Tag: elderly women

  • ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ

    ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ

    ಚಿಕ್ಕೋಡಿ: ಗೃಹಲಕ್ಷ್ಮಿ ಯೋಜನೆಯಿಂದ (Gruhalakshmi Scheme) ಬಂದ ಹಣದಿಂದ ಅಜ್ಜಿಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿ ಗಮನ ಸೆಳೆದಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಜನರಿಗೆ ಅಜ್ಜಿ ಹೋಳಿಗೆ ಊಟ ಹಾಕಿಸಿದ್ದಾರೆ. ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆಯಿಂದ ಊರಿಗೆಲ್ಲಾ ಊಟ ಹಾಕಿಸಿದ್ದಾರೆ. ಇದನ್ನೂ ಓದಿ: Exclusive Video | ಸೆಂಟ್ರಲ್‌ ಜೈಲಲ್ಲಿ ಕೊಲೆ ಆರೋಪಿ ದರ್ಶನ್‌ ಬಿಂದಾಸ್‌?

    ಸಿದ್ದರಾಮಯ್ಯನವರು ಪ್ರತಿ ತಿಂಗಳು ನಮಗೆಲ್ಲಾ 2,000 ಹಣ ನೀಡುತ್ತಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯನವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ.

    ಐದು ಜನ ಮುತ್ತೈದೆಯರಿಗೆ ಉಡಿ ತುಂಬಿ ಅಜ್ಜಿ ಹರಸಿದ್ದಾರೆ. ಅಜ್ಜಿಯ ಕಾರ್ಯಕ್ಕೆ ಸುಟ್ಟಟ್ಟಿ ಗ್ರಾಮದ ಮಹಿಳೆಯರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ದೋಸ್ತಿಗಳಿಂದ ರಾಜಭವನ ದುರುಪಯೋಗ ಹೈಕಮಾಂಡ್‍ಗೆ ಅರ್ಥವಾಗಿದೆ: ಹೆಚ್.ಸಿ.ಮಹಾದೇವಪ್ಪ

  • 89 ವರ್ಷವಾದ್ರೂ ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ – ಮಹಿಳಾ ಸಹಾಯವಾಣಿಗೆ ಕರೆ ಮಾಡಿದ 87ರ ವೃದ್ಧೆ

    89 ವರ್ಷವಾದ್ರೂ ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ – ಮಹಿಳಾ ಸಹಾಯವಾಣಿಗೆ ಕರೆ ಮಾಡಿದ 87ರ ವೃದ್ಧೆ

    ಗಾಂಧಿನಗರ: ಗುಜರಾತ್‍ನ 87 ವರ್ಷದ ವೃದ್ಧೆಯೊಬ್ಬರು(Old Women) 89 ವರ್ಷದ ತನ್ನ ಪತಿ(Husband) ಪದೇ, ಪದೇ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಾನೆ ಎಂದು ಮಹಿಳಾ ಸಹಾಯವಾಣಿ ಸಂಖ್ಯೆಗೆ ( Women’s helpline number) ಕರೆ ಮಾಡಿ ದೂರು ನೀಡಿದ್ದಾರೆ.

    ವಡೋದರಾದ(Vadodara) 87 ವರ್ಷದ ವೃದ್ಧೆ ಪದೇ, ಪದೇ ಲೈಂಗಿಕ ಕ್ರಿಯೆ(Sex) ನಡೆಸುತ್ತವಂತೆ ಒತ್ತಾಯಿಸುತ್ತಿದ್ದ ತನ್ನ ಪತಿಯ ಕಿರುಕುಳದಿಂದ ಬೇಸತ್ತಿದ್ದಾರೆ. ಗುಜರಾತ್‍ನ(Gujarat) ಎಲ್ಲಾ ಮಹಿಳಾ ನಿವಾಸಿಗಳಿಗೆ ಸರ್ಕಾರ ಟೋಲ್-ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ -181 ಅಭಯಂ ಯೋಜನೆ ರೂಪಿಸಿದ್ದು, ಈ ಬಗ್ಗೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಕರೆಯನ್ನು ಸ್ವೀಕರಿಸಿದ ಅಭಯಂ ತಂಡ ನಿಜಕ್ಕೂ ದಿಗ್ಭ್ರಮೆಗೊಂಡಿದೆ. ತನ್ನ ಗಂಡನ ಕಿರುಕುಳದಿಂದ ಹೇಗಾದರೂ ಪಾರು ಮಾಡುವಂತೆ ವೃದ್ಧೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್‌ ಸಿಂಗ್‌ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

    89 ವರ್ಷದ ತನ್ನ ಪತಿ ಇಂಜಿನಿರ್ ಆಗಿದ್ದು, ವಡೋದರದ ಸಯಾಜಿಗಂಜ್ ಪ್ರದೇಶದಲ್ಲಿ (Sayajiganj area) ವಾಸಿಸುತ್ತಿದ್ದಾರೆ. ವಯಸ್ಸಾದರೂ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಇಬ್ಬರಿಗೂ ಹಲವಾರು ವರ್ಷಗಳಿಂದ ಆರೋಗ್ಯ ಸಂಬಂಧ ಸಮಸ್ಯೆಗಳಿದೆ. ತಮ್ಮ ಮಗ ಹಾಗೂ ಸೊಸೆಯೊಂದಿಗೆ ವೃದ್ಧ ದಂಪತಿ ನೆಲೆಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್

    ಅವರ ಬೇಡಿಕೆಗಳಿಗೆ ಸ್ಪಂದಿಸದೇ, ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದಾಗ ತನ್ನ ಮೇಲೆ ಕೋಪಗೊಂಡು ಕಿರುಚಾಡುತ್ತಾರೆ ಮತ್ತು ನಿಂದಿಸುತ್ತಾರೆ. ಅನಾರೋಗ್ಯದ ಮಧ್ಯೆಯೂ ಪತಿ ಲೈಂಗಿಕ ಸಂಭೋಗಕ್ಕೆ ಒತ್ತಾಯಿಸಿದ್ದಕ್ಕೆ ವೃದ್ಧೆ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಂತರ ಅಭಯಂ(Abhayam team) ತಂಡ ಅವರ ಮನೆಗೆ ಭೇಟಿ ನೀಡಿ ಕೌನ್ಸೆಲಿಂಗ್(Counseling) ಆರಂಭಿಸಿ, ಈ ವಯಸ್ಸಿನಲ್ಲಿ ಯೋಗಾಭ್ಯಾಸ ಮಾಡುವಂತೆ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಂತೆ ವೃದ್ಧೆಯ ಪತಿಗೆ ತಿಳಿಸಿದೆ. ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಉದ್ಯಾನವನಗಳಿಗೆ ಭೇಟಿ ನೀಡುವಂತೆಯೂ ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪೌರತ್ವ ಸಾಬೀತುಪಡಿಸಿ ಎಂದಿದ್ದಕ್ಕೆ ಮಗ ಆತ್ಮಹತ್ಯೆ- 10 ವರ್ಷದ ಬಳಿಕ ವೃದ್ಧೆಗೆ ಮತ್ತೆ ನೋಟಿಸ್‌

    ಪೌರತ್ವ ಸಾಬೀತುಪಡಿಸಿ ಎಂದಿದ್ದಕ್ಕೆ ಮಗ ಆತ್ಮಹತ್ಯೆ- 10 ವರ್ಷದ ಬಳಿಕ ವೃದ್ಧೆಗೆ ಮತ್ತೆ ನೋಟಿಸ್‌

    ದಿಸ್ಪುರ: ಪೌರತ್ವ ಸಾಬೀತುಪಡಿಸಿ ಎಂದು ನೋಟಿಸ್‌ ನೀಡಿದ ಪರಿಣಾಮವಾಗಿ ಮಗನನ್ನು ಕಳೆದುಕೊಂಡಿದ್ದ ವೃದ್ಧೆಗೆ ಈಗ ಮತ್ತೆ ನೋಟಿಸ್‌ ನೀಡಲಾಗಿದೆ.

    ಪೌರತ್ವ ಸಾಬೀತುಪಡಿಸಿ ಎಂದು ಅಸ್ಸಾಂನ ಕ್ಯಾಚಾರ್ ಜಿಲ್ಲೆಯ 80 ವರ್ಷದ ವೃದ್ಧೆಗೆ ನೋಟಿಸ್‌ ನೀಡಲಾಗಿದೆ. 2012ರಲ್ಲಿ ಇದೇ ರೀತಿ ನೋಟಿಸ್‌ ನೀಡಲಾಗಿತ್ತು. ಆಗ ಈ ವೃದ್ಧೆಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮತ್ತೆ ನೋಟಿಸ್‌ ಕೊಡಲಾಗಿದೆ. ಇದನ್ನೂ ಓದಿ: ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

    ಅಕೊಲ್‌ ರಾಣಿ ನಾಮಸೂದ್ರ ಎಂಬ ವೃದ್ಧೆ ಇಂಡೋ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿ ಸಮೀಪವಿರುವ ಕಟೋಗೋರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹರಿಟಿಕರ್‌ ಭಾಗ-1ರ ನಿವಾಸಿ. ಕಳೆದ ತಿಂಗಳು, ಸಿಲ್ಚಾರ್‌ನಲ್ಲಿರುವ ವಿದೇಶಿಯರ ನ್ಯಾಯಮಂಡಳಿಯು ಮಾ.5ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ತಿಳಿಸಿದೆ.

    ನೀವು ನಿಗದಿತ ಅವಧಿಯೊಳಗೆ ನಿಮ್ಮ ಪೌರತ್ವದ ಬಗ್ಗೆ ಯಾವುದೇ ಮಾನ್ಯ ದಾಖಲೆಗಳನ್ನು ಪೊಲೀಸರ ಮುಂದೆ ಸಲ್ಲಿಸಲು ಸಾಧ್ಯವಾಗಿಲ್ಲ. ಈ ಆಧಾರದ ಮೇಲೆ ನೀವು ಅಕ್ರಮ ವಲಸಿಗರು ಎಂದು ಶಂಕಿಸಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

    ಈ ಕುರಿತು ಮಾತನಾಡಿರುವ ವಕೀಲ ಅನಿಲ್‌ ಡೇ ಅವರು, 2012ರಲ್ಲಿ ಇದೇ ರೀತಿಯ ಸೂಚನೆಯಿಂದಾಗಿ ಅವರ ಮಗ ನಿಧನರಾದರು. ಆದರೆ ಅವರ ಮರಣದ ನಂತರ ಅವರನ್ನು ಭಾರತೀಯ ಎಂದು ಘೋಷಿಸಲಾಯಿತು. ಆ ವ್ಯಕ್ತಿಯ ತಾಯಿಗೆ ಮತ್ತೆ ಅದೇ ನ್ಯಾಯಾಲಯದಿಂದ ಹೇಗೆ ನೋಟಿಸ್‌ ಬಂದಿದೆ ಎಂಬುದು ಅರ್ಥವಾಗುತ್ತಿಲ್ಲ. ಏ.4ರಂದು ಮತ್ತೆ ಹಾಜರಾಗುವಂತೆ ಕೋರ್ಟ್‌ ಹೇಳಿದ್ದು, ಅಂದು ಸಮರ್ಪಕ ದಾಖಲೆಗಳನ್ನು ಸಲ್ಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ತಂದೆಯ ಹೆಸರಿನಲ್ಲಿ ಭಾರತ ಸರ್ಕಾರವು 1956ರ ಪೌರತ್ವ ಕಾರ್ಡ್ ಅನ್ನು ಹೊಂದಿದ್ದರೂ, 2012 ರಲ್ಲಿ ಅರ್ಜುನ್ ನಾಮಸೂದ್ರ ಅವರ ಪೌರತ್ವವನ್ನು ಪ್ರಶ್ನಿಸಲಾಗಿತ್ತು. ತನ್ನನ್ನು ಬಂಧಿಸಿ ಬಾಂಗ್ಲಾದೇಶಕ್ಕೆ ತಳ್ಳುತ್ತಾರೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಅವರ ಕುಟುಂಬದವರು ಹೇಳಿದ್ದಾರೆ.

    2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಚಾರ್‌ಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಭಾಷಣದಲ್ಲಿ ಅರ್ಜುನ್ ನಾಮಸೂದ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಅರ್ಜುನ್ ನಾಮಸೂದ್ರ ನನ್ನ ಸಹೋದರನಾಗಿದ್ದು, ಅವರ ಸಾವಿನಿಂದ ನನಗೆ ನೋವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅರ್ಜುನ್‌ನಂಥವರಿಗೆ ಸಮಸ್ಯೆ ಆಗುವುದಿಲ್ಲ. ಯಾರೂ ಭಯಭೀತರಾಗಬೇಡಿ, ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

    ನಾವು ಗಡಿ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಅಲ್ಲಿ ಭಾರತದಿಂದ ಹೊರದೂಡುತ್ತಾರೆಂಬ ಭಯವಿದೆ. ಆ ಭಯದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ. 10 ವರ್ಷಗಳ ಹಿಂದೆ ನನ್ನ ಮಗನನ್ನು ಕಳೆದುಕೊಂಡೆ. ಇಂದು ಕಳೆದುಕೊಳ್ಳಲು ಏನೂ ಇಲ್ಲ. ನನ್ನ ಗುರುತನ್ನು ಮತ್ತೊಮ್ಮೆ ಸಾಬೀತುಪಡಿಸಲು ಕೇಳಿದ್ದಾರೆ. ನ್ಯಾಯಾಂಗವನ್ನು ಗೌರವಿಸಿ, ನಾನು ಪೌರತ್ವ ಸಾಬೀತುಪಡಿಸುತ್ತೇನೆ ಎಂದು ವೃದ್ಧೆ ಅಕೊಲ್‌ ರಾಣಿ ನಾಮಸೂದ್ರ ತಿಳಿಸಿದ್ದಾರೆ.