ಪಾಟ್ನಾ: ಚುನಾವಣಾ ತಂತ್ರಜ್ಞ, ರಾಜಕಾರಣಿ ಪ್ರಶಾಂತ್ ಕಿಶೋರ್ (Prashant Kishor) ಅವರ ಹೆಸರು ಬಿಹಾರ ಹಾಗೂ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳಲ್ಲಿ ಕಂಡು ಬಂದಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದು, ಬಿಹಾರ ಚುನಾವಣೆ (Bihar Election) ಹೊತ್ತಲ್ಲೇ ಇದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ.
ಅಧಿಕೃತ ದಾಖಲೆಗಳ ಪ್ರಕಾರ, ಪ್ರಶಾಂತ್ ಕಿಶೋರ್ ಅವರ ಹೆಸರು ಪಶ್ಚಿಮ ಬಂಗಾಳದ (West Bengal) ಮತದಾರರ ಪಟ್ಟಿಯಲ್ಲಿದೆ. 121, ಕಾಲಿಘಾಟ್ ರಸ್ತೆ ವಿಳಾಸದಲ್ಲಿ ನೋಂದಣಿಯಾಗಿದ್ದು, ಇದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಚೇರಿಯ ವಿಳಾಸವಾಗಿದೆ. ಈ ಕ್ಷೇತ್ರವು ಕೋಲ್ಕತ್ತಾದ ಭವಾನಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಈ ಕ್ಷೇತ್ರದಿಂದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದಾರೆ. 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಶಾಂತ್ ಕಿಶೋರ್ ಟಿಎಂಸಿಯ ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು.
ಮತ್ತೊಂದು ಕಡೆ ಬಿಹಾರದ (Bihar) ರೋಹ್ತಾಸ್ ಜಿಲ್ಲೆಯ ಸಸಾರಾಮ್ ಸಂಸದೀಯ ಕ್ಷೇತ್ರದ ಕಾರ್ಗಹರ್ ವಿಧಾನಸಭಾ ಕ್ಷೇತ್ರದಲ್ಲಿ ಕಿಶೋರ್ ಅವರ ಹೆಸರು ನೋಂದಾಯಿಸಲಾಗಿದೆ. ಅಲ್ಲಿ ಅವರ ಮತಗಟ್ಟೆ ಕೋನಾರ್‌ನ ಮಧ್ಯ ವಿದ್ಯಾಲಯದಲ್ಲಿದೆ.
ಈ ಬಗ್ಗೆ ಮಾತನಾಡಿದ ಚುನಾವಣಾ ಅಧಿಕಾರಿಯೊಬ್ಬರು, 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ, ಯಾವುದೇ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ನೋಂದಾಯಿಸಲು ಸಾಧ್ಯವಿಲ್ಲ. ಸೆಕ್ಷನ್ 18ರ ಅಡಿಯಲ್ಲಿ, ಒಂದೇ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಎರಡು ಬಾರಿ ನೋಂದಾಯಿಸುವುದನ್ನು ಸಹ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತದಾರರು ತಮ್ಮ ಮನೆಯನ್ನು ಬದಲಾಯಿಸಿದ ನಂತರ ತಮ್ಮ ಹೆಸರುಗಳನ್ನು ವರ್ಗಾಯಿಸಲು ಫಾರ್ಮ್ 8 ಅನ್ನು ಭರ್ತಿ ಮಾಡಬೇಕಾಗುತ್ತದೆ. ಮತದಾರರ ಪಟ್ಟಿಗಳಲ್ಲಿ ನಕಲು ಮಾಡುವುದು ಸಾಮಾನ್ಯ ಸಮಸ್ಯೆ ಎಂದು ಚುನಾವಣಾ ಆಯೋಗ ಒಪ್ಪಿಕೊಂಡಿದೆ. ಇದಕ್ಕಾಗಿಯೇ ಆಯೋಗವು ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ವಿಜಯ್ TVK ಕಾರ್ಯಕ್ರಮ| #GetOutModi, #GetOutStalin ಫಲಕಕ್ಕೆ ಸಹಿ ಹಾಕದ ಪ್ರಶಾಂತ್ ಕಿಶೋರ್
ನವದೆಹಲಿ: ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ (Election Commission Of India) ಸಜ್ಜಾಗಿದೆ. ಈ ನಿಟ್ಟಿನಲ್ಲಿ SIR ಕೈಗೊಳ್ಳುವ ಮೊದಲ 10-15 ರಾಜ್ಯಗಳ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಿದೆ.
ಇಂದು ಸಂಜೆ 4.45ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ಹಂತಹಂತವಾಗಿ ಎಸ್‌ಐಆರ್ ನಡೆಸುವ ರಾಜ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ಪರಿಷ್ಕರಣೆಯು 2026 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು (Assembly Elections 2026) ಸೇರಿದಂತೆ 10 ರಿಂದ 15 ರಾಜ್ಯಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ.
ಮುಂದಿನ ವಿಧಾನಸಭಾ ಚುನಾವಣೆಗಳು ಸಂಭವಿಸುತ್ತಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 10-15 ರಾಜ್ಯಗಳಲ್ಲಿ ಸರ್ ನಡೆಯಲಿದೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ SIR ನಡೆದಿತ್ತು.
2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರ ಚುನಾವಣೆಗೂ ಮುನ್ನವೇ ಅಂದ್ರೆ ನವೆಂಬರ್ 1ರಿಂದಲೇ ಈ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ.
ಬಂಗಾಳದಲ್ಲಿ ಮತಗಟ್ಟೆಗಳ ಸಂಖ್ಯೆ ಏರಿಕೆ ಸಾಧ್ಯತೆ
ಬಂಗಾಳದಲ್ಲಿ ಪರಿಷ್ಕರಣೆ ವೇಳೆ ಬೂತ್-ಮಟ್ಟದ ಅಧಿಕಾರಿಗಳಿಗೆ (BLO) ಸಹಾಯ ಮಾಡಲು ಚುನಾವಣಾ ಆಯೋಗ ಸ್ವಯಂ ಸೇವಕರನ್ನ ನೇಮಕ ಮಾಡಲಿದೆ. ಸ್ವಯಂಸೇವಕರು, ಪ್ರಾಥಮಿಕವಾಗಿ ಸರ್ಕಾರಿ ನೌಕರರು, 1,200ಕ್ಕೂ ಹೆಚ್ಚು ಮತದಾರರನ್ನ ಹೊಂದಿರುವ ಮತದಾನ ಕೇಂದ್ರಗಳಲ್ಲಿ ಸಮೀಕ್ಷೆಗೆ ಸಹಕರಿಸುತ್ತಾರೆ. ಅಲ್ಲದೇ ಪ್ರತಿ ಬೂತ್‌ಗೆ ಮತದಾರರ ಸಂಖ್ಯೆಯ ಮೇಲೆ ಮಿತಿ ಹೇರಿರುವುದರಿಂದ, ಪಶ್ಚಿಮ ಬಂಗಾಳದಲ್ಲಿ ಸುಮಾರು 14,000 ಮತಗಟ್ಟೆಗಳು ಹೆಚ್ಚಾಗಬಹುದು, ಒಟ್ಟು 80,000 ರಿಂದ ಸರಿಸುಮಾರು 94,000ಕ್ಕೆ ಮತಗಟ್ಟೆಗಳು ತಲುಪುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಟ್ನಾ: ಬಿಹಾರ ಚುನಾವಣೆಗೆ (Bihar Polls) ದಿನಗಣನೆ ಶುರುವಾಗಿದೆ. ಚುನಾವಣಾ ಆಯೋಗವು (Election Commission) ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ 17 ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ.
ಮತದಾರರ ಪಟ್ಟಿ ಶುದ್ಧೀಕರಣ, ಬೂತ್ ಮಟ್ಟದ ಅಧಿಕಾರಿಗಳ ಗೌರವಧನ ದ್ವಿಗುಣಗೊಳಿಸುವುದು, ಮೊಬೈಲ್ ಫೋನ್ ಕೌಂಟರ್, ಹೆಚ್ಚುವರಿ ಬೂತ್‌ಗಳು, ಇವಿಎಂಗಳಲ್ಲಿ ಅಭ್ಯರ್ಥಿಗಳ ಬಣ್ಣದ ಫೋಟೋಗಳು ಮತ್ತು ಪ್ರತಿ ಬೂತ್‌ನಲ್ಲಿ ಶೇಕಡಾ ನೂರರಷ್ಟು ವೆಬ್‌ಕಾಸ್ಟಿಂಗ್ ಸೇರಿವೆ. ಇನ್ನು ನವೆಂಬರ್ 22ರ ಒಳಗೆ ಬಿಹಾರ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮುಗಿಯಲಿದೆ ಎಂದಿದ್ದಾರೆ. ಬಿಹಾರದ ಎಲ್ಲಾ ಮತದಾರರು ತಮ್ಮ ಮತ ಚಲಾಯಿಸುವಂತೆ ಮತ್ತು ಛತ್ ಪೂಜಾ ಹಬ್ಬವನ್ನು ಆಚರಿಸುವಂತೆಯೇ ಚುನಾವಣಾ ದಿನವನ್ನು ಆಚರಿಸುವಂತೆ ಕರೆ ಕೊಟ್ಟರು. ಇದನ್ನೂ ಓದಿ: ಮಹಾರಾಷ್ಟ್ರದ ಶಿರೋಡಾ ಬೀಚ್‍ನಲ್ಲಿ ಅಲೆಯಬ್ಬರಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ
ಬಿಹಾರ ಸೇರಿದಂತೆ ದೇಶಾದ್ಯಂತದ 7,000ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಮೇಲ್ವಿಚಾರಕರಿಗೆ ದೆಹಲಿಯ IIIDEM ನಲ್ಲಿ ತರಬೇತಿ ನೀಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು, ಮತದಾನ/ಮತ ಎಣಿಕೆ ಸಿಬ್ಬಂದಿ, CAPF, ಮೇಲ್ವಿಚಾರಣಾ ತಂಡಗಳು ಮತ್ತು ಸೂಕ್ಷ್ಮ ವೀಕ್ಷಕರಿಗೆ ನೀಡುವ ಗೌರವಧನವನ್ನು ದ್ವಿಗುಣಗೊಳಿಸಲಾಗಿದೆ. ಮೊದಲ ಬಾರಿಗೆ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಗೌರವಧನ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಅವರಿಗೆ ನೀಡುವ ಉಪಹಾರದ ವ್ಯವಸ್ಥೆಯನ್ನೂ ಹೆಚ್ಚಿಸಲಾಗಿದೆ.
ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ
EVM ಮತಪತ್ರಗಳನ್ನು ಹೆಚ್ಚು ಸ್ಪಷ್ಟವಾಗಿ ಓದಲು ಸಾಧ್ಯವಾಗುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಇದೇ ಮೊದಲ ಬಾರಿಗೆ EVM ಗಳಲ್ಲಿ ಅಭ್ಯರ್ಥಿಗಳ ಬಣ್ಣದ ಛಾಯಾಚಿತ್ರಗಳನ್ನು ಅಳವಡಿಸಲಾಗುವುದು ಎಂದು ಸಿಇಸಿ ತಿಳಿಸಿದರು. “ಬಿಹಾರ ಚುನಾವಣೆಗಳಲ್ಲಿ ಪ್ರತಿ ಬೂತ್‌ನಲ್ಲಿ 100% ರಷ್ಟು ವೆಬ್‌ಕಾಸ್ಟಿಂಗ್ ನಡೆಸಲಾಗುವುದು ಎಂದು ಅವರು ವಿವರಿಸಿದರು. ಬಹುನಿರೀಕ್ಷಿತ ಬಿಹಾರ ಚುನಾವಣೆಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ನವೆಂಬರ್‌ನಲ್ಲಿ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.
ಅಂದ್ಹಾಗೆ ಬಿಹಾರದಲ್ಲಿ ಒಟ್ಟು ಮತದಾರರು 7.42 ಕೋಟಿ ಇದ್ದು, 3.66 ಲಕ್ಷ ಮತದಾರರನ್ನ ಡಿಲಿಟ್ ಮಾಡಲಾಗಿದೆ. 21.53 ಲಕ್ಷ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಮತದಾರ ಪರಿಷ್ಕರಣೆ ಬಗ್ಗೆ ರಾಜಕೀಯ ಪಕ್ಷಗಳು ಆಕ್ಷೇಪ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಹಾಗೇನೆ ಆಧಾರ್ ಕಾರ್ಡ್, ಜನ್ಮ ದಿನಾಂಕ ಅಥವಾ ಪೌರತ್ವಕ್ಕೆ ಪ್ರೂಫ್ ಅಲ್ಲ ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Darjeeling Flood | 24/7 ಕಂಟ್ರೋಲ್ ರೂಮ್ ಓಪನ್ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ
ಪಾಟ್ನಾ: ಬಿಹಾರ (Bihar) ಮತದಾರರ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆ ಪೂರ್ಣಗೊಂಡಿದೆ. ಮತದಾರರ ಪಟ್ಟಿಯಿಂದ 68 ಲಕ್ಷ ಮತದಾರರನ್ನು ಡಿಲಿಟ್ ಮಾಡಲಾಗಿದೆ. ಅಲ್ಲದೆ, ಹೊಸದಾಗಿ 21 ಲಕ್ಷ ಮತದಾರ ಸೇರ್ಪಡೆಯಾಗಿದೆ.
ಕೇಂದ್ರ ಚುನಾವಣಾ ಆಯೋಗ (Election Commission) ಅಂತಿಮ ಮತದಾರರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಬಿಹಾರದಲ್ಲಿ ಒಟ್ಟು 7.4 ಕೋಟಿ ಮತದಾರರಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯು ಮಾನ್ಯವಾಗಿದೆಯೇ ಎಂಬ ಬಗ್ಗೆ ಅಂತಿಮ ವಿಚಾರಣೆ ಅಕ್ಟೋಬರ್ 7ರಂದು ನಡೆಯಲಿದೆ. ಅಂತಿಮ ಪಟ್ಟಿ ಬಿಡುಗಡೆಯಾದ ನಂತರವೂ, ಯಾವುದೇ ತಪ್ಪು ಕಂಡುಬಂದರೆ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಮುಂಬೈ ಉಗ್ರರ ವಿರುದ್ಧ ಆಪರೇಷನ್‌ಗೆ ಯುಪಿಎ ಅಡ್ಡಿ – ಚಿದಂಬರಂ ಹೇಳಿಕೆ, ಸೋನಿಯ ವಿರುದ್ಧ ಬಿಜೆಪಿ ಕೆಂಡ
ಬಿಹಾರ ಸಿಇಒ ಕಚೇರಿಯ ಪ್ರಕಾರ, ಮತದಾರರ ಪಟ್ಟಿಯ (Voter List) ಭೌತಿಕ ಪ್ರತಿಗಳನ್ನು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿ-ಕಮ್-ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಅಂತಿಮ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳಿಗೂ ಒದಗಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ನಾನು ಜೈಲಿಗೆ ಹೋಗ್ತೀನಿ ಅಂತ ಕುಮಾರಸ್ವಾಮಿ ಹೇಳ್ತಿದಾರೆ, ಇದಕ್ಕೆ ಕೊನೆ ಹಾಡಲೇಬೇಕು: ಡಿಕೆಶಿ
ಅಕ್ಟೋಬರ್ 6 ಮತ್ತು 7 ರ ನಡುವೆ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆಯಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅಕ್ಟೋಬರ್ 4-5ರಂದು ಬಿಹಾರಕ್ಕೆ ಭೇಟಿ ನೀಡಿ ಚುನಾವಣಾ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಅಕ್ಟೋಬರ್ ಕ್ರಾಂತಿ – ಅಶೋಕ್, ಸುನಿಲ್ ಕುಮಾರ್ ಭವಿಷ್ಯ
ಪಾಟ್ನಾ: ಅ.6ರ ಬಳಿಕ ಬಿಹಾರ ವಿಧಾನಸಭೆ ಚುನಾವಣೆಗೆ (Bihar Assembly Election) ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ. ಸರ್ಕಾರಿ ಅಧಿಕಾರಿಗಳ ಎಲ್ಲಾ ವರ್ಗಾವಣೆ ಮತ್ತು ನಿಯೋಜನೆ ಪ್ರಕ್ರಿಯೆಗಳನ್ನು ಅ.6 ರೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗವು (Election Commission) ಬಿಹಾರದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳಿಗೆ ಸೂಚಿಸಿದೆ.
ವರ್ಗಾವಣೆ-ಪೋಸ್ಟಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಬಿಹಾರಕ್ಕೆ ಭೇಟಿ ನೀಡಿ ಚುನಾವಣೆಗೆ ರಾಜ್ಯದ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಈ ಭೇಟಿಯು ಚುನಾವಣಾ ವೇಳಾಪಟ್ಟಿಯ ಅಧಿಕೃತ ಘೋಷಣೆಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ‘ಅತ್ಯಂತ ಹಿಂದುಳಿದ ನ್ಯಾಯ ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಹಿಂದುಳಿದ ಸಮುದಾಯಗಳನ್ನು ಬಲಪಡಿಸಲು ಮತ್ತು ಶಿಕ್ಷಣ, ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪ್ರತಿಜ್ಞೆ ಮಾಡಿದರು.
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ಸಂಬಂಧಿಸಿದ ವಿವಾದ ಪರಿಹರಿಸಲು ಚುನಾವಣಾ ಆಯೋಗ (ECI) ಹೊಸ ತಾಂತ್ರಿಕ ವ್ಯವಸ್ಥೆಯೊಂದನ್ನ ಪರಿಚಯಿಸಿದೆ.
ಇತ್ತೀಚೆಗಷ್ಟೇ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಆರೋಪ ಮಾಡಿದ್ದರು. ಈ ವೇಳೆ ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರು ಅಳಿಸಲು ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ ಆರೋಪ ಎತ್ತಿದ್ದರು. ಇದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆಯನ್ನೂ ನೀಡಿತ್ತು. ಈ ಬೆನ್ನಲ್ಲೇ ವೋಟರ್ ಐಡಿ ದುರುಪಯೋಗ ತಡೆಯಲು ECINET ಪೋರ್ಟಲ್ ಮತ್ತು ಅಪ್ಲಿಕೇಶನ್‌ನಲ್ಲಿ ‘ಇ-ಸೈನ್’ (E-Sign) ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.
ʻಇ-ಸೈನ್ʼ ವ್ಯವಸ್ಥೆ ಅಡಿಯಲ್ಲಿ, ಮತದಾರರು ನೋಂದಣಿ ಅಥವಾ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸುವಾಗ ತಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನ ಬಳಸಿಕೊಂಡು ಪರಿಶೀಲಿಸಬೇಕಾಗುತ್ತದೆ. ಈ ಹಿಂದೆ ಅರ್ಜಿದಾರರು ಯಾವುದೇ ಪರಿಶೀಲನೆಯಿಲ್ಲದೇ ಫಾರ್ಮ್‌ಗಳನ್ನು ಸಲ್ಲಿಸಬಹುದಿತ್ತು, ಇದು ವೋಟರ್ ಐಡಿ ದುರುಯೋಗವಾಗುವ ಸಾಧ್ಯತೆಯಿತ್ತು. ಹಾಗಾಗಿ ಆಯೋಗ ಈ ವ್ಯವಸ್ಥೆ ಪ್ರಾರಂಭಿಸಿದೆ ಎಂದು ಆಯೋಗ ಹೇಳಿದೆ. ಇದನ್ನೂ ಓದಿ: ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇ-ಸೈನ್ ಹೇಗೆ ಕೆಲಸ ಮಾಡುತ್ತೆ?
ಹೊಸ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ವ್ಯಕ್ತಿ ECINET ಪೋರ್ಟಲ್ ಅಥವಾ ಅಪ್ಲಿಕೇಶನ್‌ನಲ್ಲಿ ಫಾರ್ಮ್-6 (ಹೊಸ ನೋಂದಣಿಗಾಗಿ), ಫಾರ್ಮ್-7 (ಹೆಸರು ಅಳಿಸುವಿಕೆಗಾಗಿ) ಅಥವಾ ಫಾರ್ಮ್-8 (ಹೆಸರು ಅಥವಾ ವಿಳಾಸ ತಿದ್ದುಪಡಿಗಾಗಿ) ಅನ್ನು ಭರ್ತಿ ಮಾಡಿದಾಗ ಇ-ಸೈನ್ ಮಾಡಬೇಕಾಗುತ್ತದೆ. ಅಂದ್ರೆ ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ನಲ್ಲಿರುವ ಹೆಸರು ಹೊಂದಿಕೆ ಆಗಿದೆಯೇ? ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನಂತರ ಅರ್ಜಿದಾರರನ್ನು ಬಾಹ್ಯ ಇ-ಸೈನ್ ಪೋರ್ಟಲ್‌ಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ತಮ್ಮ ಆಧಾರ್ ಸಂಖ್ಯೆ ನಮೂದಿಸಬೇಕಾಗುತ್ತದೆ. ಇದನ್ನೂ ಓದಿ: ಆಳಂದ ಫೈಲ್ಸ್ | ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ – ಇಂಚಿಚು ವಿವರ ನೀಡಿದ ಚುನಾವಣಾ ಆಯೋಗ
OTP ಕಡ್ಡಾಯ
ಇಸೈನ್ ಪ್ರವೇಶಿಸಿ ಆಧಾರ್ ಸಂಖ್ಯೆ ನಮೂದಿಸಿದ ನಂತ್ರ, ಆಧಾರ್‌ಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿ ಒಪ್ಪಿಗೆ ನೀಡಿದ ನಂತರವೇ ಪರಿಶೀಲನೆ ಪೂರ್ಣಗೊಳ್ಳುತ್ತದೆ. ನಂತರ ಅರ್ಜಿದಾರರನ್ನು ಫಾರ್ಮ್ ಸಲ್ಲಿಸಲು ECINET ಪೋರ್ಟಲ್‌ಗೆ ಹಿಂತಿರುಗಿಸಲಾಗುತ್ತದೆ. ಈ ಪ್ರಕ್ರಿಯೆಯು ನಕಲಿ ಅರ್ಜಿಗಳನ್ನು ತಡೆಯಲು ಅನುಕೂಲವಾಗುತ್ತದೆ.
– ಆಳಂದದಲ್ಲಿ ಮತ ಅಳಿಸಲು ಸಲ್ಲಿಸಿದ್ದ 6,018 ಅರ್ಜಿಗಳ ಪೈಕಿ, 5,994 ಅರ್ಜಿಗಳು ಫೇಕ್
– ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ಮತ್ತೆ ಸ್ಪಷ್ಟನೆ
ನವದೆಹಲಿ: ಸಾರ್ವಜನಿಕರು ಯಾವುದೇ ರೀತಿಯಲ್ಲೂ ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಲ್ಲಿ (Voters List) ಸೇರ್ಪಡೆ, ತಿದ್ದುಪಡಿ, ಅಳಿಸುವಿಕೆ ಮಾಡಬೇಕಾದ್ರೆ, ಕಾನೂನಿನ ಕಾರ್ಯವಿಧಾನಗಳ ಮೂಲಕವೇ ಮಾಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ (Election Commission) ಮತ್ತೆ ಸ್ಪಷ್ಟನೆ ನೀಡಿದೆ.
No vote can be deleted online by any member of the public.
No wrongful deletion of electors in Aland; an FIR was registered by the authority of ECI itself in 2023 against suspicious attempt of deletions pic.twitter.com/anPtdNe0Tg
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಅಕ್ರಮದ ಆರೋಪದ ಜ್ವಾಲೆ ಆರುವ ಮುನ್ನವೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತೊಂದು ಆರೋಪ ಮಾಡಿದ್ರು. ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಸಾವಿರಾರು ಮತದಾರರ ಹೆಸರನ್ನು, ಅದರಲ್ಲೂ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಹೆಸರನ್ನೇ ಗುರಿಯಾಗಿಸಿ ಅಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಚುನಾವಣಾ ಆಯೋಗವನ್ನೇ ʻಮತ ಕಳ್ಳರ ರಕ್ಷಕರುʼ ಎಂದು ಜರೆದಿದ್ದರು. ಈ ಮೂಲಕ ಚುನಾವಣಾ ಆಯೋಗದ ವಿರುದ್ಧವೇ ನೇರ ಸಮರಕ್ಕೆ ಇಳಿದಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಮತ್ತೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಯಾರೊಬ್ಬರು ಸಾರ್ವಜನಿಕರು ಯಾವುದೇ ಮತವನ್ನು ಆನ್‌ಲೈನ್‌ನಲ್ಲಿ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೇ 2023 ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ್ (Aland) ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದನ್ನು ಉಲ್ಲೇಖಿಸಿ, ಪ್ರಕರಣ ದಾಖಲಿಸಲು ಕಾರಣವನ್ನೂ ವಿವರವಾಗಿ ತಿಳಿಸಿದೆ.
ಚುನಾವಣಾ ಆಯೋಗ ಹೇಳಿಕೆಯಲ್ಲಿ ಏನಿದೆ?
* ಯಾವುದೇ ಕ್ಷೇತ್ರದ ಮತದಾರರು ನಿರ್ದಿಷ್ಟ ಕ್ಷೇತ್ರದಿಂದ ತಮ್ಮ ನಮೂನೆಯನ್ನ ಅಳಿಸಬೇಕಾದ್ರೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಫಾರ್ಮ್ 7ನ್ನು ಭರ್ತಿ ಮಾಡಬೇಕು. ಹಾಗೇ ಮಾಡಿದ್ರೂ ಮತಗುರುತು ಅಳಿಸಲ್ಪಡುತ್ತದೆ ಎಂದರ್ಥವಲ್ಲ. ಏಕೆಂದ್ರೆ 1960ರ ಮತದಾರರ ನೋಂದಣಿ ನಿಯಮಗಳ ಪ್ರಕಾರ, ಸಂಬಂಧಿತ ವ್ಯಕ್ತಿಗೆ ನೋಟಿಸ್ ನೀಡದೇ ಅಥವಾ ಆತನ ವಿಚಾರಣೆಗೆ ಅವಕಾಶ ಕೊಡದೇ ಮತಪಟ್ಟಿಯಿಂದ ಹೆಸರನ್ನು ಅಳಿಸಲಾಗುವುದಿಲ್ಲ.
* ಕರ್ನಾಟಕದ ಆಳಂದ ಪ್ರಕರಣದಲ್ಲಿ ನಮೂನೆ-7ರಲ್ಲಿ ಮತ ಅಳಿಸಲು 6,018 ಅರ್ಜಿಗಳು ಸಲ್ಲಿಕೆಯಾಗಿತ್ತು. ಅವುಗಳನ್ನು ಪರಿಶೀಲಿಸಿದಾಗ ಕೇವಲ 24 ಅರ್ಜಿಗಳಷ್ಟೇ ನೈಜವಾಗಿದ್ದವು ಅನ್ನೋದು ಕಂಡುಬಂದಿದೆ. ಉಳಿದ 5,994 ಅರ್ಜಿಗಳು ತಪ್ಪಾಗಿದ್ದವು. ಅದರಂತೆ 24 ಅರ್ಜಿಗಳನ್ನು ಸ್ವೀಕರಿಸಿ, ಉಳಿದ 5,994 ಅರ್ಜಿಗಳನ್ನು ತಿರಸ್ಕರಿಸಲಾಯಿತು.
* ಆಳಂದ ಪ್ರಕರಣದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದರಿಂದ ಅನುಮಾನಗೊಂಡು ವಿಚಾರಣೆ ನಡೆಸಲಾಯಿತು. ಅವುಗಳು ಫೇಕ್ ಅಂತ ಕಂಡುಬಂದ ನಂತರ ಆಳಂದ ಚುನಾವಣಾ ನೋಂದಣಾಧಿಕಾರಿ ಅವರು 2023ರ ಫೆಬ್ರವರಿ 21ರಂದು ಎಫ್‌ಐಆರ್ ದಾಖಲಿಸಿದರು.
* ಪ್ರಕರಣ ದಾಖಲಿಸಿದ ಬಳಿಕ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಕರ್ನಾಟಕದ ಆಯೋಗದ ಬಳಿ ಲಭ್ಯವಿದ್ದ ಎಲ್ಲಾ ಮಾಹಿತಿ, ದಾಖಲೆಗಳನ್ನು ತನಿಖೆ ನಡೆಸಲು 2023ರ ಸೆಪ್ಟೆಂಬರ್ 6ರಂದು ಅಂದಿನ ಕಲಬುರಗಿ ಎಸ್ಪಿಗೆ ನೀಡಲಾಯಿತು. ಫಾರ್ಮ್ (ನಮೂನೆ) ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, ಇಪಿಐಸಿ ಸಂಖ್ಯೆ, ಲಾಗಿನ್‌ಗೆ ಬಳಸಲಾದ ಮೊಬೈಲ್ ಸಂಖ್ಯೆ, ಪ್ರಕ್ರಿಯೆಗೆ ಒದಗಿಸಲಾದ ಮೊಬೈಲ್ ಸಂಖ್ಯೆ, ಅರ್ಜಿ ಸಲ್ಲಿಸಲು ಬಳಸಿದ ಸಾಫ್ಟ್‌ವೇರ್, ಐಪಿ ಅಡ್ರೆಸ್, ಅರ್ಜಿದಾರರ ಸ್ಥಳ, ದಿನಾಂಕ, ಸಮಯ ಸೇರಿದಂತೆ ಮತ ಅಳಿಸಲು ಸಲ್ಲಿಸಿದ್ದ ಅರ್ಜಿದಾರರ ಸಮಗ್ರ ವಿವರಗಳನ್ನ ತನಿಖಾಧಿಕಾರಿಗಳಿಗೆ ನೀಡಲಾಯಿತು. ಆ ಬಳಿಕವೂ ಕರ್ನಾಟಕದ ಸಿಇಒ ತನಿಖಾ ಸಂಸ್ಥೆಗಳಿಗೆ ನಿರಂತರ ಸಹಾಯ ಒಸಗಿಸುತ್ತಿದ್ದಾರೆ, ಹೆಚ್ಚಿನ ಮಾಹಿತಿ ದಾಖಲೆಗಳ ಅಗತ್ಯವಿದ್ದಲ್ಲಿ ಸಹಕರಿಸಿದ್ದಾರೆ.
* ದಾಖಲೆಗಳ ಪ್ರಕಾರ, 2018 ರಲ್ಲಿ ಸುಭಾದ್ ಗುತ್ತೇದಾರ್ (ಬಿಜೆಪಿ) ಮತ್ತು 2023 ರಲ್ಲಿ ಬಿ.ಆರ್ ಪಾಟೀಲ್ (ಕಾಂಗ್ರೆಸ್) ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರು.
* ಇನ್ನೂ ಮಹಾರಾಷ್ಟ್ರದ ಚಂದ್ರಾಪುರದ ರಾಜೂರ ಪ್ರಕರಣದಲ್ಲಿ ಹೊಸ ಮತದಾರರ ನೋಂದಣಿಗಾಗಿ ಒಟ್ಟು 7,792 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಪರಿಶೀಲನೆ ವೇಳೆ ಇದರಲ್ಲಿ 6,861 ಅರ್ಜಿಗಳು ಅಮಾನ್ಯ ಅನ್ನೋದು ಕಂಡುಬಂದಿದ್ದರಿಂದ ತಿರಸ್ಕರಿಸಲಾಯಿತು. ಇಷ್ಟು ದೊಡ್ಡ ಸಂಖ್ಯೆ ಅರ್ಜಿಗಳು ಬಂದಿದ್ದರಿಂದ ಅನುಮಾನಿಸಿ ಚುನಾವಣಾ ನೋಂದಣಿ ಅಧಿಕಾರಿ ರಾಜೂರ ತನಿಖೆಗೆ ಮುಂದಾದರು. ನಂತರ ರಾಜೂರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಯಿತು.
* ಯಾವುದೇ ಮತದಾರರ ಪಟ್ಟಿಯನ್ನು ಕಾನೂನಿನ ಪ್ರಕಾರವೇ ತಯಾರಿಸಲಾಗುತ್ತೆ, ಅದರಂತೆ ಯಾವುದೇ ತಿದ್ದುಪಡಿ, ಅಳಿಸುವಿಕೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಈ ರೀತಿ ಬದಲಾವಣೆಗಳು ಇದ್ದಲ್ಲಿ, ಕಾನೂನಿನ ಕಾರ್ಯವಿಧಾನಗಳ ಪ್ರಕಾರವೇ ಮಾಡಬೇಕಾಗುತ್ತೆ.
* ಅಲ್ಲದೇ ಭಾರತದ ಪ್ರತಿಯೊಬ್ಬ ಅರ್ಹ ಮತದಾರರು ವೋಟರ್ ಲಿಸ್ಟ್‌ನಲ್ಲಿ ದಾಖಲಾಗಿದ್ದಾರೆ, ಜೊತೆಗೆ ಯಾವುದೇ ಅನರ್ಹ ವ್ಯಕ್ತಿಯ ಹೆಸರು ದಾಖಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಚುನಾವಣಾ ಆಯೋಗದ ಸಹಾಯಕ ನಿರ್ದೇಶಕ ಅಪೂರ್ವಕುಮಾರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬಿಹಾರದ (Bihar) ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯಲಿದೆ. ಅದರಂತೆ ರಾಜ್ಯದ ಎಲ್ಲ ಮತದಾರರು ಎಸ್‌ಐಆರ್‌ಗೆ ಒಳಪಡಲಿದ್ದಾರೆ ಎಂದು ತಿಳಿಸಲಾಗಿದೆ. ಈಗಾಗಲೇ ರಾಜ್ಯ ಚುನಾವಣಾ ಆಯೋಗ (Karnataka Election Commission) ಮಾಹಿತಿ ನೀಡಿದ್ದು, ಕೇಂದ್ರ ಚುನಾವಣಾ ಆಯೋಗದಿಂದ ನೋಟಿಫಿಕೇಷನ್ ಜಾರಿಯಾದ ತಕ್ಷಣ ರಾಜ್ಯದ ಎಲ್ಲಾ ಮತದಾರರು ʻಸರ್ʼ ಅಭಿಯಾನಕ್ಕೆ ಒಳಪಡಲಿದ್ದಾರೆ.
ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ (Voter List), ಮತಗಟ್ಟೆಗಳು ಬದಲಾಗಲಿವೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಎಸ್ ಐಆರ್‌ಗೆ ಸಿದ್ಧತೆ ಮಾಡಿಕೊಳ್ತಿರೋ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಪೂರ್ಣಗೊಂಡಿದೆ. ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಸೆಪ್ಟೆಂಬರ್ 25ರ ಒಳಗಡೆ ಪೂರ್ಣ ಆಗಲಿದೆ. 2025ರಲ್ಲಿ 5.40 ಕೋಟಿ ಮತದಾರರು ಮತದಾರರ ಪಟ್ಟಿಯಲ್ಲಿ ಇದ್ದಾರೆ. 2002 ರಲ್ಲಿ 3.40 ಕೋಟಿ ಮತದಾರರ ಪಟ್ಟಿಯಲ್ಲಿ ಇದ್ದವರು. 2002ರಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆಗಿದ್ರೆ ಡಿಜಿಟಲ್ ಸ್ವರೂಪಕ್ಕೆ ತಂದಿಲ್ಲ. ಪ್ರಸ್ತುತ ʻಸರ್ʼ ಅಡಿ ಆದ್ರೆ ಡಿಜಿಟಲ್ ಸ್ವರೂಪಕ್ಕೆ ತರಲಿದ್ದೇವೆ ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಮಾಹಿತಿ ನೀಡಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ಯಾಕೆ ?
ನಕಲಿ ಮತದಾನ ತಡೆಗಟ್ಟುವುದಕ್ಕೆ ಹಾಗೂ ಯಾರೊಬ್ಬರೂ ಮತದಾನ ಹಕ್ಕಿನಿಂದ ವಂಚಿತರಾಗಬಾರದು ಅನ್ನೋ ಉದ್ದೇಶದಿಂದ ಸರ್ ಅಭಿಯಾನ ನಡೆಸಲಾಗುತ್ತಿದೆ. ಬೂತ್ ಮಟ್ಟದಲ್ಲಿ, ಶಿಬಿರಗಳನ್ನ ಆಯೋಜನೆ ಮಾಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ನಡೆಯಲಿದೆ. ಇದನ್ನೂ ಓದಿ: ರಾಹುಲ್ ಆರೋಪಿಸಿದಂತೆ ಆನ್‌ಲೈನಿನಲ್ಲಿ ಮತ ಅಳಿಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ
ಎಸ್‌ಐಆರ್ ಪ್ರಕ್ರಿಯೆ ಹೇಗಿರಲಿದೆ?
1. ಬಿಎಲ್‌ಓಗಳು ಮನೆ ಮನೆಗೆ ಭೇಟಿ ಕೊಡ್ತಾರೆ.
2. ಕ್ಯೂಆರ್ ಕೋಡ್ ಮಾದರಿಯ ಆಧಾರಿತ ಅರ್ಜಿ 2 ಪ್ರತಿಯಲ್ಲಿ ಮಾಹಿತಿ ಸಂಗ್ರಹ.
3. ಅಧಿಕಾರಿ ಸಹಿ ಮಾಡಿದ ಒಂದು ಪ್ರತಿ ಮತದಾರರಿಗೆ ಸಲ್ಲಿಕೆ.
4. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಮೂರು ಭಾರಿ ಮನೆಗೆ ಭೇಟಿ ನೀಡಲಿದ್ದಾರೆ.
5. ಸಂಪರ್ಕಕ್ಕಾಗಿ ಪಕ್ಕದ ಮನೆಯವರ ಸಹಾಯ ಪಡೆಯಲಿದ್ದಾರೆ.
ಮತದಾರರು ಏನು ಮಾಡಬೇಕು ?
1. ಗುರುತಿನ ಚೀಟಿಯಲ್ಲಿ ಪೋಟೋ ಸರಿ ಇಲ್ಲದಿದ್ದರೆ ಸ್ಪಷ್ಟವಾದ ಫೋಟೋ ನೀಡಬೇಕು
2. ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನ ನೀಡಬೇಕು
3. ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ʻಸರ್ʼ ಅಭಿಯಾನ ವೇಳೆ ಚುನಾವಣಾ ಆಯೋಗ ಕೈಗೊಳ್ಳುವ ಕ್ರಮಗಳೇನು?
1. ಎರಡು ಕಡೆ ಹೆಸರು ಇದ್ದರೆ ಫೋಟೊ ಸ್ಕ್ಯಾನಿಂಗ್ ಸಿಸ್ಟಮ್ ಮೂಲಕ ಪತ್ತೆ ಹಚ್ಚಿ ಕ್ರಮ
2. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲು
3. ಪರಿಷ್ಕರಣೆ ನಂತರವೂ ಹೆಸರು ಸೇರದಿದ್ದರೆ ಬಿಎಲ್‌ಒಗಳು ಸಹಿ ಮಾಡಿ ನೀಡಿರುವ ನಮೂನೆ ಮೂಲಕ ಪ್ರಶ್ನಿಸಬಹುದು
ನವದೆಹಲಿ: ಮತ ಕಳ್ಳತನ (Vote Chori) ಎಸಗುತ್ತಿರುವ ಬಿಜೆಪಿ ಮೇಲೆ ಹೈಡ್ರೋಜನ್ ಬಾಂಬ್ ಹಾಕಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ ಮರುದಿನವೇ ಬಿಜೆಪಿ ಈಗ ಕಾಂಗ್ರೆಸ್ ವಿರುದ್ಧವೇ ಬಾಂಬ್ ಹಾಕಿದೆ.
ರಾಹುಲ್ ಗಾಂಧಿ (Rahul Gandhi) ಆಪ್ತ ಪವನ್ ಖೇರಾ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ದಾಖಲೆ ಬಿಡುಗಡೆ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ದೂರಿನ ಬೆನ್ನಲ್ಲೇ ಪವನ್ ಖೇರಾ(Pawan Khera) ಅವರಿಗೆ ಚುನಾವಣಾ ಆಯೋಗ (Election Commission) ನೋಟಿಸ್ ನೀಡಿ ಶಾಕ್ ನೀಡಿದೆ.
ದೆಹಲಿಯಲ್ಲಿ ಎರಡು ಕಡೆ ವೋಟರ್ ಐಡಿ ಹೊಂದಿರುವುದಕ್ಕೆ ಚುನಾವಣಾ ಆಯೋಗ ಖೇರಾಗೆ ನೋಟಿಸ್ ನೀಡಿದೆ. ಎರಡು ಕಡೆ ವೋಟರ್ ಐಡಿ ಹೊಂದಿರುವುದು 1950ರ ಜನಪ್ರತಿನಿಧಿ ಕಾಯ್ದೆಯ ಅಡಿ ಶಿಕ್ಷಾರ್ಹ ಅಪರಾಧ. ಈ ಸಂಬಂಧ ಸೆಪ್ಟೆಂಬರ್ 8 ರ ಸೋಮವಾರ ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸಬೇಕು ಮತ್ತು ಕಾಯ್ದೆಯಡಿ ನಿಮ್ಮ ವಿರುದ್ಧ ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂಓದಿ: ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾಗೆಪಕ್ಷದಿಂದಗೇಟ್ಪಾಸ್
Rahul Gandhi screamed “Vote Chori” from the rooftops. But just like he forgot to mention that his mother, Sonia Gandhi, enlisted herself in India’s voter list even before becoming an Indian citizen, it has now emerged that Pawan Khera, Congress spokesperson—who never misses a… pic.twitter.com/IkGFlUhuWk
ನವದೆಹಲಿ ಮತ್ತು ಜಂಗ್ಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಪವನ್ ಖೇರಾ ಹೆಸರಿದೆ ಎಂದು ಬಿಜೆಪಿ ದಾಖಲೆಯನ್ನು ಇರಿಸಿ ಗಂಭೀರ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪವನ್ ಖೇರಾ ಎರಡು ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಪವನ್ ಖೇರಾ ಎರಡು ಸಕ್ರಿಯ EPIC ಸಂಖ್ಯೆಗಳನ್ನು ಹೇಗೆ ಹೊಂದಿದ್ದಾರೆ? ಅವರು ಹಲವು ಬಾರಿ ಮತ ಚಲಾಯಿಸಿದ್ದಾರೆಯೇ ಎಂಬುದನ್ನು ತನಿಖೆ ಮಾಡುವುದು ಈಗ ಚುನಾವಣಾ ಆಯೋಗದ ಜವಾಬ್ದಾರಿ. ಇದು ಚುನಾವಣಾ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.
ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿರುವ ರಾಹುಲ್ ಗಾಂಧಿ (Rahul Gandhi) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಗುಜರಾತ್‌ನ ಪರಿಚಯವಿಲ್ಲದ 10 ರಾಜಕೀಯ ಪಕ್ಷಗಳು (Anonymous Parties In Gujarat) 5 ವರ್ಷಗಳಲ್ಲಿ 4,300 ಕೋಟಿ ರೂ. ದೇಣಿಗೆ ಪಡೆದುಕೊಂಡಿವೆ. ಈ ಪಕ್ಷಗಳು ಕಡಿಮೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಕಡಿಮೆ ಮತಗಳನ್ನು ಗಳಿಸಿದ್ದರೂ, ಲೆಕ್ಕಪರಿಶೋಧನಾ ವರದಿಗಳಲ್ಲಿ ದೊಡ್ಡ ಮೊತ್ತದ ವೆಚ್ಚವನ್ನು ತೋರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸುತ್ತಾ? ಈ ಬಗ್ಗೆಯೂ ಅಫಿಡವಿಟ್ ಕೇಳ್ತಿರಾ? ಅಂತ ಎಕ್ಸ್ ಖಾತೆಯಲ್ಲಿ ರಾಗಾ ಆಯೋಗಕ್ಕೆ (Election Commission) ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಟ್ರಂಪ್ ಸೂಚಿಸಿದ 5 ಗಂಟೆಗಳೊಳಗೆ ಪಾಕ್ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್ ಗಾಂಧಿ ಕಿಡಿ
3 ಪ್ರಮುಖ ಚುನಾವಣೆಗಳಲ್ಲಿ (Elections) ಈ ಪಕ್ಷಗಳು ಒಟ್ಟಾಗಿ ಕಣಕ್ಕಿಳಿಸಿದ್ದು ಕೇವಲ 43 ಅಭ್ಯರ್ಥಿಗಳನ್ನು ಮಾತ್ರ. ಈ ಎಲ್ಲಾ ಅಭ್ಯರ್ಥಿಗಳು ಸೇರಿ ಗಳಿಸಿದ್ದು ಕೇವಲ 54,069 ಮತಗಳು ಅಂದಿದ್ದಾರೆ. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ
ಇನ್ನು, ಬಿಹಾರದಲ್ಲಿ ರಾಹುಲ್ ಮತದಾನ ಅಧಿಕಾರ ಯಾತ್ರೆಯಲ್ಲಿ ಮಾತಾಡಿ `ಗುಜರಾತ್ ಮಾಡೆಲ್’ ಅಂದ್ರೆ ಮತಗಳ್ಳತನ ಅಂತ ವಾಗ್ದಾಳಿ ನಡೆಸಿದ್ದಾರೆ. ರ‍್ಯಾಲಿಯಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಭಾಗಿಯಾಗಿರೋದಕ್ಕೆ ತಮಿಳುನಾಡು ಬಿಜೆಪಿ ಕಿಡಿಕಾರಿದೆ. ಸನಾತನ ಧರ್ಮ ನಾಶ, ಬಿಹಾರಿಗಳ ಬಗ್ಗೆ ನಿಮ್ಮ ಮಗ, ಸಚಿವರ ಟೀಕೆಗೆ ಧಮ್ ಇದ್ರೆ ಉತ್ತರ ಕೊಡಿ ಅಂತ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ