Tag: electioncampaign

  • ನಾನ್‌ ಬೆಳಗಾವಿಗೆ ಬರ್ತಿದೀನಿ – ಮೇ 6ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಶಿವಣ್ಣ ಪ್ರಚಾರ..!

    ನಾನ್‌ ಬೆಳಗಾವಿಗೆ ಬರ್ತಿದೀನಿ – ಮೇ 6ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಶಿವಣ್ಣ ಪ್ರಚಾರ..!

    ಬೆಳಗಾವಿ: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ (Shivarajkumar) ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಪರ ಮೇ 6 ರಂದು ಪ್ರಚಾರ ನಡೆಸಲಿದ್ದಾರೆ.

    ಬೆಳಗಾವಿಗೆ (Belagavi) ಆಗಮಿಸಲಿರೋ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಅವರು ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತಾನೇ ಬಜರಂಗದಳವನ್ನು ಬ್ಯಾನ್ ಮಾಡೋದು: ಬಿ.ವೈ ವಿಜಯೇಂದ್ರ

    ಅಂದು ಸಂಜೆ 4 ಗಂಟೆಗೆ ಬೆಳಗಾವಿ ತಾಲೂಕಿನ ಸುಳೇಬಾವಿಗೆ ಆಗಮಿಸಿ, ಶ್ರೀ ಮಹಾಲಕ್ಷ್ಮೀ ದೇವಿ ದರ್ಶನ ಪಡೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಚುನಾವಣಾ ಪ್ರಚಾರ (Election Campaign) ಕಾರ್ಯ ಆರಂಭಿಸಲಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ – ನಿಶ್ವಿಕಾ ನಾಯ್ಡು

    ಸಂಜೆ 5 ಗಂಟೆಗೆ ಶಿಂದೊಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 7 ಗಂಟೆಗೆ ಹೊನ್ನಿಹಾಳ ಗ್ರಾಮದಲ್ಲಿ ರಸ್ತೆ ಶೋ ನಡೆಸಲಿದ್ದಾರೆ. ಗುರುವಾರವಷ್ಟೇ ವರುಣಾ ಕ್ಷೇತ್ರದಲ್ಲಿ‌ ಮಾಜಿ ಸಿಎಂ ಸಿದ್ದಾರಾಮಯ್ಯ ಪರ ಭರ್ಜರಿ ಪ್ರಚಾರ ನಡೆಸಿದ್ದ ಶಿವಣ್ಣ ವಿವಿಧ ಸಿನಿಮಾ ಗೀತೆಗಳನ್ನಾಡಿ ಅಭಿಮಾನಿಗಳನ್ನ ರಂಜಿಸಿದ್ರು. ಸಿದ್ದರಾಮಯ್ಯ ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿದ್ರು.

  • ಪ್ರಚಾರಕ್ಕೆ ಬಂದ್ರೆ ಒಂದು ತಲೆಗೆ 500 ರೂ. – ಶಿವರಾಮೇಗೌಡರ ಆಡಿಯೋ ವೈರಲ್

    ಪ್ರಚಾರಕ್ಕೆ ಬಂದ್ರೆ ಒಂದು ತಲೆಗೆ 500 ರೂ. – ಶಿವರಾಮೇಗೌಡರ ಆಡಿಯೋ ವೈರಲ್

    ಮಂಡ್ಯ: ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೌದು. ಪ್ರಚಾರಕ್ಕೆ ಬಂದ್ರೆ ತಲಾ 500 ರೂ. ಕೊಡುತ್ತೇನೆ ಎಂದು ಶಿವರಾಮೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ರಮೇಶ್ ಜೊತೆ ಮಾತನಾಡಿದ್ದಾರೆ. ಈ 43 ಸೆಕೆಂಡುಗಳ ಆಡಿಯೋ ವೈರಲ್ ಆಗುತ್ತಿದ್ದು, ಇದೀಗ ತೀವ್ರ ಅನುಮಾನಕ್ಕೆ ಕಾರಣವಾಗಿದೆ.

    ಆಡಿಯೋದಲ್ಲೇನಿದೆ?:
    ಶಿವರಾಮೇಗೌಡ: ಹೇಳಿ ರಮೇಶಣ್ಣ..
    ರಮೇಶ್: ಅಣ್ಣಾ ನಾವು ಯಾವಾಗ್ಲಿಂದ ಬರಬೇಕು ಅಣ್ಣಾ ಕ್ಯಾನ್ ವಾಸ್‍ಗೆ
    ಶಿವರಾಮೇಗೌಡ: ಯಾರು ಮಾತಾಡ್ತಿರೋದು
    ರಮೇಶ್: ಅಣ್ಣಾ ನಾನು ರಮೇಶ್
    ಶಿವರಾಮೇಗೌಡ: ನಮ್ ಡಾನು..
    ರಮೇಶ್: ಹೂಂ ಅಣ್ಣಾ..
    ಶಿವರಾಮೇಗೌಡ: ನಾಳೆಯಿಂದಲೇ..

    ರಮೇಶ್: ಅಣ್ಣಾ ಬೆಂಗಳೂರಿನಿಂದ ಎಲ್ಲರನ್ನೂ ಕರೆದುಕೊಂಡು ಬರಬೇಕಲ್ಲಾ ಹೆಂಗ್ ಮಾಡೋದು ವ್ಯವಸ್ಥೆ..?
    ಶಿವರಾಮೇಗೌಡ: ಎಲ್ಲರಿಗೂ 500 ರೂಪಾಯಿ ಕೊಡ್ತೇವೆ.. ತಲೆಗೆ 500 ರೂ. ಕೊಡ್ತೀನಿ ಕರೆದುಕೊಂಡು ಬಾ..
    ರಮೇಶ್: ಎಲ್ಲರನ್ನೂ ಕರೆದುಕೊಂಡು ಬರ್ಲಾ..?
    ಶಿವರಾಮೇಗೌಡ: ಹೂಂ.. ಎಲ್ಲಾ ಬರಬೇಕು..
    ರಮೇಶ್: ಅಣ್ಣಾ ಬರ್ತಾರಣ್ಣ.. ಗಂಗನಹಳ್ಳಿ, ಕೆಂಕನಹಳ್ಳಿಯಿಂದ ಸುಮಾರು ಜನ ಇದ್ದಾರೆ, ಎಲ್ಲರೂ ಬರ್ತಾರಣ್ಣ..
    ರಮೇಶ್: ಬಸ್ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣಾ..?

    ಶಿವರಾಮೇಗೌಡ: ನೀವೇ ಮಾಡಿಕೊಂಡು ಬನ್ನಿ..ದುಡ್ಡು ಕೊಡ್ತೀನಿ..
    ರಮೇಶ್: ಸರಿ ಅಣ್ಣಾ.. ಬೆಳಗ್ಗೆ..
    ಶಿವರಾಮೇಗೌಡ: ಒಂದು ತಲೆಗೆ 500ರೂಪಾಯಿ, ಎಲ್ಲನೂ ಅಪ್ಪಾಜಿಗೌಡ್ರಿಗೆ ಜವಾಬ್ದಾರಿ ಕೊಟ್ಟಿದ್ದೀನಿ..
    ರಮೇಶ್: ಅಪ್ಪಾಜಿ ಗೌಡ್ರಿಗಾ ಅಣ್ಣಾ.. ಆಯ್ತಣ್ಣ.. ಸರಿ ಅಣ್ಣ..

  • ಲೋಕ ಸಮರ ಸೋತ್ರೆ ಸರ್ಕಾರ ಉಳಿಯಲ್ಲ – ಸಿದ್ದರಾಮಯ್ಯ ಹೇಳಿಕೆಯಿಂದ ಸಂಚಲನ

    ಲೋಕ ಸಮರ ಸೋತ್ರೆ ಸರ್ಕಾರ ಉಳಿಯಲ್ಲ – ಸಿದ್ದರಾಮಯ್ಯ ಹೇಳಿಕೆಯಿಂದ ಸಂಚಲನ

    ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸೋತ್ರೆ ಸಮ್ಮಿಶ್ರ ಸರ್ಕಾರ ಉಳಿಯಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

    ಸಮ್ಮಿಶ್ರ ಸರ್ಕಾರ 5 ವರ್ಷ ಇರಬೇಕು. ಆದ್ರೆ ನವು ಸೋತ್ರೆ ಸರ್ಕಾರ ಇರುತ್ತದೆಯಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿನೂ ಆಯ್ತು. ಮುಗೀತು ನನ್ನದು. ಸರ್ಕಾರ ಇದೆಯಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಜಿ.ಟಿ ದೇವೇಗೌಡ ಹಾಗೂ ಸಾರಾ ಮಹೇಶ್, ತಮ್ಮಣ್ಣ, ಪುಟ್ಟರಾಜು ಇವೆಲ್ಲರೂ ಮಂತ್ರಿಗಳಾಗಿದ್ದಾರೆ. ನಾನೇನೂ ಇಲ್ಲ. ನಮ್ಮವರು 27 ಮಂದಿ ಇದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರದಂಗೆ ನೋಡಿಕೊಳ್ಳಬೇಕಲ್ವ. ಅದಕ್ಕೆ ತಾನೇ ನಾವು ಒಂದಾಗಿರೋದು ಎಂದು ಹೇಳಿದ್ದಾರೆ.

    ಕಳೆದ ಚುನಾವಣೆಯಲ್ಲಿ ಕೆಲವರು ನಾನು ಗೆಲ್ಲಬಾರದು, ಸಿಎಂ ಆಗಬಾರದು, ನಾನು ಗೆದ್ರೆ ಖರ್ಗೆ, ಪರಮೇಶ್ವರ್ ಸಿಎಂ ಆಗಲ್ಲ ಎಂದು ಚೀಟಿ ಹಂಚಿದ್ರು. ಆದ್ರೀಗ ಸಿಎಂ ಆಗಿರೋದು ಯಾರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನಪು ಮಾಡಿಕೊಂಡ್ರು. ಚುನಾವಣೆಯ ಮೇಲೆ ಆಸಕ್ತಿ ಕಡಿಮೆ ಆಗಿದ್ದು ಇನ್ಮುಂದೆ ಎಲೆಕ್ಷನ್‍ಗೆ ನಿಲ್ಲಲ್ಲ. ರಾಹುಲ್ ಗಾಂಧಿ ಪ್ರಧಾನಿ ಆದ್ರೆ ಸಾಕು ಎಂದು ಓಡಾಡ್ತಿದ್ದೇನೆ. ಬಿಜೆಪಿ ವಿರುದ್ಧದ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದ್ರು. ಇಲ್ಲಿ ಬಿಜೆಪಿ ಗೆಲ್ಲಬಾರದು ನಾವು ಸೋತ್ರೆ ಸರ್ಕಾರ ಇರುತ್ತಾ, ಮೈತ್ರಿ ಅಭ್ಯರ್ಥಿ ಗೆಲ್ಬೇಕು ಎಂದು ಹೇಳಿದ್ರು.

    ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಜಿ.ಟಿ ದೇವೇಗೌಡ ಜೊತೆಯಾಗಿ ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಚುನಾವಣೆಯಲ್ಲಿ ನಂಗೆ ಯಾವಾಗ್ಲೂ ಇಲವಾ ಕ್ಷೇತ್ರದಲ್ಲಿ ಲೀಡ್ ಬರುತ್ತೆ. ಆದ್ರೆ ಅದೇನಾಯ್ತೋ ಕಳೆದ ಚುನಾವಣೆಯಲ್ಲಿ ನಂಗೆ ನೀವು ಲೀಡ್ ಕೊಟ್ಟಿಲ್ಲ ಎಂದು ಜಿಟಿ ದೇವೇಗೌಡರ ಎದುರೇ ಮತದಾರರನ್ನು ಪ್ರಶ್ನಿಸಿದ್ರು.

  • ‘ನಾನು ಸುಮಲತಾಗೆ ಮತ ಹಾಕೋದು’ – ಗಡ್ಡಪ್ಪ ಭೇಟಿ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್!

    ‘ನಾನು ಸುಮಲತಾಗೆ ಮತ ಹಾಕೋದು’ – ಗಡ್ಡಪ್ಪ ಭೇಟಿ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್!

    ಮಂಡ್ಯ: ಲೋಕಸಭಾ ಕ್ಷೇತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ಮುಂದುವರಿಸಿದ್ದು, ಇಂದು ತಿಥಿ ಸಿನಿಮಾದ ನಟ ಗಡ್ಡಪ್ಪರನ್ನು ಭೇಟಿ ಮಾಡಿದರು.

    ಹೌದು. ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪರನ್ನು ಭೇಟಿ ಮಾಡಿದ ನಟ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಮತ ಹಾಕುವಂತೆ ಮನವಿ ಮಾಡಿಕೊಂಡರು. ಅಲ್ಲದೆ ನೀವೇ ಸ್ಟಾರ್ ಎಂದು ಈಗ ಯಾವ ಸಿನಿಮಾ ಮಾಡುತ್ತಿದ್ದೀರಿ ಎಂದು ಕೇಳಿದ್ರು. ಜೊತೆಗೆ ಹಾರ ಹಾಕಿ ಸನ್ಮಾನ ಮಾಡಿದ್ರು.

    ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಡಪ್ಪ, ದರ್ಶನ್ ಭೇಟಿ ಮಾಡಿದ್ದು ಬಹಳ ಸಂತೋಷ ತಂದಿದೆ. ಸುಮಲತಾ ಪರ ಮತ ಹಾಕಲು ದರ್ಶನ್ ಹೇಳಿದ್ರು. ನಾನು ಸುಮಲತಾ ಅವರಿಗೇ ಮತ ಹಾಕೋದು. ನಮ್ಮೂರಲ್ಲಿ ಮುಕ್ಕಾಲು ಭಾಗ ಸುಮಲತಾರಿಗೆ ಮತ ಹಾಕುತ್ತಾರೆ. ಉಪೇಂದ್ರ ಕೂಡ ನಮ್ಮೂರಿಗೆ ಬಂದಿದ್ದರು. ಆಗ ಅವರು ಕೂಡ ಮತ ಹಾಕುವಂತೆ ಕೇಳಿಕೊಂಡಿದ್ದರು. ಆದ್ರೆ ನಾವೆಲ್ಲ ಸುಮಲತಾರಿಗೆ ವೋಟು ಹಾಕೋದು ಅಂದ್ರು.

    ಒಟ್ಟಿನಲ್ಲಿ ಪ್ರಚಾರಕ್ಕೆ ನಾಲ್ಕು ದಿನ ಬಾಕಿ ಇರುವಂತೆ ದರ್ಶನ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ರಾಗಿಮುದ್ದನಹಳ್ಳಿ, ಯಲಿಯೂರು, ಕೊತ್ತತ್ತಿ, ತಗ್ಗಹಳ್ಳಿ, ಕಿರಗಂದೂರು ಸೇರಿದಂತೆ 35 ಹಳ್ಳಿಗಳಲ್ಲಿ ದಚ್ಚು ರೋಡ್ ಶೋ ಕೈಗೊಂಡಿದ್ದಾರೆ. ಈ ವೇಳೆ ನೊದೆಕೊಪ್ಪಲು ಗ್ರಾಮದಲ್ಲಿ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪರನ್ನು ನಟ ಭೇಟಿ ಮಾಡಿದ್ರು.

    ಇತ್ತ ಎರಡು ದಿನಗಳ ಶೂಟಿಂಗ್ ವಿರಾಮ ಬಳಿಕ ರಾಕಿಂಗ್ ಸ್ಟಾರ್ ಯಶ್ ಮತ್ತೆ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಾಗಮಂಗಲ ತಾಲೂಕಿನ ಕೀಳಘಟ್ಟ, ಚಿಕ್ಕೋನಹಳ್ಳಿ, ಕೊಪ್ಪ, ಹೊಸಗಾವಿ, ದೇವಲಾಪುರ ಸೇರಿದಂತೆ 20 ಹಳ್ಳಿಗಳಲ್ಲಿ ಯಶ್ ಭರ್ಜರಿ ರೋಡ್ ಶೋ ಕೈಗೊಂಡಿದ್ದಾರೆ. ರಾತ್ರಿ ಬಂದು ತಟ್ಟುವವರನ್ನ ಸೇರಿಸಬೇಡಿ, ನಾವು ಹಗಲು ನಿಮ್ಮ ಮನಮುಟ್ಟೋ ಕೆಲಸ ಮಾಡ್ತಿದ್ದೀವಿ. ದಯವಿಟ್ಟು ಆಶೀರ್ವಾದ ಮಾಡಿ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಯಶ್ ಟಾಂಗ್ ಕೊಟ್ರು.

  • ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂದ ಸುಮಲತಾಗೆ ಸಿಎಂ ಟಾಂಗ್

    ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂದ ಸುಮಲತಾಗೆ ಸಿಎಂ ಟಾಂಗ್

    ಮಂಡ್ಯ: ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

    ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ ಬಗ್ಗೆ ಚರ್ಚೆ ಮಾಡುತ್ತಾರೋ ಎಂದು ವ್ಯಂಗ್ಯವಾಡಿದ್ರು.

    ಸುಮಲತಾ ಅವರ ಅಭಿವೃದ್ಧಿ ಏನಿದೆ ಎಂದು ಮತ್ತೆ ಪ್ರಶ್ನಿಸಿದ ಸಿಎಂ, ಅವರು ಇಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಅಂಬರೀಶ್ ಸಂಸದರಾಗಿದ್ದಾಗ ಜನರ ಕಷ್ಟ-ಸುಖ ಕೇಳಿದ್ದಾರಾ. ಅಭಿವೃದ್ಧಿ ಬಗ್ಗೆ ಇವರ ಬಳಿ ನಾವು ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಲೆ ಇದೆ. ನನಗೆ ಯಾವುದೇ ರೀತಿಯ ಆತಂಕಗಳು ಇಲ್ಲ. ಮಂಡ್ಯ ಜಿಲ್ಲೆಯ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನ ಆಯ್ಕೆ ಮಾಡಿ ಅಭಿವೃದ್ಧಿಗೆ ಚಾಲನೆ ಕೊಡುವ ದೃಷ್ಟಿಯಿಂದ ಈ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ನಿರ್ಧಾರದಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ನಿಖಿಲ್ ಸವಾಲೇನು?
    ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸುಮಲತಾಗೆ ನಿಖಿಲ್ ಸವಾಲು ಹಾಕಿದ್ದರು.

    ಸುಮಲತಾ ಏನ್ ಹೇಳಿದ್ದರು?
    ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿ ಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದರು. ಅಲ್ಲದೆ ”Any time, any where..I am ready” ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದರು.

    ನಿಖಿಲ್ ಪ್ರತಿಕ್ರಿಯೆ:
    ಸುಮಲತಾ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಬುಧವಾರ ಕೆಆರ್ ನಗರದ ಬ್ಯಾಡರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ್ದ ನಿಖಿಲ್, ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ನಂಗೆ ಗೊತ್ತಿಲ್ಲ. ನಾನು ಲೈವ್ ಆಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂದೆ-ತಾಯಂದಿರು ಏನು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇದ್ದಾರೆಯೋ ಅವರಿಗೆ ನಾನು ಉತ್ತರಿಸಬೇಕಾಗಿದೆ ಎಂದು ತಿಳಿಸಿದ್ದರು.

    ಇಲ್ಲಿ ಬೇರೆಯವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹೀಗಾಗಿ ಏ.18ರ ವರೆಗೆ ಸಮಯ ವ್ಯರ್ಥ ಮಾಡದೇ ದಯವಿಟ್ಟು ಪ್ರಚಾರ ಮಾಡೋದಕ್ಕೆ ಹೇಳಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಲು ಹೇಳಿ. ಆಮೇಲೆ ಮಾತನಾಡೋಣ ಎಂದು ನಿಖಿಲ್ ಸಲಹೆ ನೀಡಿದ್ದರು.

  • ರಾಜ್ಯ ಸರ್ಕಾರದ ವಿರುದ್ಧ ರತ್ನಪ್ರಭಾ ಗಂಭೀರ ಆರೋಪ

    ರಾಜ್ಯ ಸರ್ಕಾರದ ವಿರುದ್ಧ ರತ್ನಪ್ರಭಾ ಗಂಭೀರ ಆರೋಪ

    ಕಲಬುರಗಿ: ರಾಜ್ಯ ಸರ್ಕಾರದ ವಿರುದ್ಧ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಗಂಭೀರ ಆರೋಪ ಮಾಡಿದ್ದಾರೆ.

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ದಲಿತರ ಪರ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಿಜಾಂಶದಲ್ಲಿ ದಲಿತರನ್ನು ಕಂಡರೆ ಎರಡೂ ಪಕ್ಷದ ನಾಯಕರ ಮನಸ್ಸಿನಲ್ಲಿಯೂ ದ್ವೇಷವಿದೆ. ನಾನು ದಲಿತೆ ಎಂಬ ಕಾರಣಕ್ಕೆ ನನ್ನನ್ನು ತುಳಿಯಲಾಗಿದೆ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ರು.

    2014ರಲ್ಲಿಯೇ ನಾನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬೇಕಿತ್ತು. ಆದ್ರೆ ನನಗೆ ಸುಳ್ಳು ಹೇಳಿ ಮೋಸ ಮಾಡಿ ಆ ಹುದ್ದೆ ನೀಡಲಿಲ್ಲ. ಕಾಟಾಚಾರ ಎನ್ನುವಂತೆ ಚುನಾವಣೆ ಇರುವಾಗ 4 ತಿಂಗಳ ಮಟ್ಟಿಗೆ ಸಿಎಸ್ ಹುದ್ದೆಗೆ ನೇಮಿಸಿದ್ದರು. ಈ ಮೂಲಕ ಹಿಂದಿನ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.