Tag: Election Candidates

  • ರಾಜ್ಯದ 28 ಕ್ಷೇತ್ರಗಳಲ್ಲಿರುವ ಹುರಿಯಾಳುಗಳು ಯಾರ‍್ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ರಾಜ್ಯದ 28 ಕ್ಷೇತ್ರಗಳಲ್ಲಿರುವ ಹುರಿಯಾಳುಗಳು ಯಾರ‍್ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ‌ ಹಂತದ ಮತದಾನ ಇದೇ ಏಪ್ರಿಲ್‌ 19ರಿಂದ ಆರಂಭಗೊಂಡಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಅದರಲ್ಲೂ ಭಾರೀ ಕುತೂಹಲ ಕೆರಳಿಸಿರುವ ಕರ್ನಾಟಕದಲ್ಲಿ ಇದೇ ಏಪ್ರಿಲ್‌ 26 ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಮೇ 7 ರಂದು 2ನೇ ಹಂತದ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಹೊರ ಬೀಳಲಿದೆ.

    ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳು ಬಲಿಷ್ಠ ಹುರಿಯಾಳುಗಳನ್ನು ಕಣಕ್ಕಿಳಿಸಿವೆ. ಅದರಲ್ಲೂ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ತವರು ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್‌ ಕಣದಲ್ಲಿದ್ದಾರೆ. ಆದ್ರೆ ಬಿಜೆಪಿ ಕಟ್ಟಾಳುವಾಗಿದ್ದ ಕೆ.ಎಸ್‌ ಈಶ್ವರಪ್ಪ ಅವರೇ ಬಂಡಾಯ ಅಭ್ಯರ್ಥಿಯಾಗಿ ರಾಘವೇಂದ್ರ ಅವರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಮೊದಲ ಮತ್ತು 2ನೇ ಹಂತದ ಚುನಾವಣೆಗಳಿಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರೆಲ್ಲಾ ಅಭ್ಯರ್ಥಿಗಳಾಗಿ ನಿಂತಿದ್ದಾರೆ? ಯಾರ ನಡುವೆ ನೇರ ಹಣಾ-ಹಣಿ ಏರ್ಪಟ್ಟಿದೆ ಎಂಬುದನ್ನು ತಿಳಿಯುವ ಕುತುಹಲ ನಿಮಗಿದ್ದರೆ ಮುಂದೆ ನೋಡಿ…..

  • Lok Sabha Election 2024: 14 ಕ್ಷೇತ್ರ, 28 ಅಭ್ಯರ್ಥಿಗಳು – ಯಾರ ಆಸ್ತಿ ಎಷ್ಟಿದೆ? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    Lok Sabha Election 2024: 14 ಕ್ಷೇತ್ರ, 28 ಅಭ್ಯರ್ಥಿಗಳು – ಯಾರ ಆಸ್ತಿ ಎಷ್ಟಿದೆ? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

    2024ರ ಲೋಕಸಭಾ ಚುನಾವಣೆಗೆ ದಿನಗಣನೆ ಬಾಕಿಯಿದೆ. ದೇಶಾದ್ಯಂತ 7 ಹಂತಗಳಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇದೇ ಏಪ್ರಿಲ್‌ 26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಮೇ 7 ರಂದು 2ನೇ ಹಂತದ ಮತದಾನ ನಡೆಯಲಿದ್ದು, ಜೂನ್‌ 4 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿಯನ್ನೂ ಘೋಷಿಸಿಕೊಂಡಿದ್ದಾರೆ. ಕರ್ನಾಟಕದ ಈ 14 ಕ್ಷೇತ್ರಗಳಲ್ಲಿ ಕಣದಲ್ಲಿರುವ 28 ಅಭ್ಯರ್ಥಿಗಳ ವೈಯಕ್ತಿಕ ಆಸ್ತಿ ವಿವರನ್ನು ಇಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಯಾರು ಹೆಚ್ಚು ಶ್ರೀಮಂತರು? ಯಾರ ಆಸ್ತಿ ಎಷ್ಟಿದೆ? ಯಾರು ಹೆಚ್ಚು ಚಿನ್ನದ ಒಡೆಯರಾಗಿದ್ದಾರೆ? ಅನ್ನೋದನ್ನ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ನೋಡಿ….

    1. ಡಿ.ಕೆ ಸುರೇಶ್‌

    2. ಡಾ.ಸಿ.ಎನ್‌ ಮಂಜುನಾಥ್‌

    3. ಶೋಭಾ ಕರಂದ್ಲಾಜೆ

    4. ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌

    5. ವಿ. ಸೋಮಣ್ಣ

    6. ತೇಜಸ್ವಿ ಸೂರ್ಯ

    7. ಸುನೀಲ್‌ ಬೋಸ್‌

    8. ಸ್ಟಾರ್‌ ಚಂದ್ರು @ ವೆಂಕಟರಮಣೇಗೌಡ

    9. ಸೌಮ್ಯ ರೆಡ್ಡಿ

    10. ಶ್ರೇಯಸ್‌ ಪಟೇಲ್‌

    11. ರಕ್ಷಾ ರಾಮಯ್ಯ

    12. ಪ್ರಜ್ವಲ್‌ ರೇವಣ್ಣ

    13. ಪಿ.ಸಿ ಮೋಹನ್‌

    14. ಆರ್‌. ಪದ್ಮರಾಜ್‌

    15. ಎಂ.ವಿ ರಾಜೀವ್‌ಗೌಡ

    16. ಮುದ್ದಹನುಮೇಗೌಡ

    17. ಮನ್ಸೂರ್‌ ಅಲಿ ಖಾನ್‌

    18. ಮಲ್ಲೇಶ್‌ ಬಾಬು

    19. ಎಂ. ಲಕ್ಷ್ಮಣ್‌

    20. ಕೆ.ವಿ ಗೌತಮ್‌

    21. ಕೋಟ ಶ್ರೀನಿವಾಸ ಪೂಜಾರಿ

    22. ಡಾ.ಕೆ ಸುಧಾಕರ್‌

    23. ಜಯಪ್ರಕಾಶ್‌ ಹೆಗಡೆ

    24. ಹೆಚ್‌.ಡಿ ಕುಮಾರಸ್ವಾಮಿ

    25. ಗೋವಿಂದ ಕಾರಜೋಳ

    26. ಬ್ರಿಜೇಶ್‌ ಚೌಟ

    27. ಬಿ.ಎನ್‌ ಚಂದ್ರಪ್ಪ

    28. ಬಾಲರಾಜು

  • ಬೆಂಗ್ಳೂರು, ಮೈಸೂರಿನ ಫೈನಾನ್ಸಿಯರ್ ಮನೆಗಳ ಮೇಲೆ IT ರೇಡ್ – 20 ಕೋಟಿ ಹಣ ವಶ

    ಬೆಂಗ್ಳೂರು, ಮೈಸೂರಿನ ಫೈನಾನ್ಸಿಯರ್ ಮನೆಗಳ ಮೇಲೆ IT ರೇಡ್ – 20 ಕೋಟಿ ಹಣ ವಶ

    ಬೆಂಗಳೂರು: ಬೆಂಗ್ಳೂರು (Bengaluru) ಮತ್ತು ಮೈಸೂರಿನ (Mysuru) ಹಲವು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು (IT Officers) ಶುಕ್ರವಾರ ದಾಳಿ (IT Raid) ನಡೆಸಿದ್ದು, ಸುಮಾರು 20 ಕೋಟಿ ಹಣ ವಶಕ್ಕೆ ಪಡೆದಿದ್ದಾರೆ.

    ವಿಧಾನಸಭಾ ಚುನಾವಣಾಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಫಂಡ್ ಮಾಡ್ತಿದ್ದ ಫೈನಾನ್ಸಿಯರ್‌ಗಳ ಮನೆ ಮೇಲೆ ಐಟಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಕೆಲವು ಫೈನಾನ್ಸಿಯರ್‌ಗಳು ಬೇನಾಮಿಗಳಾಗಿರುವ ಹಿನ್ನೆಲೆಯಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಇದನ್ನೂ ಓದಿ:ರವಿ ಕುಮಾರ್ ಶಾಸಕರಾಗುವುದು ಸತ್ಯ, ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ: ಹೆಚ್‌ಡಿಡಿ

    ಬೆಂಗಳೂರು, ಮೈಸೂರು ಭಾಗದಲ್ಲಿ ದಾಳಿ ನಡೆದಿದ್ದು, 15 ಕೋಟಿ ರೂ.ಗಿಂತಲೂ ಹೆಚ್ಚಿನ ಪ್ರಮಾಣದ ನಗದು ಹಾಗೂ 5 ಕೋಟಿ ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

    ಬೆಂಗಳೂರಿನ ಶಾಂತಿನಗರ, ಕಾಕ್ಸ್ಟೌನ್, ಶಿವಾಜಿನಗರ, ಕನಿಂಗ್ಹ್ಯಾಮ್ ರಸ್ತೆ, ಸದಾಶಿವನಗರ, ಕುಮಾರಪಾರ್ಕ್ ವೆಸ್ಟ್ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆದಿದೆ. ಶುಕ್ರವಾರ ಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ಹಣವನ್ನ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.