Tag: Electric Bus

  • ಪಿಎಂ ಇ-ಡ್ರೈವ್ – ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್‌ಡಿಕೆ

    ಪಿಎಂ ಇ-ಡ್ರೈವ್ – ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್‌ಡಿಕೆ

    – ರಾಷ್ಟ್ರದ 5 ನಗರಗಳಿಗೆ 10,900; ಕರ್ನಾಟಕಕ್ಕೆ 4,500 ಬಸ್ ಹಂಚಿಕೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮಹತ್ವಾಕಾಂಕ್ಷೆ ಯೋಜನೆ ಪಿಎಂ ಇ-ಡ್ರೈವ್ ಅಡಿಯಲ್ಲಿ ಮೊದಲ ಹಂತದಲ್ಲಿಯೇ ರಾಷ್ಟ್ರದ 5 ಪ್ರಮುಖ ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.

    ಈ ಪೈಕಿ ಬೆಂಗಳೂರು(Bengaluru) ನಗರಕ್ಕೆ 4500 ಬಸ್‌ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಅವರು ತಿಳಿಸಿದರು. ಇದನ್ನೂ ಓದಿ: ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್‌ ಇದ್ದಾಳೆ – ರೇಪ್‌ ಕೇಸ್‌ ದಾಖಲಾದ ಬಳಿಕ ಮಡೆನೂರು ಮನು ಬಾಂಬ್‌

    ನವದೆಹಲಿಯ(New Delhi) ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಎಲೆಕ್ಟ್ರಿಕ್ ಬಸ್(Electric Bus) ಹಂಚಿಕೆಯ ಸಂಬಂಧ ಕರ್ನಾಟಕ, ತೆಲಂಗಾಣ, ಗುಜರಾತ್ ಹಾಗೂ ದೆಹಲಿ ರಾಜ್ಯಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಎಲೆಕ್ಟ್ರಿಕ್ ಬಸ್‌ಗಳ ಬಳಕೆ ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಪೂರಕ ಮೂಲಸೌಕರ್ಯವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‌ನವರೇ ಪರಮೇಶ್ವರ್ ಮೇಲೆ ಕ್ರಮ ಆಗ್ಬೇಕು ಅಂತಾ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

    ಮಾಲಿನ್ಯರಹಿತ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಅಗತ್ಯ. ಬಸ್ ಹಂಚಿಕೆಯಲ್ಲಿ ಬೇಡಿಕೆ, ಜನಸಂಖ್ಯೆ ಹಾಗೂ ಹಳೆಯ ಬಸ್‌ಗಳ ವಿಲೇವಾರಿ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮನಗರ ಜಿಲ್ಲೆ ಇನ್ಮುಂದೆ ಬೆಂಗಳೂರು ದಕ್ಷಿಣ – ಹಠ ಸಾಧಿಸಿ ಗೆದ್ದ ಡಿಕೆಶಿ

    ಕರ್ನಾಟಕಕ್ಕೆ 4,500 ಬಸ್ ಹಂಚಿಕೆ
    ಕರ್ನಾಟಕದ ಪರವಾಗಿ ಸಭೆಯಲ್ಲಿ ಹಾಜರಿದ್ದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ(BMTC) 7,000 ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿದ್ದ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಇಷ್ಟೇ ಸಂಖ್ಯೆಯ ಬಸ್‌ಗಳಿಗೆ ಬೇಡಿಕೆ ಸಲ್ಲಿಸಿದರು.

    ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರಕ್ಕೆ ಅತ್ಯಧಿಕ ಬಸ್‌ಗಳ ಅಗತ್ಯವಿದೆ. ಈ ಬೇಡಿಕೆ ಹಾಗೂ ಜನಸಂಖ್ಯೆಯನ್ನು ಪರಿಗಣಿಸಿ ಮೊದಲ ಹಂತದಲ್ಲಿಯೇ ಬಿಎಂಟಿಸಿಗೆ 4,500 ಬಸ್‌ಗಳನ್ನು ಒದಗಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

    ಉಳಿದಂತೆ ದೆಹಲಿ ಸಾರಿಗೆ ಸಂಸ್ಥೆ 2,800 ಬಸ್ ಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಬಸ್‌ಗಳನ್ನು ಒದಗಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನಸಂಖ್ಯೆ ಅಧಿಕವಾಗಿದೆ. ಜೊತೆಗೆ ಇನ್ನೂ ಕೆಲ ಅಂಶಗಳನ್ನು ಪರಿಗಣಿಸಿ ಬೇಡಿಕೆ ಇಟ್ಟಿರುವಷ್ಟೂ ಸಂಖ್ಯೆಯ ಬಸ್‌ಗಳನ್ನು ಹಂಚಿಕೆ ಮಾಡುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಸೀಲ್ ಮಾಡಿದ್ದ ಬೋಬಾ ಟೀ ಬಾಟಲ್‌ನಲ್ಲಿ ಗ್ಲಾಸ್ ಪತ್ತೆ – ಐಸ್‌ ಕ್ಯೂಬ್ ಎಂದು ಕುಡಿದು ಆಸ್ಪತ್ರೆ ಸೇರಿದ ಯುವತಿ!

    ಇನ್ನು ಸೂರತ್ ನಗರ ಸಾರಿಗೆ ಸಂಸ್ಥೆ 600 ಬಸ್‌ಗಳಿಗೆ ಬೇಡಿಕೆ ಇಟ್ಟಿದ್ದು, ಅಹಮದಾಬಾದ್ ನಗರಕ್ಕೆ 1,000 ಬಸ್‌ಗಳನ್ನು ಕೇಳಲಾಗಿದೆ. ಅಷ್ಟೂ ಬಸ್‌ಗಳನ್ನೂ ಹಂಚಿಕೆ ಮಾಡುವುದಕ್ಕೆ ಸಚಿವರು ಒಪ್ಪಿಗೆ ನೀಡಿದರು. ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರ ಸಾರಿಗೆ ಸಂಸ್ಥೆ 2800 ವಿದ್ಯುತ್ ಚಾಲಿತ ಬಸ್‌ಗಳಿಗೆ ಬೇಡಿಕೆ ಇಟ್ಟಿತ್ತು, ಆ ಪೈಕಿ 2,000 ಬಸ್‌ಗಳನ್ನು ಹಂಚಿಕೆ ಮಾಡುವ ಬಗ್ಗೆ ಸಚಿವರು ಭರವಸೆ ನೀಡಿದರು.

    ಒಟ್ಟಾರೆಯಾಗಿ ಐದೂ ನಗರಗಳಿಂದ 14,200 ಬಸ್‌ಗಳಿಗೆ ಬೇಡಿಕೆ ಬಂದಿತ್ತು. ಆ ಪೈಕಿ 10,900 ಬಸ್‌ಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡುವ ಮುನ್ನ ಐದೂ ನಗರಗಳ ಸಾರಿಗೆ ಸಂಸ್ಥೆಗಳು ಡಿಪೋಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯವಾದ ಮೂಲಸೌಕರ್ಯವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಡಿಪೋಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅಗತ್ಯ ಬಿದ್ದರೆ ಹೊಸ ಡಿಪೋಗಳನ್ನು ಸ್ಥಾಪಿಸುವ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

  • ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ | ಬಸ್ ಚಾಲಕರಿಂದ ಪ್ರತಿಭಟನೆ – ಆಸ್ಪತ್ರೆಗೆ ಮಹಿಳೆ ದಾಖಲು

    ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ | ಬಸ್ ಚಾಲಕರಿಂದ ಪ್ರತಿಭಟನೆ – ಆಸ್ಪತ್ರೆಗೆ ಮಹಿಳೆ ದಾಖಲು

    ಬೆಂಗಳೂರು: ಬಿಎಂಟಿಸಿ ಬಸ್ (BMTC) ಚಾಲಕನ ಮೇಲೆ ಮಹಿಳೆಯಿಂದ ಹಲ್ಲೆ ಪ್ರಕರಣ ಸಂಬಂಧ, ಘಟನೆ ಖಂಡಿಸಿ ಡಿಪೋ 22 ಚಾಲಕರು (Drivers) ಬಸ್ ತೆಗೆಯದೇ ಪ್ರತಿಭಟನೆ ಮಾಡಿದರೆ ಅತ್ತ ಹಲ್ಲೆ ಮಾಡಿದ ಮಹಿಳೆ ಆಸ್ಪತ್ರೆಗೆ (Hospital) ದಾಖಲಾಗಿ ಬಿಎಂಟಿಸಿ ಚಾಲಕನದ್ದೇ ತಪ್ಪು ಎಂದು ಆರೋಪ ಮಾಡಿದ್ದಾಳೆ.

    ಶನಿವಾರ ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್ ಚಾಲಕನ ಮೇಲೆ ಮಹಿಳೆ ಅಟ್ಟಹಾಸ ಮೆರೆದಿದ್ದಳು. ಮುಂದೆ ಹೋಗುತ್ತಿದ್ದ ಸ್ಕೂಟರ್‌ಗೆ ಬಸ್ ತಾಗಿದ್ದಕ್ಕೆ ಉಗ್ರರೂಪ ತಾಳಿದ ಮಹಿಳೆ ಬಸ್ಸಿಗೆ ನುಗ್ಗಿ ಪ್ರಯಾಣಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ್ದಳು.

     

    ಮಹಿಳೆಯ ಏಟಿಗೆ ಚಾಲಕ ಬಸ್‌ನಲ್ಲೇ ಕುಸಿದು ಬಿದ್ದಿದ್ದ. ಯಾರು ಬಿಡಿಸಿದರೂ ಜಗ್ಗದ ಮಹಿಳೆ ರೌದ್ರಾವತಾರವನ್ನೇ ತಾಳಿದ್ದಳು. ಈ ಘಟನೆ ಖಂಡಿಸಿ ಡಿಪೋ ನಂಬರ್ 22ರ ಇವಿ ಬಸ್ ಚಾಲಕರು (EV Bus Drivers) ಡಿಪೋ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇವಿಎಂ ದೂರೋದನ್ನು ನಿಲ್ಲಿಸಿ, ಫಲಿತಾಂಶವನ್ನು ಸ್ವೀಕರಿಸಿ – ಕಾಂಗ್ರೆಸ್‌ಗೆ ಉಮರ್ ಅಬ್ದುಲ್ಲಾ ಕಿವಿಮಾತು

    ಘಟನೆ ಸಂಬಂಧ ನಿನ್ನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಫ್‌ಐಆರ್ ಕೂಡ ಆಗಿತ್ತು. ಕೇಸ್ ದಾಖಲಾದ ಬಳಿಕ ರಾತ್ರಿ ಮಹಿಳೆಯನ್ನು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಇಂದು ಪೀಣ್ಯ ಡಿಪೋದ 100ಕ್ಕೂ ಹೆಚ್ಚು ಬಸ್ಸುಗಳನ್ನು ನಿಲ್ಲಿಸಿ ನೂರಾರು ಚಾಲಕರು ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಬಸ್ಸುಗಳನ್ನು ಹೊರ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮಹಿಳೆಯನ್ನು ಬಂಧಿಸುವವರೆಗೆ ಬಸ್ ತೆಗೆಯಲ್ಲ ಅಂತ ಹಠ ಹಿಡಿದರು.

     

    ಮಹಿಳೆ ಆಸ್ಪತ್ರೆಗೆ ದಾಖಲು:
    ಇತ್ತ ಚಾಲಕರು ಪ್ರತಿಭಟನೆ ಮಾಡುತ್ತಿದ್ದರೆ ಅತ್ತ ಹಲ್ಲೆ ಮಾಡಿದ ಸವಿತಾ ಬಸ್ ತಾಗಿದ್ದಕ್ಕೆ ಗಾಯವಾಗಿದೆ ಎಂದು ಹೇಳಿ ಆಸ್ಪತ್ರೆ ಸೇರಿದ್ದಾಳೆ. ಆಸ್ಪತ್ರೆಯಿಂದಲೇ ವಿಡಿಯೊ ಮುಖಾಂತರ ಸ್ಪಷ್ಟನೆ ನೀಡಿದ್ದಾಳೆ. ಘಟನೆಗೆ ಬಿಎಂಟಿಸಿ ಚಾಲಕನೆ ಕಾರಣ. ನಾನು ಗಾಡಿ ಓಡಿಸಿಕೊಂಡು ಹೋಗುವಾಗ ಉದ್ದೇಶ ಪೂರ್ವಕವಾಗಿ ಹಾರ್ನ್ ಮಾಡುತ್ತಿದ್ದ. ಈ ವೇಳೆ ಬೇಕಂತಲೇ ಗಾಡಿ ಟಚ್ ಮಾಡಿದ್ದಾನೆ. ಗಾಡಿಯಲ್ಲಿ ನನ್ನ ಮಗ ಇದ್ದ. ಅವನು ಕೆಳಗೆ ಬಿದ್ದು ಗಾಯಗೊಂಡಿದ್ದಕ್ಕೆ ಆಕ್ರೋಶದಿಂದ ಹಲ್ಲೆ ಮಾಡಿದ್ದೇನೆ. ನಮಗೂ ಗಾಯವಾಗಿದೆ ಅಂತಾ ಆಸ್ಪತ್ರೆಗೆ ದಾಖಲಾಗಿ, ಚಾಲಕನ ವಿರುದ್ಧ ಆರೋಪ ಮಾಡಿದ್ದಾಳೆ.

    ಒಟ್ಟಾರೆ ಘಟನೆ ಸಂಬಂಧ ಪರಸ್ಪರ ಆರೋಪ, ಪ್ರತ್ಯಾರೋಪ ಕೇಳಿ ಬರುತ್ತಿದೆ. ಆದರೆ ಘಟನೆಗೆ ನಿಜ ಕಾರಣ ಏನು ಎನ್ನುವುದು ತನಿಖೆಯಿಂದಷ್ಟೇ ಹೊರ ಬರಬೇಕಿದೆ.

  • ಬೆಂಗಳೂರಿನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್

    ಬೆಂಗಳೂರಿನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್

    ಬೆಂಗಳೂರು: ಭಾರೀ ಮಳೆಯ ನಡುವೆಯೇ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ (Electric BMTC Bus) ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಸೋಮವಾರ ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದ್ದು, ಬಸ್ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಎಲೆಕ್ಟ್ರಿಕ್ ಬಸ್ ನಾಗಾವರ ಕಡೆಯಿಂದ ಹೆಬ್ಬಾಳ ಕಡೆಗೆ ಬರುತ್ತಿತ್ತು. ಹೆಬ್ಬಾಳದ BWSSB ಬಳಿಯ ಸರ್ವಿಸ್ ರಸ್ತೆಗೆ ಬರುತ್ತಿದ್ದಂತೆ ಏಕಾಏಕಿ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಂಡಕ್ಟರ್ ಬಸ್‌ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಏಕಾಏಕಿ ಬಸ್ ಹೊತ್ತಿ ಉರಿದಿದೆ. ಇದನ್ನೂ ಓದಿ: ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ

    ಜೋರು ಮಳೆಯ ಪರಿಣಾಮ ಬಸ್‌ನ ಎಂಜಿನ್‌ಗೆ ನೀರು ಹೋಗಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನ ಅಧಿಕಾರಿಗಳು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸುವ ಸಲುವಾಗಿ ಅಗ್ನಿಶಾಮಕ ವಾಹನಗಳು ಬಂದ ಪರಿಣಾಮ ಹೆಬ್ಬಾಳ ಕಡೆಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸುಮಾರು ಎರಡು ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಸುಮಾರು 8 ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಬಸ್ ತೆರವು ಕಾರ್ಯ ನಡೆಯಿತು. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ

  • Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌

    Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌

    – ಧರ್ಮಪಥ, ರಾಮಪಥದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ

    ನೋಯ್ಡಾ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸಕಲ ತಯಾರಿಗಳು ನಡೆಯುತ್ತಿದೆ. ಜನವರಿ 22 ರಂದು ಭಾರೀ ಜನ ಸೇರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಶೀಘ್ರದಲ್ಲೇ ನೋಯ್ಡಾದಿಂದ ಅಯೋಧ್ಯೆಗೆ (Noida To Ayodhya) ಡೈರೆಕ್ಟ್ ಬಸ್‌ಗಳನ್ನು ಓಡಿಸಲು ಯೋಜಿಸುತ್ತಿದೆ.

    ಈ ಸಂಬಂಧ UPSRTC ನೊಯ್ಡಾ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಎನ್‌ಪಿ ಸಿಂಗ್ ಪ್ರತಿಕ್ರಿಯಿಸಿ, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ನೋಯ್ಡಾ ಡಿಪೋ ಶೀಘ್ರದಲ್ಲೇ ಅಯೋಧ್ಯೆಗೆ ಡೈರೆಕ್ಟ್‌ ಬಸ್‌ಗಳನ್ನು ಪ್ರಾರಂಭಿಸಲಿದೆ. ಸದ್ಯ ನೋಯ್ಡಾ ಡಿಪೋದಿಂದ ಅಯೋಧ್ಯೆಗೆ ನೇರ ಬಸ್‌ಗಳಿಲ್ಲ. ಸಿಎನ್‌ಜಿ ಬಸ್‌ಗಳು ಒಂದೇ ಬಾರಿಗೆ ಅಷ್ಟು ದೂರ ಕ್ರಮಿಸಲು ಸಾಧ್ಯವಿಲ್ಲ. ಫುಲ್ ಟ್ಯಾಂಕ್‌ನಲ್ಲಿ ಸಿಎನ್‌ಜಿ ಬಸ್ 500 ಕಿ.ಮೀ ವರೆಗೆ ಕ್ರಮಿಸುತ್ತದೆ. ನೋಯ್ಡಾದಿಂದ ಅಯೋಧ್ಯೆಗೆ ಸುಮಾರು 650 ಕಿಮೀ ದೂರವಿದೆ. ಈ ಸಂದರ್ಭದಲ್ಲಿ ನೋಯ್ಡಾ ಡಿಪೋ ಲಕ್ನೋದಲ್ಲಿ ಸಿಎನ್‌ಜಿ (ಗ್ಯಾಸ್) ತುಂಬುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

    ಟಿಕೆಟ್ ದರ‌: ಬಸ್ ಟಿಕೆಟ್ ದರ ಇನ್ನೂ ಅಂತಿಮಗೊಂಡಿಲ್ಲ. ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಘೋಷಣೆ ಮಾಡಲಾಗುವುದು. ಲಕ್ನೋದ ಕೇಂದ್ರ ಕಚೇರಿಯಿಂದ ನಿರ್ದೇಶನಗಳನ್ನು ಸ್ವೀಕರಿಸಿದ್ದೇವೆ. ಅಯೋಧ್ಯೆಗೆ ಒಂದು ಅಥವಾ ಎರಡು ಬಸ್‌ಗಳ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಆ ಬಳಿಕ ಬೇಡಿಕೆ ಹೆಚ್ಚಾದರೆ ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿ ವಿವರಿಸಿದರು.

    ಎಲೆಕ್ಟ್ರಿಕ್ ಬಸ್‌ಗಳ ಪ್ರಾರಂಭಕ್ಕೂ ಚಿಂತನೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಶೀಘ್ರದಲ್ಲೇ ಅಯೋಧ್ಯೆಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಕೂಡ ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ. ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗಾಗಿ ಉತ್ತರ ಪ್ರದೇಶ ಸರ್ಕಾರವು ರಾಮಪಥ ಮತ್ತು ಧರ್ಮ ಪಥದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಯೋಜಿಸುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂತ್ರಾಕ್ಷತೆ ಅಂದ್ರೆ ಏನು?, ಯಾಕಿಷ್ಟು ಮಹತ್ವ?, ಹೇಗೆಲ್ಲಾ ಬಳಸಬಹುದು?

    100 ಎಲೆಕ್ಟ್ರಿಕ್ ಬಸ್‌ಗಳು (Electric Bus) ಜನವರಿ 15 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ. ಧರ್ಮಪಥ ಮತ್ತು ರಾಮಪಥದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ. ಹೆಚ್ಚುವರಿಯಾಗಿ ಜನವರಿ 15 ರಿಂದ 100 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ. ಗಾಲ್ಫ್ ಕಾರ್ಟ್‌ಗಳು ಮತ್ತು ಇ-ರಿಕ್ಷಾಗಳ ಅನುಕೂಲವನ್ನು ಸಹ ಪರಿಚಯಿಸಲಾಗುವುದು. ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಚೌದಾ ಕೋಸಿ ಮತ್ತು ಪಂಚಕೋಸಿ ಪರಿಕ್ರಮ ಮಾರ್ಗಗಳಲ್ಲಿ ಉದಯ ಚೌಕ್‌ನಲ್ಲಿ ಹೊಸ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿ ಒಟ್ಟು 70 ಎಕರೆ (10 ಎಕರೆ, 35 ಎಕರೆ ಮತ್ತು 25 ಎಕರೆ) ವಿಸ್ತೀರ್ಣದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

    ತಾತ್ಕಾಲಿಕ ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಗುತ್ತದೆ. ಕಾರಿಡಾರ್‌ಗಳನ್ನು ನಿರ್ಮಿಸಲಾಗಿದೆ. ಕೆಲವು ಹೆಚ್ಚುವರಿ ಪಾರ್ಕಿಂಗ್ ಸ್ಥಳಗಳನ್ನು ಗೊತ್ತುಪಡಿಸಲಾಗಿದೆ. ನಿರ್ಣಾಯಕ ಸಾಕೇತ್ ಪೆಟ್ರೋಲ್ ಪಂಪ್‌ನಿಂದ ಲತಾ ಮಂಗೇಶ್ಕರ್ ಚೌಕ್‌ವರೆಗೆ ತಾತ್ಕಾಲಿಕ ಮತ್ತು ಶಾಶ್ವತ ಸೇರಿದಂತೆ ವಿವಿಧ ಪಾರ್ಕಿಂಗ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ (CMO) ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

  • ಏಪ್ರಿಲ್ ವೇಳೆಗೆ ಬಿಎಂಟಿಸಿಗೆ 1400 ಎಲೆಕ್ಟ್ರಿಕ್ ಬಸ್: ಸಿದ್ದರಾಮಯ್ಯ

    ಏಪ್ರಿಲ್ ವೇಳೆಗೆ ಬಿಎಂಟಿಸಿಗೆ 1400 ಎಲೆಕ್ಟ್ರಿಕ್ ಬಸ್: ಸಿದ್ದರಾಮಯ್ಯ

    ಬೆಂಗಳೂರು: ಮುಂದಿನ ವರ್ಷ ಏಪ್ರಿಲ್ ವೇಳೆಗೆ BMTCಗೆ 1400 ಹೊಸ ಎಲೆಕ್ಟ್ರಿಕ್ ಬಸ್‌ಗಳು ಸೇರ್ಪಡೆಯಾಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು.

    ವಿಧಾನಸೌಧದ ಮುಂಭಾಗದಲ್ಲಿ ಬಿಎಂಟಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ವಿದ್ಯುತ್ ಚಾಲಿತ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇಲ್ಲಿಯವರೆಗೂ ರಾಜ್ಯ ಸಾರಿಗೆಯ ಬಸ್‌ಗಳಲ್ಲಿ 120 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ನಿತ್ಯ 40 ಲಕ್ಷ ಜನ ಬಿಎಂಟಿಸಿಯಲ್ಲಿ ಪ್ರಯಾಣ ಮಾಡ್ತಾರೆ. ಇದರಲ್ಲಿ ಎಲ್ಲ ಜಾತಿ, ಧರ್ಮ, ಎಲ್ಲ ಅಂತಸ್ತಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನಾಳೆ, ನಾಡಿದ್ದು ವಿಜಯೇಂದ್ರ‌ ಸರಣಿ ಸಭೆ – ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಗೆ ಸಮಿತಿ ರಚನೆ: ಪಿ.ರಾಜೀವ್

    ಉಚಿತ ಬಸ್ ಪ್ರಯಾಣವನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.‌

    ನಮ್ಮ ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಾಗಿ ರಾಜ್ಯದ ಆರ್ಥಿಕ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ಮತ್ತು ರೈತ ಮಹಿಳೆಯರು, ದುಡಿಯುವ ವರ್ಗಗಳ ಮಹಿಳೆಯರಿಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಆ ಹಣವನ್ನು ತಮ್ಮ ಕುಟುಂಬದ ಇತರೆ ಅಗತ್ಯಗಳಿಗೆ ಬಳಸುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಶಕ್ತಿಯೂ ಹೆಚ್ಚುತ್ತಿದೆ ಎಂದರು. ಇದನ್ನೂ ಓದಿ: ಸರ್ಕಾರದ 5ನೇ ಗ್ಯಾರಂಟಿ‌ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ

    ರಾಜ್ಯದ 4 ಕೋಟಿ 30 ಲಕ್ಷ ಮಂದಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಬಡವರು ಮತ್ತು ದುಡಿಯುವ ವರ್ಗಗಳನ್ನು ಆರ್ಥಿಕ ಪ್ರಗತಿಯ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

    ಆರ್ಥಿಕ ಶಕ್ತಿ ಮೂಲಕ ನಾಡಿನ ಸಮಸ್ತ ಮಹಿಳೆಯರಿಗೆ ಮತ್ತು ಬಡ, ಶ್ರಮಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಹಿಂದಿದ್ದ ಬಿಜೆಪಿ ಸರ್ಕಾರಗಳು ಇದನ್ನು ಸಾಧಿಸಲಿಲ್ಲ. ಬದಲಿಗೆ ಟೀಕಿಸುತ್ತಾ ಕುಳಿತಿವೆ ಎಂದು ಕಿಡಿಕಾರಿದರು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಸಚಿವರು ಭಾಗವಹಿಸಿದ್ದರು. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

  • ದೆಹಲಿ ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಉಳ್ಳ ನಗರ – 400 ಬಸ್‌ಗಳಿಗೆ ಚಾಲನೆ

    ದೆಹಲಿ ದೇಶದಲ್ಲೇ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಉಳ್ಳ ನಗರ – 400 ಬಸ್‌ಗಳಿಗೆ ಚಾಲನೆ

    ನವದೆಹಲಿ: ಜಿ20 ಶೃಂಗಸಭೆಗೂ ಮುನ್ನ 400 ಎಲೆಕ್ಟ್ರಿಕ್ ಬಸ್‌ಗಳಿಗೆ (Electric Bus) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಚಾಲನೆ ನೀಡಿದ್ದಾರೆ. 400 ಬಸ್‌ಗಳ ಸೇರ್ಪಡೆಯಿಂದ ದೆಹಲಿಯಲ್ಲಿ (Delhi) ಎಲೆಕ್ಟ್ರಿಕ್ ಬಸ್‌ಗಳು 800 ಕ್ಕೂ ಹೆಚ್ಚಾಗಲಿದ್ದು, ಈ ಮೂಲಕ ಭಾರತದಲ್ಲಿ ದೆಹಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿದ ನಗರವಾಗಿದೆ.

    ದೆಹಲಿ ಸರ್ಕಾರ ಒಟ್ಟು 1,500 ಎಲೆಕ್ಟ್ರಿಕ್ ಬಸ್‌ಗಳನ್ನು ಆರ್ಡರ್ ಮಾಡಿದೆ. ಅವುಗಳಲ್ಲಿ 921 ಬಸ್‌ಗಳು ಎಫ್‌ಎಎಮ್‌ಇ (ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ತಯಾರಿಕೆ) ಯೋಜನೆಯಡಿಯಲ್ಲಿ ಸಬ್ಸಿಡಿಗಳನ್ನು ಪಡೆದಿವೆ. 12 ವರ್ಷಗಳಲ್ಲಿ ಈ 921 ಬಸ್‌ಗಳ ಕಾರ್ಯಾಚರಣೆಯ ವೆಚ್ಚವು 4,091 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು 417 ಕೋಟಿ ರೂ.ಗಳನ್ನು ಎಫ್‌ಎಎಮ್‌ಇ ಸಬ್ಸಿಡಿಯಾಗಿ ಒದಗಿಸುತ್ತದೆ ಮತ್ತು ದೆಹಲಿ ಸರ್ಕಾರವು 3,674 ಕೋಟಿ ರೂ.ಗಳನ್ನು ಭರಿಸುತ್ತದೆ.

    ಉಳಿದ 579 ಬಸ್‌ಗಳನ್ನು ದೆಹಲಿ ಸರ್ಕಾರವು ಸಂಪೂರ್ಣವಾಗಿ ಖರೀದಿಸುತ್ತದೆ ಮತ್ತು ನಿರ್ವಹಿಸುತ್ತದೆ. ಒಟ್ಟು ವೆಚ್ಚದ 90% ರಷ್ಟು ದೆಹಲಿ ಸರ್ಕಾರ ಮತ್ತು 10% ಕೇಂದ್ರ ಸರ್ಕಾರವು ಫ್‌ಎಎಮ್‌ಇ ಸಬ್ಸಿಡಿಯಾಗಿ ಭರಿಸಲಿದೆ. ದೆಹಲಿಯು ಈಗ 7,135 ಬಸ್‌ಗಳ ಫ್ಲೀಟ್ ಗಾತ್ರವನ್ನು ಹೊಂದಿದೆ. ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಅಡಿಯಲ್ಲಿ 4,088 ಬಸ್‌ಗಳು ಮತ್ತು ಡಿಐಎಮ್‌ಟಿಎಸ್ (ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್) ಅಡಿಯಲ್ಲಿ 3,047 ಬಸ್‌ಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಬ್ಯಾಲೆನ್ಸ್ ಕಳೆದುಕೊಂಡು ಬಿದ್ರೂ ನಗುತ್ತಲೇ ಎದ್ದು ನಡೆದ ಬಿಹಾರ ಸಿಎಂ

    ಸದ್ಯ 800 ಎಲೆಕ್ಟ್ರಿಕ್ ಬಸ್‌ಗಳು ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಎದುರಿಸಲು ಮತ್ತು ಅದರ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ನಗರದ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ. 800 ಎಲೆಕ್ಟ್ರಿಕ್ ಬಸ್‌ಗಳು ವಾರ್ಷಿಕವಾಗಿ ಸುಮಾರು 45,000 ಟನ್ ಸಿಒ2 ಹೊರಸೂಸುವಿಕೆಯನ್ನು ಉಳಿಸುವ ನಿರೀಕ್ಷೆಯಿದೆ. ಇದು ಹಸಿರು ಮತ್ತು ಸ್ವಚ್ಛ ದೆಹಲಿಗೆ ಕೊಡುಗೆ ನೀಡುತ್ತದೆ. 12 ವರ್ಷಗಳ ಜೀವಿತಾವಧಿಯಲ್ಲಿ, ಈ ಬಸ್‌ಗಳು ಒಟ್ಟು 5.4 ಲಕ್ಷ ಟನ್‌ಗಳಷ್ಟು ಸಿಒ2 ಅನ್ನು ಉಳಿಸುತ್ತದೆ ಎಂದು ಅಂದಾಜಿಸಲಾಗಿದೆ.

    2023 ರ ಅಂತ್ಯದ ವೇಳೆಗೆ ದೆಹಲಿಯು ತನ್ನ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು 1,900 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ಬಸ್‌ಗಳನ್ನು ಹೊಂದಿರುವ ನಗರಗಳಲ್ಲಿ ಒಂದಾಗಲು ಪ್ರಯತ್ನಿಸುತ್ತಿದೆ. 2025 ಕ್ಕೆ ಒಟ್ಟು 10,480 ಬಸ್‌ಗಳನ್ನು ಹೊಂದಲು ಯೋಜಿಸಿದೆ. 80% ರಷ್ಟು ಅಥಾವ 8,280 ಬಸ್‌ಗಳು ಎಲೆಕ್ಟ್ರಿಕ್ ಆಗಿರುತ್ತವೆ. ಈ ಪರಿವರ್ತನೆಯು ವಾರ್ಷಿಕವಾಗಿ 4.67 ಲಕ್ಷ ಟನ್ ಸಿಒ2 ಹೊರಸೂಸುವಿಕೆಯನ್ನು ಉಳಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಗರಿಷ್ಠ ತಾಪಮಾನ- 85 ವರ್ಷಗಳಲ್ಲೇ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚಿನ ಬಿಸಿಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಓವರ್‌ಟೇಕ್ ಅಲ್ಲ, ಬೊಲೆರೋ ಟಯರ್ ಸ್ಫೋಟದಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ – KSRTC ಸ್ಪಷ್ಟನೆ

    ಓವರ್‌ಟೇಕ್ ಅಲ್ಲ, ಬೊಲೆರೋ ಟಯರ್ ಸ್ಫೋಟದಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ – KSRTC ಸ್ಪಷ್ಟನೆ

    ಬೆಂಗಳೂರು: ಬೊಲೆರೋ (Bolero) ವಾಹನದ ಟಯರ್ ಸ್ಫೋಟಗೊಂಡ (Tyre Blast) ಪರಿಣಾಮ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ಭೀಕರ ಅಪಘಾತ (Accident) ಸಂಭವಿಸಿದೆ ಎಂದು ಕೆಎಸ್‌ಆರ್‌ಟಿಸಿ (KSRTC) ಸ್ಪಷ್ಟನೆ ನೀಡಿದೆ.

    ಮೈಸೂರಿನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ರಾಮನಗರ (Ramanagara) ತಾಲೂಕಿನ ವಿಜಯಪುರದಲ್ಲಿ ಫ್ಲೈವುಡ್ ತುಂಬಿಕೊಂಡು ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಬಸ್ ನಿರ್ವಾಹಕ (Bus Conductor) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಬಸ್ ಬೊಲೆರೋ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಸುದ್ದಿಯಾಗಿತ್ತು. ಈಗ ಘಟನೆಯ ಕುರಿತು ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ.

    ಕೆಎಸ್‌ಆರ್‌ಟಿಸಿಯ ಇವಿ ಪವರ್‌ಪ್ಲಸ್ ಬಸ್ ಮುಂಭಾಗದಲ್ಲಿ ಚಲಿಸುತ್ತಿದ್ದ ಬೊಲೆರೋ ಲಗೇಜ್ ವಾಹನವು ಗಾಡಿಯ ಒಳಗೆ ಮತ್ತು ಟಾಪ್ ಮೇಲೆ 20 ಎಂಎಂ ಫ್ಲೈವುಡ್ ಶೀಟ್‌ಗಳನ್ನು (Flywood Sheet) ಓವರ್‌ಲೋಡ್ (Overload) ಮಾಡಿಕೊಂಡು ಹೋಗುತ್ತಿದ್ದ ಸಂದರ್ಭ ಹಠಾತ್ತನೆ ಟಯರ್ ಬ್ಲಾಸ್ಟ್ ಆಗಿದೆ. ಇದರಿಂದಾಗಿ ಬೊಲೆರೋ ವಾಹನದ ವೇಗ ಕಡಿಮೆಯಾಗಿ ಹಿಂದೆಯಿಂದ ಬರುತ್ತಿದ್ದ ಇವಿ ಪವರ್‌ಪ್ಲಸ್ ಬಸ್ ಬೊಲೆರೋಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬೊಲೆರೋ ವಾಹನದಲ್ಲಿದ್ದ 17ಕ್ಕೂ ಹೆಚ್ಚು ಫ್ಲೈವುಡ್‌ಗಳು ಬಸ್ಸಿನ ಮುಂಭಾಗದ ಗಾಜನ್ನು ಹೊಕ್ಕಿ ಬಸ್ಸಿನೊಳಗೆ ನುಗ್ಗಿ ಚಾಲಕನ ಎದೆಗೆ ತಗುಲಿದೆ. ಈ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಬಲಭಾಗದ ಡಿವೈಡರ್ ದಾಟಿ ಸರ್ವಿಸ್ ರಸ್ತೆಗೆ ನುಗ್ಗಿದೆ. ಘಟನೆಯಿಂದಾಗಿ ಬಸ್ ನಿರ್ವಾಹಕ ರಮೇಶ್ (51) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: 15 ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ – ಕಂತೆ ಕಂತೆ ನೋಟುಗಳು ಪತ್ತೆ

    ಅಪಘಾತದಿಂದ ಬಸ್ಸಿನಲ್ಲಿದ್ದ 22 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಚಾಲಕ ಮತ್ತು ಇನ್ನೂ ಮೂವರು ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ (Bengaluru) ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಳಿಕ ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಹೆಚ್ಚಿನ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿರುತ್ತಾರೆ. ಇದನ್ನೂ ಓದಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ಗುಂಡಿನ ದಾಳಿ

    ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ನಿಗಮ, ನಮ್ಮ ನಿರ್ವಾಹಕರ ಅಗಲಿಕೆ ಅತೀವ ನೋವನ್ನುಂಟು ಮಾಡಿದೆ. ನಿಗಮದ ಅಧಿಕಾರಿಗಳು ಅವರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಪ್ರಯಾಣಿಕರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ನಿಗಮವು ಭರಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಆಪರೇಷನ್ ಥಿಯೇಟರ್‌ನಲ್ಲಿ ಹಿಜಬ್ ಧರಿಸುವುದು ಕಷ್ಟ, ಪರ್ಯಾಯ ಆಯ್ಕೆ ಕೊಡಿ – ಪ್ರಿನ್ಸಿಪಾಲ್‍ಗೆ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಕ್ಸ್‌ಪ್ರೆಸ್ ವೇಯಲ್ಲಿ ಮತ್ತೊಂದು ಅಪಘಾತ – ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಸಾವು, ಚಾಲಕ ಗಂಭೀರ

    ಎಕ್ಸ್‌ಪ್ರೆಸ್ ವೇಯಲ್ಲಿ ಮತ್ತೊಂದು ಅಪಘಾತ – ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಸಾವು, ಚಾಲಕ ಗಂಭೀರ

    ರಾಮನಗರ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ (Bengaluru-Mysuru Expressway) ವೇಯಲ್ಲಿ ಫ್ಲೈವುಡ್ (Flywood) ತುಂಬಿದ ಬೊಲೆರೋ (Bolero) ವಾಹನಕ್ಕೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದಿದೆ. ಅಫಘಾತದ ಪರಿಣಾಮ ಬಸ್ ಕಂಡಕ್ಟರ್ (Conductor) ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

    ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ (Electric Bus) ರಾಮನಗರ (Ramanagara) ತಾಲೂಕಿನ ವಿಜಯಪುರ (Vijayapura) ಗ್ರಾಮದ ಬಳಿ ಫ್ಲೈವುಡ್ ತುಂಬಿದ್ದ ಬೊಲೆರೋ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಸ್ ಸರ್ವಿಸ್ ರಸ್ತೆ ಪಕ್ಕದ ಜಮೀನಿಗೆ ಬಂದು ನಿಂತಿದೆ. ಘಟನೆಯ ಪರಿಣಾಮ ಬಸ್ ಕಂಡಕ್ಟರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಓವರ್‌ಟೇಕ್ ಅಲ್ಲ, ಬೊಲೆರೋ ಟಯರ್ ಸ್ಫೋಟದಿಂದ Expressway ಅಪಘಾತ – KSRTC ಸ್ಪಷ್ಟನೆ

    ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐಸ್‌ಕ್ರೀಮ್ ಕಂಟೇನರ್ ಪಲ್ಟಿ – ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಸ್ತೆಗಿಳಿದ KSRTCಯ ಮೊದಲ ಎಲೆಕ್ಟ್ರಿಕ್ ಬಸ್

    ರಸ್ತೆಗಿಳಿದ KSRTCಯ ಮೊದಲ ಎಲೆಕ್ಟ್ರಿಕ್ ಬಸ್

    ಬೆಂಗಳೂರು: ಇಂದು ಕೆಎಸ್‌ಆರ್‌ಟಿಸಿಯ (KSRTC) ಮೊದಲ ಎಲೆಕ್ಟ್ರಿಕ್ ಬಸ್‌ಗೆ (KSRTC Electric Bus) ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಬೆಂಗಳೂರಿನಿಂದ (Bengaluru) ರಾಮನಗರಕ್ಕೆ (Ramanagara) ಈ ಬಸ್‌ ಸಂಚಾರ ಮಾಡುತ್ತೆ.

    ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಿಂದ EV ಪವರ್ ಪ್ಲಸ್ ಹೊರಟಿತ್ತು. ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿ 50 ಅಂತರ ನಗರ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಚರಣೆಗೊಳಿಸಿದೆ. ಇದನ್ನೂ ಓದಿ: ಗುಜರಾತ್ ಸಕ್ಸಸ್: ಹುಬ್ಬಳ್ಳಿಯಲ್ಲಿ ಮೋದಿ ಶೋ ಸ್ಯಾಂಪಲ್ ಅಷ್ಟೇ – ಕರ್ನಾಟಕದಲ್ಲಿ ಮುಂದಿದೆ ಮೆಗಾ ಹವಾ

    ಓಲೆಕ್ಟಾ ಕಂಪನಿಯು ಈ ಬಸ್‌ನ್ನು ನಿಯೋಜನೆ‌ ಮಾಡಿದೆ. ದೇಶದ ಮೊದಲನೇ ಅಂತರ ನಗರ ಇಲೆಕ್ಟ್ರಿಕ್ ವಾಹನ ಇದಾಗಿದೆ. ಡಿಸೆಂಬರ್ 31ರಂದು ಈ ಬಸ್‌ನ್ನು ಸಾರಿಗೆ ಸಚಿವ ಶ್ರೀರಾಮುಲು ಲೋಕಾರ್ಪಣೆ‌ ಮಾಡಿದ್ದರು. ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು KSRTC ಹೆಸರಿಟ್ಟಿದೆ.

    ಕೆಎಸ್‌ಆರ್‌ಟಿಸಿ EV ಪವರ್ ಪ್ಲಸ್ ವಿಶೇಷತೆ?
    ಎರಡೂವರೆ ಗಂಟೆ ಚಾರ್ಜ್ ಮಾಡಿದರೆ 300 ಕಿಮೀ ಕ್ರಮಿಸುವಷ್ಟು ಸಾಮರ್ಥ್ಯವನ್ನು ಈ ಬಸ್‌ ಹೊಂದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿಂದ ಕೂಡಿದೆ. ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಸಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರೀಚಾರ್ಜ್ ಆಗುವ ರಿ ಜನರೇಟಿವ್ ಸಿಸ್ಟಮ್ ಇದಾಗಿದೆ. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಕೂಡ ಇದೆ. ಮನರಂಜನೆಗಾಗಿ ಬಸ್‌ನಲ್ಲಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಬಸ್‌ನಲ್ಲಿ 43+2 ಸೀಟಿಂಗ್ ಕೆಪಾಸಿಟಿಯಿದೆ. ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿ ಇರಲಿದೆ. ಫ್ರಂಟ್ ಲಾಗ್ & ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಇರುತ್ತೆ. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಆಗಿದೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ

    ಕೆಎಸ್‌ಆರ್‌ಟಿಸಿ ಎಂಡಿ‌ ಅನ್ಬುಕುಮಾರ್ ಮಾತನಾಡಿ, ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಮಾಡುತ್ತದೆ. ಮೊದಲ ಬಸ್ ಇಂದು ಟ್ರಾಯಲ್ ರನ್ ಮಾಡಲಾಗುತ್ತೆ. ಬೆಂಗಳೂರಿನಿಂದ ದಾವಣಗೆರೆವರೆಗೂ ಪ್ರಯೋಗಿಕವಾಗಿ ಸಂಚಾರ ಮಾಡುತ್ತೆ. ಸೋಮವಾರದಿಂದ ವಾಣಿಜ್ಯ ಸಂಚಾರ ಶುರುವಾಗುತ್ತೆ. ಬೆಂಗಳೂರು-ಮೈಸೂರು ಬಸ್ ಸಂಚಾರ ಆರಂಭವಾಗುತ್ತೆ. ಈ ತಿಂಗಳ‌‌ ಕೊನೆಯಲ್ಲಿ ಇನ್ನಷ್ಟು ಕಡೆ ಬಸ್ ಬಿಡಲಾಗುತ್ತೆ. ಮೈಸೂರು-ಬೆಂಗಳೂರಿಗೆ 300 ರೂಪಾಯಿ‌‌ ದರ‌ ನಿಗದಿ‌ ಮಾಡಿದ್ದೇವೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ‌‌ ಮಾಡಲಾಗಿದೆ. ರಾಜ್ಯದ 6 ಕಡೆ ಚಾರ್ಜಿಂಗ್ ಪಾಯಿಂಟ್ ಮಾಡಲಾಗುತ್ತೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • KSRTC ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಚಾಲನೆ – ಒಂದು ಬಾರಿ ಚಾರ್ಜ್‌ ಮಾಡಿದ್ರೆ 300 ಕಿ.ಮೀ ಸಂಚಾರ

    KSRTC ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಚಾಲನೆ – ಒಂದು ಬಾರಿ ಚಾರ್ಜ್‌ ಮಾಡಿದ್ರೆ 300 ಕಿ.ಮೀ ಸಂಚಾರ

    ಬೆಂಗಳೂರು: ಕೆಎಸ್‌ಆರ್‌ಟಿಸಿಯ(KSRTC) ಅಂತರ ನಗರ ಎಲೆಕ್ಟ್ರಿಕ್‌ ಬಸ್‌(Electric Bus) ಸೇವೆಗೆ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ.

    ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ(Make In India) ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್‍ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸಲಿದೆ.

    ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ‘ಇವಿ ಪವರ್ ಪ್ಲಸ್’ ಎಂದು ಹೆಸರಿಸಲಾಗಿದ್ದು ‘ಅತ್ಯುತ್ತಮ ಅನುಭವ’ ಎಂದು ಟ್ಯಾಗ್‍ಲೈನ್‌ ನೀಡಲಾಗಿದೆ.

    ಈ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ನಂತರ  ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರ್ಗಗಳಲ್ಲಿ ಕಾರ್ಯಚರಣೆಗೊಳಿಸಲು ಯೋಜಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್‌ ಕೇಂದ್ರವನ್ನು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಸ್ಥಾಪಿಸಲಾಗುವುದು.

    ಎಂಇಐಎಲ್‌ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ ರಸ್ತೆಗಿಳಿಸುತ್ತಿರುವ ಪರಿಸರ ಸ್ನೇಹಿ ಬಸ್‌ ಎರಡೂವರೆ ತಾಸು ಚಾರ್ಜ್‌ ಮಾಡಿದರೆ 300 ಕಿ.ಮೀ ಕ್ರಮಿಸುವಷ್ಟು ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ.

    ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿಚಾರ್ಜ್‌ ಆಗುವ ರಿ ಜನರೇಷನ್‌ ಆಗುವ ಸಿಸ್ಟಮ್‌ ಇದಾಗಿದೆ. ಬಸ್‌ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್‌ ಚಾರ್ಜಿಂಗ್‌ ಸ್ಪಾಟ್‌, ಮನರಂಜನೆಗಾಗಿ 2 ಟಿವಿ ಅಳವಡಿಸಲಾಗಿದೆ. ಒಟ್ಟಾರೆ ಬಸ್‌ 43 + 2 ಸೀಟಿಂಗ್‌ ಕೆಪಾಸಿಟಿ ಹೊಂದಿದೆ. ಬಸ್‌ ಸಂಪೂರ್ಣ ಸೆನ್ಸರ್‌ ಇರಲಿದೆ. ಮುಂದುಗಡೆ ಮತ್ತು ಹಿಂದುಗಡೆ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಇದನ್ನೂ ಓದಿ: ಸಾಲ ಮಾಡಿ ವಿದೇಶಕ್ಕೆ ಪರಾರಿ – ಫೆಬ್ರವರಿಯಲ್ಲಿ ನೀರವ್‌ ಮೋದಿ ಆಸ್ತಿ ಹರಾಜು

    ಈ ವೇಳೆ, ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬದ ಅವಲಂಬಿತರಿಗೆ ಅಪಘಾತ ಪರಿಹಾರ ವಿಮಾ ಸೌಲಭ್ಯದ 1 ಕೋಟಿ ರೂ. ಚೆಕ್ ಹಸ್ತಾಂತರಿಸಲಾಯ್ತು. ಅಂತರ ನಿಗಮ ವರ್ಗಾವಣೆ 1013 ನೌಕರರಿಗೆ ವರ್ಗಾವಣೆ ಆದೇಶವನ್ನು ನೀಡಲಾಯಿತು.

    Live Tv
    [brid partner=56869869 player=32851 video=960834 autoplay=true]