Tag: electric wire

  • ವಿದ್ಯುತ್ ಕಂಬದಿಂದ ನೇತಾಡುತ್ತಿದೆ ವೈಯರ್; ಮಕ್ಕಳ ಶಾಲೆಯ ಎದುರೇ ಡೇಂಜರ್

    ವಿದ್ಯುತ್ ಕಂಬದಿಂದ ನೇತಾಡುತ್ತಿದೆ ವೈಯರ್; ಮಕ್ಕಳ ಶಾಲೆಯ ಎದುರೇ ಡೇಂಜರ್

    – ಕೈಗೆಟುಕುವಷ್ಟು ಅಪಾಯ ಸ್ಥಿತಿಯಲ್ಲಿ ಕೇಬಲ್

    ಬೆಂಗಳೂರು: ಹಂಪಿನಗರದ (Hampi Nagar) ರಸ್ತೆಯಲ್ಲಿ ವಿದ್ಯುತ್ ತಂತಿಯೊಂದು ನೇತಾಡುತ್ತಿದೆ. ಮಳೆ ಬಂದರೆ ಆಗಾಗ ಬೆಂಕಿ ಕಾಣಿಸಿಕೊಳ್ತಿದ್ದು, ಶಾರ್ಟ್ ಸರ್ಕ್ಯೂಟ್ ಆಗುವ ಆತಂಕವಿದೆ. ಎರಡ್ಮೂರು ದಿನಗಳಿಂದ ಅಪಾಯದ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟವರು ಇವರೆಗೂ ದುರಸ್ತಿ ಮಾಡಿಲ್ಲ.

    ವಿಜಯನಗರ ವಿಧಾನಸಭಾ ಕ್ಷೇತ್ರದ ಹಂಪಿನಗರದ 11ನೇ ಮುಖ್ಯರಸ್ತೆಯಲ್ಲಿ ಈ ಬೆಸ್ಕಾಂ ವಿದ್ಯುತ್ ಕಂಬವಿದೆ. ಕಳೆದ ಎರಡ್ಮೂರು ದಿನಗಳಿಂದ ಈ ವಿದ್ಯುತ್ ತಂತಿ ನೆಲಕ್ಕೆ ತಾಗುವ ಸ್ಥಿತಿಯಲ್ಲಿ ನೇತಾಡುತ್ತಿದೆ. ಈ ಕಂಬದಿಂದ ಈ ಭಾಗದ ಕೆಲ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನ ನೀಡಲಾಗ್ತಿದೆ. ಈ ಕಂಬದ ಎದುರುಗಡೆಯೇ ಮಾಂಟೆಸ್ಸರಿ ಶಾಲೆಯಿದೆ. ಪುಟಾಣಿ ಮಕ್ಕಳು ಗೊತ್ತಿಲ್ಲದೇ ಕೈ ತಾಗಿಸಿದ್ರೆ ಅನಾಹುತ ಆಗೋ ಸಾಧ್ಯತೆಗಳೇ ಹೆಚ್ಚು. ಇದನ್ನೂ ಓದಿ: ಫೆಂಗಲ್ ಎಫೆಕ್ಟ್ – ರಾಜ್ಯದಲ್ಲಿ ಈ ವಾರವೂ ಮುಂದುವರಿಯಲಿದೆ ಮಳೆ

    ಸಂಜೆ ಹೊತ್ತಲ್ಲಿ ಈ ಬೀದಿದೀಪ ಸ್ಟಾರ್ಟ್ ಆಗುತ್ತೆ. ಮಳೆ ಬಂದಾಗ ಈ ಡೇಂಜರಸ್ ವೈಯರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತೆ. ಹೀಗಾಗಿ, ಜನ ಈ ಕಂಬದ ಸಮೀಪ ಓಡಾಡೋದಕ್ಕೆ ಭಯ ಪಡುತ್ತಾರೆ. ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಮಕ್ಕಳಿಗೆ ಏನಾದರು ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಅಂತಾ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

    ನಗರದ ಬಹುತೇಕ ಭಾಗಗಳಲ್ಲಿ ಡೇಂಜರಸ್ ವಿದ್ಯುತ್ ಕಂಬಗಳಿವೆ. ಕೆಲವೊಂದನ್ನು ಬೆಸ್ಕಾಂ ನಿರ್ವಹಣೆ ಮಾಡ್ತಿದ್ದರೆ, ಕೆಲವನ್ನು ಪಾಲಿಕೆ ನಿರ್ವಹಣೆ ಮಾಡ್ತಿದೆ. ಸುರಕ್ಷತೆಯ ವಿಚಾರದಲ್ಲಿ ಬಿಬಿಎಂಪಿ, ಬೆಸ್ಕಾಂ ಅಲರ್ಟ್ ಆಗಬೇಕಿದೆ. ಅಪಾಯಕ್ಕೆ ಆಹ್ವಾನ ನೀಡುವ ಡೇಂಜರಸ್ ಕೇಬಲ್, ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಬೇಕಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳೆಗೆ ಸಿಕ್ತು ನಿವೇಶನ; ಸಿಎಂ ಮುಂದೆ ಗೋಳಾಡಿದ್ದ ರಾಬಿಯಾ

  • ಚಿತ್ರದುರ್ಗ| ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ

    ಚಿತ್ರದುರ್ಗ| ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ

    ಚಿತ್ರದುರ್ಗ: ವಿದ್ಯುತ್ ತಂತಿ (Electric Wire) ಸ್ಪರ್ಶಿಸಿ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಮಧ್ಯಪ್ರದೇಶ ಮೂಲದ ಮೋಹಿತ್(24), ಕತರ್ವ (38) ಎಂದು ಗುರುತಿಸಲಾಗಿದೆ. ಕೃಷ್ಣಾಪುರ ಗ್ರಾಮದ ಜಯರಾಂ ಎಂಬವರ ಅಡಿಕೆ ತೋಟದಲ್ಲಿ ಘಟನೆ ನಡೆದಿದ್ದು, ಕಳೆದ ರಾತ್ರಿ ಶ್ರೀಗಂಧ ಕಳ್ಳತನಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ಗೊತ್ತಿದೆ: ಸುದೀಪ್ ತಾಯಿ ಅಂತಿಮ ದರ್ಶನ ಪಡೆದ ರಾಘಣ್ಣ

    ಜಯರಾಂ ಅಡಿಕೆ ತೋಟದಲ್ಲಿ ಕೆಲ ಶ್ರೀಗಂಧದ ಮರಗಳಿದ್ದು, ಕಳ್ಳತನಕ್ಕೆ ಆಗಮಿಸಿ ಈ ರೀತಿ ಸಾವಿಗೀಡಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಬ್ಬಿನಹೊಳೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರಾಜಸ್ತಾನ| ಬಸ್-ರಿಕ್ಷಾ ನಡುವೆ ಭೀಕರ ಅಪಘಾತ; 8 ಮಕ್ಕಳು ಸೇರಿ 12 ಮಂದಿ ಸಾವು

  • ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

    ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

    ಬೆಂಗಳೂರು: ಬೆಸ್ಕಾಂ (BESCOM) ನಿರ್ಲಕ್ಷ್ಯಕ್ಕೆ ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ವೈಟ್ ಫೀಲ್ಡ್‌ನ (Whitefield) ಕಾಡುಗೋಡಿಯಲ್ಲಿ (Kadugodi) ನಡೆದಿದೆ.

    ತಾಯಿ ಸೌಂದರ್ಯ ಹಾಗೂ ಮಗಳು ಲೀಲಾ ಸಾವನ್ನಪ್ಪಿದ ದುರ್ದೈವಿಗಳು. ತಮಿಳುನಾಡು ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ಇಂದು ಬೆಳಗಿನ ಜಾವ 5 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ಅದನ್ನು ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಾಂಬಾರ್ ಪಾತ್ರೆಗೆ ಬಿದ್ದು 2ನೇ ಕ್ಲಾಸ್ ವಿದ್ಯಾರ್ಥಿನಿ ದಾರುಣ ಸಾವು

    ದೀಪಾವಳಿ ಹಬ್ಬಕ್ಕೆ ಚೆನ್ನೈಗೆ ಹೋಗಿದ್ದ ಸೌಂದರ್ಯ, ಪತಿ ಸಂತೋಷ್ ಹಾಗೂ 9 ತಿಂಗಳ ಕಂದಮ್ಮ ಲಿಯಾ ಇಂದು ಮುಂಜಾನೆ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ದಾರಿಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಅದನ್ನು ಸೌಂದರ್ಯ ತುಳಿದಿದ್ದರು. ಈ ವೇಳೆ ಪತಿ ಸಂತೋಷ್ ಕೈಗೆ ವಿದ್ಯುತ್ ಶಾಕ್ ಹೊಡೆದು ಅದೃಷ್ಟವಶಾತ್ ಅವರು ಪಕ್ಕಕ್ಕೆ ಬಿದ್ದಿದ್ದರು. ಆದರೆ ಪತಿ ಎದುರೇ ಪತ್ನಿ ಹಾಗೂ ಕಂದಮ್ಮ ವಿದ್ಯುತ್ ಶಾಕ್‌ಗೆ ಸುಟ್ಟು ಕರಕಲಾಗಿದ್ದಾರೆ.

    ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಇ ಚೇತನ್, ಎಇಇ ಸುಬ್ರಮಣಿ ಹಾಗೂ ಇಇ ಶ್ರೀ ರಾಮನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕುಟುಂಬ ಬಲಿಪಡೆದು ದೀಪಾವಳಿ ಆಚರಿಸಿದ ಆರೋಪಿ ಪ್ರವೀಣ್

  • ಶಿವಮೊಗ್ಗ-ಸಾಗರ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ – ರೈಲು 2 ಗಂಟೆ ವಿಳಂಬ

    ಶಿವಮೊಗ್ಗ-ಸಾಗರ ರೈಲ್ವೆ ಹಳಿ ಮೇಲೆ ತುಂಡಾಗಿ ಬಿದ್ದ ವಿದ್ಯುತ್ ತಂತಿ – ರೈಲು 2 ಗಂಟೆ ವಿಳಂಬ

    ಶಿವಮೊಗ್ಗ: ರೈಲ್ವೆ ಹಳಿ (Railway Track) ಮೇಲೆ ವಿದ್ಯುತ್ ತಂತಿ (Electric Wire) ತುಂಡಾಗಿ ಬಿದ್ದಿದ್ದರಿಂದ ಕೆಲಕಾಲ ರೈಲು ಸಂಚಾರ ವ್ಯತ್ಯಯ ಉಂಟಾಗಿದ್ದ ಘಟನೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಬಳಿ ನಡೆದಿದೆ.

    ಆನಂದಪುರ ಸಮೀಪ ರೈಲ್ವೆ ಹಳಿ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ಸಿಬ್ಬಂದಿ ಇದನ್ನು ಗಮನಿಸಿ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು. ಬೆಳಗ್ಗೆ 5:15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಬೆಂಗಳೂರು ಇಂಟರ್‌ಸಿಟಿ ರೈಲು ಬೆಳಗ್ಗೆ 6:05ಕ್ಕೆ ಆನಂದಪುರಕ್ಕೆ ತಲುಪಿ, ಅಲ್ಲಿಯೇ ನಿಂತಿತ್ತು. ಹಳಿ ಮೇಲೆ ಬಿದ್ದಿದ ವಿದ್ಯುತ್ ತಂತಿ ತೆರವುಗೊಳಿಸಿ ರಿಪೇರಿ ಕಾರ್ಯ ನಡೆಸಲಾಯಿತು. ಎರಡೂವರೆ ಗಂಟೆ ಬಳಿಕ 8:39ಕ್ಕೆ ರೈಲು ಸಂಚಾರ ಆರಂಭಿಸಿದೆ. ಇದನ್ನೂ ಓದಿ: ಶುಕ್ರವಾರ ಐತಿಹಾಸಿಕ ಬೀದರ್ ಕೋಟೆ ಮೇಲೆ ಸೂರ್ಯಕಿರಣ ಏರ್ ಶೋ ಕಲರವ

    7 ಗಂಟೆಗೆ ಶಿವಮೊಗ್ಗ ನಿಲ್ದಾಣ ತಲುಪಬೇಕಿದ್ದ ರೈಲು 10 ಗಂಟೆ ಹೊತ್ತಿಗೆ ತಲುಪಿದೆ. ತಾಳಗುಪ್ಪದವರೆಗೆ ರೈಲ್ವೆ ಲೇನ್ ವಿದ್ಯುದೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಇದರ ತಂತಿ ತುಂಡಾಗಿ ರೈಲ್ವೆ ಲೇನ್ ಮೇಲೆ ಬಿದ್ದಿತ್ತು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆ ಸಿಬ್ಬಂದಿ ರಿಪೇರಿ ಕಾರ್ಯ ಕೈಗೊಂಡು ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲ್ಲಲು ಸ್ಕೆಚ್ ಹಾಕಿದ್ದು ಪತ್ನಿಯನ್ನ, ಆದ್ರೆ ಸತ್ತಿದ್ದು ಅತ್ತೆ

    ಕೊಲ್ಲಲು ಸ್ಕೆಚ್ ಹಾಕಿದ್ದು ಪತ್ನಿಯನ್ನ, ಆದ್ರೆ ಸತ್ತಿದ್ದು ಅತ್ತೆ

    ಭೋಪಾಲ್: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲ್ಲುವ ಸಲುವಾಗಿ ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಅಳವಡಿಸಿದ್ದನು. ಆದರೆ ಪತ್ನಿ ಬದಲಿಗೆ ಆಕೆಯ ತಾಯಿ ಬಾಗಿಲನ್ನು ಸ್ಪರ್ಶಿಸಿ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಬೇತುಲ್ ( Betul) ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಕೊತ್ವಾಲಿ ಪೊಲೀಸ್ ಠಾಣೆ (Kotwali police station) ವ್ಯಾಪ್ತಿಯ ಸೈಖೇಡಾ (Saikheda) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮದ್ಯ ವ್ಯಸನನಾಗಿದ್ದು, ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಭಾನುವಾರ ರಾತ್ರಿ ಕೂಡ ಇದೇ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳವಾಗಿತ್ತು. ಇದರಿಂದ ಬೇಸತ್ತು ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು. ಇದನ್ನೂ ಓದಿ: 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    ತನ್ನ ಪತ್ನಿ ಮನೆಯಿಂದ ಹೊರಟಿದ್ದಕ್ಕೆ ಕೋಪಗೊಂಡ ಆರೋಪಿ ತನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿ ಕಬ್ಬಿಣದಿಂದ ತಯಾರಿಸಲಾಗಿದ್ದ ಬಾಗಿಲಿಗೆ ವಿದ್ಯುತ್ ತಂತಿಯಿಂದ ಜೋಡಿಸಿ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಅಚಾನಕ್ ಆಗಿ ಆತನ ಅತ್ತೆ ಬಾಗಿಲನ್ನು ಸ್ಪರ್ಶಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೊರಾರ್ಜಿ ದೇಸಾಯಿ ಶಾಲೆಯಲ್ಲಿ RSS ಶಿಬಿರಕ್ಕೆ ಅವಕಾಶ ಆರೋಪ- ಅನುಮತಿ ಕೊಟ್ಟಿಲ್ಲ ಎಂದ ಕೋಟಾ

    ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಪಲಾ ಸಿಂಗ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಳ್ಳರ ಕೃತ್ಯಕ್ಕೆ ಬೇಸತ್ತ ಗ್ರಾಮಸ್ಥರು – ಖದೀಮರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಜೊತೆಗೆ ಸನ್ಮಾನ

    ಕಳ್ಳರ ಕೃತ್ಯಕ್ಕೆ ಬೇಸತ್ತ ಗ್ರಾಮಸ್ಥರು – ಖದೀಮರನ್ನು ಹುಡುಕಿಕೊಟ್ಟವರಿಗೆ ಬಹುಮಾನ ಜೊತೆಗೆ ಸನ್ಮಾನ

    ಬೀದರ್: ಕಳ್ಳರನ್ನು ಹಿಡಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಬಹುಮಾನ ಹಾಗೂ ಸನ್ಮಾನ ಮಾಡುವುದಾಗಿ ಗ್ರಾಮ ಪಂಚಾಯಿತಿಯೊಂದು ಘೋಷಿಸಿದೆ. ದಸರಾ ಸೇರಿದಂತೆ ಪಮುಖ ಹಬ್ಬಗಳು ಬಂದಾಗ ಕಳ್ಳರು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಕೃತ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದೆ. ಹೀಗಾಗಿ ಕಳ್ಳರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಹಾಗೂ ಸನ್ಮಾನ ಎಂಬ ವಿಚಿತ್ರ ಘೋಷಣೆ ಮಾಡಿದೆ.

    ಒಂದು ಕಡೆ ಕುಡಿಯುವ ನೀರಿನ ಘಟಕದ ಸಂಪರ್ಕಿಸುವ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದರೆ, ಮೊತ್ತೊಂದೆಡೆ ಪದೇ, ಪದೇ ವಿದ್ಯುತ್ ಸಂಪರ್ಕದ ವೈರ್ ಅನ್ನು ಕಳ್ಳರು ಕಟ್ ಮಾಡಿದ್ದಾರೆ. ರಾಜ್ಯದಲ್ಲೇ ಇದು ವಿಚಿತ್ರ ಘಟನೆಯಾಗಿದ್ದರೂ ಸತ್ಯವಾಗಿದೆ. ಇದನ್ನೂ ಓದಿ: ದೇಶಾದ್ಯಂತ ಹವಾ ಸೃಷ್ಟಿಸಿದ ಸಂಸ್ಕೃತದಲ್ಲಿನ ಕ್ರಿಕೆಟ್ ಕಾಮೆಂಟರಿ- ಪ್ರಧಾನಿ ಮೋದಿ ಭಾರೀ ಮೆಚ್ಚುಗೆ

    ಹೌದು, ಬೀದರ್ ತಾಲೂಕಿನ ಚಿಕ್ಕಪೇಟೆ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವಿದ್ಯುತ್ ವೈರ್‍ನ್ನು ಕಿಡಿಗೇಡಿಗಳು ಉದೇಶಪೂರ್ವಕವಾಗಿ ಪದೇ, ಪದೇ ಕಟ್ ಮಾಡುತ್ತಿದ್ದಾರೆ. ಯಾರೋ ಕಿಡಿಗೇಡಿ ಕಳ್ಳರು ಉದ್ದೇಶ ಪೂರ್ವಕವಾಗಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ವೈರ್ ಕಟ್ ಮಾಡುತ್ತಿರುವುದರಿಂದ ಕೃತಕವಾಗಿ ಗ್ರಾಮದಲ್ಲಿ ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಪದೇ ಪದೇ ಈ ರೀತಿ ಕಿಡಿಗೇಡಿಗಳು ಮಾಡುತ್ತಿರುವುದರಿಂದ ಬೇಸತ್ತ ಮರಕಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕಳ್ಳರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

    ರಾತ್ರೋರಾತ್ರಿ ವಿದ್ಯುತ್ ವೈರ್ ಕಟ್ ಮಾಡಿ ಕಳ್ಳತನ ಮಾಡುತ್ತಿರುವ ಕಳ್ಳರನ್ನು ಸಾರ್ವಜನರಿಗೆ ಹಿಡಿದು ಕೊಟ್ಟರೆ ಗ್ರಾಮ ಪಂಚಾಯಿತಿಯಿಂದ 1 ಸಾವಿರ ಹಾಗೂ ಗ್ರಾಮಸ್ಥರಿಂದ 2 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಇದೇ ಮೊಲದ ಬಾರಿಗೆ ಕಳ್ಳರನ್ನು ಹಿಡಿಯಲು ಗ್ರಾಪಂ ಹಾಗೂ ಗ್ರಾಮಸ್ಥರು ಬಹುಮಾನ ಘೋಷಣೆ ಮಾಡಿದ ವಿಚಾರ ಭಾರೀ ಸದ್ದು ಮಾಡುತ್ತಿದೆ. ಹಬ್ಬದ ದಿನಗಳಲ್ಲಿ ಯಾರೋ ಕಿಡಿಗೇಡಿಗಳು ಹಲವು ತಿಂಗಳಿಂದ ಪದೇ ಪದೇ ಉದ್ದೇಶ ಪೂರ್ವಕವಾಗಿ ಕಳ್ಳತನ ಮಾಡುತ್ತಿದ್ದಾರೆ. ಹೀಗಾಗಿ ಬೇಸತ್ತು ನಾವು ಸಾರ್ವಜನಿಕರ ಸಹಾಯದಿಂದ ಕಳ್ಳರನ್ನು ಹಿಡಿಯಲು ಬಹುಮಾನ ಹಾಗೂ ಸನ್ಮಾನ ಘೋಷಣೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯತಿ ಪಿಡಿಓ ಹೇಳಿದ್ದಾರೆ.

    ಕಿಡಿಗೇಡಿ ಕಳ್ಳರು ಕೇವಲ 10 ತಿಂಗಳಲ್ಲಿ ಬರೋಬ್ಬರಿ 6 ರಿಂದ 7 ಬಾರಿ ಕುಡಿಯುವ ನೀರಿನ ವಿದ್ಯುತ್ ಸಂಪರ್ಕದ ವೈರ್ ಅನ್ನು ಕಟ್ ಮಾಡಿದ್ದಾರೆ. ಪ್ರತಿ ಬಾರಿ ವಿದ್ಯೂತ್ ವೈರ್ ಕಟ್ ಮಾಡಿದಾಗ ಅದನ್ನು ದುರಸ್ಥಿ ಮಾಡಲು ಗ್ರಾ.ಪಂ.ಯಿಂದ 15 ರಿಂದ 20 ಸಾವಿರ ಹಣ ಖರ್ಚಾಗುತ್ತಿದೆ. ಜೊತೆಗೆ ಹಬ್ಬದ ದಿನಗಳಲ್ಲಿ ಚಿಕ್ಕಪೇಟೆ ಗ್ರಾಮಕ್ಕೆ ನೀರಿನ ಸಮಸ್ಯೆಯಾಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕತ್ತಾರೆ. ಹೀಗಾಗೀ ಕಿಡಿಗೇಡಿ ಕಳ್ಳರಿಂದ ಬೇಸತ್ತ ಗ್ರಾ.ಪಂ. ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಲೇ ಹಲವು ಬಾರಿ ಬೀದರ್ ಗ್ರಾಮೀಣ ಠಾಣೆ ಹಾಗೂ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಅಗ್ಗದ ವೈರ್ ಕಟ್ ಮಾಡಿ ಗ್ರಾಮಸ್ಥರಿಗೆ ತೊಂದರೆ ಕೊಡುತ್ತಾ ಗ್ರಾಪಂಗೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳು ಈ ರೀತಿ ಮಾಡುತ್ತಿದ್ದಾರೆ.

    ಉದ್ದೇಶಪೂರ್ವಕವಾಗಿ ಕಳ್ಳತನ ಮಾಡುವ ವ್ಯಕ್ತಿಗಳನ್ನು ಹುಡುಕಿ ಕೊಟ್ಟವರಿಗೆ ಬಹುಮಾನ, ಸನ್ಮಾನ ಹಾಗೂ ಅಂಥವರ ಹೆಸರನ್ನು ಗೌಪ್ಯವಾಗಿ ಹಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಪಂಯವರು ಒಂದು ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಆದರೆ ನಾವು 2 ಸಾವಿರ ಬಹುಮಾನ ಘೋಷಣೆ ಮಾಡುತ್ತೇವೆ. ರಾಜಕೀಯ ದುರುದ್ದೇಶದಿಂದ ಈ ರೀತಿ ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಇದನ್ನೂ ಓದಿ: ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ನೀಡಲು ಸಾಧ್ಯ: ಮೋಹನ್ ಭಾಗವತ್ ಪ್ರಶ್ನೆ

    ದಸರಾ ಹಬ್ಬ ಸೇರಿದಂತೆ ಪ್ರಮುಖ ಹಬ್ಬಗಳಲ್ಲಿ ಉದ್ದೇಶಪೂರ್ವಕವಾಗಿ ವೈರ್ ಕಟ್ ಮಾಡಿ ಗ್ರಾಮಸ್ಥರನ್ನು ಸಮಸ್ಯೆಗೆ ದುಡುತ್ತಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ಬೇಸತ್ತು ಕಳ್ಳರನ್ನ ಹಿಡಿದುಕೊಟ್ಟ ಸಾರ್ವಜನಿಕರಿಗೆ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಬಹುಮಾನ ಹಾಗೂ ಸನ್ಮಾನ ಘೋಷಣೆ ಮಾಡಿದ್ದು ಡಿಫರೆಂಟ್ ಐಡಿಯಾವಾಗಿದೆ. ಬಹುಮಾನ ಘೋಷಣೆ ಬೆನ್ನಲ್ಲೆ ಸಾರ್ವಜನಿಕರು ಕಳ್ಳರಿಗಾಗಿ ಬಲೆ ಬಿಸಿ ಸಮಸ್ಯೆಗೆ ಬ್ರೇಕ್ ಹಾಕತ್ತಾರಾ ಎಂದು ನಾವು ನೀವು ಕಾದೂ ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಹೈವೋಲ್ಟೇಜ್  ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವು

    ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವು

    ಬೆಳಗಾವಿ: ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಸುಳಗಾ ಗ್ರಾಮದ ವಿನಾಯಕ್ ಕಲ್ಕಾಂಬಕರ್(24), ಗೋಪಾಲ್ ಅಗಸಗೇಕರ್(52) ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿಗೆ ಗಂಭೀರವಾದ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಕಾಕ್‍ಪಿಟ್‍ನಲ್ಲಿ ಕೇಳಿಸಿತು ಶಿಳ್ಳೆ – ಮಧ್ಯದಲ್ಲಿಯೇ ಹಿಂದಿರುಗಿದ ವಿಸ್ತಾರ ವಿಮಾನ

    POLICE JEEP

    ಮೃತರು ತಮ್ಮ ಮನೆಯ ಮೇಲೆ ಸ್ಟೀಲ್‍ಶೀಟ್ ಅಳವಡಿಸುವ ಸಂದರ್ಭದಲ್ಲಿ ಮನೆಯ ಮೇಲೆ ಹಾಯ್ದು ಹೋಗಿರುವ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಗಂಭೀರವಾದ ಗಾಯಗಳಾಗಿದೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 5 ಸಾವಿರ ಕಾರು ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ

    ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ

    ಬಾಗಲಕೋಟೆ: ಚಲಿಸುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

    ಪ್ರಭುಲಿಂಗೇಶ್ವರ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದೆ. ಅದೃಷ್ಟವಶಾತ್ ಸ್ಥಳೀಯ ಪೊಲೀಸರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಟ್ರ್ಯಾಕ್ಟರ್ ನಲ್ಲಿದ್ದ ಕಬ್ಬಿನ ಲೋಡ್ ಬೆಂಕಿಯಿಂದ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಬಸವೇಶ್ವರ ವೃತ್ತದಲ್ಲಿ ಬಳಿ ಟ್ರ್ಯಾಕ್ಟರ್ ನಿಲ್ಲಿಸಿ ಬೆಂಕಿ ನಂದಿಸಿದ್ದಾರೆ. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಘಟನೆ ಕುರಿತು ಜಮಖಂಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅದು ಮೇಕೆದಾಟಲ್ಲ, ಮೇಕೆ ನಾಟಕ ಪಾದಯಾತ್ರೆ: ಮುನಿರತ್ನ

  • ಬೆಂಕಿ ಹೊತ್ತಿಕೊಂಡು ರಸ್ತೆಗೆ ಉರುಳಿದ ಮರ- ತಪ್ಪಿದ ಅನಾಹುತ

    ಬೆಂಕಿ ಹೊತ್ತಿಕೊಂಡು ರಸ್ತೆಗೆ ಉರುಳಿದ ಮರ- ತಪ್ಪಿದ ಅನಾಹುತ

    ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಶಿರದನಹಳ್ಳಿ ರಸ್ತೆ ಬದಿ ಒಣಗಿದ್ದ ಮರ ವಿದ್ಯತ್ ತಂತಿ ಮೇಲೆ ಬಿದ್ದಿದ್ದು, ಬೆಂಕಿ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಕೊಣನೂರು- ಮೈಸೂರು ಮಾರ್ಗದ ರಸ್ತೆ ಬದಿ ಒಣಗಿ ನಿಂತಿದ್ದ ಮರವನ್ನು ತೆರವುಗೊಳಿಸಿರಲಿಲ್ಲ. ಮರದ ಬೃಹತ್ ಕೊಂಬೆ ವಿದ್ಯುತ್ ಲೈನ್ ಮೇಲೆ ಮುರಿದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಲೈನ್ ತುಂಡಾಗಿ ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿದೆ. ಈ ಮಾರ್ಗದ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಪಕ್ಕದಲ್ಲೇ ವಾಸದ ಮನೆಗಳು ಇವೆ. ರಸ್ತೆ ಕಡೆಗೆ ಮರದ ಕೊಂಬೆ ಲೈನ್ ಮೇಲೆ ಉರುಳಿದ ವೇಳೆ ಕೆಳಗೆ ಯಾರೊಬ್ಬರು ಇರದ ಕಾರಣ ಭಾರೀ ಅನಾಹುತ ತಪ್ಪಿದೆ.

    ಮರ ಬಿದ್ದು ಬೆಂಕಿ ಹೊತ್ತಿರುವುದು ಎದೆಯನ್ನು ನಡುಗಿಸುವಂತಿದೆ ಎಂದು ಪ್ರತ್ಯಕ್ಷದರ್ಶಿಗಳು ಆತಂಕ ವ್ಯಕ್ತಪಡಿಸಿದರು. ಸಿಬ್ಬಂದಿ ವಿದ್ಯುತ್ ಸ್ಥಗಿತಗೊಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಣನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

  • ವಿದ್ಯುತ್ ತಂತಿ ತುಳಿದು ರೈತ ಸಾವು

    ವಿದ್ಯುತ್ ತಂತಿ ತುಳಿದು ರೈತ ಸಾವು

    ಮಂಡ್ಯ: ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿದರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೆಂಚಭೋವಿದೊಡ್ಡಿ ಗ್ರಾಮದಲ್ಲಿ ಜರುಗಿದೆ.

    ಕೆಂಚಭೋವಿದೊಡ್ಡಿ ಗ್ರಾಮದ ರೈತ ಪುಟ್ಟೇಗೌಡ ಮೃತ ದುರ್ದೈವಿ. ಪುಟ್ಟೇಗೌಡ ಅವರು ಎಂದಿನಂತೆ ಬೆಳಗ್ಗೆ ಜಮೀನಿಗೆ ನೀರು ಹಾಯಿಸಲು ತೆರಳಿದ್ದಾರೆ. ಈ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ, ಪರಿಹಾರ ನೀಡಬೇಕೆಂದು ಆಗ್ರಹಪಡಿಸಿದ್ದಾರೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.