– ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಅಂತಾ ಮೋದಿ ಚುನಾವಣಾ ಬಾಂಡ್ ತಂದ್ರು
ಚಿಕ್ಕಮಗಳೂರು: ಕಾಂಗ್ರೆಸ್‌ಗೆ ಚುನಾವಣಾ ಬಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ಳುತ್ತಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಕಿಡಿಕಾರಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮೇಲೆ ಕೇಸ್ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಚುನಾವಣಾ ಬಾಂಡ್ ವೈಯಕ್ತಿಕವಲ್ಲ, ಪಾರ್ಲಿಮೆಂಟ್‌ನಲ್ಲಿ ಪಾಸ್ ಮಾಡಿ, ಆಯೋಗದ ಗಮನಕ್ಕೂ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ; ತಾಯಿ ದರ್ಶನಕ್ಕೆ ನಿರ್ಬಂಧ
ರಾಜಕೀಯ ಪಕ್ಷಗಳಿಗೆ ನಿಧಿ ಸಂಗ್ರಹಿಸಲು ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಿದ್ದು, ಆಯಾ ಪಕ್ಷಗಳ ಸಾಮರ್ಥ್ಯ, ಬೆಂಬಲ, ಹಿತೈಷಿಗಳ ಅನುಗುಣವಾಗಿ ಚುನಾವಣಾ ಬಾಂಡ್ ಸಿಕ್ಕಿದೆ. ಕಾಂಗ್ರೆಸ್ಸಿಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು ಎಂದು ಟೀಕಿಸಿದರು.
ಮೋದಿ ಚುನಾವಣೆಯಲ್ಲೂ ಪಾರದರ್ಶಕತೆ ಇರಲಿ ಎಂದು ಚುನಾವಣಾ ಬಾಂಡ್ ತಂದ್ರು. ಪಾರದರ್ಶಕ ವ್ಯವಸ್ಥೆ ತಪ್ಪೋ… ಕದ್ದು ಸೂಟ್ಕೇಸ್ ತೆಗೆದೊಳ್ತಿದ್ದದ್ದು ತಪ್ಪೋ. ಕಾಂಗ್ರೆಸ್ ಕದ್ದು ಸೂಟ್‌ಕೇಸ್ ತೆಗೆದುಕೊಳ್ತಿರೋದು ಸರಿ, ಪಾರ್ದರ್ಶಕತೆ ತಪ್ಪು ಅಂತಿದೆ. ಪಾರದರ್ಶಕ ವ್ಯವಸ್ಥೆಯಲ್ಲಿ ಕದ್ದು ಯಾರಿಗೆ, ಯಾರು, ಎಷ್ಟು ಅನ್ನೋದು ಗೊತ್ತಾಗಬಾರದು ಅನ್ನೋದು ಕಾಂಗ್ರೆಸ್ ಉದ್ದೇಶ. ಇಂದು ಕಾಂಗ್ರೆಸ್ ಅಕ್ರಮಕ್ಕೆ ಪ್ರೋತ್ಸಾಹ ಕೊಡುವ ಮಾತನ್ನ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಶಂಕಿತ ಡೆಂಗ್ಯೂಗೆ 5 ವರ್ಷದ ಬಾಲಕ ಬಲಿ
ಪಾರದರ್ಶಕ, ಪ್ರಾಮಾಣಿಕತೆ ಹುಟ್ಟು ಹಾಕಿದವರ ಮೇಲೆ ಕೇಸ್ ದಾಖಲಿಸಿದೆ. ತೊಂದರೆ ಇಲ್ಲ, ಇವೆಲ್ಲವನ್ನೂ ನಾವು ಎದುರಿಸುತ್ತೇವೆ. ಮುಡಾ ಪ್ರಕರಣಕ್ಕೂ ಅದಕ್ಕೂ ಹೋಲಿಕೆ ಮಾಡಬಾರದು. ಮುಡಾ ವ್ಯಕ್ತಿಗತ ಸ್ವಾರ್ಥದಿಂದ, ಡಿನೋಟಿಫೈ, ಕನ್ವರ್ಷನ್‌ನಿಂದ ನಿವೇಶನ ಪಡೆಯೋವರೆಗೂ ಸ್ವಹಿತಾಸಕ್ತಿ ಇದೆ ಎಂದು ತರಾಟೆಗೆ ತೆಗೆದುಕೊಂಡರು.
ನವದೆಹಲಿ: ಚುನಾವಣೆಗಳಲ್ಲಿ ಕಪ್ಪು ಹಣ ನಿಗ್ರಹವೇ ಚುನಾವಣಾ ಬಾಂಡ್ ಉದ್ದೇಶವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ ಚುನಾವಣಾ ಬಾಂಡ್ (Electoral Bond) ಅನ್ನು ಸಮರ್ಥಿಸಿಕೊಂಡರು. ವಿಪಕ್ಷಗಳು ಚುನಾವಣೆಯಲ್ಲಿ ಸೋಲುತ್ತವೆ. ಅದನ್ನು ಮರೆಮಾಚಲು ಇವಿಎಂ (EVM) ಮೇಲೆ ಅನುಮಾನ ವ್ಯಕ್ತಪಡಿಸುತ್ತವೆ ಅಂತ ಕಿಡಿಕಾರಿದರು.
ಚುನಾವಣಾ ಬಾಂಡ್ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದ ಅವರು, ಈ ವಿಷಯದಲ್ಲಿ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತವಾದಾಗ ಎಲ್ಲರೂ ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಯೋಜನೆ ಅಸಂವಿಧಾನಿಕ: ಸುಪ್ರೀಂ ಕೋರ್ಟ್
ಚುನಾವಣೆಯಲ್ಲಿ ಹಣ ಖರ್ಚಾಗುತ್ತದೆ. ಕಪ್ಪು ಹಣ (Black Money) ಚುನಾವಣೆಯಲ್ಲಿ ದೊಡ್ಡ ಶಕ್ತಿಯಾಗಿದೆ. ಈ ಕಪ್ಪು ಹಣದಿಂದ ಚುನಾವಣೆ ಮುಕ್ತ ಮಾಡಬಹುದು ಎಂದು ಯೋಚಿಸಿದ್ದೆ. ಆಗ ಚುನಾವಣಾ ಬಾಂಡ್ ಚಿಂತನೆ ಬಂತು. ನಗದು ಹಣದ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಬಾಂಡ್ ವ್ಯವಸ್ಥೆ ಜಾರಿ ಮಾಡಲಾಯಿತು. ಮಾಹಿತಿ ಬಹಿರಂಗಗೊಳಿಸದಿರಲು ಹಲವು ಕಾರಣಗಳಿದೆ. ಯಾರು ಯಾರಿಗೆ ಹಣ ನೀಡಿದರು ಎಂದು ಗೊತ್ತಾದ್ರೆ ರಾಜಕೀಯ ಪಕ್ಷಗಳು ಸಮಸ್ಯೆ ಮಾಡಬಹುದು. ಅಥವಾ ಜನರು ಹಣ ಕೊಡಲು ಮುಂದೆ ಬಾರದಿರಬಹುದು. ಬಾಂಡ್ ನಿಂದ ಹಣ ಎಲ್ಲಿಂದ ಬಂತು ಲೆಕ್ಕ ಸಿಗುತ್ತದೆ ಎಂದರು.
3, 000 ಕಂಪನಿ ಬಾಂಡ್ ನೀಡಿದೆ. ಅದರಲ್ಲಿ 26 ಕಂಪನಿಗಳ ವಿರುದ್ಧ ಇಡಿ ತನಿಖೆ ನಡೆಯುತ್ತಿದೆ. ಈ 26 ಕಂಪನಿಗಳಲ್ಲಿ 16 ಕಂಪನಿಗಳು ದಾಳಿ ಸಮಯದಲ್ಲಿ ಬಾಂಡ್ ಖರೀದಿಸಿವೆ. ಈ ಬಾಂಡ್ ನಲ್ಲಿ 37% ಹಣ ಬಿಜೆಪಿಗೆ ಬಂದಿದೆ, 63% ರಷ್ಟು ಹಣ ವಿರೋಧ ಪಕ್ಷಗಳಿಗೆ ಹೋಗಿದೆ. ಆದರೆ ಆರೋಪ ನಮ್ಮ ಮೇಲೆ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಹೊಸ ದತ್ತಾಂಶ ರಿಲೀಸ್ – ಅತಿಹೆಚ್ಚು ದೇಣಿಗೆ ಪಡೆದ ಪಕ್ಷ ಯಾವುದು?
ನವದೆಹಲಿ: ಚುನಾವಣಾ ಬಾಂಡ್ (Electoral Bond) ಖರೀದಿ ಮಾಡುವ ಮೂಲಕ, ರಾಜಕೀಯ ಪಕ್ಷಗಳಿಗೆ ಹೆಚ್ಚಿನ ದೇಣಿಗೆ ನೀಡಿದ್ದ ಮೇಘಾ ಎಂಜಿನಿಯರಿಂಗ್ ಮತ್ತು ಇನ್‍ಫ್ರಾಸ್ಟ್ರಕ್ಚರ್ (Megha Engineering) ಕಂಪನಿಯ ವಿರುದ್ಧ ಸಿಬಿಐ (CBI) ಎಫ್‍ಐಆರ್ ದಾಖಲಿಸಿದೆ.
ಎನ್‍ಐಎಸ್‍ಪಿಗಾಗಿ 315 ಕೋಟಿ ರೂ. ಯೋಜನೆಯ ಅನುಷ್ಠಾನದಲ್ಲಿ ಭ್ರಷ್ಟಾಚಾರ (Corruption) ನಡೆದಿದೆ ಎಂಬ ದೂರಿನ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ. ಉಕ್ಕಿನ ಸಚಿವಾಲಯದ ಎನ್‍ಎಂಡಿಸಿ ಕಬ್ಬಿಣ ಮತ್ತು ಉಕ್ಕು ಸ್ಥಾವರದ 8 ಅಧಿಕಾರಿಗಳು ಸೇರಿದಂತೆ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್
ಆರೋಪವೇನು?
ಇಂಟೇಕ್ ವೆಲ್ ಮತ್ತು ಪಂಪ್ ಹೌಸ್ ಮತ್ತು ಕ್ರಾಸ್ ಕಂಟ್ರಿ ಪೈಪ್‍ಲೈನ್ ಕಾಮಗಾರಿಗೆ ಸಂಬಂಧಿಸಿದ 315 ಕೋಟಿ ರೂ. ಯೋಜನೆಯಲ್ಲಿ ಲಂಚದ ಆರೋಪದ ಬಗ್ಗೆ ಸಿಬಿಐ ಆಗಸ್ಟ್ 10, 2023 ಪ್ರಾಥಮಿಕ ತನಿಖೆ ನಡೆಸಿತ್ತು. ಇದರ ಆಧಾರದ ಮೇಲೆ ಮಾರ್ಚ್ 31 ರಂದು ದಾಖಲಾಗಿರುವ ಲಂಚದ ಪ್ರಕರಣವನ್ನು ದಾಖಲಿಸಲು ಮಾರ್ಚ್ 18 ರಂದು ಶಿಫಾರಸು ಮಾಡಲಾಗಿತ್ತು.
ಯಾರ ಮೇಲೆ ಎಫ್‍ಐಆರ್?
ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ದಾಶ್, ನಿರ್ದೇಶಕ (ಉತ್ಪಾದನೆ) ಡಿಕೆ ಮೊಹಾಂತಿ, ಡಿಜಿಎಂ ಪಿಕೆ ಭುಯಾನ್, ಡಿಎಂ ನರೇಶ್ ಬಾಬು, ಹಿರಿಯ ವ್ಯವಸ್ಥಾಪಕ ಸುಬ್ರೊ ಬ್ಯಾನರ್ಜಿ, ನಿವೃತ್ತ ಸಿಜಿಎಂ (ಹಣಕಾಸು) ಎಲ್ ಕೃಷ್ಣ ಮೋಹನ್, ಜಿಎಂ (ಹಣಕಾಸು) ಕೆ ರಾಜಶೇಖರ್, ವ್ಯವಸ್ಥಾಪಕ (ಹಣಕಾಸು) ಸೋಮನಾಥ್ ಘೋಷ್, ಎಲ್ಲಾ ಸೇರಿ 73.85 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಚಂದ್ರ ಮತ್ತು ಮೇಘಾ ಇಂಜಿನಿಯರಿಂಗ್‍ನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಮೇಘಾಗೆ ಎರಡನೇ ಸ್ಥಾನ
ಇತ್ತೀಚೆಗೆ ಚುನಾವಣಾ ಬಾಂಡ್‍ಗಳ ಖರೀದಿಯಲ್ಲಿ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎರಡನೇ ಅತಿ ಹೆಚ್ಚು ಖರೀದಿದಾರ ಎಂಬ ಮಾಹಿತಿ ಹೊರ ಬಿದ್ದಿತ್ತು. 2019 ಮತ್ತು 2023ರ ನಡುವೆ ಬಾಂಡ್‍ಗಳನ್ನು ಖರೀದಿಸಿದ ಸಮಯದಲ್ಲಿ ಐದು ಪ್ರಮುಖ ಯೋಜನೆಗಳನ್ನು ಪಡೆದುಕೊಂಡಿದೆ. ಈ ಬಗ್ಗೆ ಬಿಜೆಪಿಗೆ ಹಣ ನೀಡಿದ್ದಕ್ಕಾಗಿ ಕಂಪನಿಗೆ ಹಲವು ಯೋಜನೆಗಳ ಗುತ್ತಿಗೆ ನೀಡಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಕಂಪನಿಯ ಒಟ್ಟು 966 ಕೋಟಿ ರೂ. ಚುನಾವಣಾ ಬಾಂಡ್ ಖರೀದಿಯಲ್ಲಿ 584 ಕೋಟಿ ರೂ. ಬಿಜೆಪಿ ಪಾಲಾಗಿದೆ. ಬಿಆರ್‍ಎಸ್ 195 ಕೋಟಿ ರೂ., ಡಿಎನ್‍ಕೆ 85 ಕೋಟಿ ರೂ. ಪಡೆದುಕೊಂಡಿದೆ. ಕಂಪನಿಯ ಬಾಂಡ್‍ಗಳನ್ನು ರಿಡೀಮ್ ಮಾಡಿದ ಇತರರಲ್ಲಿ ವೈಎಸ್‍ಆರ್ ಕಾಂಗ್ರೆಸ್, ತೆಲುಗು ದೇಶಂ, ಕಾಂಗ್ರೆಸ್, ಜನತಾ ದಳ (ಯುನೈಟೆಡ್), ಜನತಾ ದಳ (ಜಾತ್ಯತೀತ) ಮತ್ತು ಜನ ಸೇನಾ ಪಕ್ಷ ಸೇರಿದೆ. ಇದನ್ನೂ ಓದಿ: `ಹೆಲ್ತ್ ಡ್ರಿಂಕ್ಸ್’ ವರ್ಗದಿಂದ ಬೋರ್ನ್‍ವಿಟಾವನ್ನು ತೆಗೆದುಹಾಕಿ: ಕೇಂದ್ರದಿಂದ ಮಹತ್ವದ ಆದೇಶ
ನವದೆಹಲಿ : ಚುನಾವಣಾ ಬಾಂಡ್‌ಗಳ (Electoral Bond) ಬಗ್ಗೆ ಪೂರ್ಣ ಪ್ರಮಾಣ ಮಾಹಿತಿ ನೀಡದ ಎಸ್‌ಬಿಐ(SBI) ಅನ್ನು ಮತ್ತೆ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ (Supreme Court) ಯುನಿಕ್ ಆಲ್ಫಾನ್ಯೂಮರಿಕ್ ಸಂಖ್ಯೆ ಮತ್ತು ರಿಡೀಮ್ ಮಾಡಿದ ಬಾಂಡ್‌ಗಳ ಸೀರಿಯಲ್ ನಂಬರ್ ಸೇರಿದಂತೆ ಚುನಾವಣಾ ಬಾಂಡ್‌ಗಳ ಅಗತ್ಯ ಎಲ್ಲಾ ವಿವರಗಳನ್ನು ಗುರುವಾರ ಸಂಜೆ 5 ಗಂಟೆಯೊಳಗೆ ಬಹಿರಂಗಪಡಿಸುವಂತೆ ನಿರ್ದೇಶನ ನೀಡಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ಸಾಂವಿಧಾನಿಕ ಪೀಠ, ಎಸ್‌ಬಿಐನಿಂದ ಮಾಹಿತಿ ಪಡೆದ ತಕ್ಷಣ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ವಿವರಗಳನ್ನು ಅಪ್‌ಲೋಡ್ ಮಾಡಬೇಕು, ಎಲ್ಲ ಪ್ರಕ್ರಿಯೆ ಬಳಿಕ ಎಸ್‌ಬಿಐ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿದೆ.
ಮಾಹಿತಿ ನಿಷ್ಪಕ್ಷಪಾತವಾಗಿರಬೇಕು, ಯಾವ ಮಾಹಿತಿಯೂ ಮುಚ್ಚಿಟ್ಟಲ್ಲ ಎಂದು ಖಚಿತಪಡಿಸಿಕೊಳ್ಳಬೇಕು, ನೀವು ರಾಜಕೀಯ ಪಕ್ಷಕ್ಕಾಗಿ ನ್ಯಾಯಲಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ನಾವು ಭಾವಿಸುತ್ತೇವೆ. ಪ್ರತಿಯೊಂದು ಸಂಭಾವ್ಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಸ್ಪಷ್ಟಪಡಿಸಿದರು.
ಚುನಾವಣಾ ಬಾಂಡ್ ಸಂಖ್ಯೆಯನ್ನು ಬಹಿರಂಗಪಡಿಸದೆ ಆ ಮೂಲಕ ತನ್ನ ಹಿಂದಿನ ತೀರ್ಪನ್ನು ಸಂಪೂರ್ಣವಾಗಿ ಅನುಸರಿಸದಿದ್ದಕ್ಕಾಗಿ ಎಸ್‌ಬಿಐ ಅನ್ನು ಸುಪ್ರೀಂಕೋರ್ಟ್ ಈ ಹಿಂದೆಯೂ ತರಾಟೆಗೆ ತೆಗೆದುಕೊಂಡಿತ್ತು. ದಾನಿಗಳನ್ನು ಸ್ವೀಕರಿಸುವವರಿಗೆ ಲಿಂಕ್ ಮಾಡುವ ಚುನಾವಣಾ ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸಬೇಕು ಎಂದು ಉನ್ನತ ನ್ಯಾಯಾಲಯವು ಹೇಳಿತ್ತು.
ವಿಚಾರಣೆ ವೇಳೆ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿದ ತೀರ್ಪನ್ನು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಕೇಂದ್ರ ಸರ್ಕಾರದ ಕಳವಳ ವ್ಯಕ್ತಪಡಿಸಿತು. ರಾಜಕೀಯ ಪಕ್ಷಗಳು ಖರೀದಿಸಿರುವ ಚುನಾವಣಾ ಬಾಂಡ್‌ಗಳ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ತಿರುಚಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಡಿವೈ ಚಂದ್ರಚೂಡ್, ನಮ್ಮ ತೀರ್ಪುಗಳನ್ನು ಮೂರನೇ ವ್ಯಕ್ತಿಗಳು ಹೇಗೆ ಅರ್ಥೈಸುತ್ತಾರೆ ಎಂಬುದರ ಬಗ್ಗೆ ಕಾಳಜಿಯಿಲ್ಲ, ನ್ಯಾಯಾಧೀಶರಾಗಿ ನಾವು ಕೇವಲ ಕಾನೂನಿನ ನಿಯಮದಲ್ಲಿದ್ದೇವೆ ಮತ್ತು ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ. ನ್ಯಾಯಾಲಯವು ಈ ರಾಜಕೀಯದಲ್ಲಿ ಕಾನೂನಿನ ಆಡಳಿತಕ್ಕಾಗಿ ಮಾತ್ರ ಕೆಲಸ ಮಾಡುವುದು. ನಾವು ತೀರ್ಪಿನ ಪ್ಯಾರಾ ಬಿ ಮತ್ತು ಸಿ ಯಲ್ಲಿ ಮಾತ್ರ ನಮ್ಮ ನಿರ್ದೇಶನಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.
ನವದೆಹಲಿ: ಕೇಂದ್ರ ಚುನಾವಣಾ ಆಯೋಗದೊಂದಿಗೆ (Election Commission Of India) ಚುನಾವಣಾ ಬಾಂಡ್‌ಗಳ ಅಸಮರ್ಪಕ ಮಾಹಿತಿ ಹಂಚಿಕೊಂಡ ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು (SBI) ಸುಪ್ರೀಂ ಕೋರ್ಟ್ (Supreme Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಯಾರು ಯಾರಿಗೆ ಚುನಾವಣಾ ಬಾಂಡ್ (Electoral Bonds) ನೀಡಿದರು ಎನ್ನುವುದರ ಜೊತೆಗೆ ಯಾವ ದಿನಾಂಕದಂದು ನೀಡಿದರು ಮತ್ತು ಬಾಂಡ್‌ನ ಸೀರಿಯಲ್ ಸಂಖ್ಯೆ ಏನು ಎನ್ನುವುದನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ, ಮಾರ್ಚ್ 11ರ ನ್ಯಾಯಾಲಯದ ಆದೇಶವನ್ನು ಎಸ್‌ಬಿಐ ಸಂಪೂರ್ಣವಾಗಿ ಪಾಲಿಸಿಲ್ಲ. ಚುನಾವಣಾ ಬಾಂಡ್‌ಗಳ ಖರೀದಿ ದಿನಾಂಕ, ಖರೀದಿದಾರರ ಹೆಸರು, ಮುಖಬೆಲೆ ಸೇರಿದಂತೆ ಎಲ್ಲಾ ವಿವರಗಳನ್ನು ನೀಡಲು ಸೂಚಿಸಿತ್ತು. ಆದರೆ ಎಸ್‌ಬಿಐ ಚುನಾವಣಾ ಬಾಂಡ್ ಸಂಖ್ಯೆಗಳನ್ನು (ಆಲ್ಫಾ ನ್ಯೂಮರಿಕ್ ಸಂಖ್ಯೆಗಳು) ಬಹಿರಂಗಪಡಿಸಿಲ್ಲ. ಈ ಹಿನ್ನೆಲೆ ನಾವು ನೋಟಿಸ್‌ಗೆ ನಿರ್ದೇಶನ ನೀಡುತ್ತೇವೆ ಎಂದು ಹೇಳಿದೆ. ಇದನ್ನೂ ಓದಿ: ನಾಳೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ
ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಎಸ್‌ಬಿಐ ತಮ್ಮ ಬಳಿ ಲಭ್ಯವಿರುವ ಎಲ್ಲಾ ವಿವರಗಳನ್ನು ಒದಗಿಸುವ ಅಗತ್ಯವಿರುವ ಅಂತರ್ಗತ ಆದೇಶವಾಗಿದೆ ಎಂದು ಉನ್ನತ ನ್ಯಾಯಾಲಯದ ತೀರ್ಪು ಗಮನಸೆಳೆದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಸ್‌ಬಿಐಗೆ ಪ್ರತಿಕ್ರಿಯೆ ನೀಡಲು ಸಮಯ ಕೋರಿದರು. ಇದನ್ನೂ ಓದಿ: ಚುನಾವಣಾ ಆಯುಕ್ತರಾಗಿ ನೇಮಕ; ಜ್ಞಾನೇಶ್ ಕುಮಾರ್, ಸುಖ್ಬೀರ್ ಸಿಂಗ್ ಅಧಿಕಾರ ಸ್ವೀಕಾರ
ಕಳೆದ ತಿಂಗಳು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಏಪ್ರಿಲ್ 12, 2019 ರಿಂದ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆಗಳನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಮಾರ್ಚ್ 6ರರೊಳಗೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶಿಸಿತ್ತು. ಆದರೆ ಎಸ್‌ಬಿಐ ಗಡುವಿನ ವಿಸ್ತರಣೆಯನ್ನು ಕೋರಿ ಅರ್ಜಿ ಸಲ್ಲಿಸಿತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಎಸ್‌ಬಿಐ ಮಾಡಿದ ವಿನಂತಿಯನ್ನು ತಿರಸ್ಕರಿಸಿತು. ಇದನ್ನೂ ಓದಿ: ರಷ್ಯಾ ಅಧ್ಯಕ್ಷೀಯ ಚುನಾವಣೆ – ಕೇರಳದಲ್ಲಿ ಮತದಾನ
ಖರೀದಿದಾರರ ಹೆಸರು, ಚುನಾವಣಾ ಬಾಂಡ್‌ಗಳ ನಾಮನಿರ್ದೇಶನ, ನಗದೀಕರಣದ ದಿನಾಂಕ ಸೇರಿದಂತೆ ರಾಜಕೀಯ ಪಕ್ಷಗಳು ರಿಡೀಮ್ ಮಾಡಿದ ಪ್ರತಿ, ಚುನಾವಣಾ ಬಾಂಡ್‌ನ ವಿವರಗಳನ್ನು ಮಾರ್ಚ್ 12ರೊಳಗೆ ನೀಡಬೇಕು ಎಂದು ಸೂಚಿಸಿತು. ಕೋರ್ಟ್ ಸೂಚನೆ ಹಿನ್ನೆಲೆ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಸಲ್ಲಿಕೆಯಾದ ಮಾಹಿತಿ ಸದ್ಯ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದೆ. ಇದನ್ನೂ ಓದಿ: ಚುನಾವಣಾ ಬಾಂಡ್ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ
ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) ಕಟ್ಟುನಿಟ್ಟಿನ ಆದೇಶದ ಬಳಿಕ ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳವಾರ (ಮಾ.12) ಸಂಜೆಯೇ ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‌ಗಳ (Electoral Bond) ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಈ ದತ್ತಾಂಶ ಸ್ವೀಕೃತಿಯನ್ನು ಚುನಾವಣಾ ಸಮಿತಿಯಿಂದ ಸ್ವೀಕೃತವಾದ ದತ್ತಾಂಶದೊಂದಿಗೆ ಒಗ್ಗೂಡಿಸಿ ಶುಕ್ರವಾರ ಸಂಜೆ 5 ಗಂಟೆಯೊಳಗೆ ಬಿಡುಗಡೆ ಮಾಡಲಾಗುತ್ತದೆ.
ಎಸ್‌ಬಿಐ ಮನವಿ ಏನಿತ್ತು? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಚುನಾವಣಾ ಬಾಂಡ್‌ಗಳ ಮಾಹಿತಿ ನೀಡಲು ಜೂನ್ 30ರ ವರೆಗೆ ವರೆಗೂ ಕಾಲವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಹೆಚ್ಚುವರಿ ಕಾಲಮಿತಿ ನೀಡಲು ಸಾಧ್ಯವಿಲ್ಲ ಮಂಗಳವಾರ ಸಂಜೆಯೊಳಗೆ ಅಗತ್ಯ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗದ ಜೊತೆಗೆ ಹಂಚಿಕೊಳ್ಳಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚಿಸಿತ್ತು.
ಮಾರ್ಚ್ 6ರ ಒಳಗೆ ಮಾಹಿತಿ ನೀಡುವಂತೆ ಈ ಹಿಂದೆ ಸಾಂವಿಧಾನಿಕ ಪೀಠ ಆದೇಶ ನೀಡಿದ ಹಿನ್ನಲೆ ಹೆಚ್ಚುವರಿ ಸಮಯ ಕೋರಿ ಎಸ್‌ಬಿಐ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿತ್ತು. ಬ್ಯಾಂಕ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಇದನ್ನೂ ಓದಿ: ಭಾನುವಾರವೂ ಓಪನ್ ಇರುತ್ತೆ ಆಯ್ದ ಸಬ್‌ರಿಜಿಸ್ಟ್ರಾರ್ ಕಚೇರಿಗಳು – ಬೆಂಗಳೂರಿನಲ್ಲಿ ಆರಂಭ
ಈ ಹಿಂದೆ ನೀಡಿದ್ದ ಆದೇಶವನ್ನು ಅನುಸರಿಸಲು ನಮಗೆ ಸ್ವಲ್ಪ ಸಮಯ ಬೇಕಾಗುತ್ತದೆ, ನಾವು ಬಾಂಡ್ ನೀಡಿದ ಮಾಹಿತಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕಿದೆ. ಇದು ರಹಸ್ಯ ಮಾಹಿತಿಯಾದ ಹಿನ್ನೆಲೆಯಲ್ಲಿ ನಾವು ಕೊಡುಗೆದಾರರ ಮಾಹಿತಿ ಮತ್ತು ಬಾಂಡ್ ಸಂಖ್ಯೆಯನ್ನು ದತ್ತಾಂಶವಾಗಿ ಶೇಖರಿಸಿಲ್ಲ ಈ ಮಾಹಿತಿ ಸಂಗ್ರಹಿಸಲು ಸಮಯ ಬೇಕು ಎಂದು ವಕೀಲರು ಎಸ್‌ಬಿಐ ಪರ ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿದ ಸಿಜೆಐ ಡಿ.ವೈ ಚಂದ್ರಚೂಡ್, ದಾನಿಗಳ ವಿವರಗಳನ್ನು ಗೊತ್ತುಪಡಿಸಿದ ಶಾಖೆಯಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ. ಅದು ಮುಂಬೈನಲ್ಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ರಾಜಕೀಯ ಪಕ್ಷಗಳು ಯಾವುದೇ ಶಾಖೆಗಳಲ್ಲಿ ಖಾತೆಯನ್ನು ನಿರ್ವಹಿಸಿದರು ಚುನಾವಣಾ ಬಾಂಡ್‌ಗಳನ್ನು ಮುಂಬೈ ಶಾಖೆಗೆ ಮಾತ್ರ ಠೇವಣಿ ಇಡಬಹುದು ಎಂದು ಹೇಳಿದೆ. ಎಲ್ಲಾ ಮಾಹಿತಿ ಈಗಾಗಲೇ ಮುಂಬೈ ಶಾಖೆಗೆ ಬಂದಿವೆ ಮಾಹಿತಿ ನೀಡಲು ಏನು ಸಮಸ್ಯೆ? ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: Lok Sabha 2024: ‘ಕೈ’, ಕಮಲ ಪಾಳಯದಲ್ಲಿ ಟಿಕೆಟ್ ಫೈಟ್ – ಈ ಸಲ ಯಾರ ಪಾಲಾಗುತ್ತೆ ಚಿಕ್ಕಬಳ್ಳಾಪುರ?
ಪ್ರತಿ ಖರೀದಿಗೆ ಪ್ರತ್ಯೇಕ ಕೆವೈಸಿ ಇರಬೇಕು ಎಂದು ಎಫ್‌ಎಕ್ಯೂಗಳು (Frequently Asked Questions) ಸೂಚಿಸಿವೆ. ಆದ್ದರಿಂದ ನೀವು ಈಗಾಗಲೇ ವಿವರಗಳನ್ನು ಹೊಂದಿದ್ದೀರಿ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನೀವು ಮುಚ್ಚಿದ ಕವರ್ ಅನ್ನು ತೆರೆಯಬೇಕು, ವಿವರಗಳನ್ನು ಒಟ್ಟುಗೂಡಿಸಿ ಮತ್ತು ಮಾಹಿತಿಯನ್ನು ನೀಡಬೇಕು, ಇದಕ್ಕೆ ಹೆಚ್ಚಿನ ಸಮಯ ಯಾಕೆ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ್ದ ಸಾಳ್ವೆ, ಬಾಂಡ್ ಅನ್ನು ಯಾರು ಖರೀದಿಸಿದ್ದಾರೆ? ಎಂಬುದರ ಕುರಿತು ನಮ್ಮ ಬಳಿ ಸಂಪೂರ್ಣ ವಿವರಗಳಿವೆ ಮತ್ತು ಹಣ ಎಲ್ಲಿಂದ ಬಂತು ಮತ್ತು ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಹಣ ಜಮೆಯಾಗಿದೆ ಎಂಬ ಸಂಪೂರ್ಣ ವಿವರ ನನ್ನ ಬಳಿ ಇದೆ. ಹೆಸರುಗಳನ್ನು ಕ್ರೋಢೀಕರಿಸಬೇಕು, ಬಾಂಡ್ ಸಂಖ್ಯೆಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು, ಫಾರ್ಮ್ ಟು ಫಾರ್ಮ್ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಇನ್ನೂ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ನಾನು ತಪ್ಪು ಮಾಡಲು ಸಾಧ್ಯವಿಲ್ಲ, ತಪ್ಪು ಮಾಡಿದ್ದಲ್ಲಿ ದಾನಿಗಳಿಂದ ನನ್ನ ಮೇಲೆ ಮೊಕದ್ದಮೆ ಹೂಡುವ ಸಾಧ್ಯತೆಗಳಿದೆ, ಕನಿಷ್ಠ ಮಾಹಿತಿ ನೀಡಲು 2-3 ವಾರಗಳ ಸಮಯ ಬೇಕು ಎಂದರು.
ವಾದ ಆಲಿಸಿದ ಬಳಿಕ ತೀರ್ಪು ನೀಡಿದ ಸಿಜೆಐ ಡಿ.ವೈ ಚಂದ್ರಚೂಡ್, ಫೆಬ್ರವರಿ 15, 2024ರ ತೀರ್ಪಿನ ಮೂಲಕ, ಈ ನ್ಯಾಯಾಲಯವು ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು RPA 1951 ಮತ್ತು ಆದಾಯ ತೆರಿಗೆ ಕಾಯ್ದೆ-1961 ಅನ್ನು ತಿದ್ದುಪಡಿ ಮಾಡಿದ ಹಣಕಾಸು ಕಾಯ್ದೆ-2017ರ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿತ್ತು. ಆರ್ಟಿಕಲ್ 19(1)(ಎ) ಅಡಿಯಲ್ಲಿ ನಾಗರಿಕರ ಮಾಹಿತಿ ಹಕ್ಕು ಉಲ್ಲಂಘನೆಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ಅನಿಯಮಿತ ಧನಸಹಾಯವನ್ನು ಅನುಮತಿಸುವ ಹಣಕಾಸು ಕಾಯ್ದೆ 2017ರ ಮೂಲಕ ಪರಿಚಯಿಸಲಾದ ತಿದ್ದುಪಡಿಗಳು ಆರ್ಟಿಕಲ್ 14ರ ಉಲ್ಲಂಘನೆಯಾಗಿದೆ. ಏಪ್ರಿಲ್ 12 ವರೆಗಿನ ದಾಖಲೆಗಳನ್ನು ನೀಡಲು ಆದೇಶಿಸಿತ್ತು. ಮಾಹಿತಿ ಕೇಳಲು ಬ್ಯಾಂಕ್ ಹೆಚ್ಚುವರಿ ಸಮಯ ಕೇಳಿದೆ. ದಾಖಲೆಗಳ ಲಭ್ಯತೆ ಹಿನ್ನೆಲೆ ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ, ಮಂಗಳವಾರ ಸಂಜೆಯೊಳಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿತ್ತು.
ನವದೆಹಲಿ: ರಾಜಕೀಯ ಪಕ್ಷಗಳಿಗೆ ನೀಡಿದ ಚುನಾವಣಾ ಬಾಂಡ್‌ಗಳ ಮಾಹಿತಿ ನೀಡಲು ಜೂನ್ 30 ವರೆಗೂ ಕಾಲವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ. ಹೆಚ್ಚುವರಿ ಮಾಹಿತಿ ನೀಡಲು ಸಾಧ್ಯವಿಲ್ಲ ಮಂಗಳವಾರ ಸಂಜೆಯೊಳಗೆ ಅಗತ್ಯ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗದ ಜೊತೆಗೆ ಹಂಚಿಕೊಳ್ಳಬೇಕು ಎಂದು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚನೆ ನೀಡಿದೆ.
ಮಾರ್ಚ್ 6 ರೊಳಗೆ ಮಾಹಿತಿ ನೀಡುವಂತೆ ಈ ಹಿಂದೆ ಸಾಂವಿಧಾನಿಕ ಪೀಠ ಆದೇಶ ನೀಡಿದ ಹಿನ್ನೆಲೆ ಹೆಚ್ಚುವರಿ ಸಮಯ ಕೋರಿ ಎಸ್‌ಬಿಐ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂಕೋರ್ಟ್ ಈ ಅರ್ಜಿಯನ್ನು ವಿಚಾರಣೆ ನಡೆಸಿತು. ಬ್ಯಾಂಕ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದರು.
ಈ ಹಿಂದೆ ನೀಡಿದ ಆದೇಶವನ್ನು ಅನುಸರಿಸಲು ನಮಗೆ ಸ್ವಲ್ಪ ಸಮಯ ಬೇಕಾಗುತ್ತದೆ, ನಾವು ಬಾಂಡ್ ನೀಡಿದ ಮಾಹಿತಿಯನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕಿದೆ. ಇದು ರಹಸ್ಯ ಮಾಹಿತಿಯಾದ ಹಿನ್ನಲೆ ನಾವು ಕೊಡುಗೆದಾರರ ಮಾಹಿತಿ ಮತ್ತು ಬಾಂಡ್ ಸಂಖ್ಯೆಯನ್ನು ದತ್ತಾಂಶವಾಗಿ ಶೇಖರಿಸಿಲ್ಲ ಈ ಮಾಹಿತಿ ಸಂಗ್ರಹಿಸಲು ಸಮಯ ಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಿಜೆಐ ಡಿ.ವೈ ಚಂದ್ರಚೂಡ್, ದಾನಿಗಳ ವಿವರಗಳನ್ನು ಗೊತ್ತುಪಡಿಸಿದ ಶಾಖೆಯಲ್ಲಿ ಮುಚ್ಚಿದ ಕವರ್‌ನಲ್ಲಿ ಇರಿಸಲಾಗಿದೆ ಮತ್ತು ಅದು ಮುಂಬೈನಲ್ಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ರಾಜಕೀಯ ಪಕ್ಷಗಳು ಯಾವುದೇ ಶಾಖೆಗಳಲ್ಲಿ ಖಾತೆಯನ್ನು ನಿರ್ವಹಿಸಿದರು ಚುನಾವಣಾ ಬಾಂಡ್‌ಗಳನ್ನು ಮುಂಬೈ ಶಾಖೆಗೆ ಮಾತ್ರ ಠೇವಣಿ ಇಡಬಹುದು ಎಂದು ಹೇಳಿದೆ. ಎಲ್ಲಾ ಮಾಹಿತಿ ಈಗಾಗಲೇ ಮುಂಬೈ ಶಾಖೆಗೆ ಬಂದಿವೆ ಮಾಹಿತಿ ನೀಡಲು ಏನು ಸಮಸ್ಯೆ ಎಂದರು.
ಪ್ರತಿ ಖರೀದಿಗೆ ಪ್ರತ್ಯೇಕ KYC ಇರಬೇಕು ಎಂದು FAQ ಗಳು ಸೂಚಿಸಿವೆ. ಆದ್ದರಿಂದ ನೀವು ಈಗಾಗಲೇ ವಿವರಗಳನ್ನು ಹೊಂದಿದ್ದೀರಿ ಎಂದು ತಿಳಿಸಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನೀವು ಮುಚ್ಚಿದ ಕವರ್ ಅನ್ನು ತೆರೆಯಬೇಕು, ವಿವರಗಳನ್ನು ಒಟ್ಟುಗೂಡಿಸಿ ಮತ್ತು ಮಾಹಿತಿಯನ್ನು ನೀಡಬೇಕು, ಇದಕ್ಕೆ ಹೆಚ್ಚಿನ ಸಮಯ ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮೋದಿ ಕರ್ನಾಟಕ ಪ್ರವಾಸಕ್ಕೆ ಡೇಟ್ ಫಿಕ್ಸ್ – ಈ 12 ಕ್ಷೇತ್ರಗಳೇ ಟಾರ್ಗೆಟ್
ಇದಕ್ಕೆ ಉತ್ತರಿಸಿದ ಸಾಳ್ವೆ, ಬಾಂಡ್ (Electoral Bond) ಅನ್ನು ಯಾರು ಖರೀದಿಸಿದ್ದಾರೆ ಎಂಬುದರ ಕುರಿತು ನಮ್ಮ ಬಳಿ ಸಂಪೂರ್ಣ ವಿವರಗಳಿವೆ ಮತ್ತು ಹಣ ಎಲ್ಲಿಂದ ಬಂತು ಮತ್ತು ಯಾವ ರಾಜಕೀಯ ಪಕ್ಷವು ಎಷ್ಟು ಟೆಂಡರ್ ನೀಡಿದೆ ಎಂಬ ಸಂಪೂರ್ಣ ವಿವರ ನನ್ನ ಬಳಿ ಇದೆ, ಆದರೆ ನಾವು ಈಗ ಖರೀದಿಸಿದವರ ಹೆಸರನ್ನೂ ಹಾಕಬೇಕಾಗಿದೆ, ಹೆಸರುಗಳನ್ನು ಕ್ರೋಢೀಕರಿಸಬೇಕು, ಬಾಂಡ್ ಸಂಖ್ಯೆಗಳೊಂದಿಗೆ ಕ್ರಾಸ್ ಚೆಕ್ ಮಾಡಬೇಕು, ಫಾರ್ಮ್ ಟು ಫಾರ್ಮ್ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಇನ್ನೂ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ನಾನು ತಪ್ಪು ಮಾಡಲು ಸಾಧ್ಯವಿಲ್ಲ, ತಪ್ಪು ಮಾಡಿದ್ದಲ್ಲಿ ದಾನಿಗಳಿಂದ ನನ್ನ ಮೇಲೆ ಮೊಕದ್ದಮೆ ಹೂಡುವ ಸಾಧ್ಯತೆಗಳಿದೆ, ಕನಿಷ್ಠ ಮಾಹಿತಿ ನೀಡಲು 2-3 ವಾರಗಳ ಸಮಯ ಬೇಕು ಎಂದರು.
Supreme Court dismisses an application of State Bank of India (SBI) seeking an extension of time till June 30 to submit details of Electoral Bonds to the Election Commission of India.
Court asks SBI to disclose the details of Electoral Bonds by the close of business hours on… pic.twitter.com/f91v4no7MM
ವಾದ ಆಲಿಸಿದ ಬಳಿಕ ತೀರ್ಪು ನೀಡಿದ ಸಿಜೆಐ ಡಿ.ವೈ ಚಂದ್ರಚೂಡ್, 2024 ರ ಫೆಬ್ರವರಿ 15 ತೀರ್ಪಿನ ಮೂಲಕ, ಈ ನ್ಯಾಯಾಲಯವು ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು RPA 1951 ಮತ್ತು ಆದಾಯ ತೆರಿಗೆ ಕಾಯಿದೆ 1961 ಅನ್ನು ತಿದ್ದುಪಡಿ ಮಾಡಿದ ಹಣಕಾಸು ಕಾಯಿದೆ 2017 ರ ಭಾಗಗಳನ್ನು ಅಸಂವಿಧಾನಿಕ ಎಂದು ಘೋಷಿಸಿದೆ. ಆರ್ಟಿಕಲ್ 19(1)(ಎ) ಅಡಿಯಲ್ಲಿ ನಾಗರಿಕರ ಮಾಹಿತಿ ಹಕ್ಕು ಉಲ್ಲಂಘನೆಯಾಗಿದೆ.
ಕಾರ್ಪೊರೇಟ್ ಸಂಸ್ಥೆಗಳಿಂದ ರಾಜಕೀಯ ಪಕ್ಷಗಳಿಗೆ ಅನಿಯಮಿತ ಧನಸಹಾಯವನ್ನು ಅನುಮತಿಸುವ ಹಣಕಾಸು ಕಾಯಿದೆ 2017 ರ ಮೂಲಕ ಪರಿಚಯಿಸಲಾದ ತಿದ್ದುಪಡಿಗಳು ಆರ್ಟಿಕಲ್ 14 ರ ಉಲ್ಲಂಘನೆಯಾಗಿದೆ. ಏ. 12 ವರೆಗಿನ ದಾಖಲೆಗಳನ್ನು ನೀಡಲು ಆದೇಶಿಸಿತ್ತು. ಮಾಹಿತಿ ಕೇಳಲು ಬ್ಯಾಂಕ್ ಹೆಚ್ಚುವರಿ ಸಮಯ ಕೇಳಿದೆ. ದಾಖಲೆಗಳ ಲಭ್ಯತೆ ಹಿನ್ನಲೆ ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ, ಮಂಗಳವಾರ ಸಂಜೆಯೊಳಗೆ ಮಾಹಿತಿ ನೀಡಬೇಕು.
ಚುನಾವಣಾ ಬಾಂಡ್ ಖರೀದಿಸಿದ ಪ್ರತಿ, ಚುನಾವಣಾ ಬಾಂಡ್‌ಗಳ ವಿವರಗಳು, ಖರೀದಿದಾರರ ಹೆಸರು, ಚುನಾವಣಾ ಬಾಂಡ್‌ಗಳ ಮುಖಬೆಲೆ ಮತ್ತು ರಾಜಕೀಯ ಪಕ್ಷಗಳು ನಗದೀಕರಿಸಿದ ದಿನಾಂಕ ಸೇರಿದಂತೆ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ನೀಡಬೇಕು ಈ ಮಾಹಿತಿಯನ್ನು ಮಾರ್ಚ್, 15 ರೊಳಗೆ ಕೇಂದ್ರ ಚುನಾವಣಾ ಆಯೋಗ (Central Election Commission) ತನ್ನ ವೆಬ್‌ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿತು. ಈ ಮೂಲಕ ಜೂನ್ 30 ವರೆಗೂ ಸಮಯ ಕೋರಿದ್ದ ಎಸ್‌ಬಿಐ (SBI) ಅರ್ಜಿಯನ್ನು ವಜಾಗೊಳಿಸಿತು.
ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bond) ಮೂಲಕ ಆಡಳಿತದಲ್ಲಿರುವ ರಾಜಕೀಯ ಪಕ್ಷಕ್ಕೆ (Political Parties) ಹೆಚ್ಚಿನ ಕೊಡುಗೆ ಹೋಗುವುದು ರೂಢಿಯಾಗಿದೆ ಎಂದು ಕೇಂದ್ರ ಸರ್ಕಾರ (Central Government) ಹೇಳಿದೆ. ಈ ಮೂಲಕ ಅದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಸರ್ಕಾರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸಮರ್ಥಿಸಿಕೊಂಡಿದೆ.
ಕಳೆದ ಮಂಗಳವಾರದಿಂದ ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಸಿಜೆಐ ಡಿ.ವೈ ಚಂದ್ರಚೂಡ್ (DY Chandrachud) ನೇತೃತ್ವದ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ. ಗುರುವಾರದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta) ವಾದ ಮಂಡಿಸಿದರು. ಇದನ್ನೂ ಓದಿ: Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್
ಈ ಯೋಜನೆಯಲ್ಲಿ ಹಸ್ತಕ್ಷೇಪ ಮಾಡುವುದರಿಂದ ಈ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಗೆ ಹಿನ್ನಡೆಯಾಗಬಹುದು. ಯೋಜನೆಯನ್ನು ರದ್ದುಗೊಳಿಸಿದರೆ ಸಂಭವನೀಯ ಪರಿಣಾಮಗಳ ಬಗ್ಗೆ ಸಾಲಿಸಿಟರ್ ಜನರಲ್ ಕಳವಳವನ್ನು ವ್ಯಕ್ತಪಡಿಸಿದರು. ಎಡಿಆರ್ ವರದಿಯಲ್ಲಿನ ಅಂಕಿ ಅಂಶಗಳನ್ನು ರಾಜಕೀಯ ಪಕ್ಷಗಳು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿವೆ, ಆದರೆ ಎಲ್ಲವನ್ನೂ ಘೋಷಿಸಲಾಗಿಲ್ಲ ಎಂದು ಒಪ್ಪಿಕೊಂಡರು. ಇದನ್ನೂ ಓದಿ: 7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ ಬೆದರಿಕೆ ಕರೆ
ಈ ಯೋಜನೆಯು ಪ್ರಾಥಮಿಕವಾಗಿ ಆಡಳಿತ ಪಕ್ಷಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅರ್ಜಿದಾರರು ಮಾಡಿದ ವಾದಗಳನ್ನು ಉದ್ದೇಶಿಸಿ ವಾದಿಸಿದ ಮೆಹ್ತಾ, ಈ ಪ್ರವೃತ್ತಿಯು ಸ್ಥಿರವಾಗಿದೆ ಎಂದು ಪ್ರತಿಪಾದಿಸಿದರು. ಆಡಳಿತ ಪಕ್ಷಕ್ಕೆ ಹೆಚ್ಚಿನ ಕೊಡುಗೆಗಳು ಹೋಗುವುದು ರೂಢಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್ ಹಿಂಪಡೆಯಿರಿ: EDಗೆ ಕೇಜ್ರಿವಾಲ್ ಪ್ರತಿಕ್ರಿಯೆ
ವಿಚಾರಣೆ ಅವಧಿಯಲ್ಲಿ ಮಾರ್ಚ್ 2023 ರವರೆಗೆ ರಾಜಕೀಯ ಪಕ್ಷಗಳಿಗೆ ದೇಣಿಗೆಗಳ ಡೇಟಾವನ್ನು ಪ್ರಸ್ತುತಪಡಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ. ನಾವು ಮಾರ್ಚ್ 2023 ರವರೆಗೆ ಡೇಟಾವನ್ನು ಬಯಸುತ್ತೇವೆ ಎಂದು ಪೀಠ ಹೇಳಿತು. ನಾವು ಒಂದು ದಿನ ಮುಂಚೆಯೇ ಅದನ್ನು ಸ್ಪಷ್ಟಪಡಿಸಿದ್ದೇವೆ. ನೀವು ನವೀಕರಿಸಿದ ಡೇಟಾದೊಂದಿಗೆ ಬರಬೇಕಿತ್ತು. ರಾಜಕೀಯ ಪಕ್ಷಗಳು ಯಾವ ಸಮಯದ ಮಿತಿಯನ್ನು ಸಲ್ಲಿಸಬೇಕು? ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಶ್ನಿಸಿದರು. ಇದನ್ನೂ ಓದಿ: ಐಬ್ರೋಸ್ ಮಾಡಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ
ಚುನಾವಣಾ ಆಯೋಗದ ಪರ ಹಾಜರಾದ ಅಮಿತ್ ಶರ್ಮಾ, ಹೌದು, ನಾವು ಡೇಟಾವನ್ನು ಕಂಪೈಲ್ ಮಾಡಬಹುದು. ಹಣಕಾಸು ವರ್ಷ ಮುಗಿದ ಆರು ತಿಂಗಳ ನಂತರ ಪಕ್ಷಗಳು ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು. ಮುಂದುವರಿದು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಸ್ವೀಕರಿಸಿದ ಚುನಾವಣಾ ಬಾಂಡ್‌ಗಳ ಒಟ್ಟು ಪ್ರಮಾಣವನ್ನು ಮಾತ್ರ ಮಾಹಿತಿ ಆಯೋಗ ಹೊಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಜರಂಗ ಬಲಿ ಗದೆಯೇ ತಾಲಿಬಾನ್‍ಗಳಿಗೆ ಪರಿಹಾರ: ಯೋಗಿ ಆದಿತ್ಯನಾಥ್