Tag: electronic city

  • ಬೆಂಗ್ಳೂರು | ಮನೆ ಬಾಡಿಗೆ ಪಡೆದು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ವಂಚನೆ – ಹಣ ಕೊಟ್ಟವ್ರು ಬೀದಿಪಾಲು

    ಬೆಂಗ್ಳೂರು | ಮನೆ ಬಾಡಿಗೆ ಪಡೆದು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ವಂಚನೆ – ಹಣ ಕೊಟ್ಟವ್ರು ಬೀದಿಪಾಲು

    ಬೆಂಗಳೂರು: ಮನೆಗಳನ್ನು ಬಾಡಿಗೆ ಪಡೆದು, ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ (Fraud Case) ನಗರದ (Bengaluru) ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಕೇಳಿಬಂದಿದೆ.

    ವಿವೇಕ್ ಕೇಶವನ್ ಎಂಬಾತ ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಬ್ರೋಕರ್ ಕಂಪನಿಯ ಮಾಲೀಕನಾಗಿದ್ದು, ಈತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಈತ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ (Electronic City) ಸೇರಿದಂತೆ ಹಲವೆಡೆ ಮನೆಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಬಳಿಕ ಲೀಸ್‍ಗಾಗಿ ಮನೆ ಹುಡುಕುತ್ತಿದ್ದವರಿಗೆ ವೆಬ್‍ಸೈಟ್‍ನಲ್ಲಿ ಗಾಳ ಹಾಕುತ್ತಿದ್ದ. ಬಳಿಕ ಅವರಿಂದ ಹಣ (Money) ಪಡೆದು ಮನೆ ಕೀ ನೀಡುತ್ತಿದ್ದ. ಮನೆ ಮಾಲೀಕರಿಗೆ ಸರಿಯಾಗಿ 2 ತಿಂಗಳು ಬಾಡಿಗೆ ಹಣ ನೀಡುತ್ತಿದ್ದ. ಆಮೇಲೆ ಹಣ ಕೊಡುತ್ತಿರಲಿಲ್ಲ. ಈ ವೇಳೆ ಮನೆಯಲ್ಲಿದ್ದವರನ್ನು ಮಾಲೀಕರು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಹೀಗೆ ಸುಮಾರು 60 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನಾನು ಸತ್ತರೆ ನಂದಕಿಶೋರ್, ಸಾರಾ ಗೋವಿಂದು ಕಾರಣ – ವೀಡಿಯೋ ಹರಿಬಿಟ್ಟ ಶಬರೀಶ್ ಶೆಟ್ಟಿ

    ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಲೀಸ್‍ಗೆ ಪಡೆದಿದ್ದವರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ವಂಚನೆಗೊಳಗಾದ ಜನ ಒತ್ತಾಯಿಸಿದ್ದಾರೆ. ಇನ್ನೂ ಈತ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಫೋಟೋ ಸಹ ತೆಗೆಸಿಕೊಂಡಿದ್ದ ಎಂದು ತಿಳಿದುಬಂದಿದೆ.

    ರಾತ್ರೋರಾತ್ರಿ ಕಂಪನಿಯನ್ನು ಖಾಲಿ ಮಾಡಿಕೊಂಡು ವಂಚಕ ಪರಾರಿಯಾಗಿದ್ದಾನೆ. ಈಗ ಮನೆ ಖಾಲಿ ಮಾಡಿ ಎಂದು ಜನರಿಗೆ ಮಾಲೀಕರಿಂದ ಒತ್ತಡ ಬರುತ್ತಿದೆ. ಲೀಸ್‍ಗೆ ಕೊಟ್ಟ ಲಕ್ಷಾಂತರ ರೂಪಾಯಿ ಹಣವೂ ಇಲ್ಲದೇ, ಇತ್ತ ಮನೆಯೂ ಇಲ್ಲದೆ ಜನ ಬೀದಿಗೆ ಬಿದ್ದಿದ್ದಾರೆ. ಈ ಸಂಬಂಧ ವಿವೇಕ್ ಕೇಶವನ್ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ಮನೆ ಮೇಲೆ ದಾಳಿ: 2 ಕೋಟಿ ನಗದು, ಆಭರಣ ಜಪ್ತಿ

  • ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿದ ಚಾಲಕ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ಕಾರು ಹತ್ತಿಸಿದ ಚಾಲಕ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಬೆಂಗಳೂರು: ರಸ್ತೆಯಲ್ಲಿ ಮಲಗಿದ್ದ ನಾಯಿಯ (Dog) ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ನಡೆದಿದೆ.

    ಜುಲೈ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯ ಪಕ್ಕದ ಜಾಗದಲ್ಲಿ ನಾಯಿ ತನ್ನ ಪಾಡಿಗೆ ಮಲಗಿತ್ತು. ಈ ವೇಳೆ ಅಲ್ಲಿಗೆ ಬಂದ ಕಾರು, ಸ್ವಲ್ಪ ಹೊತ್ತು ಮುಂದೆಯೇ ನಿಂತಿತ್ತು. ನಂತರ ಚಾಲಕ ಏಕಾಏಕಿ ನಾಯಿಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಇದರಿಂದ ನಾಯಿ ಗಂಭೀರವಾಗಿ ಗಾಯಗೊಂಡಿದೆ. ಇದನ್ನೂ ಓದಿ: ಮಡಿಕೇರಿ | ಮಳೆ ಹಿನ್ನೆಲೆ ಭಾರೀ ವಾಹನಗಳಿಗೆ ನಿಷೇಧ – ಆದೇಶ ಉಲ್ಲಂಘಿಸಿದ 12 ಲಾರಿಗಳು ವಶಕ್ಕೆ

    ಉದ್ದೇಶಪೂರ್ವಕವಾಗಿಯೇ ನಾಯಿಯ ಮೇಲೆ ಕಾರು ಹತ್ತಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶ್ವಾನಪ್ರಿಯರು ಸಿಸಿಟಿವಿ ಸಮೇತ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕಾರಿನ ಚಾಲಕನ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.‌ ಇದನ್ನೂ ಓದಿ: ಬೆಂಗಳೂರು ಜನಕ್ಕೆ ಆಟೋ ದರ ಏರಿಕೆ ಶಾಕ್ – ಕನಿಷ್ಠ ದರ 36 ರೂ.ಗೆ ಏರಿಕೆ

  • ಬೆಂಗಳೂರಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ – ನಡು ರಸ್ತೆಯಲ್ಲಿ ಕೊಲೆಗೈದು ಪರಾರಿ

    ಬೆಂಗಳೂರಲ್ಲಿ ಪತಿಯಿಂದ ಪತ್ನಿಯ ಬರ್ಬರ ಹತ್ಯೆ – ನಡು ರಸ್ತೆಯಲ್ಲಿ ಕೊಲೆಗೈದು ಪರಾರಿ

    – ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಬೆಂಗಳೂರು: ನಡುರಸ್ತೆಯಲ್ಲೇ ಪತ್ನಿಯನ್ನು ಬರ್ಬರ ಹತ್ಯೆಗೈದು ಪತಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ ನಡೆದಿದೆ.

    ಬಾಗೇಪಲ್ಲಿ (Bagepalli) ಮೂಲದ ಶಾರದ (35) ಮೃತ ಪತ್ನಿ. ಕೃಷ್ಣ ಪತ್ನಿಯನ್ನು ಕೊಂದ ಪಾಪಿ ಪತಿ. ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ನಡು ರಸ್ತೆಯಲ್ಲಿ ಪತ್ನಿಗೆ ಚಾಕುವಿನಿಂದ ಕುತ್ತಿಗೆ ಕುಯ್ದು ಪತಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗ್ನೇಯ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಸೋಕೋ ಟೀಂ ಆಗಮಿಸಿದೆ. ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಯಾವುದೇ ಮಸೀದಿ, ಕಬ್ರಸ್ತಾನ್‌ ಮುಟ್ಟಲ್ಲ: ವಕ್ಫ್‌ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ

    ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪತ್ನಿ ಕೆಲಸ ಮುಗಿಸಿ ನಿರ್ಜನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪತಿ ದಾಳಿ ನಡೆಸಿದ್ದಾನೆ. ಆರೋಪಿ ಪತ್ನಿಯನ್ನು ಕೊಲ್ಲಲು ಎರಡು ಚಾಕು ತಂದಿದ್ದ. ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಪತಿಯನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್‌ – ಶಾಸಕ ಪೊನ್ನಣ್ಣ & ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ನಲ್ಲೇನಿದೆ?

    ಘಟನೆ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಸಾರ ಫಾತಿಮಾ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 8 ಗಂಟೆಯ ಸಮಯದಲ್ಲಿ ನಮ್ಮ ಕಂಟ್ರೋಲ್ ರೂಮಿಗೆ ಮಾಹಿತಿ ಬಂತು. ನಮ್ಮ ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಶಾರದಾ ಎಂಬ ಮಹಿಳೆಯ ಕೊಲೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ನಮ್ಮ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂದು ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಸಂಪೂರ್ಣ ವಿಚಾರ ಗೊತ್ತಾಗಬೇಕಾಗಿದೆ. ಇದನ್ನೂ ಓದಿ: Bengaluru | ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ

  • ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿ ವ್ಯಕ್ತಿ ಸಾವು

    ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿ ವ್ಯಕ್ತಿ ಸಾವು

    ಆನೇಕಲ್: ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಸ್ವಪ್ರೇರಿತವಾಗಿ ಒಳಗಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ನಡೆದಿದೆ.

    ಮೃತ ವ್ಯಕ್ತಿಯನ್ನು ಕಲಬುರಗಿ (Kalaburagi) ಮೂಲದ ನಾಗೇಶ್ (33) ಎಂದು ಗುರುತಿಸಲಾಗಿದ್ದು, ತಮ್ಮ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು.ಇದನ್ನೂ ಓದಿ: Budget 2025: ಮಧ್ಯಮ ವರ್ಗಕ್ಕೆ ಬಂಪರ್‌; 12 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ಕಟ್ಟುವಂತಿಲ್ಲ

    ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಮೆಡಿಸನ್ಸ್ ಕಂಪನಿಯೊಂದಕ್ಕೆ ಆ್ಯಪ್ ಮೂಲಕ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಲು ನೋಂದಣಿ ಮಾಡಿಕೊಂಡಿದ್ದರು. ಕಳೆದ ಡಿಸೆಂಬರ್ 2ನೇ ವಾರದಲ್ಲಿ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿದ್ದರು. ಅದಾದ ಎರಡು ದಿನದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ಅದಾದ ಕೆಲವು ದಿನಗಳ ಬಳಿಕ ಸಹೋದರನ ಮನೆಯಲ್ಲಿದ್ದಾಗ ರಕ್ತ ಹೆಪ್ಪುಗಟ್ಟಿ ನಾಗೇಶ್ ಮೃತಪಟ್ಟಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.

    ಮೃತ ನಾಗೇಶ್ ಸಹೋದರ ಮಾತನಾಡಿ, ನೋಂದಣಿ ವೇಳೆ ಸಾವನ್ನ ಹೊರತುಪಡಿಸಿ ಸೈಡ್ ಎಫೆಕ್ಟ್ ಬಗ್ಗೆ ತಿಳಿದುಕೊಂಡು ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಮೆಡಿಸಿನ್ಸ್ ಪ್ರಯೋಗದಿಂದಲೇ ಸಾವು ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾಗೇಶ್ ಸಹೋದರ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಾವಿನ ಬಗ್ಗೆ ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಕಂಪನಿಯವರನ್ನು ಕರೆಯಿಸಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವು: ಕಾಶಿಯಲ್ಲಿ ಪವಿತ್ರಾ ಗೌಡ

  • ಬೆಂಗಳೂರು ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ ಅಗ್ನಿ ಅವಘಡ

    ಬೆಂಗಳೂರು ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ ಅಗ್ನಿ ಅವಘಡ

    ಆನೇಕಲ್: ಬೆಂಗಳೂರು (Bengaluru) ಹೊರವಲಯದ ಆನೇಕಲ್‌ನ (Anekal) ಎಲೆಕ್ಟ್ರಾನಿಕ್ ಸಿಟಿಯ (Electronic City) ಮೊದಲನೇ ಹಂತದಲ್ಲಿರುವ ಬಯೋಇನ್ನೊವೇಟಿವ್ ಸೆಂಟರ್‌ನಲ್ಲಿ(Bio Innovative Centre) ಅಗ್ನಿ ಅವಘಡ ಸಂಭವಿಸಿದೆ.ಇದನ್ನೂ ಓದಿ: ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

    ಮಂಗಳವಾರ ಬೆಳಗ್ಗೆ 4:40ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಬಯೋಇನ್ನೋವೇಟಿವ್ ರಿಸರ್ಚ್ ಸೆಂಟರ್ ಜಿ+2 ಕಟ್ಟಡದ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಉದ್ಯೋಗಿಗಳು ಹೊರಗೆ ಓಡಿ ಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಎಲ್ಲಾ ಹೀರೋಗೂ ಒಂದು ಟೈಮ್‌ಲೈನ್‌ ಇರುತ್ತದೆ: ರಿಟೈರ್‌ಮೆಂಟ್‌ ಬಗ್ಗೆ ಸುದೀಪ್‌ ಮಾತು

  • Bengaluru| ಓವರ್‌ಟೇಕ್ ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಕಾರು ಡಿಕ್ಕಿ – ಮೂವರು ಗಂಭೀರ

    Bengaluru| ಓವರ್‌ಟೇಕ್ ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಕಾರು ಡಿಕ್ಕಿ – ಮೂವರು ಗಂಭೀರ

    ಬೆಂಗಳೂರು: ಓವರ್‌ಟೇಕ್ (Overtake) ಮಾಡಲು ಹೋಗಿ ಫ್ಲೈಓವರ್ ತಡೆಗೋಡೆಗೆ ಬಲೆನೋ ಕಾರು ಡಿಕ್ಕಿಯಾದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಎಲೆಕ್ಟ್ರಾನಿಕ್ ಸಿಟಿ ಟು ಸಿಲ್ಕ್ ಬೋರ್ಡ್ ಪ್ಲೈ ಓವರ್ (Electronic City To Silk Board Flyover) ಮೇಲೆ ನಡೆದಿದೆ.

    ತಂಜಿಮ್ (22), ತಾಂಜೆ (25), ಮಹಮ್ಮದ್ ಸಾಹಿಲ್ (25), ಅಬ್ದುಲ್ (23) ಹಾಗೂ ಮಹಮ್ಮದ್ ಸಿದ್ದಾರ್ ಟ್ರಿಪ್ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಸಿಂಗಸಂದ್ರ ಸಮೀಪ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿದೆ. ಇದನ್ನೂ ಓದಿ: ಯಶವಂತಪುರ ಫ್ಲೈಓವರ್ ಮೇಲೆ ಟಯರ್ ಬ್ಲಾಸ್ಟ್‌ – ಗೆಣಸು ತುಂಬಿದ್ದ ಬೊಲೆರೋ ಪಲ್ಟಿ

    ಅಪಘಾತ ನಡೆದ ಸಂದರ್ಭ ಏರ್‌ಬ್ಯಾಗ್ ಓಪನ್ ಆಗಿದ್ದರಿಂದ ಕಾರ್‌ನಲ್ಲಿದ್ದ ಐವರು ಅಪಾಯದಿಂದ ಪಾರಾಗಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.‌ ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು – ಗಂಗಾವತಿ ಆಸ್ಪತ್ರೆಗೆ ಮುಗಿಬಿದ್ದ ಮಹಿಳೆಯರು

  • ನೈಸ್‌ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟಿಸಿದ ಲಾರಿ ಚಾಲಕರು – ಫುಲ್‌ ಟ್ರಾಫಿಕ್‌ ಜಾಮ್‌

    ನೈಸ್‌ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟಿಸಿದ ಲಾರಿ ಚಾಲಕರು – ಫುಲ್‌ ಟ್ರಾಫಿಕ್‌ ಜಾಮ್‌

    ಬೆಂಗಳೂರು: ಸಂಚಾರಿ ಪೊಲೀಸರು (Traffic Police) ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರೊಚ್ಚಿಗಿದ್ದ ಚಾಲಕರು ಕಂಟೈನರ್‌ಗಳ ಮೂಲಕ ನೈಸ್‌ ರಸ್ತೆಯನ್ನೇ (NICE Road) ಬಂದ್‌ ಮಾಡಿದ್ದಾರೆ.

    ಎಲೆಕ್ಟ್ರಾನಿಕ್‌ ಸಿಟಿ (Electronic City) ಪಿಇಎಸ್ ಕಾಲೇಜು ಬಳಿಯ ನೈಸ್‌ ರಸ್ತೆಯಲ್ಲಿ ಬುಧವಾರ ರಾತ್ರಿ 8:30ಕ್ಕೆ ಈ ಘಟನೆ ನಡೆದಿದೆ. ಒಂದು ಗಂಟೆಗೂ ಅಧಿಕ ಸಮಯ ರಸ್ತೆ ಬ್ಲಾಕ್ ಮಾಡಿದ ಚಾಲಕರು ಪ್ರತಿಭಟನೆ‌ ನಡೆಸಿದರು. ಇದನ್ನೂ ಓದಿ: ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ – ಬೀದರ್‌ನಲ್ಲಿ ರೆಡ್ ಅಲರ್ಟ್ ಘೋಷಣೆ

    ಪೊಲೀಸರ ವಿರುದ್ಧ ಘೋಷಣೆ ಹಾಕುತ್ತಾ ನೈಸ್ ರಸ್ತೆ ಹಾಗೂ ಸರ್ವಿಸ್ ರಸ್ತೆಗಳನ್ನು ಚಾಲಕರು ಬ್ಲಾಕ್‌ ಮಾಡಿದ್ದರು.

    ದಿಢೀರ್‌ ಪ್ರತಿಭಟನೆಯಿಂದ ಸಿಲ್ಕ್ ಬೋರ್ಡ್‌ನಿಂದ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮನಹಳ್ಳಿ ಮಾರ್ಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

  • ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸರಣಿ ಅಪಘಾತ – ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್

    ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ (Electronic City Flyover) ಗುರುವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಫ್ಲೈಓವರ್ ಮೇಲೆ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.

    ಕಾರೊಂದು ಅತಿವೇಗವಾಗಿ ಬಂದ ಪರಿಣಾಮ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆ ಕಾರು ಇನ್ನೊಂದು ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಘಟನೆಯಲ್ಲಿ ಒಟ್ಟು ಮೂರು ಕಾರುಗಳು ಹಾಗೂ ಬೈಕ್ ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಇದನ್ನೂ ಓದಿ: ಶುಕ್ರವಾರದಿಂದ ಭಾರತ-ಆಸೀಸ್‌ ನಡುವೆ ಹೈವೋಲ್ಟೇಜ್‌ ಟೆಸ್ಟ್‌ ಸರಣಿ – ಕ್ಯಾಪ್ಟನ್‌ ಬುಮ್ರಾ ಏನ್‌ ಹೇಳಿದ್ರು?

    ಸರಣಿ ಅಪಘಾತದಿಂದಾಗಿ ಫ್ಲೈಓವರ್ ಸುತ್ತಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನ್ ಸಿಟಿ ಎಲಿವೇಟೆಡ್ ಫ್ಲೈವರ್ ಸಿಬ್ಬಂದಿ ಆಗಮಿಸಿದ್ದು, ಅಪಘಾತವಾಗಿದ್ದ ವಾಹನಗಳನ್ನು ತೆರವು ಮಾಡಲು ಹರಸಾಹಸಪಟ್ಟಿದ್ದಾರೆ.

    ಇನ್ನೂ ಅಪಘಾತವಾದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪಾಕಿಸ್ತಾನದಲ್ಲಿ ವಾಹನಗಳ ಮೇಲೆ ಭಯೋತ್ಪಾದಕರ ದಾಳಿ – 50 ಜನ ಸಾವು

  • ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಬರ್ಬರ ಕೊಲೆ

    ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಬರ್ಬರ ಕೊಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದ ಕೋನಪ್ಪನ ಅಗ್ರಹಾರ (Konappana Agrahara) ಸರ್ಕಲ್ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ (Uttara Pradesh) ಜಾನ್ಸಿ ಜಿಲ್ಲೆಯ ಸರ್ವೇಶ್ (28) ಎಂದು ಗುರುತಿಸಲಾಗಿದ್ದು, ಪತ್ನಿ ದೀಪಿಕಾ ಹಾಗೂ ಮಗು ಜೊತೆ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ.ಇದನ್ನೂ ಓದಿ: ಜಮ್ಮು-ಕಾಶ್ಮೀರದ ಉಗ್ರದಾಳಿಯ ಹೊಣೆ ಹೊತ್ತ ಪಾಕ್ ಟಿಆರ್‌ಎಫ್ ಸಂಘಟನೆ

    ಹೊಸೂರು-ಬೆಂಗಳೂರು (Hosuru-Bengaluru) ಮುಖ್ಯ ರಸ್ತೆಯ ಕೋನಪ್ಪನ ಅಗ್ರಹಾರದ ಪುರಸಭೆ ಎದುರು ಸರ್ವೇಶ್ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದ. ನಿನ್ನೆ (ಅ.20 ರಂದು) ರಾತ್ರಿ ಅಂಗಡಿ ವ್ಯಾಪಾರ ಮುಗಿಸಿ, ಹೊರಡುವಾಗ ಮದ್ಯ ಖರೀದಿ ಮಾಡಿದ್ದ. ಈ ವೇಳೆ ಬಾರ್ ಎದುರಿಗಿದ್ದ ಯುವಕರ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ಮಾಡಿ ಹೆದ್ದಾರಿ ದಾಟಿ ಬಂದು ಖಾಲಿಯಿರುವ ಜಾಗದಲ್ಲಿ ಕುಳಿತು ಮದ್ಯ ಸೇವಿಸಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.

    ಹೆದ್ದಾರಿಯ ಬಸ್ ನಿಲ್ದಾಣ ಪಕ್ಕದಲ್ಲಿ ಕೊಲೆ ಮಾಡಿ, ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿ.ಸಿ.ಪಿ ಸಾರಾ ಫಾತಿಮ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ (Electronic City Police Station) ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

  • Bengaluru Rains | 49 ಪ್ರದೇಶಗಳಲ್ಲಿ ಮಳೆ ಆರ್ಭಟ – ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್!

    Bengaluru Rains | 49 ಪ್ರದೇಶಗಳಲ್ಲಿ ಮಳೆ ಆರ್ಭಟ – ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್!

    – ಮೂರು ಪ್ರದೇಶಗಳಲ್ಲಿ 100 ಮಿಲಿಮೀಟರ್‌ಗೂ ಅಧಿಕ ಮಳೆ

    ಬೆಂಗಳೂರು: ನಗರದಲ್ಲಿ ಮಳೆಯ ಆರ್ಭಟ (Heavy Rain) ಮುಂದುವರಿದಿದೆ. ಶನಿವಾರ ರಾತ್ರಿ ಸುರಿದ ಮಳೆಗೆ 49 ಪ್ರದೇಶಗಳಲ್ಲಿ ಮಳೆಹಾನಿಯಾಗಿದೆ. 49 ಪ್ರದೇಶಗಳ ಪೈಕಿ 3ಕ್ಕೂ ಹೆಚ್ಚು ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಮಿಲಿ ಮೀಟರ್ ಮಳೆಯಾಗಿದೆ. ಬಸವೇಶ್ವರ ನಗರದಲ್ಲಿ 109.50 ಮಿಮೀ, ನಾಗಪುರದಲ್ಲಿ 104 ಮಿಮೀ ಹಾಗೂ ಹಂಪಿನಗರದಲ್ಲಿ 102 ಮಿಮೀ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ರಾತ್ರಿ 9:45 ಗಂಟೆ ಬಳಿಕ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.

    ಹಲವೆಡೆ ಅನಾಹುತ:
    ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಭಾರೀ ಅನಾಹುತವನ್ನುಂಟು ಮಾಡಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. 45 ಮನೆಗಳಿಗೆ ನೀರು ನುಗ್ಗಿದೆ.ಕಾಂಪೌಡ್ ಕುಸಿತ ಪರಿಣಾಮ 16 ಮನೆಗಳಿಗೆ ಜಲದಿಗ್ಭಂಧನ ಉಂಟಾಗಿದೆ. ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್| 35 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಮತ್ತೊಂದೆಡೆ ಕೆ.ಆರ್ ಮಾರುಕಟ್ಟೆಯ ರಸ್ತೆಯಲ್ಲಾ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ಜನರು ನಲುಗಿ ಹೋಗಿದ್ದರು. ವಾಹನ ಸವಾರರು ಪರದಾಡಿದ್ರು. ಇದನ್ನೂ ಓದಿ:  Exit Poll Results: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಕನಸು ಭಗ್ನ – ಕಾಂಗ್ರೆಸ್‌ ಅಧಿಕಾರಕ್ಕೆ

    ಟ್ರಾಫಿಕ್ ಜಾಮ್ ಸಮಸ್ಯೆ:
    ಒಂದಡೆ ಮಳೆ.. ಮತ್ತೊಂದಡೆ ಟ್ರಾಫಿಕ್ ಜಾಮ್… ಸಮಸ್ಯೆ ಏಕಕಾಲಕ್ಕೆ ಸಂಭವಿಸಿತ್ತು. ಬಳ್ಳಾರಿ ರಸ್ತೆ ಮಾರ್ಗ ಮಳೆಯಿಂದಾಗಿ ಸ್ಥಬ್ದವಾಗಿತ್ತು. ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರ ಪರಿಸ್ಥಿತಿ ಹೇಳತೀರದಾಗಿತ್ತು.

    ರಸ್ತೆಯೆಲ್ಲಾ ಕೆರೆ:
    ಇದಲ್ಲದೇ ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದವು. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ