Tag: Electrician

  • ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

    ಮೈಸೂರು | ಮಾಲ್‌ನ ನಾಲ್ಕನೇ ಅಂತಸ್ತಿನಿಂದ ಆಯತಪ್ಪಿ ಬಿದ್ದು ಎಲೆಕ್ಟ್ರಿಷಿಯನ್ ಸಾವು

    -ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಸಾವು

    ಮೈಸೂರು: ಮಾಲ್‌ನ ನಾಲ್ಕನೇ ಅಂತಸ್ತಿನಲ್ಲಿ ಕೆಲಸ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನ (Mysuru) ಡಿಆರ್‌ಸಿ ಮಾಲ್‌ನಲ್ಲಿ (DRC Mall) ನಡೆದಿದೆ.

    ಸುನೀಲ್ (27) ಮೃತ ದುರ್ದೈವಿ. ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಹಾಗೂ ಗಾಯಗೊಂಡವರನ್ನು ಚಂದ್ರು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಜಾರಕಿಹೊಳಿ Vs ಕತ್ತಿ| ಡಿಸಿಸಿ ಫೈಟ್‌ ತಾರಕಕ್ಕೆ – ನಿರ್ದೇಶಕನಿಗೆ ನಡು ರಸ್ತೆಯಲ್ಲೇ ಪತ್ನಿಯಿಂದ ಕಪಾಳ ಮೋಕ್ಷ

    ಸೋಮವಾರ (ಸೆ.8) ಡಿಆರ್‌ಸಿ ಮಾಲ್‌ನ ನಾಲ್ಕನೇ ಮಹಡಿಯಲ್ಲಿದ್ದ ಬೋರ್ಡ್‌ವೊಂದನ್ನು ಸುನೀಲ್ ತೆರವು ಮಾಡುತ್ತಿದ್ದರು. ಈ ವೇಳೆ ಗಮನಕ್ಕೆ ಬಾರದೇ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಕುಸಿದರು. ತಕ್ಷಣ ಕೈಗೆ ಸಿಕ್ಕಿದ್ದ ರಾಡ್‌ವೊಂದನ್ನು ಹಿಡಿದುಕೊಂಡು ನೇತಾಡುತ್ತಿದ್ದರು. ಇದನ್ನು ಗಮನಿಸಿದ ಚಂದ್ರು ಸಹಾಯಕ್ಕೆ ಮುಂದಾಗಿದ್ದು, ಇವರೂ ಕೂಡ ಪಿಒಪಿ ಮೇಲೆ ಕಾಲಿಟ್ಟು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ವೇಳೆ ರಾಡ್ ಹಿಡಿದುಕೊಂಡಿದ್ದ ಸುನೀಲ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಸದ್ಯ ಚಂದ್ರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ

     

  • ಉತ್ತರ ಕರ್ನಾಟಕ ಶೈಲಿಯ ಕಥೆಯಲ್ಲಿ ನಟ ಶರಣ್ ಎಲೆಕ್ಟ್ರಿಷಿಯನ್

    ಉತ್ತರ ಕರ್ನಾಟಕ ಶೈಲಿಯ ಕಥೆಯಲ್ಲಿ ನಟ ಶರಣ್ ಎಲೆಕ್ಟ್ರಿಷಿಯನ್

    ‘ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ’ ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್ ಶರಣ್ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಶರಣ್ ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರಲಿದ್ದು, ಎಲೆಕ್ಟ್ರಿಷಿಯನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇಂದು ಶರಣ್ ಹುಟ್ಟುಹಬ್ಬ ಆದ್ರಿಂದ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಅಧೀಕೃತ ಮಾಹಿತಿ ಹಂಚಿಕೊಂಡಿದೆ.

    ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು. ಬಾಗಲಕೋಟೆಯಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದ್ದು, ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಶರಣ್ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಅರವಿಂದ್ ಕುಪ್ಲಿಕರ್ ತಿಳಿಸಿದ್ದಾರೆ. ಇದನ್ನೂ ಓದಿ: `ಆರ್‌ಆರ್‌ಆರ್’ ಸಕ್ಸಸ್ ನಂತರ ಮುಂದಿನ ಚಿತ್ರದ ಬಗ್ಗೆ ಜ್ಯೂ.ಎನ್‌ಟಿಆರ್ ಪ್ರತಿಕ್ರಿಯೆ

    ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹೊಸ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದು, ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಟೈಟಲ್ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಚೆನ್ನೈ: ಎಲೆಕ್ಟ್ರಿಷಿಯನ್ (Electrician) ಕೆಲಸ ಮಾಡುತ್ತಿದ್ದ ವೇಳೆ ನಟ್ ನುಂಗಿದ್ದ 55 ವರ್ಷದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನೆಟ್ ಅನ್ನು ಆತನ ದೇಹದಿಂದ ವೈದ್ಯರು ಹೊರ ತೆಗೆದಿದ್ದಾರೆ.

    ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿಯನ್ನು ಕೊಯಮತ್ತೂರಿನ (Coimbatore) ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅಕ್ಟೋಬರ್ 18ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಟ್ ಅನ್ನು ನುಂಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಈ ವೇಳೆ ತಕ್ಷಣ ಕೆಮ್ಮಲು ಪ್ರಯತ್ನಿಸಿದ್ದಾರೆ. ಆದರೆ ನಟ್‍ನಿಂದ ಅವರಿಗೆ ಉಸಿರುಗಟ್ಟಲು ಪ್ರಾರಂಭಿಸಿತು. ಹೀಗಾಗಿ ಅವರನ್ನು ಕೂಡಲೇ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ವ್ಯಕ್ತಿಯನ್ನು ಕರೆದೊಯ್ದು ಎಕ್ಸ್-ರೇ ನಡೆಸಲಾಯಿತು. ಈ ವೇಳೆ ನಟ್ ಶ್ವಾಸನಾಳದಲ್ಲಿ ಸೇರಿಕೊಂಡು ಎಡ ಶ್ವಾಸಕೋಶದ ಕಡೆಗೆ ಹೋಗುತ್ತಿರುವುದು ವೈದ್ಯರಿಗೆ ತಿಳಿದುಬಂದಿದೆ.

    ಬಳಿಕ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರವಣನ್, ಅಲಿಸುಲ್ತಾನ್, ಮಣಿಮೋಳಿ, ಸೆಲ್ವನ್ ಮತ್ತು ಮದನಗೋಪಾಲನ್ ಅವರನ್ನೊಳಗೊಂಡ ವೈದ್ಯರ ತಂಡ ಎಂಡೋಟ್ರಾಶಿಯಲ್ ಉಪಕರಣವನ್ನು ಬಳಸಿ ಸಂಸುದ್ದೀನ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ನಟ್ ಅನ್ನು ಹೊರತೆಗೆದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ: ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ

    Live Tv
    [brid partner=56869869 player=32851 video=960834 autoplay=true]

  • ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

    ಪಾಟ್ನಾ: ಪ್ರೇಮಿಗಳು ಪ್ರೀತಿಯಲ್ಲಿದ್ದಾಗ ಎಲ್ಲ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ. ಅವರ ಕೆಲಸಗಳು ಬೇರೆಯವರಿಗೆ ತೊಂದರೆ ಕೊಡುತ್ತೆ ಎಂಬುದನ್ನು ಮರೆತುಬಿಡುತ್ತಾರೆ. ಅದೇ ರೀತಿ ಲೈನ್‌ಮ್ಯಾನ್ ಒಬ್ಬ ಕತ್ತಲೆಯ ನೆಪದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಇಡೀ ಗ್ರಾಮದ ಕರೆಂಟ್ ಆಗಾಗ್ಗೆ ಕಡಿತಗೊಳಿಸುತ್ತಿದ್ದ ವಿಲಕ್ಷಣ ಘಟನೆಯೊಂದು ಬಿಹಾರದ ಪುರ್ನಿಯಾದಲ್ಲಿ ವರದಿಯಾದೆ.

    ಪುರ್ನಿಯಾ ಜಿಲ್ಲೆಯ ಗಣೇಶ್‍ಪುರ ಗ್ರಾಮದ ಜನರು ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವುದೇ ರೀತಿಯ ಕರೆಂಟ್ ಸಮಸ್ಯೆಯಾಗುತ್ತಿಲ್ಲ. ಆದರೆ ನಮ್ಮ ಹಳ್ಳಿಯಲ್ಲಿ ಮಾತ್ರ ಯಾಕೆ ಈ ರೀತಿಯಾಗುತ್ತಿದೆ ಎಂದು ಯೋಚಿಸುತ್ತಿದ್ದರು. ತಿಂಗಳಲ್ಲಿ ಒಮ್ಮೆಯಾದರೂ ಈ ಸಮಸ್ಯೆ ಕಾಣಿಸಿಕೊಳ್ಳುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿ ಇದಕ್ಕೆ ನಿಖರವಾದ ಕಾರಣ ಹುಡುಕಲು ನಿರ್ಧರಿಸಿದರು. ಇದನ್ನೂ ಓದಿ: ಥೈಲ್ಯಾಂಡ್ ಪೂಲ್‌ನಲ್ಲಿ ಮೈಮರೆತ ಮಂದಿರಾ ಬೇಡಿ

    ಈ ಕುರಿತು ಪರಿಶೀಲಿಸಿದ ನಂತರ, ಎಲೆಕ್ಟ್ರಿಷಿಯನ್ ತನ್ನ ಗೆಳತಿಯನ್ನು ಕತ್ತಲೆಯಲ್ಲಿ ಭೇಟಿಯಾಗಲು ಹಳ್ಳಿಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುತ್ತಿರುವುದು ತಿಳಿದು ಗ್ರಾಮಸ್ಥರು ಆಘಾತಕ್ಕೊಳಗಾದರು. ಲೈನ್‌ಮ್ಯಾನ್ ನನ್ನು ಹಿಡಿಯಲು ನಿರ್ಧರಿಸಿದ ಗ್ರಾಮಸ್ಥರು ಒಂದು ಯೋಚನೆ ರೂಪಿಸಿದರು.

    ಗ್ರಾಮಸ್ಥರು ಪ್ಲಾನ್ ಮಾಡಿದ ರೀತಿಯಲ್ಲಿಯೇ ಲೈನ್‌ಮ್ಯಾನ್ ಬಂದಿದ್ದು, ಎಲ್ಲರೂ ಕೋಪಗೊಂಡು ಅವನನ್ನು ಥಳಿಸಿದ್ದಾರೆ. ನಂತರ ಅವರು ಲೈನ್‌ಮ್ಯಾನ್  ಗ್ರಾಮದಲ್ಲಿ ಮೆರವಣಿಗೆ ಮಾಡಿಸಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗ್ರಾಮಸ್ಥರು ಗ್ರಾಮದ ಮುಖ್ಯಸ್ಥ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತ ತನ್ನ ಪ್ರೇಯಸಿಯನ್ನು ಮದುವೆಯಾಗುವಂತೆ ತೀರ್ಮಾನ ಮಾಡಿದರು.

    ಗ್ರಾಮದ ಮುಖ್ಯಸ್ಥ ಮತ್ತು ಇತರ ಗ್ರಾಮ ಕೌನ್ಸಿಲ್ ಸದಸ್ಯರ ಸಮ್ಮುಖದಲ್ಲಿ ಲೈನ್‌ಮ್ಯಾನ್ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಗ್ರಾಮಸ್ಥ ಮಾರಾರ್ ರಾಮ್ ಮುರ್ಮು ಗುರುವಾರ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದರು. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು 

    ಗ್ರಾಮಸ್ಥರು ಲೈನ್‌ಮ್ಯಾನ್ ವಿರುದ್ಧ ಯಾವುದೇ ಪೊಲೀಸ್ ಕೇಸ್ ದಾಖಲಿಸಿಲ್ಲ. ದೂರು ಬಂದರೆ ಮಾತ್ರ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.