Tag: electoral bonds

  • 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್‌ಗೆ 570 ಕೋಟಿ ಹಣ ನೀಡಿವೆ – ಪ್ರಿಯಾಂಕ್‌ ಖರ್ಗೆ

    1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್‌ಗೆ 570 ಕೋಟಿ ಹಣ ನೀಡಿವೆ – ಪ್ರಿಯಾಂಕ್‌ ಖರ್ಗೆ

    – ಕರಡಿ ಮೈಮೇಲಿನ ಕೂದಲಿನಷ್ಟು ಆರೋಪ ಬಿಜೆಪಿ ನಾಯಕರ ಮೇಲಿದೆ ಎಂದ ಸಚಿವ

    ಬೆಂಗಳೂರು: 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು 570 ಕೋಟಿ ರೂ. ಬಾಂಡ್ ಹಣ ನೀಡಿವೆ. ಈಗ ಬಿಜೆಪಿ ನಾಯಕರ (BJP Leaders) ಮೇಲೆ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಮೇಲೆ ರಾಜೀನಾಮೆ ನೀಡಬೇಕಲ್ವಾ? ಹಾಗೆ ರಾಜೀನಾಮೆ ನೀಡಿದರೆ ಇಡೀ ಬಿಜೆಪಿಯೇ ಖಾಲಿ ಆಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಹೇಳಿದ್ದಾರೆ.

    ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಎಫ್‌ಐಆರ್ ದಾಖಲಾದ ಮೇಲೆ ರಾಜೀನಾಮೆ ನೀಡಬೇಕಲ್ವಾ? ಹಾಗೆ ರಾಜೀನಾಮೆ ನೀಡಿದರೆ ಇಡೀ ಬಿಜೆಪಿಯೇ ಖಾಲಿ ಆಗುತ್ತದೆ. 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು 570 ಕೋಟಿ ರೂ. ಬಾಂಡ್ (Electoral Bonds) ಹಣ ನೀಡಿವೆ ಎಂದಿದ್ದಾರೆ.

    ಪ್ರಹ್ಲಾದ್ ಜೋಶಿ ಅವರ ಹೇಳಿಕೆ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಜೋಶಿಯವರು ಯಾರನ್ನು ಮೆಚ್ಚಿಸುತ್ರಿದ್ದಾರೋ ಗೊತ್ತಿಲ್ಲ. ರಾಹುಲ್, ಸೋನಿಯಾ ಜೈಲಿಗೆ ಹಾಕಬೇಕು ಅಂತಾರೆ, 10 ವರ್ಷದಿಂದ ನೀವೇ ಅಧಿಕಾರದಲ್ಲಿ ಇದ್ದೀರಾ ಬೆರಳಿ ಚೀಪ್ತಾ ಇದ್ದೀರಾ? ಚಾಂದನಿ ಚೌಕ್‌ನಲ್ಲಿ ಬೇಲ್ ಪುರಿ ತಿನ್ನೋಕೆ ಹೋಗಿದ್ದೀರಾ? ಜೋಶಿಯವರೇ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣ – ಹತ್ಯೆ ಬಳಿಕ ಪಶ್ಚಾತ್ತಾಪ ಪಟ್ಟಿದ್ದ ಹಂತಕ

    23 ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ಆಗಿದೆ:
    ವಿಜಯೇಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ಇದೆ. ಅದನ್ನು ಜೋಶಿ ಮರೆತಿದ್ದಾರಾ..? ಅತ್ಯಂತ ಇನಕಾಂಪಿಟೆಂಟ್ ಗೃಹ ಸಚಿವರು ಅಂದ್ರೆ ಅದು ಅಮಿತ್ ಶಾ, 10 ವರ್ಷದಿಂದ ಏನ್‌ ಮಾಡ್ತಿದ್ರಿ? ವಿಜಯೇಂದ್ರ ಜೈಲಿಗೆ ಹೋಗ್ತಾರೆ ಅಂತ ನಿಮ್ಮದೇ ಶಾಸಕರು ಹೇಳ್ತಾರೆ. ಎಷ್ಟು ಬಾರಿ ಮಾರಿಷಸ್ ದುಬೈಗೆ ಹೋಗಿದ್ದಾರೆ? ಅಂತ ನಿಮ್ಮ ಪಾಸಪೋರ್ಟ್ ತೋರಿಸಿ. ನರಿಗಳು ನ್ಯಾಯ ಹೇಳೋದೂ ಒಂದೇ ಬಿಜೆಪಿಯವರು ನ್ಯಾಯ ಹೇಳೋದೂ ಒಂದೇ. ಬಿಜೆಪಿಯ 23 ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ಆಗಿದೆ. ಆರ್.ಅಶೋಕ್ ಭೂಕಬಳಿಕೆ ಪ್ರಕರಣದಲ್ಲಿ ಎ1, ಇದರಲ್ಲಿ ಪೂಜ್ಯ ಅಪ್ಪಾಜಿಯವರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಅವರ ಹೆಸರು ಬಂದಾಗ ಜೋಶಿಯವರು ಯಾಕೆ ಸುಮ್ಮನಾದ್ರಿ? ಬಿಜೆಪಿಯಲ್ಲಿ ಒಂದಿಬ್ಬರು ನೈತಿಕತೆ ಇರುವವರಿದ್ದಾರೆ. ಯಡಿಯೂರಪ್ಪಗೆ ನಾಚಿಕೆ ಇದ್ರೆ ಅವರು ಸ್ಟೇಜ್‌ಗೆ ಹತ್ತಬಾರದು ಅಂತ ಕೆಲವರು ಹೇಳಿದ್ದಾರೆ. ಅದನ್ನು ಹೇಳಿದಾಗ ಯಾವ ಬಿಜೆಪಿ ನಾಯಕರೂ ಮಾತಾಡಲ್ಲ. ಮುನಿರತ್ನ ವಿಷಯ ಬಂದಾಗ ಜೋಶಿ ಸಾಹೇಬ್ರು ಮಾತೇ ಆಡಲ್ಲ. ಮುನಿರತ್ನ ವಿಚಾರವನ್ನು ಸಮರ್ಥನೆ ಮಾಡಿಕೊಂಡ್ರಲ್ಲ ನಾಚಿಕೆ ಆಗಲ್ವಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

    ಲೋಕಾಯುಕ್ತ ಐಜಿಪಿ ಹಾಗೂ ಹೆಚ್‌ಡಿಕೆ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೆಚ್‌ಡಿಕೆ ಎರಡು ಬಾರಿ ಸಿಎಂ ಆಗಿದ್ದವರು ಹಾಲಿ ಕೇಂದ್ರ ಸಚಿವರು. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಈ ಅಧಿಕಾರಿ ಇರ್ಲಿಲ್ವಾ? ಇವರ ಕೈಕೆಳಗೆ ಅವರು ಕೆಲಸ ಮಾಡಿಲ್ವಾ? ಆಗ ಇವರು ಎಂಥವರು ಅನ್ನೋದು ಅವರಿಗೆ ಗೊತ್ತಿರಲಿಲ್ವಾ? ಯಾವ ಕೇಡರ್ ಅಂತ ಆಗ ಇವರಿಗೆ ಗೊತ್ತಿರ್ಲಿಲ್ವಾ? ಒಬ್ಬ ಅಧಿಕಾರಿ ಇವರ ಪರವಾಗಿ ಕೆಲಸ ಮಾಡಿದರೇ ಒಳ್ಳೆಯವನು ಕಾನೂನು ಪಾಲನೆ ಮಾಡಿದರೆ ಕೆಟ್ಟವನಾ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು : ಮಂಜುನಾಥ ಸಾವಂತ

    ಯಾರನ್ನ ಹಂದಿ ಎಂದಿದ್ದಾರೋ ಗೊತ್ತಿಲ್ಲ:
    ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿದ ಚಂದ್ರಶೇಖರ್ ಪತ್ರಕ್ಕೆ ಪ್ರಕ್ರಿಯಿಸಿ, ಅದು ಕೇವಲ ಕೋಟ್ ಅಷ್ಟೇ, ನಾನು ಪತ್ರವನ್ನು ಓದಿದ್ದೇನೆ ಹೊರತು ನನಗೂ ಅದಕ್ಕೂ ಸಂಬಂಧ ಇಲ್ಲ. ಪತ್ರ ಬರೆದವನು ನಾನಲ್ಲ ಸ್ವೀಕಾರ ಮಾಡಿದವನು ನಾನಲ್ಲ. ಐಜಿಪಿ ಚಂದ್ರಶೇಖರ್ ಅವರು ಅವರ ಸಿಬ್ಬಂದಿಯ ನೈತಿಕ ಧೈರ್ಯಕ್ಕಾಗಿ ಪತ್ರ ಬರೆದಿದ್ದಾರೆ. ಅವರ ತನಿಖೆ ಮಾಡಿದವರು ಕೂಡ ಚಂದ್ರಶೇಖರಲ್ಲ. ಚಂದ್ರಶೇಖರ್ ಯಾರನ್ನ ಹೋಲಿಕೆ ಮಾಡಿ ಹಂದಿ ಎಂದಿದ್ದಾರೋ ನನಗೆ ಗೊತ್ತಿಲ್ಲ. ನೀವು ಊಹೆ ಮಾಡಿದ್ದರೆ ಅದು ನಿಮಗೆ ಬಿಟ್ಟಿದ್ದು. ಮೊದಲು ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಹೆಚ್‌ಡಿಕೆ ಸಹಿಯೇ ಮಾಡಿಲ್ಲ ಅಂದ್ರು. ಸಹಿ ಫೋರ್ಜರಿ ಆಗಿದೆ ಅಂದ್ರು ಕೊನೆಗೆ ಕೋರ್ಟ್‌ನಲ್ಲಿ ಸಹಿ ಮಾಡಿದ್ದು ನಾನೇ ಎಂದು ತಿಳಿಸಿದ್ದಾರೆ. ಈಗ ಮತ್ತೆ ಸಹಿ ಮಾಡಿದ್ದು ನಾನೇ ಎನ್ನುತ್ತಿದ್ದಾರೆ. ಅಂದ್ರೆ ಇದು ಮರ್ಡರ್ ಮಾಡಿಲ್ಲ ಹಾಫ್ ಮರ್ಡರ್ ಮಾಡಿದ್ದೇನೆ ಅಂದಂಗಾಯ್ತು ಅಂದ ತಿರುಗೇಟು ನೀಡಿದ್ದಾರೆ.

    ಕರಡಿ ಮೈಮೇಲಿನ ಕೂದಲಿನಷ್ಟು ಆರೋಪಗಳಿವೆ:
    ಮುಂದುವರಿದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್‌ ಖರ್ಗೆ, ವಿಜಯೇಂದ್ರ, ಯಡಿಯೂರಪ್ಪರನ್ನ ಮೊದಲು ವಜಾ ಮಾಡಿ, ಮುನಿರತ್ನರನ್ನ ಪಾರ್ಟಿಯಿಂದ ತೆಗೆಯಿರಿ ನೋಡೋಣ. ಇದೆಲ್ಲ ಆದಮೇಲೆ ನಮ್ಮಹತ್ರ ಬನ್ನಿ. ಕರಡಿ ಮೈಮೇಲಿನ ಕೂದಲಿನಷ್ಟು ಆರೋಪಗಳು ಬಿಜೆಪಿ ನಾಯಕರ ಮೇಲಿದೆ. ನಾವು ಕಾನೂನು ಹೋರಾಟ ಮಾಡ್ತೇವೆ ಹೆದರೋದಿಲ್ಲ ಜಗ್ಗೋದಿಲ್ಲ. ದೆಹಲಿ ತನಕವೂ ಕೂಡ ನಮ್ಮ ಹೋರಾಟ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 136 ಶಾಸಕರಿಗೆ 1 ರೂಪಾಯಿ ಅನುದಾನ ಕೊಟ್ಟಿಲ್ಲ, ಇನ್ನೂ ಚನ್ನಪಟ್ಟಣಕ್ಕೆ 500 ಕೋಟಿ ಎಲ್ಲಿಂದ ಬರುತ್ತೆ?- ನಿಖಿಲ್

  • ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡಬೇಕು: ಜೈರಾಮ್ ರಮೇಶ್ ಆಗ್ರಹ

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡಬೇಕು: ಜೈರಾಮ್ ರಮೇಶ್ ಆಗ್ರಹ

    – ನಕಲಿ ಕಂಪನಿಗಳ ಮೂಲಕವೂ ಬಿಜೆಪಿ ಚುನಾವಣಾ ಬಾಂಡ್ ಪಡೆದಿದೆ

    ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ರಾಜೀನಾಮೆ ಕೊಡಬೇಕು ಎಂದು ಚುನಾವಣಾ ಬಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh) ಆಗ್ರಹಿಸಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ ಮಾತುಗಳು ಇಂದು ಸತ್ಯವಾಗಿದೆ. ಒಂದು ವ್ಯವಸ್ಥಿತ ರೂಪದಲ್ಲಿ ಚುನಾವಣ ಬಾಂಡ್ ಬಿಜೆಪಿಗೆ ನೀಡಲಾಗಿದೆ. ಇಡಿ ದಾಳಿ ನಡೆಸಿದ ಕೂಡಲೇ ಅಥವಾ ಬಂಧನದ ಬಳಿಕ ಬಾಂಡ್ ಖರೀದಿಸಿದೆ. ಹಲವಾರು ಪ್ರಕರಣಗಳಲ್ಲಿ ಇದೇ ರೀತಿಯಾಗಿದೆ. ಹೈದರಾಬಾದ್ ಮೂಲದ ಗೇಮಿಂಗ್ ಕಂಪನಿ ಜೊತೆಗೂ ಇದೇ ಕಥೆಯಾಗಿದೆ. ಚುನಾವಣಾ ಬಾಂಡ್ ಖರೀದಿಸಿ ಬಿಜೆಪಿಗೆ ನೀಡಿದ ಮೇಲೆ ಇಡಿ ಮೌನವಾಗಿದೆ. ಇನ್ನೊಂದು ಕಂಪನಿ ಬಿಜೆಪಿಗೆ ಬಾಂಡ್ ನೀಡಿ ಕೇಂದ್ರ ಸರ್ಕಾರದಿಂದ ದಕ್ಷಿಣ ಭಾರತದಲ್ಲಿ ಸಾಕಷ್ಟು ಟೆಂಡರ್ ಪಡೆದುಕೊಂಡಿದೆ. 500 ಕೋಟಿಗೂ ಅಧಿಕ ಬಾಂಡ್‌ಗಳನ್ನು ಒಂದೊಂದು ಕಂಪನಿ ಖರೀದಿಸಿದೆ. ಈಗ ಬೆಂಗಳೂರಿನಲ್ಲಿ ಇದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಎಫ್‌ಐಆರ್ ಸುಮ್ಮನೆ ಆಗಿಲ್ಲ, ಪ್ರಾಥಮಿಕ ತನಿಖೆ ಬಳಿಕ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಸೂಚಿಸಿದೆ. ಹಣಕಾಸು ಸಚಿವರು ಮೊದಲ ಆರೋಪಿ, ಇಡಿ ಎರಡನೇ ಆರೋಪಿ, ರಾಜ್ಯ ಬಿಜೆಪಿ ನಾಯಕರು ಮೂರನೇ ಆರೋಪಿಯಾಗಿದ್ದಾರೆ. 8,000 ಕೋಟಿ ಬಾಂಡ್ ರೂಪದಲ್ಲಿ ಪಡೆಯಲಾಗಿದೆ. ಕಾರ್ಪೊರೇಟ್ ಕಂಪನಿಗಳ ಮೂಲಕ ಹಣ ಪಡೆಯಲಾಗಿದೆ ಎಂದು ಆರೋಪಿಸಿದರು.‌ ಇದನ್ನೂ ಓದಿ: ಕಾಂಗ್ರೆಸ್‌ಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು: ಸಿ.ಟಿ.ರವಿ

    ಹಣಕಾಸು ಸಚಿವರು ಒಬ್ಬರೇ ಮಾಡಲು ಅವರಿಗೆ ಧೈರ್ಯ ಇಲ್ಲ. ಇದು ಯಾರ ಆದೇಶ, ಯಾರ ನಿರ್ದೇಶನದ ಮೇಲೆ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆರ್‌ಬಿಐ ಇದಕ್ಕೆ ಸಂಬಂಧಿಸಿದಂತೆ ಪತ್ರ ಬರೆದರೆ ಸರ್ಕಾರ ಅದನ್ನು ಕಸದ ಬುಟ್ಟಿಗೆ ಎಸೆಯಿತು. ಇದು ನಿಷ್ಪಕ್ಷಪಾತ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಚುನಾವಣಾ ಮೂಲ ಉದ್ದೇಶದ ಮೇಲೆ ಪ್ರಹಾರ ಮಾಡುತ್ತದೆ. ಹೆಚ್ಚು ಹಣವಿರುವ ಪಕ್ಷ ಬಾಂಡ್ ಹಣವನ್ನು ಬಳಸಿಕೊಂಡು ಚುನಾವಣೆ ಗೆಲ್ಲುತ್ತದೆ. ತಿನ್ನುತ್ತೇನೆ, ಕದಿಯುತ್ತೇನೆ ಮತ್ತು ಹಣಕ್ಕಾಗಿ ಪೀಡಿಸುತ್ತೇನೆ ಎಂದು ಸ್ಲೋಗನ್ ಬದಲಿಸಬಹುದು. ಇಷ್ಟೆಲ್ಲ ಆದ್ಮೇಲೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

    ಚೆಂದ ಕೊಡಿ ದಂಧೆ ತಗೊಳ್ಳಿ. ಟೆಂಡರ್ ತಗೊಳ್ಳಿ ಚೆಂದ ಕೊಡಿ. ಈ ಎರಡು ಮಾರ್ಗಗಳ ಮೂಲಕ ಬಿಜೆಪಿ ಹಣ ಪಡೆದಿದೆ. ಇದನ್ನು ನಾವು ಲಂಚ ಎನ್ನಬಹುದು. ಎಫ್‌ಐಆರ್ ಮೇಲೆ ಇನ್ನೊಂದು ಮಾರ್ಗ ಉಲ್ಲೇಖಿಸಬಹುದು. ಪೋಸ್ಟ್ ರೇಡ್, ಹಫ್ತಾ ವಸೂಲಿ ಅಂತಾ ಕರೆಯಬಹುದು. ಬಹಳಷ್ಟು ಕಂಪನಿಗಳ ಮೇಲೆ ಇಡಿ ರೇಡ್ ಆದ್ಮೇಲೆ ಬಾಂಡ್ ಖರೀದಿಸಿವೆ. ನಕಲಿ ಕಂಪನಿಗಳ ಮೂಲಕವೂ ಬಿಜೆಪಿ ಚುನಾವಣಾ ಬಾಂಡ್ ಪಡೆದಿದೆ. ಬಿಜೆಪಿ ಐದೂವರೆ ವರ್ಷದಲ್ಲಿ 6,000 ಕೋಟಿಗೂ ಅಧಿಕ ಹಣ ಸಂಗ್ರಹಿಸಿದೆ. ಧಮ್ಕಿ ಹಾಕಿ ಬಾಂಡ್ ಖರೀದಿಸುವಂತೆ ಮಾಡಲಾಗಿದೆ. ಇದರ ಬಗ್ಗೆ ಎಸ್‌ಐಟಿ ತನಿಖೆ ಆಗಲೇಬೇಕಿದೆ. ಜೆಪಿಸಿ ತನಿಖೆಗೆ ನಾವು ಒತ್ತಾಯ ಮಾಡಿದ್ದೆವು. ನಾವು ಹೇಳಿದಂತೆ ಬೆಂಗಳೂರಿನಲ್ಲಿ ಎಫ್‌ಐಆರ್ ಆಗಿಲ್ಲ. ಕೋರ್ಟ್ ನಿರ್ದೇಶನದಂತೆ ಎಫ್‌ಐಆರ್ ಆಗಿದೆ. ಕೇಂದ್ರ ಹಣಕಾಸು ಸಚಿವೆ ರಾಜೀನಾಮೆ ನೀಡಬೇಕು. ಹಣಕಾಸು ಸಚಿವೆಯ ರಾಜೀನಾಮೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

  • ರಾಜ್ಯದಲ್ಲಿ FIR ಪಾಲಿಟಿಕ್ಸ್ | ಚುನಾವಣಾ ಬಾಂಡ್‌ ಹೆಸ್ರಲ್ಲಿ ವಸೂಲಿ ಆರೋಪ – ಬಿಜೆಪಿಗೆ ಶಾಕ್!

    ರಾಜ್ಯದಲ್ಲಿ FIR ಪಾಲಿಟಿಕ್ಸ್ | ಚುನಾವಣಾ ಬಾಂಡ್‌ ಹೆಸ್ರಲ್ಲಿ ವಸೂಲಿ ಆರೋಪ – ಬಿಜೆಪಿಗೆ ಶಾಕ್!

    – ಚುನಾವಣಾ ಬಾಂಡ್ ಹೆಸರಲ್ಲಿ 8,000 ಕೋಟಿ ರೂ.ಗಿಂತ ಹೆಚ್ಚು ವಸೂಲಿ ಆರೋಪ

    ಬೆಂಗಳೂರು: ದೇಶದ ರಾಜಕಾರಣದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯದಲ್ಲೀಗ ಎಫ್‌ಐಆರ್ ಪಾಲಿಟಿಕ್ಸ್ (FIR Politics), ದ್ವೇಷ ರಾಜಕೀಯ, ಸೇಡಿಗೆ ಸೇಡು-ಮುಯ್ಯಿಗೆ ಮುಯ್ಯಿ ರಾಜಕೀಯ ನಡೀತಿದ್ಯಾ..? ಅಂತ ವ್ಯಾಪಕ ಚರ್ಚೆ ಆಗ್ತಿದೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಜೈಲು ಪಾಲಾದ ಬಳಿಕ ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ಈ ಬೆನ್ನಲ್ಲೇ, ಚುನಾವಣಾ ಬಾಂಡ್ (Electoral Bond) ಹೆಸರಲ್ಲಿ ಸುಲಿಗೆ ಆರೋಪದಲ್ಲಿ ರಾಜ್ಯದ ಸಂಸದೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮೇಲೆ ಕೋರ್ಟ್ ಆದೇಶದ ಅನ್ವಯ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾಲ್ವರು ವಿಕಲ ಚೇತನ ಹೆಣ್ಣು ಮಕ್ಕಳಿಗೆ ಸ್ವೀಟ್‌ನಲ್ಲಿ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

    ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ಯ ಆದರ್ಶ ಅಯ್ಯರ್ ಅನ್ನೋವ್ರು ದೂರು ಹಾಗೂ ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ಆದೇಶದ ಅನ್ವಯ ತಿಲಕ್‌ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೇ, ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲು ತಯಾರಿಯಾಗಿದ್ದು, ತಿಲಕ ನಗರ ಪೊಲೀಸ್ ಠಾಣೆ ಮುಂದೆ ಭದ್ರತೆ ಹೆಚ್ಚಿಸಲಾಗಿದೆ. ಎಫ್‌ಐಆರ್‌ನಲ್ಲಿ ನಿರ್ಮಲಾ ಜೊತೆಗೆ ರಾಜ್ಯ, ರಾಷ್ಟ್ರ ಬಿಜೆಪಿ ನಾಯಕರ ಹೆಸರೂ ಇದೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಪತ್ನಿ ರೇಪ್ ಕೇಸ್; ತನಿಖೆಯಲ್ಲಿ ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ

    ಚುನಾವಣಾ ಬಾಂಡ್; ಯಾರ‍್ಯಾರ ವಿರುದ್ಧ ಎಫ್‌ಐಆರ್‌?
    * ಎ1 ನಿರ್ಮಲಾ ಸೀತಾರಾಮನ್
    * ಎ2 ಇ.ಡಿ ಅಧಿಕಾರಿಗಳು
    * ಎ3 ಕೇಂದ್ರ ಬಿಜೆಪಿ ಪದಾಧಿಕಾರಿಗಳು
    * ಎ4 ನಳೀನ್ ಕುಮಾರ್ ಕಟೀಲ್
    * ಎ5 ವಿಜಯೇಂದ್ರ
    * ಎ6 ರಾಜ್ಯ ಬಿಜೆಪಿ ಪದಾಧಿಕಾರಿಗಳು

    ಯಾವೆಲ್ಲಾ ಸೆಕ್ಷನ್..?
    * ಐಪಿಸಿ ಸೆಕ್ಷನ್ 384 – ಸುಲಿಗೆ
    * ಐಪಿಸಿ ಸೆಕ್ಷನ್ 120ಬಿ – ಅಪರಾಧಿಕ ಒಳಸಂಚು
    * ಐಪಿಸಿ ಸೆಕ್ಷನ್ 34 – ಸಮಾನ ಉದ್ದೇಶ

    ಎಫ್‌ಐಆರ್ ಮುಖ್ಯಾಂಶಗಳೇನು?
    * ಚುನಾವಣಾ ಬಾಂಡ್ ಹೆಸರಲ್ಲಿ 8,000 ಕೋಟಿ ರೂ.ಗಿಂತ ಹೆಚ್ಚು ವಸೂಲಿ ಆರೋಪ
    * ಹಲವಾರು ಕಾರ್ಪೊರೇಟ್ ಕಂಪನಿಗಳ ಮೇಲೆ ರೇಡ್ & ಸೀಜ್ ಬೆದರಿಕೆ ಆರೋಪ
    * 2019-2023ರವರೆಗೆ ಹಲವು ಕಂಪನಿಗಳಿಂದ 230.15 ಕೋಟಿ ಸುಲಿಗೆ ಆರೋಪ
    * ಒಂದು ಕಂಪನಿಯಿಂದಲೇ 49.5 ಕೋಟಿ ರಹ್ಯಸವಾಗಿ ವಸೂಲಿ ಆರೋಪ
    * ಮೇ 2ರಂದು ದೂರು, 5 ತಿಂಗಳ ಬಳಿಕ ಎಫ್‌ಐಆರ್

    ಮಾತಿನ ವರಸೆ:
    ಚುನಾವಣಾ ಬಾಂಡ್‌ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಮಧ್ಯೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಸೋನಿಯಾ, ರಾಹುಲ್, ಖರ್ಗೆ ಮೇಲೂ ಎಫ್‌ಐಆರ್ ಹಾಕ್ಬೇಕು. ಸೋನಿಯಾ, ರಾಹುಲ್ ಅರೆಸ್ಟ್ ಆಗ್ತಾರೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ರೆ, ನಿರ್ಮಲಾ ಸೀತಾರಾಮನ್ ತಮ್ಮ ಕುಟುಂಬಕ್ಕೆ ಬಾಂಡ್ ಪಡೆದಿಲ್ಲ ಅಂತ ಆರ್.ಅಶೋಕ್ ನಿರ್ಮಲಾ ಪರ ಬ್ಯಾಟ್ ಬೀಸಿದ್ದಾರೆ. ಆದ್ರೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ತಿಳಿದುಕೊಂಡು ಮಾತಾಡ್ತೇನೆ ಅಂತ ಖರ್ಗೆ, ಡಿಕೆ ಜಾಣ ನಡೆ ಪ್ರದರ್ಶಿಸಿದ್ದಾರೆ. ಮೋದಿ, ನಿರ್ಮಲಾ ರಾಜೀನಾಮೆಗೆ ಹೆಚ್‌ಡಿಕೆ ಒತ್ತಾಯಿಸಲಿ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹೆಚ್ಚು ರೈತರ ಸಾವು: ಪ್ರಧಾನಿ ಮೋದಿ ಆರೋಪ

  • ಎನ್‌ಡಿಎ ಅಧಿಕಾರಕ್ಕೆ ಬರುವ ಮೊದಲು ಕಂಪನಿಗಳು ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದೆ ಹೇಳಬಹುದೇ – ಮೋದಿ ಪ್ರಶ್ನೆ

    ಎನ್‌ಡಿಎ ಅಧಿಕಾರಕ್ಕೆ ಬರುವ ಮೊದಲು ಕಂಪನಿಗಳು ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದೆ ಹೇಳಬಹುದೇ – ಮೋದಿ ಪ್ರಶ್ನೆ

    ನವದೆಹಲಿ: ಚುನಾವಣಾ ಬಾಂಡ್‌ (Electoral Bonds) ವಿಚಾರವಾಗಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೌನ ಮುರಿದಿದ್ದಾರೆ. 2014ರಲ್ಲಿ ಎನ್‌ಡಿಎ ಸರ್ಕಾರ (NDA Government) ಅಧಿಕಾರಕ್ಕೆ ಬರುವ ಮೊದಲು ಈ ಕಂಪನಿಗಳು ರಾಜಕೀಯ ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದೆ ಎಂದು ಯಾರಾದರೂ ಹೇಳಬಹುದೇ ಎಂದು ಪ್ರಶ್ನಿಸಿದ್ದಾರೆ.

    ಲೋಕಸಭಾ ಚುನಾವಣಾ (Lok Sabha Election) ಸಮಯದಲ್ಲಿ ನರೇಂದ್ರ ಮೋದಿ ಅವರು ತಮಿಳು ವಾಹಿನಿಗೆ ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಚುನಾವಣಾ ಬಾಂಡ್‌ಗಳ ದತ್ತಾಂಶವನ್ನು ಪ್ರಕಟಿಸಿದ್ದರಿಂದ ಬಿಜೆಪಿಗೆ ಏನಾದರೂ ಮುಜುಗರ ಉಂಟಾಗಿದೆಯೇ ಎಂದು ಕೇಳಲಾಯಿತು. ಇದನ್ನೂ ಓದಿ: ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

    ಈ ಪ್ರಶ್ನೆಗೆ ಮೋದಿ, ಚುನಾವಣಾ ಬಾಂಡ್‌ಗಳ ವಿರುದ್ಧ ಪ್ರತಿಭಟಿಸುವ ಜನರು ಶೀಘ್ರದಲ್ಲೇ ಪಶ್ಚಾತ್ತಾಪ ಪಡುತ್ತಾರೆ. 2014ರ ಮೊದಲು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಹಣ ನೀಡಿದ ವಿವರ ಇರಲಿಲ್ಲ. ನಾವು ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದೆವು. ಚುನಾವಣಾ ಬಾಂಡ್‌ಗಳಿಗೆ ಧನ್ಯವಾದಗಳು, ನಾವು ಈಗ ಹಣದ ಮೂಲವನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದರು.

    ಈ ಕಂಪನಿಗಳು 2014 ರ ಮೊದಲು ರಾಜಕೀಯ ಪಕ್ಷಗಳಿಗೆ ಎಷ್ಟು ಪಾವತಿಸಿವೆ ಎಂದು ಯಾರಾದರೂ ಹೇಳಬಹುದೇ? ಯಾವುದೂ ಪರಿಪೂರ್ಣವಲ್ಲ, ಅಪೂರ್ಣತೆಗಳನ್ನು ಪರಿಹರಿಸಬಹುದು ಎಂದು ತಿಳಿಸಿದರು.

    ನಾವು ಏನು ಮಾಡಿದ್ದೇವೆ ಹೇಳಿ. ನಾನು ಅದನ್ನು ಯಾಕೆ ಹಿನ್ನಡೆಯಾಗಿ ನೋಡಬೇಕು? ಬಾಂಡ್ ವಿವರಗಳನ್ನು ನೋಡಿ ನೃತ್ಯ ಮಾಡುವವರು ಮತ್ತು ಅದರ ಬಗ್ಗೆ ಹೆಮ್ಮೆ ಪಡುವವರು ಪಶ್ಚಾತ್ತಾಪ ಪಡುತ್ತಾರೆ ಎಂದು ನಾನು ದೃಢವಾಗಿ ಹೇಳುತ್ತೇನೆ ಎಂದರು.

  • ಹಣವಿಲ್ಲದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ: ನಿತಿನ್‌ ಗಡ್ಕರಿ

    ಹಣವಿಲ್ಲದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ: ನಿತಿನ್‌ ಗಡ್ಕರಿ

    ಗಾಂಧಿನಗರ: ಹಣವಿಲ್ಲದೇ ಯಾವುದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ಹೇಳಿದ್ದಾರೆ.

    2018ರಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದ್ದ ಚುನಾವಣಾ ಬಾಂಡ್‌ (Electoral Bonds) ಅನ್ನು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ (Supreme Court) ರದ್ದು ಗೊಳಿಸಿತು. ಈ ಕುರಿತು ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯ ಹೇಳಿಕೆ ಆಧರಿಸಿ ಕೇಜ್ರಿವಾಲ್ ಬಂಧನ – ಇಡಿ ವಿರುದ್ಧ ಆಪ್ ಆರೋಪ 

    ಅರುಣ್‌ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. ನಾನು ಸಹ ಅದರ ಭಾಗವಾಗಿದ್ದೆ. ಸಂಪನ್ಮೂಲವಿಲ್ಲದೇ ಯಾವುದೇ ಪಕ್ಷ ಬದಕಲು ಸಾಧ್ಯವಿಲ್ಲ. ಕೆಲವು ದೇಶಗಳಲ್ಲಿ ಸರ್ಕಾರಗಳೇ ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತವೆ. ಭಾರತದಲ್ಲಿ ಅಂತಹ ವ್ಯವಸ್ಥೆಯಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳಿಗೆ ಹಣಕಾಸು ಒದಗಿಸುವ ವ್ಯವಸ್ಥೆಗಾಗಿ ಚುನಾವಣಾ ಬಾಂಡ್‌ ಅನ್ನು ಪರಿಚಯಿಸಲಾಗಿತ್ತು. ಕಾರ್ಯಕ್ರಮಗಳಿಗೆ ಹಣ ಒದಗಿಸಲು ಪ್ರಾಯೋಜಕರ ಅಗತ್ಯವಿರುವಂತೆ, ರಾಜಕೀಯ ಪಕ್ಷಗಳಿಗೂ ತಮ್ಮ ವ್ಯವಹಾರಗಳನ್ನು ನಡೆಸಲು ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ.

    ಮೊದಲು ನಾವು ವಾಸ್ತವವನ್ನು ನೋಡಬೇಕು. ಪಕ್ಷಗಳು ಚುನಾವಣೆಯಲ್ಲಿ ಹೇಗೆ ಹೋರಾಡಬೇಕು? ಚುನಾವಣೆಯಲ್ಲಿ ಪಾರದರ್ಶಕತೆ ತರೋದಕ್ಕಾಗಿಯೇ ನಾವು ಬಾಂಡ್‌ಗಳ ವ್ಯವಸ್ಥೆ ತಂದಿದ್ದೆವು. ಜಾರಿಗೆ ತರುವಾಗ ನಮ್ಮ ಉದ್ದೇಶ ಉತ್ತಮವಾಗಿತ್ತು. ಈಗಲಾದ್ರೂ ಎಲ್ಲಾ ಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್‌ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?

    ಆಯೋಗಕ್ಕೆ ಎಸ್‌ಬಿಐನಿಂದ ದಾಖಲೆ ಸಲ್ಲಿಕೆ:
    ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಚುನಾವಣಾ ಬಾಂಡ್‌ಗಳ ಎಲ್ಲಾ ವಿವರಗಳನ್ನು ಎರಡು ದಿನಗಳ ಹಿಂದೆಯಷ್ಟೇ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಇದು ಬಾಂಡ್‌ ಖರೀದಿಸಿದವರ ಹೆಸರು, ವಿವಿಧ ಬಗೆಯ ಬಾಂಡ್‌ಗಳ ನಿರ್ದಿಷ್ಟ ಸಂಖ್ಯೆ, ಬಾಂಡ್‌ ನಗದೀಕರಿಸಿದ ಪಕ್ಷ, ರಾಜಕೀಯ ಪಕ್ಷಗಳ ಬ್ಯಾಂಕ್‌ ಖಾತೆಗಳ ಕೊನೆಯ ನಾಲ್ಕು ಸಂಖ್ಯೆಯನ್ನು ತೋರಿಸುವ ಮಾಹಿತಿಗಳನ್ನು ಒಳಗೊಂಡಿದೆ.

    ಎಸ್‌ಬಿಐ ಈಗ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿದೆ. ಸಂಪೂರ್ಣ ಖಾತೆ ಸಂಖ್ಯೆಗಳು, ಕೆವೈಸಿ ವಿವರ ಸೇರಿದಂತೆ ಯಾವುದೇ ಮಾಹಿತಿಯನ್ನು ರಹಸ್ಯವಾಗಿ ಇರಿಸಿಲ್ಲ ಎಂದು ಎಸ್‌ಬಿಐ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: Bengaluru Rural Lok Sabha 2024: ಡಿಕೆ ಬ್ರದರ್ಸ್‌ ಕಟ್ಟಿ ಹಾಕುತ್ತಾ ‘ಮೈತ್ರಿ’?

    ಬ್ಯಾಂಕ್ ನೀಡಿರುವ ವಿವರಗಳನ್ನು ಚುನಾವಣಾ ಆಯೋಗವು ಶೀಘ್ರದಲ್ಲೇ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ನಿರೀಕ್ಷೆಯಿದೆ. ಎಸ್‌ಬಿಐ ಈ ಹಿಂದೆ ಚುನಾವಣಾ ಆಯೋಗಕ್ಕೆ ಎರಡು ಪಟ್ಟಿಗಳನ್ನು ನೀಡಿತ್ತು. ಅದನ್ನು ಚುನಾವಣಾ ಸಮಿತಿಯು ಮಾರ್ಚ್ 14 ರಂದು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

  • ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್‌ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?

    ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್‌ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?

    ನವದೆಹಲಿ: ಚುನಾವಣಾ ಆಯೋಗ ಚುನಾವಣಾ ಬಾಂಡ್‌ಗಳ (Electoral Bonds) ಹೊಸ ದತ್ತಾಂಶವನ್ನು ಭಾನುವಾರ ಬಹಿರಂಗಪಡಿಸಿದೆ. ಸುಪ್ರೀಂ ಕೋರ್ಟ್‌ಗೆ (Supreme Court) ಮುಚ್ಚಿದ ಲಕೋಟೆಯಲ್ಲಿ (ಸೀಲ್ಡ್‌ ಕವರ್‌ನಲ್ಲಿ) ಸಲ್ಲಿಸಲಾಗಿದ್ದ ಮಾಹಿತಿಯನ್ನು ಆಯೋಗ ಬಿಡುಗಡೆಗೊಳಿಸಿದೆ.

    ಲೋಕಸಭಾ ಚುನಾವಣೆಗೆ (Lok Sabha Elections) ದಿನಾಂಕ ಘೋಷಣೆ ಮಾಡಿದ ಮರುದಿನವೇ ಹೊಸ ದತ್ತಾಂಶಗಳ ಮಾಹಿತಿಯನ್ನು ಆಯೋಗ ಹಂಚಿಕೊಂಡಿದೆ. ಇದು 2019ರ ಏಪ್ರಿಲ್‌ 12ಕ್ಕಿಂತಲೂ ಹಿಂದಿನ ದತ್ತಾಂಶವಾಗಿದೆ ಎಂದು ಹೇಳಿದೆ. 2019ರ ಏಪ್ರಿಲ್‌ 12ರ ನಂತರದ ಅವಧಿಯ ಚುನಾವಣಾ ಬಾಂಡ್‌ ವಿವರಗಳನ್ನು ಕಳೆದ ವಾರ ಆಯೋಗ ಬಿಡುಗಡೆ ಮಾಡಿತ್ತು. ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಸೀಲ್ಡ್ ಕವರ್‌ನಲ್ಲಿ ಚುನಾವಣಾ ಬಾಂಡ್‌ಗಳ ದತ್ತಾಂಶವನ್ನು ಸಲ್ಲಿಸಿರುವುದಾಗಿಯೂ ಚುನಾವಣಾ ಆಯೋಗ (Election Commission) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ರಾಜಕೀಯ ಪಕ್ಷಗಳಿಂದ ಸ್ವಕರಿಸಿದ ದತ್ತಾಂಶವನ್ನು ಸೀಲ್‌ ಮಾಡಿದ ಕವರ್‌ಗಳಿಂದ ತೆರೆಯದೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಮಾರ್ಚ್ 15, 2024 ರಂದು ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ (ಎಲ್ಲಾ ಡೊಮೇನ್ ಹೆಸರುಗಳ ಡೇಟಾಬೇಸ್) ಭೌತಿಕ ಪ್ರತಿಗಳನ್ನು ಡಿಜಿಟೈಸ್ ಮಾಡಿದ (ಫೋಟೋ, ಬರಹ, ಸೌಂಡ್‌ ಮೊದಲಾದ ದಾಖಲೆಗಳನ್ನು ಕಂಪೂಟರ್‌ ಮೂಲಕ ಡಿಜಿಟಲ್‌ ಮಾದರಿಗೆ ಪರಿವರ್ತಿಸುವುದು) ದಾಖಲೆಯೊಂದಿಗೆ (Digitised Record) ಹಿಂದಿರುಗಿಸಿದೆ. ಭಾರತೀಯ ಚುನಾವಣಾ ಆಯೋಗ ಇಂದು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಿಂದ ಡಿಜಿಟೈಸ್ ಮಾಡಿ ಸ್ವೀಕರಿಸಿದ ಡೇಟಾವನ್ನು ಅಪ್‌ಲೋಡ್ ಮಾಡಿದೆ” ಎಂದು ಆಯೋಗ ಹೇಳಿದೆ.

    sbi bank
    ಸಾಂದರ್ಭಿಕ ಚಿತ್ರ

    ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಇತ್ತೀಚಿನ ದಾಖಲೆಗಳಲ್ಲಿ ಬಾಂಡ್‌ಗಳ ದಿನಾಂಕ, ಮುಖಬೆಲೆ, ಬಾಂಡ್‌ಗಳ ಸಂಖ್ಯೆ, ಭಾರತೀಯ ಸ್ಟೇಟ್‌ ಬ್ಯಾಂಗ್‌ ಶಾಖೆ, ರಶೀದಿ ಪಡೆದ ದಿನಾಂಕ ಮತ್ತು ಕ್ರೆಡಿಟ್‌ ದಿನಾಂಕದ ದಾಖಲೆಗಳನ್ನು ಮಾತ್ರ ತೋರಿಸುತ್ತದೆ.

    ಪಕ್ಷವಾರು ಬಾಂಡ್‌ಗಳ ಮಾಹಿತಿ:
    ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ (BSP), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಥವಾ ಸಿಪಿಐ(M) ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ನಾವು ಈ ಅವಧಿಯಲ್ಲಿ ಯಾವುದೇ ದೇಣಿಗೆ ಸ್ವೀಕರಿಸಿಲ್ಲ ಎಂದು ಹೇಳಿಕೊಂಡಿವೆ. ಜೊತೆಗೆ ತ್ರಿಪುರಾದ ಬಿಜೆಪಿ ಘಟಕ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕ ಸಹ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆ ಪಡೆದಿಲ್ಲ ಎಂಬುದಾಗಿ ಹೇಳಿಕೊಂಡಿವೆ.

    656 ಕೋಟಿ ದೇಣಿಗೆ ಪಡೆದಿರುವ ಡಿಎಂಕೆ:
    ತಮಿಳುನಾಡಿನ ಡಿಎಂಕೆ ಪಕ್ಷವು ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್ ಗೇಮಿಂಗ್‌ನಿಂದ 509 ಕೋಟಿ ರೂ. ಸೇರಿದಂತೆ ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು 656.5 ಕೋಟಿ ರೂ.ಗಳಷ್ಟು ದೇಣಿಗೆಯನ್ನು ಸ್ವೀಕರಿಸಿದೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್‌ನ ಗೋವಾ ಘಟಕವು ವಾಸ್ಕೋಡಗಾಮಾ ಮೂಲದ ವಿಎಂ ಸಲಗಾಂವ್ಕರ್ ಕಂಪನಿಯಿಂದ 30 ಲಕ್ಷ ರೂ. ದೇಣಿಗೆ ಪಡೆದಿರುವುದಾಗಿ ತಿಳಿಸಿದೆ.

    ಬಿಜೆಪಿಗೆ ಸಿಂಹಪಾಲು:
    ತೆಲಂಗಾಣದ ಬಿಆರ್‌ಎಸ್‌ ಪಕ್ಷವು 2018 ರಿಂದ 2019ರ ಅವಧಿಯಲ್ಲಿ 230.65 ಕೋಟಿ ರೂ.ಗಳ ದೇಣಿಗೆಯನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. ಇನ್ನೂ 2023ರ ಮಾರ್ಚ್‌ ವರೆಗೆ ಪಕ್ಷಗಳು ನಗದೀಕರಿಸಿದ ಎಲ್ಲಾ ಚುನಾವಣಾ ಬಾಂಡ್‌ಗಳಲ್ಲಿ ಬಿಜೆಪಿಯು ಶೇ48 ಕ್ಕಿಂತ ಸ್ವಲ್ಪ ಕಡಿಮೆ ಹಣವನ್ನು ಪಡೆದಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್‌ಗೆ ಶೇ.11 ರಷ್ಟು ಹಣ ಬಂದಿದೆ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ.

  • ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

    ಬಾಂಡ್‌ ಬರುವ ಮೊದಲು ಚುನಾವಣೆಗೆ ಫಂಡಿಂಗ್‌ ಹೇಗೆ ನಡೆಯುತ್ತಿತ್ತು – ದೇಶದ ಜನತೆಗೆ ಅಮಿತ್‌ ಶಾ ಪ್ರಶ್ನೆ

    – ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಯೋಜನೆ ಜಾರಿ
    – ಕಂಪನಿ, ಪಕ್ಷದ ಬ್ಯಾಲೆನ್ಸ್‌ ಶೀಟ್‌ನಲ್ಲಿ ವಿವರ ಉಲ್ಲೇಖ
    – ಯೋಜನೆ ರದ್ದುಗೊಂಡಿದ್ದರಿಂದ ಮತ್ತೆ ಕಪ್ಪು ಹಣ ಬರಲಿದೆ

    ನವದೆಹಲಿ: ಕಪ್ಪು ಹಣವನ್ನು (Black Money) ನಿರ್ಮೂಲನೆ ಮಾಡಲು ಚುನಾವಣಾ ಬಾಂಡ್‌ (Electoral Bonds) ಯೋಜನೆಯನ್ನು ಸರ್ಕಾರ ಜಾರಿ ಮಾಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

    ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

    ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಆದರೆ ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು ಕಪ್ಪುಹಣವನ್ನು ನಿರ್ಮೂಲನೆ ಮಾಡಲು  ಅದನ್ನು ಹೇಗೆ ಪರಿಚಯಿಸಲಾಗಿದೆ ಎಂಬುದರ ಕುರಿತು ಚರ್ಚಿಸಲು ನಾನು ಸಿದ್ಧ ಎಂದು ಅಮಿತ್ ಶಾ ಹೇಳಿದರು.

    ದೇಶದ ಜನರಲ್ಲಿ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಯೋಜನೆ ಜಾರಿಯಾಗುವ ಮೊದಲು ಚುನಾವಣೆಗೆ  ಫಂಡಿಂಗ್‌ ಹೇಗೆ ನಡೆಯುತ್ತಿತ್ತು?  ಪಕ್ಷಗಳಿಗೆ ನಗದು ಮೂಲಕ ದೇಣಿಗೆ ನೀಡಲಾಗುತ್ತಿತ್ತು. ಆದರೆ ಎಲ್ಲಿಯೂ ಯಾರು ಹಣ ನೀಡಿದ್ದಾರೆ ಎಂಬ ಮಾಹಿತಿ ಬರುತ್ತಿರಲಿಲ್ಲ. ಅದು ಕಪ್ಪು ಹಣ ಅಥವಾ ಬಿಳಿ ಹಣವೋ ಎಂದು ಕೇಳಿದರು. ಈ ಯೋಜನೆ ರದ್ದಾದರೆ ಮತ್ತೆ ಕಪ್ಪು ಹಣ ಬರಲಿದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಧರ್ಮಯುದ್ಧದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು: ಡಾ.ಮಂಜುನಾಥ್ 

    ಚುನಾವಣಾ ಬಂಡ್‌ ಯೋಜನೆ ಕಾರ್ಯಗತಗೊಂಡ ನಂತರ ಕಂಪನಿಗಳು ಅಥವಾ ವ್ಯಕ್ತಿಗಳು ಪಕ್ಷಗಳಿಗೆ ದೇಣಿಗೆಗಾಗಿ ಬಾಂಡ್ ಅನ್ನು ಖರೀದಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಚೆಕ್ ಅನ್ನು ಸಲ್ಲಿಸಬೇಕಾಗಿತ್ತು. ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಜಾರಿಗೊಳಿಸಿದ ನಂತರ ಗೌಪ್ಯತೆಗೆ ಅವಕಾಶವಿಲ್ಲ. ಪಕ್ಷಗಳು ಚುನಾವಣಾ ಬಾಂಡ್‌ ಮೂಲಕ ಪಡೆದ ಹಣದ ವಿವರವನ್ನು ಬಹಿರಂಗ ಪಡಿಸಬೇಕು ಮತ್ತು ಕಂಪನಿಗಳು ತಮ್ಮ ಬ್ಯಾಲೆನ್ಸ್‌ ಶೀಟ್‌ನಲ್ಲಿ ಎಷ್ಟು ಎಷ್ಟು ಬಾಂಡ್‌ ಪಡೆದಿದ್ದೇವೆ ಎಂಬುದನ್ನು ಉಲ್ಲೇಖಿಸುತ್ತವೆ. ಬಾಂಡ್‌ ಮೂಲಕ ಪಡೆದ ಹಣ ಕಪ್ಪು ಹಣ ಅಲ್ಲ ಎಂದು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡರು.

    ಬಿಜೆಪಿ ಅಧಿಕಾರದಲ್ಲಿರುವುದರಿಂದ ಚುನಾವಣಾ ಬಾಂಡ್‌ಗಳ ಯೋಜನೆಯಿಂದ ಲಾಭ ಪಡೆದಿದೆ ಎಂಬ ಗ್ರಹಿಕೆ ಇದೆ. ರಾಹುಲ್ ಗಾಂಧಿ ಕೂಡ ಇದು ವಿಶ್ವದ ಅತಿದೊಡ್ಡ ಸುಲಿಗೆ ದಂಧೆ ಎಂದು ಹೇಳಿದ್ದಾರೆ. ಅವರಿಗೆ ಈ ವಿಷಯಗಳನ್ನು ಯಾರು ಬರೆದುಕೊಡುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಅಮಿತ್ ಶಾ ಕುಟುಕಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಒಂದು ಮತ ಜಾಸ್ತಿ ಪಡೆದರೂ ರಾಜೀನಾಮೆ ಕೊಡ್ತೀರಾ? – ಪ್ರದೀಪ್‌ ಈಶ್ವರ್‌ಗೆ ಸುಧಾಕರ್‌ ಮರು ಸವಾಲ್‌!

    ಬಿಜೆಪಿ 6000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. ಎಲ್ಲಾ ಪಕ್ಷಗಳಿಗೆ ಒಟ್ಟು ಬಾಂಡ್‌ ಮೂಲಕ 20,000 ಕೋಟಿ ರೂ. ಬಂದಿದೆ. ಹಾಗಾದರೆ 14,000 ರೂ.ಗಳ ಬಾಂಡ್ ಎಲ್ಲಿ ಹೋಯಿತು ಎಂದು ಕೇಂದ್ರ ಗೃಹ ಸಚಿವರು ಪ್ರಶ್ನಿಸಿದರು.

     

    ಚುನಾವಣಾ ಬಾಂಡ್ ಯೋಜನೆ ಮೂಲಕ ಬಿಜೆಪಿ ಪಡೆದಿರುವ ಮೊತ್ತದ ಬಗ್ಗೆ ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು ವಿರೋಧ ಪಕ್ಷಗಳು ಪಡೆದಿರುವ ಮೊತ್ತವು ಲೋಕಸಭೆಯಲ್ಲಿ ಅವರು ಹೊಂದಿರುವ ಸ್ಥಾನಗಳ ಸಂಖ್ಯೆ ಮತ್ತು ಪಕ್ಷದ ಸದಸ್ಯರ ಸಂಖ್ಯೆಗೆ ಅಸಮಾನವಾಗಿದೆ. 303 ಸಂಸದರನ್ನು ಹೊಂದಿರುವ ಬಿಜೆಪಿ 6,000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ ಮೂಲಕ ಪಡೆದುಕೊಂಡಿದೆ. 242 ಸಂಸದರನ್ನು ಹೊಂದಿರುವ ವಿರೋಧ ಪಕ್ಷಗಳು 14,000 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿವೆ ಎಂದು ತಿಳಿಸಿದರು.

    ಕಾಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಗದು ವಹಿವಾಟಿನ ಮೂಲಕ 1100 ದೇಣಿಗೆ ನೀಡಿದಾಗ ಪಕ್ಷಕ್ಕೆ 100 ರೂ. ಠೇವಣಿ ಇಡಲಾಗುತ್ತಿತ್ತು. 1000 ರೂ.ಗಳನ್ನು ತಮ್ಮ ಮನೆಯಲ್ಲಿ ಇಡುತ್ತಿದ್ದರು. ಕಾಂಗ್ರೆಸ್ ಇದನ್ನು ವರ್ಷಗಳಿಂದ ಮಾಡಿಕೊಂಡು ಬಂದಿತ್ತು ಕಿಡಿಕಾರಿದರು.

  • 30 ಹಂತಗಳಲ್ಲಿ 16,518 ಕೋಟಿ ಮೌಲ್ಯದ ಚುನಾವಣಾ ಬಾಂಡ್: ಸುಪ್ರೀಂಕೋರ್ಟ್‍ಗೆ ಎಸ್‍ಬಿಐ ಅಫಿಡವಿಟ್

    30 ಹಂತಗಳಲ್ಲಿ 16,518 ಕೋಟಿ ಮೌಲ್ಯದ ಚುನಾವಣಾ ಬಾಂಡ್: ಸುಪ್ರೀಂಕೋರ್ಟ್‍ಗೆ ಎಸ್‍ಬಿಐ ಅಫಿಡವಿಟ್

    ನವದೆಹಲಿ: ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‍ಗಳ (Electoral Bonds) ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ (Election Commission of India) ನೀಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್‍ಗೆ (Supreme Court) ಎಸ್‍ಬಿಐ  (SBI) ಅಫಿಡವಿಟ್ ಸಲ್ಲಿಸಿದೆ. ಏ.1, 2019 ರಿಂದ ಫೆ.15, 2024ರ ಅವಧಿಯಲ್ಲಿ ಒಟ್ಟು 22,217 ಬಾಂಡ್‍ಗಳನ್ನು ಖರೀದಿಸಲಾಗಿದೆ, ಅವುಗಳಲ್ಲಿ 22,030 ಬಾಂಡ್‍ಗಳನ್ನು ರಿಡೀಮ್ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಎಸ್‍ಬಿಐ ತಿಳಿಸಿದೆ.

    ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಖಾರಾ ಅವರು ಈ ಮಾಹಿತಿಯೊಂದಿಗೆ ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಅಫಿಡವಿಟ್‍ನಲ್ಲಿ ಬಾಂಡ್ ಖರೀದಿಸಿದ ದಿನಾಂಕ, ಮುಖಬೆಲೆ ಮತ್ತು ಖರೀದಿದಾರರ ಹೆಸರನ್ನು ದಾಖಲಿಸಿದ ದಾಖಲೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಎನ್‍ಕ್ಯಾಶ್‍ಮೆಂಟ್ ದಿನಾಂಕ ಮತ್ತು ಎನ್‍ಕ್ಯಾಶ್ ಮಾಡಿದ ಬಾಂಡ್‍ಗಳ ಮುಖಬೆಲೆಯ ಮಾಹಿತಿಯನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಜಪಾನ್‌ ಖಾಸಗಿ ಉಪಗ್ರಹ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ

    ಮೂಲಗಳ ಪ್ರಕಾರ, ಎಸ್‍ಬಿಐ ನ್ಯಾಯಾಲಯದ ಆದೇಶಗಳನ್ನು ಪಾಲಿಸಿದೆ. ಚುನಾವಣಾ ಬಾಂಡ್‍ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. 2018ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಎಸ್‍ಬಿಐ 30 ಹಂತಗಳಲ್ಲಿ 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ.

    ಅನಾಮಧೇಯ ರಾಜಕೀಯ ನಿಧಿಯನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‍ಗಳ ಯೋಜನೆಯನ್ನು ಸುಪ್ರೀಂಕೋರ್ಟ್ ಈ ಹಿಂದೆ ರದ್ದುಗೊಳಿಸಿತ್ತು. ಇದನ್ನು ಅಸಂವಿಧಾನಿಕ ಎಂದು ಕರೆದು ಈವರೆಗೂ ನೀಡಿದ ದೇಣಿಗೆಯನ್ನು ಬಹಿರಂಗಪಡಿಸುವಂತೆ ಆದೇಶಿಸಿತು. ಎಸ್‍ಬಿಐ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ಕೋರಿತ್ತು. ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿ, ಮಂಗಳವಾರದ ಕೆಲಸದ ಸಮಯ ಮುಕ್ತಾಯ ಆಗುವುದರೊಳಗೆ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ತಿಳಿಸಿತ್ತು. ಇದನ್ನೂ ಓದಿ: 5,8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ – ಎಕ್ಸಾಂ ಮುಂದೂಡಿದ ಶಿಕ್ಷಣ ಇಲಾಖೆ

  • ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ

    ಚುನಾವಣಾ ಬಾಂಡ್ ರದ್ದು; ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದ ರಾಹುಲ್ ಗಾಂಧಿ

    ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bonds Scheme) ಯೋಜನೆ ಅಸಾಂವಿಧಾನಿಕ ಎಂಬ ಸುಪ್ರೀಂ ಕೋರ್ಟ್ (Supreme Court) ತೀರ್ಪಿಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಖುಷಿ ವ್ಯಕ್ತಪಡಿಸಿವೆ.

    ಮೋದಿ ಭ್ರಷ್ಟ ನೀತಿಗಳಿಗೆ ಮತ್ತೊಂದು ಉದಾಹರಣೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವ್ಯಾಖ್ಯಾನಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿಯವರ ಭ್ರಷ್ಟ ನೀತಿಗಳಿಗೆ ಇನ್ನೊಂದು ಸಾಕ್ಷಿ ನಿಮ್ಮ ಮುಂದಿದೆ. ಬಿಜೆಪಿ ಚುನಾವಣಾ ಬಾಂಡ್‌ಗಳನ್ನು ಲಂಚ ಮತ್ತು ಕಮಿಷನ್ ಪಡೆಯುವ ಮಾಧ್ಯಮವನ್ನಾಗಿ ಮಾಡಿಕೊಂಡಿತ್ತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ: ಸುಪ್ರೀಂ ಕೋರ್ಟ್‌

    ಇದು ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರಲಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಸಿಪಿಐಎಂ ಪಕ್ಷ ಇದರ ಕ್ರೆಡಿಟ್ ತೆಗೆದುಕೊಳ್ಳಲು ನೋಡಿದೆ. ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು ನಮ್ಮ ಪಕ್ಷ ಮಾತ್ರ.. ಅಲ್ಲದೇ, ನಾವು ಎಲೆಕ್ಷನ್ ಬಾಂಡ್ ಸ್ವೀಕರಿಸಿರಲಿಲ್ಲ ಎಂದಿದೆ.

    ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಅರ್ಜಿದಾರ ಪ್ರಶಾಂತ್ ಭೂಷಣ್ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮಾತ್ರ, ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಗೌರವಿಸುತ್ತೇವೆ. ಆದ್ರೆ, ಚುನಾವಣಾ ಬಾಂಡ್‌ಗಳ ಯೋಜನೆ ವಿಚಾರದಲ್ಲಿ ವಿಪಕ್ಷಗಳು ಸುಮ್ನೆ ರಾಜಕೀಯ ಮಾಡ್ತಿವೆ ಎಂದು ಆಪಾದಿಸಿದೆ. ಪ್ರಧಾನಿ ಮೋದಿಗೆ ಪರ್ಯಾಯವೇ ಇಲ್ಲ ಎನ್ನುವ ಮೂಲಕ ಮತ್ತೊಮ್ಮೆ ಮೋದಿ ಸರ್ಕಾರವೇ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

    ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

    ಚುನಾವಣಾ ಬಾಂಡ್‌ಗಳ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಸರ್ಕಾರ ಹಾಗೂ ಅರ್ಜಿದಾರರ ನಡುವಿನ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠವು ಕಳೆದ ನವೆಂಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.

  • 1 ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ BJPಗೆ 1,300 ಕೋಟಿ ರೂ. ಗಳಿಕೆ – ಹೆಲಿಕಾಪ್ಟರ್‌ ಬಳಕೆಗೆ 78.2 ಕೋಟಿ ರೂ. ಖರ್ಚು

    1 ವರ್ಷದಲ್ಲಿ ಚುನಾವಣಾ ಬಾಂಡ್‌ಗಳಿಂದ BJPಗೆ 1,300 ಕೋಟಿ ರೂ. ಗಳಿಕೆ – ಹೆಲಿಕಾಪ್ಟರ್‌ ಬಳಕೆಗೆ 78.2 ಕೋಟಿ ರೂ. ಖರ್ಚು

    ನವದೆಹಲಿ: ಆಡಳಿತಾರೂಢ ಬಿಜೆಪಿಯು (BJP) 2022-23ರ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ (Electoral Bonds) ಮೂಲಕ ಸರಿ ಸುಮಾರು 1,300 ಕೋಟಿ ರೂ.ಗಳನ್ನ ಸ್ವೀಕರಿಸಿದ್ದು, ಇದು ಕಾಂಗ್ರೆಸ್‌ಗಿಂತಲೂ 7 ಪಟ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗಕ್ಕೆ (Election Commission) ಸಲ್ಲಿಸಿದ ಪಕ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ.

    2021-2022ರಲ್ಲಿ ಪಕ್ಷದ ಒಟ್ಟು ಕೊಡುಗೆಗಳು 1,775 ಕೋಟಿ ರೂ.ಗಳಷ್ಟಿತ್ತು, 2022-23ರ ಹಣಕಾಸು ವರ್ಷದಲ್ಲಿ ಆಡಳಿತಾರೂಢ ಬಿಜೆಪಿಯ ಒಟ್ಟು ಕೊಡುಗೆಗಳು 2,120 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಶೇ.61 ರಷ್ಟು ಚುನಾವಣಾ ಬಾಂಡ್‌ಗಳಿಂದಲೇ ಬಂದಿದೆ. ಅಲ್ಲದೇ 2021-22ರಲ್ಲಿ ಬಡ್ಡಿಯಿಂದ 135 ಕೋಟಿ ರೂ.ಗಳಷ್ಟಿದ್ದ ಬಿಜೆಪಿ 2022-23 ಬಡ್ಡಿಯಿಂದ 237 ಕೋಟಿ ರೂ. ಗಳಿಸಿದೆ ಎಂದು ಪಕ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    2021-22ರ ಅವಧಿಯ ಹಣಕಾಸು ವರ್ಷದಲ್ಲಿ ಒಟ್ಟು ಆದಾಯ 1,917 ಕೋಟಿ ರೂ.ಗಳಷ್ಟಿತ್ತು. ಆದ್ರೆ 2022-23ರ ಅವಧಿಗೆ ಪಕ್ಷದ ಒಟ್ಟು ಆದಾಯವು 2,360.8 ಕೋಟಿ ರೂ.ಗಳಷ್ಟಾಗಿದೆ. ಆದ್ರೆ 2011-22ರ ಅವಧಿಯಲ್ಲಿ 236 ಕೋಟಿ ರೂ.‌ ಗಳಿಸಿದ್ದ ಕಾಂಗ್ರೆಸ್‌ 2022-23ರ ಅವಧಿಯಲ್ಲಿ 171 ಕೋಟಿ ರೂ.ಗಳಷ್ಟೇ ಗಳಿಸಿದೆ. ಇದನ್ನೂ ಓದಿ: ರೋಹಿತ್‌, ಗಿಲ್‌ ಅಲ್ಲ; ಟೀಂ ಇಂಡಿಯಾದ ಈ ಆಟಗಾರ ಇಂಗ್ಲೆಂಡ್‌ಗೆ ಸಮಸ್ಯೆ – ಮೈಕೆಲ್‌ ವಾನ್‌

    ಇನ್ನು ರಾಜ್ಯಪಕ್ಷವಾಗಿ ಮಾನ್ಯತೆ ಪಡೆದ ಸಮಾಜವಾದಿ ಪಕ್ಷವು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 3.2 ಕೋಟಿ ರೂ.ಗಳಷ್ಟಿತ್ತು. 2022-23ರಲ್ಲಿ 2022-23 ರಲ್ಲಿ, ಇದು ಈ ಬಾಂಡ್‌ಗಳಿಂದ ಯಾವುದೇ ಕೊಡುಗೆಗಳನ್ನು ಸ್ವೀಕರಿಸಲಿಲ್ಲ. ಟಿಡಿಪಿಯು 2022-23ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 34 ಕೋಟಿ ರೂ. ಗಳಿಸಿದ್ದು, ಹಿಂದಿನ ಹಣಕಾಸು ವರ್ಷಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಹೊಸ ವ್ಯಾಕ್ಸಿನ್ ತಯಾರಿಸಲು ಐಸಿಎಂಆರ್ ಒಪ್ಪಿಗೆ ಸೂಚಿಸಿದೆ: ದಿನೇಶ್ ಗುಂಡೂರಾವ್

    ಚುನಾವಣೆ ಮತ್ತು ಸಾಮಾನ್ಯ ಪ್ರಚಾರದ ಒಟ್ಟು ವೆಚ್ಚದಲ್ಲಿ ಬಿಜೆಪಿಯು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬಳಕೆಗೆ 78.2 ಕೋಟಿ ರೂ. ಪಾವತಿಸಿದೆ. 2021-22ರಲ್ಲಿ 117.4 ಕೋಟಿ ರೂ. ಪಾವತಿಸಿತ್ತು. ಪಕ್ಷದ ಅಭ್ಯರ್ಥಿಗಳಿಗೆ 76.5 ಕೋಟಿ ರೂ. ಹಣಕಾಸಿನ ನೆರವು ನೀಡಿದ್ದು, 2021-22ರಲ್ಲಿ 146.4 ಕೋಟಿ ರೂ. ಪಾವತಿಸಿತ್ತು. ಇದನ್ನೂ ಓದಿ:  ಕಾಂಗ್ರೆಸ್ ಹುಳುಕುಗಳು ಶ್ವೇತಪತ್ರದಲ್ಲಿ ಬಯಲು; ಯುಪಿಎ ಅವಧಿ ಕಿಕ್‌ಬ್ಯಾಕ್, ಹಗರಣಗಳ ಕಾಲ: ಅಶ್ವಥ್ ನಾರಾಯಣ್