Tag: elephant

  • ಸಕ್ರೆಬೈಲ್​ ಆನೆಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ – ತನಿಖೆಗೆ ಈಶ್ವರ್‌ ಖಂಡ್ರೆ ಆದೇಶ

    ಸಕ್ರೆಬೈಲ್​ ಆನೆಗಳ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ – ತನಿಖೆಗೆ ಈಶ್ವರ್‌ ಖಂಡ್ರೆ ಆದೇಶ

    ಶಿವಮೊಗ್ಗ: ನಗರದಲ್ಲಿ (Shivamogga) ನಡೆದ ದಸರಾದದಲ್ಲಿ ಭಾಗವಹಿಸಿದ್ದ ಸಕ್ರೆಬೈಲ್ (Sakrebyle)​ ಆನೆಬಿಡಾರದ ಬಾಲಣ್ಣ, ಸಾಗರ್​ ಸೇರಿದಂತೆ ಮೂರು ಆನೆಗಳು (Elephant) ಅನಾರೋಗ್ಯದಿಂದ ಬಳಲುತ್ತಿವೆ. ಬಿಡಾರದ ಆನೆಗಳ ಅನಾರೋಗ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್​ ಖಂಡ್ರೆ (Eshwara Khandre) ತನಿಖೆ ಕೈಗೊಂಡು ಆಗಿರುವ ವೈಫಲ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಪ್ರಕಟಣೆ ಹೊರಡಿಸಿದ್ದಾರೆ.

    ಪ್ರಕಟಣೆಯಲ್ಲಿ ಏನಿದೆ?
    ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದು ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿದ್ದ 35 ವರ್ಷದ ಬಾಲಣ್ಣ ಆನೆಗೆ ಐ.ವಿ. (IV) ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಆದ ನಿರ್ಲಕ್ಷ್ಯದಿಂದ ಸೋಂಕು ತಗುಲಿ ನರಳುತ್ತಿದೆ. ಇದರ ಜೊತೆಗೆ ಶಿಬಿರದಲ್ಲಿರುವ ಸಾಗರ್ ಸೇರಿದಂತೆ ಒಟ್ಟು 4 ಆನೆಗಳು ಗಾಯದಿಂದ ಬಳಲುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು. ಇದನ್ನೂ ಓದಿ: ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

    ರಾಜ್ಯದಲ್ಲಿರುವ ಎಲ್ಲಾ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ವೈದ್ಯಾಧಿಕಾರಿ ಇರಬೇಕು. ಸದ್ಯ ಪಶುವೈದ್ಯರ ಕೊರತೆಯಿರುವ ಬಗ್ಗೆ ವರದಿಯಾಗಿದ್ದು, ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು. ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವಾಗ ವೈದ್ಯಾಧಿಕಾರಿ, ಇಲಾಖಾ ಅಧಿಕಾರಿ ಅಥವಾ ಸಿಬ್ಬಂದಿಯ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸಿನೊಂದಿಗೆ ಒಂದು ವಾರದೊಳಗೆ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಚಿವ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ – ತಾಲೀಮು ಆರಂಭಿಸಿದ ಗಜಪಡೆ

  • ಚಿಕ್ಕಮಗಳೂರು | ಒಂದೂವರೆ ವರ್ಷದಿಂದ ರೈತರಿಗೆ ಕಾಟ ಕೊಡ್ತಿದ್ದ ಪುಂಡಾನೆ ಸೆರೆ

    ಚಿಕ್ಕಮಗಳೂರು | ಒಂದೂವರೆ ವರ್ಷದಿಂದ ರೈತರಿಗೆ ಕಾಟ ಕೊಡ್ತಿದ್ದ ಪುಂಡಾನೆ ಸೆರೆ

    ಚಿಕ್ಕಮಗಳೂರು: ಜಿಲ್ಲೆಯ ಎನ್‍ಆರ್‌ಪುರ (NR Pura) ಸುತ್ತಮುತ್ತ ಕಳೆದ ಒಂದೂವರೆ ವರ್ಷದಿಂದ ರೈತರಿಗೆ ಹಾಗೂ ಕಾಡಂಚಿನ ಗ್ರಾಮದ ಜನರಿಗೆ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು (Elephant) ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.

    ಪುಂಡಾನೆ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ಉಪಟಳ ನೀಡುತ್ತಿತ್ತು. ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಈ ಸಲಗವು ನಿರಂತರವಾಗಿ ಬೆಳೆ ಹಾನಿ ಮಾಡುತ್ತಿತ್ತು. ಇದರಿಂದ ರೈತರ ತೋಟಗಳಿಗೆ ಅಪಾರ ನಷ್ಟ ಉಂಟಾಗಿತ್ತು. ಇದನ್ನೂ ಓದಿ: ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

    ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಶೃಂಗೇರಿ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆನೆ ಸೆರೆ ಹಿಡಿಯುವಂತೆ ಆದೇಶಿಸಿದ್ದರು. ಹಾಗಾಗಿ ಸಕ್ರೆಬೈಲಿನಿಂದ ಮೂರು ಕುಮ್ಕಿ ಆನೆಗಳು ಹಾಗೂ ಕುಶಾಲನಗರದ ದುಬಾರೆಯಿಂದ ಮೂರು ಆನೆಗಳು ಸೇರಿ ಒಟ್ಟು 6 ಕುಮ್ಕಿ ಆನೆಗಳು ಕಾರ್ಯಾಚರಣೆಯಗೆ ಆಗಮಿಸಿದ್ದವು. ಇಂದು (ಅ.6) ಬೆಳಿಗ್ಗೆ ಗುಡ್ಡೆಹಳ್ಳ ಬಳಿ ಅರವಳಿಕೆ ನೀಡಿ ಆನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ `ಆನೆಪಥ’: ಈಶ್ವರ್ ಖಂಡ್ರೆ

  • ಶಿವಮೊಗ್ಗ ದಸರಾ – ತಾಲೀಮು ಆರಂಭಿಸಿದ ಗಜಪಡೆ

    ಶಿವಮೊಗ್ಗ ದಸರಾ – ತಾಲೀಮು ಆರಂಭಿಸಿದ ಗಜಪಡೆ

    ಶಿವಮೊಗ್ಗ: ನಗರದಲ್ಲಿ ಸಂಭ್ರಮದ ದಸರಾ ಆಚರಣೆ ನಡೆಯುತ್ತಿದ್ದು, ಜಂಬೂಸವಾರಿಯಲ್ಲಿ ಭಾಗವಹಿಸಲು ಸಕ್ರೆಬೈಲಿನಿಂದ ಗಜಪಡೆ ಆಗಮಿಸಿದೆ.

    ಮೂರು ಆನೆಗಳು ಶಿವಮೊಗ್ಗಕ್ಕೆ ಆಗಮಿಸಿದ್ದು, ಗಜಪಡೆಗೆ ಶಾಸಕ ಎಸ್.ಎನ್ ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಆರತಿ ಎತ್ತಿ ಸ್ವಾಗತ ಕೋರಿದ್ದಾರೆ. ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದ 2ನೇ ದೊಡ್ಡ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ ಚಾಲನೆ

    ಶಿವಮೊಗ್ಗ ನಗರದಲ್ಲಿ ಗಜಪಡೆ ತಾಲೀಮು ಆರಂಭಿಸಿವೆ. ದಸರಾದ ಕೊನೆಯ ದಿನ ಅದ್ದೂರಿ ಜಂಬೂಸವಾರಿ ನಡೆಯಲಿದೆ. ಈ ಭಾರಿಯೂ ಸಾಗರ್ ಆನೆ ಅಂಬಾರಿ ಹೋರಲಿದೆ. ಸಾಗರ್‍ಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. 650 ಕೆಜಿ ಬೆಳ್ಳಿಯ ಅಂಬಾರಿಯಲ್ಲಿ ನಾಡದೇವಿ ಚಾಮುಂಡಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

    ರಾಜ್ಯದಲ್ಲಿ ಎರಡನೇ ಅತಿದೊಡ್ಡ ದಸರಾ ಎಂಬ ಖ್ಯಾತಿ ಶಿವಮೊಗ್ಗ ದಸರಾಕ್ಕೆ ಇದೆ. ಈ ಭಾರಿ ದಸರಾ ಜಂಬೂ ಸವಾರಿ ನೋಡಲು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಗಜಪಡೆಗೆ ಆಹ್ವಾನ – ಈ ಬಾರಿ 10 ದಿನಗಳ ಕಾಲ ಸಂಭ್ರಮದ ಉತ್ಸವ

  • ದುಡ್ಡು ಏನ್‌ ಮೊಟ್ಟೆಯಿಡುತ್ತಾ? – ಅರಣ್ಯ ಸಚಿವರಿಗೆ ಸಿಎಂ ಪ್ರಶ್ನೆ

    ದುಡ್ಡು ಏನ್‌ ಮೊಟ್ಟೆಯಿಡುತ್ತಾ? – ಅರಣ್ಯ ಸಚಿವರಿಗೆ ಸಿಎಂ ಪ್ರಶ್ನೆ

    ಬೆಂಗಳೂರು: ದುಡ್ಡು ಏನ್‌ ಮೊಟ್ಟೆಯಿಡುತ್ತಾ..? ದುಡ್ಡು ಇಲ್ವೇನ್ರಿ ನಿಮ್ ಹತ್ರ? ಏನು ಅರಣ್ಯ ಇಲಾಖೆ ಬಡ ಇಲಾಖೆನಾ..? ಹೀಗಂತ ಸಿಎಂ ಸಿದ್ದರಾಮಯ್ಯ (Siddaramaiah), ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಅವರಿಗೆ ಪ್ರಶ್ನೆ ಮಾಡಿದ ಪ್ರಸಂಗವೊಂದು ನಡೆಯಿತು.

    ಅರಣ್ಯ ಇಲಾಖೆಯ (Forest Department) ಹಮ್ಮಿಕೊಂಡಿದ್ದ ʻರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025ʼ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮಲ್ಲಿ ವೇದಿಕೆಯಲ್ಲೇ ಸಿಎಂ ಈ ರೀತಿ ಪ್ರಶ್ನೆ ಮಾಡಿದ್ರು. ಆನೆ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾತಾನಾಡಿದ ಸಿಎಂ, ಇದಕ್ಕೆ ರೈಲ್ವೇ ಬ್ಯಾರಿಕೇಡ್ (Railway Barricade) ವ್ಯವಸ್ಥೆಗೆ ಸೂಚಿಸಿದ್ರು. ಈ ವೇಳೆ 410 ಕಿಮಿ ಆಗಿದೆ ಇನ್ನು 500 ಕಿಮಿ ಮಾಡಬೇಕು ಅಂತಾ ಖಂಡ್ರೆ ಹೇಳಿದ್ರು. ಸರಿ ಮಾಡಿ ದುಡ್ ಇಲ್ವಾ ನಿಮ್ ಇಲಾಖೆನಲ್ಲಿ? ಇದನ್ನೇ ಹೇಳ್ಕೊಂಡು ಕೂರೋದಲ್ಲ. ನಿಮ್ದು ಬಡ ಇಲಾಖೆ ಏನು ಅಲ್ವಲ್ಲ? ಅಂತಾ ಟಾಂಗ್ ಕೊಟ್ರು. ಇದನ್ನೂ ಓದಿ: Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    ಬೋರ್ಡ್‌ನಲ್ಲಿ ರಿಜೆಕ್ಟ್ ಮಾಡ್ತಾರೆ ಸರ್, ಫೈನಾನ್ಸ್ ನಿಮ್ದೆ ಅಲ್ವಾ ಅಂತಾ ಖಂಡ್ರೆನೂ ಮರು ಉತ್ತರ ನೀಡಿದ್ರು‌. ಯಾರ್ರಿ ಅವ್ರು ರಿಜೆಕ್ಟ್ ಮಾಡೋರು ಕರ್ಕೊಂಡು ಬನ್ನಿ. ಅಂತಾ ಸಿಎಂ ಹೇಳಿದ್ರು. ಇನ್ನು ಈಗ ವೀರಪ್ಪನ್ ನಂತಹ ಚೋರನ ಕಾಟ ಇಲ್ಲ, ಈಗ ಮಾನವ – ಪ್ರಾಣಿಗಳ ಸಂಘರ್ಷವೇ ದೊಡ್ಡ ವಿಚಾರವಾಗಿದೆ. ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ ಕಾಡು ಕಡಿಮೆಯಾಗಿದೆ. ಹಿರಿಯ ಅಧಿಕಾರಿಗಳು ಮೊದಲು ಇದರ ಬಗ್ಗೆ ಗಮನ ಹರಿಸಿ ಕಾಡುಬೆಳೆಸಬೇಕು ಜೊತೆಗೆ ಕಾಡಿಗೆ ಹೋಗಬೇಕು ಆಗ ಕಿರಿಯ ಅಧಿಕಾರಿಗಳು ಉತ್ಸಾಹದಿಂದ ಕೆಲ್ಸ ಮಾಡ್ತಾರೆ ಅಂತಾ ಕಿವಿಮಾತು ಹೇಳಿದ್ರು. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಬರುವಂತಿದೆ ಈ ದೃಶ್ಯ

    ಹುಲಿ ಚಿರತೆ ಆನೆಗಳು ಕಾಡು ಬಿಟ್ಟು ನಾಡಿಗೆ ಬರುತ್ತಿದೆ. ಅನೇಕರು ಇದ್ರಲ್ಲಿ ಸಾಯುತ್ತಿದ್ದಾರೆ. ಸರ್ಕಾರ ಹುತಾತ್ಮರಿಗೆ ಪರಿಹಾರ ಕೊಡೋದು ದೊಡ್ಡದಲ್ಲ. ಆದ್ರೇ ಮಾನವ – ಪ್ರಾಣಿಗಳ ಸಂಘರ್ಷ ಕಡಿಮೆಗೆ ಪ್ರಯತ್ನ ಪಡಬೇಕು. ಪ್ರಾಣಿಗಳು ಕಾಡು ಬಿಟ್ಟು ಯಾಕೆ ಹೊರಗೆ ಬರುತ್ತಿದೆ. ಇದು ಸವಾಲಿನ ಪ್ರಶ್ನೆಯಾಗಿದೆ. ಕಾಡಿನಲ್ಲಿ ಆಹಾರ ನೀರು ಸಿಕ್ಕರೆ ನಾಡಿಗೆ ಬರೋದು ಕಡಿಮೆಯಾಗುತ್ತದೆ. ಅರಣ್ಯ ಪ್ರದೇಶದ ಅಧಿಕಾರಿಗಳು ಇದನ್ನು ಮಾಡಲೇಬೇಕು. ಕಾಡಿನಲ್ಲಿ ನೀರು, ಆಹಾರದ ವ್ಯವಸ್ಥೆ ಸರಿಯಾಗಬೇಕು ಅಂದ್ರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

  • ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!

    ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!

    ಹಾಸನ: ಒಂಟಿ ಸಲಗವೊಂದು (Elephant) ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿ ವಾಹನ ಸವಾರರು ಪರದಾಡುವಂತೆ ಮಾಡಿದ ಘಟನೆ ಸಕಲೇಶಪುರದ (Sakleshpura) ಹಳ್ಳಿಬೈಲು ಗ್ರಾಮದ ಬಳಿ ನಡೆದಿದೆ.

    ಗುರುವಾರ ರಾತ್ರಿ, ಗ್ರಾಮದ ಬಳಿ ದೈತ್ಯಾಕಾರದ ಒಂಟಿಸಲಗ ಬೈನೆ ಮರವನ್ನು ನೆಲಕ್ಕುರುಳಿಸಿ ಆರಾಮಾಗಿ ತಿನ್ನುತ್ತಾ ನಿಂತಿತ್ತು. ಇದರಿಂದ ಕೆಲಕಾಲ ಹಲವಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು. ಕೆಲಕಾಲ ವಾಹನ ಸವಾರರು ಇದರಿಂದ ಪರದಾಡಿದ್ದಾರೆ. ಬಳಿಕ ವಿಡಿಯೋ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಚಾಲಕರು ಒತ್ತಾಯಿಸಿದ್ದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಆಸಿಡ್ ಕುಡಿಸಿ ಸೊಸೆಯನ್ನು ಕೊಂದ ಅತ್ತೆ!

    ಸ್ಥಳಕ್ಕೆ ಇಟಿಎಫ್ ಸಿಬ್ಬಂದಿ ಬಂದು ಪಟಾಕಿ ಸಿಡಿಸಿ ಸಲಗವನ್ನು ಕಾಡಿಗೆ ಓಡಿಸಿದ್ದಾರೆ. ಬಳಿಕ ಸುರಿಯುತ್ತಿರುವ ಮಳೆಯಲ್ಲಿಯೇ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ

  • ಮನೆ ಬಳಿಯೇ ಸೈಲೆಂಟಾಗಿ ನಿಂತಿದ್ದ ಕಾಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

    ಮನೆ ಬಳಿಯೇ ಸೈಲೆಂಟಾಗಿ ನಿಂತಿದ್ದ ಕಾಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ!

    ಹಾಸನ: ಬೇಲೂರಿನ (Beluru) ಲಿಂಗಾಪುರದಲ್ಲಿ ದೈತ್ಯಾಕಾರದ ಕಾಡಾನೆಯೊಂದು (Elephant) ಸೈಲೆಂಟಾಗಿ ಮನೆಯೊಂದರ ಬಳಿ ಬಂದು ನಿಂತು ಮನೆ ಮಂದಿಗೆ ಆತಂಕ ಉಂಟು ಮಾಡಿದೆ. ಅಲ್ಲದೇ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಮನೆ ಮಂದಿ ಬಚಾವ್ ಆಗಿದ್ದಾರೆ.

    ಇಂದು (ಆ.13) ಬೆಳಿಗ್ಗೆ ಕಾಡಾನೆಗಳು ಮನೆಯ ಮುಂಭಾಗದಿಂದ ದಾಟಿ ಹೋಗಿದ್ದವು. ಇದರಿಂದ ಗಾಬರಿಗೊಂಡಿದ್ದ ಮನೆಯ ಮಾಲೀಕರು ಮಹಡಿ ಮೇಲೆ ನಿಂತು ನೋಡಿದಾಗ ಒಂಟಿಕೋರೆ ಕಾಡಾನೆ ಕಾಣಿಸಿಕೊಂಡಿದೆ. ಮನೆಯವರು ಸದ್ದು ಮಾಡುತ್ತಿದ್ದಂತೆ ಕಾಫಿ ತೋಟದ ಒಳಗೆ ಸೈಲೆಂಟ್ ಆಗಿ ಅಡಗಿದ್ದ ಕಾಡಾನೆ ಹೊರ ಬಂದಿದ್ದು ವಿಡಿಯೋ ಮಾಡುತ್ತಿದ್ದವರ ಮೇಲೆ ದಾಳಿಗೆ ಯತ್ನಿಸಿದೆ. ಇದನ್ನೂ ಓದಿ: ಸೆಲ್ಫಿ ತೆಗೆಯಲು ಹೋಗಿ ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ ಆಗಿದ್ದ ವ್ಯಕ್ತಿಗೆ 25 ಸಾವಿರ ದಂಡ!

    ನಂತರ ರಸ್ತೆ ದಾಟಿ ಕಾಫಿ ತೋಟದೊಳಗೆ ಕಾಡಾನೆ ಹೋಗಿದ್ದು, ಕಾಡಾನೆ ಬರುವುದರ ಅರಿವಿಲ್ಲದೆ ವಾಹನ ಸವಾರರ ಸಂಚಾರ ಮಾಡಿದ್ದಾರೆ. ಈ ವೇಳೆ ಕಾರಲ್ಲಿದ್ದವರು ಸಹ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.

    ಅರೇಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮತ್ತೆ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ

  • ಇಂದು ವಿಶ್ವ ಆನೆ ದಿನಾಚರಣೆ – ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ರಾಜ್ಯದಲ್ಲೇ ನಂ.1

    ಇಂದು ವಿಶ್ವ ಆನೆ ದಿನಾಚರಣೆ – ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ರಾಜ್ಯದಲ್ಲೇ ನಂ.1

    ಚಾಮರಾಜನಗರ: ವನ್ಯ ಪ್ರಾಣಿಗಳ ತಾಣ ಅಂದ್ರೆ ಅದು ಚಾಮರಾಜನಗರ. ರಾಜ್ಯದಲ್ಲಿ ಎರಡು ಹುಲಿ ಸಂರಕ್ಷಿತ ಅರಣ್ಯ ಹಾಗೂ ಎರಡು ವನ್ಯಧಾಮ ಹೊಂದಿರುವ ಏಕೈಕ ಜಿಲ್ಲೆ. ಚಾಮರಾಜನಗರ ಹುಲಿಗಳಲ್ಲಿ ಅಷ್ಟೇ ಅಲ್ಲ, ಆನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್ 1 ಆಗಿದೆ.

    ಹೌದು, ಆ.12ರಂದು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ. ಇದೊಂದು ವನ್ಯಜೀವಿಗಳ ವಾಸಸ್ಥಾನವೆಂದರೆ ತಪ್ಪಲ್ಲ. 2023ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದವು. ಈ ಪೈಕಿ ಚಾಮರಾಜನಗರ ಜಿಲ್ಲೆಯಲ್ಲೇ 2,500ಕ್ಕೂ ಹೆಚ್ಚು ಆನೆಗಳಿದ್ದವು. ಬಂಡೀಪುರದಲ್ಲಿ 1,116, ಬಿಆರ್‌ಟಿ 619, ಮಹದೇಶ್ವರ ವನ್ಯಧಾಮ 706, ಕಾವೇರಿ ವನ್ಯಧಾಮದಲ್ಲಿ 236 ಆನೆಗಳಿದ್ದವು. ಇದೀಗ ಆನೆಗಳ ಸಂಖ್ಯೆಯಲ್ಲಿ ಏರಿಯಾಗಿದೆ.ಇದನ್ನೂ ಓದಿ: ಆಟವಾಡುತ್ತಾ ಬಾವಿಗೆ ಬಿದ್ದ 8ರ ಬಾಲಕಿ ಸಾವು

    ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಬಂಡೀಪುರದಲ್ಲಿ 1,500ಕ್ಕೂ ಹೆಚ್ಚು, ಮಹದೇಶ್ವರ, ಕಾವೇರಿ, ಬಿಆರ್‌ಟಿ ಮೂರು ಸೇರಿ ಅಂದಾಜು 1,800ಕ್ಕೂ ಹೆಚ್ಚು ಆನೆಗಳಿವೆ ಎಂದು ತಿಳಿಸಿದ್ದಾರೆ. ಅದಲ್ಲದೇ ರಾಜ್ಯದಲ್ಲಿ ಕೂಡ ಆನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2025ರ ವರದಿ ಇನ್ನೂ ಅಧಿಕಾರಿಗಳ ಕೈಸೇರಬೇಕಿದೆ.

    ಇನ್ನೂ ಚಾಮರಾಜನಗರ ಜಿಲ್ಲೆಯ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲೂ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವು ಕಾರಣವಾಗಿದೆ. ಅಲ್ಲದೇ ಕಾಡಂಚಿನ ಜನರು ಅರಣ್ಯ ಇಲಾಖೆಗೆ ಸಾಕಷ್ಟು ಸಹಕಾರ ಕೊಡ್ತಿದ್ದಾರೆ. ಕಾಡಾನೆ-ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಕಾರ್ಯಗಳ ಪರಿಣಾಮ ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿ ಅಳವಡಿಕೆ, ಆನೆ ಕಂದಕ ಸೇರಿ ಹಲವು ಯೋಜನೆಗಳ ಪರಿಣಾಮ ಕಾಡಾನೆ ಸಂಖ್ಯೆ ಹೆಚ್ಚಳಕ್ಕೆ ನೆರವಾಗಿದೆ.ಇದನ್ನೂ ಓದಿ: ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ

  • ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

    ಚಿಕ್ಕಮಗಳೂರು | ಆನೆ ದಾಳಿಗೆ ವೃದ್ಧ ಬಲಿ – 4 ದಿನಗಳ ಅಂತರದಲ್ಲಿ ಇಬ್ಬರು ಸಾವು

    ಚಿಕ್ಕಮಗಳೂರು: ಆನೆ (Elephant) ದಾಳಿಗೆ ಕಾಫಿನಾಡಲ್ಲಿ ಮತ್ತೊಂದು ಬಲಿಯಾಗಿದೆ. ಎನ್‍ಆರ್‌ಪುರ (NRPura) ತಾಲೂಕಿನ ಬಾಳೆಹೊನ್ನೂರು ಸಮೀಪದ ಅಂಡುವಾನೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ಮಾಡಿ, ಕೊಂದು ಹಾಕಿದೆ.

    ಮೃತರನ್ನು ಸುಬ್ರಾಯಗೌಡ (65) ಎಂದು ಗುರುತಿಸಲಾಗಿದೆ. 4 ದಿನದ ಅಂತರದಲ್ಲಿ ಇದು 2ನೇ ಸಾವಾಗಿದ್ದು, ಕಳೆದ ಗುರುವಾರವಾಷ್ಟೆ ಕವಿತಾ (25) ಎಂಬವರು ಆನೆ ದಾಳಿಗೆ ಬಲಿಯಾಗಿದ್ದರು. 4 ದಿನ ಕಳೆಯುವಷ್ಟರಲ್ಲಿ ಈಗ ಮತ್ತೊಂದು ಬಲಿಯಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

    ಇಂದು (ಭಾನುವಾರ) ಮೂಡಿಗೆರೆ-ಬೇಲೂರು ಗಡಿಯಲ್ಲಿ 25 ಆನೆಗಳು ಕಾಣಿಸಿಕೊಂಡಿದ್ದವು. ಮೇಲಿಂದ ಮೇಲೆ ಆನೆ ದಾಳಿ ಪ್ರಕರಣ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ.

    ಆನೆ ದಾಳಿ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಾಳಿ ಮಳೆ ಅಬ್ಬರಕ್ಕೆ ಮನೆ ಮೇಲೆ ಉರುಳಿದ ಬೃಹತ್ ಮರ – ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದಿಂದ ತೆರವು

  • ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಣಿಗಳ ವಿನಿಮಯ

    ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಾಣಿಗಳ ವಿನಿಮಯ

    – ಜಪಾನ್‌ಗೆ 4 ಆನೆ ನೀಡಿ, ಚೀತಾ, ಜಾಗ್ವಾರ್, ಪೂಮಾ, ಚಿಂಪಾಂಜಿ, ಕ್ಯಾಪುಚಿನ್ ಕೋತಿ ತರಲು ಸಿದ್ಧತೆ

    ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ (Bannerghatta Biological Park) ಇತಿಹಾಸದಲ್ಲೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

    ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್‌ (Himeji Central Park) ಜೊತೆ ಪ್ರಾಣಿಗಳ ವಿನಿಮಯ ಮಾಡಿಕೊಳ್ಳಲು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಉದ್ಯಾನವನದ 1 ಗಂಡು ಮತ್ತು 3 ಹೆಣ್ಣು ಆನೆಗಳಾದ ಸುರೇಶ್ (8), ಗೌರಿ ( 9 ), ಶೃತಿ (7) ತುಳಸಿ (5) ಜಪಾನ್‌ಗೆ ನೀಡಿ, ಪ್ರತಿಯಾಗಿ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳನ್ನು ತರಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ – ಇಂದೇ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಸಾಧ್ಯತೆ

    ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕತಾರ್ ಏರ್‌ವೇಸ್‌ನ ಸರಕು ವಿಮಾನ B777-200F ದಲ್ಲಿ ಜಪಾನ್ ದೇಶದ ಒಸಾಕಾ ಕಾನ್ಸೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಆಗಲಿವೆ. ಸುಮಾರು 20 ಗಂಟೆಗಳ ಪ್ರಯಾಣಕ್ಕೆ ತಯಾರಿ ಮಾಡಲಾಗಿದೆ. ಈಗಾಗಲೇ ಆನೆಗಳಿಗೆ ವಿಮಾನ‌ ಪ್ರಯಾಣಕ್ಕೆ ತರಬೇತಿ ನೀಡಲಾಗಿದೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ತೆರಳಲಿದ್ದಾರೆ. ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಆನೆಗಳಿಗೆ ತರಬೇತಿ ನೀಡಲು ಅವರು ತೆರಳಲಿದ್ದಾರೆ. ಎರಡು ವಾರಗಳ ಕಾಲ ಹಿಮೇಜಿ ಪಾರ್ಕ್ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

  • ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

    ಚಿಕ್ಕಮಗಳೂರು | ಕಾಡಾನೆ ದಾಳಿಗೆ ಮಹಿಳೆ ಬಲಿ

    ಚಿಕ್ಕಮಗಳೂರು: ಕಾಡಾನೆ (Elephant) ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಘಟನೆ ಎನ್.ಆರ್‌ ಪುರ (NRpura) ತಾಲೂಕಿನ ಬನ್ನೂರು ಬಳಿ ನಡೆದಿದೆ.

    ಮೃತ ಮಹಿಳೆಯನ್ನು ದಾವಣಗೆರೆಯ (Davanagere) ಹೊನ್ನಾಳಿ ಮೂಲದ ಅನಿತಾ (25) ಎಂದು ಗುರುತಿಸಲಾಗಿದೆ. ಅವರು ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ ಆಗುವಾಗ ಆನೆ ದಾಳಿ ಮಾಡಿದೆ.

    ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.