Tag: Electricity Tariff

  • ವಿದ್ಯುತ್ ದರ ಹೀಗೆ ಏರಿಕೆಯಾದರೆ ಕೈಗಾರಿಕೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ- ಸರ್ಕಾರಕ್ಕೆ ಕಾಸಿಯಾ ಎಚ್ಚರಿಕೆ

    ವಿದ್ಯುತ್ ದರ ಹೀಗೆ ಏರಿಕೆಯಾದರೆ ಕೈಗಾರಿಕೆ ಬಂದ್ ಮಾಡಿ ಪ್ರತಿಭಟಿಸುತ್ತೇವೆ- ಸರ್ಕಾರಕ್ಕೆ ಕಾಸಿಯಾ ಎಚ್ಚರಿಕೆ

    – ದರ ಏರಿಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ
    – ಬೇರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ದುಬಾರಿ

    ಬೆಂಗಳೂರು: ಅವೈಜ್ಞಾನಿಕವಾಗಿ ವಿದ್ಯುತ್‌ ದರವನ್ನು (Electricity Tariff) ಏರಿಕೆ ಮಾಡಲಾಗಿದೆ. ವಿದ್ಯುತ್ ದರ ಹೀಗೆ ಏರಿಕೆ ಮಾಡಿದರೆ ಕೈಗಾರಿಕೆ (Industry) ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (KASSIA) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

    ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ  ಜೊತೆ ಮಾತನಾಡಿದ ಕಾಸಿಯಾ ಅಧ್ಯಕ್ಷ ನರಸಿಂಹ ಮೂರ್ತಿ, ರಾಜ್ಯದಲ್ಲಿ 5.62 ಲಕ್ಷ ಸಣ್ಣ ಕೈಗಾರಿಕೆಗಳು ಇದೆ. ಸರ್ಕಾರದ ವಿವಿಧ ಇಲಾಖೆಗಳಿಂದ ಎಸ್ಕಾಂಗಳಿಗೆ 11 ಸಾವಿರ ಕೋಟಿ ರೂ. ಬಾಕಿ ದುಡ್ಡು ಕೊಡುವುದು ಬಾಕಿಯಿದೆ. ಮೊದಲು ಸರ್ಕಾರ ಇದನ್ನು ಪಾವತಿ ಮಾಡಲಿ ಎಂದು ಹೇಳಿದರು.

    ಈಗ ಅನ್ ಶೆಡ್ಯೂಲ್ಡ್ ಲೋಡ್ ಶೆಡ್ಡಿಂಗ್ (Load Shedding) ಮಾಡುತ್ತಿದ್ದಾರೆ. ಕೆಲವೊಮ್ಮೆ ಕೈಗಾರಿಕೆಗಳಿಗೆ ಒಂದು ಗಂಟೆಯಷ್ಟು ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ಯಾರಂಟಿ ಘೋಷಣೆಯ ಬಗ್ಗೆ ನಮ್ಮ ಅಕ್ಷೇಪ ಇಲ್ಲ. ಆದರೆ ನಮಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯದ ಜನರಿಗೆ ಕತ್ತಲೆ ಭಾಗ್ಯ ಖಚಿತ, ಸಾಲ ನಿಶ್ಚಿತ, ಬೆಲೆ ಏರಿಕೆ ಖಂಡಿತ – ಸುನೀಲ್‌ ಕುಮಾರ್‌ ಲೇವಡಿ

    ಈ ಹಿಂದೆ 1 ಲಕ್ಷ ರೂ. ಬಿಲ್‌ ಬರುತ್ತಿದ್ದರೆ ಈಗ 1.30 ಲಕ್ಷ ರೂ., 1.40 ಲಕ್ಷ ರೂ. ಬರುತ್ತಿದೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ನಿಗದಿತ ಜಾರ್ಜ್ 23% ಹೆಚ್ಚಳ ಇದೆ. ದರ ಏರಿಕೆಯನ್ನು ಪ್ರಶ್ನಿಸಿ ನಾವು ಹೈಕೋರ್ಟ್ ಮೊರೆ ಹೋಗಲು ಸಮಿತಿ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

    ಇಂಧನ ಸಚಿವ ಕೆಜೆ ಜಾರ್ಜ್ ಅವರನ್ನು ಭೇಟಿ ಮಾಡಿ ನಾವು ಸಮಸ್ಯೆ ಹೇಳಿದ್ದೇವೆ. ಜಾರ್ಜ್‌ ಕಾಸಿಯಾಗೆ ಬಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲದೇ ಇದ್ದರೆ ಈ ಏರಿಕೆಯಿಂದ ನಮಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

  • ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

    ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

    ಬೆಂಗಳೂರು: ಚುನಾವಣೆಯಲ್ಲಿ (Karnataka Election) ಜನತೆಗೆ ನೀಡಿದ ಕಾಂಗ್ರೆಸ್‌ ಗ್ಯಾರಂಟಿ (Congress Guarantee Scheme) ಭರವಸೆಗಳಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರಿಂದ ಈಗ ಗೊಂದಲ ಉಂಟಾಗಿದೆ.

    ಚುನಾವಣಾ ಪ್ರಚಾರ ಸಮಯದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಇದನ್ನು ಜಾರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಶನಿವಾರ ಸರ್ಕಾರದ ಮೊದಲ ಕ್ಯಾಬಿನೆಟ್‌ ಸಭೆ ನಡೆದಿದ್ದು ಕೇವಲ ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಈ ಕಾರಣಕ್ಕೆ ಈ ಗ್ಯಾರಂಟಿ ಯೋಜನೆ ಯಾವಾಗ ಜಾರಿಯಾಗಬಹುದು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.  ಇದನ್ನೂ ಓದಿ: ಸೋನಿಯಾ, ರಾಹುಲ್‍ರಿಂದ ರಾಜ್ಯ ನಾಯಕರಿಗೆ ಖಡಕ್ ಸಂದೇಶ

    ಈ ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ʼಗೃಹಜ್ಯೋತಿʼ ಘೋಷಣೆ. ಜೂನ್‌ ತಿಂಗಳಿನಿಂದ ಯಾರೂ ಕರೆಂಟ್‌ ಬಿಲ್‌ (Electricity Tariff) ಕಟ್ಟಬೇಕಿಲ್ಲ ಎಂದು ಕೈ ನಾಯಕರು ಆಶ್ವಾಸನೆ ನೀಡಿದ್ದರು. ಈ ಕಾರಣಕ್ಕೆ ಜನ ಈಗ ವಿದ್ಯುತ್‌ ಬಿಲ್‌ ಕಟ್ಟಬೇಕಾ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಗ್ರಾಮೀಣ ಭಾಗದ ಜನತೆ ತಿಳಿಸುತ್ತಿದ್ದಾರೆ.

     

    ಬೆಸ್ಕಾಂ ಹೇಳೋದು ಏನು?
    ನಮಗೆ 200 ಯೂನಿಟ್ ಉಚಿತ ವಿದ್ಯುತ್‌ ನೀಡುವ ಯಾವುದೇ ಆದೇಶ ಬಂದಿಲ್ಲ. ಸಾರ್ವಜನಿಕರಿಗೆ ಮನವೊಲಿಸಿ ಬಿಲ್ ಕಟ್ಟಿಸಿಕೊಳ್ಳುತ್ತಿದ್ದೇವೆ. ಸರ್ಕಾರದ ಆದೇಶ ಯಾವ ರೀತಿ ಇರಲಿದೆ ಎಂಬದುನ್ನು ನೋಡಬೇಕಿದೆ. ಆದೇಶ ಅಧಿಕೃತವಾಗಿ ಜಾರಿಯಾಗುವವರೆಗೂ ಯಾರೂ ಸಹ ಬಿಲ್ ಕಟ್ಟದೇ ಇರುವಂತಿಲ್ಲ ಎಂದು ಪಬ್ಲಿಕ್ ಟಿವಿಗೆ ಬೆಸ್ಕಾಂ (BESCOM) ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಮುಖ 6 ಖಾತೆಗಾಗಿ ಸಚಿವರ ಮಧ್ಯೆ ಪೈಪೋಟಿ

     

    ವಿದ್ಯುತ್‌ ಬಳಕೆ ಹೆಚ್ಚಳ ಸಾಧ್ಯತೆ:
    ಗ್ರಾಮೀಣ ಭಾಗದಲ್ಲಿ ಸರಾಸರಿ ಪ್ರತಿ ಮನೆಯಲ್ಲಿ ತಿಂಗಳಿಗೆ 60 ರಿಂದ 100 ಯೂನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿದ್ದಾರೆ. 200ಕ್ಕೂ ಅಧಿಕ ಯೂನಿಟ್‌ ವಿದ್ಯುತ್‌ ಬಳಕೆ ಮಾಡುವವರ ಸಂಖ್ಯೆ ಬಹಳ ವಿರಳ.

    ಈಗ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದರಿಂದ ಬಳಕೆ ಮತ್ತಷ್ಟು ಹೆಚ್ಚಾಗಲಿದೆ ಜೊತೆಗೆ ಬೇಕಾಬಿಟ್ಟಿ ಬಳಕೆಯಾಗುವ ಅಪಾಯವೂ ಇದೆ. ಈಗಿನ ಲೆಕ್ಕದಲ್ಲಿ ವಿದ್ಯುತ್‌ ಶುಲ್ಕ ಅಂದಾಜು 1,600 ರೂ.ಗಿಂತಲೂ ಹೆಚ್ಚು ಬರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಈಗ ಬಳಕೆಯಾಗುತ್ತಿರುವ ವಿದ್ಯುತ್‌ ಪ್ರಮಾಣವನ್ನು ಮಾನದಂಡವಾಗಿಸಿ ಈ ಯೋಜನೆಗೆ ಎಷ್ಟು ಹಣ ಬೇಕಾಗಬಹುದು ಎಂಬದುನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಸರ್ಕಾರದ ಬೊಕ್ಕಸದಿಂದ ಮತ್ತಷ್ಟು ಹಣವನ್ನು ಈ ಯೋಜನೆಗೆ ಮೀಸಲಿಡಬೇಕಾಗುತ್ತದೆ.

  • ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಕೂಡಲೇ ವಿದ್ಯುತ್‌ ದರ ಏರಿಸಿ – ಪಾಕ್‌ಗೆ ಐಎಂಎಫ್‌ ಶಾಕ್‌: PoK ಜನತೆಗೆ ನೀಡಿದ್ದ ಸಬ್ಸಿಡಿ ಬಂದ್‌

    ಇಸ್ಲಾಮಾಬಾದ್‌: ಪಾಕಿಸ್ತಾನದ ಆರ್ಥಿಕ ಸ್ಥಿತಿ (Pakistan Economy) ದಿನಕಳೆದಂತೆ ದಯನೀಯವಾಗುತ್ತಿದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರೀ ಪ್ರಮಾಣದಲ್ಲಿ ವಿದ್ಯುತ್‌ ದರ (Electricity Tariff) ಏರಿಸುವಂತೆ ಸೂಚನೆ ನೀಡಿದೆ.

    ಮಂಗಳವಾರದಿಂದ ಪಾಕ್ (Pakistan) ಪ್ರವಾಸದಲ್ಲಿದ್ದ ಐಎಂಎಫ್ ತಂಡ, ಪಾಕ್ ಸರ್ಕಾರದ ಸಾಲ ನಿರ್ವಹಣೆ ಯೋಜನೆಯನ್ನು(CDMP)ತಿರಸ್ಕರಿಸಿದೆ. ಅಲ್ಲದೇ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 11-12.50 ಪಾಕಿಸ್ತಾನ ರೂಪಾಯಿ ಮಿತಿಯಲ್ಲಿ ವಿದ್ಯುತ್ ದರವನ್ನು ಹೆಚ್ಚಿಸುವಂತೆ ಸಲಹೆ ನೀಡಿದೆ.

    ವಿದ್ಯುತ್‌ ದರ ಏರದ ಹೊರತು ಹೊಸ ಸಾಲ ನೀಡದಿರುವ ತೀರ್ಮಾನಕ್ಕೆ ಬಂದಿದೆ. ಐಎಂಫ್‌ ನಿರ್ಧಾರದಿಂದ ಪಾಕಿಸ್ತಾನ ಇನ್ನಷ್ಟು ಶೋಚನೀಯ ಸ್ಥಿತಿ ತಲುಪಿದೆ. ರೂಪಾಯಿ ಮೌಲ್ಯ ಪತನ, ಅಂಕೆ ಮೀರಿದ ಹಣದುಬ್ಬರದಂತಹ ಕಾರಣಗಳಿಂದಾಗಿ ಪಾಕ್ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇದನ್ನೂ ಓದಿ: ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್‌ ಸಚಿವ ಹೇಳಿಕೆ

    ಐಎಂಫ್‌ ಪಾಕಿಸ್ತಾನ ಕಳೆದ ಹಣಕಾಸು ವರ್ಷದಲ್ಲೇ ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 7.91 ಪಾಕಿಸ್ತಾನ ರೂಪಾಯಿಗೆ ಏರಿಸುವಂತೆ ಸೂಚನೆ ನೀಡಿತ್ತು. ಆದರೆ ಕಳೆದ ಜುಲೈ 1 ರಿಂದ ಇದು ಜಾರಿಗೆ ಬಂದಿತ್ತು. ಕಳೆದ 7 ದಶಕಗಳಿಂದ ಪಾಕ್‌ ಆಕ್ರಮಿತ ಕಾಶ್ಮೀರಲ್ಲಿ (PoK) ವಿದ್ಯುತ್‌ ಸಬ್ಸಿಡಿ ನೀಡಲಾಗುತ್ತಿತ್ತು. ಫೆ.1 ರಿಂದ ಈ ಸಬ್ಸಿಡಿಯನ್ನು ಪಾಕ್‌ ಸ್ಥಗಿತಗೊಳಿಸಿದೆ. ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿ ಯೂನಿಟ್‌ಗೆ 16-22 ಪಾಕ್‌ ರೂಪಾಯಿ ನಿಗದಿ ಪಡಿಸಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಆಡಳಿತ ಈ ನಿರ್ಧಾರವನ್ನು ವಿರೋಧಿಸಿದ್ದು ಜನತೆ ಪ್ರತಿಭಟನೆಗೆ ಇಳಿದಿದ್ದಾರೆ.

    ಪಾಕಿಸ್ತಾನದ ವಿದೇಶಿ ಮೀಸಲು ನಿಧಿ 3.2 ಶತಕೋಟಿ ಡಾಲರ್‌ಗೆ ಕುಸಿದಿದ್ದು, ಸುಮಾರು ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗುತ್ತದೆ. ಇದರಿಂದ ತೈಲ ಖರೀದಿ ಇನ್ಮುಂದೆ ಕಷ್ಟವಾಗಲಿದ್ದು, ಈಗಾಗಲೇ ಗಾರ್ಮೆಂಟ್ಸ್ ಫ್ಯಾಕ್ಟರಿಗಳೆಲ್ಲಾ ಬಹುತೇಕ ಮುಚ್ಚಿವೆ.

    ದಿನಗೂಲಿ ಕೂಡ ಸಿಗದೇ ಬಡವರು ತತ್ತರಿಸಿದ್ದಾರೆ. ಪಾಕಿಸ್ತಾನದಲ್ಲೀಗ ಭಿಕ್ಷುಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಒಂದು ರೀತಿಯಲ್ಲಿ ದಿವಾಳಿ ಹಂತ ತಲುಪಿದೆ. ಲಂಕಾದಲ್ಲಿ ಇತ್ತೀಚಿಗೆ ಕಂಡು ಬಂದ ಪರಿಸ್ಥಿತಿಗಳು ಇಲ್ಲೂ ಕಾಣುವ ದಿನಗಳು ದೂರವಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k