Tag: election result

  • ಲೋಕಲ್ ವಾರ್ ನಲ್ಲಿ ಕಾಂಗ್ರೆಸ್ ಕಿಕ್ ಇಳಿಸಿತಾ ಜೆಡಿಎಸ್..?

    ಲೋಕಲ್ ವಾರ್ ನಲ್ಲಿ ಕಾಂಗ್ರೆಸ್ ಕಿಕ್ ಇಳಿಸಿತಾ ಜೆಡಿಎಸ್..?

    ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಳಿಕ ಲೋಕಸಭಾ ಚುನಾವಣಾ ಮೈತ್ರಿಗೆ ಜೆಡಿಎಸ್‍ಗೆ ಮತ್ತಷ್ಟು ಶಕ್ತಿ ಸಿಕ್ಕಿದ್ದು, ಕಾಂಗ್ರೆಸ್ ಕಿಕ್  ಇಳಿಸಿತಾ  ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿದೆ.

    ಮೈಸೂರು, ತುಮಕೂರು ಪಾಲಿಕೆಗಳ ಅತಂತ್ರ ಸ್ಥಿತಿಯಿಂದ ಜೆಡಿಎಸ್‍ಗೆ ಲಾಭವಾಗಿದ್ದು, ಈ ಮೂಲಕ ಲೋಕಸಭೆ ಚುನಾವಣೆಗೆ ಜೆಡಿಎಸ್ ಮೈತ್ರಿ ಗೇಮ್ ಶುರುವಾಗಿದೆ. ಒಟ್ಟು 10 ಲೋಕಸಭಾ ಚುನಾವಣೆಗೆ ಪಟ್ಟು ಮುಂದುವರಿಸಲು ಜೆಡಿಎಸ್ ನಿರ್ಧರಿಸಿದೆ. ಮೈಸೂರು, ತುಮಕೂರು ಪಾಲಿಕೆಗಳ ಅತಂತ್ರದ ದಾಳ ಉರುಳಿಸಿ 2 ಲೋಕಸಭಾ ಕ್ಷೇತ್ರಕ್ಕೆ ಪಟ್ಟು ಹಿಡಿಯಲು ಪ್ಲಾನ್ ರೂಪಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಯಾವ ಪಕ್ಷಕ್ಕೆ ಒಟ್ಟು ಎಷ್ಟು ಸ್ಥಾನ? ಯಾವ ಜಿಲ್ಲೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಇಲ್ಲಿದೆ ಮಾಹಿತಿ

    ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಕೋಲಾರ, ಶಿವಮೊಗ್ಗ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳು ಲೋಕಸಭಾ ಚುನಾವಣೆಗೆ ಹಿಟ್ ಲಿಸ್ಟ್ ಆಗಿದ್ದು, ಈ 10 ಕ್ಷೇತ್ರಗಳನ್ನು ಜೆಡಿಎಸ್ ಮೈತ್ರಿ ಹಿಟ್ ಲಿಸ್ಟ್ ನಲ್ಲಿ ಸೇರಿಸಿಕೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ನಗರ ಪ್ರದೇಶದಲ್ಲಿ ಬಿಜೆಪಿಯ ಒಲವು ಕಡಿಮೆಯಾಗಿದೆ: ಎಚ್‍ಡಿಕೆ

    ಒಟ್ಟಿನಲ್ಲಿ ಇದೀಗ ಜೆಡಿಎಸ್‍ನ ಮೈತ್ರಿ ಹಿಟ್ ಲಿಸ್ಟ್ ಗೆ ಕಾಂಗ್ರೆಸ್ ಮಣೆ ಹಾಕುತ್ತಾ ಅಥವಾ ಸಿದ್ದರಾಮಯ್ಯ ತವರು ಮೈಸೂರು, ಡಿಸಿಎಂ ಪರಮೇಶ್ವರ್ ತವರು ಜಿಲ್ಲೆ ಜೆಡಿಎಸ್‍ಗೆ ಬಿಟ್ಟು ಕೊಡ್ತಾರಾ ಅನ್ನೋದು ಸದ್ಯ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಗಡಿ ಮಾಲಕಿ ಗೆದ್ದಿದ್ದಕ್ಕೆ ಕಡ್ಲೆಪುರಿ ಹಾರಿಸಿ ಸಂಭ್ರಮ

    ಅಂಗಡಿ ಮಾಲಕಿ ಗೆದ್ದಿದ್ದಕ್ಕೆ ಕಡ್ಲೆಪುರಿ ಹಾರಿಸಿ ಸಂಭ್ರಮ

    ಚಿಕ್ಕೋಡಿ: ಅಂಗಡಿ ಮಾಲಕಿ ಹುಕ್ಕೇರಿ ಪುರಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕಡ್ಲೆಪುರಿ ಹಾರಿಸಿ ಸಂಭ್ರಮಿಸಿದ್ದಾರೆ.

    ಹುಕ್ಕೇರಿ ಪುರಸಭೆಯ 14 ನೇ ಮಹಿಳಾ ವಾರ್ಡ್ ನಿಂದ ಸುರೇಖಾ ಗಳತಿಗಮಠ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಅದರಲ್ಲಿ ಕಾಂಗ್ರೆಸ್ಸಿನ ಸುರೇಖಾ ಅವರು ಜಯಗಳಿಸಿದ್ದರು.

    ಸುರೇಖಾ ಅವರು ಗೆಲುವು ತಮ್ಮದಾಗಿಸಿಕೊಳ್ಳುತ್ತಿದ್ದಂತೆಯೇ ಅವರ ಕುಟುಂಬಸ್ಥರು ಸಂಭ್ರಮ ಮುಗಿಲುಮುಟ್ಟಿತ್ತು. ಅಲ್ಲದೇ ನಡುರಸ್ತೆಯಲ್ಲಿಯೇ ಸುರೇಖಾ ಅವರ ಅಂಗಡಿಯಿಂದಲೇ ಕಡ್ಲೆಪುರಿ ತಂದು ಹಾರಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರು ಕೂಡ ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಕಡಲೆ ಪುರಿ ಎರಚಿ ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು!

    ಮೈಸೂರು: ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದನೆಂದು ಆರೋಪಿಸಿ ಎಸ್‍ಡಿಪಿಐ ಕಾರ್ಯಕರ್ತನ ಮೇಲೆ ಕೈ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಇಂದು ನಡೆದಿದೆ.

    ಮೈಸೂರಿನ ಶಾಂತಿನಗರದ ರಮ್ಜಾ ಮಸೀದಿ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯ ಆರೋಪ ಮಾಡಲಾಗುತ್ತಿದೆ. ಘಟನೆಯಲ್ಲಿ ಓರ್ವ ಎಸ್‍ಡಿಪಿಐ ಕಾರ್ಯಕರ್ತನ ಮುಖ ರಕ್ತಸಿಕ್ತವಾಗಿದ್ದು, ಕೂಡಲೇ ಗಾಯಾಳುವನ್ನು ನಗರದ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಅಭ್ಯರ್ಥಿಯ ಮೆರವಣಿಗೆ ವೇಳೆ ರಾಸಾಯನಿಕ ದಾಳಿ!

    ಕಾಂಗ್ರೆಸ್ ಅಭ್ಯರ್ಥಿಯ ಮೆರವಣಿಗೆ ವೇಳೆ ರಾಸಾಯನಿಕ ದಾಳಿ!

    ತುಮಕೂರು: ನಗರ ಸ್ಥಳೀಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಯ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ರಾಸಾಯನಿಕ ದಾಳಿ ನಡೆಸಿದ್ದಾರೆ.

    ತುಮಕೂರಿನ ವಾರ್ಡ್ ನಂಬರ್ 16 ರ ಬಾರ್ ಲೈನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಸದಸ್ಯ ಇನಾಯತುಲ್ಲಾ ಖಾನ್ ಮೆರವಣಿಗೆ ವೇಳೆ ಆ್ಯಸಿಡ್ ರೂಪದ ರಾಸಾಯನಿಕ ದಾಳಿ ನಡೆದಿದೆ. ಘಟನೆಯಿಂದ ಸುಮಾರು ಜನರಿಗೆ ಗಾಯಗಳಾಗಿವೆ. ಈ ಘಟನೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ.

    ಸುಮಾರು 30 ವರ್ಷದಿಂದ ಇಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಈ ಬಾರಿ ಗೆದ್ದಿದೆ. ಹೀಗಾಗಿ ನಮ್ಮ ಪಕ್ಷದ ಮಾಜಿ ಶಾಸಕರನ್ನು ಭೇಟಿಯಾಗಲು ಅವರ ಮನೆ ಬಳಿ ಹೋಗಿದ್ದೆ. ಈ ವೇಳೆ ನಮ್ಮ ಹುಡುಗರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ರಾಸಾಯನಿಕ ನಮ್ಮ ಹುಡುಗರ ಮೇಲೆ ಎಸೆದಿದ್ದಾರೆ. ಸುಮಾರು 30-35 ಜನರ ಮೇಲೆ ಆ್ಯಸಿಡ್ ದಾಳಿಯಾಗಿದೆ. ದಾಳಿ ಮಾಡಿದವರು ಯಾರು ಅಂತ ಗೊತ್ತಿಲ್ಲ. ಹೀಗಾಗಿ ದಯವಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಹಿಡಿದು ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ನೀಡಬೇಕು ಅಂತ ಇನಾಯತುಲ್ಲಾ ಆಗ್ರಹಿಸಿದ್ದಾರೆ.

    ಮಾಜಿ ಶಾಸಕರ ಮುಂದೆ ನಾವು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದೆವು. ಸಂತೋಷದಿಂದ ಕುಣಿಯುತ್ತಾ ಇದ್ದೆವು. ಈ ವೇಳೆ ನಮ್ಮ ಮೇಲೆ ಸುರಿದಿದ್ದಾರೆ. ದಾಳಿಯಾಗುತ್ತಿದ್ದಂತೆಯೇ ನಮಗೆ ಉಸಿರು ಕಟ್ಟಿತ್ತು. ಒಟ್ಟಿನಲ್ಲಿ ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡಿದ್ದಾರೆ ಅಂತ ದಾಳಿಗೊಳಗಾದವರು ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LOJwlQXEAds

  • ಕುಡತಿನಿಯಲ್ಲಿ ಕಾಂಗ್ರೆಸ್ ಗೆದ್ದರೂ ಬಿಜೆಪಿ ಅಭ್ಯರ್ಥಿಗೆ ಅಧಿಕಾರ!

    ಕುಡತಿನಿಯಲ್ಲಿ ಕಾಂಗ್ರೆಸ್ ಗೆದ್ದರೂ ಬಿಜೆಪಿ ಅಭ್ಯರ್ಥಿಗೆ ಅಧಿಕಾರ!

    ಬಳ್ಳಾರಿ: ಜಿಲ್ಲೆಯ ಕುಡತಿನಿ ಪಟ್ಟಣ ಪಂಚಾಯತ್ ನಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆದ್ದರೆ, ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಸಂಡೂರಿನ ತಾಲೂಕಿನ ಕುಡತಿನಿ ಪಟ್ಟಣ ಪಂಚಾಯತಿಗೆ ನಡೆದ 19 ವಾರ್ಡ್ ಗಳ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ ಗಳಿಸಿದ್ರೆ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದ್ರೆ ಕಾಂಗ್ರೆಸ್ ಬಹುಮತ ಗಳಿಸಿದ್ರೂ ಅಧಿಕಾರದ ಗದ್ದುಗೆ ಮಾತ್ರ ಬಿಜೆಪಿಗೆ ದಕ್ಕಿದೆ.

    ಮೊದಲ ಬಾರಿಗೆ ನಡೆದ ಕುಡತಿನಿ ಪಟ್ಟಣ ಪಂಚಾಯತಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಎಸ್ ಟಿ ಪಂಗಡಕ್ಕೆ ಮೀಸಲಾದ್ರೆ, ಉಪಾಧ್ಯಕ್ಷ ಸ್ಥಾನ ಎಸ್‍ಸಿ ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್ 19 ವಾರ್ಡಗಳ ಪೈಕಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ರೂ ಎಸ್ ಟಿ/ ಎಸ್‍ಸಿ ಪಂಗಡದ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. ಹೀಗಾಗಿ ಬಿಜೆಪಿಯಿಂದ ಗೆದ್ದಿರುವ ಎಸ್ ಸಿ/ ಎಸ್ ಟಿ ಪಂಗಡದ ಅಭ್ಯರ್ಥಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಲಭಿಸುವುದು ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ಬಹುಮತ ಗಳಿಸಿದ್ರೂ ಅಧಿಕಾರದ ಗದ್ದುಗೆ ಹಿಡಿಯಲಾಗದೇ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

    ಕೊಟ್ಟೂರು ಪಟ್ಟಣ ಪಂಚಾಯತಿಯ 20 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 9, ಬಿಜೆಪಿ 8, ಹಾಗೂ 3 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಧಿಕಾರಕ್ಕೆ ಏರಲು 11 ಸ್ಥಾನಗಳು ಬೇಕಾದ ಹಿನ್ನೆಲೆಯಲ್ಲಿ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕುಡತಿನಿ ಹಾಗೂ ಕೊಟ್ಟೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ ಎಣಿಕಾ ಕೇಂದ್ರದಿಂದ ಕಿವಿಮುಚ್ಚಿಕೊಂಡು ಓಟಕ್ಕಿತ್ತ ಗೆದ್ದ ಕೈ ಸದಸ್ಯೆ! – ವಿಡಿಯೋ ನೋಡಿ

    ಮತ ಎಣಿಕಾ ಕೇಂದ್ರದಿಂದ ಕಿವಿಮುಚ್ಚಿಕೊಂಡು ಓಟಕ್ಕಿತ್ತ ಗೆದ್ದ ಕೈ ಸದಸ್ಯೆ! – ವಿಡಿಯೋ ನೋಡಿ

    ಉಡುಪಿ: ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಉಡುಪಿಯಲ್ಲಿ ವಿಜಯದ ಪತಾಕೆ ಹಾರಿಸಿದ್ದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಕಿವಿ ಮುಚ್ಚಿಕೊಂಡು ಓಡಿದ ಘಟನೆ ನಡೆದಿದೆ.

    ಉಡುಪಿ ನಗರಸಭೆಗೆ ಆಯ್ಕೆಯಾದ ಕಾಂಗ್ರೆಸ್ ನ ಸೆಲಿನಾ ಕರ್ಕಡ ಅವರು ಗೆಲುವನ್ನು ಘೋಷಿಸುತ್ತಿದ್ದಂತೆಯೇ ಮತ ಎಣಿಕಾ ಕೇಂದ್ರದಲ್ಲಿ ಮೋದಿಗೆ ಜೈಕಾರ ಹಾಕಲಾಯಿತು. ಬಿಜೆಪಿ ಕಾರ್ಯಕರ್ತರ ಮೋದಿ ಮೋದಿ ಕೂಗಿನ ಮಧ್ಯೆಯೇ ಸಾಗುತ್ತಿದ್ದ ಸದಸ್ಯೆಗೆ ಇರಿಸುಮುರಿಸು ಉಂಟಾಗಿದ್ದು, ಹೀಗಾಗಿ ಕಿವಿ ಮುಚ್ಚಿಕೊಂಡು ಅಲ್ಲಿಂದ ಓಟಕ್ಕಿತ್ತರು. ಇದನ್ನೂ ಓದಿ: ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- ಮಧ್ವರಾಜ್ ವಾರ್ಡ್ ನಲ್ಲೇ ಕಾಂಗ್ರೆಸ್ಸಿಗೆ ಸೋಲು

    ಉಡುಪಿಯ ಮೂಡುಪೆರಂಪಳ್ಳಿ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಸೆಲಿನಾ ಗೆಲುವಿನ ಬಳಿಕ ಅವರನ್ನು ಅಭಿನಂದಿಸಲು ಕಾರ್ಯಕರ್ತರ ಕೊರತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸೆಲಿನಾ ಅವರೇ ಹಾರ ಹಾಕಿಕೊಂಡು ಏಕಾಂಗಿಯಾಗಿ ತೆರಳಿದ್ದಾರೆ. ಇದನ್ನೂ ಓದಿ: ಶಾಸಕರ ಮುಂದೆ ಕಣ್ಣೀರು ಹಾಕಿದ ಜೆಡಿಎಸ್ ಕಾರ್ಯಕರ್ತ!

    ಒಟ್ಟಿನಲ್ಲಿ ಇಂದು ಕುತೂಹಲದಿಂದ ಕಾಯುತ್ತಿದ್ದ ಸ್ಥಳೀಯ ಸಂಸ್ಥೆಗಳು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ವಿಶೇಷ ಏನೆಂದರೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ.

    ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಶೇಕಡಾ 67.51ರಷ್ಟು ಮತದಾನವಾಗಿತ್ತು. ಒಟ್ಟು 2634 ವಾರ್ಡ್ ಗಳಲ್ಲಿ ಚುನಾವಣೆ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಸಕರ ಮುಂದೆ ಕಣ್ಣೀರು ಹಾಕಿದ ಜೆಡಿಎಸ್ ಕಾರ್ಯಕರ್ತ!

    ಶಾಸಕರ ಮುಂದೆ ಕಣ್ಣೀರು ಹಾಕಿದ ಜೆಡಿಎಸ್ ಕಾರ್ಯಕರ್ತ!

    ಮಂಡ್ಯ: ಜೆಡಿಎಸ್ ಕಾರ್ಯಕರ್ತರೊಬ್ಬರು ಶಾಸಕರ ಮುಂದೆ ಕಣ್ಣೀರು ಹಾಕಿ ತಮ್ಮ ಆಕ್ರೋಶ ಹೊರಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಕಾರ್ಯಕರ್ತ ನಿಂಗರಾಜು ಆಕ್ರೋಶ ಹೊರಹಾಕಿದ ಜೆಡಿಎಸ್ ಕಾರ್ಯಕರ್ತನಾಗಿದ್ದು, ಇವರು ಶಾಸಕ ಎಂ ಶ್ರೀನಿವಾಸ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ವಿರುದ್ಧ ಕಿಡಿಕಾರಿದ್ದಾರೆ.

    ನನಗೆ ಟಿಕೆಟ್ ನೀಡಿದ್ರೆ ನಾನೇ ಗೆಲ್ತಿದ್ದೆ. ನನಗೆ ಅನ್ಯಾಯ ಮಾಡಿದ್ದೀರಿ. ನಾನು 20ವರ್ಷಗಳಿಂದ ಪಕ್ಷಕ್ಕೆ ದುಡಿದ್ದೀನಿ. ಇಂದು ನನ್ನ ಮನೆ ಹಾಳಾಗಿದೆ ಎಂದು ನೋವು ತೊಡಿಕೊಂಡಿಕೊಂಡಿದ್ದಾರೆ. ಈ ವೇಳೆ ಬೆಂಬಲಿಗರು ನೊಂದ ಕಾರ್ಯಕರ್ತನನ್ನು ಶಾಸಕರ ಕಚೇರಿಯಿಂದ ಹೊರ ಹಾಕಿದ್ದಾರೆ.

    ನಿಂಗರಾಜು ಅವರ ಮಂಡ್ಯ ನಗರಸಭೆಯ 12ನೇ ವಾರ್ಡ್ ನಿಂದ ಸ್ಪರ್ಧಿಸಿದ್ದು, ನಾಲ್ಕನೇ ಸ್ಥಾನ ಪಡೆದಿದ್ದಾರೆ.

    ಮಂಡ್ಯ ಹಿಂದುಳಿದ ನಗರವಾಗಿತ್ತು. ಇನ್ನು ಮುಂದೆ ಅಭಿವೃದ್ಧಿ ಪಥದತ್ತ ಸಾಗಲಿದೆ. ಸಿಎಂ ನಮ್ಮವರು, ಮಂಡ್ಯದಲ್ಲಿ ನಾನು ಶಾಸಕನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಆಗಲಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಕಾರ್ಯ ವೈಖರಿ ಮೆಚ್ಚಿ ಜನ ಬೆಂಬಲಿಸಿದ್ದಾರೆ ಅಂತ ಶಾಸಕ ಎಂ ಶ್ರೀನಿವಾಸ್ ಸಂತಸ್ ವ್ಯಕ್ತಪಡಿಸಿ ಜಿಲ್ಲೆಯ ಜನರಿಗೆ ಧನ್ಯವಾದ ಸಲ್ಲಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟೆನಾಡಿನಲ್ಲಿ 2ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಗೆ ಗೆಲುವು

    ಕೋಟೆನಾಡಿನಲ್ಲಿ 2ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಗೆ ಗೆಲುವು

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮೂರು ಸ್ಥಳೀಯ ಸಂಸ್ಥೆಗಳ ಪೈಕಿ ಎರಡರಲ್ಲಿ ಬಿಜೆಪಿ ಗೆದ್ದಿದ್ದು, ಒಂದರಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ.

    ಚಿತ್ರದುರ್ಗ ನಗರಸಭೆ 35 ವಾರ್ಡ್ ಗಳಲ್ಲಿ ಬಿಜೆಪಿ 17, ಜೆಡಿಎಸ್ 6, ಕಾಂಗ್ರೆಸ್ 5 ಮತ್ತು ಪಕ್ಷೇತರರು 7 ವಾರ್ಡ್ ಗಳಲ್ಲಿ ಜಯಗಳಿಸಿದ್ದಾರೆ. ಚಳ್ಳಕೆರೆ ನಗರಸಭೆಯ 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 16, ಜೆಡಿಎಸ್ 10, ಬಿಜೆಪಿ 4 ಮತ್ತು ಪಕ್ಷೆತರರು 1ರಲ್ಲಿ ಜಯಗಳಿಸಿದ್ದಾರೆ.

    ಹೊಸದುರ್ಗ ಪುರಸಭೆಯ 21 ವಾರ್ಡ್ ಗಳಲ್ಲಿ ಬಿಜೆಪಿ 14, ಕಾಂಗ್ರೆಸ್ 4 ಮತ್ತು ಪಕ್ಷೇತರರು 5 ವಾರ್ಡ್ ಗಳಲ್ಲಿ ಜಯ ಸಾಧಿಸಿದ್ದು, ಚಿತ್ರದುರ್ಗ ನಗರಸಭೆ ಮತ್ತು ಹೊಸದುರ್ಗ ಪುರಸಭೆ ಬಿಜೆಪಿಗೆ ಪಾಲಾಗಿದೆ. ಚಳ್ಳಕೆರೆ ನಗರಸಭೆ ಕಾಂಗ್ರೆಸ್ ಕೈವಶವಾಗಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಚಿತ್ರದುರ್ಗ ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಏರಿದ ಸಂಭ್ರಮದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದಿನ ಚುನಾವಣಾ ಫಲಿತಾಂಶ- ಯಾವ ಪಕ್ಷಕ್ಕೆ ಏನು ಎಫೆಕ್ಟ್?

    ಇಂದಿನ ಚುನಾವಣಾ ಫಲಿತಾಂಶ- ಯಾವ ಪಕ್ಷಕ್ಕೆ ಏನು ಎಫೆಕ್ಟ್?

    ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಲೋಕಲ್ ರಿಸಲ್ಟ್ ಕ್ಷಣ ಬಂದೇ ಬಿಟ್ಟಿದೆ. ಆಗಸ್ಟ್ 31ರಂದು 102 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಸಮ್ಮಿಶ್ರ ಸರ್ಕಾರದ ಮೇಲೆ ಪರಣಾಮ ಬೀಳುವ ಸಾಧ್ಯತೆಗಳಿವೆ.

    ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರದ ಮೇಲಿನ ಜನಾಭಿಪ್ರಾಯ ಬಹಿರಂಗವಾಗುತ್ತದೆ. ಕಾಂಗ್ರೆಸ್, ಜೆಡಿಎಸ್ ಹೆಚ್ಚು ಸ್ಥಾನ ಗೆದ್ದರೆ ಮೈತ್ರಿ ಗಟ್ಟಿ ಸಾಧ್ಯತೆಗಳಿದ್ದು, ಕಡಿಮೆ ಸ್ಥಾನ ಗೆದ್ದರೆ ಮೈತ್ರಿ ಪಕ್ಷಗಳಲ್ಲಿ ಭಿನ್ನಮತ ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಫಲಿತಾಂಶಗಳನ್ನು ನೋಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಂ ಗೇಮ್ ಪ್ಲ್ಯಾನ್ ಚೇಂಜ್ ಮಾಡಬಹುದು. ಹಳೇ ಮೈಸೂರು ಭಾಗದಲ್ಲಿ ಕೈ, ಜೆಡಿಎಸ್ ಮೈತ್ರಿ ಅಗತ್ಯತೆ ನಿರ್ಧಾರ ಕೈಗೋಳ್ಳುವಂತಹ ಸಾಧ್ಯತೆಗಳು ಕೂಡ ಇದೆ. ಈ ಮಧ್ಯೆ ಆಪರೇಷನ್ ಕಮಲಕ್ಕೆ ದಾರಿ ಮಾಡಿಕೊಳ್ಳಲು ಪ್ಲ್ಯಾ ನ್ ಮಾಡಬಹುದಾದ ಸಾಧ್ಯತೆಗಳೂ ಇವೆ.

    ಸ್ಥಳೀಯ ಚುನಾವಣಾ ಫಲಿತಾಂಶದಿಂದ ಲೋಕಸಭಾ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು. ಲೋಕಸಭಾ ಚುನಾವಣೆ ಮೈತ್ರಿಗೆ ಈ ರಿಸಲ್ಟ್ ಮಾನದಂಡವಾಗಬಹುದು. ಕಾಂಗ್ರೆಸ್, ಜೆಡಿಎಸ್‍ಗೆ ಹಿನ್ನಡೆಯಾದ್ರೆ ಲೋಕ ಮೈತ್ರಿಗೆ ಕಂಟಕವಾಗಬಹುದು. ಫಲಿತಾಂಶವನ್ನೇ ಮುಂದಿಟ್ಟುಕೊಂಡು ಸೀಟು ಹಂಚಿಕೆ ಚೌಕಾಸಿ ನಡೆಸಬಹುದು. ಲೋಕ ಎಲೆಕ್ಷನ್‍ಗೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ನಿರ್ಧಾರವಾಗಬಹುದಾದ ಸಾಧ್ಯತೆಗಳು ಇದೆ.

    ಫಲಿತಾಂಶದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದರೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಹಿಡಿತ ಜಾಸ್ತಿಯಾಗಬಹುದು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಲೋಕಸಭೆ ಹೆಚ್ಚು ಸೀಟು ಕೇಳಬಹುದು. ಅಲ್ಲದೇ ಕಾಂಗ್ರೆಸ್ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಬಹುದು.

    ಕಾಂಗ್ರೆಸ್ ಪ್ರಾಬಲ್ಯ ಮೆರೆದರೆ ಸಮ್ಮಿಶ್ರ ಸರ್ಕಾರದ ಮೇಲೆ ಹಿಡಿತ ಮುಂದುವರಿಸಬಹುದು. ಸಿದ್ದರಾಮಯ್ಯ ಹಸ್ತಕ್ಷೇಪ ಜಾಸ್ತಿ ಆಗಬಹುದು. ಹಾಗೂ ಮೇಲ್ಮನೆ ನಾಮ ನಿರ್ದೇಶನ, ನಿಗಮ ಮಂಡಳಿ ನೇಮಕದ ಮೇಲುಗೈ ಸಾಧಿಸಬಹುದು.

    ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾದ್ರೆ ಬಿಜೆಪಿ ನಾಯಕರು ಕರ್ನಾಟಕದ ಮೇಲೆ ಹೆಚ್ಚು ಗಮನ ಕೊಡಬಹುದು. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಂತ್ರಗಾರಿಕೆ ಬದಲಿಸಬಹುದು. ರಾಜ್ಯ ನಾಯಕತ್ವದಲ್ಲಿ ಭಾರೀ ಪ್ರಮಾಣದ ಬದಲಾವಣೆ ಆಗಬಹುದು. ಮತ್ತು ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಕೆಡವಲು ಬಿಜೆಪಿ ಮುಂದಾಗಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯ ಆಪ್ತನ ನಡೆಯಿಂದ ಕಾಂಗ್ರೆಸ್ ಮುಖಂಡರಲ್ಲಿ ಆತಂಕ!

    ಸಿದ್ದರಾಮಯ್ಯ ಆಪ್ತನ ನಡೆಯಿಂದ ಕಾಂಗ್ರೆಸ್ ಮುಖಂಡರಲ್ಲಿ ಆತಂಕ!

    ಬೆಳಗಾವಿ: ಕಾಂಗ್ರೆಸ್ ಮುಖಂಡ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ನಿಗೂಢ ನಡೆಯಿಂದ ಇದೀಗ ಪಕ್ಷದ ಮುಖಂಡರಲ್ಲಿ ಆತಂಕ ಮೂಡಿದೆ.

    ತಾನು ತೆರಳದೆ ತನ್ನ ಬೆಂಬಲಿಗ ಶಾಸಕರಿಗೂ ಬೆಂಗಳೂರಿಗೆ ತೆರಳದಂತೆ ಸೂಚನೆ ನಿಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಅಥಣಿ ಕಾಂಗ್ರೆಸ್ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರಿಗೂ ಬೆಂಗಳೂರಿಗೆ ತೆರಳದಂತೆ ರಮೇಶ್ ಸೂಚನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಲು ರಮೇಶ ಜಾರಕಿಹೊಳಿ ಆದೇಶಕ್ಕೆ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಕಾದು ಕುಳಿತಿದ್ದಾರೆ ಎನ್ನಲಾಗಿದೆ.

    ಇಬ್ಬರೂ ಅಭ್ಯರ್ಥಿಗಳ ಆಯ್ಕೆಗಾಗಿ ಹಗಲಿರುಳು ಶ್ರಮ ವಹಿಸಿದ್ದ ರಮೇಶ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಅವರು ನಿಗೂಢ ನಡೆಯಿಂದಾಗಿ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಆತಂಕ ಮೂಡಿದೆ ಎಂಬುದಾಗಿ ತಿಳಿದುಬಂದಿದೆ.