Tag: Election 2024

  • Lok Sabha Election 2024: ಸ್ಯಾಂಡಲ್‌ವುಡ್ ಸ್ಟಾರ್ಸ್ ಎಲ್ಲಿ ವೋಟ್ ಹಾಕ್ತಾರೆ?

    Lok Sabha Election 2024: ಸ್ಯಾಂಡಲ್‌ವುಡ್ ಸ್ಟಾರ್ಸ್ ಎಲ್ಲಿ ವೋಟ್ ಹಾಕ್ತಾರೆ?

    ಚುನಾವಣೆಯ ಕಾವು ಜೋರಾಗಿದೆ. ಕರ್ನಾಟಕದಲ್ಲಿ ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ ಬೆಂಗಳೂರು ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ (Loksabha Elections 2024) ಮತದಾನ ನಡೆಯಲಿದೆ. ಹಾಗಾದ್ರೆ ರಾಜಧಾನಿಯಲ್ಲಿ ಕನ್ನಡ ಸ್ಟಾರ್ಸ್ (Kannada Actors) ಯಾರು, ಎಲ್ಲಿ ವೋಟ್ ಹಾಕ್ತಾರೆ ಎಂಬುದರ ವಿವರ ಇಲ್ಲಿದೆ.

    ನ್ಯಾಷನಲ್ ಸ್ಟಾರ್ ಯಶ್ ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವೋಟ್ ಮಾಡ್ತಾರೆ. ನಟಿ ರಾಧಿಕಾ ಪಂಡಿತ್ ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ), ಕ್ರೇಜಿಸ್ಟಾರ್ ರವಿಚಂದ್ರನ್ ಕುಟುಂಬಸ್ಥರು ರಾಜಾಜಿನಗರದ ಠಾಗೋರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೋಟ್ ಮಾಡುತ್ತಾರೆ.

    ರಿಯಲ್ ಸ್ಟಾರ್ ದಂಪತಿ ಕತ್ರಿಗುಪ್ಪೆ ಬಿಟಿಎಲ್ ವಿದ್ಯಾವಾಹಿನಿ ಶಾಲೆಯಯಲ್ಲಿ ವೋಟ್ ಮಾಡಲಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಕುಟುಂಬಸ್ಥರು ಸದಾಶಿವನಗರದ ಪೂರ್ಣ ಪ್ರಜ್ಞಾ ಸ್ಕೂಲ್‌ನಲ್ಲಿ ಮತದಾನ ಮಾಡುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್‌ಆರ್ ನಗರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ವೋಟ್ ಮಾಡಲಿದ್ದಾರೆ. ಇದನ್ನೂ ಓದಿ:ಎಗ್ ಫ್ರೀಜ್ ಮಾಡಿ ಮಗು ಪಡೆಯುವ ಪ್ಲ್ಯಾನ್‌ನಲ್ಲಿದ್ದಾರೆ ‘ಸೀತಾರಾಮಂ’ ನಟಿ

    ಕಿಚ್ಚ ಸುದೀಪ್ ಪುಟ್ಟೇನಹಳ್ಳಿರುವ ಆಕ್ಸ್‌ಫರ್ಡ್‌ ಶಾಲೆಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ. ರಾಚೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿವರಾಜ್‌ಕುಮಾರ್ ದಂಪತಿ ವೋಟ್ ಮಾಡಲಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ, ದಿಗಂತ್, ಪ್ರೇಮ್ ದಂಪತಿ ಆರ್‌ಆರ್ ನಗರದಲ್ಲಿ ವೋಟ್ ಮಾಡುತ್ತಾರೆ.

     

    ನಿರ್ಮಾಪಕ ಮುನಿರತ್ನ – ಮಲೇಶ್ವರಂ 11ನೇ ಕ್ರಾಸ್

    ನಟಿ ಸುಮಲತಾ ಅಂಬರೀಶ್- ಕೆ.ಎಮ್ ದೊಡ್ಡಿ ಮದ್ದೂರು

    ನವರಸನಾಯಕ ಜಗ್ಗೇಶ್- ಮಲ್ಲೇಶ್ವರಂ

    ನಟಿ ಮಾಳವಿಕಾ ಅವಿನಾಶ್- ಚಾಮರಾಜನಗರ

    ವಸಿಷ್ಠ ಸಿಂಹ- ಚಿಕ್ಕಲಸಂದ್ರ, ಬೆನಕ ಸ್ಕೂಲ್

    ಹರಿಪ್ರಿಯಾ- ಯಶವಂತಪುರ

    ಅಮೂಲ್ಯ ಜಗದೀಶ್- ಆರ್‌ಆರ್ ನಗರ

    ಅವಿನಾಶ್- ಆರ್‌ಆರ್ ನಗರ

    ಸೃಜನ್ ಲೋಕೇಶ್- ಕತ್ರಿಗುಪ್ಪೆ

    ಪೂಜಾ ಗಾಂಧಿ- ಕತ್ರಿಗುಪ್ಪೆ

    ದುನಿಯಾ ವಿಜಯ್- ಜೆಪಿ ನಗರ

    ಸಪ್ತಮಿ ಗೌಡ- ಜೆಪಿ ನಗರ

    ಮೇಘನಾ ರಾಜ್- ಜೆಪಿ ನಗರ

    ಸುಂದರರಾಜ್- ಜೆಪಿ ನಗರ

    ನಟಿ ತಾರಾ- ಜೆಪಿನಗರ

    ರಮೇಶ್ ಅರವಿಂದ್- ಪದ್ಮನಾಭ ನಗರ

    ಸುಧಾರಾಣಿ- ಮಲ್ಲೇಶ್ವರಂ

    ಕೋಮಲ್- ಮಲ್ಲೇಶ್ವರಂ

    ಬಿ. ಸರೋಜದೇವಿ- ಮಲ್ಲೇಶ್ವರಂ

    ಅರ್ಚನಾ ಉಡುಪ- ಬನಶಂಕರಿ

    ಪ್ರಕಾಶ್ ಬೆಳವಾಡಿ- ಜಯನಗರ

    ದೊಡ್ಡರಂಗೇ ಗೌಡ- ಕತ್ರಿಗುಪ್ಪೆ

    ಹೆಚ್.ಎಸ್ ವೆಂಕಟೇಶ್ ಮೂರ್ತಿ- ಹೊಸಕೆರೆಹಳ್ಳಿ

    ಧ್ರುವ ಸರ್ಜಾ- ತ್ಯಾಗರಾಜನಗರ

    ಶ್ರೀಮುರಳಿ- ವಸಂತನಗರ

    ಪ್ರಶಾಂತ್ ನೀಲ್- ವಸಂತನಗರ

    ರಕ್ಷಿತಾ ಪ್ರೇಮ್- ಚಂದ್ರಲೇಔಟ್

    ಡೈರೆಕ್ಟರ್ ಪ್ರೇಮ್- ಚಂದ್ರಲೇಔಟ್

    ಭಾರತಿ ವಿಷ್ಣುವರ್ಧನ್- ಜಯನಗರ

    ಅನಿರುದ್ಧ್- ಜಯನಗರ

    ವಿಜಯ್ ರಾಘವೇಂದ್ರ- ಯಲಹಂಕ

    ಮಾಲಾಶ್ರೀ- ಶಿವಾಜಿನಗರ

    ವಿನೋದ್ ರಾಜ್- ಸೋಲದೇವನ ಹಳ್ಳಿ

    ದೊಡ್ಡಣ್ಣ- ಬಿದರುಕಲ್ಲು

    ಚಂದನ್ ಶೆಟ್ಟಿ- ನಾಗರಬಾವಿ

    ಸಾಧುಕೋಕಿಲ- ನಾಗರಬಾವಿ

    ಶರಣ್- ಹೊಸಕೆರೆಹಳ್ಳಿ

    ಶೃತಿ- ಹೊಸಕೆರೆಹಳ್ಳಿ

    ಹರ್ಷಿಕಾ ಪೂಣಚ್ಚ- ಕೆ.ಆರ್ ಪುರ

    ಯೋಗರಾಜ್ ಭಟ್- ಗಿರಿ ನಗರ

    ಅರ್ಜುನ್ ಜನ್ಯ- ಹೆಬ್ಬಾಳ

    ನಿಖಿಲ್ ಕುಮಾರಸ್ವಾಮಿ- ಕೇತಮಾರನಹಳ್ಳಿ (ಬಿಡದಿ)

    ಆಶಿಕಾ ರಂಗನಾಥ್- ತುಮಕೂರು

    ಚಿಕ್ಕಣ್ಣ- ಮೈಸೂರು

  • ಹೆಚ್‌ಡಿಕೆ, ಪ್ರಜ್ವಲ್‌ ರೇವಣ್ಣ, ಮಲ್ಲೇಶ್‌ ಬಾಬು – ಜೆಡಿಎಸ್‌ನಿಂದ ಲೋಕಸಭೆಗೆ ಕಣಕ್ಕೆ

    ಹೆಚ್‌ಡಿಕೆ, ಪ್ರಜ್ವಲ್‌ ರೇವಣ್ಣ, ಮಲ್ಲೇಶ್‌ ಬಾಬು – ಜೆಡಿಎಸ್‌ನಿಂದ ಲೋಕಸಭೆಗೆ ಕಣಕ್ಕೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ಜೆಡಿಎಸ್‌ (JDS) ಅಭ್ಯರ್ಥಿಗಳು ಅಂತಿಮಗೊಂಡಿದ್ದು ಮಂಡ್ಯದಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy), ಹಾಸನದಿಂದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna), ಕೋಲಾರದಿಂದ ಮಲ್ಲೇಶ್‌ ಬಾಬು (Mallesh Babu) ಕಣಕ್ಕೆ ಇಳಿಯಲಿದ್ದಾರೆ.

    ಪ್ರಜ್ವಲ್‌ ರೇವಣ್ಣ ಸ್ಪರ್ಧೆಯನ್ನು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಅಂತಿಮಗೊಳಿಸಿದ್ದರು.  ಮೂರು ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡು ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಬುಧವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ.

     

    ಹಾಸನದಲ್ಲಿ ಹೆಚ್‌ಡಿ ದೇವೇಗೌಡರು ಪ್ರಜ್ವಲ್‌ ರೇವಣ್ಣ ಹಾಸನದಿಂದ, ಮಲ್ಲೇಶ್‌ ಬಾಬು ಕೋಲಾರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಮಲ್ಲೇಶ್ ಬಾಬು ಅವರು ಈ ಬಾರಿ ಬಂಗಾರಪೇಟೆಯಿಂದ ಕಣಕ್ಕೆ ಇಳಿದು ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಮುಂದೆ ಸೋತಿದ್ದರು. ಪ್ರಜ್ವಲ್‌ ರೇವಣ್ಣ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಈಗ ಎರಡನೇ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆ. ಇದನ್ನೂ ಓದಿ: ಮೋದಿ.. ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ: ಕಾಂಗ್ರೆಸ್‌ ಸಚಿವರ ಹೇಳಿಕೆಗೆ ಬಿಜೆಪಿ ಕಿಡಿ

     

    ಹೆಚ್‌ಡಿ ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಹೊಸದೆನಲ್ಲ. ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದರು.

  • ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ – ಅಧಿಕೃತ ಘೋಷಣೆ ಮಾತ್ರ ಬಾಕಿ

    ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ – ಅಧಿಕೃತ ಘೋಷಣೆ ಮಾತ್ರ ಬಾಕಿ

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha Election) ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಇಂದು ಸಂಜೆ ಮಂಡ್ಯ ಭಾಗದ ಜೆಡಿಎಸ್‌ (JDS) ನಾಯಕರ ಸಭೆಯನ್ನು ಕರೆಯುತ್ತೇನೆ. ಈ ಸಭೆಯ ಬಳಿಕ ಅಂತಿಮವಾಗಿ ಅಭ್ಯರ್ಥಿಯ ಹೆಸರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

     

    ಜೆಡಿಎಸ್‌ನ ಹೃದಯ ಭಾಗ ಮಂಡ್ಯ. ಕಳೆದ ಚುನಾವಣೆ ನಮಗೆ ನೈತಿಕ ಸೋಲು ಅಲ್ಲ. ಈ ಚುನಾವಣೆ ಮೂಲಕ ಜೆಡಿಎಸ್ ಮುಗಿಸುತ್ತೇವೆ ಎನ್ನುವ ದುರಹಂಕಾರದ ಮಾತಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ ಎಂದರು. ಇದನ್ನೂ ಓದಿ: ನಮ್ಮ ವರಿಷ್ಠರು ಸಂಸದೆ ಸುಮಲತಾರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ: ವಿಜಯೇಂದ್ರ

    ಬದುಕಿರುವರೆಗೂ ನಾವು ರಾಮನಗರ ಜಿಲ್ಲೆಯ ಅಭಿವೃದ್ಧಿ ಕೈ ಬಿಡುವುದಿಲ್ಲ. ರಾಮನಗರ, ಚನ್ನಪಟ್ಟಣ ಜನತೆಗೆ ಮನವಿ ಮಾಡುತ್ತೇನೆ. ಈ ಪಕ್ಷ ಉಳಿಸಲು 3 ಬಾರಿ ಹೃದಯ ಚಿಕಿತ್ಸೆ, ಎರಡು ಬಾರಿ ಮೆದುಳು ಚಿಕಿತ್ಸೆ ನಡೆದಿದೆ. ಇಷ್ಟು ಆದರೂ ಬದುಕಿದರೆ ನಾಡಿಗೆ ಏನೋ ಸೇವೆ ಬೇಕು ಅಂತ ದೇವರು ಬದುಕಿಸಿದ್ದಾನೆ. ಈ ಪಕ್ಷ ಉಳಿಸೋದು ನಿಮ್ಮ ಕೈಯಲ್ಲಿ ಇದೆ. ಇದು ರೈತರ ಪಕ್ಷ ಎಂದು ಹೇಳಿದರು.

     

    ಬಿಜೆಪಿಯವರು ಮೂರು ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ. ಹಾಸನ ಅಭ್ಯರ್ಥಿಯ ಬಗ್ಗೆ ನಮ್ಮ ವರಿಷ್ಠರಾದ ದೇವೇಗೌಡರು ತೀರ್ಮಾನ ತೆಗೆದುಕೊಂಡಿದ್ದಾರೆ. ಕೋಲಾರದಲ್ಲಿ ಮೂವರ ಹೆಸರು ಇದೆ. ಇದರ ಜೊತೆ ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಅವರು ಕೆಲವರ ಬಗ್ಗೆ ಹೇಳಿದ್ದಾರೆ. ಹೀಗಾಗಿ ಪಕ್ಷದ ಸಭೆ ನಡೆಸಿ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು.  ಇದನ್ನೂ ಓದಿ: ಆರ್‌ಸಿಬಿ ಪಂದ್ಯ ಗೆದ್ದ ಖುಷಿಯಲ್ಲಿ ಫ್ಯಾಮಿಲಿಗೆ ವೀಡಿಯೋ ಕರೆ ಮಾಡಿ ಕೊಹ್ಲಿ ಮಾತು

    ಹೆಚ್‌ಡಿ ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಹೊಸದೆನಲ್ಲ ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದರು.