ಚಂಡೀಗಢ: ಟ್ಯೂಶನ್‍ಗೆಂದು ಬರುತ್ತಿದ್ದ ಬಾಲಕಿಯರಿಗೆ ಟೀಚರ್ ತಂದೆಯೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಛತ್ತೀಸ್‍ಗಢದ (Chhattisgarh) ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
11 ಮತ್ತು 12 ವರ್ಷ ಬಾಲಕಿಯರು ಆರೋಪಿಯನ್ನು ತಮ್ಮ ಟ್ಯೂಶನ್ ಟೀಚರ್ ತಂದೆ ಎಂದು ತಿಳಿಸಿದ್ದಾರೆ. ಆಸಾರಾಮ್ ಬಾಪು ನಗರದಲ್ಲಿ ಮಹಿಳೆಯೊಬ್ಬರು ನಡೆಸುತ್ತಿದ್ದ ಟ್ಯೂಶನ್‍ಗೆ 11-12 ವರ್ಷದ ಬಾಲಕಿಯರು ಬರುತ್ತಿದ್ದರು. ಈ ವೇಳೆ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ಇದೀಗ ಮಹಿಳೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಮುಖ್ಯ ಪೊಲೀಸ್ ಅಧೀಕ್ಷಕ (ಸಿಎಸ್‍ಪಿ) ಕಂಟೋನ್ಮೆಂಟ್ ಪ್ರಭಾತ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ದೀದಿ ಮಾ ಅಂತ ಕರೆಯಿರಿ – ಕುಟುಂಬ ತ್ಯಜಿಸಿದ ಬಿಜೆಪಿ ನಾಯಕಿ ಉಮಾ ಭಾರತಿ

ಅಸಾರಾಂ ಬಾಪು ನಗರದಲ್ಲಿರುವ (Asaram Bapu Nagar) ಭಿಲಾಯಿಯ ಜಮುಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (Bhilai’s Jamul police station area) ಈ ಘಟನೆ ನಡೆದಿದೆ. ಮನೆಯ ಸುತ್ತಮುತ್ತಲಿರುವ ಮಕ್ಕಳಿಗೆ ಮಹಿಳೆಯೊಬ್ಬರು ಟ್ಯೂಶನ್ ಹೇಳಿಕೊಡುತ್ತಿದ್ದರು. ಈ ಮಧ್ಯೆ ಮನೆಕೆಲಸವನ್ನು ಮಾಡಲು ಒಳಗೆ ಹೋದಾಗ, ಮಹಿಳೆಯ ತಂದೆ ಹುಸೇನ್ ಚಾಕೊಲೇಟ್ ನೀಡಿ ಬಾಲಕಿಯರಿಗೆ ಕಿರುಕುಳ ನೀಡುತ್ತಿರುತ್ತಾನೆ ಎಂದು ಐದನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಕುಟುಂಬಸ್ಥರಿಗೆ ಈ ಬಗ್ಗೆ ತಿಳಿಸಿದ್ದಾಳೆ. ಇದಾದ ಬಳಿಕ ಇತರ ಹುಡುಗಿಯರು ಕೂಡ ಈ ವಿಚಾರವನ್ನು ಮನೆಯವರ ಬಳಿ ಹೇಳಿಕೊಂಡಿದ್ದಾರೆ.
ಬಳಿಕ ಅನೇಕ ಬಾಲಕಿಯರ ಕುಟುಂಬಸ್ಥರು ಜಮುಲ್ ಪೊಲೀಸ್ ಠಾಣೆಗೆ ಆಗಮಿಸಿ ಶಹದತ್ ಹುಸೇನ್ ವಿರುದ್ಧ ದೂರು ದಾಖಲಿಸಿ, ಆತನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ದೂರಿನನ್ವಯ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಸೆಕ್ಷನ್ 354 ಮತ್ತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ಬಾರ್ ಬಳಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ -12 ಮಂದಿಗೆ ಗಾಯ

















