Tag: election campaign

  • ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಮೈಸೂರು: ಚುನಾವಣಾ ಪ್ರಚಾರದ ಭರದಲ್ಲಿ ಮಾಜಿ ಸಿಎಂ ಪುತ್ರ ವಿಜಯೇಂದ್ರ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ.

    ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯೂರು ಗ್ರಾಮದಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಪ್ರಚಾರ ನಡೆಸಿದ್ರು. ಬೈಕ್ ಸವಾರ ಹಾಗೂ ಹಿಂಬದಿ ಸವಾರ ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದೆ. ಆದ್ರೂ ನಿಯಮವನ್ನ ಗಾಳಿಗೆ ತೂರಿದ ವಿಜಯೇಂದ್ರ ಬೈಕ್ ನ ಹಿಂಬದಿಯಲ್ಲಿ ಕುಳಿತು ಸಾಗಿದರು.

    ಬಿಜೆಪಿ ಮೂರನೇ ಪಟ್ಟಿಯಲ್ಲೂ ವಿಜಯೇಂದ್ರ ಅವರ ಹೆಸರು ಘೋಷಣೆ ಆಗಿಲ್ಲ. ಆದ್ರೂ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಶ್ರೀ ರಾಮುಲು, ಮಾಜಿ ಸಚಿವರುಗಳಾದ ವಿ.ಶ್ರೀನಿವಾಸ್ ಪ್ರಸಾದ್, ಗೋವಿಂದ್ ಕಾರಜೋಳ, ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣ್ಣ ಸಿದ್ದಯ್ಯ, ಹಿಂದುಳಿದ ಮೋರ್ಚ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.

  • ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

    ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

    ಬೆಂಗಳೂರು: ಕೆಲವು ಗಂಟೆಗಳ ಮುಂಚೆ ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವ ಸ್ಟಾರ್ ಪ್ರಚಾಕರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ ಬಿಜೆಪಿ ಸಹ ತನ್ನ ಪರವಾಗಿ ಪ್ರಚಾರ ಮಾಡಲಿರುವ ಸ್ಟಾರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದು, ಅಮಿತ್ ಶಾ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಸಿಎಂ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪ ಮೂರನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ನಾಯಕರು ಹಾಗು ಕೇಂದ್ರ ಸಚಿವರು ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರೆ.

    ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಸದಾನಂದ ಗೌಡ, ಅನಂತ್ ಕುಮಾರ್, ನಿರ್ಮಲ ಸೀತಾರಾಮನ್, ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯೆಲ್, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ದೇವೇಂದ್ರ ಫಡ್ನವೀಸ್, ರವಿಶಂಕರ್ ಪ್ರಸಾದ್, ರಾಮ್ ಲಾಲ್, ಮುರುಳೀಧರ್ ರಾವ್, ಪುರಂದರೇಶ್ವರಿ, ಬಿ ಎಲ್ ಸಂತೋಷ್, ಅರುಣ್ ಕುಮಾರ್, ಸ್ಮೃತಿ ಇರಾನಿ, ತಾವರ್ ಚಂದ್ ಗೆಹ್ಲೋಟ್, ಸಾಧ್ವಿ ನಿರಂಜನ ಜ್ಯೋತಿ, ಎನ್.ರವಿಕುಮಾರ್, ಮನೋಜ್ ತಿವಾರಿ, ಹೇಮಾಮಾಲಿನಿ, ಇವರೆಲ್ಲರೂ ಕರ್ನಾಟಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

    ಇತ್ತ ರಾಜ್ಯ ನಾಯಕರುಗಳಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಪ್ರಹ್ಲಾದ್ ಜೋಷಿ, ಶ್ರೀ ರಾಮುಲು, ಪಿ.ಸಿ.ಮೋಹನ್, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶೋಭ ಕರಂದ್ಲಾಜೆ, ಬಿ ಜೆ ಪುಟ್ಟಸ್ವಾಮಿ, ಡಿ ಎಸ್ ವೀರಯ್ಯ, ತಾರಾ ಅನುರಾಧ, ಶೃತಿ ಸಹ ಸ್ಟಾರ್ ಕ್ಯಾಂಪೇನ್ ಲಿಸ್ಟ್ ನಲ್ಲಿದ್ದಾರೆ.

    ನಟಿ ಹಾಗು ಬಿಜೆಪಿ ವಕ್ತಾರೆಯಾದ ಮಾಳವೀಕಾ ಅವಿನಾಶ್ ಮತ್ತು ನಟ ಗಣೇಶ್ ಪತ್ನಿ ಶಿಲ್ಪಾರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ.

     

  • ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಮಾತ್ರ ಸ್ಪರ್ಧೆ ಮಾಡಲ್ಲ!

    ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಮಾತ್ರ ಸ್ಪರ್ಧೆ ಮಾಡಲ್ಲ!

    ಬೆಂಗಳೂರು: ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ರಾಜಕೀಯ ಅಖಾಡಕ್ಕೆ ಇಳಿಯುವುದು ಹೆಚ್ಚು ಕಡಿಮೆ ಪಕ್ಕಾ ಆಗಿದೆ. ಹೀಗೆಂದ ಕೂಡಲೇ ಯಾವ ಕ್ಷೇತ್ರ? ಯಾವ ಪಕ್ಷ? ಎಂದು ಪ್ರಶ್ನೆ ಕೇಳಿದ್ರೆ ನಿಮಗೆ ಉತ್ತರ ಸಿಗಲ್ಲ. ಸುದೀಪ್ ಚುನವಾಣೆಗೆ ಸ್ಪರ್ಧೆ ಮಾಡದೇ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವೇಳೆ ಕಿಚ್ಚ ಭೇಟಿಯಾಗಿದ್ರು. ಈ ವೇಳೆ ಸುದೀಪ್ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದ್ರೆ ಪ್ರಚಾರ ಮಾಡುವ ಮನಸ್ಸಿದೆ ಅಂತಾ ಹೇಳಿದ್ದಾರೆ. ನಾಯಕ ಸಮುದಾಯದ ಮತಗಳನ್ನು ಸೆಳೆಯೋಕೆ ಕಿಚ್ಚನನ್ನು ಬಳಸಿಕೊಳ್ಳೋಕೆ ಜೆಡಿಎಸ್ ಕೂಡ ಒಳಗೊಳಗೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗ್ತಿದೆ.

    ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿಯ ಸುತ್ತಮುತ್ತ ಭಾಗಗಳಲ್ಲಿ ಜೆಡಿಎಸ್ ಪರವಾಗಿ ಸುದೀಪ್ ಪ್ರಚಾರ ಮಾಡುವ ಸಾಧ್ಯತೆಗಳಿವೆ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದಂದು ಸುದೀಪ್ ಖುದ್ದು ತಾವೇ ಅಡುಗೆ ಮಾಡಿ, ಉಣಬಡಿಸಿದ್ದರು. ಅಂದು ಇಬ್ಬರೂ ಸುದೀರ್ಘ 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.

  • ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಹೆಚ್‍ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!

    ಬೆಂಗಳೂರು: ರಾಜ್ಯ ಚುನಾವಣೆ ಗೆಲ್ಲಲು ಜೆಡಿಎಸ್ ಭರದ ಸಿದ್ಧತೆ ಕೈಗೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ನಿರ್ಮಾಣವಾಗಿದೆ.

    2018ರ ಚುನಾವಣಾ ಪ್ರಚಾರಕ್ಕೆ ಹೆಚ್ಚು ಕಡಿಮೆ ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಬಸ್ ಸಿದ್ಧವಾಗಿದೆ. ತಮಿಳುನಾಡಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಶೋಕ ಲೈಲೆಂಡ್ ಬಸ್ಸನ್ನು ಮಾಡಿಫೈ ಮಾಡಲಾಗಿದೆ. ಈ ಹೈಟೆಕ್ ಬಸ್ ತಯಾರಿಕೆ ಜುಲೈನಲ್ಲಿಯೇ ಆರಂಭವಾಗಿದ್ದು, ಮುಂದಿನ ತಿಂಗಳು ನವೆಂಬರ್‍ನಲ್ಲಿ ಈ ಬಸ್‍ಗೆ ಚಾಲನೆ ನೀಡಲಾಗುತ್ತದೆ.

    ಬಸ್‍ನಲ್ಲಿದೆ ಹೈಟೆಕ್ ವ್ಯವಸ್ಥೆ: ಈ ಬಸ್‍ನಲ್ಲಿ ಏನುಂಟು, ಏನಿಲ್ಲ. ಇದನ್ನು ಚಲಿಸುವ ಅರಮನೆ ಎಂದರೂ ತಪ್ಪಿಲ್ಲ. ಈ ಬಸ್‍ನಲ್ಲಿ ಐಷಾರಾಮಿ ಬೆಡ್ ರೂಮ್ ಇದೆ. ಒಂದು ಚಿಕ್ಕ ಮೀಟಿಂಗ್ ಹಾಲ್, ಅಡುಗೆ ರೂಮ್, ಶೌಚಾಲಯವಿದೆ. ಅಲ್ಲದೆ ಹೈಡ್ರೋಲಿಕ್ ಲಿಫ್ಟ್, ಸನ್ ರೂಫ್, ಎಸಿ, ಟಿವಿ ಮತ್ತು ಕುಳಿತುಕೊಳ್ಳಲು ಸೋಫಾ ಇತ್ಯಾದಿ ವ್ಯವಸ್ಥೆಗಳಿವೆ. ಪ್ರಚಾರದ ಸಮಯದಲ್ಲಿ ನಾಲ್ಕು ಮಂದಿ ಬಸ್ ಒಳಗೆ ನಿಲ್ಲಬಹುದಾಗಿದೆ. ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿತ್ ಅಲ್ತಾಫ್ ನೇತೃತ್ವದಲ್ಲಿ ಈ ಬಸ್ ತಯಾರಾಗುತ್ತಿದೆ.

    ಈ ಬಸ್‍ನಲ್ಲಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರವನ್ನು ಮಾಡಲಿದ್ದು, ಗ್ರಾಮ ವಾಸ್ತವ್ಯ ಸೇರಿದಂತೆ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ. ಮೊದಲಿಗೆ ಮೈಸೂರಿನ ಚಾಮುಂಡೇಶ್ವರಿ ತಾಯಿಗೆ ನಮಿಸಿ ನಂತರ ಪ್ರಚಾರವನ್ನು ಆರಂಭಿಸುತ್ತಾರೆ ಎನ್ನಲಾಗಿದೆ.

    https://www.youtube.com/watch?v=kgc3R7fTvW4

  • ಎತ್ತಿನ ಗಾಡಿ ಏರಿ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರಚಾರ

    ಎತ್ತಿನ ಗಾಡಿ ಏರಿ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರಚಾರ

    ಗಾಂಧಿನಗರ: ಗುಜರಾತ್ ಸೌರಷ್ಟ್ರದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎತ್ತಿನ ಗಾಡಿ ಏರಿ ಪ್ರಚಾರ ಆರಂಭಿಸಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್‍ನಲ್ಲಿ ಪ್ರಚಾರ ನಡೆಸಲಿದ್ದಾರೆ. ಆದರೆ ಪೊಲೀಸರು ರಸ್ತೆಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಲು ಅನುಮತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಎತ್ತಿನ ಗಾಡಿ ಏರಿ ಪ್ರಚಾರ ಕಾರ್ಯ ಆರಂಭಿಸಿದರು.

    ದ್ವಾರಕದ ದೇವಾಲಯದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಿದರು. ದ್ವಾರಕ, ಜಾಮ್‍ನಗರ, ಮೋರ್ಬಿ, ರಾಜ್‍ಕೋಟ್ ಮತ್ತು ಸುರೇಂದ್ರನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರಚಾರವನ್ನು ಮಾಡಲಿದ್ದಾರೆ.

    ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ 56 ಸ್ಥಾನಗಳು ಸೌರಾಷ್ಟ್ರದಲ್ಲಿದೆ. ಇಲ್ಲಿ ಪಟೇಲ್ ಸಮುದಾಯದವರು ಪ್ರಬಲರಾಗಿದ್ದು, ಈ ಮತಗಳನ್ನು ಸೆಳೆಯಲು ರಾಹುಲ್ ಗಾಂಧಿ ಇಲ್ಲಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

    ಆಗಸ್ಟ್‍ನಲ್ಲಿ ನಡೆದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಮೊದಲು ನಿರೀಕ್ಷೆ ಮಾಡಲಾಗಿತ್ತಾದರೂ ಕೊನೆಯಲ್ಲಿ ಭಾರೀ ಕಷ್ಟದಿಂದ ಗೆಲುವು ಸಾಧಿಸಿದ್ದರು. ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ ರಾಜೀನಾಮೆ ಜೊತೆ 14 ಮಂದಿ ಶಾಸಕರು ಕಾಂಗ್ರೆಸ್ ಗೆ ಗುಡ್‍ಬೈ ಹೇಳಿದ್ದರು.

    ಮಂಗಳವಾರ ಬೆಳಗ್ಗೆ ರಾಹುಲ್ ಗಾಂಧಿ ತಂಕಾರಾ ಮತ್ತು ವಂಕಾನರ್‍ನಿಂದ ರಾಜ್‍ಕೋಟಾಗೆ ಹೋಗುತ್ತಾರೆ. ಅಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿ ಹೊಸದಾಗಿ ಜಾರಿಯಾದ ಜಿಎಸ್‍ಟಿ, ಕಳೆದ ನವೆಂಬರ್‍ನಿಂದ ಹಣ್ಣು, ತರಕಾರಿಗಳ ಬೆಲೆ ಏರಿಳಿತ ಇತರೆ ಸಮಸ್ಯೆಗಳ ಬಗ್ಗೆ ಕುರಿತು ಚರ್ಚಿಸಲಿದ್ದಾರೆ.

    ಕೊನೆಯ ದಿನದಂದು ಸುರೇಂದ್ರನಗರದಲ್ಲಿರುವ ಎರಡು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಮೊದಲು ಚೋಟೈಲ್‍ನಲ್ಲಿರುವ ಬೆಟ್ಟದ ದೇವಸ್ಥಾನ ಮತ್ತು ಎರಡನೆದಾಗಿ ಕಾಗ್ವಾಡದಲ್ಲಿರುವ ಖೊಡಾಲ್ಧಾಮ್ ದೇವಸ್ಥಾನಕ್ಕೆ ತೆರಳುತ್ತಾರೆ. ಇದು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಶಾಲಿಯಾದ ದೇವರಾಗಿದೆ.

    ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಹಿರಿಯ ನಾಯಕರು ಮೂರು ದಿನಗಳ ಕಾಲ ಗುಜರಾತ್ ನಲ್ಲಿ ತಡೆರಹಿತ ಪ್ರಚಾರವನ್ನು ನಡೆಸುತ್ತಿದ್ದಾರೆ. 1881ರಲ್ಲಿ ದಿವಂಗತ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರು ಗುಜರಾತ್‍ನಲ್ಲಿ ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದರು ಎಂದು ಪಕ್ಷದ ವಕ್ತಾರ ಶಕ್ತಿ ಸಿಂಗ್ ಗೊಹಿಲ್ ಹೇಳಿದ್ದಾರೆ.