Tag: election campaign

  • ತೆಲಂಗಾಣದಲ್ಲಿ ಡಿಕೆಶಿ ತಂತ್ರಗಾರಿಕೆ

    ತೆಲಂಗಾಣದಲ್ಲಿ ಡಿಕೆಶಿ ತಂತ್ರಗಾರಿಕೆ

    ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿಯೂ ತಮ್ಮ ತಂತ್ರಗಾರಿಕೆಯನ್ನು ಪ್ರಯೋಗಿಸಿದ್ದಾರೆ. ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಆರಂಭದಲ್ಲಿಯೇ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕಾಗಿ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಿತ್ತು.

    ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಿದ ನಂತರ ತೆಲಂಗಾಣದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿತ್ತು. ಹೀಗಾಗಿ ತೆಲಂಗಾಣಕ್ಕೆ ತೆರಳಿದ್ದ ಡಿ.ಕೆ.ಶಿವಕುಮಾರ್ ವಾರಂಗಲ್, ಸೆರಿಲಿಂಗಮ್ ಕ್ಷೇತ್ರದ ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾರಂಗಲ್ ಕ್ಷೇತ್ರದಲ್ಲಿ ನಯಿನಿ ರಾಜ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಇತ್ತ ಸೆರಿಲಿಂಗಮ್ ಪಲ್ಲಿ ಕ್ಷೇತ್ರದ ಭಿಕ್ಷಾಪತಿ ಅವರನ್ನು ಪಕ್ಷದಲ್ಲಿ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಗುರುವಾರ ತೆಲಂಗಾಣದಿಂದ ಬಂದಿರುವ ಡಿ.ಕೆ.ಶಿವಕುಮಾರ್ ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಮಧ್ಯಾಹ್ನ ಮತ್ತೆ ತೆಲಂಗಾಣಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆಯೂ ಡಿಕೆ ಶಿವಕುಮಾರ್ ಹಾಜರಾಗಲಿದ್ದಾರೆ. ಮೂರು ದಿನ ಬಿಟ್ಟು ತೆಲಂಗಾಣದಲ್ಲೇ ತಂಗಲಿರುವ ಶಿವಕುಮಾರ್ ಪ್ರಚಾರದ ಸಂಪೂರ್ಣ ಹೊಣೆ ಹೊರಲಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗ್ಯಾಸ್ ಬಲೂನ್ ಸ್ಫೋಟ: ಗಾಯಗೊಂಡಿದ್ದ  ಬಾಲಕನಿಗೆ  ನೆರವು ನೀಡ್ತೀವಿ ಅಂತ ಮರೆತೇ ಬಿಟ್ರು ರಾಜಕಾರಣಿಗಳು!

    ಗ್ಯಾಸ್ ಬಲೂನ್ ಸ್ಫೋಟ: ಗಾಯಗೊಂಡಿದ್ದ ಬಾಲಕನಿಗೆ ನೆರವು ನೀಡ್ತೀವಿ ಅಂತ ಮರೆತೇ ಬಿಟ್ರು ರಾಜಕಾರಣಿಗಳು!

    ಮಂಡ್ಯ: ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಾಲಕನೊಬ್ಬನ ಬದುಕು ಬರಡಾಗಿದೆ. ತೀವ್ರ ಕಡು ಬಡುತನದಲ್ಲಿರೋ ಈ ಕುಟುಂಬ ಈಗ ಗಾಯಾಳು ಬಾಲಕನನ್ನು ಉಳಿಸಿಕೊಳ್ಳಲು ಪರದಾಡ್ತಿದೆ. ನೆರವಿನ ಹಸ್ತ ನೀಡ್ತೀವಿ ಅಂದಿದ್ದ ರಾಜಕಾರಣಿಗಳು ಇದೀಗ ಈ ಬಾಲಕನನ್ನು ಮರೆತೇ ಬಿಟ್ಟಿದ್ದಾರೆ.

    ಹೌದು. ಮಾರ್ಚ್ 23 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಂತೆ ಮೈದಾನದಲ್ಲಿ ರಾಹುಲ್ ಗಾಂಧಿ ಸ್ವಾಗತಕ್ಕಾಗಿ ಹಾಕಲಾಗುತ್ತಿದ್ದ ಗ್ಯಾಸ್ ಬಲೂನ್ ಸ್ಫೋಟಗೊಂಡಿತ್ತು. ಈ ಪ್ರಕರಣದಲ್ಲಿ ಸುಮಾರು 11 ಮಕ್ಕಳು ಗಾಯಗೊಂಡಿದ್ದರು. ಅದರಲ್ಲಿ ಸಂತೆ ಮಾಳದ ಸ್ಲಂ ನಿವಾಸಿ ಕುಮಾರ್ ಎಂಬವರ ಮಗ ಮಾದೇಶ್ ಅನ್ನೋ ಬಾಲಕ ಈಗಲೂ ತೀವ್ರ ಸುಟ್ಟಗಾಯಗಳಿಂದ ನರಳಾಡ್ತಿದ್ದಾನೆ.

    ಭಾಗ್ಯಮ್ಮ, ಬಾಲಕನ ತಾಯಿ

    ಘಟನೆಯಾದಾಗ ಈತನ ಆಸ್ಪತ್ರೆ ಖರ್ಚು ವೆಚ್ಚ ನೋಡಿಕೊಂಡ ರಾಜಕಾರಣಿ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಇದೀಗ ಚುನಾವಣೆ ಸೋತ ಬಳಿಕ ಮರೆತೇ ಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಪಕ್ಷದ ವತಿಯಿಂದ 25 ಸಾವಿರ ಪರಿಹಾರ ಘೋಷಣೆ ಮಾಡಿದ್ರು. ಆದ್ರೆ ಬಾಲಕನ ಚಿಕಿತ್ಸೆಗೆ ಪ್ರತಿ ತಿಂಗಳು ಕನಿಷ್ಟ 20 ಸಾವಿರ ಖರ್ಚಾಗುತ್ತಿದೆ. ಶೇಕಡ 80 ರಷ್ಟು ಸುಟ್ಟ ಗಾಯವಾಗಿರೋ ಈ ಬಾಲಕನನ್ನು ಉಳಿಸಿಕೊಳ್ಳಲು ಪೋಷಕರು ಪರದಾಡುತ್ತಿದ್ದು, ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ಹೀಗಾಗಿ ಆರ್ಥಿಕ ನೆರವಿಗೆ ಕೈ ಚಾಚುತ್ತಿದ್ದಾರೆ.

    ತೀರಾ ಬಡತದಲ್ಲಿರೋ ಈ ಕುಟುಂಬ ಕೂಲಿ ನಾಲಿಮಾಡಿ ಹೇಗೋ ಚಿಕ್ಕ ಮನೆಯಲ್ಲಿ ಜೀವನ ನಡೆಸ್ತಿದ್ರು. ಘಟನೆಯ ನಂತರ ಈ ಕುಟುಂಬದ ಸ್ಥಿತಿ ಹೇಳತೀರದಾಗಿದೆ. ಇತ್ತ ಗಾಯಾಳು ಮಗನ ಚಿಕಿತ್ಸಾ ವೆಚ್ಚಕ್ಕೆ ತಂದೆ ಕೂಲಿಕೆಲಸ ಮಾಡುತ್ತಿದ್ರೆ, ಪತ್ನಿ ಸದಾ ಮಲಗಿದ ಸ್ಥಿತಿಯಲ್ಲಿ ಸುಟ್ಟ ಗಾಯದೊಂದಿಗೆ ನರಳಾಡ್ತಿರೋ ಬಾಲಕನನ್ನು ಆರೈಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜಕಾರಣಿಗಳ ಪ್ರಚಾರದ ಭರಾಟೆಗೆ ಬಾಲಕನ ಬದುಕು ಮಾತ್ರ ಶೋಚನೀಯವಾಗಿದೆ. ಬಾಲಕ ಶಾಲೆಗೆ ಹೋಗಲೂ ಆಗದೇ ವಿದ್ಯಾಭ್ಯಾಸ ಕುಂಠಿತವಾಗಿದೆ.

  • ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು – ರಾಹುಲ್ ಗಾಂಧಿ

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು – ರಾಹುಲ್ ಗಾಂಧಿ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹೇಳಿದ್ದಾರೆ.

    ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಕಂಠೀರವ ಸ್ಟೂಡಿಯೋಗೆ ಹೋಗಿ ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿ ಬಂದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ರಾಜ್ ಕುಮಾರ್ ಅವರ ಸಮಾಧಿಗೆ ಹೋಗಿ ಪುಷ್ಪಾರ್ಚನೆ ಸಲ್ಲಿಸಿದ್ದು, ಆ ಫೋಟೋವನ್ನು ಹಾಕಿ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂದು ಬರೆದ ಟ್ವೀಟ್ ಮಾಡಿದ್ದಾರೆ. ಜೊತೆಗೆ `ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಮರ್ಪಿಸಿ ನನ್ನ ಗೌರವ ನಮನವನ್ನು ಸಲ್ಲಿಸಿದೆನು. ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿದಾಯಕ’ ಎಂದು ಬರೆದುಕೊಂಡಿದ್ದಾರೆ.

    ರಾಹುಲ್ ಗಾಂಧಿ ಅವರು ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

  • ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ಬೆಂಗಳೂರು: ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಗರದಲ್ಲಿರೋ ದೊರೆಯುವ ಐಸ್ ಕ್ರೀಂ ಗೆ ಫಿದಾ ಆಗಿದ್ದಾರೆ.

    ಚುನಾವಣಾ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?: `ನನ್ನ ಇಷ್ಟು ದಿನದ ಚುನಾವಣಾ ಪ್ರಚಾರದ ಕೊನೆಯ ದಿನವನ್ನು ಕಳೆಯಲು ಬೆಂಗಳೂರಿನಲ್ಲಿರುವ ಐಸ್ ಕ್ರೀಂ ಪಾರ್ಲರ್ ಒಂದು ಒಳ್ಳೆಯ ಜಾಗವಾಗಿತ್ತು. ಇಲ್ಲಿ ದೊರೆಯುವ ಐಸ್ ಕ್ರೀಂ ತುಂಬಾನೇ ಟೇಸ್ಟಿಯಾಗಿದೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕೂಡ ಸ್ನೇಹ ಮನೋಭಾವದಿಂದ ಕೂಡಿದ್ದಾರೆ. ಈ ಪಾರ್ಲರ್ ನ ಮಾಲಕನನ್ನು ಮತ್ತು ಕೆಲ ಗ್ರಾಹಕರನ್ನು ಭೇಟಿ ಮಾಡಿ ಮಾಡಿದ್ದು, ಖುಷಿ ನೀಡಿದೆ. ಆದಷ್ಟು ಬೇಗ ಮತ್ತೆ ಇದೇ ಪಾರ್ಲರ್ ಗೆ ಭೇಟಿ ನೀಡುತ್ತೇನೆ ಅಂತ ಬರೆದುಕೊಂಡಿದ್ದಾರೆ.

  • ಲೇ ಮಗನೇ ನಿನಗೆಷ್ಟು ತಾಕತ್ತಿದೆ- ಬಿಜೆಪಿ ಅಭ್ಯರ್ಥಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

    ಲೇ ಮಗನೇ ನಿನಗೆಷ್ಟು ತಾಕತ್ತಿದೆ- ಬಿಜೆಪಿ ಅಭ್ಯರ್ಥಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ಕಿಡಿ

    ಬಾಗಲಕೋಟೆ: ಶಾಸಕ, ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಹುನಗುಂದ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಘಟನೆ ನಡೆದಿದೆ.

    ಇಳಕಲ್ ನಗರದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಶಪ್ಪನವರ್, ಲೇ ಮಗನೆ ಎಂದು ಸಂಬೋಧಿಸಿ, ನಿನಗೆಷ್ಟು ತಾಕತ್ತಿದೆ.. ಲೇ ಗಂಡುಮಗನೆ ಇದೇ 15 ರಂದು ಫಲಿತಾಂಶದ ದಿನ ನೀನು ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇನೆ. ನನ್ನ ವಿರುದ್ಧ ಮಾತನಾಡೋಕೆ ಎಷ್ಟಿದೆ ನಿನಗೆ ತಾಕತ್ತು. ಪದೇ ಪದೇ ಇಳಕಲ್ ನಲ್ಲಿ ಬಿಜೆಪಿ ಇದೆ ಅಂತ ಹೇಳ್ತಾನೆ. ಕಳೆದ ಬಾರಿ ಇಟ್ಟಿಲ್ಲವೇ ಎಣ್ಣಿ. ಈ ಸಾರಿನೂ ಮುಟ್ಟಿ ಮಟ್ಟಿ ನೋಡಿಕೊಳ್ಳುವಂಗೆ ಎಣ್ಣಿ ಇಡ್ತಿನಿ. ಇಬ್ಬರು ಹುಚ್ಚನಾಯಿಗಳು ನಮ್ಮ ಮನೆಯಲ್ಲಿ ಉಂಡು ಈಗ ಬಿಜೆಪಿ ಸೇರಿ ನಮಗೆ ದ್ರೋಹಾ ಮಾಡ್ತಿದ್ದಾರೆ. ಇನ್ನಿಬ್ರು ಎಂಐಎಂ ಸೇರಿದ್ದಾರೆ ಅಂತ ಆಕ್ರೋಶದ ಮಾತುಗಳನ್ನು ಹೊರಹಾಕಿದ್ದಾರೆ.

    ಕೊಪ್ಪಳದಿಂದ ಜೆರ್ಸಿ ಆಕಳ ಬಂದಿದೆ ಎಂದು ಪಕ್ಷೇತರ ಅಭ್ಯರ್ಥಿ ಎಸ್ ಆರ್ ನವಲಿಹಿರೆಮಠ ಬಗ್ಗೆ ಲೇವಡಿ ಮಾಡಿದ ಕಾಶಪ್ಪನವರ್, ಜೆರ್ಸಿ ಆಕಳಾನು ಕಾಂಗ್ರೆಸ್ದೇ ತಿಂದು ಬೆಳೆದಿದೆ. ಎಂಐಎಂ, ಬಿಜೆಪಿ, ಜೆಡಿಎಸ್, ಬಹುಜನ ಸಮಾಜ ಪಾರ್ಟಿಯವರು ಕೂಡಿದ್ದಾರೆ. ಇನ್ನೂ ಹತ್ತು ಜನ ಕೂಡಿರಿ, ನಾನೂ ಅಂಜೋದಿಲ್ಲ ಅಂತ ಗರಂ ಆಗಿದ್ದಾರೆ.

    ಕುಮಾರಸ್ವಾಮಿ ಗೆ ಇಲ್ಲಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಕೊಡೋದಕ್ಕೆ ಧಮ್ ಇಲ್ಲ. ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾನೆ ಅದಕ್ಕೆ ರಾಹುಲ್ ಗಾಂಧಿ ಜೆಡಿಎಸ್ ಅನ್ನ ಬಿ.ಟೀಂ ಅಂತ ಕರೆದಿದ್ದು ಅಂತ ಹೇಳಿದ್ರು.

  • ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಟ್ವಿಸ್ಟ್

    ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಟ್ವಿಸ್ಟ್

    ದಾವಣಗೆರೆ: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಸಚಿವ ಆಂಜನೇಯ ಘಟನೆಗೆ ಇದೀಗ ಟ್ವಿಸ್ಟ್ ದೊರೆತಿದೆ.

    ಹೌದು. ತಮ್ಮ ಕ್ಷೇತ್ರದ ಮತದಾರರ ಸಿಟ್ಟಿನಿಂದ ತಪ್ಪಿಸಿಕೊಳ್ಳಲು ಸಚಿವರು ಹೀಗೆ ಮಾಡಿದ್ದಾರೆ ಅನ್ನೋ ಮಾತುಗಳು ಇದೀಗ ಕೇಳಿಬರುತ್ತಿದೆ. ಸಚಿವರು ಶನಿವಾರ ಹೊಳಲ್ಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಭರಮಸಾಗರ ಹೋಬಳಿ ವ್ಯಾಪ್ತಿಯ ಇಸಾಮುದ್ರ, ಅರಬಗಟ್ಟ, ಹೆಗ್ಗೆರೆಯಲ್ಲಿ ಜನ ತಮ್ಮ ಸಿಟ್ಟು ಹೊರಹಾಕಿದ್ದರು.

    ಗೆದ್ದು ಸಚಿವರಾಗಿ ಹೋದ್ಮೆಲೆ ಈಗ ಬಂದಿದ್ದೀರಿ ಮತ ಕೇಳೋಕೆ?. ನಿಮಗೇಕೆ ಮತ ಹಾಕಬೇಕು?. ಅರಬಗಟ್ಟಿಯಲ್ಲಿ ಸದಾಶಿವ ಆಯೋಗದ ವರದಿ ಯಾಕ್ ಜಾರಿ ಮಾಡಿಲ್ಲ ಅಂತ ಪ್ರಶ್ನಿಸಿದ್ದರು. ಸದಾಶಿವ ಆಯೋಗದ ವರದಿ ವಿಚಾರದಲ್ಲಿ ಸ್ಪಷ್ಟ ನಿಲುವು ತೋರುತ್ತಿಲ್ಲ ಅಂತ ತರಾಟೆಗೆ ತೆಗೆದುಕೊಂಡ್ರು. ಈ ವೇಳೆ ವಾಗ್ವಾದ ನಡೆದಿದ್ದು, ಪರಿಣಾಮ ಸಚಿವರಿಗೆ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದರು.

    ತಕ್ಷಣವೇ ಅವ್ರನ್ನು ಇಸಾಮುದ್ರದ ಕಾಂಗ್ರೆಸ್ ಮುಖಂಡನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತ್ರ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ಬದಾಮಿಯಲ್ಲಿ ಸುದೀಪ್ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಸಂಸದ ಶ್ರೀರಾಮುಲು

    ಬದಾಮಿಯಲ್ಲಿ ಸುದೀಪ್ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಸಂಸದ ಶ್ರೀರಾಮುಲು

    ಕೊಪ್ಪಳ: ನಟ ಸುದೀಪ್ ನಮ್ಮ ಸಮಾಜದ ಓರ್ವ ಕಲಾವಿದ. ಸಿನಿಮಾದಲ್ಲಿ ಸುದೀಪ್ ಅದ್ಭುತವಾಗಿ ನಟನೆ ಮಾಡುವ ಮೇಲಕ್ಕೆ ಬಂದಿದ್ದಾರೆ. ಶ್ರೀರಾಮುಲು ಸಮಾಜಪರ ಕೆಲಸಗಳಿಂದ ರಾಜಕಾರಣದಲ್ಲಿ ಮೇಲೆ ಬಂದಿದ್ದೇನೆ. ಇಂದು ಬೆಳಗ್ಗೆ ಸುದೀಪ್ ಅವರ ಫೋನ್ ನಲ್ಲಿ ಮಾತನಾಡಿದ್ದು, ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂತಾ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಚುನಾವಣಾ ಪ್ರಚಾರಕ್ಕೆ ಶ್ರೀರಾಮುಲು ಆಗಮಿಸಿದ್ರು. ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಸಂಸದರು, ನನ್ನ ವಿರುದ್ಧ ಪ್ರಚಾರ ಮಾಡಲ್ಲ ಅಂತಾ ಸುದೀಪ್ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳು ಬಂದಿದ್ದರಿಂದ ಹಿಂದೆ ಸರಿದಿದ್ದಾರೆ. ಇಂದು ಬೆಳಗ್ಗೆ ಎಂತಹ ಪರಿಸ್ಥಿತಿಯಲ್ಲೂ ನನ್ನ ವಿರುದ್ಧದ ಚುನಾವಣೆ ಪ್ರಚಾರಕ್ಕೆ ಬರಲ್ಲ ಅಂತಾ ಹೇಳಿದ್ದಾರೆ ಎಂದು ತಿಳಿಸಿದ್ರು.

    ಮೋದಿ ವಿರುದ್ಧ ಸಿಎಂ ಟ್ವೀಟ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಸಿದ ಶ್ರೀರಾಮುಲು, ಗಾಜಿನ ಮನೆ ಮೇಲೆ ನಿಂತು ಇನ್ನೊಬ್ಬರ ಮನೆ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಸಿಎಂ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಭ್ರಷ್ಟ ಮಂತ್ರಿಗಳು ತುಂಬಿಕೊಂಡಿದ್ದಾರೆ. ಮೂರು ಬಿಟ್ಟವರೇ ಅಂದ್ರೆ ಕಾಂಗ್ರೆಸ್‍ನವರು ಅಂತಾ ಟೀಕಿಸಿದ್ರು.

  • ಇಡೀ ಕರ್ನಾಟಕದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡ್ತೀನಿ- ಪೂಜಾ ಗಾಂಧಿ

    ಇಡೀ ಕರ್ನಾಟಕದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡ್ತೀನಿ- ಪೂಜಾ ಗಾಂಧಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ನಟಿ ಪೂಜಾ ಗಾಂಧಿ ಮತ ಪ್ರಚಾರ ನಡೆಸಿದ್ದರು. ನಗರದ ಅಂಬೇಡ್ಕರ್ ವೃತ್ತದ ಬಳಿ ಆಗಮಿಸಿದ ನಟಿ ಪೂಜಾ ಗಾಂಧಿ ತಮ್ಮ ಸಿನಿಮಾದ ಹಾಡನ್ನು ಹಾಡುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದ್ರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಪೂಜಾ ಗಾಂಧಿ, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ರಾಷ್ಟ್ರೀಯ ಪಕ್ಷಗಳು ಪರಿಹರಿಸುವಲ್ಲಿ ಸೋತಿದೆ. ಹೀಗಾಗಿ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಅಂತಾ ಅಂದ್ರು.

    ಕಾರವಾರ ತಾಲೂಕಿನಲ್ಲಿ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಮೀನುಗಾರರನ್ನು ಬೀದಿಗೆ ತಂದಿದೆ. ಕಾರವಾರದ ಜನರು ಉದ್ಯೋಗಕ್ಕಾಗಿ ಗೋವಾವನ್ನು ಅವಲಂಭಿಸುವಂತಾಗಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

    ಈ ತಿಂಗಳ 11ನೇ ತಾರೀಖಿನವರೆಗೆ ಇಡೀ ಕರ್ನಾಟಕದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪೂಜಾ ಗಾಂಧಿ ತಿಳಿಸಿದ್ದಾರೆ.

  • ಆರೋಗ್ಯ ಸರಿಯಿಲ್ಲ, ವಯಸ್ಸು ಸಹಕರಿಸ್ತಿಲ್ಲ, ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ- ಅಂಬರೀಶ್

    ಆರೋಗ್ಯ ಸರಿಯಿಲ್ಲ, ವಯಸ್ಸು ಸಹಕರಿಸ್ತಿಲ್ಲ, ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ- ಅಂಬರೀಶ್

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್‍ಗೆ ಡಿಮ್ಯಾಂಡ್ ಕಡಿಮೆಯೇ ಆಗಿಲ್ಲ. ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರೋ ರೆಬೆಲ್ ಸ್ಟಾರ್ ಹಿಂದೆ ಕಾಂಗ್ರೆಸ್ ಬಿದ್ದಿದೆ.

    ಮಂಡ್ಯ ಬಿ ಫಾರಂ ಕೊಟ್ಟರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಅಂಬರೀಶ್‍ಗೆ, ಪಕ್ಷದ ಪರ ಪ್ರಚಾರಕ್ಕಾದರೂ ಬನ್ನಿ ಎಂದು ಕೆಪಿಸಿಸಿ ನಾಯಕರು ಕೇಳಿಕೊಂಡಿದ್ದಾರೆ. ಆದರೆ ಅಂಬಿ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಎಲ್ಲಾ ಸರಿ ಇದ್ದಿದ್ದರೆ ಎಲೆಕ್ಷನ್‍ಗೆ ಕಂಟೆಸ್ಟ್ ಮಾಡುತ್ತಿರಲಿಲ್ವಾ. ಆರೋಗ್ಯ ಸರಿ ಇಲ್ಲಾ. ವಯಸ್ಸು ಸಹಕರಿಸುತ್ತಿಲ್ಲ. ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ ಎಂದು ಅಂಬಿ ಕೈ ಎತ್ತಿದ್ದಾರೆ ಎನ್ನಲಾಗಿದೆ.

    ಕೈ ಪಡೆ ಮಾತ್ರ ತನ್ನ ಪ್ರಯತ್ನ ಬಿಟ್ಟಿಲ್ಲ. ಅಂದಹಾಗೇ ಕಾಂಗ್ರೆಸ್ ಸ್ಟಾರ್ ಕ್ಯಾಂಪೆನರ್ ಗಳ ಪೈಕಿ ಸಿಎಂ, ಡಿ.ಕೆ.ಶಿವಕುಮಾರ್ ಬಿಟ್ಟರೆ ಅತಿ ಹೆಚ್ಚು ಬೇಡಿಕೆ ಇರುವುದು ಅಂಬರೀಶ್‍ಗೆ. ಅದರಲ್ಲೂ ವಿಶೇಷವಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಕೆಲವು ಅಭ್ಯರ್ಥಿಗಳು ಅಂಬರೀಶ್‍ರನ್ನು ಕರೆತಂದು ಪ್ರಚಾರ ಮಾಡಿಸಿ ಎಂದು ಕೆಪಿಸಿಸಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಇನ್ನೂ ಕೆಲವರು ತಾವೇ ಅಂಬರೀಶ್ ಸಂಪರ್ಕಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಸ್ಟಾರ್ ಕ್ಯಾಂಪೇನರ್ ಲಿಸ್ಟ್ ನಲ್ಲಿರುವ ಮಾಜಿ ಸಂಸದೆ ರಮ್ಯಾ ಸಹ ಚುನಾವಣಾ ಪ್ರಚಾರಕ್ಕೆ ಆಗಮಿಸಿಲ್ಲ.

  • ಕುಡಿಯಲು ನೀರಿಲ್ಲ ಅಂದಿದ್ದಕ್ಕೆ ಕೈ ತಿರುವಿ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಎಂಎಲ್‍ಸಿ!

    ಕುಡಿಯಲು ನೀರಿಲ್ಲ ಅಂದಿದ್ದಕ್ಕೆ ಕೈ ತಿರುವಿ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಎಂಎಲ್‍ಸಿ!

    ರಾಯಚೂರು: ಮತಯಾಚನೆ ವೇಳೆ ಯುವರೈತನೋರ್ವ ಬೆಳೆಗೆ ಹಾಗೂ ಕುಡಿಯಲು ನೀರು ಕೇಳಿದಕ್ಕೆ ಎಮ್ ಎಲ್ ಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರು ಹಲ್ಲೆಗೆ ಮುಂದಾದ ಘಟನೆ ರಾಯಚೂರಿನ ಅತ್ತನೂರು ಗ್ರಾಮದಲ್ಲಿ ನಡೆದಿದೆ.

    ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಹಂಪಯ್ಯ ನಾಯಕ್ ರ ಬೆಂಬಲಿಗರು ಹಾಗೂ ಎಂ.ಎಲ್.ಸಿ, ಕೆಪಿಸಿಸಿ ಉಪಾಧ್ಯಕ್ಷ ಎನ್ ಎಸ್ ಬೋಸರಾಜು ದರ್ಪ ಮೆರೆದಿದ್ದಾರೆ.

    ಕಾಂಗ್ರೆಸ್ ಪರ ಮತಯಾಚನೆಗೆ ಅತ್ತನೂರು ಗ್ರಾಮಕ್ಕೆ ತೆರಳಿದ್ದ ನಾಯಕರಿಗೆ ಭತ್ತ ಬೆಳೆಗೆ ಹಾಗೂ ಕುಡಿಯಲು ನೀರಿಲ್ಲ. ಈಗ ಮತ ಯಾಚನೆಗೆ ಬಂದಿದ್ದೀರಲ್ಲ ಅಂತ ರೈತ ಮಲ್ಲಪ್ಪ ಮಡಿವಾಳ ಖಾರವಾಗಿ ಪ್ರಶ್ನಿಸಿದ್ದಕ್ಕೆ ಕೊಪಗೊಂಡ ಎಂಎಲ್ ಸಿ ಬೋಸರಾಜ, ಸ್ವತಃ ರೈತನ ಕೈತಿರುವಿ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ಅವರ ಬೆಂಬಲಿಗರು ರೈತನಿಗೆ ಮನಸೋ ಇಚ್ಛೆ ಬೈದು ಕಳಿಸಿದ್ದಾರೆ.

    ನೀರು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ರೈತ ಮಲ್ಲಪ್ಪ ಇದೀಗ ಆರೋಪಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪ್ರಚಾರ ಮೊಟಕುಗೊಳಿಸಿ ಶಾಸಕ ಹಂಪಯ್ಯ ನಾಯಕ್ ಹಾಗೂ ಎನ್ ಎಸ್ ಬೋಸರಾಜ್ ಗ್ರಾಮದಿಂದ ಹೊರಟು ಹೋಗಿದ್ದಾರೆ.

    ಇತ್ತೀಚೆಗಷ್ಟೇ ಮಾನ್ವಿಯ ತಡಕಲ್ ಗ್ರಾಮದಲ್ಲಿ ಮತಯಾಚನೆ ವೇಳೆ ಶಾಸಕ ಹಂಪಯ್ಯ ನಾಯಕ್ ಗೆ ಜನ ಬೆವರಿಳಿಸಿದ್ದರು. ಎರಡು ಬಾರಿ ಶಾಸಕರಾದ್ರೂ ಏನೂ ಅಭಿವೃದ್ಧಿ ಮಾಡಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದರು.