Tag: Electronic Devices

  • KPTCL ಪರೀಕ್ಷಾ ಅಕ್ರಮ: ಮತ್ತೆ ಮೂವರು ಆರೋಪಿಗಳ ಬಂಧನ – ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

    KPTCL ಪರೀಕ್ಷಾ ಅಕ್ರಮ: ಮತ್ತೆ ಮೂವರು ಆರೋಪಿಗಳ ಬಂಧನ – ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

    ಬೆಳಗಾವಿ: ಗೋಕಾಕ್ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷಾ ಅಕ್ರಮ (KPTCL Recruitment Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬೆಳಗಾವಿ (Belagavi) ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

    ಕಳೆದ ತಿಂಗಳು ಆ.07ರಂದು ಗೋಕಾಕ್ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ವಾಚ್ (Smart Watch) ಬಳಸಿ ಪರೀಕ್ಷೆ ಎದುರಿಸಿ, ಅಕ್ರಮದಲ್ಲಿ ಸಹಾಯ ಸೇರಿದಂತೆ ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನು (Electronic Devices) ಮಾರಾಟ ಮಾಡಿದ ಪ್ರಕರಣ ಸಂಬಂಧ ಈಗಾಗಲೇ 17 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: KPTCL ಪರೀಕ್ಷೆಯಲ್ಲಿ ಅಕ್ರಮ- N95 ಮಾಸ್ಕ್ ಒಳಗಡೆ ಎಲೆಕ್ಟ್ರಾನಿಕ್‌ ಡಿವೈಸ್ ಸೇಲ್ ಮಾಡಿದ್ದ ಆರೋಪಿ ಅರೆಸ್ಟ್

    ಬಗೆದಷ್ಟು ಅಕ್ರಮದ ವಾಸನೆ:
    ಇಂದು ಗೋಕಾಕ್ ತಾಲೂಕಿನ ಅರಭಾವಿ ಪಟ್ಟಣದ ಅಕ್ಷಯ್ ದುಂದಪ್ಪ ಭಂಡಾರಿ (33), ಬೀರಣಗಡ್ಡಿ ಗ್ರಾಮದ ಬಸವರಾಜ ರುದ್ರಪ್ಪ ದುಂದನಟಿ (34), ರಾಜಾಪೂರ ಗ್ರಾಮದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ (22) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಅಕ್ಷಯ್ ಮತ್ತು ಶ್ರೀಧರ್ ಇಬ್ಬರು ಆರೋಪಿಗಳು ಪರೀಕ್ಷಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟ ಆರೋಪವಿದೆ. ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್‍ನ್ನು ಪ್ರಕರಣದ ಪ್ರಮುಖ ಆರೋಪಿ ಸಂಜು ಭಂಡಾರಿ ತಂದು ಕೊಟ್ಟಿದ್ದಾರೆ. ಬಂಧಿತರಿಂದ ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್, 18 ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಬಸವರಾಜ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದ ಆರೋಪವಿದ್ದು ಈತನಿಂದ ಒಂದು ಮೊಬೈಲ್, ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತ ಮೂರು ಜನ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬೊಮ್ಮಾಯಿಗೆ ಕಪ್ಪುಪಟ್ಟಿ ಪ್ರದರ್ಶನ

    Live Tv
    [brid partner=56869869 player=32851 video=960834 autoplay=true]

  • KPTCL ಪರೀಕ್ಷೆಯಲ್ಲಿ ಅಕ್ರಮ- N95 ಮಾಸ್ಕ್ ಒಳಗಡೆ ಎಲೆಕ್ಟ್ರಾನಿಕ್‌ ಡಿವೈಸ್ ಸೇಲ್ ಮಾಡಿದ್ದ ಆರೋಪಿ ಅರೆಸ್ಟ್

    KPTCL ಪರೀಕ್ಷೆಯಲ್ಲಿ ಅಕ್ರಮ- N95 ಮಾಸ್ಕ್ ಒಳಗಡೆ ಎಲೆಕ್ಟ್ರಾನಿಕ್‌ ಡಿವೈಸ್ ಸೇಲ್ ಮಾಡಿದ್ದ ಆರೋಪಿ ಅರೆಸ್ಟ್

    ಬೆಳಗಾವಿ: ಗೋಕಾಕ್‌ನಲ್ಲಿ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸೆಗಲು KPTCL ಪರೀಕ್ಷೆಯಲ್ಲಿ ಅಕ್ರಮ – N95  ಡಿವೈಸ್ ಸೇರಿ ಇತರ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ದೇವಸಂದ್ರ ಮೂಲದ ಮೊಹಮ್ಮದ್ ಅಜೀಮುದ್ದಿನ್ (37) ಬಂಧಿತ ಆರೋಪಿ. ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಕೋಟ್ಯಧಿಪತಿಯಾಗಿದ್ರೂ ಬಿಪಿಎಲ್ ಕಾರ್ಡ್‌ – ಜೆಡಿಎಸ್‌ ನಾಯಕನ ನಗರ ಸಭೆ ಸದಸ್ಯತ್ವ ರದ್ದು

    ಪರೀಕ್ಷಾ ಅಕ್ರಮ ನಡೆಸಲು ಬೇಕಾಗುವ ವಿವಿಧ ಬಗೆಯ ಎಲೆಕ್ಟ್ರಾನಿಕ್‌ ಡಿವೈಸ್ ಗಳನ್ನು (Electronic Devices) ದೆಹಲಿ ಮತ್ತು ಹೈದರಾಬಾದಿನಿಂದ ತಂದು ಸಂಜು ಭಂಡಾರಿ ಹಾಗೂ ಬೆಳಗಾವಿ ಜಿಲ್ಲೆಯ ಬೇರೆ ಜನರಿಗೆ ಮಾರಾಟ ಮಾಡುತ್ತಿದ್ದ ವಿಚಾರ ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು

    ಬಂಧಿತನಿಂದ ಎರಡು ಮೊಬೈಲ್ ಮತ್ತು ವಿವಿಧ ಬಗೆಯ 179 ಎಲೆಕ್ಟ್ರಾನಿಕ್‌ ಡಿವೈಸ್ ಗಳು, ಎಲೆಕ್ಟ್ರಾನಿಕ್‌ ಡಿವೈಸ್ ಅಳವಡಿಸಿದ 7 ಎನ್ 95 ಮಾಸ್ಕ್, 41 ಬನಿಯನ್, ವಿವಿಧ ಬಗೆಯ 445 ಎಲೆಕ್ಟ್ರಾನಿಕ್‌ ಇಯರ್ ಪಿನ್, ವಿವಿಧ ಬಗೆಯ 554 ಚಾರ್ಜಿಂಗ್ ಕೇಬಲ್ ಹಾಗೂ 6 ವಾಕಿಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಆ.7 ರಂದು ಗೋಕಾಕ್ ನಗರದಲ್ಲಿ ಹೆಸ್ಕಾಂ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ನಡೆದಿತ್ತು.

    Live Tv
    [brid partner=56869869 player=32851 video=960834 autoplay=true]