Tag: election duty

  • ಚುನಾವಣಾ ಕರ್ತವ್ಯ ಲೋಪ – ಮೂವರು ಅಧಿಕಾರಿಗಳ ಅಮಾನತು

    ಚುನಾವಣಾ ಕರ್ತವ್ಯ ಲೋಪ – ಮೂವರು ಅಧಿಕಾರಿಗಳ ಅಮಾನತು

    ಕಾರವಾರ: ಚುನಾವಣಾ ಕರ್ತವ್ಯ (Election Duty) ಲೋಪ ಎಸಗಿದ ಮೂವರು ಜನ ಅಧಿಕಾರಿಗಳನ್ನು ಉತ್ತರ ಕನ್ನಡ (Uttara Kannada) ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್‍ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ್ ನಾಯ್ಕ, ಲಕ್ಷ್ಮಣ್ ಮೊಗೇರ, ಶ್ರೀಧರ ನಾಯ್ಕ್ ಎಂಬವರು ಚುನಾವಣಾ ಸಂಬಂಧ ಎಲ್ಲಾ ಕರ್ತವ್ಯದಲ್ಲೂ ನಿರ್ಲಕ್ಷತನ ತೋರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತು ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ನಕಲಿ ವೀಡಿಯೋ ಪ್ರಕರಣ – ಕಾಂಗ್ರೆಸ್‌ ಕಾರ್ಯಕರ್ತ ಅರೆಸ್ಟ್‌

    ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ತಿಂಗಳ 7 ರಂದು ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಲುಕ್‌ಔಟ್ ನೋಟಿಸ್

  • ಇನ್‍ಸ್ಟಾಗ್ರಾಮ್‍ನಲ್ಲಿ ಚುನಾವಣಾ ಆಯೋಗದ ಕಾರ್‌ನೊಂದಿಗೆ ಐಎಎಸ್ ಅಧಿಕಾರಿ ಪೋಸ್ಟ್ – ಕರ್ತವ್ಯದಿಂದ ವಜಾ

    ಇನ್‍ಸ್ಟಾಗ್ರಾಮ್‍ನಲ್ಲಿ ಚುನಾವಣಾ ಆಯೋಗದ ಕಾರ್‌ನೊಂದಿಗೆ ಐಎಎಸ್ ಅಧಿಕಾರಿ ಪೋಸ್ಟ್ – ಕರ್ತವ್ಯದಿಂದ ವಜಾ

    ಗಾಂಧೀನಗರ: ಗುಜರಾತ್ ವಿಧಾನಸಭೆ (Gujarat Election) ಚುನಾವಣೆಗಾಗಿ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ (Abhishek Singh) ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಕೇಂದ್ರ ಚುನಾವಣಾ ಆಯೋಗ (Election Commission) ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದುಹಾಕಿದೆ.

    ಅಭಿಷೇಕ್ ಸಿಂಗ್‍ರನ್ನು ಅಹಮದಾಬಾದ್‍ನ ಬಾಪುನಗರ ಮತ್ತು ಅಸರ್ವಾ ಎರಡು ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರಾಗಿ ನೇಮಕ ಮಾಡಲಾಗಿತ್ತು. ಆ ಬಳಿಕ ಅಭಿಷೇಕ್ ಸಿಂಗ್ ಇನ್‍ಸ್ಟಾಗ್ರಾಮ್‍ನಲ್ಲಿ ಚುನಾವಣಾ ಆಯೋಗದಿಂದ ನೀಡಲಾಗಿದ್ದ ಅಧಿಕೃತ ವಾಹನದ ಪಕ್ಕದಲ್ಲಿ ನಿಂತು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ವಾಹನದ ಮುಂಭಾಗದಲ್ಲಿ ʼಭಾರತೀಯ ಚುನಾವಣಾ ಆಯೋಗದ ವೀಕ್ಷಕʼ ಎಂದು ಬರೆಯಲಾಗಿತ್ತು. ಇದನ್ನು ಗಮನಿಸಿ ಚುನಾವಣಾ ಆಯೋಗ ಅವರನ್ನು ಚುನಾವಣಾ ಕರ್ತವ್ಯದಿಂದ ತೆಗೆದು ಹಾಕಿದ್ದು, ಪ್ರಚಾರದ ಗೀಳಿನಿಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಸಾಮಾನ್ಯ ವೀಕ್ಷಕರನ್ನು ನೇಮಿಸುವವರೆಗೆ ಈ ಎರಡು ಕ್ಷೇತ್ರಗಳ ಉಸ್ತುವಾರಿಯನ್ನು ಐಎಎಸ್ ಅಧಿಕಾರಿ ಕ್ರಿಶನ್ ಬಾಜ್‍ಪೇಯ್ ಅವರಿಗೆ ನೀಡಲಾಗಿದೆ. ಕ್ರಿಶನ್ ಅವರು ಇತರ ಹತ್ತಿರದ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಆಯ್ಕೆ ಸಮಿತಿ ವಜಾ – ಹೊಸ ಸಮಿತಿ ರಚನೆಗೆ ಅರ್ಜಿ ಆಹ್ವಾನ

     

    View this post on Instagram

     

    A post shared by Abhishek Singh (@abhishek_as_it_is)

    ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಭಿಷೇಕ್ ಸಿಂಗ್ ಅವರನ್ನು ತೆಗೆದುಹಾಕಲಾಗಿದೆ ಮತ್ತು ಸಾಮಾನ್ಯ ವೀಕ್ಷಕರನ್ನು ನೇಮಿಸುವವರೆಗೆ ಕ್ರಿಶನ್ ಬಾಜ್‍ಪೇಯ್ ಅವರಿಗೆ ಉಸ್ತುವಾರಿ ನೀಡಲಾಗಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಅಜಯ್ ಭಟ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    Live Tv
    [brid partner=56869869 player=32851 video=960834 autoplay=true]

  • ಚುನಾವಣಾ ಕರ್ತವ್ಯ ಲೋಪ- ರೆವಿನ್ಯೂ ಇನ್ಸ್‌ಪೆಕ್ಟರ್ ಅಮಾನತು

    ಚುನಾವಣಾ ಕರ್ತವ್ಯ ಲೋಪ- ರೆವಿನ್ಯೂ ಇನ್ಸ್‌ಪೆಕ್ಟರ್ ಅಮಾನತು

    ಬೆಂಗಳೂರು: ಲೋಕಸಭಾ ಚುನಾವಣಾ ಕಾರ್ಯಕ್ಕೆ ಗೈರಾದ ರೆವಿನ್ಯೂ ಇನ್ಸ್‌ಪೆಕ್ಟರ್ ಅವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್ ರೆಡ್ಡಿ ಚುನಾವಣಾ ಕಾರ್ಯಗಳಿಗೆ ಗೈರಾಗುತ್ತಿದ್ದರು. ಆದರೆ ಹಾಜರಾತಿಯಲ್ಲಿ ಮಾತ್ರ ಹೆಸರು ನಮೂದಿಸಿ ಅಶ್ರದ್ಧೆ, ಅಸಡ್ಡೆ, ಅದಕ್ಷತೆ ತೋರಿದ್ದಾರೆ.

    ಚುನಾವಣಾ ಲೋಪ ಎಸಗಿದ ಸಂಬಂಧ ಅನೇಕ ಬಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ ಮಂಜುನಾಥ್ ರೆಡ್ಡಿ ಅವರು ತಮ್ಮ ಚಾಳಿಯನ್ನು ಮುಂದುವರಿಸಿದ್ದರು. ಹೀಗಾಗಿ ಅವರನ್ನು ಜಿಲ್ಲಾಧಿಕಾರಿ ವಿಜಯಶಂಕರ್ ಹಾಗೂ ಚುನಾವಣಾಧಿಕಾರಿ ಮದನ್ ಮೋಹನ್ ಅಮಾನತುಗೊಳಿಸಿದ್ದಾರೆ.

    ಚುನಾವಣೆಗೆ ಲೋಪ ಮಾಡಿದವರು ಯಾರೆ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

    ಚುನಾವಣೆ ಡ್ಯೂಟಿಗೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಸಿಆರ್‌ಪಿಎಫ್‌ ಪೇದೆ

    ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಸಿಆರ್‌ಪಿಎಫ್‌ನ ಕಾನ್ಸ್​ಟೇಬಲ್ ಓರ್ವ ತನ್ನ ಪತ್ನಿಯನ್ನೇ ಕೊಂದ ಘಟನೆ ಛತ್ತೀಸ್‍ಗಢದ ಜಗ್ದಲ್‍ಪುರದಲ್ಲಿ ನಡೆದಿದೆ.

    ಕೋಬ್ರಾ ಬೆಟಾಲಿಯನ್‍ನ ಕಾನ್ಸ್​ಟೇಬಲ್ ಗುರುವೀರ್ ಸಿಂಗ್ ಕೊಲೆ ಮಾಡಿದ ಆರೋಪಿ. ಗುರುವೀರ್ ಸಿಂಗ್ ಸಿಆರ್‌ಪಿಎಫ್‌ನ 201 ಕೋಬ್ರಾ ಬೆಟಾಲಿಯನ್‍ನ ಹೆಡ್ ಕ್ವಾಟ್ರಸ್‍ನಲ್ಲಿ ಪತ್ನಿಯ ಜೊತೆ ವಾಸವಾಗಿದ್ದರು. ಮಾರ್ಚ್ 16ರಂದು ಕರ್ತವ್ಯಕ್ಕೆ ತೆರಳಲು ಅಡ್ಡಿಪಡಿಸಿದ್ದಕ್ಕೆ ಕೋಪಗೊಂಡು ಪತ್ನಿ ಅನುಪ್ರಿಯ ಗೌತಮ್‍ಳನ್ನು ಕತ್ತು ಹಿಸುಕಿ ಕಾನ್ಸ್​ಟೇಬಲ್ ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ.

    ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆ ಬಳಿಕ ನಿಜ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 301 ಹಾಗೂ 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.