Tag: election result

  • ಹೊಸ ಗೇಮ್ ಪ್ಲಾನ್ ನೊಂದಿಗೆ ರಣತಂತ್ರಕ್ಕಿಳಿದ ಬಿಜೆಪಿ!

    ಹೊಸ ಗೇಮ್ ಪ್ಲಾನ್ ನೊಂದಿಗೆ ರಣತಂತ್ರಕ್ಕಿಳಿದ ಬಿಜೆಪಿ!

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರು ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಹೊಸ ಗೇಮ್ ಪ್ಲಾನ್ ಮಾಡಿದೆ.

    ಆಪರೇಷನ್ ಫ್ಲವರ್ ಹೆಸರಿನಡಿ ಬಿಜೆಪಿ ಹೈಕಮಾಂಡ್ ರಣತಂತ್ರಕ್ಕಿಳಿದಿದೆ. ಈಗಾಗಲೇ ಆಪರೇಷನ್ ಫ್ಲವರ್ ಗೆ ನಾಲ್ಕು ತಂಡ ರಚನೆಯಾಗಿದ್ದು, ಈ ಮೂಲಕ ಮೆಗಾ ಆಪರೇಷನ್ ಫ್ಲವರ್ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

    ಮೂರು ರಾಜ್ಯ ನಾಯಕರ ತಂಡ, ಕೇಂದ್ರ ನಾಯಕರ ತಂಡ ಹಾಗೂ ಬಿಎಸ್ ವೈ ನೇತೃತ್ವದಲ್ಲಿ ಒಂದು ತಂಡ, ಶ್ರೀರಾಮುಲು ನೇತೃತ್ವದಲ್ಲಿ ಒಂದು ತಂಡ, ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಒಂದು ತಂಡ ಹಾಗೂ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದೆ. ಒಟ್ಟು ನಾಲ್ಕು ತಂಡಗಳಲ್ಲಿ ಆಪರೇಷನ್ ಫ್ಲವರ್ ಗೆ ಬಿಜೆಪಿ ಕೈ ಹಾಕಿದೆ ಎನ್ನಲಾಗಿದೆ. ಇದನ್ನೂ ಓದಿ: ಹಿಂಬಾಗಿಲಿನ ಮೂಲಕ ಬಿಎಸ್‍ವೈ ಮನೆಗೆ ಎಂಟ್ರಿ ಕೊಟ್ಟ ಪಕ್ಷೇತರ ಶಾಸಕ

  • ಉಡುಪಿಯ ಇತಿಹಾಸದಲ್ಲೇ ದಾಖಲೆ ಬರೆದ ಬಿಜೆಪಿ

    ಉಡುಪಿಯ ಇತಿಹಾಸದಲ್ಲೇ ದಾಖಲೆ ಬರೆದ ಬಿಜೆಪಿ

    ಉಡುಪಿ: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಇತಿಹಾಸದಲ್ಲಿಯೇ ಉಡುಪಿಯಲ್ಲಿ ಈ ಬಾರಿ ಬಿಜೆಪಿ ದಾಖಲೆ ನಿರ್ಮಿಸಿದೆ.

    ಜಿಲ್ಲೆಯ 5 ಕ್ಷೇತ್ರಗಳಾದ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಈ ಮೂಲಕ ಬಿಜೆಪಿ ಉಡುಪಿಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

    2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿ ಗೆಲ್ಲಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿಯ ರಘುಪತಿ ಭಟ್ ಎದುರು ಸೋತಿದ್ದಾರೆ.

    ಕ್ಷೇತ್ರ, ಅಭ್ಯರ್ಥಿ ಹೆಸರು ಹಾಗೂ ಪಕ್ಷದ ವಿವರ ಇಲ್ಲಿದೆ:
    ಬೈಂದೂರು – ಬಿ.ಎಂ ಸುಕುಮಾರ ಶೆಟ್ಟಿ(ಬಿಜೆಪಿ) – ಗೋಪಾಲ ಪೂಜಾರಿ(ಕಾಂಗ್ರೆಸ್)
    ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ(ಬಿಜೆಪಿ) – ರಾಕೇಶ್ ಮಲ್ಲಿ(ಕಾಂಗ್ರೆಸ್)
    ಉಡುಪಿ – ರಘುಪತಿ ಭಟ್(ಬಿಜೆಪಿ) – ಪ್ರಮೋದ್ ಮಧ್ವರಾಜ್(ಕಾಂಗ್ರೆಸ್)
    ಕಾಪು – ಲಾಲಾಜಿ ಮೆಂಡನ್(ಬಿಜೆಪಿ) – ವಿನಯ್ ಕುಮಾರ್ ಸೊರಕೆ(ಕಾಂಗ್ರೆಸ್)
    ಕಾರ್ಕಳ – ಸುನೀಲ್ ಕುಮಾರ್(ಬಿಜೆಪಿ) – ಗೋಪಾಲ ಬಂಡಾರಿ(ಕಾಂಗ್ರೆಸ್)

  • ಸೋಲಿಗೆ ಇವಿಎಂ ಮೆಷಿನ್ ಕಾರಣ ಅಂದ್ರು ಮೊಯಿದ್ದೀನ್ ಬಾವಾ!

    ಸೋಲಿಗೆ ಇವಿಎಂ ಮೆಷಿನ್ ಕಾರಣ ಅಂದ್ರು ಮೊಯಿದ್ದೀನ್ ಬಾವಾ!

    ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಸೋಲಿಗೆ ಇವಿಎಮ್ ಮಿಷನ್ ಕಾರಣ ಅಂತ ಮಂಗಳೂರು ಉತ್ತರ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಆರೋಪಿಸಿದ್ದಾರೆ.

    ಫಲಿತಾಂಶ ಹೊರಬರುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಮ್ ಮೆಷಿನ್ ನಲ್ಲಿ ಲೋಪ ಇದೆ. ಕೇವಲ 8 ಸಾವಿರ ಹಿಂದೂಗಳ ಮತಗಳು ಮಾತ್ರಾ ಇದೆ. ಮಿಷಿನ್ ನಲ್ಲಿ ಮೋಸ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೇನೆ ಹತ್ತು ದಿನದ ಹಿಂದೆ ಬಂದವರು ಗೆಲ್ಲುವುದರ ಹಿಂದೆ ಮೋಸ ಇದೆ ಅಂತ ಹೇಳಿದ್ದಾರೆ.

    ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಎದುರು ಬಾವಾ ಸೋಲು ಕಂಡಿದ್ದಾರೆ.

     

     

  • ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    ರಾಜ್ಯದಲ್ಲಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು: ಬಿಎಸ್‍ವೈ

    – ದೇಶದ ಉದ್ದಗಲಕ್ಕೂ ಬಿಜೆಪಿ ಗಾಳಿ ಬೀಸುತ್ತಿದೆ

    ಬೆಂಗಳೂರು: ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದ ಮುಖ್ಯಮಂತ್ರಿಯವರಿಗೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಜನ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಪಂಚ ರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಗೆಲುವು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯೋ ಉಪಚುನಾವಣೆಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಂತಾಗಿದೆ. ಮುಂದೆ ಬಿಜೆಪಿ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ನಡೆಸೋದಕ್ಕೆ ಇದು ನಾಂದಿಯಾಗಿದೆ ಅಂತಾ ಹೇಳಿದ್ರು.

    ಇಡೀ ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಾರ್ಟಿಯ ಗಾಳಿ ಬೀಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅದೇ ಉತ್ಸಾಹ ಇರುವಂತಹ ಈ ಸಂದರ್ಭದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುವ ಸಲುವಾಗಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು. ಡೈರಿ ಹಗರಣವನ್ನು ಸಿಬಿಐಗೆ ವಹಿಸಿದ್ರೆ ಎಲ್ಲರ ಬಣ್ಣ ಬಯಲಾಗಲಿದೆ. ಗೋಮಾಳಗಳ ಜಮೀನನ್ನು ಕಬಳಿಸಿರುವ ಬಗ್ಗೆ ಅನೇಕ ದಾಖಲೆಗಳು ನಮ್ಮಲ್ಲಿವೆ. ಅದೇ ರೀತಿ ಬಿಬಿಎಂಪಿಯಲ್ಲಿ ನಡೆದ ಅನೇಕ ಹಗರಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ. ಒಟ್ಟಿನಲ್ಲಿ ಕಳೆದ 4 ವರ್ಷಗಳಲ್ಲಿ 90 ಸಾವಿರ ಕೋಟಿಗೂ ಹೆಚ್ಚು ಹಣ ಸಾಲ ಮಾಡಿರುವುದೇ ಸಿದ್ದರಾಮಯ್ಯನವರ ದೊಡ್ಡ ಸಾಧನೆ. ಇವೆಲ್ಲವನ್ನೂ ಕೂಡ ಬಯಲು ಮಾಡ್ತೇವೆ. ನಾಳೆ ಈ ಎರಡೂ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಹಗರಣಗಳ ವಿರುದ್ಧ ನಮ್ಮ ಹೋರಾಟವಿರುತ್ತದೆ ಅಂತಾ ಅಂದ್ರು.

    ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಎರಡೂ ರಾಜ್ಯಗಳಲ್ಲಿ ಹಗರಣಗಳನ್ನು ಬಟ್ಟ ಬಯಲು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಯಶಸ್ಸು ಕಂಡಿದೆ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹಗರಣಗಳ ಸುರಿಮಾಲೆಯೆ ಸುತ್ತಿಕೊಂಡಿರುವುದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಹೀಗಾಗಿ ಹೈಕಮಾಂಡ್ ಇವರೆಲ್ಲರನ್ನ ತುರ್ತಾಗೆ ದೆಹಲಿಗೆ ಬರಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ ಎಂಬುವುದು ಪಕ್ಷದ ಮುಖಂಡರಿಗೆ ಸ್ಪಷ್ಟವಾಗಿದೆ. ಬಹುಶಃ ಉತ್ತರಪ್ರದೇಶದಲ್ಲಿ ಯಾವ ರೀತಿ ಫಲಿತಾಂಶ ಬಂತೋ, ಅದೇ ರೀತಿ ಕರ್ನಾಟಕದಲ್ಲೂ ಗೆಲುವು ಸಾಧಿಸಲಿದ್ದೇವೆ. ಇದಕ್ಕೆ ಜನರ ಆಶೀರ್ವಾದ, ದೈವ ಬಲ, ಜನಬಲವಿದೆ. ಹಾಗೆಯೇ ನಾವು ಮಾಡಿರುವ ಸಾಧನೆಯಿದೆ ಅಂತಾ ಹೇಳಿದ್ದಾರೆ.

    ಸಿಎಂ ವಿರುದ್ಧ ಚಾಟಿ: ಎಲ್ಲ ವರ್ಗದ ಜನರ ಬೆಂಬಲದೊಂದಿಗೆ ನಾವು ಇಂದು ಚುನಾವಣೆಯಲ್ಲಿ ಗೆದಿದ್ದೇವೆ. ಹಾಗಾದ್ರೆ ಅಲ್ಪ ಸಂಖ್ಯಾತ ಮುಸ್ಲಿಂ ಮಂದಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಕೊಟ್ಟಿದ್ದೀರಲ್ವಾ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ. ಜಾತಿ ಎಂಬ ವಿಷ ಬೀಜ ಬಿತ್ತು ರಾಜಕಾರಣ ಮಾಡಿರೋದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಅಂತಾ ಸಿಎಂ ವಿರುದ್ಧ ಬಿಎಸ್‍ವೈ ಚಾಟಿ ಬೀಸಿದ್ರು.

    ಉತ್ತರಪ್ರದೇಶದಲ್ಲಿ ಜನರ ಭಾವನೆಯ ಜೊತೆ ಬಿಜೆಪಿ ಆಟ ಆಡಿದೆ. ಹಿಂದೂಗಳ ವಿಚಾರವನ್ನು ಪ್ರಸ್ತಾಪ ಮಾಡಿ ಮತ ಗಳಿಸಿದೆ. ಕರ್ನಾಟಕದಲ್ಲಿ ಇದೇ ರೀತಿ ಆಗಲು ಸಾಧ್ಯವೇ ಇಲ್ಲ. ಅವರು ಗೆದ್ದೇ ಗೆಲ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.

    ಇದನ್ನೂ ಓದಿ: ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ

  • ಬಿಹಾರದ ಚುನಾವಣೋತ್ತರ ಸಮೀಕ್ಷೆ ತಪ್ಪಾಗಿತ್ತು, ಉತ್ತರಪ್ರದೇಶದಲ್ಲಿ ನಾವು ಗೆಲ್ತೀವಿ: ರಾಹುಲ್ ಗಾಂಧಿ

    ಬಿಹಾರದ ಚುನಾವಣೋತ್ತರ ಸಮೀಕ್ಷೆ ತಪ್ಪಾಗಿತ್ತು, ಉತ್ತರಪ್ರದೇಶದಲ್ಲಿ ನಾವು ಗೆಲ್ತೀವಿ: ರಾಹುಲ್ ಗಾಂಧಿ

    ನವದೆಹಲಿ: ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಲು ನಿರಾಕರಿಸಿರೋ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಸಿಗುತ್ತದೆ ಎಂಬ ಸಮೀಕ್ಷಾ ವರದಿಯನ್ನು ತಳ್ಳಿಹಾಕಿದ್ದು, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟವೇ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದಾರೆ.

    ಉತ್ತರಪ್ರದೇಶದಲ್ಲಿ ನಾವು ಗೆಲ್ಲುತ್ತೇವೆ. ಬಿಹಾರದ ಚುನಾವಣೋತ್ತರ ಸಮೀಕ್ಷೆಗಳು ತಪ್ಪಾಗಿದ್ದವು. ನಾವು ನಾಳೆ ಮಾತನಾಡುತ್ತೇವೆ. ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಯವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಎಸ್‍ಪಿ ಜೊತೆ ಮೈತ್ರಿಗೆ ಎಸ್‍ಪಿ ಸಿದ್ಧ: ಅಖಿಲೇಶ್

    ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರದಂದು ಹೊರಬೀಳಲಿದೆ.

    ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.

    ಇದನ್ನೂ ಓದಿ: ನಾಲ್ಕು  ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್