Tag: elderly couple

  • ದರೋಡೆ, ದಂಪತಿ ಕೊಲೆಯ ಮಾಸ್ಟರ್ ಮೈಂಡ್ 12ರ ಬಾಲಕ ಅರೆಸ್ಟ್

    ದರೋಡೆ, ದಂಪತಿ ಕೊಲೆಯ ಮಾಸ್ಟರ್ ಮೈಂಡ್ 12ರ ಬಾಲಕ ಅರೆಸ್ಟ್

    ಲಕ್ನೋ: ದರೋಡೆ (Robbery) ಮಾತ್ರವಲ್ಲದೇ ವೃದ್ಧ ದಂಪತಿಯ ಕೊಲೆ (Murder) ಪ್ರಕರಣದ ಮಾಸ್ಟರ್ ಮೈಂಡ್ 12 ವರ್ಷದ ಬಾಲಕ (Boy) ಸೇರಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    12 ವರ್ಷದ ಬಾಲಕನೊಬ್ಬ ವೃದ್ಧ ದಂಪತಿ ಕೊಲೆಯ ಮಾಸ್ಟರ್ ಮೈಂಡ್ ಆಗಿದ್ದು, ಆತನೊಂದಿಗೆ ಇನ್ನಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ ನವೆಂಬರ್ 22 ರಂದು ವೃದ್ಧ ದಂಪತಿಯಾದ ಇಬ್ರಾಹಿಂ ಹಾಗೂ ಪತ್ನಿ ಹಜ್ರಾ ಶವಗಳು ತಮ್ಮ ಮನೆಯಲ್ಲಿ ಪತ್ತೆಯಾಗಿತ್ತು. ಇಬ್ಬರ ಕುತ್ತಿಗೆಗೆ ಬಟ್ಟೆ ಬಿಗಿದು ಕೊಂದಿರುವುದು ಕಂಡುಬಂದಿತ್ತು. ಇದನ್ನೂ ಓದಿ: ಬಲವಂತದ ಮತಾಂತರ ಆರೋಪ – ಕ್ರಿಸ್ಮಸ್ ಆಚರಣೆ ವೇಳೆ ಗುಂಪು ದಾಳಿ

    ವರದಿಗಳ ಪ್ರಕಾರ ಬಾಲಕ ವೃದ್ಧ ದಂಪತಿಗೆ ಪರಿಚಿತನಾಗಿದ್ದ. ಬಾಲಕ ಇಬ್ರಾಹಿಂ ಅವರ ಬಳಿ ಹೆಚ್ಚು ಹಣವಿದೆ ಎಂದು ಭಾವಿಸಿ, ತನ್ನೊಂದಿಗೆ ಇನ್ನೂ ಮೂವರನ್ನು ಒಟ್ಟುಗೂಡಿಸಿ ಅವರ ಮನೆಯನ್ನು ಲೂಟಿಗೆ ಯತ್ನಿಸಿದ್ದ. ಆದರೆ ದರೋಡೆ ವೇಳೆ ದಂಪತಿಯ ಕೊಲೆ ನಡೆದಿದೆ.

    ಇದೀಗ ಪೊಲೀಸರು ಕೊಲೆ ಮಾಸ್ಟರ್ ಮೈಂಡ್ ಬಾಲಕನೊಂದಿಗೆ ಇನ್ನಿಬ್ಬರು ಆರೋಪಿಗಳಾದ ಮಂಜೇಶ್ ಹಾಗೂ ಶಿವಂನನ್ನು ಬಂಧಿಸಿದ್ದಾರೆ. 4ನೇ ಆರೋಪಿ ಸಂದೀಪ್ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ 12 ಸಾವಿರ ರೂ. ನಗದು, 1 ಮೊಬೈಲ್ ಫೋನ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್ ಇರಿಯ ಪೊಲೀಸ್ ಇರಾಜ್ ರಾಜಾ ತಿಳಿಸಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ತುನೀಶಾ ಆತ್ಮಹತ್ಯೆ – ಸಹ ನಟ ಶೀಜಾನ್ ಬಂಧನ

    Live Tv
    [brid partner=56869869 player=32851 video=960834 autoplay=true]

  • ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ

    ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ

    ಚಿತ್ರದುರ್ಗ: ಮನೆಯಲ್ಲಿದ್ದ ಇಬ್ಬರು ವೃದ್ಧ ದಂಪತಿಯ (Elderly Couple) ಕತ್ತು ಕೊಯ್ದು ಹತ್ಯೆಗೈದಿರುವ (Murder) ಕೃತ್ಯ ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ.

    ನಗರದ ವಿನಾಯಕ ಬಡಾವಣೆಯಲ್ಲಿ ವಾಸವಾಗಿದ್ದ ವೃದ್ಧ ದಂಪತಿ ಮನೆಯಲ್ಲಿ ಇಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ದುಷ್ಕರ್ಮಿಗಳು ಅವರ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಮೃತರನ್ನು ಪ್ರಭಾಕರ್ ಶೆಟ್ರು (75) ವಿಜಯ ಲಕ್ಷ್ಮಿ (65) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಘಟನೆ ನಡೆದಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

    ವೃದ್ಧ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಚಿಕ್ಕನಾಯಕನಹಳ್ಳಿ ಹಾಗೂ ದಾವಣಗೆರೆಗೆ ಮದುವೆ ಮಾಡಿ ಕೊಟ್ಟಿದ್ದರು. ಮನೆಯಲ್ಲಿ ವೃದ್ಧ ದಂಪತಿ ಮಾತ್ರವೇ ವಾಸವಾಗಿದ್ದರು. ಹೊಸದುರ್ಗದಲ್ಲಿ ಅಡುಗೆ ಎಣ್ಣೆ ವ್ಯಾಪಾರ ಮಾಡುತ್ತಿದ್ದ ಪ್ರಭಾಕರ್ ಶೆಟ್ರು ಮೇಲಿನ ವೈಯುಕ್ತಿಕ ದ್ವೇಷದಿಂದ ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ನನಗೆ ಸರ್ವಿಸ್‌ ಕೊಡ್ತೀರಾ, ದಿನಕ್ಕೆ 50 ಸಾವಿರ ರೂ. ಕೊಡ್ತೀನಿ – ಲೆಟರ್ ಬರೆದು ಮಹಿಳೆಗೆ ಲೈಂಗಿಕ ಕಿರುಕುಳ

    ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣ:
    ಹೊಸದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಹಗಲು ವೇಳೆ ಮನೆಗಳನ್ನು ನೋಡಿಕೊಂಡು ಪ್ಲಾನ್ ಮಾಡುವ ಕಳ್ಳರು ರಾತ್ರಿ ಸಮಯದಲ್ಲಿ ಬೀಗ ಹಾಕಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಒಂದು ವೇಳೆ ಅವರ ಕೃತ್ಯಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ಹತ್ಯೆಗೈಯುತ್ತಾರೆ ಎಂಬ ಆತಂಕ ಇಲ್ಲಿನ ನಿವಾಸಿಗಳಲ್ಲಿದೆ. ಹೀಗಾಗಿ ಈ ಕೃತ್ಯಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಬೇಕೆಂಬ ಮನವಿ ಸ್ಥಳೀಯರಿಂದ ಕೇಳಿಬಂದಿದೆ. ಇದನ್ನೂ ಓದಿ: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಮೂರು ಮಕ್ಕಳಿಗೆ ವಿಷ ಹಾಕಿ ಮಹಿಳೆ ನೇಣಿಗೆ ಶರಣು

    Live Tv
    [brid partner=56869869 player=32851 video=960834 autoplay=true]

  • 52 ವರ್ಷಗಳ ಹಿಂದೆ ವಿಚ್ಛೇದನ – ದಂಪತಿಯನ್ನು ಮತ್ತೆ ಒಂದು ಮಾಡಿದ ಅದೇ ಕೋರ್ಟ್‌

    52 ವರ್ಷಗಳ ಹಿಂದೆ ವಿಚ್ಛೇದನ – ದಂಪತಿಯನ್ನು ಮತ್ತೆ ಒಂದು ಮಾಡಿದ ಅದೇ ಕೋರ್ಟ್‌

    ಹುಬ್ಬಳ್ಳಿ: ಯೌವ್ವನದಲ್ಲಿ ನ್ಯಾಯಾಲಯದ ಮೂಲಕ ಬೇರೆಯಾದ ದಂಪತಿಯನ್ನು ಬೇರೊಬ್ಬರಿ 52 ವರ್ಷಗಳ ಬಳಿಕ ಮತ್ತೆ ಅದೇ ನ್ಯಾಯಾಲಯ ಒಂದು ಮಾಡಿದ ಅಪರೂಪದ ಘಟನೆ ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ನಡೆದಿದೆ.

    ಕಲಘಟಗಿಯಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್‍ನಲ್ಲಿ ನ್ಯಾಯಧೀಶರಾದ ಜಿ.ಆರ್.ಶೆಟ್ಟರ್ ಅವರು ಈ ಅಪರೂಪದ ರಾಜಿ ಸಂಧಾನ ಮಾಡಿಸಿದ್ದಾರೆ. ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ(80) ವೃದ್ಧಾಪ್ಯದಲ್ಲಿ ಒಂದಾದ ದಂಪತಿ. 52 ವರ್ಷದ ಹಿಂದೆ ಪರಸ್ಪರ ಒಪ್ಪಿಗೆ ಮೂಲಕ ಈ ದಂಪತಿ ವಿಚ್ಛೇದನ ಪಡೆದಿದ್ದರು. ಇದನ್ನೂ ಓದಿ: 60 ಕಿ.ಮೀ ಒಳಗಿನ ಎಲ್ಲ ಟೋಲ್ ತೆರವಿಗೆ ಸೂಚಿಸಿದ್ರೂ ದ.ಕನ್ನಡ ಜಿಲ್ಲೆಯಲ್ಲಿದೆ 48 ಕಿ.ಮೀನಲ್ಲಿ 4 ಟೋಲ್

    ಹೀಗಾಗಿ ಪ್ರತಿ ತಿಂಗಳು ಕಲ್ಲವ್ವಳಿಗೆ ಬಸಪ್ಪ ಜೀವನಾಂಶ ನೀಡುತ್ತಿದ್ದರು. ಆದರೆ ಕೆಲ ತಿಂಗಳಿನಿಂದ ಬಸಪ್ಪ ಜೀವನಾಂಶ ಕೊಡುವುದನ್ನು ನಿಲ್ಲಿಸಿದ್ದರು. ಈ ಹಿನ್ನೆಲೆ ಪತಿ ಕಲ್ಲವ್ವ ನ್ಯಾಯಾಲಯದ ಮೊರೆ ಕೇಳಿದ್ದಾಳೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಹಿರಿಯ ದಿವಾನಿ ನ್ಯಾಯಾಲಯ ಇಬ್ಬರ ಆರೋಗ್ಯ ಮತ್ತು ವಯೋಮಾನದ ದೃಷ್ಟಿಯಿಂದ ರಾಜಿ ಸಂಧಾನ ಮಾಡಿಸಿ ಒಂದು ಮಾಡಿದೆ. ಈ ಸಂಧಾನಕ್ಕೆ ವಕೀಲರು ಸಹ ಸಮ್ಮತಿ ನೀಡಿ ವೃದ್ಧ ದಂಪತಿಯನ್ನು ಒಂದು ಮಾಡಿದ್ದಾರೆ. ಇದನ್ನೂ ಓದಿ:  ಅಗ್ನಿಪಥ್ ಸತ್ಯಾಗ್ರಹದಲ್ಲಿ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದ ಪೊಲೀಸರು 

    Live Tv

  • ಹಿರಿಯೂರಿನ ವೃದ್ಧ ದಂಪತಿ ಬಾಳಲ್ಲಿ ಪಬ್ಲಿಕ್ ಬೆಳಕು

    ಹಿರಿಯೂರಿನ ವೃದ್ಧ ದಂಪತಿ ಬಾಳಲ್ಲಿ ಪಬ್ಲಿಕ್ ಬೆಳಕು

    ಚಿತ್ರದುರ್ಗ: ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಗೋದು ಸಹಜ. ಆದ್ರೆ ಮಗ-ಸೊಸೆಯ ಜಗಳದಿಂದ ಬೀದಿಗೆ ಬಿದ್ದಿದ್ದ ವೃದ್ಧರಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನ್ಯಾಯ ಒದಗಿಸಿದೆ.

    ಹಳೇ ಮನೆಯಲ್ಲಿ ಹಾಲು ಉಕ್ಕಿಸುತ್ತಿರುವ ವೃದ್ಧರು. ದಂಪತಿ ಮೊಗದಲ್ಲಿ ಮೂಡಿದ ಮಂದಹಾಸ. ಈ ಹರ್ಷದಾಯಕ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಸಾಲುಹುಣುಸೆ ಗ್ರಾಮದ ಶಿವಣ್ಣ, ನೇತ್ರಾವತಿ. ಇದನ್ನೂ ಓದಿ: 1940ರಲ್ಲೇ ನಿಧನರಾದ ಹೆಡ್ಗೆವಾರ್ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ಹೇಗೆ? – ಟ್ವೀಟ್‌ನಲ್ಲೇ ಟಾಂಗ್ ಕೊಟ್ಟ ಬಿಜೆಪಿ

    ಹೌದು, ಇವರ ಏಕೈಕ ಪುತ್ರ ಅರವಿಂದ್ ಹಾಗೂ ಆತನ ಪತ್ನಿ ನಡುವೆ ಹೊಂದಾಣಿಕೆ ಕೊರತೆಯಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದನ್ನೇ ನೆಪ ಮಾಡಿಕೊಂಡಿರುವ ಅರವಿಂದ್‌ನ ಪತ್ನಿ, ತನ್ನ ಅತ್ತೆ-ಮಾವನನ್ನು ಮನೆಯಿಂದ ಹೊರಹಾಕಿ, ಮನೆಗೆ ಬೀಗ ಹಾಕಿದ್ದಳು. ಹೀಗಾಗಿ ಸತತ 2 ವರ್ಷಗಳಿಂದ ಬೀದಿಯಲ್ಲಿ ವಾಸವಾಗಿದ್ದ ವೃದ್ಧರು ಬೆಳಕು ಕಾರ್ಯಕ್ರಮದ ಮೊರೆಗೆ ಧಾವಿಸಿ, ಅವರೇ ಕಟ್ಟಿದ ಮನೆಯಲ್ಲಿ ವಾಸಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಚಿತ್ರದುರ್ಗ ಎಸ್‌ಪಿ ಪರಶುರಾಮ್ ನೇತೃತ್ವದಲ್ಲಿ ಮನೆಯ ಬೀಗವನ್ನು ತೆರವುಗೊಳಿಸಿ, ನೊಂದ ವೃದ್ಧರು ಸಂತಸದಿಂದ ಹಾಲು ಉಕ್ಕಿಸಿದರು. ಸಂಭ್ರಮದಿಂದ ದೇವರನ್ನು ಪ್ರಾರ್ಥಿಸಿ ಗೃಹ ಪ್ರವೇಶ ಮಾಡಿದರು.

    2 ವರ್ಷಗಳಿಂದ ಮಗ ಸೊಸೆಯ ಜಗಳದಿಂದ ಮನನೊಂದಿದ್ದ ವೃದ್ಧರು ಯಾರ ಬಳಿ ತೆರಳಿದರೂ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಪ್ರಾಣ ಭಯದಿಂದ ಬೀದಿಯಲ್ಲೇ ವಾಸವಾಗಿದ್ದರು. ಆದರೆ ಇವರ ಸಂಕಷ್ಟಕ್ಕೆ ಮರುಗಿದ ಪಬ್ಲಿಕ್ ಟಿವಿ, ಬೆಳಕು ಕಾರ್ಯಕ್ರಮದಡಿ ನ್ಯಾಯ ದೊರಕಿಸಿದೆ. ನೆಮ್ಮದಿಯಾಗಿ ಮನೆಯಲ್ಲಿ ವಾಸಿಸಲು ಅವಕಾಶ ಕಲ್ಪಿಸಿದೆ. ಹೀಗಾಗಿ ವೃದ್ಧ ದಂಪತಿ ಪಬ್ಲಿಕ್ ಟಿವಿ ಹಾಗೂ ಚಿತ್ರದುರ್ಗ ಎಸ್‌ಪಿ ಪರಶುರಾಮ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ – ಡ್ಯೂಟಿ ಮುಗಿಸಿ ಮನೆ ತೆರಳುವವರಿಗೆ ಕಿರಿಕಿರಿ

    ಒಟ್ಟಾರೆ ಮಗ-ಸೊಸೆಯ ಜಗಳ ಇತ್ಯರ್ಥವಾಗದೇ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಏನೂ ತಪ್ಪು ಮಾಡದ ವೃದ್ಧ ದಂಪತಿ ಬೀದಿಗೆ ಬಿದ್ದಿದ್ದರು. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಡಿ ಈ ವಿಚಾರವನ್ನು ಎಸ್‌ಪಿ ಪರಶುರಾಮ್ ಗಮನಕ್ಕೆ ತಂದು, ವೃದ್ಧರ ಬದುಕಿಗೆ ಬೆಳಕು ತರಿಸಿರುವುದು ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಆಸ್ಪತ್ರೆಯಲ್ಲಿದ್ದ ಮಗನ ಶವ ಹಿಂಪಡೆಯಲು 50 ಸಾವಿರಕ್ಕಾಗಿ ಭಿಕ್ಷೆ ಬೇಡಿದ ವೃದ್ಧ ದಂಪತಿ

    ಆಸ್ಪತ್ರೆಯಲ್ಲಿದ್ದ ಮಗನ ಶವ ಹಿಂಪಡೆಯಲು 50 ಸಾವಿರಕ್ಕಾಗಿ ಭಿಕ್ಷೆ ಬೇಡಿದ ವೃದ್ಧ ದಂಪತಿ

    ಪಾಟ್ನಾ: ಸರ್ಕಾರಿ ಆಸ್ಪತ್ರೆಯಲ್ಲಿದ್ದ ತಮ್ಮ ಮಗನ ಶವವನ್ನು ಮರಳಿ ಪಡೆಯಲು 50 ಸಾವಿರ ರೂ. ಲಂಚ ಕೇಳಿದ್ದರಿಂದ ವೃದ್ಧ ದಂಪತಿ ಬೀದಿ, ಬೀದಿಗಳಲ್ಲಿ ಹಣಕ್ಕಾಗಿ ಭಿಕ್ಷೆ ಬೇಡಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

    ಮಗನ ಶವ ಪಡೆಯಲು ದಂಪತಿ ಬಳಿ ಹಣವಿಲ್ಲದ ಕಾರಣ, ಹಣಕ್ಕಾಗಿ ಊರೂರು ಭಿಕ್ಷೆ ಬೇಡುತ್ತಾ ಅಲೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಮಾತನಾಡಿದ ಮೃತನ ತಂದೆಮಹೇಶ್ ಠಾಕೂರ್ ಅವರು, ಕೆಲವು ದಿನಗಳ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದನು. ಈಗ ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿತ್ತು. ಹೀಗಾಗಿ ನನ್ನ ಮಗನ ಶವವನ್ನು ನೀಡುವುದಕ್ಕೆ ಆಸ್ಪತ್ರೆಯ ಸಿಬ್ಬಂದಿ 50 ಸಾವಿರ ರೂ. ಕೇಳಿದ್ದಾರೆ. ನಾವು ಬಡವರು, ಅಷ್ಟು ಮೊತ್ತವನ್ನು ನಾವು ಹೇಗೆ ಪಾವತಿಸಲು ಸಾಧ್ಯ ಎಂದು ಅಳಲು ತೊಡಿಕೊಂಡಿದ್ದಾರೆ.

    ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಕಾರಣ ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ. ಇದನ್ನೂ ಓದಿ: ಸುಡು ಬಿಸಿಲಿನಲ್ಲಿ 5 ವರ್ಷದ ಬಾಲಕಿ ಕೈ ಕಟ್ಟಿ ತಾಯಿಯಿಂದಲೇ ಚಿತ್ರಹಿಂಸೆ

    ಸದ್ಯ ಈ ಬಗ್ಗೆ ಮಾತನಾಡಿದ ಸಮಸ್ತಿಪುರದ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಅವರು, ಘಟನೆ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಬೇಜವಾಬ್ದಾರರಾಗಿ ಕೆಲಸ ಮಾಡುವವರನ್ನು ಬಿಡುವುದಿಲ್ಲ. ಇದು ಮಾನವೀಯತೆಗೆ ಅವಮಾನ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೋಷಕರಿಂದಲೇ ನನಗೆ ಸಾವು – ಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರ ಔಟ್

  • ಅಪ್ರಾಪ್ತೆಯನ್ನು ಹತ್ಯೆಗೈದು, ವೃದ್ಧೆಯ ತಲೆಯನ್ನು ಕತ್ತರಿಸಿ ನೇತು ಹಾಕಿದ ದುಷ್ಕರ್ಮಿಗಳು

    ಅಪ್ರಾಪ್ತೆಯನ್ನು ಹತ್ಯೆಗೈದು, ವೃದ್ಧೆಯ ತಲೆಯನ್ನು ಕತ್ತರಿಸಿ ನೇತು ಹಾಕಿದ ದುಷ್ಕರ್ಮಿಗಳು

    ಭೋಪಾಲ್: ವೃದ್ಧ ದಂಪತಿ ಮತ್ತು ಅವರ ಓರ್ವ ಅಪ್ರಾಪ್ತ ಮೊಮ್ಮಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ವೃದ್ಧೆಯ ತಲೆಯನ್ನು ಕತ್ತರಿಸಿ ಮರಕ್ಕೆ ನೇತು ಹಾಕಿರುವ ಘಟನೆಯೊಂದು ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ ಕೆಲವು ಸ್ಥಳೀಯರು, ವೃದ್ಧ ದಂಪತಿ ಮತ್ತು ಅವರ ಮೊಮ್ಮಗಳು ಶವವಾಗಿ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಮೊಹಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟದೇಯ್ ಗ್ರಾಮದಲ್ಲಿ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ದಂಪತಿ ಮತ್ತು ಅವರ ಮೊಮ್ಮಗಳು ಮನೆಯ ಟೆರೇಸ್‍ನಲ್ಲಿ ಮಲಗಿದ್ದಾಗ ಅವರ ಕತ್ತು ಸೀಳಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಸಿಂಗ್ ಕವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ತಿ ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

    ಹಂತಕರು ವೃದ್ಧೆಯ ತಲೆಯನ್ನು ಕತ್ತರಿಸಿ ಅವರ ಮನೆಯಿಂದ ಒಂದು ಕಿಮೀ ದೂರದಲ್ಲಿರುವ ಜಮೀನಿನಲ್ಲಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಮೊಹಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಎಸ್‍ಎಲ್ ಮಾರ್ಕಮ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತರ ಇತರ ಕುಟುಂಬ ಸದಸ್ಯರು, ಘಟನೆ ಕುರಿತು ಹಂತಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

  • ಸುತ್ತಿಗೆಯಿಂದ ಹೊಡೆದು ವೃದ್ಧ ದಂಪತಿಯ ಬರ್ಬರ ಹತ್ಯೆ

    ಸುತ್ತಿಗೆಯಿಂದ ಹೊಡೆದು ವೃದ್ಧ ದಂಪತಿಯ ಬರ್ಬರ ಹತ್ಯೆ

    ರಾಮನಗರ: ಹಣಕ್ಕಾಗಿ ವೃದ್ಧ ದಂಪತಿಗಳಿಬ್ಬರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ಬಳಿ ನಡೆದಿದೆ.

    ಆಶಾ (63) ಹಾಗೂ ರಘುರಾಜ್ (70) ಮೃತ ದಂಪತಿ. ರಘುರಾಜ್ ಮಾಜಿ ಏರ್ ಫೋರ್ಸ್ ಪೈಲಟ್ ಆಗಿದ್ದು, ಈಗಲ್ ಟನ್ ರೆಸಾರ್ಟ್‍ನ ಮಾಲೀಕರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಅಲ್ಲೇ ವಾಸವಿದ್ದ ದಂಪತಿಯನ್ನು ಹಣಕ್ಕಾಗಿ ಹತ್ಯೆ ಮಾಡಿರುವುದಾಗಿ ಶಂಕಿಸಲಾಗಿದೆ. ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಇಬ್ಬರ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: ಪರೀಕ್ಷೆ ದಿನ 5ನೇ ಅಂತಸ್ತಿನ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವು

    POLICE JEEP

    ಘಟನೆಯ ಬಳಿಕ ಮನೆಯ ಸೆಕ್ಯೂರಿಟಿ ಗಾರ್ಡ್ ಪರಾರಿಯಾಗಿದ್ದಾನೆ. ಮನೆಯಲ್ಲಿ ಕೆಲಸಕ್ಕಿದ್ದವರೇ ದಂಪತಿಯ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ರಾಮನಗರ ಎಸ್ಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಒಂದು ಕಡೆ ಹಿಜಬ್ ಕಿಡಿ ಇನ್ನೊಂದೆಡೆ ಕೇಸರಿ, ನೀಲಿ ಶಾಲು ಸಂಘರ್ಷ!

  • ಹೆತ್ತವರು ಜಮೀನು ಕೊಟ್ಟಿಲ್ಲವೆಂದು ದ್ವೇಷ – ಹಿಪ್ಪು ನೇರಳೆ ಗಿಡಕ್ಕೆ ವಿಷ ಹಾಕಿ ನಾಶ ಮಾಡಿದ ಮಗಳು!

    ಹೆತ್ತವರು ಜಮೀನು ಕೊಟ್ಟಿಲ್ಲವೆಂದು ದ್ವೇಷ – ಹಿಪ್ಪು ನೇರಳೆ ಗಿಡಕ್ಕೆ ವಿಷ ಹಾಕಿ ನಾಶ ಮಾಡಿದ ಮಗಳು!

    ಕೋಲಾರ: ಹೆತ್ತವರು ಜಮೀನು ಕೊಟ್ಟಿಲ್ಲವೆಂದು ಸಿಟ್ಟಿನಿಂದ ಮಗಳು ಗಿಡಗಳಿಗೆ ವಿಷ ಹಾಕಿ ನಾಶಪಡಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರಾಮಣ್ಣ ಹಾಗೂ ಲಕ್ಷ್ಮಮ್ಮ ಎಂಬ ವೃದ್ಧ ದಂಪತಿ ಬೆಳೆ ಕಳೆದುಕೊಂಡು ಇದೀಗ ಕಣ್ಣೀರಾಕುತ್ತಿದ್ದಾರೆ. ಹಿರಿ ಮಗಳು ಚೌಡಮ್ಮಳಿಗೆ ಜಮೀನು ನೀಡದ್ದಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಗದರಿಸಿದ ಮಾತ್ರಕ್ಕೆ ತಂದೆಯನ್ನು ಮಗ ಕೊಲೆ ಮಾಡುವಂತಿಲ್ಲ: ಹೈಕೋರ್ಟ್

    ಪೋಷಕರು ಜಮೀನು ಕೊಟ್ಟಿಲ್ಲ ಎಂದು ಚೌಡಮ್ಮ ಹಿಪ್ಪುನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ್ದಾಳೆ. ಹೀಗಾಗಿ ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದ ಹುಳುಗಳು ಸಾಯುತ್ತಿವೆ. ಪರಿಣಾಮ 150 ಮೊಟ್ಟೆಯ ಸುಮಾರು ಒಂದು ಲಕ್ಷ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ ಎಂದು ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.

    ಸಾಲ ಮಾಡಿ ತಮ್ಮ ಜೀವನಕ್ಕೆ ಕಷ್ಟಪಟ್ಟು ರೇಷ್ಮೆ ಬೆಳೆಯನ್ನು ಬೆಳೆದ್ರೆ ವಿಷ ಹಾಕಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ವೃದ್ಧ ದಂಪತಿಯ ಮಗಳಾದ ಚೌಡಮ್ಮ, ಅಳಿಯ ಲಕ್ಷ್ಮಣ್, ಮೊಮ್ಮಗ ಆನಂದ ಅವರೇ ವಿಷ ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ:  ಕೈ ನಾಯಕರಿಗೊಂದು ಉದ್ಯೋಗ ಬೇಕಿದೆ, ಅದಕ್ಕೆ ಇಲ್ಲಸಲ್ಲದ ಮಾತುಗಳನ್ನಾಡ್ತಿದ್ದಾರೆ: ಮುನಿರತ್ನ

    ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಕ್ಕಳ ಸಮ್ಮುಖದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ ಜೋಡಿ

    ಮಕ್ಕಳ ಸಮ್ಮುಖದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ ಜೋಡಿ

    ಮೈಸೂರು: ಇಳಿ ವಯಸ್ಸಿನ ಅಜ್ಜ, ಅಜ್ಜಿ ಜೋಡಿಯೊಂದು ಮಕ್ಕಳ ಸಮ್ಮುಖದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕವಾಗಿ ಎಲ್ಲಡೆ ಸುದ್ದಿಯಾಗಿದೆ.

    85 ವರ್ಷದ ಮುಸ್ತಫಾ, 65 ವರ್ಷ ಫಾತಿಮಾ ಬೇಗಂ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೃದ್ಧ ಜೋಡಿ ಮೈಸೂರಿನ ಉದಯಗಿರಿಯ ಗೌಸಿಯಾನಗರದ ನಿವಾಸಿಗಳಾಗಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಮದುವೆಯಾಗಿ ಸತಿಪತಿಗಳಾದ ಈ ಜೋಡಿ ನವಜೀವಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿದ್ದ ಮುಸ್ತಫಾ ತನ್ನ 9 ಮಕ್ಕಳಿಗೆ ಮದುವೆ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನು ಕಳೆದುಕೊಂಡು ಗೌಸಿಯಾನಗರದಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದರು. ಒಂಟಿ ಜೀವನಕ್ಕೆ ಜೊತೆಗಾರ್ತಿ ಬೇಕೆಂದು ಹಂಬಲಿಸಿದ್ದ ಅಜ್ಜನಿಗೆ ಜೊತೆಯಾಗಿ ಒಬ್ಬರು ಬಾಳ ಸಂಗಾತಿ ಸಿಕ್ಕಿದ್ದಾರೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಫಾತಿಮಾ ಅದೇ ಏರಿಯಾದಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಮುಸ್ತಫಾ ತನ್ನನ್ನು ಮದುವೆಯಾಗುವಂತೆ ಫಾತಿಮಾ ಬೇಗಂರನ್ನು ಕೇಳಿಕೊಂಡಿದ್ದಾರೆ. ಒಂಟಿಯಾಗಿದ್ದ ಫಾತಿಮಾ, ಮುಸ್ತಫಾ ಅವರ ಮನವಿಗೆ ನಿರಾಸೆ ಮಾಡದೆ ಮದುವೆಯಾಗಲು ಒಪ್ಪಿಗೆ ನೀಡಿದ್ದಾರೆ. ಇಳಿ ವಯಸ್ಸಿನಲ್ಲಿ ಮದುವೆಯಾಗಲು ಇಚ್ಛಿಸಿದ ತಂದೆಗೆ ಮಕ್ಕಳು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

    ಈ ವಯಸ್ಸಿನಲ್ಲಿ ಮುಸ್ತಫಾ ಅವರ ನಿರ್ಧಾರ ಇಡೀ ಕುಟುಂಬಕ್ಕೆ ಅಚ್ಚರಿ ಎನಿಸಿದರೂ ತಂದೆಯ ನಿರ್ಧಾರಕ್ಕೆ ಜೈ ಎಂದ ಮಕ್ಕಳು ನಿಖಾ (ಮದುವೆ) ಮಾಡಿದ್ದಾರೆ. ಮನೆಯಲ್ಲೇ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಫಾತಿಮಾ ಬೇಗಂರನ್ನು ಮುಸ್ತಫಾ ವರಿಸಿದ್ದಾರೆ.

  • ಹಣದಾಸೆಗೆ ವೃದ್ಧ ದಂಪತಿಯನ್ನು ಹತ್ಯೆಗೈದು ಮನೆಯೆಲ್ಲಾ ಹುಡುಕಿದ್ರು- ಆದ್ರೆ ಸಿಕ್ಕಿದ್ದು ಕೇವಲ 500 ರೂ!

    ಹಣದಾಸೆಗೆ ವೃದ್ಧ ದಂಪತಿಯನ್ನು ಹತ್ಯೆಗೈದು ಮನೆಯೆಲ್ಲಾ ಹುಡುಕಿದ್ರು- ಆದ್ರೆ ಸಿಕ್ಕಿದ್ದು ಕೇವಲ 500 ರೂ!

    ಅಹಮದಬಾದ್: ಹಣಕ್ಕಾಗಿ ಕಟ್ಟಡ ಕಾರ್ಮಿಕರು ಮನೆಯೊಂದಕ್ಕೆ ನುಗ್ಗಿ ಇಬ್ಬರು ವೃದ್ಧ ದಂಪತಿಯನ್ನು ಹತ್ಯೆ ಮಾಡಿರುವ ಘಟನೆ ಘಾಟ್‌ಲೋದಿಯಾದಲ್ಲಿ ನಡೆದಿದೆ.

    ದಯಾನಂದ ಶಾನುಭೋಗ (90) ಮತ್ತು ವಿಜಯಲಕ್ಷ್ಮಿ ಶಾನುಭೋಗ (80) ಹತ್ಯೆಯಾದ ದಂಪತಿ. ಕೊಲೆ ಮಾಡಿದ ಏಮನ್‌ ಟೊಪ್ನೊ (26) ಮತ್ತು ಮುಕುತ್‌ ಹಪ್ಕಡದ (19) ಬಂಧಿತ ಆರೋಪಿಗಳು. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ

    ಕಟ್ಟಡ ಕಾರ್ಮಿಕರಾಗಿದ್ದ ಏಮನ್‌ ಮತ್ತು ಮುಕುತ್‌ ತಮ್ಮ ಮನೆಯವರಿಗೆ ಕೂಲಿ ಹಣವನ್ನು ಕಳುಹಿಸಿದ್ದರು. ತಮಗೆ ಹಣದ ಅವಶ್ಯಕತೆ ಹೆಚ್ಚಿತ್ತು. ಹೀಗಾಗಿ ಸಂಪಾದನೆಗೆ ಸುಲಭ ದಾರಿ ಹುಡುಕಲು ಪ್ರಯತ್ನಿಸಿದರು. ಆಗ ಮನೆ ದರೋಡೆಯ ಯೋಜನೆ ಅವರಿಗೆ ಹೊಳೆಯಿತು.

    POLICE JEEP

    ಈ ವೇಳೆ ಮನೆಯೊಂದಕ್ಕೆ ನುಗ್ಗಿದ ಆರೋಪಿಗಳು ವೃದ್ಧ ದಯಾನಂದ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆತನ ಪತ್ನಿಯ ಕುತ್ತಿಗೆಯನ್ನೂ ಕೊಯ್ದಿದ್ದಾರೆ. ವೃದ್ಧ ದಂಪತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ, ಆರೋಪಿಗಳು ಮನೆಯನ್ನು ಹುಡುಕಾಡಿದ್ದಾರೆ. ಎಷ್ಟು ಹುಡುಕಿದರೂ ಕೊನೆಗೆ ಅವರಿಗೆ ಸಿಕ್ಕಿದ್ದು ಕೇವಲ 500 ರೂಪಾಯಿ. ಕೊನೆಗೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ದೆಹಲಿ ವಿವಿ ಪ್ರೊಫೆಸರ್‌ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಕಾರು ಚಾಲಕ!

    ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.