Tag: Election Commission of India

  • ಟಿಆರ್‌ಎಸ್‌ ಅಲ್ಲ, ಇನ್ಮುಂದೆ ಬಿಆರ್‌ಎಸ್‌ – ಕೆಸಿಆರ್‌ ಪಕ್ಷದ ಹೆಸರು ಬದಲಾವಣೆಗೆ ಚುನಾವಣಾ ಆಯೋಗ ಒಪ್ಪಿಗೆ

    ಟಿಆರ್‌ಎಸ್‌ ಅಲ್ಲ, ಇನ್ಮುಂದೆ ಬಿಆರ್‌ಎಸ್‌ – ಕೆಸಿಆರ್‌ ಪಕ್ಷದ ಹೆಸರು ಬದಲಾವಣೆಗೆ ಚುನಾವಣಾ ಆಯೋಗ ಒಪ್ಪಿಗೆ

    ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (K Chandrashekhar Rao)  ಅವರ ತೆಲಂಗಾಣ ರಾಷ್ಟ್ರ ಸಮಿತಿ (Telangana Rashtra Samithi) ಪಕ್ಷದ ಹೆಸರು ಬದಲಾವಣೆಯಾಗಿದೆ. ಈ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (Bharat Rashtra Samithi) ಎಂದು ಮರುನಾಮಕರಣ ಮಾಡಲಾಗಿದೆ.

    ಕೆಸಿಆರ್‌ (KCR) ಪಕ್ಷದ ಹೊಸ ಹೆಸರಿಗೆ ಕೇಂದ್ರ ಚುನಾವಣಾ ಆಯೋಗ (Election Commission of India) ಒಪ್ಪಿಗೆ ಸೂಚಿಸಿದೆ. ಟಿಆರ್‌ಎಸ್ (TRS) ಹೆಸರನ್ನು ಬಿಆರ್‌ಎಸ್ (BRS) ಎಂದು ಬದಲಾಯಿಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಔಪಚಾರಿಕವಾಗಿ ಅನುಮೋದನೆ ನೀಡಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

    ಪಕ್ಷದ ಹೆಸರು ಬದಲಾವಣೆ ಕುರಿತು ಆಯೋಗವು ಶೀಘ್ರದಲ್ಲೇ ಅಗತ್ಯ ಅಧಿಸೂಚನೆ ಹೊರಡಿಸಲಿದೆ. ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರಿಗೆ ಪತ್ರ ಬರೆದು ಗುರುವಾರ ಈ ಕುರಿತು ಮಾಹಿತಿ ನೀಡಿದೆ.

    ಪಕ್ಷದ ಹೆಸರನ್ನು ಔಪಚಾರಿಕವಾಗಿ ಬದಲಾಯಿಸಲು ಶುಕ್ರವಾರ ಮಧ್ಯಾಹ್ನ 1:20 ಕ್ಕೆ ಸಮಾರಂಭಕ್ಕೆ ವ್ಯವಸ್ಥೆ ಮಾಡುವಂತೆ ಚಂದ್ರಶೇಖರ ರಾವ್ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: Gujarat Election Result: ಜಿಗ್ನೇಶ್‌ ಮೇವಾನಿಗೆ ಜಯ

    Live Tv
    [brid partner=56869869 player=32851 video=960834 autoplay=true]

  • BJP ಸರ್ಕಾರ ಕರ್ನಾಟಕಕ್ಕೆ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ – ಡಿಕೆಶಿ

    BJP ಸರ್ಕಾರ ಕರ್ನಾಟಕಕ್ಕೆ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ – ಡಿಕೆಶಿ

    ಬೆಂಗಳೂರು: ಐಟಿ-ಬಿಟಿ (ITBT), ಕೆಂಪೇಗೌಡರ ನಾಡು ಅಂತಾ ಕರೆಯುತ್ತಿದ್ದ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ.

    ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿರ್ಧಾರ ಕುರಿತು ಕೆಪಿಸಿಸಿ (KPCC) ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

    ಐಟಿ-ಬಿಟಿ, ಕೆಂಪೇಗೌಡರ ನಾಡು ಎಂದೇ ಕರೆಯುತ್ತಿದ್ದ ಕರ್ನಾಟಕಕ್ಕೆ ಕಳಂಕಿತ ರಾಜ್ಯ ಅನ್ನೋ ಬಿರುದನ್ನು ಬಿಜೆಪಿ ಸರ್ಕಾರ (BJP Government) ತಂದುಕೊಟ್ಟಿದೆ. ಪ್ರತಿಯೊಂದರಲ್ಲೂ ಭ್ರಷ್ಟ ರಾಜ್ಯ ಆಗಿದೆ. ಜನರು ತಮ್ಮ ಮತದಾನದ ಹಕ್ಕನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ವೈಷ್ಣವಿ ಹಾಗೂ ವಿದ್ಯಾಭರಣ್ ಪರಿಚಯವಾಗಿದ್ದು 2017ರಲ್ಲಿ: ಚಾಕೋಲೇಟ್ ಬಾಯ್ ಸ್ಟೋರಿ

    ಕೇಂದ್ರ ಚುನಾವಣಾ ಆಯೋಗಕ್ಕೆ (Election Commission Of India) ವೋಟರ್ ಐಡಿ (Voter ID) ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ದೆಹಲಿಯಲ್ಲಿ ದೂರು ನೀಡಿದ್ದೇವೆ. ಅದರಂತೆ ಉಪ ಆಯುಕ್ತರೇ ಇಲ್ಲಿ ಬಂದು, ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ. ಸರ್ಕಾರ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಕೆಲ ಅಧಿಕಾರಗಳನ್ನ ಅಮಾನತು ಮಾಡಿದ್ದಾರೆ. ಚುನಾವಣಾ ಆಯೋಗದ ಕ್ರಮವನ್ನ ಸ್ವಾಗತ ಮಾಡ್ತೇವೆ ಎಂದು ಹೇಳಿದ್ದಾರೆ.

    ಅಕ್ರಮ ಡೇಟಾ ವಾಪಸ್ ಪಡೆಯಬೇಕು ಅಂತ ಹೇಳಿದ್ದಾರೆ. ಡೇಟಾ ಈಗಾಗಲೇ ಬಿಜೆಪಿ (BJP) ನಾಯಕನ ಬಳಿ ಇದೆ. ಇದೊಂದು ಕ್ರಿಮಿನಲ್ ಕೆಲಸ. ಬಿಜೆಪಿ ಕೆಲ ಶಾಸಕರು ಇದರಲ್ಲಿ ಶಾಮೀಲಾಗಿದ್ದಾರೆ. ಇದಕ್ಕೆ ದಾಖಲೆಗಳು ಕೂಡಾ ಇವೆ. ಇಂತಹ ಅಕ್ರಮ ಬೊಮ್ಮಾಯಿ (Basavaraj Bommai) ಸರ್ಕಾರದ ಅವಧಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಆಗಿದೆ. ಯಾವ ನಾಯಕರು ಯಾರ ಸಂಪರ್ಕದಲ್ಲಿದ್ದಾರೆ ಅಂತಾ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

    ಅಂಕಪಟ್ಟಿ ಸೇರಿದಂತೆ ಎಲ್ಲ ಮಾಹಿತಿ ಕಳವು ಮಾಡಲಾಗಿದೆ. ಈಗ ವೋಟ್‌ಗಳನ್ನು ಕದ್ದು ದುರ್ಬಳಕೆ ಮಾಡಿಕೊಂಡಿದ್ದಾರೆ. ಕರ್ನಾಟಕಕ್ಕೆ ಕಳಂಕಿತ ರಾಜ್ಯ ಅಂತ ಹೆಸರು ಈ ಸರ್ಕಾರ ಕೊಟ್ಟಿದೆ. ರಾಜ್ಯದ ಜನರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

    ಬೆಂಗಳೂರಿನ ಮೂರು ಕ್ಷೇತ್ರ ಮಾತ್ರವಲ್ಲ, 28 ಕ್ಷೇತ್ರ ಮತ್ತು ರಾಜ್ಯದ 224 ಕ್ಷೇತ್ರದ ಮತಗಳು ಕೂಡಾ ಸರಿ ಮಾಡೋ ಕೆಲಸ ಆಗಬೇಕು. ಅಕ್ರಮದಲ್ಲಿ ಭಾಗಿಯಾಗಿರೋ ರಾಜಕಾರಣಿ, ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಹೆಸರು ಬಹಿರಂಗ ಆಗಬೇಕು. ನಮ್ಮ ಕಾಲದಲ್ಲಿ ಅಕ್ರಮ ಆಗಿದ್ದರೆ ನಮ್ಮ ಮೇಲೂ ದೂರು ಕೊಡಿ, ಕ್ರಮ ಆಗಲಿ ಎಂದು ಆಗ್ರಹಿಸಿದ್ದಾರೆ.

    ಅಕ್ರಮದಲ್ಲಿ ಬೊಮ್ಮಾಯಿ ಕಿಂಗ್‌ಪಿನ್: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ವೋಟರ್ ಐಡಿ ಅಕ್ರಮದಲ್ಲಿ ಕಿಂಗ್‌ಪಿನ್ ಸಿಎಂ ಬೊಮ್ಮಾಯಿ ಆಗಿದ್ದಾರೆ. ಕೂಡಲೇ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

    ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಪಟ್ಟಿ ಆಗಬೇಕು. ನಿಷ್ಪಕ್ಷಪಾತವಾಗಿ ಚುನಾವಣಾ ಆಯೋಗ ತನಿಖೆ ಮಾಡಬೇಕು. ಜನರು ಯಾರನ್ನ ಬೇಕಾದ್ರೂ ಗೆಲ್ಲಿಸಲಿ. ಆದರೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಅಕ್ರಮ ತನಿಖೆ ಆಗಬೇಕು. ಅಕ್ರಮ ಮಾಡಿರೋ ಫ್ರಾಡ್‌ಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೋಟರ್‌ ಗೇಟ್‌ ಹಗರಣ – 3 ಕ್ಷೇತ್ರ ಉಸ್ತುವಾರಿಗಳ ಅಮಾನತುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ

    ವೋಟರ್‌ ಗೇಟ್‌ ಹಗರಣ – 3 ಕ್ಷೇತ್ರ ಉಸ್ತುವಾರಿಗಳ ಅಮಾನತುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ

    ಬೆಂಗಳೂರು: ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಪಟ್ಟಿಗೆ (Voter ID Scam) ಕನ್ನ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ (Election Commission of India) ಮಹತ್ವದ ನಿರ್ದೇಶನಗಳನ್ನು ನೀಡಿದೆ. ಕಾಂಗ್ರೆಸ್ ನಾಯಕರ ದೂರಿನ ಬಳಿಕ ರಾಜ್ಯ ಚುನಾವಣಾ ಆಯೋಗ (Election Commission of Karnataka) ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೆಲವು ಸೂಚನೆಗಳನ್ನು ರವಾನಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ದೇಶಿಸಿದೆ.

    ವಿವಾದಿತ ಕ್ಷೇತ್ರಗಳಾದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರದಲ್ಲಿ ಮತದಾರರ ಪಟ್ಟಿ ಬಗ್ಗೆ ಪರಿಶೀಲನೆ ನಡೆಸಬೇಕು, ಮತದಾರರ ಸೇರ್ಪಡೆ ಮತ್ತು ಕೈ ಬಿಟ್ಟಿರುವ ಬಗ್ಗೆ 100% ಪರಿಶೀಲನೆಗೆ ಒಳಪಡಿಸಬೇಕು, ಈ ಕ್ಷೇತ್ರಗಳಲ್ಲಿ ಡಿಸೆಂಬರ್24 ರವರೆಗೂ ಮತದಾರರ ಪರಿಷ್ಕರಣೆಗೆ ಅವಧಿ ವಿಸ್ತರಿಸಬೇಕು ಎಂದು ಆಯೋಗ ಹೇಳಿದೆ. ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ಬಿಬಿಎಂಪಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಸ್.ರಂಗಪ್ಪ, ಶಿವಾಜಿನಗರ ಚಿಕ್ಕಪೇಟೆ ಕ್ಷೇತ್ರಗಳ ಉಸ್ತುವಾರಿ ಕೆ. ಶ್ರೀನಿವಾಸ್, ಮಹದೇವಪುರ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಉಪ ಆಯುಕ್ತರ ಅಮಾನತಿಗೆ ನಿರ್ದೇಶನ ನೀಡಿದ್ದು ಇಲಾಖೆ ತನಿಖೆಗೆ ನಿರ್ದೇಶಿಸಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ

    ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಬಿಎಂಪಿ ಹೊರಗಿನ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ. ಆರ್.ವಿಶಾಲ್, ಮಹದೇವಪುರ ಕ್ಷೇತ್ರಕ್ಕೆ ಅಜಯ್ ನಾಗಭೂಷಣಗೆ ಜವಾಬ್ದಾರಿ ‌ನೀಡಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆಗಾಗಿ, ಬಿಬಿಎಂಪಿ ಕೇಂದ್ರ ಭಾಗಕ್ಕೆ ಉಜ್ವಲ್ ಘೋಷ್, ಬಿಬಿಎಂಪಿ ಉತ್ತರಕ್ಕೆ ರಾಮಚಂದ್ರನ್ ಆರ್, ಬಿಬಿಎಂಪಿ ದಕ್ಷಿಣಕ್ಕೆ ಪಿ. ರಾಜೇಂದ್ರ ಚೋಳನ್, ಬೆಂಗಳೂರು ನಗರ ಭಾಗದ ಉಸ್ತುವಾರಿಯಾಗಿ ಡಾ.ಎನ್.ಮಂಜುಳಾಗೆ ಜವಾಬ್ದಾರಿ ನೀಡಿದೆ.

    ಈ ಎಲ್ಲ ಚಟುವಟಿಕೆಗಳ ಸಮನ್ವಯ ಮತ್ತು ಮೇಲುಸ್ತುವಾರಿಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲನ್ ಬಿಸ್ವಾಸ್ ಅವರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿದೆ. ಇದರ ಜೊತೆಗೆ SSR ಚಟುವಟಿಕೆಗಳಲ್ಲಿ ಮಾನ್ಯತೆ ಹೊಂದಿದ ಪಕ್ಷಗಳ ಪ್ರತಿನಿಧಿಗಳ ಭಾಗಿಯಾಗಿಸಿಕೊಳ್ಳಲು ಸಿಇಓಗಳಿಗೆ ಆಯೋಗ ಸೂಚನೆ ನೀಡಿದೆ. ಇದನ್ನೂ ಓದಿ: ಓಲಾ, ಉಬರ್‌ ಆಟೋಗಳಿಗೆ ಶೇ.5 ಕಮಿಷನ್‌ ದರ ನಿಗದಿ

    Live Tv
    [brid partner=56869869 player=32851 video=960834 autoplay=true]

  • ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕಾರಣಿಗಳಿಗೆ ಢವಢವ ಆರಂಭವಾಗಿದೆ. ಚುನಾವಣಾ ಆಯೋಗವು ರಾಜಕಾರಣಿಗಳ ಮೇಲೆ ಹೊಸ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ. ರಾಜಕಾರಣಿಗಳು ಲೆಕ್ಕ ಕೊಡ್ಲೇ ಬೇಕು, ಇಲ್ಲಾಂದ್ರೆ ಎಲೆಕ್ಷನ್‍ಗೆ ನಿಲ್ಲೋ ಹಾಗೇ ಇಲ್ಲ ಎಂಬ ಹೊಸ ನೀತಿಯನ್ನು ಚುನಾವನಾ ಆಯೋಗ ಮುಂದಿಟ್ಟಿದೆ.

    ಏನದು ರೂಲ್ಸ್..?
    ಚುನಾವಣೆಗೆ ನಿಲ್ಲುವ ರಾಜಕಾರಣಿಗಳು ತಮ್ಮ ಸಂಪತ್ತಿನ ಲೆಕ್ಕ ಕೊಡುವುದು ಕಡ್ಡಾಯವಾಗಿದೆ. ಕೇವಲ ಭಾರತದಲ್ಲಿರುವ ಆಸ್ತಿಪಾಸ್ತಿಯಷ್ಟೇ ಅಲ್ಲ ಈ ಬಾರಿ ವಿದೇಶಿ ಸಂಪತ್ತಿನ ಲೆಕ್ಕನೂ ಕೊಡಬೇಕು. 5 ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಮುಂದೆ ಘೋಷಿಸಿಕೊಂಡಿರುವ ಆಸ್ತಿಪಾಸ್ತಿ ಲೆಕ್ಕನೂ ಕೊಡಬೇಕು. ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪತಿ ಅಥವಾ ಪತ್ನಿ, ಮಕ್ಕಳು, ಕುಟುಂಬಸ್ಥರ ಹೆಸರಲ್ಲಿರುವ ಆಸ್ತಿಯ ಲೆಕ್ಕವನ್ನೂ ನೀಡಬೇಕು.

    ವಿದೇಶಿ ಸಂಪತ್ತು, 5 ವರ್ಷಗಳ ಹಿಂದಿನ ಐಟಿ ಲೆಕ್ಕ ಕೊಡದೆ ಹೋದರೆ ನಾಮಪತ್ರ ತಿರಸ್ಕೃತವಾಗುತ್ತದೆ. ಈ ಮಾಹಿತಿಗಳನ್ನ ಚುನಾವಣಾಧಿಕಾರಿಗಳು ನೋಟಿಸ್ ಬೋರ್ಡ್ ನಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಅಭ್ಯರ್ಥಿಗಳ ಪಕ್ಷವೇ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಕೂಡ ಕಡ್ಡಾಯವಾಗಿದೆ.

    ಅಭ್ಯರ್ಥಿಗಳು ಬೇಕಾಬಿಟ್ಟಿ, ಪ್ರಚಾರ ಮಾಡಂಗಿಲ್ಲ. ಖರ್ಚು ಮಾಡುವಂತಿಲ್ಲ. ಇದರ ಬಗ್ಗೆಯೂ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಫಾರ್ಮ್ 26 ಸರಿಯಾಗಿ ಭರ್ತಿಯಾಗದಿದ್ದಲ್ಲಿ ನಾಮಪತ್ರ ತಿರಸ್ಕೃತವಾಗಲಿದೆ. ನಿಖರ ಮಾಹಿತಿ ಇಲ್ಲದಿದ್ದಲ್ಲಿ ಕೂಡ ನಾಮಪತ್ರ ತಿರಸ್ಕೃತವಾಗುತ್ತದೆ. ಅಭ್ಯರ್ಥಿಗಳು ಪಾನ್‍ಕಾರ್ಡ್ ಹೊಂದಿರಲೇಬೇಕು. ಸ್ಥಳೀಯ ಪತ್ರಿಕೆಗಳಲ್ಲಿ ಅಕ್ರಮ ಮಾಡೋ ಅಭ್ಯರ್ಥಿಗಳ ಭಾವಚಿತ್ರವರಬಾರದು. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾರು ಬೇಕಾದರೂ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಕೊಡಬಹುದು.

    ಮೊಬೈಲ್ ಆಪ್ ಮೂಲಕ ದೂರು ನೀಡಲು ಅವಕಾಶವಿದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ 100 ನಿಮಿಷದ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪ್ರಚಾರಕ್ಕೆ ಬ್ರೇಕ್ ಹಾಕಲಾಗಿದೆ. ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರೆ ಅದರ ಲೆಕ್ಕವನ್ನು ಕೂಡ ನೀಡಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕ್ಷಗಳು  ಮನಸ್ಸು ಮಾಡಿದ್ರೆ ಲೋಕಸಭಾ ಉಪ ಚುನಾವಣೆಯನ್ನು ತಡೆಯಬಹುದು : ಬಿವಿ ಆಚಾರ್ಯ

    ಪಕ್ಷಗಳು ಮನಸ್ಸು ಮಾಡಿದ್ರೆ ಲೋಕಸಭಾ ಉಪ ಚುನಾವಣೆಯನ್ನು ತಡೆಯಬಹುದು : ಬಿವಿ ಆಚಾರ್ಯ

    ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿರುವ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ತಡೆಯಲು ಅವಕಾಶ ಇದೆ ಎಂದು ಹಿರಿಯ ವಕೀಲ ಬಿವಿ ಆಚಾರ್ಯ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭೆಯ ಸಾರ್ವತ್ರೀಕ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇರುವ ವೇಳೆ ಉಪ ಚುನಾವಣೆ ಘೋಷಣೆ ಆಗಿದೆ. ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಅಡಿ ಚುನಾವಣೆ ತಡೆಯಬಹುದುದಾಗಿದೆ. 151 ಎ ಪ್ರಕಾರ ಉಳಿದ ಲೋಕಸಭೆಯ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಚುನಾವಣೆ ನಡೆಸುವ ಅವಶ್ಯಕತೆಯಿಲ್ಲ. ಇದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಆಯೋಗಕ್ಕೆ ಮನವಿ ಸಲ್ಲಿಸಬೇಕಿದೆ. ಆಗ ಚುನಾವಣೆ ಆಯೋಗ ತನ್ನ ಕ್ರಮವನ್ನು ಮತ್ತೆ ವಿಮರ್ಶೆಗೆ ಒಳಪಡಿಸಬಹುದು ಎಂದು ವಿವರಿಸಿದರು.

    ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಅವರು, ಚುನಾವಣೆ ಮಾಡಬಾರದು ಎಂದು ನಿಯಮವಿಲ್ಲ. ಸದ್ಯ ಉಪ ಚುನಾವಣೆ ಘೋಷಣೆ ಮಾಡಿರುವುದರಲ್ಲಿ ಚುನಾವಣಾ ಆಯೋಗದ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ ಯಾವುದೇ ಕಾರಣದಿಂದ ತೆರವಾದ ಸ್ಥಾನಗಳಿಗೆ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಕಾನೂನಿದೆ. ಅದ್ದರಿಂದ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ತನ್ನ ಕೆಲಸ ಮಾಡಿದೆ. 151 ಎ ಸೆಕ್ಷನ್ ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆಗಳಿಗೂ ಅನ್ವಯಿಸುತ್ತದೆ ಎಂದರು.

    ಎರಡು ಸಂದರ್ಭದಲ್ಲಿ ಉಪಚುನಾವಣೆ ಆಗಲ್ಲ:
    ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಪ್ರಕಾರ ಎರಡು ಸಂದರ್ಭದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ. ಮೊದಲನೆಯದಾಗಿ, ತೆರವಾದ ನಿರ್ದಿಷ್ಟ ಲೋಕಸಭೆ ಕ್ಷೇತ್ರದ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪ ಚುನಾವಣೆ ನಡೆಸಲು ಅವಕಾಶ ಇಲ್ಲ. ಎರಡನೆಯದಾಗಿ, ಚುನಾವಣೆ ಆಯೋಗ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಉಳಿಕೆ ಅವಧಿಯಲ್ಲಿ ಉಪ ಚುನಾವಣೆ ನಡೆಸುವುದು ಕಷ್ಟ ಎಂದು ಹೇಳಿದರೆ ಚುನಾವಣೆ ನಡೆಯುವುದಿಲ್ಲ.

    2013ರಲ್ಲಿ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗುವುದು ಚುನಾವಣೆ ಆಯೋಗ ಸ್ಪಷ್ಟ ಪಡಿಸಿತ್ತು. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3 ರಂದು ನಡೆದರೆ ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಅಂದರೆ ಈ ಫಲಿತಾಂಶ ಬಂದ ಬಳಿಕ ಗೆದ್ದವರಿಗೆ ಸಿಗುವುದು ಕೇವಲ 4 ತಿಂಗಳು ಮಾತ್ರ. ಸದಸ್ಯರು ರಾಜೀನಾಮೆ ನೀಡಿದ 6 ತಿಂಗಳ ಒಳಗಡೆ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಆದರೆ 3-4 ತಿಂಗಳ ಅವಧಿಗಾಗಿ ಹಣವನ್ನು ಖರ್ಚು ಮಾಡಿ ಈ ಚುನಾವಣೆ ನಡೆಸಬೇಕೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ಲೋಕಸಭಾ ಉಪಚುನಾವಣೆ ನಡೆಸಬೇಕೇ? ಬೇಡವೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. ಈ ರೀತಿಯ ಪರಿಸ್ಥಿತಿ ಬಂದಾಗ ಏನು ಮಾಡಬಹುದು ನಿಮ್ಮ ಸಲಹೆಯನ್ನು ತಿಳಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv