Tag: electristion

  • ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಹೊಡೆದು ವ್ಯಕ್ತಿ ಸಾವು

    ಸಂಪ್ ಕ್ಲೀನ್ ಮಾಡುವಾಗ ಕರೆಂಟ್ ಹೊಡೆದು ವ್ಯಕ್ತಿ ಸಾವು

    ಬೆಂಗಳೂರು: ಸಂಪ್ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಾಗಡಿ ರಸ್ತೆಯ ಇಟಿಎ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

    ಮೋಹನ್ ವಿದ್ಯುತ್ ತಗುಲಿ ಮೃತಪಟ್ಟ ವ್ಯಕ್ತಿ. ಮೋಹನ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇಟಿಎ ಅಪಾರ್ಟ್ಮೆಂಟ್‌ನ ಸಂಪ್‍ನಲ್ಲಿ ಸೋರಿಕೆಯಾಗುತ್ತಿತ್ತು. ಅದನ್ನು ದುರಸ್ತಿ ಮಾಡುತ್ತಿದ್ದರು. ಸಂಪ್‍ನಲ್ಲಿ ನೀರು ಖಾಲಿ ಮಾಡಿ ಕೆಲಸ ಮಾಡುವಾಗ ಈ ಘಟನೆ ಸಂಭವಿಸಿದೆ. ಸಂಪ್‍ನಲ್ಲಿ ಕತ್ತಲಿದ್ದ ಕಾರಣ ಹೊರಗಡೆಯಿಂದ ಲೈಟ್ ಅಳವಡಿಕೆ ಮಾಡಿಕೊಂಡಿದ್ದರು. ಈ ವೇಳೆ ಅವರಿಗೆ ವಿದ್ಯುತ್ ತಗುಲಿದ್ದು, ತಕ್ಷಣ ಜೊತೆಗಿದ್ದವರು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ಕೋಟಿಗಟ್ಟಲೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ: ತೇಜಸ್ವಿ ಸೂರ್ಯ

    ಮೋಹನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಮೋಹನ್ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.