Tag: election campaign

  • ಲೈಫ್ ಥ್ರೆಟ್ ಇರೋದ್ರಿಂದ ಪ್ರತೀ ದಿನ ಗನ್ ಇಟ್ಕೊಂಡೇ ಹೊರಗೆ ಬರ್ತೀನಿ: ರಿಯಾಜ್ ಅಹಮದ್

    ಲೈಫ್ ಥ್ರೆಟ್ ಇರೋದ್ರಿಂದ ಪ್ರತೀ ದಿನ ಗನ್ ಇಟ್ಕೊಂಡೇ ಹೊರಗೆ ಬರ್ತೀನಿ: ರಿಯಾಜ್ ಅಹಮದ್

    ಬೆಂಗಳೂರು: ಗನ್ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಹೂವಿನ ಹಾರ (Garlands) ಹಾಕಿರುವ ರಿಯಾಜ್ ಅಹಮದ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ರಿಯಾಜ್ ತಾವು ಗನ್ ಇಟ್ಟುಕೊಂಡಿರಲು ಕಾರಣವನ್ನು ತಿಳಿಸಿದ್ದಾರೆ.

    ಸಿದ್ದಾಪುರ ಪೊಲೀಸರ ವಿಚಾರಣೆ ವೇಳೆ ರಿಯಾಜ್, ನಂಗೆ ಲೈಫ್ ಥ್ರೆಟ್ ಇದೆ. ಹೀಗಾಗಿ ಪ್ರತೀ ದಿನ ಗನ್ ಇಟ್ಟುಕೊಂಡೇ ಹೊರಗೆ ಬರುತ್ತೇನೆ. ಹೊರತು ಸಿಎಂ ಮುಂದೆ ಗನ್ ಪ್ರದರ್ಶನ ಮಾಡಬೇಕು ಅನ್ನೊ ಉದ್ದೇಶ ನನಗಿರಲಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

    ನಮ್ಮ ದೇವರಾಜ್ ಸಾಹೇಬ್ರು ಮೇಲೆ ಬಾ ಅಂದ್ರು. ಹೀಗಾಗಿ ವೆಹಿಕಲ್ ಮೇಲೆ ಹೋಗಿ ಸಿಎಂ ಸಾಹೇಬ್ರಿಗೆ ಹಾರ ಹಾಕಿದೆ. ಅವರು ಕರೆಯದಿದ್ದರೆ ನಾನು ಸಿಎಂ ಬಳಿ ಹೋಗ್ತಿರಲಿಲ್ಲ. ನನ್ನ ಪಾಡಿಗೆ ನಾನು ಸಿಎಂ ಪ್ರಚಾರದ ವೆಹಿಕಲ್ ಬಂದಾಗ ಸೈಡಲ್ಲಿ ನಿಂತುಕೊಂಡು ನೋಡುತ್ತಿದ್ದೆ. ವೆಹಿಕಲ್ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ನಾನು ಗನ್ ಶೋ ಮಾಡಿಲ್ಲ ಎಂದು ರಿಯಾಜ್ ಪೊಲೀಸರ ಮುಂದೆ ಹೇಳಿದ್ದು, ಇದೀಗ ರಿಯಾಜ್ ಹೇಳಿಕೆಯನ್ನು ಸಿದ್ದಾಪುರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:  ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

    ಏನಿದು ಪ್ರಕರಣ?: ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿ ಅಲ್ಲಿಂದ ತೆರಳಿದ್ದಾರೆ. ರಿಯಾಜ್ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಆದರೆ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಸುದ್ದಿಯಾಯಿತು.

    ರಿಯಾಜ್ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ತನ್ನ ಮೇಲೆ ಕೊಲೆ ಯತ್ನವಾದ ಬಳಿಕ ಗನ್ ಪರವಾನಿಗೆ ಪಡೆದುಕೊಂಡಿರುವುದಾಗಿ ತಿಳಿದುಬಂದಿತ್ತು.

  • ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು

    ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು

    ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವ ನಟಿ ಖುಷ್ಬು ಸುಂದರ್ (Khusbhu Sundar) ಅವರು ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

    ಈ ಸಂಬಂಧ ಖುಷ್ಬು ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P Nadda) ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯದ ಮೇಲೆ ಗಮನಹರಿಸಬೇಕು. ಹೀಗಾಗಿ ನಾನು ಇಂದು ಅಂತಹ ಸಂದಿಗ್ಧದಲ್ಲಿದ್ದೇ ನೆ ಎಂದಿದ್ದಾರೆ.

    2019 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಅಪಘಾತದಿಂದ ಮೂಳೆ ಮುರಿದಿದೆ. ಕಳೆದ 5 ವರ್ಷಗಳಿಂದ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಆದರೂ ಸಮಸ್ಯೆ ನನ್ನನ್ನು ಕಾಡುತ್ತಿದೆ. ಹೀಗಾಗಿ ವೈದ್ಯರು ಚುನಾವಣಾ ಪ್ರಚಾರದಲ್ಲಿ (Election Campaign) ಭಾಗಿಯಾಗದಂತೆ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ನಟಿ ತಿಳಿಸಿದ್ದಾರೆ.

    ಪ್ರಚಾರದ ಸಂದರ್ಭದಲ್ಲಿ ಹೆಚ್ಚು ಪ್ರಯಾಣ, ಕುಳಿತುಕೊಳ್ಳುವುದು ಅತ್ಯಗತ್ಯ. ಹೀಗಾಗಿ ಮತ್ತೆ ನನಗೆ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಅಲ್ಪ ವಿರಾಮ ಘೋಷಿಸಿದ್ದೇನೆ ಎಂದು ಖುಷ್ಬು ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

  • ಜನರ ಸಮಸ್ಯೆ ಏನೇ ಇದ್ರೂ ಸಹಾಯಕ್ಕೆ ಬರೋದು ನಾವೇ, ದೆಹಲಿಯಿಂದ ಯಾರೂ ಬರಲ್ಲ: ಡಿಕೆಶಿ

    ಜನರ ಸಮಸ್ಯೆ ಏನೇ ಇದ್ರೂ ಸಹಾಯಕ್ಕೆ ಬರೋದು ನಾವೇ, ದೆಹಲಿಯಿಂದ ಯಾರೂ ಬರಲ್ಲ: ಡಿಕೆಶಿ

    ಬೆಂಗಳೂರು: ಕುಡಿಯುವ ನೀರು ಇರಬಹುದು, ಇವರ ಸಮಸ್ಯೆ ಕಷ್ಟ ಏನೇ ಇದ್ದರೂ ಸಹಾಯಕ್ಕೆ ಬರುವುದು ನಾವೇ ಹೊರತು ದೆಹಲಿಯಿಂದ ಯಾರೂ ಬರಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ (DK Suresh) ಪರವಾಗಿ ಡಿಕೆಶಿ ಇಂದು ಮತ ಬೇಟೆಗೆ ಇಳಿದರು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಕೆಶಿ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಸಂಡೆ ಮತದಾರರ ಭೇಟಿಗೆ ಅಂತ ಬಂದಿದ್ದೇನೆ. ಸಹಾಯ ಕೇಳಿದ್ದೇನೆ. ನಿಮ್ಮ ಸಮಸ್ಯೆ ಕಷ್ಟ ಏನೇ ಇದ್ದರು ಸಹಾಯಕ್ಕೆ ಬರುವುದು ನಾವೇ. ದೆಹಲಿಯಿಂದ ಯಾರೂ ಬರಲ್ಲ ಎಂದರು.

    ಇವತ್ತು ಪಾಪ ಕುಮಾರಸ್ವಾಮಿ ನಾನು ಮಹದಾಯಿ ಮಾಡೇ ಮಾಡ್ತೀನಿ ಅಂತಿದ್ದಾರೆ. ಅಧಿಕಾರ ಅವರ ಕೈಯಲ್ಲಿ ಇತ್ತಲ್ಲ, ಅಧಿಕಾರ ಇದ್ದಾಗ ಏನು ಮಾಡೋಕೆ ಆಗಲಿಲ್ಲ. ನಾನು ಮೇಕೆದಾಟು ಪಾದಯಾತ್ರೆ ಮಾಡಿದಾಗ ಬಿರಿಯಾನಿ ಕೊಟ್ಕೊಂಡು ಹೋಗ್ತಿದ್ದಾರೆ ಅಂತ ನಗುತ್ತಿದ್ದರು. ಅವರ ಸ್ಟೇಟ್ ಮೆಂಟ್ ಎಲ್ಲಾ ತೆಗೆಯಿರಿ ಕಬಾಬ್ ತಿನ್ಕೊಂಡು ಬಂದ್ವಾ…? ಎಷ್ಟು ನಡೆದಿದ್ದೇನೆ ಎಷ್ಟು ಹೋರಾಟ ಮಾಡಿದ್ದೇನೆ ಯಾರಿಗೋಸ್ಕರ ಮಾಡಿದ್ದೇನೆ..? ರಾಜ್ಯದ ಜನತೆಗಾಗಿ ಎಂದು ಹೇಳಿದರು.

    ರಾಜಕಾರಣದಲ್ಲೂ ಅದೊಂದು ಸಿದ್ಧಾಂತ ನಮ್ಮ ಹೋರಾಟವನ್ನ ಅವರ ಕೈಲಿ ಸಹಿಸೋಕೆ ಆಗ್ತಿಲ್ಲ. ಇರಲಿ ಅವರು ಏನಾದರು ಮಾಡಿಕೊಂಡು ಹೋಗ್ತಾ ಇರಲಿ. ಜನರ ಬದುಕಿಗೆ ನಮ್ಮ ಹೋರಾಟ ಬೆಂಗಳೂರು ಕುಡಿಯುವ ನೀರಿಗೆ (Drinking Water) ವಿಚಾರಕ್ಕೆ ಹೋರಾಟ. ನೀರಿನ ಇಲಾಖೆ ತೆಗೆದುಕೊಂಡಿರೋದೆ ಈ ಸಮಸ್ಯೆ ಬಗೆಹರಿಸೋಕೆ. ಜನರಿಗೆ ನಮ್ಮ ಮೇಲೆ ನಂಬಿಕೆ, ವಿಶ್ವಾಸ ಇದೆ. ಏನು ಮಾತನಾಡುತ್ತೇನೆ, ಅದರಂತೆ ನಡೆದುಕೊಳ್ಳುತ್ತೇನೆ ಎಂಬ ವಿಶ್ವಾಸ ಇದೆ. ಆ ಕೆಲಸ ನಾನು ಮಾಡುತ್ತೇನೆ ಮತದಾರರಿಗೂ ಮನವೊಲಿಕೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಏ.14 ರಂದು ರಾಜ್ಯಕ್ಕೆ ನಮೋ- ಚಿಕ್ಕಬಳ್ಳಾಪುರ, ಬೆಂಗ್ಳೂರಿನಲ್ಲಿ ಬೃಹತ್ ರೋಡ್ ಶೋ

    ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿ: ಚುನಾವಣಾ ಆಯೋಗದ ಕಾರಣ ಬರ ಬಿಡುಗಡೆ ಆಗಿಲ್ಲ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬರಕ್ಕೂ ಚುನಾವಣಾ ಆಯೋಗಕ್ಕೂ ಏನು ಸಂಬಂಧ?, ಅವರೇ ಸಚಿವರು, ನಾವು ಕೊಟ್ಟು ಎಷ್ಟು ದಿನ ಆಯಿತು..?, ಐಮ್ ವೆರಿ ಹ್ಯಾಪಿ, ನಿರ್ಮಲಾ ಸೀತಾರಾಮನ್ ವಿಳಂಬ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಬಿಡುಗಡೆ ಮಾಡಲು ಆಗಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರಿಗೆ ಅರ್ಥವಾಗಿದೆ, ಕರ್ನಾಟಕ ರಾಜ್ಯದ ಜನತೆಗೆ ಇದು ಅಕ್ಷಮ್ಯ ಅಪರಾಧ. ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗಿದೆ. ನಾವು ಚರ್ಚೆಗೆ ಸವಾಲು ಹಾಕಿದಾಗ ಹೇಳುತ್ತಿದ್ದಾರೆ. ಡಿಕೆ ಸುರೇಶ್ ಅವರು ನಮ್ಮ ಹಕ್ಕು, ನಮ್ಮ ತೆರಿಗೆ ಎಂದು ಹೋರಾಟ ಮಾಡಿದ್ದರು. ಅದಕ್ಕೆ ಇವರು ಒಪ್ಪಿಕೊಂಡಿದ್ದಾರೆ. ಒಪ್ಪಿಕೊಂಡಿದಕ್ಕೆ ನಾನು ಧನ್ಯವಾದಗಳು ತಿಳಿಸುತ್ತೇನೆ ಎಂದರು.

  • ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ- ಕೈ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ದಾವಣಗೆರೆ: ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮದೇ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವಿಭಿನ್ನವಾಗಿ ಚುನಾವಣಾ ಪ್ರಚಾರವನ್ನು ಮಾಡಿ ಗಮನಸೆಳೆದಿದ್ದಾರೆ.

    ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ (Congress Candidate Prabha Mallikarjun) ಅವರು ವಿಶೇಷವಾಗಿ ಚುನಾವಣಾ ಪ್ರಚಾರ ಮಾಡಿ ಗಮನಸೆಳೆದವರಾಗಿದ್ದಾರೆ. ಇವರು ಇಂದು ನಗರ ಸಾರಿಗೆ ಬಸ್ ನಲ್ಲಿ ಹೋಗಿ ಪ್ರಚಾರ ಮಾಡಿದ್ದಾರೆ. ಸದ್ಯ ಈ ರೀತಿ ವಿನೂತನವಾಗಿ ಚುನಾವಣಾ ಪ್ರಚಾರ ಮಾಡಿರುವ ಪ್ರಭಾ ಅವರ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ನಗರ ಸಾರಿಗೆ ಬಸ್ಸಿನಲ್ಲಿ ಆಧಾರ್ ಕಾರ್ಡ್ (Adhar Card) ತೋರಿಸಿ ಜನರ ಜೊತೆ ಪ್ರಯಾಣ ಮಾಡಿ, ಶಕ್ತಿ ಯೋಜನೆ ಬಗ್ಗೆ ಕೂಡ ಪ್ರಚಾರ ನಡೆಸಿರುವ ಪ್ರಭಾ ಅವರು ಕೆಲಸ ಮಾಡುವವರಿಗೆ ಮಾತ್ರ ಮತ ಹಾಕಿ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಹೇಳಿದ್ದಾರೆ.

    ಚುನಾವಣಾ ಪ್ರಚಾರದ ವೇಳೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಇದನ್ನೂ ಓದಿ: ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ

  • ಸುದೀಪ್ ಕೇವಲ ಮೂರು ತಾಸಿನ ನಾಯಕ – ಸತೀಶ್ ಜಾರಕಿಹೊಳಿ

    ಸುದೀಪ್ ಕೇವಲ ಮೂರು ತಾಸಿನ ನಾಯಕ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಸುದೀಪ್ (Sudeep) ಕೇವಲ ಮೂರು ತಾಸಿನ ನಾಯಕ, ಆದ್ರೆ ನಿಜವಾಗಿ ನಿಮ್ಮ ಸೇವೆ ಮಾಡೋರು ನಾವು ಎಂದು ಕೆಪಿಸಿಸಿ ಕಾರ‍್ಯದರ್ಶಿ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಕೊನೆಯದಿನದ ಪ್ರಚಾರ ನಡೆಸಿದ ಅವರು ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಮೊದಲು ಸುದೀಪ್ ನೋಡಬೇಕಂದ್ರೆ ದುಡ್ಡುಕೊಟ್ಟು ಹೋಗಬೇಕಿತ್ತು. ಆದ್ರೆ ಇವತ್ತು ಅವರೇ ಜನರನ್ನ ನೋಡಲು ಬರುತ್ತಿದ್ದಾರೆ ಎಂದಿದ್ದಾರೆ.

    ಸುದೀಪ್ ಕೇವಲ ಮೂರು ತಾಸಿನ ನಾಯಕ ಅಷ್ಟೇ. ಆದ್ರೆ ನಿಜವಾಗಿ ನಿಮ್ಮ ಸೇವೆ ಮಾಡುವವರು ನಾವು. ಯಾರೋ ನಟ ಬಂದ, ಕಣ್ಣೀರು ಹಾಕಿದ ಮಾತ್ರಕ್ಕೆ ಎಲ್ಲವೂ ಪರಿಹಾರವಾಗಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

    ಕೊನೆಯ ದಿನ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ರೋಡ್ ಶೋ ನಡೆಸಿದರು. ಇನ್ನೊಂದು ಕಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಪ್ರಚಾರ ನಡೆಸಿದರು.

  • ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

    ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

    ಬೆಂಗಳೂರು: ಈಗಾಗಲೇ ಮನೆಯೊಡತಿಗೆ 2 ಸಾವಿರ, 200 ಯೂನಿಟ್ ವಿದ್ಯುತ್ ಉಚಿತ, 10 ಕೆಜಿ ಅಕ್ಕಿ ಉಚಿತ, ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ (Congress) ಪಕ್ಷದ ಪರವಾಗಿ ಕೊನೆಯ ದಿನದ ಚುನಾವಣಾ ಪ್ರಚಾರದ ವೇಳೆ ಡಿಕೆ ಶಿವಕುಮಾರ್ ಮತ್ತೊಂದು ಗ್ಯಾರಂಟಿಯನ್ನ ಘೋಷಿಸಿದೆ.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರು, ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕೆರೆಗಳನ್ನ ತುಂಬಿಸುತ್ತೇವೆ. ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನ ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಂತಹ ನಗರಗಳಿಗೆ ಬರೋದು ತಪ್ಪಿಸುತ್ತೇವೆ ಎಂದು ಹೇಳಿದ್ದಾರೆ.

    ಬ್ಲ್ಯಾಕ್‌ಮೇಲ್‌ ಗೆ ಹೆದರಲ್ಲ: `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕೇಂದ್ರದ ಯೋಜನೆಗಳಿಗೆ ಬ್ರೇಕ್’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಮಿಸ್ಟರ್ ನಡ್ಡಾಜಿ, ಡೋಂಟ್ ತ್ರೆಟನ್ ಅಸ್, ಏನ್ ಹೆದರಿಸ್ತೀರಾ? ಕೇಂದ್ರದ ಯೋಜನೆಗಳನ್ನು ನಿಲ್ಲಿಸ್ತೇವೆ ಅಂತ ಹೆದರಿಸ್ತೀರಾ? ಇಂತಹ ಬ್ಲ್ಯಾಕ್‌ಮೇಲ್‌ಗೆ ಹೆದರಲ್ಲ. ನಿಮ್ಮ ಶಾಸಕರು ಸಂಸದರು ಮಕ್ಕಳ ತರಹ ಸುಮ್ಮನಿರಬಹುದು. ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರೋದಿಲ್ಲ. ನಿಮ್ಮ ಪ್ರಧಾನಿಯನ್ನ ಬೀದಿ ಬೀದಿ ಅಲೆಯೋ ತರಹ ಮಾಡಿರೋದು ನೀವು ಎಂದು ತಿರುಗೇಟು ನೀಡಿದ್ದಾರೆ.

    ನಾವು 141 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. 15ನೇ ತಾರೀಕು ಕಾಂಗ್ರೆಸ್ ಸರ್ಕಾರ ತಂದು ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು?

    ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು?

    -ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ..?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಕರ್ನಾಟಕ ವಿಧಾನಸಭಾ ಚುಣಾವಣೆಯ (Karnataka Election 2023) ಕೊನೆಯ ದಿನದ ಪ್ರಚಾರ ಮುಗಿಸಿದ್ದಾರೆ. ಇದೀಗ ಪ್ರಧಾನಿ ಬಂದು ಹೋದ ಮೇಲೆ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅನ್ನೋ ವಿಶ್ವಾಸ ಕಮಲ ಪಾಳದಲ್ಲಿ ಮೂಡಿದೆ.

    ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು? ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ? ಬೆಂಗಳೂರಿನ ಮೇಲೆ ಬಿಜೆಪಿ ಮತ್ತೆ ಹಿಡಿತ ಸಾಧಿಸಲು ರಹದಾರಿಯಾಗುತ್ತಾ ನಮೋ ರೋಡ್ ಶೋ..? ಅನ್ನೋ ಬಗ್ಗೆ ಬಿಜೆಪಿ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಬೆಂಗಳೂರಿನಲ್ಲಿ ಗುಜರಾತ್‌ನ ಅಹಮದಾಬಾದ್ ಮಾದರಿಯ ರೋಡ್ ಶೋ ನಡೆಸಿದ್ದ ಮೋದಿ ಸಕ್ಸಸ್ ತಂದುಕೊಟ್ಟಿದ್ದರು. ಬೆಂಗಳೂರಿನಲ್ಲೂ ಅದೇ ಪ್ರಮಾಣದ ಸಕ್ಸಸ್ ತಂದುಕೊಡುವ ನಿರೀಕ್ಷೆಯನ್ನ ಹುಟ್ಟುಹಾಕಿದ್ದಾರೆ. ಗುಜರಾತ್ ರೋಡ್ ಶೋ ಹಿಸ್ಟರಿ ಇಲ್ಲೂ ಮರುಕಳಿಸುವ ಭರವಸೆಯಲ್ಲಿ ಬಿಜೆಪಿ ಇದೆ.

    ಪ್ರಧಾನಿ ರೋಡ್ ಶೋ ನಡೆಸಿದ ಮೇಲೆ ಬಿಜೆಪಿ ಪರ ಜನರ ಅಲೆ ಜೋರಾಗಿದೆ. ಇದರಿಂದ 18-20 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. 2008ರಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಇದನ್ನೂ ಓದಿ: ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ

    ಈ ಬಾರಿ ಚುನಾವಣೆಯಲ್ಲಿ ಹಳೆ ಮೈಸೂರು ಹಾಗೂ ಬೆಂಗಳೂರು ನಗರವನ್ನ ಹೆಚ್ಚಾಗಿ ಟಾರ್ಗೆಟ್ ಮಾಡಿರುವ ಬಿಜೆಪಿ ಬಹುಮತದ ಡಬಲ್ ಎಂಜಿನ್ ಸರ್ಕಾರ ಸ್ಥಾಪಿಸುವ ನಿರೀಕ್ಷೆ ಹೊಂದಿದೆ. ಸೋಮವಾರ (ಮೇ 8) ಬಹಿರಂಗಪ್ರಚಾರಕ್ಕೆ ತೆರೆ ಬೀಳಲಿದ್ದು, ಯಾವ ಪಕ್ಷದ ಹಣೆಬರಹ ಹೇಗಿದೆ ಅನ್ನೋದನ್ನ ಕಾದುನೋಡಬೇಕಿದೆ.

  • ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಬೆಂಗಳೂರು: ಕೊನೆಯದಿನದ ಚುನಾವಣಾ ಪ್ರಚಾರ (Election Campaign) ನಡೆಸಿದ ಪ್ರಧಾನಿ ಮೋದಿ ಅವರ ರೋಡ್ ಶೋ (Modi RoadShow) ಅದ್ಧೂರಿಯಾಗಿ ನೆರವೇರಿತು.

    ಬಹಿರಂಗ ಪ್ರಚಾರಕ್ಕೆ ತೆರ ಬೀಳಲು ಒಂದು ದಿನ ಬಾಕಿ ಇರುವಾಗ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ (Bengaluru) ಭರ್ಜರಿ ರೋಡ್ ನಡೆಸಿ ಮತಬೇಟೆ ಮಾಡಿದರು. ಭಾನುವಾರ ಬೆಳಗ್ಗೆ ತುಂತುರು ಮಳೆ ನಡುವೆಯೂ ಅಭಿಮಾನಿಗಳಲ್ಲಿ ಉತ್ಸಾಹ, ಹುರುಪಿಗೇನೂ ಕಮ್ಮಿ ಇರಲಿಲ್ಲ. ಅತ್ಯಂತ ಸುಗಮವಾಗಿ ಮೋದಿ ರೋಡ್ ಶೋ ನಡೀತು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಸರ್ಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೋದಿ ನಂತ್ರ ರೋಡ್‌ಶೋ ಶುರು ಮಾಡಿದರು.

    6.5 ಕಿಲೊಮೀಟರ್ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಮೋದಿ ಪರ ಘೋಷಣೆ ಮೊಳಗಿಸಿದ್ರು. ದಾರಿಯುದ್ದಕ್ಕೂ ಪುಷ್ಟವೃಷ್ಟಿಗೈದರು. ಇದನ್ನೂ ಓದಿ: ಕರ್ನಾಟಕವನ್ನ ಭಾರತದಿಂದ ಬೇರೆ ಮಾಡುವ ಹುನ್ನಾರ ನಡೆಸಿದೆ ಕಾಂಗ್ರೆಸ್ – ಮೋದಿ ವಾಗ್ದಾಳಿ

    ಪ್ರಧಾನಿ ಮೋದಿ ಅವರು ನಡೆಸಿದ ಕೊನೆಯದಿನದ ರೋಡ್‌ಶೋನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ರೋಡ್ ಶೋ ಉದ್ದಕ್ಕೂ ಕೇಸರಿ ಕಲರವ ತುಂಬಿ ತುಳುಕಿತ್ತು. ಇದೇ ವೇಳೆ ಮುಸ್ಲಿಂ ಮಹಿಳೆಯೊಬ್ಬರು (Muslim Women) `ಜೈ ಬಜರಂಗಿ.. ಜೈ ಬಿಜೆಪಿ’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ಪ್ರಧಾನಿ ಮೋದಿ ನೋಡಲು ಬಿಸಿಲಿನಲ್ಲೂ ಕಾದು ನಿಂತಿದ್ದ ದೃಶ್ಯ ಗಮನ ಸೆಳೆಯಿತು. `ಜೈ ಬಜರಂಗಿ’ ಘೋಷವಾಕ್ಯದ ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವೂ ಇತ್ತು. ಇದನ್ನೂ ಓದಿ: ಸುಡಾನ್‌ನಿಂದ ಬಂದ ಹಕ್ಕಿಪಿಕ್ಕಿ ಜನರ ಜೊತೆ ಮೋದಿ ಸಂವಾದ

    ಅಲ್ಲದೇ, 500 ಪುರೋಹಿತರಿಂದ ಹನುಮಾನ್ ಚಾಲೀಸಾ ಪಠಣ ನಡೆಸಲಾಯಿತು. ಪುಟ್ಟ ಬಾಲಕನೊಬ್ಬ ಐ ಲವ್‌ಯೂ ಮೋದಿಜಿ ಪೋಸ್ಟರ್ ಹಿಡಿದಿದ್ದ ದೃಶ್ಯವೂ ರೋಡ್‌ಶೋ ವೇಳೆ ಗಮನ ಸೆಳೆಯಿತು.

  • ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ

    ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ

    ಬೆಂಗಳೂರು: ಚುನಾವಣಾ ಪ್ರಚಾರಕ್ಕೆ (Election Campaign) ಇನ್ನೊಂದೇ ದಿನ ಬಾಕಿಯಿದ್ದು, ಪ್ರಚಾರದ ಭರಾಟೆ ಜೋರಾಗಿ ನಡೆದಿದೆ.

    ಇದರಿಂದಾಗಿ ಕೆಪಿಸಿಸಿ (KPCC) ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ ಶಿವಕುಮಾರ್‌ (DK Shivakumar) ಪರ ಪತ್ನಿ ಉಷಾ ಶಿವಕುಮಾರ್‌ (Usha Shivakumar) ಹಾಗೂ ಪುತ್ರ ಆಕಾಶ್‌ ಕೆಂಪೇಗೌಡ ಕನಕಪುರ ಕ್ಷೇತ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಭಾರತದಿಂದ ಬೇರೆ ಮಾಡುವ ಹುನ್ನಾರ ನಡೆಸಿದೆ ಕಾಂಗ್ರೆಸ್ – ಮೋದಿ ವಾಗ್ದಾಳಿ

    ಕನಕಪುರದ ಕೋಡಿಹಳ್ಳಿ ಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರ ಆಕಾಶ್ ಕೆಂಪೇಗೌಡ ಅಪ್ಪನ ಪರ ಇದೇ ಮೊದಲ ಬಾರಿಗೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪ್ರಚಾರ ಕಾರ್ಯದಲ್ಲಿ ಕೈ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಥ್‌ ನೀಡಿದ್ದಾರೆ. ಇದನ್ನೂ ಓದಿ: ಶ್ರೀಕಂಠೇಶ್ವರನ ದರ್ಶನ ಪಡೆದು ಚುನಾವಣಾ ಪ್ರಚಾರ ಮುಗಿಸಿದ ಮೋದಿ

    ಉಷಾ ಶಿವಕುಮಾರ್‌ ಕಳೆದ 15 ದಿನಗಳಿಂದಲೂ ಪತಿ ಡಿಕೆಶಿ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿ ಡಿಕೆಶಿ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ನಿಮ್ಮ ಕ್ಷೇತ್ರದ ಮಗ ಸಿಎಂ ಆಗಲು ನೀವು ಶಕ್ತಿ ತುಂಬಬೇಕು ಎಂದು ಮನೆಮನೆಗೆ ತಿರುಗಿ ಪತಿ ಡಿ.ಕೆ.ಶಿವಕುಮಾರ್‌ಗೆ ಮತ ನೀಡುವಂತೆ ಉಷಾ ಶಿವಕುಮಾರ್ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸುತ್ತಿರುವ ಮತದಾರರು ಆರತಿ ಸಹಿತ ಸ್ವಾಗತಕೋರಿದ್ದಾರೆ.

  • BJP 3 ಸಿಲಿಂಡರ್ ಕೊಡ್ತೀನಿ ಅಂದಿದೆ, ನಾನು 5 ಸಿಲಿಂಡರ್ ಕೊಡ್ತೀನಿ – ಹೆಚ್‌ಡಿಕೆ

    BJP 3 ಸಿಲಿಂಡರ್ ಕೊಡ್ತೀನಿ ಅಂದಿದೆ, ನಾನು 5 ಸಿಲಿಂಡರ್ ಕೊಡ್ತೀನಿ – ಹೆಚ್‌ಡಿಕೆ

    ಮಂಡ್ಯ: ಬಿಜೆಪಿ (BJP) ಅಧಿಕಾರಕ್ಕೆ ಬಂದ್ರೆ 3 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿದೆ. ನಮ್ಮ ಸರ್ಕಾರ ಬಂದ್ರೆ 5 ಸಿಲಿಂಡರ್ ಕೊಡ್ತೀನಿ ಅಂತಾ ಹೇಳಿರುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಮಂಡ್ಯದ (Mandya) ಕೆ.ಆರ್.ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ (Election Campaign) ಸಭೆಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮೇಲೆ ಬಿಜೆಪಿಯವರು ಹೇಳಿದ್ದಾರೆ. ಕೊಡುವುದಿದ್ದರೇ ಸರ್ಕಾರ ಇದ್ದಾಗಲೇ ಕೊಡಬೇಕಿತ್ತು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಾನ್‌ ಬೆಳಗಾವಿಗೆ ಬರ್ತಿದೀನಿ – ಮೇ 6ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಶಿವಣ್ಣ ಪ್ರಚಾರ..!

    ದೇವೇಗೌಡರು ಆರೋಗ್ಯದ ಸಮಸ್ಯೆ ನಡುವೆ ನನ್ನ ಏಕಾಂಗಿ ಹೋರಾಟವನ್ನು ಅವರು ಗಮನಿಸಿದ್ದಾರೆ. ನನ್ನ ಮೇಲೆ ಬಿದ್ದಿರುವ ಒತ್ತಡವನ್ನು ಕಡಿಮೆ ಮಾಡಲು 3-4 ದಿನಗಳಿಂದ ತಾವೂ ಓಡಾಡುತ್ತಿದ್ದಾರೆ. ವೈದ್ಯರು ಅವರಿಗೆ ವಿಶ್ರಾಂತಿ ಬೇಕು ಅಂದಿದ್ದರಿAದ ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಆದ್ರೆ ಮೈಸೂರಿನ ಪಂಚರತ್ನ ಸಮಾರೋಪದಲ್ಲಿ ಭಾಗಿಯಾಗಿ ಜನರನ್ನು ನೋಡಿದ ಮೇಲೆ ಅವರ ಆರೋಗ್ಯ ಸುಧಾರಿಸಿದೆ. ದೇವೇಗೌಡರು ಈ ಬಾರಿ ಪ್ರಚಾರ ಮಾಡುತ್ತಾರೆ ಅಂದುಕೊಂಡಿರಲಿಲ್ಲ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ದೇವೇಗೌಡರು ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ: ರಮೇಶ್ ಕುಮಾರ್

    ಬಹುಮತ ಬಂದ್ರೆ ರೈತರ ಸಮಸ್ಯೆ ಬಗೆಹರಿಸುತ್ತೇನೆ:
    ಕಳೆದ ಮೂರು ದಿನಗಳಿಂದ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಾ ಇದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರೋದನ್ನು ಕಾಂಗ್ರೆಸ್, ಬಿಜೆಪಿ ತಪ್ಪಿಸಲು ಸಾಧ್ಯವಿಲ್ಲ. ಪಂಚರತ್ನ ಕಾರ್ಯಕ್ರಮವನ್ನು ಜನರು ಒಪ್ಪಿ ಜೆಡಿಎಸ್ ಕೈ ಹಿಡಿಯುತ್ತಾರೆ. ರೈತರು ಕೇಳ್ತಾರೆ ಇನ್ನೊಮ್ಮೆ ನಿನ್ನ ಸಿಎಂ ಮಾಡ್ತೀವಿ ಸಾಲ ಮನ್ನಾ ಮಾಡಿ ಎಂದು ಕೇಳ್ತಾರೆ. ರೈತರು ಸಾಲಗಾರರು ಆಗಬಾರದು ಎಂದು ಮುಂಗಾರಿನ ವೇಳೆ ಎಕ್ಕರೆ 10 ಸಾವಿರ ಕೊಡುವ ಯೋಜನೆ ಹಾಕಿಕೊಂಡಿದ್ದೇನೆ. ಸ್ಪಷ್ಟ ಬಹುಮತ ನೀಡಿದ್ರೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.