗಿಲ್ವೇನೋ. ಅದನ್ನು ನಾನು ತಿದ್ದಿಕೊಳ್ಳಲು ಪ್ರಯತ್ನಿಸಿದ್ದೀನಿ. ಆದಷ್ಟೂ ಕನ್ನಡ ಮಾತಾಡಲು ಟ್ರೈ ಮಾಡಿದೀನಿ.
ಇಷ್ಟು ದಿನ ಇದ್ದಿದ್ದೇ ದೊಡ್ಡದು
ನನ್ನ ಪ್ರಕಾರ ನಾನು ಇಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿದ್ದಿದ್ದೇ ದೊಡ್ಡ ವಿಷಯ. ನನಗೆ ಯಾವುದೇ ರೀತಿಯ ಅಧಿಕಾರಿ ನಿಯಮಗಳನ್ನು ಅನುಸರಿಸುವುದು ತುಂಬ ಕಷ್ಟ. ಅಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿದ್ದು, ಅಲ್ಲಿನ ನಿಯಮಗಳನ್ನು ಅನುಸರಿಸಿ ಇದ್ದಿದ್ದೇ ದೊಡ್ಡ ವಿಷಯ.
ಮತ್ತೆ ಬಿಗ್‌ಬಾಸ್ ಮನೆಯೊಳಗೆ ಹೋದರೆ ನಾನು ನನ್ನ ಗೇಮ್‌ನಲ್ಲಿ ಏನೂ ಬದಲಾವಣೆ ಮಾಡ್ಕೊಳಲ್ಲ. ಈಗ ಆಡುತ್ತಿದ್ದಷ್ಟೇ ಅಗ್ರೆಸಿವ್ ಆಗಿ ಆಡುತ್ತೇನೆ. ಯಾರ ಜೊತೆಯಲ್ಲಿ ಫ್ರೆಂಡ್ ಆಗಿದ್ನೋ ಅವರ ಜೊತೆಗೇ ಸ್ನೇಹ ಮುಂದುವರಿಸುತ್ತೇನೆ. ಮನೆಯಲ್ಲಿ ಇನ್ನೊಂದಿಷ್ಟು ಜನರ ಜೊತೆ ನನಗೆ ಹೊಂದಿಕೆ ಆಗುವುದಿಲ್ಲ. ಅವ್ರ ಆದ್ಯತೆಗಳೇ ಬೇರೆ, ನನ್ನ ಆದ್ಯತೆಗಳೇ ಬೇರೆ. ಹಾಗಾಗಿ ಈಗ ನನ್ನನ್ನು ಬಿಗ್‌ಬಾಸ್ ಮನೆಯೊಳಗೆ ವಾಪಸ್ ಕಳಿಸಿದರೂ ನಾನು ಹಾಗೆಯೇ ಇರ್ತೀನಿ. ಬದಲಾಗುವುದಿಲ್ಲ.
ನಮ್ಮ ಸ್ನೇಹ ಜೆನ್ಯೂನ್ ಆಗಿತ್ತು
ನಾವು ಇಲ್ಲಿಎಲ್ಲವನ್ನೂ ಬಿಟ್ಟು ಹೊಗಿರ್ತೀವಿ. ನಮ್ಮ ಅಪ್ಪ-ಅಮ್ಮ, ಫ್ರೆಂಡ್ಸ್ ಎಲ್ಲರನ್ನೂ ಬಿಟ್ಟುಬಿಗ್‌ಬಾಸ್ ಮನೆಗೆ ಹೋಗುತ್ತಿರುತ್ತೀವಿ. ಅಲ್ಲಿ ನಮ್ಮ ಫಿಲಾಸಫಿಗೆ ನಮ್ಮ ಸಿದ್ದಾಂತಗಳಿಗೆ ಹೊಂದಿಕೆಯಾಗುವವರನ್ನು ಹುಡುಕಿಕೊಳ್ಳುತ್ತೀವಿ. ನಾನು, ವಿನಯ್ ಮತ್ತು ನಮ್ರತಾ ಬಂಧನ ಅಷ್ಟೇ ಜೆನ್ಯೂನ್ ಆಗಿತ್ತು. ಅದನ್ನು ನೋಡಿ ಉಳಿದವರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರು. ನಮ್ಮ ಮೂರುಜನರಲ್ಲಿ ಯಾರನ್ನೋ ಸೇವ್ ಮಾಡಿ, ಇನ್ಯಾರನ್ನೋ ನಾಮಿನೇಟ್ ಮಾಡಿದರೆ ಅವರು ಬಂದು ಕ್ವಶ್ಚನ್ ಮಾಡುತ್ತಿರಲಿಲ್ಲ. ಆ ಸ್ನೇಹದ ಬಗ್ಗೆ ನನಗೆ ಹೆಮ್ಮೆ ಇದೆ. ಅದೇ ನನ್ನ ಸಮಸ್ಯೆಯಾಗಿದ್ದರೆ ಇಟ್ಸ್ ಓಕೆ.
ಕ್ಯಾಪ್ಟನ್ ಆದ ಅನುಭವ
ಮೊದಲ ವಾರ ನನಗೆ ಕ್ಯಾಪ್ಟನ್ ಆಗುವ ಆತ್ಮವಿಶ್ವಾಸವೇ ಇರಲಿಲ್ಲ. ಆದರೆ ಆ ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿದೆ. ಲೈಫ್‌ನಲ್ಲಿ ರೂಲ್ಸ್ ಫಾಲೊ ಮಾಡಿಯೇ ಗೊತ್ತಿಲ್ಲ ನನಗೆ. ಅಂಥವನು ಮನೆಯ ಕ್ಯಾಪ್ಟನ್ ಆದ್ರೆ ಏನಾಗುತ್ತದೆ ಎಂದು ಜನರು ನೋಡಿರುತ್ತಾರೆ. ಆಗ ಸಮರ್ಥರು-ಅಸಮರ್ಥರು ಎಂದೆಲ್ಲ ಏನೇನೋ ಇಕ್ವೆಷನ್ಸ್ ಇತ್ತು ಮನೆಯಲ್ಲಿ.
ಎರಡನೇ ಕ್ಯಾಪ್ಟನ್ಸಿ ಇನ್ನಷ್ಟು ಕ್ರೇಜಿಯಾಗಿತ್ತು. ಯಾಕಂದ್ರೆ ದುಪ್ಪಟ್ಟು ಅಧಿಕಾರ ಇತ್ತು. ನನ್ನ ಪ್ರಕಾರ ಬಿಗ್‌ಬಾಸ್ ಯಾವುದೇ ಸೀಸನ್‌ನಲ್ಲಿಯೂ ಕ್ಯಾಪ್ಟನ್‌ಗೆ ಅಷ್ಟೊಂದು ಅಧಿಕಾರ ಕೊಟ್ಟಿರಲಿಲ್ಲ. ಅಷ್ಟು ಪವರ್ ನನಗೆ ಕೊಟ್ಟಿತ್ತು. ನಾನು ತುಂಬ ಕಷ್ಟಪಟ್ಟು ಆ ಕ್ಯಾಪ್ಟನ್ ಷಿಪ್ ಗೆದ್ದಿದ್ದೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಮನೆಯ ಫಸ್ಟ್ ಕ್ಯಾಪ್ಟನ್ ಸ್ನೇಹಿತ್, ಲಾಸ್ಟ್ ಕ್ಯಾಪ್ಟನ್ ಸ್ನೇಹಿತ್ ಮತ್ತು ಮನೆಯ ಕ್ಯಾಪ್ಟನ್ ರೂಮನ್ನು ಬ್ಲಾಕ್ ಮಾಡಿದ್ದೂ ಸ್ನೇಹಿತ್.
ಕ್ಯಾಪ್ಟನ್ಸಿ ಎನ್ನುವುದು ನಮ್ಮ ಸಾಮರ್ಥ್ಯದ ಮೇಲೆ ಆಗಿದ್ದು. ಯಾರೋ ವೋಟ್ ಮಾಡಿ ಆಗಿದ್ದಲ್ಲ. ಹಾಗಾಗಿ ನನಗೆ ಏನು ಸೂಕ್ತ ಅನಿಸುತ್ತದೆಯೋ ಅದನ್ನೇ ಮಾಡಬೇಕು. ನಾನು ಮಾಡಿರವುದೂ ಅದನ್ನೇ. ಎಲ್ಲೋ ಕೊನೆಯಲ್ಲಿ ಫೇರ್ ಆಗಿರಬೇಕು ಎಂದು ಏನೋ ಮಾಡೋಕೆ ಹೋದೆ. ಅದು ಬ್ಯಾಕ್‌ಫೈರ್ ಆಯ್ತು. ನಾನು ಮೊದಲು ಇದ್ದ ಹಾಗೆಯೇ ಇದ್ದಿದ್ದರೆ, ನಮ್ರತಾನೋ ವಿನಯ್ ಕ್ಯಾಪ್ಟನ್ ಆಗಿರ್ತಿದ್ರು. ಅದರ ಬಗ್ಗೆ ಪಶ್ಚಾತ್ತಾಪ ಇದೆ.
ನಮ್ರತಾ ಬಗೆಗಿನ ಆಕರ್ಷಣೆ ಜೆನ್ಯೂನ್
ನಮ್ರತಾ ಬಗ್ಗೆ ಏನೇನೋ ಹೇಳಿದೇನೋ ಅದೆಲ್ಲವೂ ಜೆನ್ಯೂನ್. ನನಗೆ ಅವರ ಬಗ್ಗೆ ಫೀಲಿಂಗ್ ಇತ್ತು. ಅದನ್ನು ಹೇಳಿಕೊಂಡಿದ್ದೀನಿ. ಅದು ಎಲ್ಲರಿಗೂ ಗೊತ್ತು ಕೂಡ. ಅದನ್ನು ನಾನು ಕ್ಯಾಮೆರಾ ಮೊಮೆಂಟ್‌ಗೊಸ್ಕರ ಹೇಳಿದ್ದು ಅಲ್ಲವೇ ಅಲ್ಲ. ಅದು ಅವರಿಗೂ ಗೊತ್ತು. ನನ್ನ ಪ್ರಕಾರ ಜೆನ್ಯೂನ್ ಆಗಿರುವುದು ಮೈಕಲ್, ವಿನಯ್, ನಮ್ರತಾ ಅಷ್ಟೆ. ನನ್ನ ಪ್ರಕಾರ ಫೇಕ್ ಆಗಿರುವುದು ಸಂಗೀತಾ, ಟಾಪ್ 5ನಲ್ಲಿ ವರ್ತೂರ್ ಇರ್ತಾರೆ, ಪ್ರತಾಪ್ ಇರ್ತಾರೆ, ವಿನಯ್ ಇರ್ತಾರೆ. ಇನ್ನೊಂದೆರಡು ಜಾಗ ಓಪನ್ ಇದೆ. ತುಕಾಲಿ ಅವರು ಇರಬಹುದು. ಕಾರ್ತಿಕ್-ಸಂಗೀತಾ ಮಧ್ಯದಲ್ಲಿ ಇಬ್ಬರಲ್ಲಿ ಒಬ್ಬರು ಇರಬಹುದು. ಇಲ್ಲ ಇಬ್ಬರೂ ಇರಬಹುದು. ನನಗೆ ವಿನಯ್ ವಿನ್ ಆಗಬೇಕು ಎಂದಿದೆ. ವರ್ತೂರ್, ಪ್ರತಾಪ್ ಮಧ್ಯದಲ್ಲಿ ಯಾರಾದರೂ ಆಗಲೂಬಹುದು.
JioCinema ಫನ್ ಫ್ರೈಡೆ ಮಜವೇ ಬೇರೆ
ಫನ್ ಫ್ರೈಡೆ ಟಾಸ್ಕ್‌ಗಳನ್ನು ನಾನು ತುಂಬಾ ಎಂಜಾಯ್ ಮಾಡಿದ್ದೇನೆ. ಅದರಲ್ಲಿ ಆನೆ ಚಿತ್ರಕ್ಕೆ ಬಾಲ ಬರೆಯುವ ಟಾಸ್ಕ್ ಸಖತ್ ಎಂಜಾಯ್ ಮಾಡಿದೆ. ಒಂದು ಸಿಕ್ರೇಟ್ ಏನೆಂದರೆ ನನಗೆ ಕಣ್ಣು ಕಟ್ಟಿದ್ದರೂ ಕೆಳಗಡೆ ಕಾಣುತ್ತಿತ್ತು. ಕಂಡರೂ ಅಷ್ಟು ಕೆಟ್ಟದಾಗಿ ಆನೆ ಬಾಲ ಬರೆದಿದ್ದೆ ಅಂದ್ರೆ, ನನ್ನ ಪೇಂಟಿಂಗ್ ಸ್ಕಿಲ್ಸ್ ಎಷ್ಟು ಚೆನ್ನಾಗಿದೆ ನೀವೇ ಊಹಿಸಿಕೊಳ್ಳಿ!
ಎಲ್ಲ ಲೈಟ್ಸ್ ಆಫ್ ಆದಮೇಲೆ ನಾನು ನಮ್ರತಾ, ವಿನಯ್ ಕೂತುಕೊಂಡು ಮಾತಾಡ್ತಿದ್ವಿ. ಅದು ನಮ್ಮ ‘ಮೀ ಟೈಮ್’. ನಾವು ಒಟ್ಟಿಗೇ ಒಂದಿಷ್ಟು ಹೊತ್ತು ಕಾಲ ಕಳೆಯುತ್ತಿದ್ದೆವು. ಫಸ್ಟ್ ಕ್ಯಾಪ್ಟನ್ಸಿ ಗೆದ್ದು ನನ್ನಮ್ಮಂಗೆ ಡೆಡಿಕೇಟ್ ಆಗಿದ್ದನ್ನು ಯಾವತ್ತೂ ಮರೆಯಲ್ಲ. ಅದು ನನ್ನಮ್ಮಂಗೂ ಮೆಮರಬಲ್ ಆಗಿರುತ್ತದೆ
ಏಳನೇ ವಾರದಲ್ಲಿ ಬಿಗ್‌ಬಾಸ್ (Bigg Boss Kannada) ಮನೆಯಿಂದ ನೀತು ವನಜಾಕ್ಷಿ (Neetu Vanajakshi) ಹೊರಬಿದ್ದಿದ್ದಾರೆ. ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ. ಬಿಗ್‌ಬಾಸ್‌ನ ಈ ಜರ್ನಿಯ ಕುರಿತು JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ (Interview) ನೀತು ಹಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
‘ಈವಾಗಷ್ಟೇ ಹೊರಗೆ ಬಂದಿದೀನಿ. ಸ್ವಲ್ಪ ಬೇಜಾರು ಇದ್ದೇ ಇದೆ. ಆದರೆ 50 ದಿನ ಮುಗಿಸಿದ್ದೇನೆ ಎಂಬ ಖುಷಿಯಿದೆ. ಎಲ್ಲ ಕಂಟೆಸ್ಟೆಂಟ್‌ಗಳ ಮಧ್ಯ ನಾನೂ ಅಷ್ಟು ದಿನ ಸರ್ವೈವ್ ಆಗಿದ್ದೀನಿ ಎಂಬ ಹೆಮ್ಮೆ ಇದೆ. ತುಂಬ ಅನುಭವಗಳ ಜೊತೆಗೆ ಮನೆಗೆ ಹೋಗುತ್ತಿದ್ದೇನೆ. ಈ ಅನುಭವಗಳನ್ನು ಮುಂದೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಮುನ್ನುಗ್ಗುತ್ತೇನೆ.
ಎಲಿಮಿನೇಷನ್ ನಿರೀಕ್ಷಿತವೇ ಆಗಿತ್ತು!
ಹೊರಗಡೆ ಬರ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ಕಳೆದ ಎರಡು ವಾರದಿಂದ ನನ್ನ ಪರ್ಪಾರ್ಫೆನ್ಸ್ ತುಂಬ ಕಡಿಮೆ ಇತ್ತು. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿದ್ದೆ. ಆದರೆ ದುರದೃಷ್ಟ. ಏನೂಮಾಡಕ್ಕಾಗಲ್ಲ.
ಕೆಲವೊಂದು ವಿಚಾರದಲ್ಲಿ ನಾನು ಸ್ವಲ್ಪ ಹಿಂದೇಟು ಹಾಕ್ತಿದ್ದೆ. ಯಾಕಂದ್ರೆ ಆರಂಭದಲ್ಲಿ ಜಗಳ ಆಡ್ತಿದ್ದೆ. ಸರಿಯಾದ ವಿಷಯಕ್ಕೇ ಜಗಳ ಆಡ್ತಿದ್ದೆ. ಆಮೇಲಾಮೇಲೆ, ನಾನು ಬೇರೆ ರೀತಿ ಪ್ರೊಜಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಅದರಿಂದ ಹಿಂಜರಿಗೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ. ಟಾಸ್ಕ್‌ನಲ್ಲಿಯೂ ಎಲ್ಲರೂ ಹೇಳಿದ್ದನ್ನ ಒಪ್ಪಿಕೊಂಡುಬಿಡುತ್ತಿದ್ದೆ. ಅಲ್ಲಿ ಇನ್ನೂ ಸ್ವಲ್ಪ ಚುರುಕಾಗಿದ್ದಿದ್ರೆ ನಾನು ಸರ್ವೈವ್ ಆಗಬಹುದಾಗಿತ್ತು. ಈಗ ನಾನು ಮತ್ತೆ ಹೋದ್ರೆ ಖಂಡಿತ ಇನ್ನಷ್ಟು ಚೆನ್ನಾಗಿ ಪರ್ಫಾರ್ಪೆನ್ಸ್ ಮಾಡುತ್ತೇನೆ.
ಕಿಚ್ಚನ ಚಪ್ಪಾಳೆ ಎಂಬ ಟ್ರೋಫಿ!
ಯಾವಾಗ ನನಗೆ ಕಿಚ್ಚನ ಚಪ್ಪಾಳೆ ಬಂತೋ, ನನಗದು ಟ್ರೋಫಿ ತಗೊಂಡಂಗೆ. ಅಷ್ಟು ಖುಷಿಯಾಯ್ತು ನಂಗೆ. ಚೆನ್ನಾಗಿ ಆಡ್ತಾ ಇದ್ದೀನಿ ಅನ್ನೋ ಕಾನ್ಫಿಡೆನ್ಸ್ ಬಂತು. ಒಬ್ಬ ಸ್ಪರ್ಧಿಗೆ ಏನೇನು ಸಿಗಬೇಕೋ ಅವೆಲ್ಲವೂ ನನಗೆ ಸಿಕ್ಕಿವೆ.
ಜೆನ್ಯೂನ್-ಫೇಕ್!
ಬಿಗ್‌ಬಾಸ್ ಮನೆಯೊಳಗೆ ನನ್ನ ಪ್ರಕಾರ ಪ್ರತಾಪ್ ತುಂಬ ಜೆನ್ಯೂನ್. ಯಾಕೆಂದ್ರೆ ಅವನತ್ರ ಮಾತಾಡಬೇಕಾದ್ರೆ ನಾಟಕೀಯತೆ ಇರುತ್ತಿರಲಿಲ್ಲ. ಚೆನ್ನಾಗಿ ಆಡ್ತಾನೂ ಇದ್ದಾನೆ. ಸ್ನೇಹಿತ್ ಫೇಕ್ ಅನಿಸ್ತಾನೆ. ಯಾಕೆಂದರೆ ‘ಟಾಸ್ಕ್ ಎಲ್ಲ ಆಯ್ತು, ಇನ್ಮೇಲಿಂದ ಫ್ರೈಡೆ ಸಾಟರ್‍ಡೇ ನಾವೊಂದ್ ಸ್ವಲ್ಪ ಎಂಟರ್‍ಟೈನಿಂಗ್ ಆಗಿರ್ಬೇಕು’ ಅಂತ. ಹಾಗಾಗಿ ಅವನು ಬಹುಶಃ ಕ್ಯಾಮೆರಾಗೋಸ್ಕರ ಚಟುವಟಿಕೆ ಮಾಡ್ತಿದ್ದಾನೆ ಅನ್ಸತ್ತೆ.
ನೀತು ಫೈನಲಿಸ್ಟ್ ಲೀಸ್ಟ್!
ಪ್ರತಾಪ್, ತುಕಾಲಿ ಸಂತೋಷ್, ಸಂಗೀತಾ, ಕಾರ್ತಿಕ್, ತನಿಷಾ ಈ ಐವರು ಈ ಸಲದ ಬಿಗ್‌ಬಾಸ್ ಫೈನಲ್‌ನಲ್ಲಿ ಇರ್ತಾರೆ. ಅವರಲ್ಲಿ ಪ್ರತಾಪ್ ವಿನ್ನರ್ ಆಗ್ತಾನೆ.
ಜಿಯೊ ಫನ್ ಫ್ರೈಡೆ ಟಾಸ್ಕ್
ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳನ್ನು ತುಂಬಾನೇ ಎಂಜಾಯ್ ಮಾಡಿದೀನಿ ನಾನು. ಕಥೆ ಹೇಳೋದು ಮಜವಾಗಿತ್ತು. ನನಗೆ ಗುರಿ ಇಡೋದು ಅಂದ್ರೆ ತುಂಬಾನೇ ಇಷ್ಟ. ಹಾಗಾಗಿ ಇರುಳ್ಳಿ ಅಂತ ಹೇಳಿದ ತಕ್ಷಣ ದೂರದಿಂದಲೇ ಗುರಿಇಟ್ಟು ಹಾಕಿಬಿಟ್ಟಿದ್ದೆ. ಆ ಟಾಸ್ಕ್‌ಗಳನ್ನು ಫುಲ್ ಜೋಷ್‌ನಲ್ಲಿ ಖುಷಿಯಿಟ್ಟು ಆಡ್ತಿದ್ದೆ. ಲಗೋರಿ ಆಟವೂ ಮಜವಾಗಿತ್ತು. ಚಿಕ್ಕ ಮಗುವಾಗಿದ್ದಾಗ ನಾನು ಏನೆಲ್ಲ ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲವೋ ಅವೆಲ್ಲವನ್ನೂ ಬಿಗ್‌ಬಾಸ್ ಮನೆಯ ಫನ್ ಫ್ರೈಡೆ ಟಾಸ್ಕ್‌ನಲ್ಲಿ ಎಂಜಾಯ್ ಮಾಡಿದ್ದೇನೆ.
ಕಾಫಿ ಮಗ್ ಮಿಸ್ ಮಾಡ್ಕೋತೀನಿ
ಬಿಗ್‌ಬಾಸ್ ಮನೆಯಲ್ಲಿ ತುಂಬ ಮಿಸ್ ಮಾಡ್ಕೊಳೋದು ಕಾಫಿ ಮಗ್. ಅದರಲ್ಲಿ ನೀತು ಎಂದು ಬರೆದಿತ್ತು. ಅದು ನನ್ನ ಐಡೆಂಟಿಟಿ. ಮತ್ತು ಮಮ್ಮಿ ನಾನು ಇರುವ ಫೋಟೊ ಇತ್ತು. ಅದನ್ನೂ ಮಿಸ್ ಮಾಡ್ಕೋತೀನಿ. ಎದ್ದ ತಕ್ಷಣವೇ ಮಮ್ಮಿ ಮುಖ ನೋಡ್ತಿದ್ದೆ.
ಬಿಗ್‌ಬಾಸ್ ಮನೆಯಲ್ಲಿ ಎಲ್ಲರೊಟ್ಟಿಗೆ ನಾನು ಒಳ್ಳೆಯ ಕನೆಕ್ಷನ್ ಇಟ್ಟುಕೊಂಡಿದ್ದೆ. ಎಲ್ಲರಿಗೂ ಅವರದೇ ಆದ ಒಂದು ಜರ್ನಿ ಅಂತ ಇರತ್ತೆ. ಯಾವ್ದೆ ಕೆಲಸ ಅಂತ ಬಂದಾಗ ಏನಾದ್ರೂ ಕಲಿಬೇಕು, ಏನಾದ್ರು ಮಾಡಬೇಕು ಅಂದಾಗ ಮಾಡುತ್ತಿದ್ದೆ. ಅಡುಗೆ ಮಾಡುವುದರಿಂದ ಎಲ್ಲರ ಜೊತೆಗೆ ಒಂದು ಬಾಂಡಿಂಗ್ ಬೆಳೆದಿತ್ತು.
ಟಾಸ್ಕ್ ಅಂತ ಬಂದಾಗ ಇವರು ಸರಿ ಇಲ್ಲ, ಅವ್ರು ಸರಿ ಇಲ್ಲ ಅಂತ ಹೇಳ್ಬೇಕಾಗತ್ತೆ. ಫೇಕ್ ಅಂತ ಹೇಳ್ಬೇಕಾಗತ್ತೆ. ಎಂಡ್ ಆಫ್ ದಿ ಡೇ ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇದೆ. ಎಲ್ಲರೂ ಸ್ಟ್ರಾಂಗ್ ಆಗಿಯೇ ಇದ್ದಾರೆ.
ಪ್ರೀತಿಯನ್ನು ಮನದುಂಬಿಕೊಂಡು ಹೋಗುತ್ತಿರುವೆ
ನನಗೆ ಪ್ರೀತಿ ಬೇಕಾಗಿತ್ತು. ಸಿಂಪತಿ ಬೇಕಾಗಿರ್ಲಿಲ್ಲ. ಸಿಂಪತಿ ಇಲ್ಲದ ಪರಿಪೂರ್ಣ ಪ್ರೀತಿಯನ್ನು ಹುಡುಕಿಕೊಂಡು ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಅದು ನನಗೆ ಸಿಕ್ಕಿದೆ. ನನಗೆ ಇದೊಂದು ಒಳ್ಳೆಯ ಅವಕಾಶ. ಮನೆಯಲ್ಲಿ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೀನಿ. ಈ ನೆನಪುಗಳನ್ನು ನನ್ನ ಜೀವನವಿಡೀ ಒಂದೊಂದು ಎಪಿಸೋಡ್ ನೋಡ್ತಾ ಎಂಜಾಯ್ ಮಾಡ್ತೀನಿ. ಟ್ರಾನ್ಸ್‌ಜೆಂಡರ್‍ಗಳ ಬದುಕಿನ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ. ನಮಗೆ ಏನು ಬೇಕು, ನಾವು ಸಮಾಜದಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ. ನಮಗೆ ಕರುಣೆ ಬೇಡ. ಪ್ರೀತಿ ಕೊಟ್ಟರೆ ಸಾಕು. ಅದು ನನಗೆ ಬಿಗ್‌ಬಾಸ್ ಮನೆ ಕೊಟ್ಟಿದೆ. ಅದನ್ನು ನಾನು ಮನದುಂಬಿ ತೆಗೆದುಕೊಂಡು ಹೋಗುತ್ತಿದ್ದೇನೆ.
ಬಿಗ್ ಬಾಸ್ ಕನ್ನಡ 10 (Bigg Boss Kannada) ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದ ನಟಿ ಸಂಗೀತಾ ಶೃಂಗೇರಿ (Sangeetha Sringeri) ಸ್ವತಃ ಬಿಗ್ ಬಾಸ್ ಗೆ ಶಾಕ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್ ತಲೆಬೋಳಿಸಿಕೊಳ್ಳುವ ಸವಾಲ್ ಕೂಡ ಹಾಕಿದ್ದರು. ಹಾಗೆಯೇ ತನಿಷಾ ಮೆಣಸಿನಕಾಯಿ ತಿನ್ನಲೂ ಕಾರಣರಾಗಿದ್ದರು.
ಸ್ನೇಹಿತರ ನೋವಿಗೆ ಕಾರಣರಾದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಹುಟ್ಟಿದೆಯಾ? ಅದೇ ಅವರು ಮನೆಯಿಂದ ಹೊರಬರಲೂ ಕಾರಣವಾಯ್ತಾ? ಇಂಥದ್ದೊಂದು ಅನುಮಾನ JioCinema ಬಿಡುಗಡೆ ಮಾಡಿದ ಇಂದಿನ ಪ್ರೋಮೊ ನೋಡಿದರೆ ಹುಟ್ಟದೇ ಇರದು.
‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ’ ಎಂದು ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಲೆಯೊಳಗೆ ಪ್ರೆಷರ್ ಜಾಸ್ತಿ ಆಗ್ತಿದೆ ಎಂದು ಫ್ರೆಸ್ಟ್ರೇಟ್ ಆಗಿದ್ದಾರೆ. ಅವರನ್ನು ಸಮಾಧಾನ ಮಾಡಲು ಬಂದ ಕಾರ್ತಿಕ್ (Karthik)ಗೆ ಕೈ ಮುಗಿದಿದ್ದಾರೆ. ಹಾಗೆಯೇ, ‘ನಿಮಗೆ ಬೇಕಾದಾಗ ಜಗಳ ಆಡ್ತೀರಾ. ಬೇಕಾದಾಗ ಸಮಾಧಾನ ಮಾಡ್ತೀರಾ?’ ಎಂದು ಕಾರ್ತಿಕ್ ಅವರನ್ನು ಕುಟುಕಿದ್ದಾರೆ. ಅದನ್ನು ಕೇಳಿ ಸಂಗೀತಾ ಬಳಿಯಿಂದ ಕಾರ್ತಿಕ್ ಎದ್ದು ಹೋಗಿದ್ದಾರೆ.
‘ನನಗೆ ಈ ಗೇಮ್ ಆಡಲು ಇಷ್ಟವಿಲ್ಲ’ ಎಂದು ಸಂಗೀತಾ ಬಿಗ್‌ಬಾಸ್ ಬಳಿಯಲ್ಲಿ ಬಿಕ್ಕಿ ಬಿಕ್ಕಿ ವಿನಂತಿಸಿಕೊಂಡಿದ್ದಾರೆ. ಅದರ ಬೆನ್ನಿಗೇ ಮನೆಯ ಮುಖ್ಯದ್ವಾರ ತೆರೆದುಕೊಂಡಿರುವ ದೃಶ್ಯವೂ ಪ್ರೋಮೊದಲ್ಲಿದೆ. ಹಾಗಾದರೆ ಸಂಗೀತಾ ಮನೆಯಿಂದ ಹೊರಗೆ ಹೋದರಾ? ಅಥವಾ ಒಳಗೇ ಉಳಿದುಕೊಳ್ಳುತ್ತಾರಾ? ರಾತ್ರಿವರೆಗೂ ಕಾದು ನೋಡಬೇಕು.
ಭಾಗ್ಯಶ್ರೀ (Bhagyashree) ಅವರ ಬಿಗ್‌ಬಾಸ್ (Big Boss Kannada) ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು, ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು, ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್, ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ JioCinemaಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ.
ಈ ವಾರ ಹೊರಗೆ ಬರ್ತೀನಿ ಅಂತ ನಿಮಗೆ ಅನಿಸಿತ್ತಾ?
ಬಿಗ್‌ಬಾಸ್ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು ಕೈಯೆತ್ತಿದರು ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ. ಯಾಕೆಂದರೆ ಅವರಿಗೆ ಯಾರಿಗೂ ನಾನು ಟಾಸ್ಕ್ ಮಾಡಬಲ್ಲೆ ಎಂಬ ನಂಬಿಕೆಯೂ ಇರ್ತಿರ್ಲಿಲ್ಲ. ಸಿಕ್ಕಿದ ಅವಕಾಶಗಳಲ್ಲಿ ನಾನು ಖಂಡಿತವಾಗಲೂ ನನ್ನ ಎಫರ್ಟ್ ನೂರಕ್ಕೆ ನೂರು ಹಾಕಿದೀನಿ.
ಗುಂಪು ಅಂತ ಬಂದಾಗ, ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು. ನಾನು ಅವರ ಜೊತೆಗೆ ಸೇರಲು ಯತ್ನಿಸಿದಾಗಲೆಲ್ಲ, ‘ಇವ್ರು ಫೇಕಾ? ಸುಮ್ನೆ ನಮ್ ಜೊತೆ ಮಿಂಗಲ್ ಆಗೋಕೆ ಟ್ರೈ ಮಾಡ್ತಿದ್ದಾರಾ ಅಂತೆಲ್ಲ ಮಾತು ಬರ್ತಿತ್ತು.
ಫೇಕ್ ಅಂತ ಅನಿಸಕೊಂಡು ಫ್ರೆಂಡ್‌ಷಿಪ್ ಮಾಡುವ ಬದಲು, ಆಟವಾಡುವಾಗ ಎಲ್ಲರ ಜೊತೆ ಇದ್ದು, ಉಳಿದ ಟೈಮಲ್ಲಿ ನನ್ನ ಪಾಡಿಗೆ ನಾನು ಇದ್ರಾಯ್ತಲ್ವಾ ಅಂದ್ಕೊಳ್ತಿದ್ದೆ. ಆದರೆ ಗುಂಪಲ್ಲೇ ಇದ್ದು ಆಡಬೇಕು. ಆಗ ಇನ್ನೊಂದಿಷ್ಟು ವಾರ ಇರ್ತಿದ್ದೆ ಅನ್ನೋದು ಖಂಡಿತ ಸುಳ್ಳು. ಆ ಥರ ನನಗೆ ಯಾವಾಗಲೂ ಅನಿಸಿಲ್ಲ.
ಇಲ್ಲಿ ಕೆಲವರು ಇವರು ಫೇಕ್ ಇದ್ದಾರೆ, ಇವರ ಎಮೋಷನ್ಸ್ ಫೇಕ್ ಅಂತ ಹೇಳ್ದಾಗ, ಸಿರಿಯವರು ನನ್ನನ್ನು ತುಂಬ ವರ್ಷಗಳಿಂದ ಹತ್ತಿರದಿಂದ ನೋಡಿದ್ದಾರೆ. ಹಾಗಾಗಿ ಅವರ ಬಳಿ ಹೋಗಿ ಶೇರ್ ಮಾಡ್ತಿದ್ದೆ. ಅವರು ನನಗೆ ಸಮಾಧಾನ ಮಾಡ್ತಿದ್ರು. ನಾನು ಅವರ ಬಳಿ ಆಯುಷ್ ಬಗ್ಗೆ ಮಾತಾಡ್ತಿದ್ದೆ ರಾತ್ರಿ ಹೊತ್ತಲ್ಲಿ. ಅವರು ನನಗೆ ಸಮಾಧಾನ ಮಾಡ್ತಿದ್ರು. ನನಗೆ ನನ್ನ ಮಗನ ತಬ್ಬಿಕೊಂಡು ಮಲಗೋದು ಮಿಸ್ ಮಾಡ್ಕೊಳ್ಳೋವಾಗ ಅವರನ್ನೇ ತಬ್ಬಿಕೊಂಡು ಮಲಗ್ತಿದ್ದೆ.
ಮಗನ ಲೆಟರ್ ನಿರೀಕ್ಷೆ ಇತ್ತಾ?
ದೀಪವಾಳಿ ಹಬ್ಬಕ್ಕೆ ಸರ್ಪೈಸ್ ಲೆಟರ್ ಬರತ್ತೆ ಅಂತ ಹೇಳಿದ್ರು. ಅದು ನನ್ನ ಮಗನ ಲೆಟರೇ ಇರತ್ತೆ ಅಂತ ಗೊತ್ತಿತ್ತು. ಮೊದಲ ಟಾಸ್ಕ್‌ನಲ್ಲಿ ನನಗೆ ಲೆಟರ್ ಬರಲ್ಲ ಅಂತ ಗೊತ್ತಾದಾಗ ನಾನು ತುಂಬ ಡಲ್ ಆಗಿಬಿಟ್ಟೆ. ಮರುದಿನ ನಾನು ಫುಲ್ ಸೈಲೆಂಟ್ ಆಗಿದ್ದಿದ್ದಂತೂ ನಿಜ.
ಆದರೆ ಬಿಗ್‌ಬಾಸ್ ಮನೆಯಲ್ಲಿ ಡಲ್ ಆಗಿ ಕೂತಿರೋದನ್ನೇ ಅಡ್ವಾಂಟೇಜ್ ತಗೋತಾರೆ. ಇವರು ಡಲ್ ಆಗಿದ್ದಾರೆ, ನಾಮಿನೇಟ್ ಮಾಡೋಣ, ಕಳಪೆ ಕೊಡೋಣ ಅಂತ ಶುರುಮಾಡ್ತಾರೆ. ಆಗ ನಾನು ನೋವಿದ್ರೂ ಕೂಡ ಅದರಿಂದ ಹೊರಗೆ ಬರಲು ಟ್ರೈ ಮಾಡ್ತಿದ್ದೆ. ಆ ಥರ ಹೋಗಿ ಟ್ರೈ ಮಾಡಿದ್ದಕ್ಕೇ ಸ್ನೇಹಿತ್ ಡೇಟ್ ವಿಚಾರಕ್ಕೆ ಅಲ್ಲೊಂದು ಕ್ಲಾಶ್ ಆಯ್ತು. ನಾನೇನೋ ಆ ಲೆಟರ್ ಸಿಗಲಿಲ್ಲ ಎನ್ನುವ ನೋವನ್ನು ಮರೆಯೋದಕ್ಕೆ ಅಲ್ಲಿ ಹೋಗಿ ಮಾತಾಡಿದ್ದಕ್ಕೆ, ‘ನೀವೇನು ಇನ್ನೊಬ್ಬರ ಲೈಫನ್ನು ನೋಡಿ ಮಜಾ ತಗೊಳ್ತಿದ್ದೀರಾ ಅಂತ ಮಾತು ಬಂತು. ಅದರಿಂದ ಮತ್ತೆ ಹರ್ಟ್ ಆದೆ. ನನ್ನ ಪರ್ಸನಲ್ ಲೈಪ್‌ನಲ್ಲಿ ನಾನು ಆದಷ್ಟೂ ನೆಗೆಟೀವ್ ಜನರು, ಫೇಕ್ ಜನರು, ಫೇಕ್ ಮಾತುಗಳಿಂದ ದೂರ ಇರ್ತಿದ್ದೆ. ಅದು ಬಿಗ್‌ಬಾಸ್ ಮನೆಯಲ್ಲಿ ತುಂಬ ತೊಂದರೆಯಾಯ್ತು.
ಸುದೀಪ್ ಸರ್, ಥ್ಯಾಂಕ್ಯೂ ಸೋ ಮಚ್. ಎಲಿಮಿನೇಟ್ ಆದೆ ಅಂತ ಹೇಳಿದಾಗ ಎಲ್ಲೋ ಬೇಜಾರಾಗಿತ್ತು. ಆದರೆ ನೀವು ಲೆಟರ್ ಕೊಟ್ಟು, ಬಿಗ್ಬಾಸ್ ಲೀವಿಂಗ್ ಏರಿಯಾನಲ್ಲಿ ಓದಿಸಿದಿರಲ್ಲಾ ಸರ್. ಎಷ್ಟು ಸಂತೋಷ ಆಗೋಯ್ತು ಅಂದ್ರೆ. ಎಲಿಮಿನೇಷನ್ ಅನ್ನೋದನ್ನು ಕೂಡ ಮರ್ತೇ ಹೋಗ್ಬಿಡ್ತು. ಪ್ರತಿಯೊಬ್ಬರ ಭಾವನೆ ಅರ್ಥ ಮಾಡಿಕೊಂಡು ವೀಕೆಂಡ್ ಎಪಿಸೋಡ್‌ಗಳಲ್ಲಿ ಸ್ಪಂದಿಸ್ತೀರಲ್ಲಾ… ಯು ಆರ್ ದಿ ರಿಯಲ್ ಸ್ಟ್ರೆಂಥ್. ಎಲ್ಲ ಸ್ಪರ್ಧಿಗಳಿಗೂ!
ಫೇಕ್ ಯಾರು ಅನಿಸತ್ತೆ?
ಮನೆಯಲ್ಲಿ ನನ್ನ ಪ್ರಕಾರ ನಾನು ಜೆನ್ಯೂನ್ಆಗಿದ್ದೆ. ನನ್ನ ಬಿಟ್ಟರೆ ಇಶಾನಿ. ಅವರು ಎಷ್ಟೋ ಸಲ ಕೈ ಎತ್ತಿ, ಟಾಸ್ಕ್ ಮಾಡ್ತೀನಿ ಅಂತ ಹೇಳಿದಾಗಲೂ ಅವರನ್ನು ಯಾರೂ ಕನ್ಸೀಡರೇ ಮಾಡ್ತಿರ್ಲಿಲ್ಲ. ನಾನಾದ್ರೂ ಧೈರ್ಯ ಮಾಡಿ ಹೇಳುತ್ತಿದ್ದೆ. ಆದರೆ ಅವರು ಗಟ್ಟಿಯಾಗಿ ಹೇಳ್ತಾನೂ ಇರ್ಲಿಲ್ಲ. ಗಟ್ಟಿ ಯಾಗಿ ಹೇಳಿದಾಗಲೂ ಕೂಡ ಅವಳ ಮಾತುಕೇಳುತ್ತಿರಲಿಲ್ಲ.
ಮನೆಯೊಳಗೆ ಫೇಕ್ ಅಂತ ಒಬ್ರಿದ್ದಾರೆ ಅನ್ಸಲ್ಲ. ಕೆಲವು ಸಲ ನನಗೆ ಕಾರ್ತಿಕ್ ನೋಡಿದಾಗ ಫೇಕ್ ಅನಿಸುತ್ತದೆ. ಕೆಲವು ಸಲ ವಿನಯ್ ಫೇಕ್ ಅನಿಸುತ್ತದೆ. ಒಮ್ಮೆ ನನ್ನ ಕಡೆ ಬಂದು, ‘ಏನಾದ್ರೂ ಹೆಲ್ಪ್ ಕೇಳಿ. ನಾನಿರ್ತಿನಿ ಅಂತಿದ್ರು. ಆದರೆ ನಿಜವಾಗಲೂ ಹೆಲ್ಪ್ ಮಾಡುವ ಸಮಯದಲ್ಲಿ ನನಗೆ ಹೆಲ್ಪ್ ಮಾಡಲೇ ಇಲ್ಲ ಅವು. ಟಾಪ್ ಫೈವ್‌ನಲ್ಲಿ ಮೈಕಲ್, ಕಾರ್ತಿಕ್, ವಿನಯ್,ತುಕಾಲಿ ಸಂತೋಷ್, ಪ್ರತಾಪ್ ಇರ್ತಾರೆ ಅನ್ಸತ್ತೆ. ಕಾರ್ತಿಕ್‌ಗೆ ಎಲ್ಲ ಅರ್ಹತೆ ಇವೆ. ಅವರು ಓವರ್ ಸ್ಮಾರ್ಟ್‌ನೆಸ್ ತೋರಿಸುವುದು ಕಡಿಮೆ ಮಾಡಿದರೆ ವಿನ್ ಆಗಬಹುದು. ಮುಂದಿನವಾರ ಎಲಿಮಿನೇಟ್ ಆಗಿರುವವರ ಜಾಗದಲ್ಲಿ ನನ್ನ ಪ್ರಕಾರ ನೀತು ಇರುತ್ತಾರೆ.
ಬಿಗ್‌ಬಾಸ್ ಮನೆಯೊಳಗೆ JioCinemaದ ಫನ್ ಫ್ರೈಡೇ ಟಾಸ್ಕ್‌ನಲ್ಲಿ ‘ಕಥಾಸಂಗಮ’ ಟಾಸ್ಕ್‌ನಲ್ಲಿ ನಾನು ಗೆದ್ದಿದ್ದು ಮರೆಯಲಾಗದ ನೆನಪು. ನನಗೆ ಮಾತಾಡಲು ಎರಡು ನಿಮಿಷ ಟೈಮ್ ಇತ್ತು. ಅಲ್ಲಿ ಒಂದು ಅದ್ಭುತ ಕಥೆ ಮಾಡಿದೀನಿ ಅಂತ ಖುಷಿ ಇದೆ. ಜಿಯೊ ಸಿನಿಮಾ ಫನ್ ಫ್ರೈಡೆಯಲ್ಲಿ ಒಗಟು ಬಿಡಿಸಿದ್ದೂ ಒಂದು ಅದ್ಭುತ ನೆನಪು. ‘ಅಟ್ಟದ ಮೇಲೆ ಪುಟ್ಟಲಕ್ಷ್ಮೀ’ ಅಂದ ತಕ್ಷಣ ಬೊಟ್ಟು ಎಂದು ನೆನಪಾಯ್ತು. ಮನೆಯೊಳಗಿನ ಬೊಟ್ಟು ತರಲು ಓಡಿದೆ. ಮಧ್ಯದಲ್ಲಿಯೇ ಏನೋ ನೆನಪಾಯ್ತು. ನನ್ನ ಹಣೆಯಲ್ಲಿನ ಬೊಟ್ಟನ್ನೇ ತೆಗೆದು ಇಟ್ಟುಬಿಟ್ಟೆ. ಎಲ್ಲರೂ ಅಚ್ಚರಿಪಟ್ಟರು. ಅದೂ ಖುಷಿಕೊಟ್ಟಿತು.
ಬಿಗ್‌ಬಾಸ್ ಅಂದ್ರೆ ಬಿಗ್‌ಬಾಸ್ ಅಷ್ಟೆ. ಅಲ್ಲಿನ ಎಲ್ಲವನ್ನೂ ಮಿಸ್ ಮಾಡಿಕೊಳ್ತೀನಿ. ಬೆಳಗಿನ ಸಾಂಗ್, ಪ್ರತಿಕ್ಷಣ ಧರಿಸಿರುತ್ತಿದ್ದ ಮೈಕ್ ಮಿಸ್ ಮಾಡ್ಕೊತೀನಿ. ಬಿಗ್‌ಬಾಸ್ ಧ್ವನಿಯನ್ನಂತೂ ತುಂಬ ಮಿಸ್ ಮಾಡ್ಕೋತೀನಿ
ಬಿಗ್ಬಾಸ್ (Bigg Boss Kannada) ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ಇಶಾನಿ (Ishani). ಇಷ್ಟು ವಾರಗಳ ಕಾಲದ ಅವರ ಬಿಗ್‌ಬಾಸ್ ಜರ್ನಿ ಹೇಗಿತ್ತು, ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು, ಷೋ ಬಗ್ಗೆ ಅವರು ಏನು ಹೇಳುತ್ತಾರೆ, ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಮರುಕ್ಷಣವೇ ಅವರ ಎಕ್ಸ್‌ಕ್ಲೂಸೀವ್ ಸಂದರ್ಶನ ಇಲ್ಲಿದೆ. JioCinemaಗಾಗಿ ಅವರು ಹಲವಾರು ವಿಷಯಗಳನ್ನು ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದಿದ್ದೀರಿ ಏನನಿಸ್ತಿದೆ?
ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದೀನಿ. 99 ಪರ್ಸೆಂಟ್ ನನಗೆ ನಾನು ಇರ್ತೀನಿ ಅಂತ ಕಾನ್ಫಿಡೆನ್ಸ್ ಇತ್ತು. ಉಳಿದ ಒಂದು ಪರ್ಸೆಂಟ್ ನನಗೆ ಆಗಲ್ಲ ಅನಿಸಿತ್ತು. ನನಗೆ ಹಟ ಜಾಸ್ತಿ ಇದೆ. ಗೇಮ್ ಆಡುವ ಅವಕಾಶ ಜಾಸ್ತಿ ಸಿಗಲಿಲ್ಲ. ಅದರಿಂದ ನನಗೆ ಬೇಜಾರಾಗಿತ್ತು. ನನ್ನನ್ನು ಯಾರೂ ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ಹಾಗಾಗಿ ನನ್ನ ಸ್ಟ್ರೆಂಥ್ ತೋರಿಸಲಾಗಲಿಲ್ಲ. ನಾನು ಸ್ವಲ್ಪ ಎಮೋಷನಲ್ ಆಗಿದೀನಿ. ಆದರೆ ಎಮೋಷನಲ್ ಆಗಿರುವುದು, ಅದು ವಲ್ನರಬಲ್ ಆಗಿದ್ರೆ ಅದು ವೀಕ್‌ನೆಸ್ ಅಲ್ವೇ ಅಲ್ಲ. ಅದು ಸ್ಟ್ರೆಂಥ್. ಆದರೆ ಅದನ್ನು ನೋಡಿ ಯಾವಾಗ್ಲೂ ನನ್ನ ನಾಮಿನೇಷನ್‌ನಲ್ಲಿ ಹಾಕ್ತಿದ್ರು. ಕಳಪೆಯಲ್ಲಿ ಹಾಕ್ತಿದ್ರು. ಇದನ್ನೇ ರೀಸನ್ ಕೊಡ್ತಿದ್ರು.
ನನ್ನ ಪ್ರಕಾರ ಅದು ಸರಿ ಎಂದು ನನಗೆ ಅನಿಸುವುದಿಲ್ಲ. ಮನೆಯೊಳಗೆ ಗುಂಪುಗಳಿದ್ದವು. ನಾನು ಬೇರೆ ಗುಂಪಿನಲ್ಲಿದ್ದರೆ ನನಗೆ ಇನ್ನೂ ಅವಕಾಶಗಳು ಸಿಗುತ್ತಿತ್ತು ಎಂದೂ ನನಗೆ ಅನಿಸುವುದಿಲ್ಲ. ವಿನಯ್ ಇರ್ಲಿ, ನಮ್ರತಾ, ಮೈಕಲ್, ಸ್ನೇಹಿತ್ ಎಲ್ಲರ ಜೊತೆ ನಾನು ಖುಷಿಯಾಗಿದ್ದೆ. ಅವರು ನನಗೆ ಯಾವಾಗಲೂ ಸಪೋರ್ಟ್ ಮಾಡಿದ್ದಾರೆ. ಅವರಿಂದ ನನಗೆ ಡಿಸ್ಟ್ರಾಕ್ಷನ್ ಆಗಿಲ್ಲ. ಆದರೆ ನನ್ನ ವೈಯಕ್ತಿಕ ಆಯ್ಕೆಗಳಿಂದ ನನಗೆ ತೊಂದರೆಯಾಗಿರುವುದು. ಅವರು ನನಗೆ ತುಂಬ ಒಳ್ಳೆಯ ಸ್ನೇಹಿತರು.
ಮತ್ತೆ ಹಿಂತಿರುಗಿ ಬಿಗ್‌ಬಾಸ್ ಮನೆಯೊಳಗೆ ಹೋಗಲು ಸಾಧ್ಯವಾದ್ರೆ?
ಮತ್ತೆ ಬಿಗ್‌ಬಾಸ್‌ಗೆ ಹೋಗುವುದು ಸಾಧ್ಯವಾದರೆ ನಾನು ನನ್ನದೇ ಲೆಕ್ಕಾಚಾರ ಇಟ್ಟುಕೊಂಡು ಆಟ ಆಡುತ್ತಿದ್ದೆ. ಯಾರು ಫೇಕ್, ಯಾರು ರಿಯಲ್ ಎಂದು ವಿಶ್ಲೇಷಿಸಿ ಮುಂದಡಿ ಇಡುತ್ತಿದ್ದೆ. ಟಾಸ್ಕ್ ವಿಷಯಲ್ಲಿಯೂ ನಾನು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೆ. ಏನಾದರೂ ಇರಲಿ, ನಾನು ನನಗೋಸ್ಕರ ಆಡುತ್ತಿದ್ದೆ. ಇನ್ಯಾರಿಗೋಸ್ಕರನೋ ಅಲ್ಲ. ಟೀಮ್‌ನಲ್ಲಿ ಆಡಬೇಕು ಅಂದರೆ ನಾನು ನನಗೋಸ್ಕರ ಆಟ ಆಡ್ತಿದ್ದೆ. ಟೀಮ್ ಗೆಲ್ಲಬೇಕು ಅಂತಲೇ ಆಟ ಆಡ್ತಿದ್ದೆ, ಆದರೆ ನಾನು ಟೀಮ್ ಲೀಡರ್ ಆಗಬೇಕು ಎಂದು ಗಟ್ಟಿಯಾಗಿ ಹೇಳುತ್ತಿದ್ದೆ. ಎಂಪಥಿ ಮತ್ತು ಇಂಟಲಿಜೆನ್ಸ್‌ನಲ್ಲಿ ನನಗೆ ನಂಬಿಕೆ ಇದೆ. ಇವೆರಡನ್ನೂ ಉಪಯೋಗಿಸಿಕೊಳ್ಳಲು ಫೋಕಸ್ ಮಾಡುತ್ತಿದ್ದೆ.
ಯಾರು ಜೆನ್ಯೂನ್? ಯಾರು ಫೇಕ್?
ಮನೆಯೊಳಗೆ ವಿನಯ್, ನಮ್ರತಾ ಎಲ್ರೂ ಜೆನ್ಯೂನ್ ಆಗಿಯೇ ಇದ್ದರು. ನನ್ನ ಪ್ರಕಾರ ಮೈಕಲ್ ತುಂಬ ಜೆನ್ಯೂನ್ ಆಗಿದ್ದಾರೆ. ಆನಸ್ಟ್ ಆಗಿದ್ದರು. ಲಾಯಲ್ ಆಗಿದ್ದರು. ಅದು ಪ್ರಾರಂಭದಲ್ಲಿ ನನಗೆ ಕಾಣಿಸಲಿಲ್ಲ. ಕೊನೆಕೊನೆಗೆ ಕಾಣಿಸಿತು. ಈಗ ನಾನು ವಾಪಸ್ ಹೋಗಲು ಸಾಧ್ಯವಾದರೆ ಎಲ್ಲದಕ್ಕೂ ಮೈಕಲ್ ಸೈಡ್ ತಗೋತಿದ್ದೆ.
ತುಕಾಲಿ ಅವರನ್ನು ನಾನು ಊಸರವಳ್ಳಿ ಎಂದು ಕರೆದಿದ್ದೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಅವರು ಒಂದ್ಸಲ ನನ್ನ ಜೊತೆ ಸರಿಯಾಗಿ ಮಾತಾಡ್ತಿದ್ರು. ಮತ್ತೊಮ್ಮೆ ಇನ್ನೊಂದು ಗ್ರೂಪಲ್ಲಿ ಹೋಗಿ ಇನ್ನೇನಾದ್ರೂ ಹೇಳ್ತಿದ್ರು. ಉದ್ದೇಶಪೂರ್ವಕವಾಗಿ ಡ್ರಾಮಾ ಕ್ರಿಯೇಟ್ ಮಾಡಿ ಕಾಣೆಯಾಗ್ತಿದ್ರು. ಹಾಗಾಗಿ ಅವರು ನನಗೆ ಒಂಚೂರು ಇಷ್ಟವಾಗಲಿಲ್ಲ. ಅವರು ನಂಬರ್ ಒನ್ ಫೇಕ್. ಎರಡನೇ ಫೇಕ್ ನೀತು. ಅವರಿಗೆ ಪರ್ಸನಾಲಿಟಿ ಇರಲೇ ಇಲ್ಲ.
ನನ್ನ ಪ್ರಕಾರ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ. ಪ್ರತಾಪ್ ಇನೋಸೆಂಟ್ ಅಂದುಕೊಂಡಿದ್ದೆ. ಸ್ವಲ್ಪ ಮುಗ್ಧತೆ ಇದೆ ಅವರಲ್ಲಿ. ಆದರೆ ಅವರು ತುಂಬ ಬುದ್ಧಿವಂತರು. ಅಂದರೆ ಪಾಸಿಟೀವ್ ದೃಷ್ಟಿಯಿಂದಲೇ ಬುದ್ಧಿವಂತರು. ಗೇಮ್ ಹೇಗೆ ಆಡಬೇಕು ಎಂದು ಅವರಿಗೆ ಗೊತ್ತು. ಹಾಗಾಗಿ ಖಂಡಿತವಾಗಿ ಮನೆಯಲ್ಲಿ ಯಾರೂ ಇನೋಸೆಂಟ್ ಇಲ್ಲ.
ಇಶಾನಿ ಫೈನಲ್ ಲೀಸ್ಟ್!
ಬಿಗ್‌ಬಾಸ್ ಫಿನಾಲೆಯಲ್ಲಿ ಇರುವ ಐದು ಸ್ಫರ್ಧಿಗಳಲ್ಲಿ ನಾನೂ ಒಬ್ಬಳಾಗಬೇಕು ಎಂದು ನನಗೆ ಆಸೆ ಇತ್ತು. ಆದರೆ ಆಗಲಿಲ್ಲ. ನನ್ನ ಪ್ರಕಾರ ವಿನಯ್, ಮೈಕಲ್, ಸಂಗೀತಾ, ಕಾರ್ತೀಕ್ ಮತ್ತು ನಮ್ರತಾ ಇಷ್ಟು ಜನ ಕೊನೆಯಲ್ಲಿ ಉಳಿದುಕೊಳ್ಳುತ್ತಾರೆ. ಇವರಲ್ಲಿ ಮೈಕಲ್ ಗೆಲ್ಲಬೇಕು ಎಂಬುದು ನನ್ನ ಆಸೆ.
ಜಿಯೊ ಸಿನಿಮಾ ಟಾಸ್ಕ್‌ಗಳ ಮಜಾ
ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್‌ಗಳು ತುಂಬ ಮಜವಾಗಿದ್ದವು. ಕಳೆದ ವಾರ ಲಗೋರಿ ಆಡಿದೆವು. ಅದು ತುಂಬ ಮಜವಾಗಿತ್ತು. ಯಾಕೆಂದರೆ ಫಸ್ಟ್ ಟೈಮ್ ನಾನು ಲಗೋರಿ ಆಡುತ್ತಿರುವುದು. ನನಗೆ ಲಗೋರಿ ಏನೆಂದೇ ಗೊತ್ತಿರಲಿಲ್ಲ. ಅದನ್ನು ಆಡಿ ಖುಷಿಯಾಯ್ತು. ಹಾಗೆಯೇ ಆನೆಗೆ ಬಾಲ ಬಿಡಿಸುವ ಟಾಸ್ಕ್ ಕೂಡ ಸಖತ್ ಎಂಜಾಯ್ ಮಾಡಿದೆ. ಆ ಥರ ಸಾಕಷ್ಟ ಟಾಸ್ಕ್ ಇದ್ದವು.
ಕನ್ನಡ ರಾಪ್ ಬರೆಯುವ ಆಸೆ ಇದೆ
ಕನ್ನಡ ಇನ್ನೂ ಕಲಿಯುತ್ತಿದ್ದೇನೆ. ಇನ್ನೂ ಚೆನ್ನಾಗಿ ಕಲಿಯಬೇಕು ಅಂತ ಆಸೆ ಇದೆ. ಇನ್ನಷ್ಟು ಸ್ಪಷ್ಟವಾಗಿ ಕನ್ನಡ ಕಲಿತು, ಕನ್ನಡದಲ್ಲಿಯೇ ರಾಪ್ ಸಾಂಗ್ ಬರೆಯಬೇಕು ಎಂಬ ಆಸೆ ಇದೆ. ಬಿಗ್‌ಬಾಸ್ ಮನೆಯೊಳಗೂ ಟ್ರೈ ಮಾಡುತ್ತಿದ್ದೆ. ಸ್ವಲ್ಪ ಟೈಮ್ ತಗೊಳ್ತು. ಸ್ನೇಹಿತರ ಹೆಲ್ಪ್ ತಗೊಳ್ತಿದ್ದೆ. ಅವರ ಜೊತೆ ಚರ್ಚಿಸುತ್ತಿದ್ದೆ. ಅದೆಲ್ಲ ಕಲಿಯುತ್ತಿದ್ದೆ. ಇನ್ನು ಮುಂದೆಯೂ ಕನ್ನಡದಲ್ಲಿ ಬರೆಯುವುದನ್ನು ಮುಂದುವರಿಸುತ್ತೇನೆ.
ಬಿಗ್‌ಬಾಸ್ ಮನೆ ನೆನಪಾದ್ರೆ ಅಳ್ತೀನಿ
ಬಿಗ್‌ಬಾಸ್ ಮನೆ ನೆನಪಾದ್ರೆ ಅಳು ಬರತ್ತೆ. ಮನೆಯೊಳಗೆ ಕುಕ್ ಮಾಡುವುದು, ಬಾತ್ ರೂಮ್ ಕ್ಲೀನ್ ಮಾಡುವುದು, ಕಿಚನ್ ಕ್ಲೀನ್ ಮಾಡುವುದು, ನನ್ನ ಹಾಸಿಗೆ ನಾನೇ ನೋಡಿಕೊಳ್ಳಬೇಕು, ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಇದೆಲ್ಲದರ ಮಹತ್ವ ಬಿಗ್‌ಬಾಸ್ ಮನೆಯೊಳಗೆಬಂದ ಮೇಲೆ ಅರ್ಥವಾಯ್ತು. ಅಲ್ಲಿನ ನನ್ನ ಫ್ರೆಂಡ್ಸ್ ಎಲ್ರನ್ನೂ ನಾನು ತುಂಬ ಮಿಸ್ ಮಾಡ್ಕೋತೀನಿ. ನಗುವಿರಲಿ, ಅಳುವಿರಲಿ ಜೊತೆಗೇ ಇರ್ತಿದ್ವಿ. ಅದನ್ನು ಮಿಸ್ ಮಾಡ್ಕೋತೀನಿ. ಸಂಗೀತಾ ಬಂದು ಎಲ್ಲರನ್ನು ಹೆದರಿಸುತ್ತಿದ್ರು, ತಲೆದಿಂಬಿನಲ್ಲಿ ಹೊಡೆದಾಡಿಕೊಳ್ತಿದ್ವಿ. ಅವೆಲ್ಲಾನೂ ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್ ಷೋಗೆ ನಾನು ತುಂಬ ಕೃತಜ್ಞಳಾಗಿದೀನಿ. ನನಗೆ ಇನ್ನೊಮ್ಮೆ ಅವಕಾಶ ಸಿಕ್ರೆ ಬಂದೇ ಬರ್ತಿನಿ. ಬರುವ ಆಸೆಯೂ ಇದೆ.
ವರ್ತೂರ್ ಸಂತೋಷ್ (Varthur Santhosh) ಬಿಗ್‌ಬಾಸ್ ಮನೆಗೆ ಮರಳಿದ್ದಂತೂ ಆಗಿದೆ. ಮನೆಯ ಸದಸ್ಯರೆಲ್ಲರೂ ಅವರನ್ನು ಕಂಡು ಸಂತೋಷಪಟ್ಟಿದ್ದಾರೆ. ಆದರೆ ಆ ಸಂತೋಷ ಎಷ್ಟು ಹೊತ್ತು? ಸಂತೋಷ್ ಮುಖದಲ್ಲಿಯೇ ಸಂತೋಷ ಮಾಯವಾಗುವಂತೆ ಬಂದೆರಗಿದೆ ಎಲಿಮಿನೇಷನ್‌ನ ನಾಮಿನೇಷನ್ ಸೆಷನ್.
JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸಂತೋಷ್, ಅಗ್ನಿಪರೀಕ್ಷೆಯ ಈ ಗಳಿಗೆಗಳು ದಾಖಲಾಗಿವೆ. ಮನೆಯ ಸದಸ್ಯರಲ್ಲಿ ಹಲವರು ಸಂತೋಷ್ ಎಲಿಮಿನೇಷನ್‌ಗೆ (Elimination)ನಾಮಿನೇಟ್ ಆಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವೂ ಸಮರ್ಥನೀಯವೇ ಎನ್ನಿ.
ಕಳೆದ ವಾರ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿದೆ. ಸ್ಪರ್ಧಿಗಳು ಹಲವು ಜಿದ್ದಾಜಿದ್ದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ತಮ್ಮನ್ನು ತಾವು ‘ಸೇಫ್’ ಮಾಡಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲ ಸವಾಲುಗಳ ಸಮಯದಲ್ಲಿ ವರ್ತೂರ್ ಸಂತೋಷ್ ಇರಲಿಲ್ಲ. ಅವರಿಗೆ ಅದೊಂದು ಅಡ್ವಾಂಟೇಜ್. ಹಾಗಾಗಿ ಅವರು ಈಗ ಮನೆಯಲ್ಲಿ ಸೇಫ್ ಜೋನ್‌ನಲ್ಲಿ ಇರುವುದು ನ್ಯಾಯವಲ್ಲ ಎನ್ನುವುದು ಅವರ ವಾದ.
ಸಂಗೀತಾ, ವಿನಯ್, ಸ್ನೇಹಿತ್ ಸೇರಿದಂತೆ ಬಹುತೇಕ ಸದಸ್ಯರು, ಸಂತೋಷ್ ಅವರನ್ನು ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆಯೇ ಸಂತೋಷ್ ಮುಖದಲ್ಲಿನ ಸಂತೋಷದ ನಗು ಮಾಯವಾಗಿದೆ. ಒಂದು ವಾರದಲ್ಲಿ ಮನೆಯೊಳಗಿನ ಲೆಕ್ಕಾಚಾರಗಳೆಲ್ಲ ಬದಲಾಗಿವೆ, ಹಾಗಾಗಿ ಇಲ್ಲಿ ಉಳಿದುಕೊಳ್ಳಲು ತಾವು ನಡೆಸುವ ಸ್ಟ್ರಾಟಜಿ ಕೂಡ ಬದಲಾಗಬೇಕು ಎಂಬುದು ಅವರ ಅರಿವಿಗೆ ಬಂದಂತಿದೆ.
ಈಗಷ್ಟೇ ಮನೆಯ ಹೊರಗೆ ಒಂದು ಪರೀಕ್ಷೆಯನ್ನು ಎದುರಿಸಿ ಮರಳಿರುವ ಸಂತೋಷ್ ಮನೆಯೊಳಗಿನ ಹಲವು ರೀತಿಯ ಪರೀಕ್ಷೆಗಳನ್ನು ಹೇಗೆ ಎದುರಿಸುತ್ತಾರೆ? ಅದರಲ್ಲಿ ಗೆಲ್ಲುತ್ತಾರಾ ಅಥವಾ ಸೋತು ಮರಳುತ್ತಾರಾ? ಕಾದು ನೋಡಬೇಕಿದೆ.
ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 10ರ ಮೊದಲ ವೀಕೆಂಡ್ ಎಪಿಸೋಡಿನ ಕಿಚ್ಚನ ಪಂಚಾಯಿತಿ ನಿನ್ನೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇಂದಿನ ‘ಸೂಪರ್ ಸಂಡೆ ಸುದೀಪ್ (Sudeep) ಜೊತೆ’ಯಲ್ಲಿ ಸ್ಪರ್ಧಿಗಳ ಜೊತೆಗೆ ಮಾತುಕತೆಗೆ ಇಳಿದ ಕಿಚ್ಚ, ತಮಾಷೆಯಾಗಿ ಮಾತಾಡುತ್ತ, ನಗುನಗಿಸುತ್ತಲೇ ಹೇಳಬೇಕಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದರು.
ನಿನ್ನೆಯ ಎಪಿಸೋಡಿನಲ್ಲಿ ನಾಮಿನೇಷನ್ ಪಟ್ಟಿಯಲ್ಲಿ ಸ್ನೇಕ್ ಶ್ಯಾಮ್, ಮೈಕಲ್ ಅಜಯ್, ಸಿರಿ, ನೀತು,ಡ್ರೋಣ್ ಪ್ರತಾಪ್, ಇವರೆಲ್ಲ ಇದ್ದರು. ಇವರಲ್ಲಿ ಮೊದಲು ಸೇಫ್ ಆಗಿದ್ದು ನೀತು ಅವರು. ನಂತರ ಉಳಿದಿದ್ದು, ಮೈಕಲ್, ಸಿರಿ ಮತ್ತು ಸ್ನೇಕ್ ಶ್ಯಾಮ್ (Snake Shyam) ಅವರು. ಅವರಲ್ಲಿ ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಎವಿಕ್ಟೆಡ್ ಕಂಟೆಸ್ಟೆಂಟ್ ಆಗಿ ಸ್ನೇಕ್ ಶ್ಯಾಮ್ ಮನೆಯಿಂದ ಹೊರಗೆ (Eliminate) ಬಿದ್ದಿದ್ದಾರೆ.
ಐವತ್ತೆಂಟು ಸಾವಿರ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟ ಖ್ಯಾತಿ ಹೊಂದಿದ್ದ ಶ್ಯಾಮ್ ಅವರನ್ನು ಜನರು ಹೋಲ್ಡ್ ನಲ್ಲಿಟ್ಟಿದ್ದರು. ಬಿಗ್ ಬಾಸ್ ಅವರನ್ನು ಉಳಿದ ಹೋಲ್ಡ್ ಸ್ಪರ್ಧಿಗಳ ಜೊತೆಗೆ ಮನೆಯೊಳಗೆ ಕಳಿಸಿದ್ದರು. ‘ಒಂದು ವಾರ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸಲಾಗುತ್ತದೆ’ ಎಂದೂ ಆಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು. ಹೋಗುವಾಗ ಇಂಟ್ರೆಸ್ಟಿಂಗ್ ಕಂಟೆಸ್ಟೆಂಟ್ ಆಗಿಯೇ ಕಾಣಿಸಿದ್ದ ಶ್ಯಾಮ್, ಬಿಗ್ ಬಾಸ್ ಮನೆಯೊಳಗೆ ಸದ್ದು ಮಾಡಿದ್ದು ಕಡಿಮೆ. ಇಂದಿನ ಎಪಿಸೋಡ್‌ನಲ್ಲಿಯೂ ಉಳಿದ ಸ್ಪರ್ಧಿಗಳಲ್ಲಿ ಹೆಚ್ಚಿನ ಜನರು ಶ್ಯಾಮ್ ಅವರೇ ಹೊರಗೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು. ಇದೀಗ ಅವರು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಿದ್ದಿದ್ದಾರೆ.
‘ನನಗೆ ಇಲ್ಲಿ ಸಾಕಷ್ಟು ಸ್ನೇಹಿತರು ಇದ್ದರು. ಆದ್ರೆ ಇಲ್ಲಿ ನನಗೆ ಹೆಲ್ತ್ ಕೈಕೊಟ್ಟಿತು. ಹಾಗೆಯೇ ಪ್ರಾಣಿಗಳ ನೆನಪು ತುಂಬ ಕಾಡುತ್ತಿತ್ತು. ಅದೇ ಕಾರಣಕ್ಕೆ ನನಗೆ ಇಲ್ಲಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ’ ಎಂದು ಅಭಿಪ್ರಾಯ ಹಂಚಿಕೊಂಡರು.
ಶ್ಯಾಮ್ ಅವರನ್ನು ಬೀಳ್ಕೊಟ್ಟ ಉಳಿದ ಸ್ಪರ್ಧಿಗಳು ಸದ್ಯಕ್ಕೇನೋ ನಿರಾಳರಾಗಿದ್ದಾರೆ. ಆದರೆ ಈ ನೆಮ್ಮದಿ ಎಷ್ಟು ಕಾಲ ಇರಬಹುದು? ಎರಡನೇ ವಾರದ ಬಿಗ್ ಬಾಸ್ ಮನೆಯೊಳಗಿನ ಬದುಕು ಹೇಗಿರಬಹುದು? ಬಿಗ್ ಬಾಸ್ ಮನೆಯೊಳಗಿನಿಂದ ಹೊರಬೀಳುವ ಮುಂದಿನ ಸ್ಪರ್ಧಿ ಯಾರು? ಹೀಗೆ ಹತ್ತಾರು ವಿಷಯಗಳನ್ನು JioCinema 24ಗಂಟೆ ನೇರಪ್ರಸಾರದಲ್ಲಿ ನೋಡಬಹುದು.