Tag: Electric Bus

  • 1 ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್  ಬಸ್‍ಗಳ ಸಂಚಾರ: KSRTC ಅಧ್ಯಕ್ಷ ಎಂ.ಚಂದ್ರಪ್ಪ

    1 ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಸಂಚಾರ: KSRTC ಅಧ್ಯಕ್ಷ ಎಂ.ಚಂದ್ರಪ್ಪ

    ಮಂಗಳೂರು: ಒಂದು ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳು(Electric Buses) ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ(M. Chandrappa) ಅವರು ಹೇಳಿದರು.

    ಅವರು ನಗರದ ಕೆಎಸ್ಆರ್‌ಟಿಸಿ(KSRTC) ಬಸ್ ನಿಲ್ದಾಣದ ಆವರಣದಲ್ಲಿರುವ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಂದಿನ ತಿಂಗಳೊಳಗೆ ಮೊದಲ ಹಂತದಲ್ಲಿ 50 ಎಲೆಕ್ಟ್ರಿಕ್‌ ಬಸ್‍ಗಳ ಸಂಚಾರ ಆರಂಭಿಸಲಾಗುವುದು. ಸದ್ಯ ತೈಲೋತ್ಪನ್ನ, ಟೈರ್ ಹಾಗೂ ಬಸ್ ಬಿಡಿ ಭಾಗಗಳ ಮೊತ್ತ ಹೆಚ್ಚಿದ್ದರೂ ಕೂಡ ಪ್ರಯಾಣಿಕರ ಹಿತ ದೃಷ್ಟಿಯಿಂದ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಿಲ್ಲ. ಅರವತ್ತು ವರ್ಷಗಳ ಇತಿಹಾಸದಲ್ಲೇ ಇದೀಗ ತಿಂಗಳ ಮೊದಲ ದಿನವೇ ರಾಜ್ಯದ ಎಲ್ಲ ಕೆಎಸ್ಆರ್‌ಟಿಸಿ ಉದ್ಯೋಗಿಗಳಿಗೆ ವೇತನ ನೀಡಲಾಗುತ್ತಿದೆ ಮತ್ತು 6ನೇ ವೇತನ ಆಯೋಗದ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಕೋವಿಡ್ ಹಾಗೂ ಇತರೆ ಕಾರಣಗಳಿಂದ ಈ ಹಿಂದೆ ಸರ್ಕಾರಿ ಬಸ್‍ಗಳಿಂದ ದಿನವೊಂದಕ್ಕೆ 6 ರಿಂದ 7ಕೋಟಿಗಳಷ್ಟು ಆದಾಯ ಬರುತ್ತಿತ್ತು. ಆದರೆ ಸದ್ಯ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ಕಾರಣ ದಿನವೊಂದಕ್ಕೆ ಕನಿಷ್ಟ 12 ಕೋಟಿಯಷ್ಟು ವರಮಾನ ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    450 ನೂತನ ಬಸ್ ಖರೀದಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಅವುಗಳಲ್ಲಿ ಅತ್ಯುತ್ತಮ ಸೌಲಭ್ಯವಿರುವ 50 ವೋಲ್ವೋ ಹಾಗೂ ಎಲೆಕ್ಟ್ರಿಕಲ್ ಬಸ್‍ಗಳಿರಲಿವೆ. ಒಂದು ತಿಂಗಳಿನೊಳಗೆ ರಾಜ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ಬಸ್‍ಗಳು ಓಡಾಡಲಿವೆ. ಮಂಗಳೂರು ವಿಭಾಗದಲ್ಲಿ ಸದ್ಯ 490 ಬಸ್‍ಗಳು ಪ್ರತಿದಿನ ಸಂಚರಿಸುತ್ತಿದ್ದು, ದಿನನಿತ್ಯ 1 ಕೋಟಿಯಷ್ಟು ವರಮಾನವಿದೆ. ಆದರೆ ಪುತ್ತೂರು ವಿಭಾಗದಲ್ಲಿ ವರಮಾನ ಕಡಿಮೆಯಿದ್ದರೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿರುವ ಕಾರಣ ಬಸ್‍ಗಳನ್ನು ಕಡಿತಗೊಳಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ 80 ಸ್ಥಾನ ಗಳಿಸಿದ್ರೆ ನನ್ನ ಬೆರಳು ಕತ್ತರಿಸಿ ಕೊಡುತ್ತೇನೆ: ಶಿವನಗೌಡ ನಾಯಕ

    ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಕೂಲಿ ಉಳಿತಾಯಕ್ಕಾಗಿ ಉಚಿತ ಪಾಸ್ ವಿತರಿಸಲು ಚಿಂತಿಸಲಾಗಿದೆ. ಸದ್ಯ 1 ಲಕ್ಷ ಉಚಿತ ಪಾಸ್ ವಿತರಿಸಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದು ಇನ್ನುಳಿದಂತೆ ರಾಜ್ಯದಲ್ಲಿರುವ ಒಟ್ಟು 37 ಲಕ್ಷ ಕಟ್ಟಡ ಕಾರ್ಮಿಕರಿಗೆ ಹಂತ ಹಂತವಾಗಿ ಪಾಸ್ ವಿತರಿಸಲಾಗುವುದು. ಒಟ್ಟಾರೆ ನೂತನವಾಗಿ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳಿಂದಾಗಿ ಸಧ್ಯ ಅನವಶ್ಯಕ ಖರ್ಚುವೆಚ್ಚಗಳು ಕಡಿಮೆಯಾಗಿದೆ ಎಂದರು.

    ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಪುತ್ತೂರು ವಿಭಾಗಿಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಗೋಷ್ಠಿಯಲ್ಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಬಸ್‍ಗಳದ್ದೇ ಹವಾ- ಖಾಸಗೀಕರಣದ ಆತಂಕದಲ್ಲಿ ನೌಕರರು

    ಬೆಂಗಳೂರಿನಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಬಸ್‍ಗಳದ್ದೇ ಹವಾ- ಖಾಸಗೀಕರಣದ ಆತಂಕದಲ್ಲಿ ನೌಕರರು

    ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ನಾಡಿ ಮಿಡತವಾಗಿರೋ ಬಿಎಂಟಿಸಿ (BMTC) ಈಗ ಪರಿಸರ ಸ್ನೇಹಿಯಾಗ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಜನರ ಸೇವೆ ಮಾಡುತ್ತಿದೆ. ಈ ವರ್ಷದಾಂತ್ಯಕ್ಕೆ ಇನ್ನೂ 1000 ಸಾವಿರ ಇವಿ ಬಸ್ (EV Bus) ಗಳನ್ನ ರಸ್ತೆಗಳಿಸೋ ಪ್ಲಾನ್ ಮಾಡಿಕೊಂಡಿದೆ. ಅದರೇ ಪರಿಸರ ಸ್ನೇಹಿ ಬಸ್ ಸೇವೆಗೆ ಬಿಎಂಟಿಸಿ ಕಾರ್ಮಿಕರು ಮಾತ್ರ ಆತಂಕಗೊಂಡಿದ್ದಾರೆ..ಇದು ಸರ್ಕಾರದ ಹುನ್ನಾರ ಅಂತಾ ಶಾಪಿಸುತ್ತಿದ್ದಾರೆ.

    ಹೌದು. ಸಿಲಿಕಾನ್ ಸಿಟಿ ಜನರ ಜೀವನಾಡಿ ನಮ್ಮ ಬಿಎಂಟಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗಳ ಕಡೆ ಮುಖ ಮಾಡಿದೆ. ಈಗಾಗಲೇ ಬಿಎಂಟಿಸಿಯಲ್ಲಿ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳು ಸಾರ್ವಜನಿಕರ ಸೇವೆ ಮಾಡುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಹೊಸದಾಗಿ 921 ಇವಿ ಬಸ್‍ಗಳನ್ನ ರಸ್ತೆಗೆ ಇಳಿಸುವ ಯೋಜನೆಯನ್ನ ಬಿಎಂಟಿಸಿ ಹೊಂದಿದೆ.

    ಈ ಪರಿಸರ ಸ್ನೇಹಿ ಇವಿ ಬಸ್‍ಗಳಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗ್ತಿಲ್ಲ. ಆದರೆ ಇದರಿಂದ ನೌಕರರಿಗೆ ಆತಂಕ ಶುರುವಾಗಿದೆ. ಹೊಸ ಬಸ್ಗಳು ಬರ್ತಿವೆ. ಹಳೆಯ ಡಿಸೇಲ್ ಬಸ್‍ಗಳ ಗತಿಯೇನು ಅನ್ನೋ ಪ್ರಶ್ನೆ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 85 ಲಕ್ಷ ರೂಪಾಯಿ ಅನುದಾನವಾಗಿ ನೀಡಿ ಖಾಸಗೀಕರಣ ಮಾಡ್ತಿದ್ದಾರೆ. ಇವಿ ಬಸ್‍ನಿಂದ ನಿಗಮದ ನೌಕರರು ಬೀದಿ ಪಾಲ್ತಾರೆ ಅನ್ನೋ ಭಯ ಶುರುವಾಗಿದೆ. ಇದನ್ನೂ ಓದಿ: ಸಾರಿಗೆ ಇಲಾಖೆಯಿಂದ ಡೆಡ್‍ಲೈನ್- ಓಲಾ, ಉಬರ್ ಕಳ್ಳಾಟಕ್ಕೆ ಬೀಳುತ್ತಾ ಬ್ರೇಕ್?

    ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಎಂಟಿಸಿಯನ್ನ ಖಾಸಗೀಕರಣ ಮಾಡಲು ಮುಂದಾಗಿದೆ. ಮುಂದೆ ನೌಕರರು ಬೀದಿಪಾಲಾಗ್ತಾರೆ. ಪರಿಸರ ಸ್ನೇಹಿ ಬಸ್‍ಗೆ ನಮ್ಮ ವಿರೋಧವಿಲ್ಲ, ಪರಿಸರ ಸ್ನೇಹಿ ಇವಿ ಬಸ್‍ಗೆ ನಮ್ಮ ನಿಗಮದ ಸಿಬ್ಬಂದಿಯನ್ನ ಬಳಸಿಕೊಳ್ಳೋ ಕೆಲಸವಾಗಬೇಕು. ಇಲ್ಲವಾದಲ್ಲಿ ಬಿಎಂಟಿಸಿ ಕಾರ್ಮಿಕರ ಬದುಕು ಅತಂತ್ರವಾಗಲಿದೆ ಅಂತಾ ಬಿಎಂಟಿಸಿ ಕಾರ್ಮಿಕರ ಮುಖಂಡ ಆತಂಕ ವ್ಯಕ್ತಪಡಿಸಿದ್ದಾರೆ.

    ಇವಿ ಬಸ್ ಸೇವೆಗೆ ಯಾರ ವಿರೋಧವೂ ಇಲ್ಲ, ಆದರೆ ಖಾಸಗೀಕರಣದ ಮೂಲಕ ಬಿಎಂಟಿಸಿಯನ್ನ ಮುಗಿಗಿಸೋ ಕೆಲಸ ನಡೆಯುತ್ತಿದೆ. ಅದರಿಂದ ಸಿಬ್ಬಂದಿಗೆ ಆತಂಕ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

    2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ: ಶ್ರೀರಾಮುಲು ಘೋಷಣೆ

    ಬೆಂಗಳೂರು: 2030ರೊಳಗೆ ರಾಜ್ಯದ ಎಲ್ಲ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್ (Electric Bus) ಮಾಡುವ ಗುರಿ ಇದೆ ಎಂದು ಸಚಿವ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

    ಇಂದಿನ ವಿಧಾನಸಭಾ ಕಲಾಪದಲ್ಲಿ ಈಕೋ ಸಿಸ್ಟಮ್ ತರಲು ಸಮಿತಿ ಮಾಡಲಾಗಿತ್ತು. ಎಲೆಕ್ಟ್ರಿಕ್ ಬಸ್ ಬಳಕೆ ಕಡಿಮೆಯಾಗ್ತಿದೆ ಅಂತಾ ಶಾಸಕ ತನ್ವೀರ್ ಸೇಠ್ (Tanveer Sait) ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಾಮುಲು (Sri Ramulu), ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ (Smart City) ಅಡಿ 90ಎಲೆಕ್ಟ್ರಿಕ್ ಬಸ್ ಕಾಂಟ್ರಾಕ್ಟ್ ಗೆ ಪಡೆಯಲಾಗಿದೆ. ಇದು 12ವರ್ಷ ಕಾಂಟ್ರಾಕ್ಟ್ ಇರಲಿದೆ. ನಮ್ಮಿಂದ ಕೇವಲ ಕಂಡಕ್ಟರ್ ಮಾತ್ರ ಇರುತ್ತಾರೆ ಎಂದರು.

    ಡ್ರೈವರ್, ಬಸ್ ಮೇಂಟೆನೆನ್ಸ್ ಎಲ್ಲವೂ ಅವರದ್ದಾಗಿದೆ. ಕೇಂದ್ರ ಸರ್ಕಾರದ ಫಿನ್-2 ಮೂಲಕ 300 ಬಸ್ ಖರೀದಿ ಮಾಡಿದ್ದೇವೆ. ಇದರಲ್ಲಿ 75 ಬಸ್ ಮಾತ್ರ ಬಂದಿವೆ. ಉಳಿದ ಬಸ್ ಬಂದ ಬಳಿಕ ಅವನ್ನೂ ಬಳಕೆ ಮಾಡಿಕೊಳ್ಳುತ್ತೇವೆ. ಅದೇ ರೀತಿ 921 ಎಲೆಕ್ಟ್ರಿಕ್ ಬಸ್ ಸಿಇಎಸ್‍ಎಲ್ (CESL) ಮೂಲಕ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ: ಸಿದ್ದು ಸಿಡಿಮಿಡಿ

    ಎಲೆಕ್ಟ್ರಿಕ್ ಬಸ್ ಸಂಚಾರವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕೆಲಸ ಆಗಲಿದೆ. ಡೀಸಲ್ ಬೆಲೆ ಹೆಚ್ಚಳವಾಗಿದ್ರಿಂದ ನಮಗೆ ನಷ್ಟವಾಗಿದೆ, ಎಲೆಕ್ಟ್ರಿಕ್ ಬಸ್ ಗಳಿಂದ ಮುಂದೆ ಲಾಭದಾಯಕ ಆಗಬಹುದು ಎಂದು ಶ್ರೀರಾಮುಲು ಅಭಿಪ್ರಾಯ ವ್ಯಕ್ತಪಡಿಸಿದರು.

    Live Tv
    [brid partner=56869869 player=32851 video=960834 autoplay=true]

  • BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    ಬೆಂಗಳೂರು: ಬಿಎಂಟಿಸಿ ಸಂಸ್ಥೆಗೆ ನಷ್ಟದ ಮೇಲೆ ನಷ್ಟವಾಗುತ್ತಿದೆ. ಇದಕ್ಕೆ ಈಗ ವೋಲ್ವೋ ಬಸ್ಸುಗಳು ಸೇರ್ಪಡೆಯಾಗುತ್ತಿವೆ. ಪ್ರಯಾಣಿಕರ ಕೊರತೆಯಿಂದ ನಷ್ಟದ ಹಾದಿಯಲ್ಲಿದ್ದ ವೋಲ್ವೋ ಈಗ ಐಟಿ-ಬಿಟಿ ಕಂಪನಿಗಳಿಗೂ ಬೇಡವಾಗಿದೆ. ಉತ್ತರ ಕರ್ನಾಟಕಕ್ಕಾದ್ರೂ ಬಸ್ಸುಗಳ ಶಿಫ್ಟ್ ಮಾಡೋ ಸಾರಿಗೆ ಸಚಿವರ ಯೋಚನೆಗೂ ಬ್ರೇಕ್ ಬಿದ್ದಿದೆ.

    ಕಳೆದ ಎರಡೂವರೆ ವರ್ಷದಿಂದ ನಿಂತಲ್ಲೇ ನಿಂತ ವೋಲ್ವೋ ಬಸ್ಸುಗಳಲ್ಲಿ 850 ಬಸ್ಸುಗಳ ಪೈಕಿ ಕೇವಲ 200 ಬಸ್ ಮಾತ್ರ ನಿತ್ಯ ಸಂಚಾರ ಮಾಡುತ್ತಿವೆ. ಉಳಿದವು ಡಿಪೋನಲ್ಲೇ ಧೂಳು ಹಿಡಿಯುತ್ತಿವೆ. ಈಗ ವೋಲ್ವೋ 650 ಬಸ್ಸುಗಳು ಸಾರಿಗೆ ಸಚಿವರಿಗೇ ಸವಾಲಾಗಿವೆ. ಈ ವೋಲ್ವೋ ಬಸ್‌ಗಳನ್ನ ಉತ್ತರ ಕರ್ನಾಟಕ್ಕೆ ಹಸ್ತಾಂತರಿಸೋ ಯೋಜನೆಯೂ ಸಾರಿಗೆ ಇಲಾಖೆಗೆ ಇತ್ತು. ಆದರೆ ಈಗ ಅದೂ ಸಹ ವಿಫಲವಾಗಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಏಕೆಂದರೆ ರೋಡ್ ಕ್ಲಿಯರೆನ್ಸ್ ಕಡಿಮೆ ಇರೋ ಕಾರಣ ಉತ್ತರ ಕರ್ನಾಟಕಕ್ಕೆ ಈ ಬಸ್ಸುಗಳು ಹೊಂದಿಕೆಯಾಗ್ತಿಲ್ಲ. ಇತ್ತ ಬೆಂಗಳೂರಿನಲ್ಲೂ ಈ ಬಸ್ಸುಗಳ ಸಂಚಾರ ಸಾಧ್ಯವಾಗ್ತಿಲ್ಲ. ವೋಲ್ವೋ ಬಸ್ಸುಗಳು ಇದ್ದೂ ಇಲ್ಲದಂತಾಗಿವೆ. ವೋಲ್ವೋಗೆ ಜನರ ಡಿಮ್ಯಾಂಡ್ ತುಂಬಾ ಕಡಿಮೆಯಾಗಿದೆ. ಏರ್‌ಪೋರ್ಟ್ ರಸ್ತೆಯನ್ನ ಹೊರತುಪಡಿಸಿದ್ರೇ ಉಳಿದ ಕಡೆ ವೋಲ್ವೋ ನೋಡುವುದೇ ಅಪರೂಪವಾಗಿದೆ. ಹೀಗಾಗಿ ಶೀಘ್ರದಲ್ಲಿ ಎಲ್ಲಾ 650 ವೋಲ್ವೋಗಳು ಗುಜರಿ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

    ಇತ್ತ 2ನೇ ಹಂತದಲ್ಲಿ ರಸ್ತೆಗಿಳಿಯುತ್ತಿರೋ 300 ಎಲೆಕ್ಟ್ರಿಕ್‌ ಬಸ್‌ಗಳು ಸಹ ವೋಲ್ವೋ ಬಸ್ಸುಗಳನ್ನ ಮೂಲೆಗುಂಪು ಮಾಡೋದು ಗ್ಯಾರೆಂಟಿ ಎನ್ನುವಂತಾಗಿದೆ. ಈ ಹಿಂದೆ ಐಟಿಬಿಟಿ ಕಂಪನಿಗಳಿಂದ ಬೇಡಿಕೆ ಬಂದ್ರೆ ಸಾರಿಗೆ ಇಲಾಖೆಯಿಂದ ವೋಲ್ವೋ ಬಸ್ ನೀಡಲಾಗ್ತಿತ್ತು. ಆದರೆ ಕೊರೊನಾ ನಂತರ ಬಸ್ಸುಗಳನ್ನ ಕೇಳುವವರೇ ಇಲ್ಲದಂತಾಗಿತ್ತು. ಈಗ ಐಟಿಬಿಟಿ ಕಂಪನಿಗಳು ವೋಲ್ವೋ ಬಸ್ ಬೇಡ ಎಲೆಕ್ಟ್ರಿಕ್‌ ಬಸ್ ಬೇಕು ಎನ್ನುತ್ತಿವೆ. ಈ ಹಿನ್ನಲೆ ಸದ್ಯ ಡಿಪೋದಲ್ಲಿ ನಿಂತಿರೋ 650 ವೋಲ್ವೋ ಬಸ್ಸುಗಳು ಸ್ಕ್ರಾಪ್‌ ಆಗೋ ಸಾಧ್ಯತೆ ಹೆಚ್ಚಾಗುತ್ತಿದೆ.

    ಒಂದು ಕಡೆ ಸಚಿವರ ಉತ್ತರ ಕರ್ನಾಟಕ ವೋಲ್ವೋ ಬಸ್ ಶಿಫ್ಟ್ ಪ್ಲ್ಯಾನ್‌ ಆಗಿದೆ. ಹೀಗಾಗಿ ಸಾರಿಗೆ ಇಲಾಖೆಗೆ ತಲೆ ನೋವಾದ ಬಿಎಂಟಿಸಿಯ ನೂರಾರು ವೋಲ್ವೋ ಬಸ್ಸುಗಳು. ರೋಡಿಗಿಳಿಸಿದ್ರೆ ಪ್ರಯಾಣಿಕರು ಬರ್ತಿಲ್ಲ, ನಿಲ್ಲಿಸಿದ್ರೆ ಕೋಟ್ಯಾಂತರ ರೂಪಾಯಿ ವೆಚ್ಚ. ಬಳಕೆಯಾಗದೇ ಸ್ಕ್ರಾಪ್‌ ಆಗಿಬಿಡುತ್ತಾ ಎನ್ನುವ ಚಿಂತೆ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಿಯಂತ್ರಣ ತಪ್ಪಿದ ಎಲೆಕ್ಟ್ರಿಕಲ್ ಬಸ್-6 ಮಂದಿ ಸಾವು, 12 ಜನರಿಗೆ ಗಾಯ

    ನಿಯಂತ್ರಣ ತಪ್ಪಿದ ಎಲೆಕ್ಟ್ರಿಕಲ್ ಬಸ್-6 ಮಂದಿ ಸಾವು, 12 ಜನರಿಗೆ ಗಾಯ

    ಲಕ್ನೋ: ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಜನರ ಮೇಲೆ ಹರಿದಿದೆ. ಈ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರಲ್ಲಿ ನಡೆದಿದೆ.

    ವೇಗವಾಗಿ ಬಂದ ಬಸ್ ನಿಯಂತ್ರಣ ತಪ್ಪಿದೆ ಈ ವೇಳೆ ಮೂರು ಕಾರ್, ಹಲವು ಬೈಕ್ ಈ ಅಪಘಾತದಲ್ಲಿ ಜಖಂ ಆಗಿವೆ. ಇಷ್ಟೊಂದು ವೆಹಿಕಲ್‍ಗೆ ಗುದ್ದಿದ್ದು ಮಾತ್ರವಲ್ಲದೇ ಅಲ್ಲೆ ಪಕ್ಕದಲ್ಲಿ ಟ್ರಾಫಿಕ್ ಭೂತ್‍ಗೆ ನುಗ್ಗಿದೆ. ನಂತರ ಟ್ರಕ್‍ಗೆ ಗುದ್ದಿ ಬಸ್ ನಿಂತಿದೆ. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಅಲ್ಲಿಯೇ ಹತ್ತಿರದ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಸ್ ಚಾಲಕನನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾನ್ಪುರದ ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:  ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಡಿಕೆಶಿಯನ್ನು ಭೇಟಿಯಾದ ಆನಂದ್ ಸಿಂಗ್

    ಕಾನ್ಪುರದ ಬಾಬುಪುರ್ವಾ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಇದರಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಇದರೊಂದಿಗೆ ಈ ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರಿಗೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಕಾನ್ಪುರದ ರಸ್ತೆ ಅಪಘಾತದ ದುರದೃಷ್ಟಕರ ಸುದ್ದಿ ಬಂದಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ. ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

  • Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

    Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

    ಬೆಂಗಳೂರು: ಕರ್ನಾಟಕ ಸಾರಿಗೆ ಸಂಸ್ಥೆಗೆ ಖರೀದಿ ಮಾಡಲು ಇಚ್ಛಿಸಿರುವ ಎಲೆಕ್ಟ್ರಿಟ್ ಬಸ್ ಸಂಸ್ಥೆಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂಬ ವರದಿಯ ಬಳಿಕವೂ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಬಸ್ಸುಗಳ ಖರೀದಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಹಾಗೂ ಎಂಡಿ ನಡುವೆ ಬಿಗ್ ಫೈಟ್‍ಗೆ ಕಾರಣವಾಗಿದೆ.

    ಸಾರಿಗೆ ಇಲಾಖೆ ಎಂಡಿ ಪೊನ್ನುರಾಜ್ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟದ ಕುರಿತು ಸಂಪೂರ್ಣ ವರದಿ ನೀಡಿದ್ದಾರೆ. ಇದರ ನಡುವೆಯೂ ಸದ್ಯ ಸಚಿವರು ಒಟ್ಟು 80 ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಸಂಪುಟ ಸಚಿವರ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಬಸ್ ಖರೀದಿ ಹಿಂದೆ ಸಚಿವರ ಸ್ವ-ಹಿತಾಸಕ್ತಿ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಸದ್ಯ 126 ಕೋಟಿ ರೂ. ವೆಚ್ಚದಲ್ಲಿ 80 ಬಸ್‍ಗಳನ್ನ ಖರೀದಿಸಲು ಮುಂದಾಗಿದೆ ಎನ್ನಲಾಗಿದ್ದು, ಇದರಲ್ಲಿ 60 ಎಸಿ ಎಲೆಕ್ಟ್ರಿಕ್ ಬಸ್ ಹಾಗೂ ಉಳಿದಂತೆ 20 ನಾನ್ ಎಸಿ ಎಲೆಕ್ಟ್ರಿಕ್ ಬಸ್ ಖರೀದಿ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಾರಿಗೆ ಇಲಾಖೆ ನೇರ ಬಸ್ ಖರೀದಿ ಮಾಡುವುರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟ ಕಾರಣಗಳನ್ನು ಎಂಡಿ ಪೊನ್ನುರಾಜ್ ಅವರು ವರದಿ ನೀಡಿದ್ದಾರೆ. ಸಾರಿಗೆ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದಕ್ಕಿಂತ ಅವುಗಳನ್ನು ಲೀಸ್‍ಗೆ ಪಡೆದು ಮೊದಲು ಪ್ರಯೋಗ ನಡೆಸಲು ಎಂಡಿ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಫೇಮ್ ಇಂಡಿಯಾ ಸ್ಕೀಮ್ ಅಡಿ ಮೆ|| ಗೋಲ್ಡ್ ಸ್ಟೋನ್ ಇನ್‍ಫ್ರಾಟೆಂಕ್ ಕಂಪೆನಿಯಿಂದ ಬಸ್ ಖರೀದಿಗೆ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಬಸ್ ಯಾಕೆ ಬೇಡ?
    ಒಂದು ಎಲೆಕ್ಟ್ರಿಕ್ ಬಸ್‍ನ ಒಟ್ಟಾರೆ ವೆಚ್ಚದ ಶೇ. 60 ರಷ್ಟು ಮೌಲ್ಯ ಬ್ಯಾಟರಿ ಒಂದೇ ಹೊಂದಿರುತ್ತದೆ. ಈ ಬಸ್ಸುಗಳಲ್ಲಿ ಆಳವಡಿಸಿರುವ ಬ್ಯಾಟರಿಗಳನ್ನು ಐದು ವರ್ಷಕ್ಕೆ ಒಮ್ಮೆ ಬದಲಾವಣೆ ಮಾಡಬೇಕು. ಇದರಿಂದ ಬಸ್ಸುಗಳ ನಿರ್ವಹಣೆ ಅಧಿಕ ಆಗಲಿದೆ. ಅಲ್ಲದೇ ಒಂದೊಮ್ಮೆ ಎಲೆಕ್ಟ್ರಿಕ್ ಬಸ್‍ನ ಬ್ಯಾಟರಿ ಹಾಳಾದರೆ ಇಡೀ ಬಸ್ ಹಾಳಾಗುತ್ತದೆ. ಇದರಿಂದ ಒಂದು ಬಸ್ ಮೇಲೆ ಹೂಡಿಕೆ ಮಾಡಿರುವ ಮೊತ್ತ ಸಂಪೂರ್ಣ ನಷ್ಟವಾಗಲಿದೆ. ಬಸ್ಸಿನಲ್ಲಿ ಬಳಸುವ ಬ್ಯಾಟರಿಯನ್ನು ಲೀಥಿಯಂ ಎಂಬ ಮೆಟಲ್ ನಿಂದ ತಯಾರು ಮಾಡುತ್ತಾರೆ. ಈ ಲೀಥಿಯಂ ನಿಕ್ಷೇಪ ಭಾರತದಲ್ಲಿ ಕಡಿಮೆ ಇರುವುದರಿಂದ ಅದರ ಬೆಲೆಯೂ ಅಧಿಕವಾಗಿದೆ. ಆದರೆ ಚೀನಾದಲ್ಲಿ ಈ ಎಲೆಕ್ಟ್ರಿಕ್ ಬಸ್ ಸೇವೆ ಯಶಸ್ವಿಯಾಗಿದ್ದು, ಆದರೆ ಅಲ್ಲಿ ಲೀಥಿಯಂ ನಿಕ್ಷೇಪ ಹೆಚ್ಚಾಗಿರುವುದರಿಂದ ಅವರಿಗೆ ಅನುಕೂಲ ಆಗಿದೆ ಎಂಬ ಅಂಶ ಮುಂದಿಟ್ಟಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ಡೀಸೆಲ್ ಬೆಲೆ ಹೆಚ್ಚಾಗಿದೆ ಎಂಬ ಅಂಶದ ಮೇಲೆ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಮುಂದಾಗಿತ್ತು. ಸದ್ಯ ಸುಮಾರು 126 ಕೋಟಿ ರೂಪಾಯಿ ಖರ್ಚು ಮಾಡಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿ ಚಿಂತನೆ ನಡೆಸಿದೆ. ಆದರೆ ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ನಿರಾಕರಿಸಿದ್ದರು. ಅಲ್ಲದೇ ಬಸ್ಸುಗಳ ನಿರ್ವಹಣೆ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣ ಮುಂದಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=amPQtHkZIq0