Tag: election officials

  • ರಾಗಾ ಹೆಲಿಕಾಪ್ಟರ್‌ ತಪಾಸಣೆ ನಡೆಸಿದ ಫ್ಲೈಯಿಂಗ್‌ ಸ್ಕ್ವಾಡ್‌ – ಮುಂದೇನಾಯ್ತು?

    ರಾಗಾ ಹೆಲಿಕಾಪ್ಟರ್‌ ತಪಾಸಣೆ ನಡೆಸಿದ ಫ್ಲೈಯಿಂಗ್‌ ಸ್ಕ್ವಾಡ್‌ – ಮುಂದೇನಾಯ್ತು?

    ಚೆನ್ನೈ: ಕಾಂಗ್ರೆಸ್‌ ಸಂಸದರೂ ಆಗಿರುವ ವಯನಾಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ (Rahul Gandhi’s Helicopter) ಅನ್ನು ಚುನಾವಣಾ ಅಧಿಕಾರಿಗಳು ಇಂದು (ಸೋಮವಾರ) ತಪಾಸಣೆ ನಡೆಸಿದ್ದಾರೆ.

    ಚುಣಾವಣಾ ಪ್ರಚಾರಕ್ಕಾಗಿ‌ ತೆರಳುತ್ತಿದ್ದ ವೇಳೆ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ (ಇಸಿಐ) ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು (Election Commission’s Flying Squad officials) ರಾಗಾ ಅವರ ಹೆಲಿಕಾಪ್ಟರ್‌ ಅನ್ನು ತಪಾಸಣೆ ನಡೆಸಿದರು. ಇದನ್ನೂ ಓದಿ: 70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    ಅಧಿಕಾರಿಗಳ ತಪಾಸಣೆಗೆ ಸಹಕರಿಸಿದ ರಾಹುಲ್‌ ಗಾಂಧಿ, ಬಳಿಕ ತಮ್ಮ ಸಂಸದೀಯ ಕ್ಷೇತ್ರ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಬೃಹತ್ ರೋಡ್ ಶೋ (Rahul Gandhi Road Show) ನಡೆಸಿದರು. ಇದಕ್ಕೂ ಮುನ್ನ ನೀಲಗಿರಿ ಜಿಲ್ಲೆಯಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿಯೂ ಪಾಲ್ಗೊಂಡರು.

    ಬಿಜೆಪಿ ಪ್ರಣಾಳಿಕೆ ವಿರುದ್ಧ ವಾಗ್ದಾಳಿ:
    ಒಂದು ದಿನದ ಹಿಂದೆಯಷ್ಟೇ ರಾಹುಲ್‌ ಗಾಂಧಿ ಬಿಜೆಪಿ ಪ್ರಣಾಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಪಕ್ಷವು ಪ್ರಣಾಳಿಕೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರವನ್ನು ನಿರ್ಲಕ್ಷಿಸಿದೆ. ಪ್ರಣಾಳಿಕೆ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಣದುಬ್ಬರ ಮತ್ತು ನಿರುದ್ಯೋಗ ಬಿಜೆಪಿಯ ಪ್ರಣಾಳಿಕೆಯಿಂದ ಕಾಣೆಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಜನರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಚರ್ಚಿಸಲು ಸಹ ಬಿಜೆಪಿ ಬಯಸುವುದಿಲ್ಲ. ಆದರೆ ಈ ಬಾರಿ ಯುವಕರು ಪ್ರಧಾನಿ ಮೋದಿಯವರ ಬಲೆಗೆ ಬೀಳುವುದಿಲ್ಲ. ಅವರು ಈಗ ಕಾಂಗ್ರೆಸ್‌ನ ಕೈಗಳನ್ನು ಬಲಪಡಿಸುತ್ತಾರೆ ಮತ್ತು ದೇಶದಲ್ಲಿ ‘ಉದ್ಯೋಗ ಕ್ರಾಂತಿ’ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ನಕಲಿ ವೋಟರ್ ಐಡಿ: 14 ಜನರ ವಿರುದ್ಧ ಎಫ್‍ಐಆರ್

    ನಕಲಿ ವೋಟರ್ ಐಡಿ: 14 ಜನರ ವಿರುದ್ಧ ಎಫ್‍ಐಆರ್

    ಬೆಂಗಳೂರು: ನಕಲಿ ಚುನಾವಣಾ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಆರೋಪದಲ್ಲಿ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದಾರೆ.

    ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದೇರಾಜು ಎಂಬವರಿಂದ ದೂರು ಪಡೆದು ಐಪಿಸಿ ಸೆಕ್ಷನ್ 171 ಬಿ ಮತ್ತು ಪ್ರಜಾ ಪ್ರತನಿಧಿ ಕಾಯ್ದೆ 127 ಎ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಸೋಮವಾರ ಪೊಲೀಸರು ಎನ್‍ಸಿಆರ್ ದಾಖಲಿಸಿದ್ರು. ಬಳಿಕ ಇಂದು 5ನೇ ಎಸಿಎಂಎಂ ಕೋರ್ಟ್ ನ ಅನುಮತಿ ಪಡೆದು ಎಫ್‍ಐಆರ್ ದಾಖಲು ಮಾಡಲಾಗಿದೆ.

    ಏನಿದು ಪ್ರಕರಣ: ಸೋಮವಾರ ರಾತ್ರಿ ನಗರದ ಉಪ್ಪಾರಪೇಟೆಯ ಪ್ರಭಾತ್ ಕಾಂಪ್ಲೆಕ್ಸ್ ಮೇಲೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದರು. ನಕಲಿ ಮತದಾರರ ಚೀಟಿಗಳನ್ನು ಮುದ್ರಣ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿದ ಪರಿಣಾಮ ದಾಳಿ ನಡೆಸಲಾಗಿತ್ತು. ನಕಲಿ ಕೇಂದ್ರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಕಲಿ ಮತದಾರರ ಪಟ್ಟಿ, ಸೀಲ್‍ಗಳು, ಇನ್ನಿತರ ವಸ್ತುಗಳು ಪತ್ತೆಯಾಗಿತ್ತು. ನಗರದ ಕೆಜಿ ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಗಿದ್ದ ಈ ಕಚೇರಿ ಖಲೀಲುಲ್ಲಾ ಎಂಬವರಿಗೆ ಸೇರಿದೆ.

  • ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಮಂಡ್ಯ: ಜ್ಯೋತಿಷ್ಯ ಮಂದಿರದ ಬೋರ್ಡ್ ನಲ್ಲಿ ಹಸ್ತದ ಚಿಹ್ನೆ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಬೋರ್ಡ್ ಗೆ ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಅಶೋಕ ನಗರದಲ್ಲಿರುವ ಜ್ಯೋತಿಷ್ಯ ಮಂದಿರದ ಬೋರ್ಡ್ ಗೆ ಅಧಿಕಾರಿಗಳು ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಸಾಮಾನ್ಯವಾಗಿ ಹಲವು ಜ್ಯೋತಿಷ್ಯ ಕೇಂದ್ರಗಳಲ್ಲಿ ನಿಮ್ಮ ಹಸ್ತವನ್ನು ನೋಡಿ ಜ್ಯೋತಿಷ್ಯ ಹೇಳುತ್ತೇವೆ ಅಂತ ಜ್ಯೋತಿಷಿಗಳು ಹಸ್ತದ ಚಿಹ್ನೆ ಇರುವ ಬೋರ್ಡ್ ಗಳನ್ನು ಹಾಕಿರುತ್ತಾರೆ. ಆದ್ರೆ ಈ ಹಸ್ತ ಕಾಂಗ್ರೆಸ್ ಪಕ್ಷದ ಚಿಹ್ನೆ ಕೂಡ ಆಗಿರುವುದರಿಂದ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.

    ಸದ್ಯ ಜಾರಿಯಲ್ಲಿರುವ ನೀತಿ ಸಂಹಿತೆ ಅವಧಿ ಮುಗಿಯುವವರೆಗೂ ಜ್ಯೋತಿಷಿ ಕೇಂದ್ರದ ಮುಂದೆ ಹಸ್ತ ಚಿಹ್ನೆ ಇರುವ ಬೋರ್ಡ್ ಹಾಕಬಾರದು ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ನಾಟಕದಲ್ಲಿ 120 ಕೋಟಿ ರೂ. ಪತ್ತೆ – ವೈರಲ್ ಆಯ್ತು ಫೋಟೋ, ಮೆಸೇಜ್

    ಕರ್ನಾಟಕದಲ್ಲಿ 120 ಕೋಟಿ ರೂ. ಪತ್ತೆ – ವೈರಲ್ ಆಯ್ತು ಫೋಟೋ, ಮೆಸೇಜ್

    ಚಿಕ್ಕಬಳ್ಳಾಪುರ: “ಗೌರಿಬಿದನೂರು ತಾಲೂಕು ಆಂಧ್ರದ ಗಡಿಭಾಗದ ತಿಪ್ಪಗಾನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ವಾಹನಗಳ ತಪಾಸಣೆ ನಡೆಸಿದ ವೇಳೆ 120 ಕೋಟಿ ರೂ. ಸಿಕ್ಕಿದೆ. ಸಿಕ್ಕಿರುವ ಫೋಟೋ ಇಲ್ಲಿದೆ ನೋಡಿ”

    ಈ ರೀತಿಯ ಮೆಸೇಜ್ ಜೊತೆಗೆ, ಬೇರೆ-ಬೇರೆಯ ಫೋಟೋಗಳನ್ನ ಜೊತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುದ್ದಿ ಶೇರ್ ಆಗುತ್ತಿದೆ. ದಯವಿಟ್ಟು ಈ ಸುದ್ದಿಯನ್ನು ನಂಬಬೇಡಿ, ಇದೊಂದು ಸುಳ್ಳು ಸುದ್ದಿಯಾಗಿದ್ದು ಯಾರೋ ಕಿಡಿಗೇಡಿಗಳು ತಪಾಸಣೆ ವೇಳೆ ಪತ್ತೆಯಾದ ಬಾಕ್ಸ್ ಗಳಿಗೆ 2 ಸಾವಿರ ಹಣದ ಬಾಕ್ಸ್ ಸೇರಿಸಿ ಅಪ್ಲೋಡ್ ಮಾಡಿದ್ದಾರೆ.

    ನಿಜವಾದ ಸುದ್ದಿ ಏನು?
    ಗಡಿಭಾಗದಲ್ಲಿ ವಾಹನ ತಪಾಸಣೆ ವೇಳೆ ಚುನಾವಣಾಧಿಕಾರಿಗಳು ಖಾಸಗಿ ಬಸ್ ಒಂದನ್ನು ತಪಾಸಣೆಗೆ ನಡೆಸಿದಾಗ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಸೀರೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ಇದೇ ಫೋಟೋಗಳನ್ನು ಬಳಸಿಕೊಂಡ ಕೆಲ ಕಿಡಿಗೇಡಿಗಳು ದಾಳಿಯ ಫೋಟೋಗಳ ಜೊತೆಗೆ ಎಲ್ಲೋ ತೆಗೆಯಲಾಗಿರುವ ಹಣದ ಫೋಟೋಗಳನ್ನ ಜೊತೆಗೂಡಿಸಿ 120 ಕೋಟಿ ರೂ. ಪತ್ತೆಯಾಗಿದೆ ಅಂತ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದಾರೆ.

    ಕಿಡಿಗೇಡಿಗಳ ಕೃತ್ಯದಿಂದ ಈ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ. ಇದರಿಂದ ಚುನಾವಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಕರೆ ಮಾಡಿ ಈ ಮಾಹಿತಿ ನಿಜವೇ ಎಂದು ಮಾಹಿತಿ ಕೇಳುತ್ತಿದ್ದಾರೆ. ಇದರಿಂದಾಗಿ ಪದೆ ಪದೇ ಕರೆಗಳು ಬರುತ್ತಿರುವುದಕ್ಕೆ ಚುನಾವಣಾಧಿಕಾರಿಗಳು ಉತ್ತರಿಸಿ ಹೈರಾಣಾಗಿ ಹೋಗಿದ್ದಾರೆ.