Tag: Electronic Voting Machine

  • ಪಂಚರಾಜ್ಯಗಳಲ್ಲಿ ಸೋಲು: ಇವಿಎಂ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

    ಪಂಚರಾಜ್ಯಗಳಲ್ಲಿ ಸೋಲು: ಇವಿಎಂ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

    ನವದೆಹಲಿ: ಪಂಚರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಗೋಲ್‍ಮಾಲ್ ನಡೆದಿದೆ ಎಂದು ಆರೋಪಿಸಿ ವಿದ್ಯುನ್ಮಾನ ಮತ ಯಂತ್ರ (ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್-ಇವಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

    bjp - congress

    ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಹಾಗೂ ಉತ್ತರಾಖಂಡದಲ್ಲಿ ಇಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದ್ದು, ಐದು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ ದೆಹಲಿಯಲ್ಲಿ ಪಕ್ಷದ ಕಚೇರಿಯ ಮುಂದೆ ಇವಿಎಂ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಇದನ್ನೂ ಓದಿ: ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    ಮಧ್ಯಾಹ್ನ 2 ಗಂಟೆಯ ಟ್ರೆಂಡ್ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ 271, ಎಸ್‍ಪಿ 122, ಬಿಎಸ್‍ಪಿ 4, ಕಾಂಗ್ರೆಸ್ 3 ಮತ್ತು ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು

    ಪಂಜಾಬ್‍ನಲ್ಲಿ ಆಪ್ 90, ಕಾಂಗ್ರೆಸ್ 18, ಶಿರೋಮಣಿ ಅಖಾಲಿ ದಳ 6, ಬಿಜೆಪಿ 2, ಇತರರು 1 ಕ್ಷೇತ್ರದಲ್ಲಿ ಮುಂದೆ ಸಾಗುತ್ತಿದ್ದರೆ, ಉತ್ತರಾಖಂಡದಲ್ಲಿ ಬಿಜೆಪಿ 43, ಕಾಂಗ್ರೆಸ್ 23, ಆಪ್ 0, ಇತರರು 4 ಕ್ಷೇತ್ರಗಳಲ್ಲಿ, ಗೋವಾದಲ್ಲಿ ಬಿಜೆಪಿ 18, ಕಾಂಗ್ರೆಸ್ 12, ಆಪ್ 3, ಇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮಣಿಪುರದಲ್ಲಿ ಬಿಜೆಪಿ 30, ಕಾಂಗ್ರೆಸ್ 08, ಎನ್‍ಪಿಎಫ್ 4, ಇತರರು 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ.