Tag: Electronic Device

  • KPTCL ನೇಮಕಾತಿ ಪರೀಕ್ಷೆ ಅಕ್ರಮ – ಮೂವರು ಯುವತಿಯರು ಸೇರಿ ನಾಲ್ವರು ಅರೆಸ್ಟ್

    KPTCL ನೇಮಕಾತಿ ಪರೀಕ್ಷೆ ಅಕ್ರಮ – ಮೂವರು ಯುವತಿಯರು ಸೇರಿ ನಾಲ್ವರು ಅರೆಸ್ಟ್

    ಬೆಳಗಾವಿ: ಇಲ್ಲಿನ ಗೋಕಾಕ್ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ (KPTCL) ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದವರಲ್ಲಿ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಬಂಧಿತ ಆರೋಪಿಗಳ ಸಂಖ್ಯೆ 45ಕ್ಕೆ ತಲುಪಿದೆ.

    ಗೋಕಾಕ್ ತಾಲೂಕು ಮರಡಿಮಠ ಗ್ರಾಮದ ವೈಷ್ಣವಿ ಸನದಿ (21), ಉಪ್ಪಾರಟ್ಟಿಯ ಸುಧಾರಾಣಿ ಅರಬಾಂವಿ (24), ತುಕ್ಕಾನಟ್ಟಿಯ ಐಶ್ವರ್ಯ ಬಾಗೆವಾಡಿ ಹಾಗೂ ಬಗರನಾಳದ ಗ್ರಾಮದ ಬಸವರಾಜ ಹಾವಡಿ (27) ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಇದನ್ನೂ ಓದಿ: ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ

    ಬಂಧಿತರು ಕಳೆದ ಆಗಸ್ಟ್ 7 ರಂದು ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ನಡೆದ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ (Electronic Device) ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದರು. ಇದೀಗ ನಾಲ್ವರನ್ನು ಬಂಧಿಸಿರುವ ಪೊಲೀಸರು (Police), ಎಲೆಕ್ಟ್ರಾನಿಕ್‌ ಡಿವೈಸ್‌, ಮೈಕ್ರೋಚಿಪ್, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಗುರುವಾರ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ ಗಡ್ಕರಿ – ಬಿಜೆಪಿ ನಾಯಕರ ನಡುವೆ ನಾಮಕರಣ ಜಟಾಪಟಿ

    Live Tv
    [brid partner=56869869 player=32851 video=960834 autoplay=true]

  • ಏಕರೂಪದ ಚಾರ್ಜರ್‌ ಜಾರಿಗೆ ತಜ್ಞರ ಸಮಿತಿ ರಚನೆಗೆ ಮುಂದಾದ ಕೇಂದ್ರ : ಸಭೆಯಲ್ಲಿ ಏನಾಯ್ತು?

    ಏಕರೂಪದ ಚಾರ್ಜರ್‌ ಜಾರಿಗೆ ತಜ್ಞರ ಸಮಿತಿ ರಚನೆಗೆ ಮುಂದಾದ ಕೇಂದ್ರ : ಸಭೆಯಲ್ಲಿ ಏನಾಯ್ತು?

    ನವದೆಹಲಿ: ಕೇಂದ್ರ ಸರ್ಕಾರ ಎಲ್ಲಾ ಮೊಬೈಲ್‌ ಸಾಧನಗಳಿಗೆ ಏಕರೂಪದ ಚಾರ್ಜರ್‌ ರೂಪಿಸಲು ತಜ್ಞರ ಸಮಿತಿ ರಚಿಸುವುದಾಗಿ ಹೇಳಿದೆ.

    ಏಕರೂಪದ ಚಾರ್ಜರ್‌ ಜಾರಿಗೊಳಿಸಲು ಸರ್ಕಾರ ಕಾಲಮಿತಿ ನಿಗದಿ ಮಾಡಿಲ್ಲ. ಆದರೆ ಈ ಬಗ್ಗೆಅಧ್ಯಯನ ನಡೆಸಲು ಮೂರು ಅಧ್ಯಯನ ಗುಂಪುಗಳನ್ನು ರಚಿಸಲು ಮುಂದಾಗಿದೆ.

    ಬುಧವಾರ ಮೊಬೈಲ್ ಹ್ಯಾಂಡ್‌ಸೆಟ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಮಾರ್ಟ್ ಸ್ಪೀಕರ್‌, ವಯರ್‌ಲೆಸ್ ಇಯರ್‌ಬಡ್‌ ಮತ್ತು ಸ್ಮಾರ್ಟ್ ವಾಚ್‌ಗಳು ಸೇರಿದಂತೆ ಇತರ ಸಾಧನಗಳಲ್ಲಿ ಏಕರೂಪದ ಚಾರ್ಚರ್‌ ಬಳಕೆ ಸಂಬಂಧ ಕಂಪನಿಗಳ ಜೊತೆ ಸರ್ಕಾರ ಸಭೆ ನಡೆಸಿದೆ.

    ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಸ್ಯಾಮ್‌ಸಂಗ್‌, ಆಪಲ್‌, ಹೆಚ್‌ಪಿ, ಡೆಲ್‌, ಲೆನೆವೊ ಅಲ್ಲದೇ ಫಿಕ್ಕಿ, ಸಿಐಐ, ಐಸಿಇಎ ಸಂಘಟನೆಗಳ ಜೊತೆ ಐಐಟಿ ಡೆಲ್ಲಿ ಐಐಟಿ ಬಿಎಚ್‌ಯು ಭಾಗಿಯಾಗಿದ್ದವು.

    ಹಾರ್ಡ್‌ವೇರ್‌ ಕಂಪನಿಗಳಾದ ಡೆಲ್‌ ಮತ್ತು ಎಚ್‌ಪಿ ಏಕರೂಪದ ಚಾರ್ಜರ್‌ಗೆ ವಿರೋಧ ವ್ಯಕ್ತಪಡಿಸಿದೆ. ಫೀಚರ್‌ ಫೋನ್‌ ಹೊರತುಪಡಿಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಟೈಪ್‌ ಸಿ ಚಾರ್ಜರ್‌ ಬಳಕೆಯಾಗುತ್ತಿವೆ ಎಂದು ಫೋನ್‌ ತಯಾರಕಾ ಕಂಪನಿಗಳು ತಿಳಿಸಿವೆ.

    ಹೈ ಎಂಡ್‌ ವರ್ಕ್‌ಸ್ಟೇಷನ್‌ ಮತ್ತು ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಸಿಪಿಯು(ಸೆಂಟ್ರಲ್‌ ಪ್ರೊಸೆಸಿಂಗ್‌ ಯೂನಿಟ್‌) ಮತ್ತು ಜಿಪಿಯು(ಗ್ರಾಫಿಕ್ಸ್‌ ಪ್ರೊಸೆಸಿಂಗ್‌ ಯೂನಿಟ್‌) ಹೆಚ್ಚು ಹೆಚ್ಚು ಪವರ್‌ ಬೇಕಾಗಿರುವುದರಿಂದ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಿಗೆ ಒಂದೇ ರೀತಿಯ ಚಾರ್ಜರ್‌ ನೀಡಲು ಸಾಧ್ಯವಿಲ್ಲ ಎನ್ನುವುದು ಲ್ಯಾಪ್‌ಟಾಪ್‌ ತಯಾರಕರ ವಾದ.

    ಯುರೋಪಿಯನ್‌ ಒಕ್ಕೂಟ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗ ಯುಎಸ್‌ಬಿ -ಸಿ ಚಾರ್ಜರ್‌ ಕಡ್ಡಾಯ ಮಾಡಿದೆ. ಈ ಮೊದಲು ಇದ್ದ ಮೈಕ್ರೋ ಯುಎಸ್‌ಬಿ ಚಾರ್ಜರ್‌ ಅನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾತ್ರ ಸಿಕ್ಕಿಸಬೇಕಾಗುತ್ತದೆ. ಆದರೆ ಯುಎಸ್‌ಬಿ ಸಿ ಚಾರ್ಜರ್‌ ಅನ್ನು ಯಾವುದೇ ದಿಕ್ಕಿನಲ್ಲೂ ಪ್ಲಗ್‌ ಮಾಡಬಹುದಾಗಿದೆ. ಇದನ್ನೂ ಓದಿ: ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್‌ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ -ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ.

    ಈಗಾಗಲೇ ಯುರೋಪಿಯನ್‌ ಯೂನಿಯನ್‌ ಸಣ್ಣ ಎಲೆಕ್ಟ್ರಾನಿಕ್‌ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್‌ ಕಡ್ಡಾಯ ಮಾಡಿದ್ದು 2024ರಲ್ಲಿ ಜಾರಿಗೆ ಬರಲಿದೆ.

    ಅಮೆರಿಕ ಮತ್ತು ಯುರೋಪ್‌ನಲ್ಲಿ ಕಂಪನಿಗಳು ಒಂದೇ ರೀತಿಯ ಚಾರ್ಜಿಂಗ್‌ ಪೋರ್ಟ್‌ ನೀಡಲು ಸಾಧ್ಯವಾದರೆ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ?. ಭಾರತ ಈಗಲೇ ಈ ಬದಲಾವಣೆ ಮಾಡದೇ ಇದ್ದಲ್ಲಿ ಆ ಉತ್ಪನ್ನಗಳು ನಮ್ಮ ದೇಶಕ್ಕೆ ಬರುವ ಸಾಧ್ಯತೆಯಿದೆ ಎಂದು ಈ ಹಿಂದೆ ಗ್ರಾಹಕ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್‌ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‌ಲೆಸ್‌ ಚಾರ್ಜರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ.

    Live Tv
    [brid partner=56869869 player=32851 video=960834 autoplay=true]