Tag: Election Code

  • ನೀತಿ ಸಂಹಿತೆ ಉಲ್ಲಂಘನೆ – ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    ನೀತಿ ಸಂಹಿತೆ ಉಲ್ಲಂಘನೆ – ಶ್ರೀನಿವಾಸ ಪೂಜಾರಿಗೆ ಕೋರ್ಟ್‌ ಸಮನ್ಸ್‌

    ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Violation Of Election Code) ಮಾಡಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿ, ಚಿಕ್ಕಮಗಳೂರು (Udupi Chikkamgaluru) ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

    ಕೋಟಾ ಶ್ರೀನಿವಾಸ ಪೂಜಾರಿ, ಗುರುಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.  ಇದನ್ನೂ ಓದಿ: ಇವಿಎಂನಲ್ಲೇ ಚುನಾವಣೆ, ಸ್ಲಿಪ್‌ ಮತದಾರನ ಕೈಗೆ ಸಿಗಬೇಕು : ಕಾಂಗ್ರೆಸ್‌ ಪ್ರಣಾಳಿಕೆ

     

    ಮಾರ್ಚ್ 30 ರಂದು ಕಠಪಾಡಿ ಖಾಸಗಿ ಕಾಲೇಜು ಅವರಣದಲ್ಲಿ ಶ್ರೀನಿವಾಸ ಪೂಜಾರಿ ಪ್ರಚಾರ ಭಾಷಣ ಮಾಡಿದ್ದರು. ಚುನಾವಣಾ ಅಧಿಕಾರಿಗಳ ಅನುಮತಿ ಇಲ್ಲದೆ ರಾಜಕೀಯ ಭಾಷಣ ಮಾಡಿದ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಲಾಗಿತ್ತು.

    ಈ ದೂರಿನ ಹಿನ್ನೆಲೆಯಲ್ಲಿ ಕೋರ್ಟ್‌ ಸಮನ್ಸ್‌ ಜಾರಿ ಮಾಡಿ ಮೇ 27ಕ್ಕೆ ವಿಚಾರಣೆಯನ್ನು ಮುಂದೂಡಿದೆ.

     

  • ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸೆಡ್ಡು – ಹಾಸನದ ಮಂತ್ರಿಗಳ ಕಚೇರಿಗೆ ಬೀಗ

    ಹಾಸನ: ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಲ್ಲಿ ಇದ್ದರು, ಹಾಸನ ಮಂತ್ರಿಗಳ ಕಚೇರಿಯ ಮುಂಬಾಗಿಲಿಗೆ ಬೀಗ ಹಾಕಿ ಒಳಗೆ ಸಿಬ್ಬಂದಿ  ಕಾರ್ಯನಿರ್ವಹಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರೋಹಿಣಿ ಅವರು ಸಚಿವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಸಚಿವ ಎ.ಮಂಜು ಕಚೇರಿಯಲ್ಲಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ಪಡೆದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದರು, ಆದರೆ ಈ ವೇಳೆ ಎಷ್ಟೇ ಪ್ರಯತ್ನ ಮಾಡಿದರು ಸಿಬ್ಬಂದಿ ಕಚೇರಿ ಬಾಗಿಲು ತೆರೆಯದ ಕಾರಣ ಜಿಲ್ಲಾಧಿಕಾರಿಗಳು ಕಚೇರಿಯನ್ನು ವಶಕ್ಕೆ ಪಡೆಯಲು ಆದೇಶ ನೀಡಿದ್ದಾರೆ.

    ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಡಿಸಿ ಕಚೇರಿ ಸಿಬ್ಬಂದಿ ಮತ್ತೊಂದು ಬೀಗ ಜಡಿದಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರು ಕಚೇರಿಯಲ್ಲಿ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಅವರನ್ನು ಪರಿಶೀಲನೆ ನಡೆಸಿದ ಬಳಿಕ ಹೊರಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ನೀತಿ ಸಂಹಿತೆ ಜಾರಿ ಬಳಿಕ ಸರ್ಕಾರಿ ಕಟ್ಟಡ ದುರ್ಬಳಕೆ ಆರೋಪ ಇದಾಗಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ಚುನಾಣಾಧಿಕಾರಿಯಿಂದ ನೋಟಿಸ್ ಜಾರಿಯಾಗಿದೆ. ಚುನಾವಣಾ ಸಿಬ್ಬಂದಿ ಸ್ಥಳಪರಿಶಿಲನೆ ವೇಳೆ ಹೊರಗಿನಿಂದ ಬೀಗಹಾಕಿ ಒಳಗೆ ಕೆಲಸಮಾಡಲಾಗುತ್ತಿತ್ತು ಎಂಬ ಬಗ್ಗೆ ಉಲ್ಲೇಖಿಸಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ನೀತಿ ಸಂಹಿತೆ ಜಾರಿಯಾದ ಬಳಿಕವೂ ಸರ್ಕಾರಿ ಕಟ್ಟಡವನ್ನ ರಾಜಕೀಯ ವ್ಯಕ್ತಿಗಳಿಗೆ ಬಿಟ್ಟು ಕೊಟ್ಟ ಕುರಿತು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಏಪ್ರಿಲ್ 2 ರೊಳಗೆ ಉತ್ತರ ನೀಡಲು ಸೂಚನೆ ನೀಡಲಾಗಿದೆ.