Tag: Electricity Connection

  • 30*40 ಮನೆ ವಿದ್ಯುತ್ ಸಂಪರ್ಕದ ಓಸಿಗೆ ಅಸ್ತು – ಲಕ್ಷಾಂತರ ಜನಕ್ಕೆ ಗುಡ್‌ನ್ಯೂಸ್‌ ಕೊಟ್ಟ ಡಿಕೆಶಿ

    30*40 ಮನೆ ವಿದ್ಯುತ್ ಸಂಪರ್ಕದ ಓಸಿಗೆ ಅಸ್ತು – ಲಕ್ಷಾಂತರ ಜನಕ್ಕೆ ಗುಡ್‌ನ್ಯೂಸ್‌ ಕೊಟ್ಟ ಡಿಕೆಶಿ

    ಕೋಲಾರ: ರಾಜ್ಯದಲ್ಲಿ 30*40 ನಿವೇಶನದಲ್ಲಿ ಮನೆ ಕಟ್ಟಿರುವವರಿಗೆ ವಿದ್ಯುತ್ (Electricity) ಸಂಪರ್ಕ ಕಲ್ಪಿಸುವ ಓಸಿ ಕೊಡೋದಕ್ಕೆ ಅನಮೋದನೆ ಸಿಕ್ಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ.

    ಕೋಲಾರದಲ್ಲಿ (Kolara) ಮಾಲೂರಿನ ಮಾರಿಕಾಂಭ ದೇವಾಲಯಕ್ಕೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್‌ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಇನ್ನೂ ಎರಡೂವರೆ ವರ್ಷ ಅಷ್ಟೇ ಬಾಕಿಯಿದೆ ನೀವು ಸಿಎಂ ಆಗ್ತೀರಾ? ಎಂದು ಪತ್ರಕರ್ತರ ಪ್ರಶ್ನೆಗೆ ನುಣುಚಿಕೊಂಡ ಡಿಕೆಶಿ, ಓಸಿ ಬಗ್ಗೆ ಗುಡ್‌ನ್ಯೂಸ್‌ ಕೊಟ್ಟರು.‌

    ರಾಜ್ಯದಲ್ಲಿ 30*40 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಓಸಿ ಕೊಡೋದಕ್ಕೆ ಅನಮೋದನೆ ಸಿಕ್ಕಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ಲಕ್ಷ ಜನ 30*40 ನಿವೇಶನದಲ್ಲಿ ಮನೆ ಕಟ್ಟಿದ್ರು. ಅವರೆಲ್ಲರಿಗೂ ಇದು ಅನುಕೂಲವಾಗಲಿದೆ. ಮಾಲೂರಿನ ಮಾರಿಕಾಂಭ ಸನ್ನಿಧಿಯಲ್ಲಿ ಈ ಶುಭ ಸುದ್ದಿಯನ್ನು ತಿಳಿಸುತ್ತಿದ್ದೇನೆ ಎಂದು ಹೇಳಿದರು.

    ಮುಂದುವರಿದು.. ಎತ್ತಿನಹೊಳೆ ಯೋಜನೆ ಕೋಲಾರ-ಚಿಕ್ಕಬಳ್ಳಾಪುರದ ಕೆಲವೆಡೆ ಭೂಮಿ ಪಡೆಯುವ ಕೆಲಸ ಆಗಬೇಕಿದೆ. ಉಳಿದಂತೆ ಆ ಭಾಗದಲ್ಲಿ ಪೈಪ್‌ಲೈನ್ ಕೆಲಸ ಮುಗಿದಿದೆ ಎಂದರು.

    ಇನ್ನೂ ಕೋಲಾರಕ್ಕೆ ನೀರು ಬರೋದು ಅನುಮಾನವಿಲ್ಲ ಅನ್ನೋ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಅದು ಬಿಜೆಪಿ ಯೋಜನೆಯಲ್ಲ, ನಮ್ಮ ಯೋಜನೆ. ಮೊದಲಿನಿಂದಲೂ ಆ ಯೋಜನೆಯನ್ನ ಬಿಜೆಪಿ ವಿರೋಧ ಮಾಡ್ತಾ ಬರ್ತಾ ಇದ್ರು. ಆ ಯೋಜನೆ ನಮ್ಮ ಸರ್ಕಾರದ್ದು ನಾವು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

  • ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನಾಳೆ ನಿರ್ಧಾರ – ಕಾನೂನು ಇಲಾಖೆ ವರದಿಗೆ ಸೂಚನೆ

    ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ನಾಳೆ ನಿರ್ಧಾರ – ಕಾನೂನು ಇಲಾಖೆ ವರದಿಗೆ ಸೂಚನೆ

    – ಎಲ್ಲ ಮಾರ್ಗಗಳ ಪರಿಶೀಲನೆಗೆ ಸಿಎಂ ಆದೇಶ

    ಬೆಂಗಳೂರು: ಗ್ರೇಟರ್ ಬೆಂಗಳೂರು (GBA) ವ್ಯಾಪ್ತಿ ಹಾಗೂ ರಾಜ್ಯದ ಇತರೆಡೆ ನಿರ್ಮಾಣ ಹಂತದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ (Karnaraka Government) ವಿಫಲವಾಗಿದೆ.

    ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತಾದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆಗದೇ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಕುರಿತು ಮಾಹಿತಿ ನೀಡುವಂತೆ ಕಾನೂನು ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಕಾನೂನು ಇಲಾಖೆಯ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಎನ್. ಚಲುವರಾಯಸ್ವಾಮಿ

    ಸಭೆಯ ಬಳಿಕ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar), ಜಿಬಿಎಯಿಂದ ನಾವು ಪ್ರಪೋಸಲ್ ಕೊಟ್ಟಿದ್ವಿ. ಆದ್ರೆ ಇದು ಪಂಚಾಯತ್, ಮುನಿಸಿಪಾಲಿಟಿಗೂ ಎಲ್ಲದ್ದಕ್ಕೂ ಬೇಕು. ತಮಿಳುನಾಡು ಸೇರಿ ಬೇರೆ ಬೇರೆ ರಾಜ್ಯದ ಮಾಹಿತಿ ಪಡೆದಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ಏನಾದ್ರು ಮಾರ್ಗ ಇದೆಯಾ ಅಂತ ಪರಿಶೀಲನೆ ಮಾಡಲು ಕಾನೂನು ಇಲಾಖೆಗೆ ಹೇಳಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ – ಬೆಂಗಳೂರಿನ ಈ ರಸ್ತೆಯಲ್ಲಿ 45 ದಿನ ಸಂಚಾರ ಬಂದ್

    ಅನುಮತಿ ಪಡೆಯದ ಕಟ್ಟಡಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕೊಡಬಾರದು ಅಂತ ಸುಪ್ರೀಂ ಕೋರ್ಟ್ ಆದೇಶ ಇದೆ. ಹೀಗಾಗಿ ಸಿಎಂ ಅವರ ನೇತೃತ್ವದಲ್ಲಿ ಸಭೆ ಆಗಿದೆ. ಎಲ್ಲಾ ಇಲಾಖೆ ಸಚಿವರು ಭಾಗಿಯಾಗಿದ್ದರು, ಎಜಿ ಕೂಡಾ ಇದ್ದರು. ಇವತ್ತಿನ ಸಭೆಯಲ್ಲಿ ಅನೇಕ ಅಭಿಪ್ರಾಯಗಳು ಬಂದಿವೆ. ಅವಕಾಶ ಕೊಡೋಕೆ ಕಾನೂನಿನಲ್ಲಿ ಅನೇಕ ಅಡೆತಡೆಗಳು ಇವೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ 30*40 ಸೈಟ್ ಗೆ ಅನುಮತಿ ಕೊಡೋ ತೀರ್ಮಾನ ಮಾಡಿದ್ದೇವೆ. ಇದರ ಮೇಲೆ ಜಾಸ್ತಿ ಅಳತೆಯಲ್ಲಿ ಇರೋ ಕಟ್ಟಡಗಳಿಗೆ ಕೊಡೋದು ಹೇಗೆ ಅಂತ ಚರ್ಚೆ ಆಗಿದೆ. ನಾಳೆಯ (ಗುರುವಾರ) ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡ್ತೀವಿ. ಹೊಸ ಕಟ್ಟಡ ಕಟ್ಟಲು ಇನ್ನು ಮುಂದೆ ಬಿಡೊಲ್ಲ. ಈಗ ಕಟ್ಟಿರೋರಿಗೆ ಸಹಾಯ ಮಾಡೋದಕ್ಕೆ ದಾರಿ ಇದೆಯಾ ನೋಡ್ತಾ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ ಕ್ಲೈಮ್ಯಾಕ್ಸ್‌ ಹಂತಕ್ಕೆ – ಅಂತಿಮ ವರದಿ ಸಲ್ಲಿಸಲು SIT ತಯಾರಿ

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಕೆಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಲಮಂಡಳಿ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

  • ವಿದ್ಯುತ್ ಸಂಪರ್ಕಕ್ಕೆ ಓಸಿ ವಿನಾಯ್ತಿ – ಇಂದೇ ನಿರ್ಧಾರ?

    ವಿದ್ಯುತ್ ಸಂಪರ್ಕಕ್ಕೆ ಓಸಿ ವಿನಾಯ್ತಿ – ಇಂದೇ ನಿರ್ಧಾರ?

    – ಸಿಎಂ, ಸಿಎಸ್‌ ನೇತೃತ್ವದಲ್ಲಿಂದು ಮಹತ್ವದ ಸಭೆ
    – 3 ಲಕ್ಷ ಮನೆಗಳಿಗೆ ಸಿಗಲಿದೆಯಾ ವಿದ್ಯುತ್‌ ಸಂಪರ್ಕ?

    ಬೆಂಗಳೂರು: ಸ್ವಾಧೀನಾನುಭವ ಪತ್ರ (Occupancy Certificates) ಇಲ್ಲದೇ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಇಲ್ಲ. ಹೀಗಾಗಿ ಓಸಿ ಇಲ್ಲದೇ ವಿದ್ಯುತ್ ಸಂಪರ್ಕ ನೀಡಲು ಕ್ಯಾಬಿನೆಟ್‌ನಲ್ಲಿ ಚರ್ಚೆ ವಿಷಯ ಆಗಿತ್ತು. ಆದ್ರೆ ಈವರೆಗೆ ಯಾವುದೇ ಬೆಳವಣಿಗೆ ನಡೆದಿರಲಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ಓಸಿ ವಿನಾಯಿತಿ ನೀಡಲು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಸಿಎಂ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ (Electricity connection) ನೀಡುವ ಸಲುವಾಗಿ ಓಸಿ ವಿನಾಯಿತಿ ಬಗ್ಗೆ ಚರ್ಚೆ ನಡೆಯಲಿದೆ. ಸಾಧಕ ಭಾಧಕಗಳ ಬಗ್ಗೆ ಚರ್ಚೆ ಆಗಿ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

    Occupancy Certificate

    ಇನ್ನೂ ಓಸಿಯಿಂದ ಒನ್ ಟೈಂ ರಿಲ್ಯಾಕ್ಸೇಷನ್ ಬೆಸ್ಕಾಂ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಲಿದೆ. ‌ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. 53 ಸಾವಿರ ಅರ್ಜಿಯಿಂದ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಸಿಗಲಿದೆ. ಇದನ್ನೂ ಓದಿ:  ʻಆಪರೇಷನ್‌ ಸಿಂಧೂರʼ ಒಪ್ಪಿಕೊಂಡ ಪಾಕ್‌ ನಾಯಕ; ದಾಳಿಯಿಂದ ಹಾನಿಗೊಳಗಾದವರಿಗೆ ಪಂದ್ಯದ ಹಣ ನಿಡೋದಾಗಿ ಘೋಷಣೆ

    ಒಂದೇ ಬಿಲ್ಡಿಂಗ್ ನಲ್ಲಿ 4 ರಿಂದ 5 ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆಯಾಗಿದ್ದು ಅಸ್ತಿತ್ವದಲ್ಲಿ ಇರುವ ಕಟ್ಟಡಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ ಸಲ್ಲಿಕೆ ಆಗಿದೆ. ಕಮರ್ಷಿಯಲ್ ಮತ್ತು ರೆನ್ಸಿಡೆನ್ಷಿಯಲ್ ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಸಲ್ಲಿಕೆಯಾಗಿದ್ದು. 30×40 ಚದರ ಅಡಿ ನಿವೇಶನದ ವಿದ್ಯುತ್ ಸಂಪರ್ಕಕ್ಕೆ 33 ಸಾವಿ ಅರ್ಜಿ ಸಲ್ಲಿಕೆಯಾಗಿದೆ. 1,200 ಚದರ ಅಡಿ ನಿವೇಶನಗಳಿಂದ 25 ಸಾವಿರ ಅರ್ಜಿಗೆ ರಿಲ್ಯಾಕ್ಸೇಷನ್ ಸಿಗಲಿದೆ. ಇದನ್ನೂ ಓದಿ: ವಿಜಯ್‌ ಅವರದ್ದು ಏನೂ ತಪ್ಪಿಲ್ಲ, ಪೊಲೀಸ್‌ ಇಂಟೆಲಿಜೆನ್ಸ್‌ ವಿಫಲವಾಗಿದೆ: ಅಣ್ಣಾಮಲೈ ಆರೋಪ

    ಒಟ್ಟಾರೆ ಓಸಿ ವಿದ್ಯುತ್ ಸಂಪರ್ಕಕ್ಕಾಗಿ ಲಕ್ಷಾಂತರ ಅರ್ಜಿಗಳು ಸಲ್ಲಿಕೆ ಆಗಿವೆ. ಸರ್ಕಾರ ಸಭೆ ಮಾಡಿ ವಿದ್ಯುತ್ ಸಂಪರ್ಕಕ್ಕಾಗಿ ವಿನಾಯಿತಿ ಕೊಡುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

  • 100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

    100 ಕೋಟಿ ವೆಚ್ಚದ ನೂತನ ಬಸ್ ನಿಲ್ದಾಣಕ್ಕೆ ಕತ್ತಲೆ ಭಾಗ್ಯ; ಟಾರ್ಚ್‌ ಬೆಳಕಲ್ಲೇ ವರ್ತಕರ ವಹಿವಾಟು

    – ವಿದ್ಯುತ್ ಸಂಪರ್ಕವಿಲ್ಲದೇ ಸಿಬ್ಬಂದಿ, ಪ್ರಯಾಣಿಕರು ಹೈರಾಣು

    ತುಮಕೂರು: 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ (Tumakuru Bus Stand) ಆರಂಭದಲ್ಲೇ ಗ್ರಹಣ ಹಿಡಿದಿದೆ. ವಿದ್ಯುತ್ (Electricity) ಸಂಪರ್ಕ ಇಲ್ಲದೇ ಕಗ್ಗತ್ತಲು ಕವಿದಿದೆ. ಪ್ರಯಾಣಿಕರು, ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಉದ್ಘಾಟನೆ ದಿನವೇ ಬಾಗಿಲು ಮುಚ್ಚಿದ ತುಮಕೂರು KSRTC ಹೈಟೆಕ್‌ ಬಸ್ ನಿಲ್ದಾಣ!

    ಹೌದು. ಸ್ಮಾರ್ಟ್ ಸಿಟಿ ಯೋಜನೆ (Smart City Project) ಅಡಿಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತುಮಕೂರಿನ ನೂತನ ಬಸ್ ನಿಲ್ದಾಣ ಆರಂಭದಲ್ಲೇ ಮುಗ್ಗರಿಸಿದೆ. ಬಸ್ ನಿಲ್ದಾಣದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಯದಿದ್ದರೂ ಕೆಎಸ್‌ಆರ್‌ಟಿಸಿ (KSRTC) ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಬಸ್ ಸಂಚಾರ ಆರಂಭಿಸಿದ್ದು ಪ್ರಯಾಣಿಕರು ಇನ್ನಿಲ್ಲದಂತೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಶ್ರಾವಣ ಆದ್ಮೇಲೆ ಬಾಳು ಕೊಡ್ತೀನಿ ಅಂತ ಹೇಳಿ ಆಂಟಿಗೆ ವಂಚನೆ – ಪ್ರಜ್ವಲ್‌ ವಿರುದ್ಧ ದೂರು

    ಕಳೆದ ಆಗಸ್ಟ್ 27ರಂದು ಹೊಸ ಬಸ್ ನಿಲ್ದಾಣ ಆರಂಭವಾಗಿದ್ದು, ಇನ್ನೂ ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಕೆಯಾಗಿಲ್ಲ. ಇದು ಜೇಬುಗಳ್ಳರಿಗೆ ವರದಾನವಾಗಿದ್ದು, ನಿತ್ಯ ಹತ್ತಾರು ಮಂದಿ ಪ್ರಯಾಣಿಕರು ತಮ್ಮ ಮೊಬೈಲ್, ಪರ್ಸ್ ಸೇರಿ ಇನ್ನಿತರ ಬೆಳೆಬಾಳುವ ವಸ್ತುಗಳನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿಸಿಟಿವಿ ಕಡ್ಡಾಯ – ಬೆಂಗಳೂರು ಪಿಜಿಗಳಿಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಏನಿದೆ?  

    ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ಬಸ್ ನಿಲ್ದಾಣಕ್ಕೆ ಹೈಟೆಕ್ ಲುಕ್ ನೀಡುವ ಎಸ್ಕ್ಯುಲೇಟರ್‌ಗಳು ಕೆಲಸ ಮಾಡುತ್ತಿಲ್ಲ. ಹಿರಿಯ ನಾಗರಿಕರು ಮೆಟ್ಟಿಲು ಹತ್ತಲು ಹರಸಾಹಸ ಪಡುವಂತಾಗಿದೆ. ಎರಡು ಹೊಸ ಎಟಿಎಂಗಳೂ ಪ್ರಯೋಜನಕ್ಕೆ ಬಾರದಂತಾಗಿವೆ. ಮಹಿಳೆಯರು ವಿಶ್ರಾಂತಿ ಪಡೆಯಲು ನಿರ್ಮಿಸಿರುವ ಸಖಿ ಕೊಠಡಿಯೂ ಸಾರ್ವಜನಿಕ ಬಳಕೆಗೆ ಮುಕ್ತವಾಗಿಲ್ಲ. ಇವೆಲ್ಲದರ ನಡುವೆ ಪ್ರತಿ ತಿಂಗಳು ನಿಗಮಕ್ಕೆ ಲಕ್ಷಾಂತರ ರೂ. ಬಾಡಿಗೆ ಪಾವತಿಸುವ ಅಂಗಡಿ ಮಳಿಗೆಗಳಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಹೀಗಾಗಿ ಇಲ್ಲಿನ ವರ್ತಕರು ಟಾರ್ಚ್ ಬೆಳಕಿನಲ್ಲಿ ವ್ಯಾಪಾರ ಮಾಡುವಂತಾಗಿದೆ. ಸದ್ಯಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕವೇ ಆಸರೆಯಾಗಿದ್ದು, ರಾತ್ರಿ ಹೊತ್ತು ಮಾತ್ರ ಸೀಮಿತ ಕಡೆಗಳಲ್ಲಿ ಮಂದಗತಿಯ ಲೈಟ್‌ಗಳನ್ನ ಆನ್ ಮಾಡಲಾಗುತ್ತಿದೆ.

    ಒಟ್ಟಿನಲ್ಲಿ ತುಮಕೂರಿನಲ್ಲಿ ಹೊಸ ಬಸ್ ನಿಲ್ದಾಣ ಸಾರ್ವಜನಿಕರಿಗೆ ಅನುಕೂಲವಾಗುವುದಕ್ಕೆ ಬದಲಾಗಿ ಅನಾನುಕೂಲವನ್ನೇ ಉಂಟು ಮಾಡುತ್ತಿದೆ. ಇನ್ನಾದರೂ ಈ ಸಮಸ್ಯೆಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ 

  • ವಿದ್ಯುತ್ ಸಂಪರ್ಕವನ್ನೇ ನೀಡದೇ 60,000 ಬಿಲ್ – ಉ.ಪ್ರದೇಶದ ಶಾಮ್ಲಿ ಜಿಲ್ಲೆಯ 12 ಗ್ರಾಮಸ್ಥರಿಗೆ ಶಾಕ್

    ವಿದ್ಯುತ್ ಸಂಪರ್ಕವನ್ನೇ ನೀಡದೇ 60,000 ಬಿಲ್ – ಉ.ಪ್ರದೇಶದ ಶಾಮ್ಲಿ ಜಿಲ್ಲೆಯ 12 ಗ್ರಾಮಸ್ಥರಿಗೆ ಶಾಕ್

    ಶಾಮ್ಲಿ: ವಿದ್ಯುತ್ ಸಂಪರ್ಕವನ್ನೇ ನೀಡದೇ 12 ಗ್ರಾಮಗಳಲ್ಲಿರುವ ಮನೆಗಳಿಗೆ 30,000 – 60,000 ರೂಪಾಯಿ ಬಿಲ್ ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಶಾಮ್ಲಿ (Shamli) ಜಿಲ್ಲೆಯಲ್ಲಿ ನಡೆದಿದೆ. ಬಿಲ್ ಕಂಡು ಗ್ರಾಮಸ್ಥರು ಆಘಾತಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಶಾಮ್ಲಿ ಜಿಲ್ಲೆಯ ಖೋಕ್ಸಾ, ಅಲಾವುದ್ದೀನ್‍ಪುರ, ದುದ್ಲಿ, ಡೇರಾ ಭಾಗೀರಥ್, ನಯಾ ಗಾಂವ್ ಸೇರಿ ಹಲವು ಗ್ರಾಮಗಳಲ್ಲಿ ಈ ಘಟನೆ ನಡೆದಿದ್ದು, ಈ ಗ್ರಾಮಗಳಲ್ಲಿ ಬವಾರಿಯಾ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಪ್ರತಿ ಗ್ರಾಮದಲ್ಲಿ 250- 300 ಮಂದಿ ವಾಸವಾಗಿದ್ದಾರೆ. ಇದನ್ನೂ ಓದಿ: 36 ಸೇತುವೆಗಳು ಸಂಚಾರಕ್ಕೆ ಅನರ್ಹ – ದುರಂತ ಸಂಭವಿಸೋದಕ್ಕೂ ಮುನ್ನವೇ ಎಚ್ಚೆತ್ತ ಸರ್ಕಾರ

    ಕಳೆದ ಕೆಲವು ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕ ಹಾಗೂ ವಿದ್ಯುತ್ ಮೀಟರ್‌ಗಳನ್ನು ಉಚಿತವಾಗಿ ನೀಡುವುದಾಗಿ ವಿದ್ಯುತ್ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಬಳಿಕ ಮನೆಗಳಿಗೆ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಿದ್ದರು. ನಂತರ ವಿದ್ಯುತ್ ಸಂಪರ್ಕವನ್ನೇ ನೀಡದೇ ಈಗ ಬಿಲ್‍ಗಳನ್ನು ನೀಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ವೈರಲ್ ವೀಡಿಯೋದಲ್ಲಿರೋದು ಫಿಸಿಯೋಥೆರಪಿಸ್ಟ್ ಅಲ್ಲ, ರೇಪಿಸ್ಟ್: ಬಿಜೆಪಿ

    ನಾವು ವಿದ್ಯುತ್ ಇಲ್ಲದೇ ಜೀವನ ನಡೆಸಿದ್ದೇವೆ, ನಾವು ಯಾಕೆ ಬಿಲ್ ಪಾವತಿಸಬೇಕು ಎಂದು ಸ್ಥಳೀಯ ಆಡಳಿತವನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮಾಂಚಲ್ ವಿದ್ಯುತ್ ವಿತ್ರನ್ ನಿಗಮ್ ಲಿಮಿಟೆಡ್‍ನ ಸೂಪರಿಂಟೆಂಡಿಂಗ್ ಎಂಜಿನಿಯರ್ ರಾಮ್ ಕುಮಾರ್ ಜನರು ಬಿಲ್ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

    ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

    ಶಿವಮೊಗ್ಗ: ರೈತರೊಬ್ಬರು ತನ್ನ ತೋಟದ ಮನೆಗೆ ನಿರಂತರ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಹನುಮಂತಪ್ಪ ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬುತ್ತಿದ್ದ ರೈತ. ಅವರು ಪ್ರತಿನಿತ್ಯ ಮನೆಯಿಂದ ಮಿಕ್ಸಿ ತಂದು ಮೆಸ್ಕಾಂ ಕಚೇರಿಯಲ್ಲಿ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದರು. ಹಲವು ವರ್ಷಗಳಿಂದ ಅವರು ತೋಟದ ಮನೆಯಲ್ಲಿಯೇ ವಾಸವಿದ್ದರು. ಅವರ ತೋಟದಲ್ಲಿರುವ ಕೊಳವೆ ಬಾವಿಯ ಐಪಿ ಸೆಟ್‍ಗೆ ವಿದ್ಯುತ್ ಸಂಪರ್ಕ ಇದೆ. ಆದರೆ ಐಪಿ ಸೆಟ್‍ನ ವಿದ್ಯುತ್‍ಗೆ ಸಮಯ ನಿಗದಿ ಇಲ್ಲ. ಹೀಗಾಗಿ ಮನೆಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅವರು ಮೆಸ್ಕಾಂಗೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

    ರೈತ ಕಳೆದ 6 ತಿಂಗಳಿನಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

  • ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

    ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

    – ಮಾಜಿ ಡಿಸಿಎಂ ಕ್ಷೇತ್ರದಲ್ಲೇ ದೌರ್ಜನ್ಯ

    ತುಮಕೂರು: ದಾಯಾದಿಗಳ ಮತ್ಸರಕ್ಕೆ ಇಡೀ ಗ್ರಾಮ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೂ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕ, ಶೌಚಾಲಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಘಟನೆ ಜಿಲ್ಲೆ ಕೊರಟಗೆರೆ ಕ್ಷೇತ್ರದ ಚಿಕ್ಕತೊಟ್ಟುಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಗ್ರಾಮದ ರಾಮಸ್ವಾಮಿ ಎಂಬವರ ಮನೆಗೆ ಕಳೆದ 18 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ಊರಿಗೆಲ್ಲಾ ವಿದ್ಯುತ್ ಸೌಕರ್ಯ ಇದ್ದರೂ ರಾಮಸ್ವಾಮಿ ಮನೆಗೆ ಮಾತ್ರ ಅಧಿಕಾರಿಗಳು ವಿದ್ಯುತ್ ಹಾಗೂ ಶೌಚಾಲಯದ ಸೌಕರ್ಯ ಒದಗಿಸುತ್ತಿಲ್ಲ. ಪರಿಣಾಮ ರಾಮಸ್ವಾಮಿಯ ಮಕ್ಕಳು ಮನೆ ಮುಂದಿರುವ ಬೀದಿ ದೀಪದಲ್ಲೇ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಚಿಮಣಿ ದೀಪದ ಬೆಳಕಲ್ಲಿ ಓದೋಣ ಎಂದರು ಸೀಮೆ ಎಣ್ಣೆನೂ ರೇಷನಲ್ಲಿ ಕೊಡುತ್ತಿಲ್ಲ.

    ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲೇ ಇಂತಹ ದೌರ್ಜನ್ಯ ನಡೆಯುತ್ತಿದ್ದು, ರಾಮಸ್ವಾಮಿ ಹಾಗೂ ಅವರ ದಾಯಾದಿಯೊಬ್ಬರ ನಡುವೆ ಜಮೀನು ವಿವಾದ ಇದಕ್ಕೆಲ್ಲ ಕಾರಣವಾಗಿದೆ. ಕೋರ್ಟಿನಲ್ಲಿ ರಾಮಸ್ವಾಮಿ ಪರ ತೀರ್ಪು ಬಂದರೂ ಮನೆ ಕಟ್ಟಿಕೊಂಡು ಮೂಲ ಸೌಲಭ್ಯ ಒದಗಿಸಿಕೊಳ್ಳಲು ದಾಯಾದಿಗಳು ಅಡ್ಡಿಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಪ್ರಭಾವಿಗಳಾಗಿದ್ದ ದಾಯಾದಿಗಳು ಅಧಿಕಾರಿಗಳ ಜೊತೆ ಪಿತೂರಿ ನಡೆಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಒಮ್ಮೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಕೆಲವೇ ದಿನದಲ್ಲಿ ಕಡಿತಗೊಳಿಸಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡುತಿದ್ದರೂ ನನ್ನ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಆಗಿಲ್ಲ. ಪರಿಣಾಮ ವಯಸ್ಸಿಗೆ ಬಂದ ನನ್ನ ಹೆಣ್ಣುಮಕ್ಕಳು ರಾತ್ರಿ ವೇಳೆ ಬಯಲಿಗೆ ಹೋಗಬೇಕಾಗಿದೆ ಎಂದು ರಾಮಸ್ವಾಮಿ ಅವರು ಸಂಕಟ ತೋಡಿಕೊಂಡಿದ್ದಾರೆ.

    ಕನಿಷ್ಟ ಪಕ್ಷ ಶೌಚಾಲಯ, ವಿದ್ಯುತ್ ಸಂಪರ್ಕವನ್ನಾದರೂ ಕೊಡಿ ಎಂದು ಅಧಿಕಾರಗಳ ಬಳಿ ರಾಮಸ್ವಾಮಿ ಮಕ್ಕಳು ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವಹಿಸಿದ್ದಾರೆ.