Tag: Electric Vehicles

  • PM E-DRIVE ಯೋಜನೆಯ ಅವಧಿ 2 ವರ್ಷ ವಿಸ್ತರಣೆ – ಕೇಂದ್ರ ಸಚಿವ ಹೆಚ್‌ಡಿಕೆ

    PM E-DRIVE ಯೋಜನೆಯ ಅವಧಿ 2 ವರ್ಷ ವಿಸ್ತರಣೆ – ಕೇಂದ್ರ ಸಚಿವ ಹೆಚ್‌ಡಿಕೆ

    – ಎಲೆಕ್ಟ್ರಿಕ್‌ ವಾಹನಗಳ ಉತ್ತೇಜನಕ್ಕೆ ಪ್ರಧಾನಿಗಳ ಒತ್ತು
    – ಇ-ವಾಹನ ಪೂರಕ ವ್ಯವಸ್ಥೆ ಬಲಪಡಿಸಲು ಕ್ರಮ ಎಂದ ಕೇಂದ್ರ ಸಚಿವರು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ PM E-DRIVE ಯೋಜನೆಯ ಅವಧಿಯನ್ನು 2 ವರ್ಷಗಳ ಕಾಲ ವಿಸ್ತರಿಸಲಾಗಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

    2026 ಮಾರ್ಚ್ 31 ರಿಂದ 2028 ಮಾರ್ಚ್ 31ರ ವರೆಗೆ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ನವೀನ ವಾಹನ ಸಂವರ್ಧನೆಯಲ್ಲಿ ಪಿಎಂ ಇ-ಡ್ರೈವ್ (PM E-DRIVE) ಯೋಜನೆಯ ಅವಧಿಯನ್ನು ಎರಡು ವರ್ಷದಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    2024 ಸೆಪ್ಟೆಂಬರ್ 29 ರಂದು ಎರಡು ವರ್ಷಗಳ ಅವಧಿಗೆ 10,900 ಕೋಟಿ ರೂ. ವೆಚ್ಚದೊಂದಿಗೆ ಈ ಯೋಜನೆಯ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈಗ ಈ ಯೋಜನೆಯನ್ನು 2028ರ ವರೆಗೆ ವಿಸ್ತರಿಸಲಾಗಿದೆ. ಇದನ್ನೂ ಓದಿ: ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗೆ ಮೋದಿ ಸ್ವಾಗತಿಸಿದ ಚೀನಾ; ಗಲ್ವಾನ್‌ ಘರ್ಷಣೆ ಬಳಿಕ ಮೊದಲ ಭೇಟಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದಲ್ಲಿ ಇ-ಚಲನಶೀಲತೆಯನ್ನು ವೇಗಗೊಳಿಸುವತ್ತ ದೇಶವು ತ್ವರಿತಗತಿಯಲ್ಲಿ ಹೆಜ್ಜೆ ಇಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದು, ಪಿಎಂ ಇ-ಡ್ರೈವ್ ಯೋಜನೆಯು ತನ್ನ ಹಂತ ಹಂತದ ಉತ್ಪಾದನಾ ಕಾರ್ಯಕ್ರಮದ ಮೂಲಕ ಮೇಕ್ ಇನ್ ಇಂಡಿಯಾವನ್ನ ಸಕ್ರಿಯಗೊಳಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಆದಾಯ ತೆರಿಗೆ ಮಸೂದೆ-2025 ಹಿಂಪಡೆದ ಕೇಂದ್ರ – ಆ.11ರಂದು ಹೊಸ ಆವೃತ್ತಿ ಪರಿಚಯ

    ಸಾಂದರ್ಭಿಕ ಚಿತ್ರ

    PM E-DRIVE ಯೋಜನೆಯು ಎಲೆಕ್ಟ್ರಿಕ್ ವಾಹನಗಳ (EV) ಅಳವಡಿಕೆಯನ್ನ ವೇಗಗೊಳಿಸಲು ಬಲವಾದ ಚಾರ್ಜಿಂಗ್ ಮೂಲಸೌಕರ್ಯವನ್ನ ಸ್ಥಾಪಿಸಲು ಮತ್ತು ದೇಶದಲ್ಲಿ ಇವಿ ವಾಹನಗಳ ಉತ್ಪಾದನಾ ಪರಿಸರ ವ್ಯವಸ್ಥೆಯನ್ನ ಬಲಪಡಿಸಲು ಉದ್ದೇಶಿಸಿದೆ. ಇ-ಟ್ರಕ್‌ಗಳು, ಇ-ಬಸ್‌ಗಳು ಮತ್ತು ಪರೀಕ್ಷಾ ಏಜೆನ್ಸಿಗಳಿಗೆ ಅವುಗಳ ನಿರ್ದಿಷ್ಟ ಸವಾಲುಗಳಿಂದಾಗಿ ಈ ವಿಸ್ತರಣೆಯ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಶಸ್ತ್ರಾಸ್ತ್ರ, ವಿಮಾನ ಖರೀದಿಸುವ ಯೋಜನೆ ಸ್ಥಗಿತಗೊಳಿಸಿಲ್ಲ: ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ

    ಇ-ಟ್ರಕ್‌ಗಳ ಮಾರುಕಟ್ಟೆ ಆರಂಭಿಕ ಹಂತದಲ್ಲಿದ್ದು, ಈ ದೃಷ್ಟಿಯಿಂದ ಪೂರ್ಣ ಪ್ರಮಾಣದ ವಾಣಿಜ್ಯ ಉತ್ಪಾದನೆಗೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅದೇ ರೀತಿ, 14,028 ಘಟಕಗಳನ್ನು ನಿಯೋಜಿಸಲು 4,391 ಕೋಟಿ ರೂ. ಹಂಚಿಕೆಯಿಂದ ಬೆಂಬಲಿತವಾದ ಇ-ಬಸ್‌ಗಳಿಗೆ ಮಾರ್ಚ್ 2026 ರಿಂದ ಆಯ್ಕೆಯ ನಂತರದ ಪ್ರಕ್ರಿಯೆಯ ಅಗತ್ಯವಿದೆ. ಇದಲ್ಲದೆ, ಪರೀಕ್ಷಾ ಏಜೆನ್ಸಿ ಉಪಕರಣಗಳ ಖರೀದಿಗೆ ಈ ವಿಭಾಗಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನ ಕಾಪಾಡಿಕೊಳ್ಳಲು ಟೆಂಡರ್, ಮೌಲ್ಯಮಾಪನ, ಸಂಗ್ರಹಣೆ ಮತ್ತು ಕಾರ್ಯಾರಂಭಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

  • 3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ

    3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ

    – ಮೆಕ್ಸಿಕೊಗೆ ಸಾಗುತ್ತಿದ್ದ ಶಿಪ್‌ – 3 ಸಾವಿರದಲ್ಲಿ 800 ಎಲೆಕ್ಟ್ರಿಕ್‌ ವಾಹನಗಳು

    ಮೆಕ್ಸಿಕೋ: 3,000 ಕಾರುಗಳನ್ನು ಮೆಕ್ಸಿಕೋಗೆ ಸಾಗಿಸುತ್ತಿದ್ದ ಕಾರ್ಗೋ ಶಿಪ್‌ (ಸರಕು ಸಾಗಣೆ ಹಡಗು – Cargo Ship) ಉತ್ತರ ಪೆಸಿಫಿಕ್ ಸಾಗರದಲ್ಲಿ (Pacific Ocean) ಮುಳುಗಡೆಯಾಗಿದೆ. ಹಡಗಿಗೆ ಬೆಂಕಿ ಹೊತ್ತಿಕೊಂಡ ಕೆಲವು ವಾರಗಳ ನಂತರ ಈ ಘಟನೆ ನಡೆದಿದೆ.

    ʻಮಾರ್ನಿಂಗ್ ಮಿಡಾಸ್ʼ (Morning Midas) ಹೆಸರಿನ ಸುಮಾರು 600 ಅಡಿ ಉದ್ದದ ಕಾರ್ಗೋ ಶಿಪ್‌ ಹಡಗು ನಿರ್ವಹಣಾ ಕಂಪನಿ ಲಂಡನ್​​ನ ಜೋಡಿಯಾಕ್ ಮ್ಯಾರಿಟೈಮ್ ನಿರ್ವಹಣೆ ಮಾಡುತ್ತಿತ್ತು. ಹೊಸ ಕಾರುಗಳನ್ನು ಅಲಾಸ್ಕಾದ ಅಡಕ್ ದ್ವೀಪದಿಂದ ಹೊತ್ತು ಮೆಕ್ಸಿಕೋದ ಬಂದರಿಗೆ ಸಾಗುತ್ತಿತ್ತು. ಭೂಪ್ರದೇಶದಿಂದ 300 ಮೈಲುಗಳು (490 ಕಿ.ಮೀ) ದೂರದಲ್ಲಿ ಸಾಗುತ್ತಿದ್ದಾಗ, ಜೂನ್ 3 ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್

    ತಕ್ಷಣವೇ ಈ ಬಗ್ಗೆ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್​ ಗಾರ್ಡ್​ಗೆ ಮಾಹಿತಿ ರವಾನಿಸಿದ್ದರು. ಪ್ರತಿಕೂಲ ಹವಾಮಾನ ಮತ್ತು ನೀರು ಸೋರಿಕೆಯಾದ ಕಾರಣ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಳೆದೊಂದು ವಾರದಿಂದ ಬೆಂಕಿಯಲ್ಲಿ ಉರಿಯುತ್ತಲೇ ಹಡಗು ದಡದತ್ತ ಸಾಗಿ ಬಂದಿದೆ. ಹೀಗಾಗಿ ಹಡಗು ಸಮೇತ 800 ಎಲೆಕ್ಟ್ರಿಕ್‌ ವಾಹನಗಳೊಂದಿಗೆ ತುಂಬಿದ್ದ 3,000 ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದನ್ನೂ ಓದಿ: ಅಭಿನಂದನ್‌ ವರ್ಧಮಾನ್‌ ಸೆರೆಹಿಡಿದಿದ್ದವ ಎನ್‌ಕೌಂಟರ್‌ನಲ್ಲಿ ಹತ್ಯೆ

    ರಕ್ಷಣೆಗೆ ಎರಡು ಹಡಗು ರವಾನೆ:
    ಲಂಡನ್​​ನ ಜೋಡಿಯಾಕ್ ಮ್ಯಾರಿಟೈಮ್ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಹಾನಿಗೀಡಾದ ಹಡಗಿನ ರಕ್ಷಣೆಗೆ ಎರಡು ಹಡಗನ್ನು ರವಾನಿಸಲಾಗಿತ್ತು. ಆದ್ರೆ, ಕೆಟ್ಟ ಹವಾಮಾನದಿಂದಾಗಿ ರಕ್ಷಣೆ ಸಾಧ್ಯವಾಗಿಲ್ಲ. ಸುಮಾರು 16,404 ಅಡಿ (5,000 ಮೀ) ಆಳ ಪ್ರದೇಶದಲ್ಲಿ ಭೂಮಿಯಿಂದ 415 ಮೈಲುಗಳು (770 ಕಿಲೋಮೀಟರ್) ದೂರದಲ್ಲಿ ಹಡಗು ಮುಳುಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್‌, ಇರಾನ್‌ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?

  • ಬೆಂಗಳೂರು ದೆಹಲಿ ಆಗೋದು ಬೇಡ: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಾರಿಗೆ ಸಚಿವರಿಗೆ ಗುಂಡೂರಾವ್ ಪತ್ರ

    ಬೆಂಗಳೂರು ದೆಹಲಿ ಆಗೋದು ಬೇಡ: ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಸಾರಿಗೆ ಸಚಿವರಿಗೆ ಗುಂಡೂರಾವ್ ಪತ್ರ

    – ಸಾರಿಗೆ ಇಲಾಖೆಯಿಂದ ʻಇವಿʼಗಳನ್ನೇ ಖರೀದಿಸಲು ತಾಕೀತು

    ಬೆಂಗಳೂರು: ದೆಹಲಿ ಮಾದರಿಯಲ್ಲಿ ಬೆಂಗಳೂರು (Bengaluru) ವಾಯುಮಾಲಿನ್ಯ ಹದಗೆಡುವುದು ಬೇಡ. ಮುಂಜಾಗ್ರತೆಯ ಸಲುವಾಗಿ ʻಇವಿʼಗಳಿಗೆ (Electric Vehicles) ಮೊರೆ ಹೋಗುವಂತೆ ಸಾರಿಗೆ ಸಚಿವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಪತ್ರ ಬರೆದಿದ್ದಾರೆ.

    ವಾಯುಮಾಲಿನ್ಯ ನಿಯಂತ್ರಣಕ್ಕೆ ʻಇವಿʼಬಳಕೆ ನಿಯಮ ಜಾರಿಗೆ ಕ್ರಮವಹಿಸಿ. ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ನಿಯಂತ್ರಣದ ಕ್ರಮಗಳ ಬಗ್ಗೆ ಚಿಂತನೆ ನಡೆಸುವಂತೆ ಸಚಿವ ರಾಮಲಿಂಗಾ ರೆಡ್ಡಿಗೆ (Ramalinga Reddy) ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಅಮೆರಿಕದಿಂದ ಅಕ್ರಮ ವಲಸಿಗರು ಗಡಿಪಾರು – 205 ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಒಂದೇ ಟಾಯ್ಲೆಟ್‌

    ಭವಿಷ್ಯದಲ್ಲಿ ಸಂಚರಿಸುವ ವಾಹನಗಳಿಗೆ ಅನುಮತಿ ನೀಡುವ ಮುನ್ನ, ಇವಿಗಳಾಗಿದ್ದರೆ ಮಾತ್ರ ಅನುಮತಿ ನೀಡಬೇಕು. ಸಾರಿಗೆ ಇಲಾಖೆಯಿಂದ ವಾಹನಗಳ ಖರೀದಿ ಮಾಡುವುದಿದ್ದರೆ ʻಇವಿʼಗಳನ್ನೇ ಖರೀದಿ ಮಾಡುವಂತೆ ಸಾರಿಗೆ ಸಚಿವರಿಗೆ ದಿನೇಶ್ ಗುಂಡೂರಾವ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿಸಿ ನಾಲೆಗೆ ಕಾರು ಬಿದ್ದು ದುರಂತ: ಮೃತರ ಸಂಖ್ಯೆ 3ಕ್ಕೆ ಏರಿಕೆ

  • Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

    Tesla India Office: ಭಾರತದ ಈ ನಗರದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

    ಮುಂಬೈ: ಯುಎಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಎಲೋನ್‌ ಮಸ್ಕ್‌ (Elon Musk) ನಡುವಿನ ಭೇಟಿಯ ಒಂದು ತಿಂಗಳ ನಂತರ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟೆಸ್ಲಾ ಕಂಪನಿ ತನ್ನ ಶಾಖೆಯನ್ನ ತೆರೆಯಲು ಜಾಗ ಪಡೆದುಕೊಂಡಿದೆ.

    ಟೆಸ್ಲಾ ಇಂಡಿಯಾ ಮೋಟಾರ್ (Tesla India Motors) ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ (Energy Private Limited) ಪುಣೆಯ ವಿಮಾನ ನಗರದಲ್ಲಿರುವ ಪಂಚಶೀಲ್ ಬ್ಯುಸಿನೆಸ್‌ ಪಾರ್ಕ್‌ನಲ್ಲಿ ಕಚೇರಿಗೆ ತೆರೆಯಲು ಸ್ಥಳವನ್ನ ಗುತ್ತಿಗೆ ಪಡೆದುಕೊಂಡಿದೆ.

    ಇದು ಭಾರತದ ಮಾರುಕಟ್ಟೆಗೆ ಟೆಸ್ಲಾ (Tesla) ಎಲೆಕ್ಟ್ರಿಕ್‌ ವಾಹನ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಾಗಿದೆ. ಈ ಹಿಂದೆ ಟೆಸ್ಲಾದ ಹಿರಿಯ ಅಧಿಕಾರಿಗಳು ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಲು ಇನ್ವೆಸ್ಟ್‌ ಇಂಡಿಯಾದ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿದ್ದರು. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    ಮಾಹಿತಿಗಳ ಪ್ರಕಾರ, ಟೆಸ್ಲಾದ ಭಾರತೀಯ ಅಂಗಸಂಸ್ಥೆಯು ಪಂಚಶೀಲ್ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಬಿ ವಿಂಗ್‌ನ ಮೊದಲ ಮಹಡಿಯಲ್ಲಿ 5,580 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಟೇಬಲ್‌ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ. ಒಪ್ಪಂದದ ಪ್ರಕಾರ 34.95 ಲಕ್ಷ ಭದ್ರತಾ ಠೇವಣಿಯೊಂದಿಗೆ ಮಾಸಿಕ 11.65 ಲಕ್ಷ ರೂ.ಗಳನ್ನು ಟೆಸ್ಲಾ ಸಂಸ್ಥೆ ಪಾವತಿಸಲಿದೆ. ಇದನ್ನೂ ಓದಿ: ದೈತ್ಯ ಟ್ವಿಟ್ಟರ್‌, ಇನ್ಸ್ಟಾಗ್ರಾಮ್‌ಗೆ ಸೆಡ್ಡು ಹೊಡೆಯಲು TikTok ಮಾಸ್ಟರ್‌ ಪ್ಲ್ಯಾನ್‌!

    ಇದೇ 2023ರ ಅಕ್ಟೋಬರ್ 1 ರಿಂದ ಕಚೇರಿ ಸ್ಥಳದ ಬಾಡಿಗೆ ಪ್ರಾರಂಭವಾಗುತ್ತದೆ. ಈ ಲೀಸ್ ಒಪ್ಪಂದ 36 ತಿಂಗಳ ಲಾಕ್​ ಇನ್​ ಅವಧಿ ಹೊಂದಿದ್ದು, ಪ್ರತಿ ವರ್ಷ 5% ರಷ್ಟು ಬಾಡಿಗೆ ಹೆಚ್ಚಳ ಮಾಡುವ ಷರತ್ತಿಗೆ ಎರಡು ಕಂಪನಿಗಳು ಒಳಪಟ್ಟಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2025ರೊಳಗೆ ದೇಶದ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್‌ ಇಂಜಿನ್ – ರೈಲ್ವೆ ಇಲಾಖೆ

    2025ರೊಳಗೆ ದೇಶದ ಎಲ್ಲ ರೈಲುಗಳಿಗೂ ಎಲೆಕ್ಟ್ರಿಕ್‌ ಇಂಜಿನ್ – ರೈಲ್ವೆ ಇಲಾಖೆ

    ನವದೆಹಲಿ: 2025ರ ಒಳಗೆ ಎಲ್ಲ ಡೀಸೆಲ್ ಹಾಗೂ ಬಯೋ ಇಂಧನ ರೈಲು ಇಂಜಿನ್‌ಗಳನ್ನು (Railway Engine) ಹಿಂಪಡೆದು ಸಂಪೂರ್ಣ ಎಲೆಕ್ಟ್ರಿಕ್‌ ಇಂಜಿನ್‌ಗಳನ್ನು (Electric Engine) ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

    ವಿದ್ಯುತ್ ಚಾಲಿತ ವಾಹನಗಳ (Electric Vehicles) ಮೇಲೆ ಈ ನೀತಿಯನ್ನು ಕಳೆದ ವಾರ ಜಾರಿಗೆ ತರಲಾಗಿದೆ. ಇದರೊಂದಿಗೆ ರೈಲ್ವೆಯು ಪ್ರಮುಖ ರೈಲು ನಿಲ್ದಾಣಗಳು (RailwayStations), ಕಚೇರಿ ಕಟ್ಟಡಗಳು, ಪಾರ್ಕಿಂಗ್ ಸ್ಥಳಗಳು ಇತ್ಯಾದಿ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸುವುದಾಗಿ ಹೇಳಿದೆ. ಇದನ್ನೂ ಓದಿ: ಸಿಪಿಐ(ಎಂ) ಮುಖಂಡನ ಮನೆಯಲ್ಲಿ ಬಾಂಬ್ ಪತ್ತೆ – ತಾಜ್ ಉದ್ದೀನ್ ಮಲ್ಲಿಕ್ ಅರೆಸ್ಟ್

    ಸಾಂದರ್ಭಿಕ ಚಿತ್ರ

    2023ರೊಳಗೆ ಭಾರತವನ್ನು ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳ (Electric Vehicles) ದೇಶವಾಗಿ ಮಾಡಬೇಕೆಂಬ ಸರ್ಕಾರದ ಗುರಿಯ ಹಿನ್ನೆಲೆಯಲ್ಲಿ ರೈಲ್ವೆಯ ಈ ನೀತಿಗೆ ಮಹತ್ವ ಬಂದಿದೆ. ಇದನ್ನೂ ಓದಿ: ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಸಿಎಂ ಬೊಮ್ಮಾಯಿ

    ರೈಲ್ವೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್‌ ಇಂಜಿನ್ ಅನುಷ್ಠಾನಕ್ಕೆ ಬರಲು 46 ಸಾವಿರ ಚಾರ್ಜಿಂಗ್ ಸ್ಟೇಷನ್‌ಗಳು ದೇಶಾದ್ಯಂತ ಬೇಕಾಗುತ್ತವೆ. ಸದ್ಯದ ಗುರಿ ಪ್ರಕಾರ 2023 ರೊಳಗೆ ಶೇ.20, 2024ರೊಳಗೆ ಶೇ.60 ಹಾಗೂ 2025ರ ಅಂತ್ಯದೊಳಗೆ ಶೇ.100ರಷ್ಟು ಎಲೆಕ್ಟ್ರಿಕ್‌ ಇಂಜಿನ್ ಅಳವಡಿಸುವ ಗುರಿ ಇಲಾಖೆ ಹಾಕಿಕೊಂಡಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ಭಾರೀ ಅಗ್ನಿ ಅವಘಡ – 90ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ 10 ಕಾರುಗಳು, 1 ಮೋಟಾರ್ ಸೈಕಲ್, 2 ಸ್ಕೂಟಿ, 30 ಹೊಸ ಇ-ರಿಕ್ಷಾ, 50 ಹಳೆಯ ಇ-ರಿಕ್ಷಾಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

    ಜಾಮಿಯಾ ನಗರ ಮೆಟ್ರೋ ನಿಲ್ದಾಣ ಬಳಿ ಇರುವ ಎಲೆಕ್ಟ್ರಿಕ್ ಮೋಟಾರ್ ಪಾರ್ಕಿಂಗ್‌ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ 5 ಗಂಟೆಯ ಸುಮಾರು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, 11 ಅಗ್ನಿ ಶಾಮಕದಳ ವಾಹನಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಪಿಯುಸಿ ತರಗತಿಗಳು ಪ್ರಾರಂಭ- ಹಿಜಬ್ ನಿಷೇಧ

    ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ ದೊಡ್ಡ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಎಲೆಕ್ಟ್ರಿಕ್ ವಾಹನಗಳಾಗಿರುವ ಹಿನ್ನೆಲೆ ಇದು ಶಾರ್ಟ್ ಸಕ್ಯೂರ್ಟ್ ನಿಂದ ಆಗಿರುವ ಸಾಧ್ಯತೆ ಇದೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರೆಪೋ ರೇಟ್ ಏರಿಸಿದ ಆರ್‌ಬಿಐ – ಹೆಚ್ಚಳವಾಗಲಿದೆ ಲೋನ್, ಇಎಂಐಗಳ ಬಡ್ಡಿ ದರ

    ದೆಹಲಿಯಲ್ಲಿ ಕಳೆದ ಕೆಲವು ವಾರಗಳಿಂದ ಹಲವು ಕಡೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇತ್ತೀಚೆಗೆ ಮುಂಡ್ಕಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 27 ಜನರು ಸಾವನ್ನಪ್ಪಿದ್ದರು ಹಾಗೂ ಅನೇಕರು ಗಾಯಗೊಂಡರು. ಮೃತ ದೇಹಗಳ ಗುರುತು ಸಿಗದ ಕಾರಣ ಡಿಎನ್‌ಎ ಪ್ರೊಫೈಲಿಂಗ್ ಮೂಲಕ ಪತ್ತೆ ಮಾಡಲಾಗಿತ್ತು.

  • ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್

    ಭಾರತದಲ್ಲಿ ಟೆಸ್ಲಾ ಕಂಪನಿ ಇಲ್ಲ – ಇಂಡೋನೇಷ್ಯಾದಲ್ಲಿ ಮಸ್ಕ್ ಫೀಲ್ಡ್ ವಿಸಿಟ್

    ಬೀಜಿಂಗ್ / ನವದೆಹಲಿ: ಟ್ವಿಟ್ಟರ್ ಖರೀದಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಎಲಾನ್ ಮಸ್ಕ್ ನೇತೃತ್ವದ ಟೆಸ್ಲಾ ಕಂಪೆನಿಯು ಇದೀಗ ಭಾರತದಲ್ಲಿ ಎಲೆಕ್ಟ್ರಿಕ್‌  ಕಾರುಗಳ ಉತ್ಪಾದನೆ ಕೈಬಿಡುವ ಯೋಚನೆ ಮಾಡಿದೆ.

    ಭಾರತ ಸರ್ಕಾರದಿಂದ ಕಾರುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಲು ನಡೆಸಿದ ಯತ್ನ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಇದೀಗ ಕಾರುಗಳ ಉತ್ಪಾದನೆಗೆ ಇಂಡೋನೇಷ್ಯಾದತ್ತ ಚಿತ್ತ ಹರಿಸಿದ್ದಾರೆ. ಇದನ್ನೂ ಓದಿ: ಬೋಳು ತಲೆ ಅಂತ ಕರೆಯುವುದೂ ಲೈಂಗಿಕ ಕಿರುಕುಳ- ಉದ್ಯೋಗ ನ್ಯಾಯಮಂಡಳಿ ತೀರ್ಪು 

    Elon Musk twitter 1

    ಈಗಾಗಲೇ ಮಸ್ಕ್ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ಅವರನ್ನು ಭೇಟಿಯಾಗಿದ್ದಾರೆ. ಇದು ಉತ್ಪಾದನಾ ಘಟಕಗಳಿಗೆ ಜಾಗದ ಹುಡುಕಾಟ ಎಂದುಕೊಳ್ಳಲಾಗಿದೆ. ಇಂಡೋನೇಷ್ಯಾ ಬ್ಯಾಟರಿಗಳಿಗೆ ಪ್ರಮುಖ ಲೋಹವಾದ ನಿಕಲ್‌ನ ಪ್ರಮುಖ ಉತ್ಪಾದಕ ದೇಶವೂ ಆಗಿದೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ ಟೆಸ್ಲಾ ಇಂಡೋನೇಷ್ಯಾದಲ್ಲಿ ಬೇರೂರಲಿದೆ.

    ಜಾಗತಿಕ ಮಾರುಕಟ್ಟೆಗೆ ಟೆಸ್ಲಾ ಕಾರುಗಳನ್ನು ಉತ್ಪಾದಿಸಲು ಜಾಗ ಹುಡುಕುತ್ತಿರುವ ಮಸ್ಕ್, ಅಲ್ಲಿಯೇ ಹೊಸ ಉತ್ಪಾದನಾ ಘಟಕ ಸ್ಥಾಪಿಸಿ ಅದನ್ನು ಏಷ್ಯಾದ ಹಬ್ ಆಗಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಳ್ಳರಿಗೆ ಅಧಿಕಾರ ನೀಡುವುದಕ್ಕಿಂತ, ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕೋದು ಒಳ್ಳೆಯದು: ಇಮ್ರಾನ್ ಖಾನ್

    TESLA

    ಸಿಲಿಕಾನ್ ಸಿಟಿಗೆ ಕೈತಪ್ಪಿದ ಅವಕಾಶ:
    ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಟೆಸ್ಲಾ ಬೆಂಗಳೂರಿನಲ್ಲಿ ಕಂಪನಿಯನ್ನು ನೊಂದಾಯಿಸಿ, ಮಳಿಗೆ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿತ್ತು. ಒಂದಿಷ್ಟು ಅಧಿಕಾರಿಗಳನ್ನೂ ನೇಮಿಸಿದ್ದ ಕಂಪನಿ, ಆಮದು ಸುಂಕ ಕಡಿತಕ್ಕಾಗಿ ಸರ್ಕಾರದ ಮೇಲೆ ಪದೇ-ಪದೇ ಒತ್ತಡ ಹೇರುತ್ತಲೇ ಇತ್ತು. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಶೋರೂಮ್ ಮತ್ತು ಸೇವಾ ಕೇಂದ್ರಗಳನ್ನು ತೆರೆಯಲು ರಿಯಲ್ ಎಸ್ಟೇಟ್ ಆಯ್ಕೆಗಳಿಗಾಗಿ ಟೆಸ್ಲಾ ಹಲವು ತಿಂಗಳ ಕಾಲ ಹುಡುಕಾಟ ನಡೆಸಿತ್ತು.

    ಅಮೆರಿಕ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಆಮದು ಮಾಡಿಕೊಂಡ ಎಲೆಕ್ಟ್ರಿಕ್‌ ವಾಹನಗಳನ್ನು (ಇವಿಗಳು) ಕಡಿಮೆ ಸುಂಕದಲ್ಲಿ ದೇಶದಲ್ಲಿ ಮಾರಾಟ ಮಾಡುವ ಮೂಲಕ ಬೇಡಿಕೆಯ ವ್ಯಾಪ್ತಿ-ವಿಸ್ತಾರವನ್ನು ಪರೀಕ್ಷಿಸಲು ಯತ್ನಿಸಿತ್ತು. ಇದಕ್ಕಾಗಿ ಆಮದು ಸುಂಕ ಕಡಿತ ಮಾಡುವಂತೆ ಸರ್ಕಾರದ ಜೊತೆ ಸತತ 1 ವರ್ಷಗಳ ಕಾಲ ಮಾತುಕತೆಯನ್ನೂ ನಡೆಸಿತ್ತು. ಆದರೆ, ಮೇಕ್ ಇನ್ ಇಂಡಿಯಾ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಾರತ ಸರ್ಕಾರ ಶೇ.100 ರಷ್ಟು ಸುಂಕ ಕಡಿಮೆ ಮಾಡುವ ಬದಲು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವಂತೆ ಕಂಪೆನಿ ಮೇಲೆ ಒತ್ತಡ ಹೇರಿತ್ತು. ಈ ಕಾರಣಗಳಿಂದಾಗಿ ಟೆಸ್ಲಾ ಭಾರತದಿಂದಲೇ ದೂರ ಉಳಿಯಲು ನಿರ್ಧರಿಸಿದೆ.

    ಇದೀಗ ಮಳಿಗೆಗೆ ಸ್ಥಳ ಹುಟುಕಾಟವನ್ನು ನಿಲ್ಲಿಸಿದ್ದು, ಭಾರತದಲ್ಲಿದ್ದ ಆ ತಂಡದ ಒಂದಿಷ್ಟು ಅಧಿಕಾರಿಗಳೂ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

  • ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಿತಿನ್ ಗಡ್ಕರಿ

    ಎಲೆಕ್ಟ್ರಿಕ್ ವಾಹನಗಳ ಕಂಪನಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ನಿತಿನ್ ಗಡ್ಕರಿ

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವ ನಿತಿನ ಗಡ್ಕರಿ ಅವರು, ಸುರಕ್ಷತಾ ಮಾನದಂಡಗಳನ್ನು ಅಳವಡಿಕೊಳ್ಳುವಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರು ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು, ಕಳೆದ ಎರಡು ತಿಂಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಹಲವಾರು ಅವಘಡಗಳು ಬೆಳಕಿಗೆ ಬಂದಿವೆ. ಈ ಘಟನೆಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಮನವಮಿಯಂದು ಖಾರ್ಗೋನ್‌ನಲ್ಲಿ ಹಿಂಸಾಚಾರ – ಐವರ ಬಂಧನ

    ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಪರಿಹಾರ ಕ್ರಮಗಳ ಕುರಿತು ಶಿಫಾರಸುಗಳನ್ನು ಮಾಡಲು ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ವರದಿಗಳ ಆಧಾರದ ಮೇಲೆ, ನಾವು ಎಲೆಕ್ಟ್ರಿಕ್ ವಾಹನಗಳ ಕಂಪನಿಗಳ ಮೇಲೆ ಅಗತ್ಯ ಆದೇಶಗಳನ್ನು ನೀಡುತ್ತೇವೆ ಎಂದು ಹೇಳಿದರು.

    ನಾವು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟ-ಕೇಂದ್ರಿತ ಮಾರ್ಗಸೂಚಿಗಳನ್ನು ನೀಡುತ್ತೇವೆ. ಯಾವುದೇ ಕಂಪನಿಯು ತನ್ನ ಪ್ರಕ್ರಿಯೆಗಳಲ್ಲಿ ನಿರ್ಲಕ್ಷ್ಯ ತೋರಿದರೆ, ಭಾರೀ ದಂಡವನ್ನು ವಿಧಿಸಲಾಗುವುದು ಮತ್ತು ಎಲ್ಲಾ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದರ ಮಧ್ಯೆ ಎಲ್ಲಾ ದೋಷಯುಕ್ತ ವಾಹನಗಳನ್ನು ತಕ್ಷಣವೇ ಹಿಂಪಡೆಯಲು ಕಂಪನಿಗಳು ಮುಂಗಡ ಕ್ರಮವನ್ನು ತೆಗೆದುಕೊಳ್ಳಬಹುದು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಜೆಸಿಬಿ ಕಾರ್ಖಾನೆ ಓಪನ್‌ – ಬ್ರಿಟನ್‌ ಪ್ರಧಾನಿ ಚಾಲನ

    ಕಳೆದ ತಿಂಗಳು ಪುಣೆಯಲ್ಲಿ ರೈಡ್-ಹೇಲಿಂಗ್ ಆಪರೇಟರ್ ಓಲಾ ಅವರ ಎಲೆಕ್ಟ್ರಿಕ್ ಮೊಬಿಲಿಟಿ ಆರ್ಮ್ ಬಿಡುಗಡೆ ಮಾಡಿದ ಇ-ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಸರ್ಕಾರ ತನಿಖೆಗೆ ಆದೇಶಿಸಿತ್ತು.

    ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಘಟನೆಗೆ ಕಾರಣವಾದ ಸಂದರ್ಭಗಳನ್ನು ತನಿಖೆ ಮಾಡಲು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಲು ಬೆಂಕಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರವನ್ನು ಕೇಳಲಾಗಿದೆ.

  • ಎನ್‍ಡಿಎಮ್‍ಸಿ ಅಧಿಕೃತ ಬಳಕೆಗೆ ಇ-ವಾಹನ ಖರೀದಿ

    ನವದೆಹಲಿ: ನವದೆಹಲಿ ಮುನ್ಸಿಪಲ್ ಕೌನ್ಸಿಲ್(ಎನ್‍ಡಿಎಮ್‍ಸಿ) ಅಧಿಕೃತ ಬಳಕೆಗೆ ಎಲೆಕ್ಟ್ರಿಕ್ ವಾಹನ ಖರೀದಿಸುವುದಾಗಿ ಘೋಷಿಸಿದೆ.

    ಪೆಟ್ರೋಲ್ ಹಾಗೂ ಸಿಎನ್‍ಜಿ ವಾಹನಗಳನ್ನು ಖರೀದಿಸುವುದು ಹಾಗೂ ಬಾಡಿಗೆ ಪಡೆಯುವುದನ್ನು ನಿಲ್ಲಿಸಲು ಕೌನ್ಸಿಲ್ ನಿರ್ಧರಿಸಿದೆ. ಈ ಮೂಲಕ ಪರಿಸರ ಸ್ನೇಹಿ ನಿಯಮಗಳನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದೆ.

    ಎನ್‍ಡಿಎಮ್‍ಸಿ ಪ್ರದೇಶಗಳಲ್ಲಿ ದೆಹಲಿಯಲ್ಲಿಯೇ ಅತೀ ಹೆಚ್ಚಿನ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿವೆ. ನವದೆಹಲಿ ಪ್ರದೇಶದಲ್ಲಿ 60 ಚಾರ್ಜಿಂಗ್ ಸ್ಟೇಷನ್‍ಗಳಿವೆ. ಅವುಗಳಲ್ಲಿ 30-35 ಸ್ಟೇಷನ್‍ಗಳು ಎನ್‍ಡಿಎಂಸಿ ಕಟ್ಟಡಗಳಲ್ಲಿ ಇವೆ. ಎನ್‍ಡಿಎಮ್‍ಸಿ 80 ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ ಹಾಗೂ ಇಲಾಖೆಯ ಮುಖ್ಯಸ್ಥರಿಗೆ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಹಂಚಲಾಗಿದೆ. ಇದನ್ನೂ ಓದಿ: ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ

    ನಾವು ಸಂಪೂರ್ಣ ಹಸಿರು ಬಳಕೆಗೆ ಬದಲಾಗಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ. ಇದೀಗ ಅಧಿಕೃತ ಬಳಕೆಗೂ ಖರೀದಿಸಲಾಗುತ್ತಿರುವ ವಾಹನಗಳು ಇ-ವಾಹನಗಳೇ ಆಗಿರಲಿವೆ ಎಂದು ಎನ್‍ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿದೆ: ಸ್ಮೃತಿ ಇರಾನಿ

    ಮುನ್ಸಿಪಲ್ ಕೌನ್ಸಿಲ್ 300 ಇ-ಸ್ಕೂಟರ್‍ಗಳನ್ನು ಖರೀದಿಸುವುದಾಗಿ ಘೋಷಿಸಿದೆ. ಇವು ದೆಹಲಿಯ ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಹೆಚ್ಚಿನ ಜನಸಂದಣಿ ಇರುವ ಸಾರ್ವಜನಿಕ ಪ್ರದೇಶಗಳಲ್ಲಿ ಬಾಡಿಗೆಗೆ ಲಭ್ಯವಾಗಲಿದೆ.

  • ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

    ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಭಾರತದಲ್ಲಿ ಉತ್ತರಪ್ರದೇಶ, ದೆಹಲಿ ಹಾಗೂ ಕರ್ನಾಟಕ ಮೊದಲ ಮೂರು ರಾಜ್ಯಗಳಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಒಟ್ಟು 8,70,141 ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

    ಉತ್ತರ ಪ್ರದೇಶ(255,700) ಅತಿ ಹೆಚ್ಚು ನೋಂದಾಯಿತ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ನಂತರದ ಸ್ಥಾನವನ್ನು ದೆಹಲಿ (125,347) ಮತ್ತು ಕರ್ನಾಟಕ (72,544) ಪಡೆದುಕೊಂಡಿದೆ. ಇನ್ನುಳಿದಂತೆ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಬಿಹಾರ(58,014) ಮತ್ತು ಮಹಾರಾಷ್ಟ್ರ(52,506) ಗಳಿಸಿಕೊಂಡಿದೆ.

    ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿ, ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜರ್‌ಗಳು ಹಾಗೂ ಚಾರ್ಜಿಂಗ್ ಸ್ಟೇಷನ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.18 ರಿಂದ ಶೇ 5ಕ್ಕೆ ಇಳಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲ ಬಿಪಿನ್ ಅವರಿಗಿತ್ತು: ಬೊಮ್ಮಾಯಿ

    ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಉತ್ತೇಜಿಸಲು ಕೈಗಾರಿಕೆಗಳ ಸಚಿವಾಲಯವು 2015ರಲ್ಲಿ ಫಾಸ್ಟರ್ ಅಡಾಪ್ಶನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟ್ರಿಕ್ ವೆಹಿಕಲ್ಸ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್