Tag: Election Bond

  • ಮುಡಾ ಸಣ್ಣ ಕೇಸ್, ಚುನಾವಣಾ ಬಾಂಡ್ ದೊಡ್ಡ ಹಗರಣ; ಪ್ರಧಾನಿಯಿಂದ ಎಲ್ಲಾ ಸಚಿವರು ಬರ್ತಾರೆ: ಶರಣಪ್ರಕಾಶ ಪಾಟೀಲ್

    ಮುಡಾ ಸಣ್ಣ ಕೇಸ್, ಚುನಾವಣಾ ಬಾಂಡ್ ದೊಡ್ಡ ಹಗರಣ; ಪ್ರಧಾನಿಯಿಂದ ಎಲ್ಲಾ ಸಚಿವರು ಬರ್ತಾರೆ: ಶರಣಪ್ರಕಾಶ ಪಾಟೀಲ್

    ಮಡಿಕೇರಿ: ಮುಡಾ ಒಂದು ಸಣ್ಣ ಕೇಸ್ ಅಷ್ಟೇ, ಚುನಾವಣಾ ಬಾಂಡ್ ದೊಡ್ಡ ಹಗರಣ ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ (Sharana Prakash Patil) ಹೇಳಿದರು.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಇಡಿ, ಐಟಿಗಳನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆಯಿಂದ ಬಾಂಡ್ ಸಂಗ್ರಹಿಸಲಾಗಿದೆ ಎಂದು ಎಫ್‌ಐಆರ್ ಆಗಿದೆ. ಅದರಲ್ಲಿ ದಾಖಲೆಗಳಿವೆ. ಐಟಿ ದಾಳಿ ಆಗುತ್ತದೆ. ಅದಾದ ಬಳಿಕ ಅವರು ಚುನಾವಣಾ ಬಾಂಡ್ ಕೊಡುತ್ತಾರೆ. ನಂತರ ಆ ಕೇಸು ಕ್ಲೋಸ್ ಆಗುತ್ತದೆ. ಒಂದಲ್ಲ ಇಂತಹ ಹಲವು ನಿದರ್ಶನಗಳು ಇವೆ ಎಂದು ತಿಳಿಸಿದರು.ಇದನ್ನೂ ಓದಿ: BBK 11: ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಪಕ್ಕಾ ಲಿಸ್ಟ್

    ಕೇಂದ್ರ ಸರ್ಕಾರ (Central Government) 8,000 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿದೆ. ಬೆದರಿಕೆಯೊಡ್ಡಿ ಹಣ ಸಂಗ್ರಹಿಸಿದೆ ಎಂದು ಎಫ್‌ಆರ್ ದಾಖಲಾಗಿದೆ. ಕಾಂಗ್ರೆಸ್ (Congress) ಕೂಡ ಚುನಾವಣಾ ಬಾಂಡ್ ಸ್ವೀಕರಿಸಿದೆ. ಆದರೆ ಕಾಂಗ್ರೆಸ್ ಯಾರಿಗೂ ಫೇವರ್ ಮಾಡಿಲ್ಲ. ಯಾರಿಗಾದರೂ ಫೇವರ್ ಮಾಡಿ ಬಾಂಡ್ ತೆಗೆದುಕೊಂಡಿದ್ದರೆ ಅಕ್ರಮ. ಅದು ನಮ್ಮ ಸರ್ಕಾರದಲ್ಲಿ ಇಲ್ಲ. ನಾವು ಯಾರಿಗೂ ಫೇವರ್ ಮಾಡಿಲ್ಲ. ಆದರೆ ಬಿಜೆಪಿ (BJP) ಬೆದರಿಸಿ ಬ್ಲಾಕ್ ಮೇಲ್ ಮಾಡಿ ಬಾಂಡ್ ತೆಗೆದುಕೊಂಡಿದೆ. ಇದೊಂದು ದೊಡ್ಡ ಹಗರಣ. ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.

    ನಿರ್ಮಲಾ ಸೀತರಾಮನ್ (Niramala Sitharaman), ಜೆಪಿ ನಡ್ಡಾ (JP Nadda) ಹಾಗೂ ವಿಜಯೇಂದ್ರ (Vijayendra) ಮೇಲೆ ಎಫ್‌ಐಆರ್ ದಾಖಲಾಗಿರುವುದು ರಾಜಕೀಯ ಪ್ರೇರಿತ ಎಂಬ ವಿಚಾರವಾಗಿ ಮಾತನಾಡಿ, ಇದಕ್ಕೆ ಯಾರು ನಿರ್ದೇಶನ ನೀಡಲು ಸಾಧ್ಯ? ಎಫ್‌ಐಆರ್ (FIR) ದಾಖಲಿಸಲು ಹೇಳಿರುವುದು ಕೋರ್ಟ್. ಕೋರ್ಟಿನ ನಿರ್ದೇಶನದ ಮೇಲೆ ಎಫ್‌ಐಆರ್ ಆಗಿ ತನಿಖೆ ಆಗಬೇಕಾಗಿದೆ ಎಂದರು.ಇದನ್ನೂ ಓದಿ: ಜಾಮೀನು ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ – ಮಕ್ಕಳನ್ನು ಬಿಡಿಸಿಕೊಳ್ಳಲು ಹಣವಿಲ್ಲದೇ ಪೋಷಕರ ಪರದಾಟ

  • Electoral Bonds | ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

    Electoral Bonds | ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

    ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bonds) ವಿಷಯದಲ್ಲಿ ಇರುವ ಅನೈತಿಕ ಕೊಡು–ಕೊಳ್ಳುವಿಕೆಯ (Quid Pro Quo) ಸಂಬಂಧವಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ (Supreme Court) ವಜಾಗೊಳಿಸಿದೆ.

    ಉಹೆಯ ಆಧಾರದ ಮೇಲೆ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಕಾನೂನಿನಡಿಯಲ್ಲಿ ಲಭ್ಯವಿರುವ ಆಧಾರದ ಮೇಲೆ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ದಿಷ್ಟ ಹಕ್ಕುಗಳನ್ನು ತನಿಖೆ ಮಾಡಲು ಅಧಿಕಾರಿಗಳು ನಿರಾಕರಿಸಿದಾಗ ಮಾತ್ರ ನಾವು ಮಧ್ಯಪ್ರವೇಶ ಮಾಡಬಹುದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: Wayanad Landslide | ಸರ್ಕಾರದ ಅನುಮತಿ ಇಲ್ಲದೇ ಅಭಿಪ್ರಾಯ ಹೇಳುವಂತಿಲ್ಲ: ವಿಜ್ಞಾನಿಗಳಿಗೆ ಕೇರಳ ಸರ್ಕಾರ ನಿರ್ಬಂಧ

    court order law

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಹಂತದಲ್ಲಿ ತನಿಖೆಗೆ ಆದೇಶ ನೀಡುವುದು ಅನುಚಿತವಲ್ಲ ಎಂದು ಹೇಳಿದೆ.

    ಶೆಲ್‌ ಕಂಪನಿಗಳು ಹಾಗೂ ನಷ್ಟ ಅನುಭವಿಸುತ್ತಿರುವ ಕಂಪನಿಗಳೂ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡಿದೆ. ಈ ಕಂಪನಿಗಳ ಆದಾಯದ ಮೂಲ ಏನು ಎನ್ನುವುದನ್ನು ಪತ್ತೆ ಮಾಡಬೇಕು ಜೊತೆಗೆ ಆ ಹಣವನ್ನು ರಾಜಕೀಯ ಪಕ್ಷಗಳಿಂದ ಮರಳಿ ವಸೂಲು ಮಾಡಲು ಕೋರ್ಟ್‌ ತನಿಖಾ ತಂಡಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

     

  • ರಾಜಕೀಯ ಪಕ್ಷಗಳಿಗೆ 1,368 ಕೋಟಿ ನೀಡಿದ ಲಾಟರಿ ಕಿಂಗ್‌ ಪಿನ್‌ ಮಾರ್ಟಿನ್‌ ಯಾರು?

    ರಾಜಕೀಯ ಪಕ್ಷಗಳಿಗೆ 1,368 ಕೋಟಿ ನೀಡಿದ ಲಾಟರಿ ಕಿಂಗ್‌ ಪಿನ್‌ ಮಾರ್ಟಿನ್‌ ಯಾರು?

    ನವದೆಹಲಿ: ಚುನಾವಣಾ ಆಯೋಗ (Election Commission) ಬಿಡುಗಡೆ ಮಾಡಿದ ಚುನಾವಣಾ ಬಾಂಡ್‌ (Electoral Bonds) ದಾನಿಗಳ ಪಟ್ಟಿಯಲ್ಲಿ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ (Future Gaming and Hotel Services) ಪ್ರೈವೇಟ್ ಲಿಮಿಟೆಡ್ ಕಂಪನಿ ಅತ್ಯಧಿಕ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.

    ಲಾಟರಿ ಕಿಂಗ್ ಎಂದ ಖ್ಯಾತಿ ಪಡೆದಿರುವ ಸ್ಯಾಂಟಿಯಾಗೊ ಮಾರ್ಟಿನ್ (Santiago Martin) ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಕಂಪನಿ ಏಪ್ರಿಲ್‌ 2019 ರಿಂದ ಜನವರಿ 2024 ರವರೆಗೆ ಬರೋಬ್ಬರಿ 1,368 ಕೋಟಿ ರೂ. ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.

    ಸ್ಯಾಂಟಿಯಾಗೊ ಮಾರ್ಟಿನ್ ಯಾರು?
    ಸ್ಯಾಂಟಿಯಾಗೊ ಮಾರ್ಟಿನ್ ಅವರ ಚಾರಿಟಬಲ್ ಟ್ರಸ್ಟ್ ವೆಬ್‌ಸೈಟ್ ಪ್ರಕಾರ ಮಾರ್ಟಿನ್‌ ಮೊದಲು ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1988 ರಲ್ಲಿ ಮ್ಯಾನ್ಮಾರ್‌ನಿಂದ ಭಾರತಕ್ಕೆ ಮರಳಿ ತಮಿಳುನಾಡಿನಲ್ಲಿ ಲಾಟರಿ ವ್ಯವಹಾರವನ್ನು ಸ್ಥಾಪಿಸಿದರು.

    ತನ್ನ 13ನೇ ವಯಸ್ಸಿನಲ್ಲಿ ಲಾಟರಿ (Lottery) ವ್ಯವಹಾರವನ್ನು ಆರಂಭಿಸಿದ ಮಾರ್ಟಿನ್‌ ನಂತರ ಕರ್ನಾಟಕ, ಕೇರಳ, ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ವಿಸ್ತರಿಸಿದರು.

    ಲಾಟರಿ ಅಲ್ಲದೇ ರಿಯಲ್‌ ಎಸ್ಟೇಟ್‌, ಜವಳಿ, ಆತಿಥ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಮಾರ್ಟಿನ್‌ ಹೂಡಿಕೆ ಮಾಡಿದ್ದಾರೆ. ಮಾರ್ಟಿನ್ ವಿರುದ್ಧ ಈಗಾಗಲೇ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. ಆದಾಯ ತೆರಿಗೆ ಇಲಾಖೆ 2019 ರಲ್ಲಿ ಭಾರತದಾದ್ಯಂತ ಮಾರ್ಟಿನ್‌ಗೆ ಸಂಬಂಧಿಸಿದ 70 ಕಡೆ ದಾಳಿ ನಡೆಸಿತ್ತು. ಇದನ್ನೂ ಓದಿ: ಗೋವಾದಲ್ಲಿ ‘ಟಾಕ್ಸಿಕ್’ ಶೂಟಿಂಗ್: ಯಶ್ ಜೊತೆ ಗೀತು ಫೋಟೋ ವೈರಲ್

    2008ರಲ್ಲಿ ಕೇರಳದ ಸಿಪಿಐ(ಎಂ) ಮುಖವಾಣಿಯಾದ ದೇಶಾಭಿಮಾನಿಗೆ 2 ಕೋಟಿ ರೂ. ದೇಣಿಗೆ ನೀಡಿದ್ದರು. ಮಾರ್ಟಿನ್ ಕೊಡುಗೆಯಿಂದ ಪಕ್ಷಕ್ಕೆ ಮುಜುಗರವಾಗಬಹುದು ಎಂದು ಪರಿಗಣಿಸಿ ಸಿಪಿಐ(ಎಂ) ಮರಳಿ ಆ ಹಣವನ್ನು ಮರಳಸಿತ್ತು ಎಂದು ವರದಿಯಾಗಿದೆ. ಮಾರ್ಟಿನ್‌ ಪತ್ನಿ ಲೀಮಾ ರೋಸ್ ಅವರು 2006 ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕನ್ಯಾಕುಮಾರಿ ಜಿಲ್ಲೆಯ ತಿರುವಟ್ಟಾರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

    2022 ರಲ್ಲಿ ಫ್ಯೂಚರ್ ಗೇಮಿಂಗ್ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ 409 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಈ ವರ್ಷದ ಮಾರ್ಚ್‌ನಲ್ಲಿ ತಮಿಳುನಾಡಿನ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಡಿ ಮಾರ್ಟಿನ್ ಅಳಿಯ ಆಧವ್ ಅರ್ಜುನ್ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ಮಾಡಿತ್ತು. ಇದನ್ನೂ ಓದಿ: ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ

    ಲಾಟರಿ ಟಿಕೆಟ್‌ಎಷ್ಟು ಮುದ್ರಣ ಮಾಡಲಾಗುತ್ತದೆ ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕು. ಆದರೆ ಮಾರ್ಟಿನ್‌ ಭಾರೀ ಸಂಖ್ಯೆಯಲ್ಲಿ ಲಾಟರಿ ಟಿಕೆಟ್‌ ಮುದ್ರಿಸಿ ಸರ್ಕಾರಕ್ಕೆ ಕಡಿಮೆ ಲೆಕ್ಕ ತೋರಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಭೂಕಬಳಿಕೆ ಆರೋಪ ಮತ್ತು ಗೂಂಡಾ ಕಾಯ್ದೆಯಡಿ ಮಾರ್ಟಿನ್‌ ಅವರನ್ನು ಹಿಂದೆ ಬಂಧಿಸಲಾಗಿತ್ತು.